Posts

Showing posts from December, 2021

Kadaseela Biriyani

Image
 #Kadaseela_Biriyani  | Netflix ಅವರು ಮೂವರು ಸಹೋದರರು.ತಮ್ಮ ತಂದೆಯ ಸಾವಿಗೆ ಕಾರಣನಾದವನನ್ನು ಕೊಂದು ಪ್ರತೀಕಾರ ತೀರಿಸಬೇಕೆಂದು ಆ ಕಾಡಿನ ನಡುವಿನ,ರಬ್ಬರ್ ತೋಟದಿಂದಲೇ ಸುತ್ತುವರಿದಿರುವ ಆ ದೊಡ್ಡದಾದ ಒಂಟಿ ಮನೆಯ ಕಡೆಗೆ ಅವರು ಹೊರಡುತ್ತಾರೆ.ಈ ಒಂದು ಕೊಲೆಗಾಗಿ ಬಹಳಷ್ಟು ಯೋಜನೆ ಹಾಗೂ ಸಿದ್ದತೆಗಳನ್ನು ಅವರು ಬಹಳ ಮೊದಲೇ ಮಾಡಿರುತ್ತಾರೆ,ಆದರೆ ಸರಿಯಾದ ಸಮಯ ಸಂಧರ್ಭಕ್ಕೆ ಕಾಯುತ್ತಿರುತ್ತಾರೆ.ಮೂವರು ಸಹೋದರರಲ್ಲಿ ಕೊನೆಯವನು ಸ್ವಲ್ಪ ಚಿಕ್ಕ ವಯಸ್ಸಿನವನು.ಅವನಿಗೆ ಈ ಪ್ರತಿಕಾರ,ಕೊಲೆಗಳಲ್ಲಿ ಆಸಕ್ತಿ ಇಲ್ಲ,ಜೊತೆಗೆ ಸಿಕ್ಕಾಪಟ್ಟೆ ಹೆದರಿಕೆ ಬೇರೆ.ಆದರೆ ಈ ಮೂವರು ಸಹೋದರರ ತಾಯಿಯ ಬೇಡಿಕೆ,ಕೋರಿಕೆ,ಪ್ರಾರ್ಥನೆ, ಆಕ್ರೋಶ ಎಲ್ಲವೂ ಒಂದೇ,"ನಿಮ್ಮ ತಂದೆಯನ್ನು ಕೊಂದವನನ್ನು ಕೊಂದೇ ನೀವು ಮೂವರು ಮತ್ತೆ ಮನೆಗೆ ಮರಳಬೇಕು.." ಎಂದು.ಕೊನೆಗೂ ಈ ಮೂವರೂ ಸರಿಯಾದ ಸಮಯ ನೋಡಿಕೊಂಡು ಕೊಲೆ ಮಾಡುವುದಕ್ಕಾಗಿ ಹೊರಡುತ್ತಾರೆ.ಆದರೆ ಇವರು ಯೋಚಿಸಿದಕ್ಕಿಂತಲೂ ಬಹಳ ಸುಲಭವಾಗಿಯೇ ಯಾರ ಕೊಲೆ ಆಗಬೇಕಿತ್ತೋ ಅವನ ಕೊಲೆ ಆಗುತ್ತದೆ;ಮೂವರೂ ಸೇರಿ ಒಬ್ಬನಿಗೆ ಚಟ್ಟ ಕಟ್ಟುತ್ತಾರೆ.ಆದರೆ ಬರೀ ಇಷ್ಟು ಆಗಿ ಬಿಟ್ಟರೆ ಕಥೆ ಹೇಗೆ ಇಂಟ್ರೆಸ್ಟಿಂಗ್ ಆಗುತ್ತದೆ?. ಇದ್ದಾನೆ, ಅಲ್ಲೊಬ್ಬ ಅವಶ್ಯವಾಗಿ ಇದ್ದಾನೆ. ಸೈಕೋಗಳಿಗೂ ಹುಚ್ಚು ಹುಡಿಸುವ ಸೈಕೋ ಅವನು.ಈ ಮೂವರು ಸಹೋದರರು ಸೇರಿ ಕೊಲೆ ಮಾಡಿದವನ ಮಗನೇ  ಅವನು.ಅವನದ್ದೊಂದು ಹುಚ್ಚಾಟವೇ ಈ ಕಥೆಗೆ ಬಹಳಷ್ಟು ಕಿಕ

