Posts

Showing posts from September, 2021

ಅವಳು ಸದಾ ನಗುತ್ತಿರಬೇಕು..!

Image
                                    " ಪುಷ್ಯರಾಗ "                          (ಅವಳು ಸದಾ ನಗುತ್ತಿರಬೇಕು..!)  ಇಬ್ಬರೂ ನೆಲದ ಮೇಲೆ ಒಟ್ಟೊಟ್ಟಿಗೆ ಕುಳಿತುಕೊಂಡು ಟಿವಿ ನೋಡುತ್ತಿದ್ದೆವು. ಟಿವಿ ಕಡೆಗೆ ಕೈ ತೋರಿಸಿ "ನನಗೂ ಅವಳ ಹಾಗೆಯೇ ಆಗಬೇಕು..." ಎಂದು ಬಿಟ್ಟಳು ವಸು. ಅವಳು "ಪುನರ್ವಸು"...  ಹೌದು ಅವಳು ಮಳೆಯದ್ದೇ ನಕ್ಷತ್ರ ಪುನರ್ವಸು.  ವಸು ಸಿರಿವಂತರ ಮನೆಯ ಹುಡುಗಿ. ಅವಳು ಮನಸ್ಸು ಕೂಡ ಅಷ್ಟೇ ಶ್ರೀಮಂತವಾಗಿತ್ತು.  ನಾವಿಬ್ಬರೂ ಆಗ ತುಂಬಾ ಸಣ್ಣವರು.  ಬಡತನ ನನ್ನನ್ನು ಬಹಳ ಚಿಕ್ಕಂದಿನಲ್ಲಿಯೇ ಅಪ್ಪಿ ಮುದ್ದಾಡಿ ಬಿಟ್ಟಿತ್ತು.ಅಪ್ಪ ಅಮ್ಮನನ್ನು ಸಹ ಬದುಕು ಬಲು ಬೇಗ ನನ್ನಿಂದ ಕಸಿದುಕೊಂಡು ಕೇಕೆ ಹಾಕಿ ನಕ್ಕಿತ್ತು.  ಅಜ್ಜಿ ಒಬ್ಬಳೇ ನನ್ನ ಬದುಕಿನ ಆಧಾರಸ್ತಂಭವಾಗಿದ್ದಳು ಮತ್ತು  ಅವಳಿಗೆ ನಾನು..  ವಸುವಿನ ತಂದೆ ತಾಯಿ ದೇವರಂತಹ ಮನುಷ್ಯರು.  ವಸು ಜೊತೆಗೆ ನನ್ನನ್ನೂ ಕೂಡ ಬೆಳೆಸಿದರು.. ಹೆಚ್ಚು ಕಡಿಮೆ ಮನೆ ಮಗನಂತೆಯೇ. ನಾನು ಹೆಚ್ಚಾಗಿ ಅವರ ಮನೆಯಲ್ಲಿಯೇ ಇರುತ್ತಿದ್ದೆ.  ನನಗೆ "ಪುಷ್ಯರಾಗ.." ಎಂದು ಬಹಳ ಸುಂದರವಾದ ಸಂಪದ್ಭರಿತವಾದ ಹೆಸರು ಇಟ್ಟದ್ದು ಕೂಡ ವಸುವಿನ ಅಮ್ಮನೇ.  ಸುತ್ತಲಿನ ಸಮಾಜ ನನ್ನನ್ನು ಪುರು ಎಂದು ಕರೆಯುತ್ತದೆ. ಎಲ್ಲರಿಗಿಂತ ಹೆಚ್ಚಾಗಿ ವಸು ನನ್ನನ್ನು ಹಾಗೆ ಕರೆಯುತ್ತಾಳೆ.  ಅವರ ಮನೆಯ ನೆಲದ ಮೇಲೆ ಒಟ್ಟೊಟ್ಟಿಗೆ ಇಬ್ಬರೂ ಕುಳಿತುಕೊಂಡು ಟಿವಿ

ಫಳಾರ ಸೇವೆ..

Image
ಮೊನ್ನೆ ಒಂದು ಕ್ಲಬ್ ಹೌಸ್ ರೂಮಿನಲ್ಲಿ ಈ ತರಹ ಟಾಪಿಕ್ ಇಟ್ಕೊಂಡಿದ್ರು " ಅವನು ಧಮ್ ಇದ್ರೆ ಇಲ್ಲಿ ಬರ್ಬೇಕು,ನಮ್ಮ ಪ್ರೆಸ್ನೆಗೆ ಉತ್ತರಿಸ್ಬೇಕು😡😡.. " ಆಹಾ ಬಹಳ ಆಕರ್ಷಕವಾದ ಟಾಪಿಕ್ ಅಂತ ನಾನು ಬಲಗಾಲಿಟ್ಟು ಆ ರೂಮಿನೊಳಗೆಯೇ ಹೋದೆ.  ತುಂಬಾ ಹೊತ್ತಾದರೂ ಆ "ಅವನು" ಎನ್ನುವವನು ಆ ರೂಮಿಗೆ ಬರ್ಲೇ ಇಲ್ಲ.ಆದರೆ ರೂಮ್ ಮಾತ್ರ ಅಕ್ಷರಶಃ ರಣರಂಗವಾಗಿತ್ತು..ಆ ಮಗ ಧಮ್ ಇದ್ರೆ ಈಗ ಇಲ್ಲಿ ಬಂದು ಮಾತಾಡ್ಲಿ,ಮಾತಾಡ್ಲಿಕೆ ನಮ್ಗೆ ಬರಲ್ವಾ,ಅವನಿಗೆ ಮಾತ್ರ ಗೊತ್ತಿರೊದಾ.. ಬಾರೋ... ಎಲ್ಲಿದ್ದಿಯಾ ಬಾರೋ... ಅಂತ ಆಕ್ರೋಶ ಭರಿತರಾಗಿ,ಸಂಯಮ ಸಹನೆ ಶಿಸ್ತು ಎಲ್ಲವನ್ನೂ ಕಳೆದುಕೊಂಡು ವರ್ಚುವಲ್ ಮಚ್ಚು ಲಾಂಗ್ ಕೊಡಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಅವರೆಲ್ಲರೂ ತೀಕ್ಷ್ಣವಾಗಿ ಜಳಪಿಸುತ್ತಿದ್ದರು.  ಅವರು "ಬಾರೋ.. ಎಲ್ಲಿದ್ದಿಯಾ ಬಾರೋ.." ಅಂತ ಕೂಗಿ ಕೂಗಿ ಕರೆಯುವಾಗ ನನಗೆ 'ರಣರಂಗ' ಮೂವಿಯ ಈ ಹಾಡು ನೆನಪಾಯಿತು.. " ಜಗವೇ ಒಂದು ರಣರಂಗ,   ಧೈರ್ಯ, ಇರಲಿ ನಿನ್ನ ಸಂಗ    ಬಾರೋ, ಬಾರೊ ನನ್ನ ರಾಜ   ನಿನಗೆ ನೀನೇ ಮಹಾರಾಜ...."  ಆದರೆ ಆ ಮಹಾರಾಜ ಬರುವ ಯಾವುದೇ ಸೂಚನೆಯೂ  ಇರಲಿಲ್ಲ.ಏನೋ ಮಹಾನು ಘನಂದಾರಿ ಕೆಲಸವನ್ನೇ ಆತ ಬೇರೆ ರೂಮಿನಲ್ಲಿ ಮಾಡಿರಬೇಕು,ಅದಕ್ಕಾಗಿ ಈ  ನಡುರಾತ್ರಿಯಲ್ಲೂ ಕ್ಲಬ್ ಹೌಸ್ ಜನತೆ ಇಷ್ಟೊಂದು Rash ಆಗಿ ಹರತಾಳ ಮಾಡುತ್ತಿರುವುದು ಎಂದು ಮೇಲ್ನೋಟಕ್ಕೆ ನನಗೂ ಸಹ ಸ್ಪಷ್ಟ

