Posts

Showing posts from March, 2022

ಬ್ಲ್ಯಾಕ್ ಮಾಂಬ ಕಡಿಯ

Image
ನನ್ನ ಕವನದ ಶೀರ್ಷಿಕೆ - ಬ್ಲ್ಯಾಕ್ ಮಾಂಬ ಕಡಿಯ..  ಅವಳ ಮನೆಯ ಡಬ್ಬದಲ್ಲಿ ಸಕ್ಕರೆ ಮುಗಿದಿರಬೇಕು ನೆರೆಮನೆಯಲ್ಲಿ ಒಂದಲ್ಲ,ಎರಡು ಶುಗರ್ ಪೇಷೆಂಟಿರಬೇಕು ನಮ್ಮನೆಯಲ್ಲೂ ಏನೋ ಒಂದು ಅವತ್ತೇ ಖಾಲಿಯಾಗಿರಬೇಕು ನಾ ಈ ಬದಿಯಿಂದ ಅಂಗಡಿಗೆ ಓಡೋಡಿ ಹೋಗಬೇಕು ಅವಳೂ ಆ ಕಡೆಯಿಂದ ಜಿಗಿದು ಕುಣಿದು ನಡೆದು ಬರಬೇಕು  ಓಣಿಯಲ್ಲಿ ಪರಸ್ಪರ ಎದುರಾಗಬೇಕು,ಕಣ್ಣು ಕಣ್ಣು ಕಲೆಯಬೇಕು ನಾನು 'ಉಲ್ಲಾಸದ ಹೂ ಮಳೆ' ಹಾಡು ಹಾಡಬೇಕು, ಅದಕ್ಕವಳು ನಾಚಬೇಕು,ನಾಚಿ ನುಲಿದು ಉಗುರು ಕಚ್ಚಬೇಕು ನನ್ನ ಹೂಮಳೆ ಹಾಡಿಗೆ ಜೋರು ಬಿರುಗಾಳಿಯೇ ಬೀಸಬೇಕು, ತರಗೆಲೆಗಳು ಎಲ್ಲೆಡೆ ಹಾರಬೇಕು,ಮರಗಳು ಅದುರಬೇಕು. ಒಂದೆರಡು ಹಲಸಿಹಣ್ಣುಗಳು ತೊಟ್ಟು ಕಳಚಿ ನೆಲ ಸೇರಬೇಕು  ನಾವಿಬ್ಬರು ಹಣ್ಣು ಬಿಡಿಸಿ ಜೊತೆಯಾಗಿ ಸೋಳೆ ಸವಿಯಬೇಕು ಈಗೆಲ್ಲಾ ಆಗಬೇಕು,ಇದೊಂದೇ ಆಗಬೇಕು ಎಂದರೆ ಅವಳಪ್ಪನೇ  ಪ್ರತೀ ಸಲ ಅಂಗಡಿಗೆ ಬರುವುದನ್ನು ಮೊದಲು ನಿಲ್ಲಿಸಬೇಕು ab

ವಾಸ್ತವ

Image
  " ಮರದಿಂದ ಉದುರಿ    ಗಿರಗಿರನೆ ತಿರುಗಿ   ನೆಲ ಮುಟ್ಟೋ ಬದಲು   ನಾ ಬಾನೇರಬೇಕು,    ಅಲ್ಲೆಲ್ಲೋ ಉಳಿದು   ಅದೃಷ್ಟವ ನೆನೆದು   ಮರಳಿ ಕೆಳಗಿಳಿಯದಂತೆ    ನಾ ರೆಕ್ಕೆ ಬಡಿಯಬೇಕು... "   ab