Kurup

Image
 #Kurup |  Netflix  ಅವನು ಅವನೇ.ತನ್ನ ಅಸ್ತಿತ್ವವೊಂದನ್ನು ಅಳಿಸುವುದಕ್ಕಾಗಿ ಅವನು ಸ್ವತಃ ಅವನ ಕೊಲೆಯನ್ನೇ ಮಾಡಿಸುತ್ತಾನೆ.ಆದರೆ ನಿಜವಾಗಿಯೂ ಸಾಯುವುದು ಕೇವಲ ಅವನ  ಹೆಸರಷ್ಟೇ.ಹೊಸತೊಂದು ಹೆಸರಿನಲ್ಲಿ ಅವನು ಮತ್ತೆ ಮತ್ತೆ ಜೀವಂತ.ಅವನು ಒಳ್ಳೆಯವನಾ? ಎಂದು ಕೇಳಿದರೆ  ಅವನು ಎಲ್ಲೆಲ್ಲಿ ಕೆಟ್ಟವನಲ್ಲ ಎಂಬುದನ್ನು  ಭೂತಗನ್ನಡಿ ಹಿಡಿದೇ  ತಡಕಾಡಬೇಕಾಗುತ್ತದೆ.ಅವನು ನಿಜವಾಗಿಯೂ ಅಷ್ಟೊಂದು ಕೆಟ್ಟವನಾ? ಎಂದು ಕೇಳಿದರೆ ಎಷ್ಟು ಕೆಟ್ಟವನು,ಹೇಗೆ ಕೆಟ್ಟವನು ಎಂಬುದನ್ನು ಬಿಡಿಸಿ ಬಿಡಿಸಿಯೇ ವಿವರಿಸಬೇಕಾಗುತ್ತದೆ!  Srinath Rajendran ನಿರ್ದೇಶನದ ಈ ಮೂವಿಯಲ್ಲಿ Dulquer Salmaan,Indrajith Sukumaran, Sobhita Dhulipala ಅಭಿನಯಿಸಿದ್ದಾರೆ.  ಆರಂಭದಲ್ಲಿ ಇಂಡಿಯನ್ ಏರ್ ಫೋರ್ಸ್ ನ ಕಥೆಯೊಂದನ್ನು  ಹೇಳಲು ಹೋಗುವ ಇದು,ಆ ನಂತರ ಹೇಳುವ ಕಥೆಯೇ ಬೇರೆ.ಏರ್ ಫೋರ್ಸ್ ಕಥೆ ನಿಜವಾಗಿಯೂ ಇದಕ್ಕೆ ಬೇಕಿತ್ತಾ ಎಂದು ಅನ್ನಿಸಿಬಿಡುತ್ತದೆ.ನನಗಂತು ಬೇಡ ಎಂದೇ   ಅನ್ನಿಸಿತು.ಒಂದು ರಹಸ್ಯ ಕೊಲೆಯ ಹಿಂದಿರುವ ಬಹಳಷ್ಟು ಅಸಲಿ ಕಥೆಗಳೇ ಇದರ ಕಥೆ.ಹಾಡುಗಳು ಚೆನ್ನಾಗಿದೆ. " Dingiri Dingale" ಹಾಡು ಕೇಳಲು ಒಂಥರಾ ಮಜವಾಗಿದೆ.ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ,ಆದರೆ ಕ್ರೈಮ್ ಥ್ರಿಲ್ಲರ್ ಗಳನ್ನು ಬಹುವಾಗಿ ಇಷ್ಟ ಪಡುವವರಿಗೆ ಇದು ಕೂಡ ಇಷ್ಟವಾಗಬಹುದು.  #Kurup | Netflix  Malayalam Movie  Crime Thriller  Release - 12 Nove