Bell Bottom

Image
 #Bell_Bottom | Prime ಇದು ನಿಜ ಘಟನೆ ಆಧಾರಿತ ಮೂವಿ. 1984 ಆಗಸ್ಟ್ 24 ರಂದು ದೆಹಲಿ ವಿಮಾನ ನಿಲ್ದಾಣದಿಂದ ಅತೀ  ಉಲ್ಲಾಸದಿಂದ ಗಗನಕ್ಕೆ ಹಾರಿದ ಭಾರತದ 'ಇಂಡಿಯನ್ ಏರ್ ಲೈನ್ಸ್ IC 691'ವಿಮಾನವೊಂದು ಖಲಿಸ್ತಾನಿ ಪ್ರತ್ಯೇಕವಾದಿಗಳಿಂದ ಹೈಜಾಕ್ ಆಗಿ,ದುಬೈ ವಿಮಾನ ನಿಲ್ದಾಣದಲ್ಲಿ ಇನ್ನಿಲ್ಲದಂತೆ ಚಡಪಡಿಸಿಕೊಂಡು ನಿಂತು ಬಿಡುತ್ತದೆ. ಅದು ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯ ಆಡಳಿತಾವಧಿಯಾಗಿತ್ತು ಮತ್ತು ಅದಕ್ಕೂ ಹಿಂದಿನ 7 ವರ್ಷಗಳಲ್ಲಿ ಸರಿಯಾಗಿ ಲೆಕ್ಕ ಹಾಕಿದರೆ ಅದು ಭಾರತದ 5ನೇ ವಿಮಾನ ಹೈಜಾಕ್ ಆಗಿತ್ತು!  ಪ್ರತೀ ಬಾರಿಯೂ ವಿಮಾನ ಹೈಜಾಕ್ ಆದಾಗ ಭಾರತ ಸರ್ಕಾರ ಒತ್ತೆಯಾಳುಗಳ ಬಿಡುಗಡೆಗಾಗಿ ಸೆರೆಯಲ್ಲಿದ್ದ ಡೇಂಜರಸ್ ಹಾಗೂ ಮೋಸ್ಟ್ ವಾಂಟೆಡ್ ಉಗ್ರರನ್ನು ಬಿಡುಗಡೆ ಮಾಡುತ್ತಿತ್ತು  ಮತ್ತು ಕೋಟಿಗಟ್ಟಲೆ ಹಣವನ್ನು ಚೀಲದಲ್ಲಿ ತುಂಬಿಸಿ ಅಪಹರಣಕಾರರಿಗೆ ಹಸ್ತಾಂತರಿಸಿ ಬಿಡುತ್ತಿತ್ತು.  ಆದರೆ ಈ ಬಾರಿ RAW(Research and Analysis Wing) ಅಪಹರಣಕ್ಕೊಳಗಾದ ಎಲ್ಲಾ 210 ಪ್ರಯಾಣಿಕರನ್ನು ಸುರಕ್ಷಿತವಾಗಿ ಹಿಂದೆ ತರುವುದು ಮಾತ್ರವಲ್ಲ,ಅಪಹರಣ ಮಾಡಿದ ಆ ಉಗ್ರರನ್ನು ಸಹ ಸೆರೆ ಹಿಡಿದು ತರಲು ಮುಂದಾಗುತ್ತದೆ.ಅದಕ್ಕೆ ನಿಯೋಜಿತನಾಗುವ Raw ಏಜೆಂಟೇ ಈ Bell Bottom. ಹೌದು ಈ ಆಪರೇಷನ್ ನಲ್ಲಿಅದು  ಅವನದ್ದೊಂದು ಕೋಡ್ ನೇಮ್.  ಆಪರೇಷನ್ ನಲ್ಲಿ ಮುಂದೆ ಏನಾಗುತ್ತದೆ? ಇದೇ ರೀತಿ ವಿಮಾನ ಹೈಜಾಕ್  ಆಗಿದ್ದಾಗ 1976 ರಲ್ಲಿ ಇಸ್ರೇಲ್

ತಿಂಡಿ ತರುವ ಅತಿಥಿಗಳು..

Image
ಹಿಂದೆ ತುಂಬಾ ಸಣ್ಣವನಾಗಿರುವಾಗ ಸಂಬಂಧಿಕರನ್ನು ಒಳ್ಳೆಯವರು,ಕೆಟ್ಟವರು ಎಂದು ನಾನು ಈ ಕೆಳಗಿನ ಆಧಾರದಲ್ಲಿ ಗುರುತಿಸುತ್ತಿದ್ದೆ. ಮನೆಗೆ ಬರುವಾಗ ಮಿಕ್ಷರ್, ಚಕ್ಕುಲಿ, ಸೇಮೆ, ಸೋಂಟೆ, ತುಕುಡಿ ಮುಂತಾದವುಗಳನ್ನು ಸಪರೇಟ್ ಆದ ಒಂದು ತೊಟ್ಟೆಯಲ್ಲಿ ಹಾಕಿಕೊಂಡು ತರುವ ಬಂಧುಗಳೇ ತುಂಬಾ ಒಳ್ಳೆಯವರು,ಅತೀ ಉತ್ತಮರು,ಸರ್ವೋತ್ತಮರು ಹಾಗೂ ಬರೀ ಕೈಯಲ್ಲಿ ಹೀಗೆ ಸುಮ್ಮನೆ ಕೈ ಬೀಸಿಕೊಂಡು ನಗು ನಗುತ್ತಾ ಬರುವವರು  ಕೆಟ್ಟವರು,ದುಷ್ಟರು,ಕ್ರೂರಿಗಳು ಎಂದು ನನಗೆ ನಾನೇ ತಿಳಿದುಕೊಂಡಿದ್ದೆ. ತಿಂಡಿ ತರುವ ಅಂಕುಳ್ ನಿಜ ಜೀವನದಲ್ಲಿ ಸಾಕಷ್ಟು ಕೆಟ್ಟವರೇ ಆಗಿದ್ದರೂ ಸಹ ತಿಂಡಿ ತರುವ ಏಕೈಕ ಕಾರಣಕ್ಕಾಗಿ ಅವರೇ ನಿಜವಾದ ಬಂಧು ಮಿತ್ರರು,ಬೆಸ್ಟ್ ಜನ ಇನ್ ದಿ ಫ್ಯಾಮಿಲಿ ಹಾಗೂ ತಿಂಡಿ ತರದ ಆಂಟಿ ಕಂಜೂಸ್,ಪಿಟ್ಟಾಸಿ,ಕುರೆ ಜನ ಎಂದು ನಾನು ವರ್ಗೀಕರಿಸಿ ಬಿಡುತ್ತಿದ್ದೆ. ನಂತರ ಕಾಲೇಜು ಎಲ್ಲಾ ಮುಗಿದು ಅಂದರೆ ಈಗ ಕೆಲಸಕ್ಕೆ ಹೋಗುವ ಸಮಯದಲ್ಲಿಯೂ ಸಹ ಕೆಲವರು ಸಂಬಂಧಿಕರು ಮನೆಗೆ ಬಂದರೆ ನಮ್ಮ ಮನೆಯಲ್ಲಿ "ನನಗಿಂತ" ಚಿಕ್ಕ ಮಕ್ಕಳು ಯಾರು ಇರದ್ದಿದ್ದರೂ ಸಹ,ಈ ಹಿಂದಿನ ಅಭ್ಯಾಸ ಬಲದಿಂದಾಗಿ ಅವರು.. "ಅಂದ ಬಾಲೆ ತಿಂಡಿ ಗೆತೊನ್ಲ(ತಗೋ ಬಾಲಕ ಈ ತಿಂಡಿಯ ಪ್ಯಾಕೇಟ್).." ಅಂತ ಒಂದಷ್ಟು ತಿಂಡಿ ಪ್ಯಾಕೇಟ್ ಗಳನ್ನು ಬಂದ ಕೂಡಲೇ ನನ್ನ ಕೈಗಿಟ್ಟು ಬಿಡುತ್ತಾರೆ. ಆಗ ನಾನು "ಹೇಯ್.. ಬೇಡ.. ಬೇಡ.. ಈಗೆಲ್ಲಾ ಎಂತ ತಿಂಡಿ ತಿನ್ಲಿಕ್ಕೆ ನಾವೇನು ಚಿ

ಬ್ಯಾಟು ಬಾಂಬುಗಳೊಂದಿಗೆ ಕ್ರಿಕೆಟ್ ಆಡಲಾಗುವುದಿಲ್ಲ..!