ಆ ಹದಿಮೂರು ದಿನಗಳು

Image
 ಆ ಹದಿಮೂರು ದಿನಗಳು  |  ಸುಧೀರ ಸಾಗರ ಹುಟ್ಟಿದ ದಿನ ಸಂಭ್ರಮದಿಂದಲೇ ಮನೆ ಮಂದಿಗೆಲ್ಲಾ ಸೋನ್ಪಾಪುಡಿಯನ್ನು ಹಂಚುವ ಯುವಕನಿಗಿಂತಲೂ,ಪಕ್ಕದ ಪಾಕಿಸ್ತಾನದ ವಿರುದ್ಧ ನಮ್ಮ ಸೇನೆ ವಿಜಯೋತ್ಸವ ಮಾಡಿದಾಗಲೆಲ್ಲ ಬೀದಿ ತುಂಬಾ ಗೆಲುವಿನ ಮಿಠಾಯಿ ಹಂಚುವ ಪುಟ್ಟ ಹುಡುಗನೇ ನನಗಂತು ಹೆಚ್ಚು ಇಷ್ಟವಾಗಿ ಬಿಡುತ್ತಾನೆ.ಬರೀ ಅಷ್ಟು ಮಾತ್ರವಲ್ಲ ಅಂದದ ಹುಡುಗಿ ಮೇಲೊಂದು ಸದಾ ಚಂದದ ಪ್ರೇಮಪದ್ಯ ಕಟ್ಟುವ ಕವಿಗಿಂತಲೂ,ನಮ್ಮ ಯೋಧರ ಬಗ್ಗೆ,ಅವರದ್ದೊಂದು ದೇಶಪ್ರೇಮದ ಬಗ್ಗೆ,ಸಾಹಸಗಾಥೆಗಳ ಬಗ್ಗೆ ಬಹಳಷ್ಟು ಹೆಮ್ಮೆಯಿಂದಲೇ ರಣರೋಚಕವಾಗಿ ಬರೆಯುವ ಲೇಖಕನಂತು ನನಗೆ ಇನ್ನೂ ಹೆಚ್ಚೇ ಇಷ್ಟ.  ನೇರವಾಗಿ ಪುಸ್ತಕದ ವಿಷಯಕ್ಕೆನೇ ಬರೋಣ. " ಆ ಹದಿಮೂರು ದಿನಗಳು". ಇದು ಬಾಂಗ್ಲಾ ವಿಮೋಚನೆಯ ಸಂಧರ್ಭದಲ್ಲಿ ಅಂದರೆ 1971 ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಯುದ್ಧದ ಕುರಿತಾದ ಪುಸ್ತಕ.ಹೆಚ್ಚು ಬೆಳಕಿಗೆ ಬಾರದ ಬಹಳಷ್ಟು ರೋಚಕವಾದ ಕಥೆಗಳು ಇದರಲ್ಲಿ ಉಂಟು.ಇದು ಬರೀ ಕಥೆಯೂ ಅಲ್ಲ,ಇದೊಂದು ಇತಿಹಾಸ;ನಮ್ಮ ಯೋಧರದ್ದೇ ನಿಜ ಇತಿಹಾಸ. ಇಲ್ಲಿ ಕೆಲವು ಕಥೆಗಳು ಇನ್ನಿಲ್ಲದಂತೆ ಮನಸ್ಸನ್ನು ಕಲಕಿ ಸಿಕ್ಕಾಪಟ್ಟೆ ಘಾಸಿಗೊಳಿಸಿ ಬಿಡುತ್ತದೆ,ಹಾಗೇ ಬಹಳಷ್ಟು ಕಾಡುತ್ತವೆ,ಇನ್ನು ಕೆಲವು ಕಥೆಗಳು ನಮಗೆ ತುಂಬಿಸಿಕೊಳ್ಳಲಾಗದಷ್ಟು ಗರ್ವವನ್ನು  ಮೂಡಿಸುತ್ತವೆ.ಎಷ್ಟಾದರೂ ನಮ್ಮ ಹೆಮ್ಮೆಯ ಯೋಧರ ಕಥೆಗಳಲ್ಲವೇ.ಅಂತಹ ಅಭಿಮಾನವನ್ನು ಅವರ ಕಥೆಗಳು ಸದಾ ಬೇಡುತ್ತವೆ. ಈ ವೈರಿ ಪಾಕಿ