Madhuram

Image
 #Madhuram  | SonyLIV ಪ್ರೀತಿಯೇ ಹಾಗೆ... ಅದರ ಮಾತುಗಳನ್ನು ಒಂದರ ನಂತರ ಒಂದೊಂದಾಗಿ ಪೋಣಿಸುತ್ತಾ ಹೋದರೆ ಆಗ ಅದು ಕಥೆ,ಆದರೆ ಮಾತುಗಳ ನಡುವೆಯೇ ಇದ್ದಕ್ಕಿದ್ದಂತೆ ಹೇಳದೆ ಕೇಳದೆ ಜನ್ಮ ತಾಳುವ ಮೌನವೊಂದು ಹಾಗೇ ಸುದೀರ್ಘವಾಗಿ ಬಿಟ್ಟರೆ,ಆಗ ಅಲ್ಲಿಂದಲೇ ಅದೊಂದು ಮುಗಿಯದ ಕಾದಂಬರಿ.  ಅವಳು ಬಿರಿಯಾಣಿಗಾಗಿ ಮೊಸರು ಬಜ್ಜಿ ತಿನ್ನುತ್ತಿದ್ದಳೋ ಅಥವಾ ಮೊಸರು ಬಜ್ಜಿಗಾಗಿಯೇ ಬಿರಿಯಾಣಿ ತಿನ್ನುತ್ತಿದ್ದಳೋ ಎಂದನಿಸುವಂತೆ ಮಾಡುವವಳು.ಅವಳಿಗೆ ಆ ಹೋಟೆಲಿನ ಬಿರಿಯಾಣಿಯೂ ಇಷ್ಟ,ಜೊತೆಗೆ ಅವನೂ ಇಷ್ಟ.ಅವನಿಗಂತು ಅವಳು ಮೊದಲೇ ತುಂಬಾ ತುಂಬಾ ಇಷ್ಟ.  ದೊಡ್ಡ ಕಣ್ಣುಗಳ ಅವಳ ಅಗಲದ ಮೂಗು ಬೊಟ್ಟು ಕೂಡ ಬಹಳಷ್ಟು ಚಂದ.ಎಷ್ಟೋ ಸಲ ಅವಳು ಬರೀ ಕಣ್ಣಲ್ಲಿಯೇ ಮಾತಾಡುತ್ತಿದ್ದಳು.ಅವಳಿಗಿಂತಲೂ ಅವಳ ಕಣ್ಣೇ ಹೆಚ್ಚು ಅಂದ. ಅಂದ ಹಾಗೆ ಅವಳು ಹಪ್ಪಳ ಮಾಡುತ್ತಿದ್ದಳು.ಹಪ್ಪಳ ಮಾಡಿ ಹೋಟೆಲಿಗೆ ಮಾರಾಟ ಮಾಡುತ್ತಿದ್ದಳು;ಜೊತೆಗೆ ವಿವಿಧ ಬಗೆಯ ಸ್ವೀಟುಗಳನ್ನು  ಕೂಡ.ಅವನು ರಜಾ ದಿನಗಳಲ್ಲಿ ಆ ಹೋಟೆಲಿನಲ್ಲಿ ನೀರುಳ್ಳಿ ಹಚ್ಚುತ್ತಿದ್ದ,ಮಸಾಲೆ ಹಾಕಿ ಘಮ್ಮನೆಯ ಬಿರಿಯಾಣಿ ಸಿದ್ಧಪಡಿಸುತ್ತಿದ್ದ.ಅವಳಿಗೆಂದೇ ವಿಶೇಷವಾಗಿ ಹಾಗೂ ಬಹು ಪ್ರೀತಿಯಿಂದಲೇ ರುಚಿ ರುಚಿಯಾದ ಬಿರಿಯಾಣಿ ಅವನು ಮಾಡುತ್ತಿದ್ದ.ಇದೆಲ್ಲಾ ಹೇಗೆ ಎಂದು ಅವಳು ತಟ್ಟೆಯ ಬಿರಿಯಾಣಿಯನ್ನು ಬೆರಳುಗಳಲ್ಲಿ ಬಿಡಿಸುತ್ತಾ ಇಷ್ಟಗಲ ಕಣ್ಣಗಲಿಸಿ ಅವನಲ್ಲಿ ಕೇಳಿದರೆ 'ಅದೆಲ್ಲಾ ಮ್ಯಾಜಿಕ್' ಎಂದು ನಾಚುತ್ತಲೇ ಹೇ

Black Swan

Image
 #Black_Swan  |  Hotstar ಅವಳು ಬ್ಯಾಲೆಯ ಬಾಲೆ.ಹುಡುಗಿಯೊಬ್ಬಳು ಹಂಸವಾಗುವ ಕಥೆಗೆ ಅವಳೇ ನಾಯಕಿ.ಮುಗ್ಧ,ನಾಜೂಕಿನ ಬಿಳಿಯ ಹಂಸ ಮತ್ತು ಅದಕ್ಕೆ ತದ್ವಿರುದ್ಧ ಸ್ವಭಾವದ ಕಪ್ಪುಹಂಸ ಈ ಎರಡೂ ಪಾತ್ರವಾಗಿ ಅವಳು ನರ್ತಿಸಿದರೆ ಮಾತ್ರ ಅವಳು ಆ ಕಥೆಗೆ  ನಾಯಕಿ,ಇಲ್ಲದಿದ್ದರೆ ಅಲ್ಲ. ಅವಳಾದರೂ ಸಾದ ಸೀದಾ ಬಿಳಿಯ ಹಂಸದಂತವಳು.ದುಷ್ಟ ಕಪ್ಪು ಹಂಸವಾಗಲು ಅವಳಿಗೆಂದಿಗೂ ಸಾಧ್ಯವಿಲ್ಲ,ಏಕೆಂದರೆ ಅದು ಅವಳಿಗೆ ಗೊತ್ತಿಲ್ಲ.ಆದರೆ ಪಾತ್ರ ಬಿಟ್ಟು ಬಿಡಲು ಕೂಡ ಅವಳಿಗೆ ಮನಸ್ಸಿಲ್ಲ.ಏಕೆಂದರೆ ಅವಳ ಜೀವನದ ಪರಮ ಗುರಿ ಕೂಡ ಅದೊಂದೇ;ಅದೇ ಪ್ರಮುಖ ಪಾತ್ರದಲ್ಲಿ ಮಿಂಚಬೇಕು ಎಂದು.  ಬಿಳಿಯ ಹಂಸವನ್ನು ಇವಳಿಗಿಂತ ಚೆನ್ನಾಗಿ ಅವಳ ತಂಡದಲ್ಲಿ ಬೇರಾರು ಮಾಡಲು ಸಾಧ್ಯವಿಲ್ಲ,ಅದರಲ್ಲಿ ಎಳ್ಳಷ್ಟು ಸಂದೇಹವಿಲ್ಲ.ಅಷ್ಟು ಚೆನ್ನಾಗಿ ಅದು ಅವಳಿಗೆ ಒಪ್ಪುತ್ತದೆ ಮಾತ್ರವಲ್ಲ ಅದನ್ನವಳು ಬಹಳ ಸೊಗಸಾಗಿಯೇ  ನಿಭಾಯಿಸಬಲ್ಲಳು ಕೂಡ.ಆದರೆ ಕಪ್ಪು ಹಂಸ? ಒಬ್ಬಳು ಇದ್ದಾಳೆ! ಅದೇ ಇವಳಿಗೆ ಕಷ್ಟ. ಇವಳು ಭ್ರಮೆಗೆ ಬೀಳುತ್ತಾಳೆ.ಏನೇನೋ ಕಲ್ಪಿಸಿಕೊಳ್ಳುತ್ತಾಳೆ. ಪಾತ್ರದಲ್ಲಿ ಪರಿಪೂರ್ಣತೆ ತರಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾಳೆ,ಆದರೂ ನಿರಂತರವಾಗಿ ಸೋಲುತ್ತಾಳೆ. ಕೊನೆಗೂ ಬಂದೇ ಬಿಡುತ್ತದೆ ಶೋ ಟೈಂ,ಅದು ಕಿಕ್ಕಿರಿದು ನೆರೆದಿರುವ ಪ್ರೇಕ್ಷಕರೆದುರು ಬಿಳಿ ಹಾಗೂ ಕಪ್ಪು ಹಂಸವಾಗಿ ನಾಯಕಿ ಕುಣಿಯಬೇಕಾದ ದಿನ. ಹಂಸಗಳ ನಿಜ ಕಥೆಯಲ್ಲಿ ನಾಯಕಿ ಕೊನೆಯಲ್ಲಿ ಅವಳಾಗಿಯೇ ಸಾಯುತ್ತಾಳೆ.ಇಲ್ಲಿ