Image
ನಿನ್ನೆ ಪಾಕಿಸ್ತಾನ ಕ್ರಿಕೆಟ್ ಗೆ ಸಂಬಂಧಿಸಿದಂತೆ ವಿಚಿತ್ರ ವಿದ್ಯಮಾನವೊಂದು ಸಂಭವಿಸಿದೆ.  ನಿಜ ಹೇಳಬೇಕೆಂದರೆ ವಿಶ್ವ ಕ್ರಿಕೆಟ್‌ ನಲ್ಲಿ ಬೇರೆ ಎಲ್ಲಾದರೂ ಅಂತಹದ್ದೊಂದು ಘಟನೆ ಸಂಭವಿಸಿದ್ದರೆ ಆಗ ಮಾತ್ರ ಅದನ್ನು ಅಚ್ಚರಿಯ ಘಟನೆ,ಶಾಕಿಂಗ್ ಸಂಗತಿ ಅಂತೆಲ್ಲಾ ಹೇಳಿ ವ್ಯಾಖ್ಯಾನಿಬಹುದಿತ್ತು.ಆದರೆ ಇದು ಪಾಕಿಸ್ತಾನದಲ್ಲಿ ನಡೆದಿರುವುದರಿಂದ...ಇದು ಅಲ್ಲಿಯದ್ದೊಂದು ಸರ್ವೇ ಸಾಮಾನ್ಯವಾದ ವಿಷಯ,ಭಾರತೀಯರಿಗಂತು ಬಹು ನಿರೀಕ್ಷಿತ ಹಾಗೂ ಎಂದಿನಂತೆ ಒಂದು ಮಾಮೂಲಿ ಸಂಗತಿ ಅಷ್ಟೇ ಎಂದು ಹೇಳಬಹುದು! ಆಗಿದ್ದು ಇಷ್ಟು... . ನಿನ್ನೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ  ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಮೊದಲ ಏಕದಿನ ಪಂದ್ಯ ಆಡಬೇಕಿತು. ಪಾಕಿಸ್ತಾನದಲ್ಲಿ ಅಂತು ಸಂಭ್ರಮದ ಜಾತ್ರೆ..ನೋಡಿ ನಮ್ಮಲ್ಲಿ ಎಲ್ಲರೂ ಬಂದು ಕ್ರಿಕೆಟ್ ಆಡುತ್ತಿದ್ದಾರೆ,ಜಿಂಬಾಬ್ವೆ,ಶ್ರೀಲಂಕಾ ಮಾತ್ರವಲ್ಲ ನ್ಯೂಜಿಲೆಂಡ್ ನಂತಹ ಶ್ರೇಷ್ಠ ತಂಡಗಳು ಕೂಡ ಬಂದು ನಮ್ಮ ನೆಲದಲ್ಲಿಯೇ ಆಡಲು ಮನಸ್ಸು ಮಾಡಿದೆ,ನಾವು ಜಗತ್ತಿನ ಸೇಫೆಸ್ಟ್ ಕಂಟ್ರಿ.. ಎಂದೆಲ್ಲಾ ಹೇಳಿದ್ದೇ ಹೇಳಿದ್ದು ಅವರುಗಳು. ಅಷ್ಟು ಮಾತ್ರವಲ್ಲ ನ್ಯೂಜಿಲೆಂಡ್ ನ ಕ್ರಿಕೆಟಿಗ ಮಾರ್ಟಿನ್ ಗಪ್ಟಿಲ್ ಕೂಡ "ನಾವು ಇಲ್ಲಿ ಅತ್ಯಂತ ಸುರಕ್ಷಿತರಾಗಿದ್ದೇವೆ.. ನಮಗೆ ಯಾವುದೇ ಭಯವಿಲ್ಲ" ಎಂಬ ಮಾತು ಸಹ ಹೇಳಿದ್ದ. ಆದರೆ ಆತ ಅಷ್ಟೇ ಹೇಳಿದ್ದರೆ ಅದು ತೀರಾ ಸಹಜವಾಗಿರುತ್ತಿತ್ತು. ಆದರೆ ಗಪ್ಟಿಲ್ "ನಮ್ಮ ಹಿಂದೆ ಡಜನ್ ಗ

ಕ್ಯಾಂಡಿಡ್ ಪೋಟೋ

Image
ಟಾಮಿ - ಹೇಯ್ ಟೈಗರ್.. ಇವನು ಯಾರ ಉತ್ಸಾಹಿ ಬಾಲಕ? ಆಗದಿಂದ ನಮ್ಮದೇ ಪಟ ಬೇರೆ ಬೇರೆ Angle ನಿಂದ ತೆಗಿತಾನೇ  ಇದ್ದಾನೆ ಮಾರ್ರೆ,ಇವನಿಗೆ ಪೋಟೋ ತೆಗಿಲಿಕ್ಕೆ ಬೇರೆ ಎಂತಸ ಸಿಗ್ಲಿಲ್ವಾ.. 🙄🤔 ಟೈಗರ್ - ಅವನು ಬಾಲಕ ಅಲ್ಲ..ಅವನು  ಪೋಂಕ್ರ(ಉತ್ತಮನು)ಆಗಿರುವನು.  ಟಾಮಿ - ಈಗ ಎಂತ ಮಾಡುವುದಾ..ಅವನಿಗೆ ಹೆದರಿಸಿ ಬೆದರಿಸಿ ಓಡಿಸುವನಾ..? ಟೈಗರ್ - ಬೇಡ..ನಾವು ಅಮಾಯಕರಂತೆ ಬೇರೆ ಎಲ್ಲೋ ಬೇಕಂತಲೇ ನೋಡಿಕೊಂಡು ಅವನಿಗೆ ಕ್ಯಾಂಡಿಡ್ ಪೋಸ್ ಕೊಡುವ. ಟಾಮಿ - ಹಾಗೆ ಹೇಳ್ತಿಯಾ.. ಟೈಗರ್ - ಮತ್ತೆ ಎಂತದಾ ಟಾಮಿ.. ನಮ್ಮದೆಲ್ಲಾ ಯಾರು ಪೋಟೋ ತೆಗೀತಾರ.. ಈ ಮರ್ಲನಿಗೆ (ಅತೀ ಉತ್ತಮನು) ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲ ಅಂತ... ಎಂಜಾಯ್.. ಎಂಜಾಯ್  ಟಾಮಿ - ಮತ್ತೆ ನನ್ನ ಹೇರ್‌ಸ್ಟೈಲ್ ಓಕೆಯಾ...ಸ್ಟ್ರೈಟ್ ಉಂಟಲ್ಲಾ?  ಟೈಗರ್ - ನನ್ನ ಮ..ಗ..ನೇ  ಮೊದಲು ಕಿವಿ ಸ್ಟ್ರೈಟ್ ಮಾಡಿ ಬೇರೆ ಕಡೆ ನೋಡು.. ಇಲ್ಲದಿದ್ದರೆ ಅದು ಕ್ಯಾಂಡಿಡ್ ಪೋಟೋ ಆಗಲ್ಲ.  ಟಾಮಿ - ಒಹ್.. ಹಾಗೇ ಅಲ.. ಅದೊಂದು ಮಿಸ್ಟೇಕ್ ಆಯ್ತಾ ಸಾವ್.  ಟೈಗರ್ -  ಟಾಮಿ ನಿನ್ನದೊಂದು ಯಾವಾಗಲೂ ಮಿಸ್ಟೆಕೇ ಆಯ್ತಾ..ಪೋಟೋಗೆಲ್ಲಾ ಪೋಸ್ ಕೊಡ್ಲಿಕ್ಕೆ ಸ ಬರಲ್ಲವಾ ನಿನಗೆ..ಸತ್ಯ ಹೇಳು ಇದು ಫಸ್ಟ್ ಟೈಮಾ..? ಟಾಮಿ - ಎಂತಾ..?  ಟೈಗರ್ - ಅದೇ ನಿನ್ನದು ಯಾರಾದರೂ ಪೋಟೋ ತೆಗೆಯುವುದು ಇದೇ ಫಸ್ಟಾ.. ಟಾಮಿ - ಹೌದು.. ಮತ್ತೆ ನಿಂಗೆ  ಎಂತ ಇದೆಲ್ಲಾ Already ಅನುಭವ ಉಂಟಾ..?  ಟೈಗರ್ - ಇವನೇ ಮಾರ್ರೆ

ಕಾಲ ಮತ್ತೊಮ್ಮೆ ನಮಗಾಗಿ ಬಂತು

Image
ಬಂಧುಗಳೇ...  ವಿಷಯ ಏನೆಂದರೆ ಬಂಧುಗಳೇ.. ಈ ವಾರಾಂತ್ಯದಿಂದ ಮತ್ತೆ ಐಪಿಎಲ್ ಶುರುವಾಗಲಿದೆ.ಮುಖ್ಯ ಮೂರು ತಂಡಗಳ ಅಭಿಮಾನಿಗಳಿಗೆ ಫೇಸ್ಬುಕ್ ನಲ್ಲಿ ಪೆಟ್ಟ್ ಲಡಾಯಿ ಮಾಡಲು ನಿಜಕ್ಕೂ ಇದೊಂದು ಪರ್ವಕಾಲ,ಹಾಗೆಯೇ ಸುಗ್ಗಿಯ ಸಮಯ. " ಕಾಲ ಮತ್ತೊಮ್ಮೆ ನಮಗಾಗಿ ಬಂತು...   ಬೇಜಾನ್ ಪೆಟ್ಟ್ ಲಡಾಯಿ ಮಾಡಲು ಇಂದು.." ಎಂದು ಯಾವ ಕಾರಣಕ್ಕೂ ತಪ್ಪು ತಪ್ಪಾಗಿ 'ಕಿಲಾಡಿಗಳು'  ಸಿನಿಮಾದ ಹಾಡನ್ನು ಈ ರೀತಿ ಎಲ್ಲಾ ಹಾಡಿ,ಇತರರನ್ನು ರೊಚ್ಚಿಗೆಬ್ಬಿಸಬಾರದೆಂದು,ಹುಚ್ಚು ಕಟ್ಟಿ ಮರ್ಲು ಕಟ್ಟಿಸಬಾರದೆಂದು ನಮ್ಮದೊಂದು ಕೋರಿಕೆ,ಭಿನ್ನಹ ಹಾಗೂ ಎಂದಿನಂತೆ ಕಳಕಳಿಯ ಮನವಿ ಇದೆ ಐಪಿಎಲ್ ಬಂಧುಗಳೇ. ಏಕೆಂದರೆ ನಮಗೆ ಅದು ಬಿಟ್ಟು ಇಲ್ಲಿ ಬೇರೆ ದಾರಿಯೇ ಇಲ್ಲ.ಜೀವನ ಸಿಕ್ಕಾಪಟ್ಟೆ ಬಂಗ(ಬ್ಯೂಟಿಫುಲ್)ಆಗುವುದು ಈ ಟೈಮಿನಲ್ಲಿಯೇ.  ಬಂಧುಗಳೇ... ಗೆಳೆಯರೇ...ಮಿತ್ರರೇ...ಹಾಗೂ ನನ್ನ ಕ್ರಿಕೆಟ್ ದೋಸ್ತಿಗಳೇ..  ನಿಮಗೆಲ್ಲಾ ಗೊತ್ತಿರುವ ಹಾಗೆ " ಮುಂಬೈ ಇಂಡಿಯನ್ಸ್ "ಅನ್ನತಕ್ಕಂತಹ ತಂಡಕ್ಕೆ ಅನಾದಿ ಕಾಲದಿಂದಲೂ,ಶತ ಶತಮಾನದಿಂದಲೂ ವರ್ಷಂಪ್ರತೀಯ ಸೇವೆ ಎಂಬಂತೆ ಚಾಚೂ ತಪ್ಪದೇ ಭಕ್ತಿಯಿಂದ ಸಪೊರ್ಟ್ ಮಾಡುವ ನಾನಾಗಲಿ ಹಾಗೂ ಅದೇ ರೀತಿ "ಚೆನ್ನೈ ಸೂಪರ್ ಕಿಂಗ್ಸ್ " ಮುಂತಾದ ತಂಡಗಳಿಗೆ ಹೃದಯದಿಂದ,ಶ್ವಾಸಕೋಶದಿಂದ,ಪಿತ್ತ ಜನಕಾಂಗದಿಂದ  ಸಪೋರ್ಟ್ ಮಾಡುವ ನಮ್ಮಂತಹ ಕ್ರಿಕೆಟ್ ಪ್ರೇಮಿಗಳು ಏನು ಈ ನಾಡಿನಲ್ಲಿ ಇದ್ದೇವೆ ಬಂಧುಗಳೇ.. ನ