ಬಹಳಷ್ಟು ತಂಪಿನ 'ಬಿಸಿಲೆ ಘಾಟ್'

Image
"ಬಹುಶಃ ಅದು ಉಜಿರೆ ಇರಬೇಕು.." ಎಂದರೆ ತಪ್ಪಾದೀತು.ಅದು ಉಜಿರೆಯೇ.ಅಲ್ಲೇ ಒಂದು ಹೋಟೆಲಿನಲ್ಲಿ ಮುಂಜಾನೆಯ 6 ಗಂಟೆಯ ತಿಂಡಿಗೆಂದು ನಾವೆಲ್ಲರೂ ಕುಳಿತುಕೊಂಡೆವು.  ವಿಶೇಷವಾಗಿ ಏನನ್ನೂ ತಿನ್ನಲಿಲ್ಲ.ಏಕೆಂದರೆ ಆ ಹೋಟೆಲಿನಲ್ಲಿ  ಕೇಳಿದರೆ ಎಲ್ಲವೂ ಸಿಗುತ್ತದೆ,ಕೇಳದಿದ್ದರೆ ಏನೂ ಸಿಗುವುದಿಲ್ಲ ಅನ್ನುವುದೇ ಅತೀ ದೊಡ್ಡ ವಿಶೇಷವಾಗಿತ್ತು.ಅವರಿಗೂ ನಮಗೇನು ಬೇಕು ಎಂದು ಕೇಳುವ ಅಕ್ಕರೆಯೂ ಇರಲಿಲ್ಲ,ಆಸ್ಥೆಯೂ ಇರಲಿಲ್ಲ.ಆಸಕ್ತಿ ಕೂಡ ಇರಲಿಲ್ಲ ಎನ್ನುವುದೇ ನನಗೆ ಇನ್ನೂ ಹೆಚ್ಚಿನ ಆಸಕ್ತಿಯನ್ನು ಉಂಟು ಮಾಡಿತ್ತು. ಯಾವುದೇ ಹೊಟೇಲಿನ ಗಲ್ಲಾ ಪೆಟ್ಟಿಗೆಯೊಂದು ನಿರಂತರವಾಗಿ ತುಂಬಿ ತುಳುಕುತ್ತಿದ್ದರೆ ಆ ಕ್ಷಣದಿಂದಲೇ ಅಲ್ಲಿ ದಿವ್ಯ ನಿರ್ಲಕ್ಷ್ಯವೊಂದು ಥಕ ಥೈ ಎಂದು ಗೆಜ್ಜೆ ಕಟ್ಟಿ ಕುಣಿಯಲು ಶುರು ಮಾಡುತ್ತದೆಂದು ಅನ್ನಿಸಿದ್ದು ಮಾತ್ರ ಸುಳ್ಳಲ್ಲ."ಅದು ಉಂಟು.. ಇದು ಉಂಟು.." ಎಂದು ಮೆನುವಿನ ಲಿಸ್ಟ್ ಕೂಡ ಅಲ್ಲಿ ಯಾರೂ ಉದ್ದಕ್ಕೆ ಸರಾಗವಾಗಿ ಓದಿ ಹೇಳಲಿಲ್ಲ."ಅದು ಇಲ್ಲ.. ಇದು ಇಲ್ಲ.. ನಿನ್ನೆ ಇತ್ತು..ಇವತ್ತು ಮಾಡಲಿಲ್ಲ.. ಅದಾ.. ಅದು ನಾವು ಗುರುವಾರ,ಶನಿವಾರ ಮಾತ್ರ ಮಾಡುವುದು.." ಎನ್ನುವ ಕಾಣೆಯಾದ ತಿಂಡಿಗಳ ಪಟ್ಟಿಯನ್ನು ಕೂಡ ಅವರಾರು ನಮಗೆ ವರದಿ ಒಪ್ಪಿಸುವಂತೆ ಒಪ್ಪಿಸಲಿಲ್ಲ. ಆದರೂ ಅದು ಸೆಲ್ಫ್ ಸರ್ವಿಸ್ ಹೋಟೆಲ್ ಅಲ್ಲ.ಬೇಕಾದರೆ ಕೇಳಿ ತಿನ್ನಿ,ಇಲ್ಲದಿದ್ದರೆ ರಾತ್ರಿ ಹೋಟೆಲಿನ ಶಟರ್ ಬಾಗಿಲು  ಎಳೆಯುವವರ