ಪರಾಶರ

Image
 #ಪರಾಶರ | ಧೀರಜ್ ಪೊಯ್ಯೆಕಂಡ  ಯಾವುದಾದರೊಂದು ಕಾಲಕ್ಕೆ,ಹೋಗಲಾರದ ಲೋಕಕ್ಕೆ ಕಥೆಯೊಂದು ನಮ್ಮನ್ನು ತುಸು ಹೊತ್ತು ಕರೆದೊಯ್ದು ಬಿಟ್ಟರೆ, ಅದಕ್ಕಿಂತ ದೊಡ್ಡ ಓದಿನ ಸುಖ ಮತ್ತೊಂದಿಲ್ಲ.ಓದುವಷ್ಟು ಹೊತ್ತು ಆ ಪಾತ್ರಗಳ ಜೊತೆ ಜೊತೆಯಲ್ಲಿಯೇ ನಾವು ಕೂಡ ನಮಗರಿವಿಲ್ಲದೆ ಬಹಳಷ್ಟು ಒಡಾಡಿ ಬಿಟ್ಟರೆ,ಕೊನೆಯಲ್ಲಿ ಕಥೆ ಮುಗಿಸಿ ಒಂಚೂರು ಶಬ್ಧವಾಗದಂತೆ ಇಲ್ಲಿಂದ ಎದ್ದು ಹೋಗುವ ಪಾತ್ರಗಳು,ಇನ್ನಷ್ಟು ಹೊತ್ತು ಇಲ್ಲಿಯೇ ನಮ್ಮ ಬಳಿಯೇ ಕುಳಿತುಕೊಳ್ಳರಬಾರದಿತ್ತೇ ಎಂಬ ಭಾವವನ್ನೇ ಕೊನೆಗೆ ಅಧಿಕ ಮಾಡಿಬಿಡುತ್ತದೆ.ಲೇಖಕ ಧೀರಜ್ ಅವರು ಇಲ್ಲಿ ಮಾಡಿದ್ದು ಅದನ್ನೇ. ನಿಧಾನಕ್ಕೆ ತುಂಬಿಕೊಳ್ಳವುದು,ಇಷ್ಟಿಷ್ಟೇ ಖಾಲಿಯಾಗಿಸುವುದು,ಬೇಕಾದಷ್ಟೇ ಕಾದಾಡುವುದು ಮತ್ತು  ಅಪರಿಮಿತವಾಗಿ ಕಾಡುವುದು.. ಇಷ್ಟನ್ನು ಅವರು ರುಚಿಕಟ್ಟಾಗಿ ಮಾಡಿ ಓದುಗನಿಗೆ ಪುಷ್ಕಳವಾಗಿಯೇ ಬಡಿಸಿದ್ದಾರೆ.  ಓದುವಾಗ ಪರಾಶರದ ತುಂಬೆಲ್ಲಾ ಪ್ರತೀಕಾರದ ಹಾಗೂ ರಕ್ತದ ಕಮಟು ವಾಸನೆಯೇ ಮೂಗಿಗೆ ಅಧಿಕವಾಗಿ ಅಡರಬಹುದು, ಆದರೆ ಒಂದಷ್ಟು ಕೇದಿಗೆಯ ಪರಿಮಳದ ಪೊದೆ ಅಲ್ಲಲ್ಲಿ ಅಲುಗಾಡಿದಾಗಲೆಲ್ಲ ಬಾಕಿ ಎಲ್ಲವೂ ಪಕ್ಕಕ್ಕೆ ಸರಿದು ಮುಗ್ಧ ಪ್ರೇಮವೊಂದೇ ಹೃದಯಕ್ಕೆ ಬಹಳಷ್ಟು ಹತ್ತಿರವಾಗಬಲ್ಲದು.  " ನೆಂದ ಭೂಮಿಗೆ ಧಗೆ   ಬೆಂದ ಭೂಮಿಗೆ ಮಳೆ   ಕಾಲ ಕಾಲಕ್ಕೆ ನೀಡಿದ್ದು ಯಾರು?.. " ಎಲ್ಲವನ್ನೂ ಹೇಳಲೇ ಬೇಕಿಲ್ಲ.ಹೇಳದೆಯೂ ಬಹಳಷ್ಟು ಅರ್ಥಮಾಡಿಕೊಳ್ಳಬಹುದು ಎಂದು ಹೇಳುವ ಲೇಖಕರು ಹೇಳದೆಯೇ ಕೆಲವೊಂದ

ಹಾರುವ ತಾರಿಮಡಲೆ

Image
ಕ್ರಿಕೆಟ್ ಆಟವಾಡುತ್ತಿರುವಾಗ ಅಶ್ವತ್ಥ ಕಟ್ಟೆಯ ಮೇಲೆ ಕುಳಿತಿದ್ದ ಒಬ್ಬರ ಮೇಲೆ ಹಾವೊಂದು ಮರದ ಮೇಲಿಂದ ಹಾರಿ,ಆ ನಂತರ ಅಲ್ಲೇ ಇದ್ದ ಪೊದೆಯಲ್ಲಿ ಮರೆಯಾಗಿ ಹೋಯಿತು.  ಆಗ ಒಬ್ಬರು ಹೇಳಿದರು.. " ಬಚಾವ್ ಮರ್ರೆ,ಅದು ತಾರಿಮಡಲೆ ಹಾವು.ಪುಣ್ಯಕ್ಕೆ ಭುಜಕ್ಕೆ ಹಾರಿತು,ಇಲ್ಲದಿದ್ದರೆ ನೀನು ಇಷ್ಟು ಹೊತ್ತಿಗೆ ಅಷ್ಟೇ..."  ಹಿರಿಯರು ಒಬ್ಬರು ಹೇಳಿದರು " ಆದು ತಾರಿಮಡಲ ಹಾವು ಅಲ್ಲ.. ಒಂದು ವೇಳೆ ಅದು ತಾರಿಮಡಲ ಹಾವು ಆಗಿದ್ದರೆ ನೇರವಾಗಿ ನೆತ್ತಿಗೆ ಗುರಿ ಇಟ್ಟೇ ಹಾರಿ ಕಚ್ಚುತ್ತಿತ್ತು..."  ಅದಕ್ಕೆ ಮತ್ತೊಬ್ಬರು ಕ್ಲಬ್ ಹೌಸ್ ನಲ್ಲಿ ಮಾತನಾಡುವಂತೆ ಹೇಳಿದು.." ಹೌದು ನಾನು ಇದಕ್ಕೆ ಒಂದು ಪಾಯಿಂಟ್ Add ಮಾಡ್ತೆನೆ, ನನ್ನದು ಸ ಇದೇ  ಅಭಿಪ್ರಾಯ ಆಗಿದೆ,ತಾರಿಮಡಲೆ ಯಾವತ್ತೂ ಗುರಿ ತಪ್ಪಲ್ಲ,ಇದು ಗುರಿ ತಪ್ಪಿದೆ, ಹಾಗಾಗಿ ಇದು ತಾರಿಮಡಲೆ ಹಾವು ಅಲ್ಲ ಅಂತ ನಾವು ಒಂದು ನಿರ್ಧಾರಕ್ಕೆ ಬರಬಹುದು.. " ಇನ್ನೊಬ್ಬರು ಹೇಳಿದರು..." ಯಾಕೆ ಮರ್ರೆ ಅಷ್ಟೊಂದು ಟೆನ್ಶನ್, ತಾರಿಮಡಲೆ ಕೇವಲ ತಾರಿ(ತಾಳೆ) ಮರದಲ್ಲಿ ಮಾತ್ರ ಇರ್ತದೆ.. ಹಾಗಾಗಿ ಅದು ತಾರಿಮಡಲೆಯೇ ಅಲ್ಲ.." ಆದರೆ ಒಬ್ಬ ಪುಟ್ಟ ಬಾಲಕ ಆ ಹಿರಿಯರಿಗೆ ಹೇಳಿದ "ಅಂಕಲ್... ಈ ತಾರಿಮಡಲೆ ಹಾವಿಗೆ ಬೋರ್ ಆದ್ರೆ ಆಗ  ಅದು ಬೇರೆ ಮರಗಳಿಗೆ ಎಲ್ಲಾ ಹಾರುತ್ತಾ ಹಾರುತ್ತಾ ಹೋಗಲ್ವಾ...? " ನನಗೆ ಯಾಕೋ ಈಗ ಈ ಬಾಲಕನ  ಮಾತಿನಲ್ಲಿಯೇ ಜಾಸ್ತಿ ಲಾಜಿ

ಎಲ್ಲರಿಗೂ ಧನ್ಯವಾದಗಳು..

Image
  ನನ್ನ ಮೊದಲ ಕ್ಲಬ್ ಹೌಸ್ ಭಾಷಣ ಈ ರೀತಿ ಇತ್ತು...  "  ಎಲ್ಲರಿಗೂ ನಮಸ್ಕಾರ.ನನಗೆ ಮಾತಾಡಲು ಅವಕಾಶ  ಮಾಡಿಕೊಟ್ಟದ್ದಕ್ಕಾಗಿ ಈ ರೂಮಿನ ಅಡ್ಮಿನ್ ಆದಂತಹ ರಮೇಶ್ ಅವರಿಗೆ ಧನ್ಯವಾದಗಳು, ಹಾಗೇಯೇ ಸುರೇಶ್ ಅವರಿಗೆ ಧನ್ಯವಾದಗಳು, ಗಿರೀಶ್ ಅವರಿಗೆ ಧನ್ಯವಾದಗಳು,ಅದೇ ರೀತಿ ದಿನೇಶ್ ಅವರಿಗೆ ಕೂಡ ಧನ್ಯವಾದಗಳು.ನನಗೆ ಇನ್ನು ಜಾಸ್ತಿ ಮಾತಾಡ್ಲಿಕೆ ಏನಿಲ್ಲ,ನನಗೆ ಇಷ್ಟು ಹೊತ್ತು ಮಾತಾಡಲು ಅವಕಾಶ ನೀಡಿದ್ದಕ್ಕೆ, ನನ್ನ ವಿಚಾರವನ್ನು ಇಲ್ಲಿ ಮಂಡನೆ ಮಾಡಲು ಅವಕಾಶ ನೀಡಿದ್ದಕ್ಕೆ ಮತ್ತೊಮ್ಮೆ ಅಡ್ಮಿನ್ ರಮೇಶ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು.ನಾನು ಇನ್ನು ಕೆಳಗೆಯೇ ಕುಳಿತುಕೊಂಡು ಕೇಳುತ್ತೇನೆ, ನೀವುಗಳು ಮುಂದುವರಿಸಿ.. ಆಲ್ ದಿ ಬೆಸ್ಟ್... " ab

ಮಿಳ್ಳೆ ತುಪ್ಪ..

Image
ಸಂಪ್ರದಾಯದಂತೆಯೇ ಎಲೆ ಊಟ. ಎಂದಿನಂತೆ ಬಡಿಸಲು ನಿಂತಿದ್ದೆ. ಅನುಭವದ ಹುಡುಗರು,ಉತ್ಸಾಹಿ ಪಿಟ್ಟೆಗಳು ಕೂಡ ಇದ್ದರು.  ಲೋಟಗಳಿಗೆ ಶ್ರದ್ಧೆಯಿಂದ ನೀರು ತುಂಬುವ ಜವಾಬ್ದಾರಿ ನನ್ನದು. ಬೇರೆ ಎಲ್ಲಾ ದೊಡ್ಡ ದೊಡ್ಡ ಶ್ರೇಷ್ಠವಾದ ಐಟಂ ಗಳು ಇತ್ತು. ಆದರೆ ಸ ನೀರು ಕೊಡುವುದು ಸ ಒಂದು ಶ್ರೇಷ್ಠವಾದ ಕೆಲಸವೇ ಎಂದುಕೊಂಡು ನೀರಿನ ಚೊಂಬಿನೊಂದಿಗೆ ಊಟದ ಪಂಕ್ತಿಗೆ ಹಾಗೇ ನುಗ್ಗಿದೆ ನಾನು.  ಬಗ್ಗಿ ಬಗ್ಗಿ ಲೋಟಗಳಿಗೆ ನೀರು ಹಾಕುವ ಆ ಒಂದು ನನ್ನ ಪ್ರಕ್ರಿಯೆ ತುಂಬಾ ಅಂದರೆ ತುಂಬಾನೇ ವಿಳಂಬವಾದ ಕಾರಣ...ನಾನು ನೀರು ಕೊಟ್ಟು ಮುಗಿಸುವ ವೇಳೆಗೆ ಹೆಚ್ಚಿನ ಎಲ್ಲಾ ಐಟಂಗ ಗಳು ಬಾಲೆಳೆಯನ್ನು ಅಲಂಕರಿಸಿಬಿಟ್ಟಿದ್ದವು. ಆದರೂ ಸುಮ್ಮನೆ ಹೇಳಿದೆ... ಶೇ ಎಂತ ಮರ್ರೆ.. ನನಗೆ ಬಡಿಸಲು ಯಾವುದು ಸ ಐಟಂ  ಉಳಿಯಲೇ ಇಲ್ಲ..  ಆದರೆ ಬಿಸಿ ಅನ್ನದ ಮೇಲೆ ಮಿಳ್ಳೆ ತುಪ್ಪ ಎರೆಯುವ ದಿವ್ಯ ಕೆಲಸವೊಂದು ಇನ್ನೂ ಬಾಕಿ ಉಳಿದಿತ್ತು.  ಹಿರಿಯರು ಒಬ್ಬರು ತುಪ್ಪದ ಬಟ್ಟಲು ಕೈಗಿತ್ತು..ನನಗೆ ತುಪ್ಪ ಹಾಕಿಕೊಂಡು ಬರಲು ಹೇಳಿದರು.  ಅಭ್ಯಾಸ ಬಲದಿಂದ ತುಪ್ಪವನ್ನು ಬಗ್ಗಿಕೊಂಡೇ ಹಾಕಿದೆ.  ಆಗಲೇ ಸಭೆಯಲ್ಲಿ ಹಾಹಾಕಾರ ಎದ್ದಿದ್ದು...ಹೇಯ್ ಯಾರು ಮರ್ರೆ ಇವ.. ತುಪ್ಪವನ್ನು ಯಾರಾದರೂ ಬಗ್ಗಿಕೊಂಡು ಹಾಕುತ್ತಾರಾ... ಹಹ್ಹಾ.. ಹಹ್ಹಾ..ಅಷ್ಟೇ.. ಎಂದೆಲ್ಲಾ ಹೇಳಿದರು.  ನನಗೆ ಚಿಕ್ಕಂದಿನಿಂದಲೂ ಈ ತುಪ್ಪವನ್ನು ಬಗ್ಗಿ ಹಾಕಿದರೆ ಏನಾಗುತ್ತದೆ.. ಏಕೆ ನಿಂತೇ ಹಾಕಬೇಕು.. ಎಂಬ ಜಿಜ್ಞಾಸೆ ಇತ್ತ