ಕಂಬಳವೆಂದರೆ ಅದು ಬರೀ ಕ್ರೀಡೆಯಲ್ಲ

Image
ಏನೇ ಬದಲಾವಣೆಗಳನ್ನು ತಂದರೂ,ಕಾಲ ಕಾಲಕಾಲಕ್ಕೆ ಎಷ್ಟೇ ಬದಲಾಗುತ್ತಾ ಹೋದರೂ ಈ ಕಂಬಳದೊಳಗಿನ ಆ ಒಂದು ಅಸಲಿ ತಿರುಳು ಮತ್ತದರ ಸ್ವಾದ ಇನ್ನೂ ಹಾಗೆಯೇ ಇದೆ.ಅದು ಬದಲಾಗುವುದಿಲ್ಲ,ಏಕೆಂದರೆ ಅದು ಬದಲಾಗುವಂತಹದ್ದೇ ಅಲ್ಲ. ಅನುಭವದ ಹಿರಿಯರು,ಉತ್ಸಾಹದ ಕಿರಿಯರು ಎಲ್ಲರೂ ಇಲ್ಲಿ ಒಟ್ಟೊಟ್ಟಿಗೆಯೇ ಸಿಗುತ್ತಾರೆ.ಕೆಲವರಿಗೆ ಇದೊಂದು ಕ್ರೀಡೆ,ಇನ್ನು ಕೆಲವರಿಗೆ ಇದೊಂದು ಪರಂಪರೆ,ಮತ್ತೆ ಹಲವರಿಗೆ ಇದೊಂದು ಒಂದಿಷ್ಟು ಗಮ್ಮತ್ತು,ಆದರೆ ಬಹಳಷ್ಟು ಜನರಿಗೆ ಕಂಬಳ ಎನ್ನುವುದೇ ಒಂದು ಉಲ್ಲಾಸ ಉತ್ಸಾಹದ ಜಾತ್ರೆ.ಆದರೂ ಇತ್ತೀಚಿನ ದಿನಗಳಲ್ಲಿ ಕಂಬಳದಲ್ಲಿ ಕೋಣ ಓಡಿಸುವವ ಮತ್ತು ಆ ಕೋಣಗಳನ್ನು ಸಾಕಿದ ಯಜಮಾನ ಅದೊಂದು ಹೆದರಿಕೆಯಿಂದ ಬಹಳಷ್ಟು ಬಳಲಿದ್ದಾನೆ.ಅದೇ ಪ್ರಾಣಿ ದಯಾ ಸಂಘ!. ಹಿಂದೆ ಎಲ್ಲ ಕಂಬಳದಲ್ಲಿ ಪೋಟೋ ತೆಗೆಯುವುದೆಂದರೆ ಅದೊಂದು ಬೇರೆಯೇ ಅನುಭವ,ಬೇರೆಯೇ ಗತ್ತು ಗಮ್ಮತ್ತು.ನಾಡಿನ ಖ್ಯಾತ ಪೋಟೋಗ್ರಾಫರ್ ಗಳು,ಹವ್ಯಾಸಿ ಪೋಟೋಗ್ರಾಫರ್ ಗಳು ಮಾತ್ರವಲ್ಲ ಅಂತರಾಷ್ಟ್ರೀಯ ಪೋಟೋಗ್ರಾಫ್ ರ್ ಗಳು ಕೂಡ ದೊಡ್ಡ ದೊಡ್ಡ ಕ್ಯಾಮರಾಗಳೊಂದಿಗೆ ಕಂಬಳದ ಕರೆಯ ಎರಡೂ ಬದಿಯಲ್ಲಿ ಸಂತೆ ಸೇರುತ್ತಿದ್ದದ್ದು ಉಂಟು.ಊರಿನಲ್ಲಿ ಡಿ.ಎಸ್.ಎಲ್.ಆರ್ ಕ್ಯಾಮರಾ ಇದ್ದವನೇ ಆ ದಿನದ ರಾಜ.ಈಗಲೂ ಕಂಬಳದ ಓಟಕ್ಕೆ ಅದರದ್ದೊಂದು ಓಘಕ್ಕೆ ತಡೆಯಾಗದಂತೆ ಪೋಟೋ ತೆಗೆಯಬಹುದು.ತೆಗೆಯುತ್ತಾರೆ ಕೂಡ.ಅಂತಹ ಸಮಸ್ಯೆ ಏನಿಲ್ಲ.ಆದರೆ ಬಹಳ ಹತ್ತಿರದಿಂದ ಅಂದರೆ ಕೋಣಗಳ ಬಳಿ ನಡೆದು ಈಗ ಪೋಟೋ ತೆಗೆಯಲು ನ