#5T ಮುಂದಿನದು ಮ್ಯಾಂಚೆಸ್ಟರ್

Image
ಸೋಲುತ್ತಲೇ ಇದ್ದರೆ ಅದೊಂದು ಮುಗಿಯದ ಹತಾಶೆ ಜೊತೆಗೊಂದಿಷ್ಟು ನಿರಾಸೆ.  ಸೋಲಲು ಗೊತ್ತಿಲ್ಲದೇ ಬರೀ ಗೆಲ್ಲುತ್ತಲೇ ಇದ್ದರೂ ಸಹ ಅಲ್ಲೊಂದು ಅಂತಹ ಹೆಚ್ಚಿನ ವಿಶೇಷತೆ ಇರದೆ ಎಂದಿನಂತೆ ಸಹಜತೆಯೇ ಮುಂದುವರಿದಿರುತ್ತದೆ.  ಆದರೆ ಪಂದ್ಯ ಒಂದರಲ್ಲಿ ಹೀನಾಯವಾಗಿ ಸೋತು,ಮುಂದಿನ ಪಂದ್ಯದಲ್ಲಿ ಸ್ವತಃ ಎದುರಾಳಿಯನ್ನೇ ಮತ್ತಷ್ಟು ಹೀನಾಯವಾಗಿ ಸೋಲಿಸುವ ತಂಡದ್ದೊಂದು ಕಥೆ ಇದೆಯಲ್ಲಾ... ಅದು ಮಾತ್ರ ಯಾವತ್ತೂ ಎಲ್ಲರ ಹೃದಯ ಗೆಲ್ಲುವಂತಹದ್ದು,ಅಷ್ಟು ಮಾತ್ರವಲ್ಲ ಬಹಳಷ್ಟು ಮೆಚ್ಚುಗೆಗೆ ಹಾಗೂ ಎಲ್ಲರ ಪ್ರಶಂಸೆಗೂ ಕೂಡ ಅರ್ಹವಾಗುವಂತಹದ್ದು.  ಸದ್ಯಕ್ಕೆ ವಿಶ್ವದೆಲ್ಲೆಡೆ ಅಂತಹದ್ದೊಂದು ಮೆಚ್ಚುಗೆಗೆ ಅರ್ಹವಾದ ತಂಡ ಅಂತ ಇದ್ದರೆ ಅದು ಓನ್ ಆಂಡ್ ಓನ್ಲಿ.. ಟೀಮ್ ಇಂಡಿಯಾವೇ ಹೊರತು ಬೇರೆ ಯಾವುದೂ ಅಲ್ಲ.  ಲೀಡ್ಸ್ ಪಂದ್ಯ ಸೋತ ಕೂಡಲೇ ನಮ್ಮಲ್ಲಿ ಎಂದಿನಂತೆ ಟೀಕೆಗಳು ಹೆಚ್ಚಾಗಿದ್ದವು.ಪ್ರಮುಖ ಬ್ಯಾಟ್ಸ್‌ಮನ್ ಗಳು ಸೇರಿ ನಾಯಕ ವಿರಾಟ್ ಕೊಹ್ಲಿ ಕೂಡ ಆ ಟೀಕೆಗೆ ಇನ್ನಿಲ್ಲದಂತೆ ಗುರಿಯಾಗಿ ಬಿಟ್ಟಿದ್ದ.  ಕೆಲವರು ಅಂತು ಈ ಕೊಹ್ಲಿ ಫಾರ್ಮ್ ನಲ್ಲಿ ಬೇರೆ ಇಲ್ಲ,ನತದೃಷ್ಟ ಕಪ್ತಾನ ಕೂಡ ಹೌದು. ಮೊದಲು ಅವನನ್ನು ಕಿತ್ತು ಬಿಸಾಕ್ರಿ.. ಅಂತ ಕೂಡ ಹೇಳಿಯೇ ಬಿಟ್ಟಿದ್ದರು.  ಅದರಲ್ಲೂ ಕ್ರಿಕೆಟ್ Abcd ಗೊತ್ತಿರುವವರೂ ಸಹ ತಮ್ಮದೊಂದು ವೈಯಕ್ತಿಕ ದ್ವೇಷಕ್ಕಾಗಿ ಇಂತಹ ಸಂದರ್ಭಕ್ಕಾಗಿಯೇ ಕಾದಿದ್ದರು.ತಂಡ ಲೀಡ್ಸ್ ನಲ್ಲಿ ಸೋತ ಕೂಡಲೇ ಬಹು ಜನರ ಆಕ್ರೋಶದ ಅಗ್ನಿಗೆ ಅವರೂ ಕೂಡ

ಹೃದಯ ವಿದ್ರಾವಕ ಘಟನೆ

Image
ಒಂದು ಪರಿಚಯದ ಹೋಟೆಲ್ ಗೆ ಹೋಗಿದ್ದೆ. ಊರಿನದ್ದೇ ತಿನಿಸು ಜಾಸ್ತಿ ಅಲ್ಲಿ. ಒಂದು ಪ್ಲೇಟ್ ಪುಂಡಿಗಸಿ ತಗೊಂಡು ನನ್ನಷ್ಟಕ್ಕೆ ತಿನ್ನ ತೊಡಗಿದೆ. ನನ್ನ ಪಕ್ಕದಲ್ಲಿಯೇ ಒಬ್ಬರು ಇದ್ದರು.ಅವರು ದೋಸೆ ತಿನ್ನುತ್ತಾ  ಇದ್ದರು. ಅಲ್ಪ ಸ್ವಲ್ಪ ಕನ್ನಡ ಬರುತ್ತಿದ್ದ ಅವರು ಬಹುಶಃ ನಮ್ಮ ರಾಜ್ಯದವರು ಅಲ್ಲ ಅಂತ ಕಾಣುತ್ತೆ.  ನಾನು ತಿನ್ನುವುದನ್ನು ನೋಡಿ,ಇದೆಲ್ಲಾ ನೀವು ಏನು ತಿನ್ನುವುದು.. ಅಂತ ಆಶ್ಚರ್ಯ ಚಕಿತವಾಗಿ,ಅಷ್ಟೇ ಭಯ ಭೀತರಾಗಿ ಕೇಳಿದರು. ಅವರು ನನ್ನನ್ನೊಮ್ಮೆ ಹಾಗೂ ಪ್ಲೇಟ್ ನಲ್ಲಿರುವ  ಪುಂಡಿಯನ್ನೊಮ್ಮೆ ಮೇಲೆ ಕೆಳಗೆ ನೋಡುತ್ತಾ ಕೇಳುತ್ತಿದ್ದ ಆ ರೀತಿ,ನನಗೊಮ್ಮೆ ನಾನು ಯಾವುದೋ ಅನ್ಯಗ್ರಹ ಜೀವಿಯೇ ಇರಬೇಕು ಎಂಬಂತಹ ಫೀಲ್ ಕೊಟ್ಟಿತು.  ಆದರೂ ಪಾಪ.. ಬಹುಶಃ ಅವರಿಗೆ ಇದೆಲ್ಲಾ ಗೊತ್ತಿರಲಿಕ್ಕಿಲ್ಲ ಅಂತ ನಾನೇ ಅವರಿಗೆ ಸವಿವರವಾಗಿ ವಿವರಿಸಿದೆ...  ನೋಡಿ ಇವರೇ,ಇದೆಲ್ಲಾ ನಮ್ಮ ಮಂಗಳೂರಿನ ತಿಂಡಿ.ನೀವೂ ಸ ಇದನ್ನು ತಿನ್ನಿ,ಇದು ಬಹಳ ಚೆನ್ನಾಗಿರುತ್ತದೆ,ದೋಸೆ,ಪೂರಿ, ಚಪಾತಿ ಎಲ್ಲಾ ಕಡೆ ಇದ್ದೇ ಇರುತ್ತದೆ...ಅಂದೆ.  ನನಗೆ ಇವುಗಳದ್ದೆಲ್ಲಾ ಹೆಸರೇ ಗೊತ್ತಿಲ್ಲ.ಆವಾಗದಿಂದ ಕೆಲವರು ಬಂದು ಏನೇನೋ ಹೆಸರು ಹೇಳಿಕೊಂಡು,ತಿಂದುಕೊಂಡು ಹೋಗ್ತಾನೆ ಇದ್ದಾರೆ,ನಾನು ಇದೆಲ್ಲಾ ಯಾವತ್ತೂ ತಿಂದೂ ಇಲ್ಲ,ನೋಡಿಯೂ ಇಲ್ಲ... ಅಂದರು. ಪರವಾಗಿಲ್ಲ ನಾನು ನಿಮಗೆ ಸಹಾಯ ಮಾಡುವೆನು ಎಂದು ಹೇಳಿ...ನಾನು ಒಂದೊಂದು ಪ್ಲೇಟ್ ಪುಂಡಿ ಗಸಿ,ಬಜಿಲ್ ಕೊಜಪು,ಬನ್ಸ್,ತೆಲ್ಲವ್