Burning

Image
 #Burning |  Prime ಅವಳು ಏನೇನೋ ಹೇಳುತ್ತಿದ್ದಳು,ಅದೆನೇನೋ ಮಾಡುತ್ತಿದ್ದಳು,ತನ್ನ ಬಳಿ ಕಿತ್ತಳೆ ಹಣ್ಣು ಇರದಿದ್ದರೂ ಅದು ತನ್ನ ಕೈಯಲ್ಲಿಯೇ ಇದೆ ಎಂಬತೆ ಅದರ ಸಿಪ್ಪೆ ಸುಲಿಯುವುದನ್ನು ಬಹಳ ಸಹಜವಾಗಿಯೇ ನಟಿಸಿ ತೋರಿಸುತ್ತಿದ್ದಳು,ಜನರ ಹೊಟ್ಟೆಯ ಹಸಿವು,ಜೀವನದ ಹಸಿವು ಇದರೆಡರ ವ್ಯತ್ಯಾಸವನ್ನು ಅವಳಿಗೆ ತಿಳಿದಂತೆ ವಿವರಿಸುತ್ತಿದ್ದಳು,ಹೆಚ್ಚಾಗಿ ಅವಳು ಕಲ್ಪನೆಯಲ್ಲಿಯೇ ಜೀವಿಸುತ್ತಿದ್ದಳು, ಆದರೆ ಅವಳು ಇದ್ದಳು!!  ಒಂದು ದಿನ ಅವನೊಂದಿಗೆ ಸಿಗರೇಟು ಸೇದುವಾಗ ಅವಳು ಹೇಳಿದಳು "ನಾನು ದೂರದ ಆಫ್ರಿಕಾಕ್ಕೆ ಹೋಗುತ್ತೇನೆ, ಅಲ್ಲಿಯವರೆಗೆ ನೀನು ನನ್ನ ಬೆಕ್ಕನ್ನು ನೋಡಿಕೊಳ್ಳುತ್ತೀಯಾ?" "ನಿಮ್ಮ ಮನೆಯ ಬೆಕ್ಕನ್ನು ನನ್ನ ಮನೆಗೆ ತಂದು ಸಾಕಬೇಕೇ? " ಇವನೂ ಕೇಳಿದ. "ಬೇಡ.. ಬೇಡ.. ಅದು ನನ್ನ ಮನೆಯಲ್ಲಿಯೇ ಇರುತ್ತದೆ,ಅದಕ್ಕೆ ನೀನು ದಿನ ನಿತ್ಯ ಬಂದು ಆಹಾರ ಹಾಕುತ್ತಿದ್ದರೆ ಅಷ್ಟೇ ಸಾಕು" ಅವಳೆಂದರೆ ಇವನಿಗೆ ತುಂಬಾ ಇಷ್ಟ.ಅವಳು ಬಾಲ್ಯದ ಗೆಳತಿಯೂ ಹೌದು.ಅವಳ ಮಾತಿಗೆ ಇವನು ಒಪ್ಪುತ್ತಾನೆ ಹಾಗೂ ಅವಳು ಆ ನಂತರ ಆಫ್ರಿಕಾಕ್ಕೆ ಹೋಗುತ್ತಾಳೆ. ಅವಳ ಮನೆ ಇವನಿಗೆ ಗೊತ್ತು.ಅವಳ ಮನೆಗೆ ಹೋಗಿ ಇವನು  ಬೆಕ್ಕು ಹುಡುಕುತ್ತಾನೆ.ಆದರೆ ಅಲ್ಲಿ ಬೆಕ್ಕು ಇರುವುದಿಲ್ಲ! ಒಂದು ದಿನ ಅವಳು ಆಫ್ರಿಕಾದಿಂದ ಬರುತ್ತಾಳೆ;ಜೊತೆಗೊಬ್ಬ ಸಿರಿವಂತ ಸುಂದರ ಯುವಕ.  ಒಂದು ದಿನ ಈ ಮೂವರೂ ಇವನ ಮನೆಯಲ್ಲಿಯೇ  ಕುಳಿತುಕೊಂಡು ಹಾಗೇ ಮಾತಾಡು

ಕಥಾ ಸಂಗಮ

Image
  #ಕಥಾ_ಸಂಗಮ |  Prime ಇದೊಂದು ಆಂಥೋಲಜಿ ಫಿಲ್ಮ್.ಒಟ್ಟು ಏಳು ಕಥೆಗಳ ಕಥಾ ಸಂಕಲನ ಈ ಮೂವಿಯಲ್ಲಿದೆ.ಎಲ್ಲವೂ ಸಣ್ಣ ಸಣ್ಣ ಕಥೆಗಳು.ಮೇಲಿಂದ ಮೇಲೆಯೇ ಎಲ್ಲಾ ಕಥೆಗಳ ಬಗ್ಗೆ ಸ್ವಲ್ಪ ಸ್ವಲ್ಪ ಹೇಳುವ ಪ್ರಯತ್ನ ಮಾಡುತ್ತೇನೆ. 1. #ರೈನ್ಬೋಲ್ಯಾಂಡ್ . ಇದು ಮೊದಲನೆಯ ಕಥೆ.ಅಪ್ಪ ರಾತ್ರಿ ಮಲಗುವಾಗ ತನ್ನ ಪುಟ್ಟ ಮಗಳಿಗೊಂದು ಅವಳಷ್ಟೇ ಗಾತ್ರದ ಕಥೆ ಒಂದು ಹೇಳುತ್ತಾನೆ.ಅವನ ಕಥೆಯಲ್ಲೊಂದು ಸುಂದರ ಲೋಕ;ಕಾಮನಬಿಲ್ಲಿನಿಂದಲೇ ಆವೃತವಾದ ಬಣ್ಣದ ಲೋಕ.ಮಗಳು ಹಠ ಮಾಡುತ್ತಾಳೆ 'ನನಗೆ ಅಲ್ಲಿಗೆ ಕರೆದುಕೊಂಡು ಹೋಗು ಅಪ್ಪ ..'ಎಂದು.ಅದಕ್ಕೆ ತಂದೆ 'ಆಯಿತು ನಾಳೆ ಸಂಜೆ ಸ್ಕೂಲ್ ಬಿಟ್ಟು ಬಂದ ಮೇಲೆ ನಿನ್ನನ್ನು ಕಾಮನಬಿಲ್ಲಿನ ಆ ಬಣ್ಣಗಳ ಲೋಕಕ್ಕೆ ಕರೆದುಕೊಂಡು ಹೋಗುತ್ತೇನೆ..' ಎಂದು ಸಂತೈಸುತ್ತಾನೆ.ಮಗಳು ಮಲಗುತ್ತಾಳೆ.ಬೆಳಿಗ್ಗೆ ಮಗಳನ್ನು ಶಾಲೆಗೆ ಬಿಟ್ಟು ಮತ್ತೆ ಮನೆಗೆ ಮರಳುವ ಅಪ್ಪ,ಮನೆಯ ಹಿತ್ತಿಲಿನಲ್ಲಿ ಬಣ್ಣದ ಕಾಗದ,ಬಣ್ಣದ ಪುಗ್ಗೆ,ಬಣ್ಣದ ಹೂ ಹೀಗೆ ಎಲ್ಲವನ್ನೂ ಸಿಕ್ಕಿಸಿ,ತಾನೇ ಸ್ವತಃ ಬಣ್ಣ ಬಳಿದು ಒಂದು ದೊಡ್ಡ ಕಾಮನ ಬಿಲ್ಲಿನ ಆಕೃತಿಯನ್ನು ಕೂಡ ನಿಲ್ಲಿಸಿ,ಅದರ ಪಕ್ಕದಲ್ಲಿಯೇ 'ರೈನ್ಬೋಲ್ಯಾಂಡ್' ಎಂದು ಹೆಸರಿನ ಫಲಕ ಕೂಡ ನೆಟ್ಟು,ಮಗಳಿಗೆ ಸರ್ಪ್ರೈಸ್ ನೀಡಲು ಇನ್ನಿಲ್ಲದಂತೆ ತುದಿಗಾಲಿನಲ್ಲಿ ಕಾದು ನಿಲ್ಲುತ್ತಾನೆ ಅಪ್ಪ.ಆದರೆ ಮಗಳು ಸ್ಕೂಲಿನಿಂದ ಬರುವ ಮೊದಲೇ ಜೋರು ಮಳೆ ಬಂದು ಅಪ್ಪ ಮಾಡಿದ ಎಲ್ಲಾ ಬಣ್ಣಗಳ ಅಂದವೂ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು : ಕೊಡುಗೆ ರಾಮಣ್ಣ ರೈ