ಚಕ್ಕುಲಿ ಕಾಯಿಲ್

Image
ನಮ್ಮ ಊರಿನ ಅಂಗಡಿಗಳು ತುಂಬಾ ಅಪ್ಡೇಟ್ ಆಗಿವೆ.  ಇವತ್ತು ಒಂದು ಕಡೆ ಹೋಗಿ ಸೊಳ್ಳೆ ಕಾಯಿಲ್(ಮೋಸ್ಕಿಟೋ ಕಾಯ್ಲ್) ಕೊಡಿ ಅಂತ ಕೇಳಿದೆ. ಅದಕ್ಕೆ ಅವರು... ಯಾವುದು ಚಕ್ಕುಲಿಯಾ..? ಅಂತ ಕೇಳಿದ್ರು. ನನಗೆ ಒಮ್ಮೆಗೆ ಅರ್ಥ ಆಗಲಿಲ್ಲ.  ನನಗೆ ಚುಕ್ಕುಲಿ ಬೇಡ,ಕಾಯಿಲ್ ಮಾತ್ರ ಕೊಡಿ... ಅಂದೆ. ಹಾಗೇ ಅಲ್ಲ ಇವರೇ..ನೋಡಿ ಈ ಬೆಂಕಿ ಹಚ್ಚುವ ಸುರುಳಿ ಸುರುಳಿ ಸೊಳ್ಳೆ ಬತ್ತಿ ಉಂಟಲ್ಲಾ,ಅದಕ್ಕೆ ನಾವು ಜನರಲ್ ಆಗಿ ಚಕ್ಕುಲಿ ಕಾಯಿಲ್ ಅಂತ ಹೇಳ್ತೇವೆ.. ಅಂದ್ರು. ಓಹ್ ಹಾಗೆಯಾ.. ಹಾಗಾದರೆ ನೀವು ಚಕ್ಕುಲಿಗೆ ಏನು ಹೇಳ್ತೀರಾ..? ಕೇಳಿದೆ. ಚಕ್ಕುಲಿಗೆ ಎಂತ ಹೇಳ್ತಾರೆ.. ಚಕ್ಕುಲಿಗೆ ಚಕ್ಕುಲಿ ಎಂದೇ ಹೇಳ್ತೇವೆ.. ಅವರಂದರು.  ನನಗೆ ಯಾಕೋ ಈಗ ಚಕ್ಕುಲಿ ಕೂಡ ಬೇಕು ಎಂದು ಒಮ್ಮೆ ಅನಿಸಿತು. ಹಾಗಾದರೆ ನನಗೆ ಒಂದು ಪ್ಯಾಕ್ ಚಕ್ಕುಲಿ ಕಾಯಿಲ್ ಕೊಡಿ, ಹಾಗೆಯೇ...ಒಂದು ಪ್ಯಾಕೆಟ್ ಕಾಯಿಲ್ ತರಹ ಇರುವ ಚಕ್ಕುಲಿ ಕೂಡ ಕೊಡಿ.. ಅಂದೆ. ಎರಡೂ ಕೊಟ್ಟರು.  ಇನ್ನು ಮನೆಗೆ ಹೋಗಿ ಜಾಗ್ರತೆಯಿಂದ ಚಕ್ಕುಲಿ ಕಾಯಿಲ್, Sorry... ಕಾಯಿಲ್ ಚಕ್ಕುಲಿಯನ್ನೇ ತಿನ್ನಬೇಕು ಹಾಗೂ ಚಕ್ಕುಲಿ ಕಾಯಿಲ್ ಅನ್ನೇ ಹಚ್ಚಿ ಸೊಳ್ಳೆಯನ್ನು ಮನೆಯಿಂದಾಚೆಗೆ ಓಡಿಸಬೇಕು.ಉಲ್ಟಾಪಲ್ಟ ಆದ್ರೆ ನನಗೆ ಕಷ್ಟವಿದೆ. ನಮ್ಮ ಊರಿನವರು ಈ ತರಹ ಒಳಗೊಳಗೆ ಕೇವಲ ಅವರುಗಳೇ ಸಿಕ್ಕಾಪಟ್ಟೆ ಅಪ್ಡೇಟ್ ಆಗ್ತಾ ಇದ್ದರೆ... ನಮಗೆಲ್ಲಾ ಜೀವನ ಭಯಂಕರ ಮುಶ್ಕಿಲ್ ಆಗಲಿದೆ.  #ವಿಷಯ_ಎಂತ_ಗೊತ್ತುಂಟಾ ab

ದೇವರು ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ..!

Image
                                      " ಪುಷ್ಯರಾಗ "              (ದೇವರು ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ..!)  ನಾನು ದೇವರನ್ನು ನಂಬಲ್ಲ. ನಂಬಬೇಕೆಂದು ನನಗೆ ಎಂದೂ ಅನಿಸಿರಲಿಲ್ಲ.  ಹಾಗಾಗಿ ನಂಬಿರಲಿಲ್ಲ. ಎಲ್ಲರಿಗೂ ಇರುವಂತೆ ನನಗೆ ಅವನ ಕಡೆಗೆ ಅಂತಹ ಯಾವುದೇ ಸೆಳೆತವಿರಲಿಲ್ಲ. ನಿಜ ಹೇಳಬೇಕೆಂದರೆ ಆ ಭಯವಾಗಲಿ,ಭಕ್ತಿಯಾಗಲಿ ಎರಡೂ  ಎಂದೂ ನನ್ನಲ್ಲಿ ಹುಟ್ಟಿದ್ದೇ ಇಲ್ಲ.  ನಾನು ನನ್ನಷ್ಟಕ್ಕೆ ಸುಖಿ ಆಗಿದ್ದೆ. ನಿಜ ಹೇಳಬೇಕೆಂದರೆ ದೇವರನ್ನು ನಂಬದೆಯೂ ನಾನು ಪರಮ ಸುಖಿಯೇ ಆಗಿದ್ದೆ. ಆದರೆ ಬದುಕು ಎಂದಿಗೂ ಸರಳರೇಖೆ ಅಲ್ಲ ಮಕ್ಕಳೇ.. ಎಂದು ಸ್ವತಃ ಸ್ಟ್ರೈಟ್ ಲೈನ್ ಎಳೆಯಲು ಕಲಿಸಿದ್ದ ರೇಖಾ ಟೀಚರ್ ನ ಆ ಒಂದು ಮಾತು ಕೂಡ ನನಗೆ ಸದಾ ನೆನಪಿನಲ್ಲಿತ್ತು.  ಹೌದು.. ಒಂದು ದಿನ ದೇವರ ಮೇಲಿದ್ದ ನನ್ನ ನಂಬಿಕೆ ಎಲ್ಲವೂ  ಬದಲಾಗಿ ಬಿಟ್ಟವು.  ಹೆಚ್ಚು ಕಡಿಮೆ ಧೂಳೀಪಟವಾಗಿಯೇ ಹೋಗಿ ಬಿಟ್ಟವು.  ನಾನು ತೀರಾ ಅಸಹಾಯಕಳಾಗಿದ್ದೆ.  ಯಾವ ದಾರಿಯೂ ಕಾಣದೇ ಇದ್ದಾಗ ಕೊನೆಗೊಂದು ದಿನ ಕೈ ಜೋಡಿಸಿ ಎಂದಿಗೂ ನಂಬದ ಆ ದೇವರನ್ನೇ ಪ್ರಾರ್ಥಿಸಿ ಬಿಟ್ಟಿದ್ದೆ. ದೇವರೇ.. ನನಗೇನಾದರೂ ಪರವಾಗಿಲ್ಲ,ಆದರೆ ನನ್ನ ಅಮ್ಮನನ್ನು ಮಾತ್ರ ಉಳಿಸಿಕೊಡು..! ಎಂದು ಕಣ್ಣಲ್ಲಿ ನೀರು ತುಂಬಿಕೊಂಡೇ ಅವನಲ್ಲಿ ಕೇಳಿದ್ದೆ.  ನನ್ನ ಅಮ್ಮ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿದ್ದಳು.  ಅವಳ ಚಂದದ ರೋಗದ ಹೆಸರೇ ಕ್ಯಾನ್ಸರ್. ಅವಳ ಒಬ್ಬಳೇ ಮುದ್ದಿನ ಮಗಳು ನಾನು.  ಕ