Image
ಬಾರೀ ಚಂದದ ಮೂವಿ ಇದು.ನೋಡುಗನನ್ನು ಸಹ ಒಂದಿಷ್ಟು ಹೊತ್ತು ಅವನ ಬಾಲ್ಯದ ನೆನಪುಗಳಲ್ಲಿ ಸಂಚರಿಸುವಂತೆ ಮಾಡುವ ಶಕ್ತಿ ಈ ಮೂವಿಗೆ ಖಂಡಿತವಾಗಿಯೂ ಇದೆ.  ನಮ್ಮ ಮನೆ,ನಮ್ಮ ಜಾಗ,ನಮ್ಮ ಗ್ರೌಂಡು ಇದ್ದಂತೆಯೇ  ಚಿಕ್ಕಂದಿನಲ್ಲಿ ಎಲ್ಲರಿಗೂ ಅತೀ ಹೆಚ್ಚು ಇಷ್ಟವಾಗುತ್ತಿದ್ದ ಮತ್ತೊಂದು ಸ್ಥಳವೆಂದರೆ ಅದು ಬಹುಶಃ "ನಮ್ಮ ಶಾಲೆ"ಯೇ ಆಗಿರುತ್ತದೆ.ನಮ್ಮ ನಮ್ಮ ಶಾಲೆಯೆಂದರೆ ಅದೆನೋ ಸೆಳೆತ,ಅದೆಂತದೋ ಆಪ್ತತೆ.ಅದರಲ್ಲೂ ಪ್ರಾಥಮಿಕ ಶಾಲೆಯ ನೆನಪುಗಳ ಆ ಸ್ವಾದ,ಎಂದಿಗೂ ಮರೆತು ಹೋಗುವಂತಹದ್ದಲ್ಲ.ಅಲ್ಲಿ ಎಂತೆಂತಹ ಗೆಳೆಯರು,ಅದೆಂತಹ ಕನಸುಗಳು,ಪ್ರತಿಯೊಬ್ಬರ ಇಷ್ಟ ಕಷ್ಟಗಳು ಕೂಡ ಬೇರೆ ಬೇರೆಯೇ,ಆದರೂ ಆ ಮುಗ್ಧತೆಯಲ್ಲಿ ಎಲ್ಲರೂ ಅದೆಷ್ಟು ಒಳ್ಳೆಯವರು.ವಿವರಿಸಲಾಗದ ನೆನಪುಗಳು ಬಾಲ್ಯದ ದಿನಗಳು.ಅದೆಲ್ಲವೂ ಈ ಮೂವಿಯಲ್ಲಿದೆ.  ಕಾಸರಗೋಡು ಭಾಗದಲ್ಲಿರುವ ಒಂದು ಸರ್ಕಾರಿ ಕನ್ನಡ ಶಾಲೆ,ಅದನ್ನು ಮುಚ್ಚಬೇಕಾದ ಪರಿಸ್ಥಿತಿ,ಮಕ್ಕಳ ಹಾಗೂ ಊರವರ ಹೋರಾಟ,ಬಹಳಷ್ಟು ಹಾಸ್ಯ,ಚಂದದ ಸಂಭಾಷಣೆ,ಮುದ್ದಾದ ಮಂಗಳೂರು ಕನ್ನಡ,ಕೊನೆಯಲ್ಲಿ ಒಂದೊಳ್ಳೆಯ ಸಂದೇಶ .ಯಾರಿಗೆ ಆಗಲಿ ಈ ಮೂವಿ ಒಂಚೂರು ಬೋರ್ ಹೊಡೆಸುವುದಿಲ್ಲ.ಒಂಥರಾ ಫೀಲ್ ಗುಡ್ ಮೂವಿ ಇದು.  ರಿಷಬ್ ಶೆಟ್ಟಿ ಇದನ್ನು ನಿರ್ದೇಶಿಸಿದ್ದು ಅನಂತ್ ನಾಗ್,ಪ್ರಮೋದ್ ಶೆಟ್ಟಿ,ಪ್ರಕಾಶ್ ತೂಮಿನಾಡ್ ಹಾಗೂ ಹಲವಾರು ಪುಟ್ಟ ಮಕ್ಕಳು ಇದರಲ್ಲಿ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ.ಕೊನೆಯಲ್ಲಿ ಬರುವ ಅನಂತ್ ನಾಗ್ ಅಭಿನಯವಂತು ಬಹಳನೇ

Money Heist - Season 5 volume 2

Image
 #Money_Heist S05_V2  | Netflix Bank of Spain ನ ನೆಲಮಾಳಿಗೆಯಲ್ಲಿರುವ ಆ ಬಂಗಾರದ ಗಟ್ಟಿಗಳ ಒಟ್ಟು ತೂಕ ಸರಿ ಸುಮಾರು 90 ಟನ್ನುಗಳು. ಒಂದು ಗಟ್ಟಿಯನ್ನು ಬಿಡದೇ ಕೊಳ್ಳೆ ಹೊಡೆಯಬೇಕು,ಜೊತೆಗೆ ಸಿಕ್ಕಿಯೂ ಬೀಳಬಾರದು ಎನ್ನುವುದು ಇಲ್ಲಿ ಬಹಳಷ್ಟು ರಿಸ್ಕಿಯ ಜೊತೆಗೆ ಸಾವಿಗೊಂದು ನೇರ ಆಹ್ವಾನವನ್ನು ಕಳುಹಿಸಿದಂತೆಯೇ ಸರಿ.  ಆ ಬ್ಯಾಂಕಿಗೆ ಹೋಗುವುದೆನೋ ಸುಲಭ,ಆದರೆ ಹಿಂದಿರುಗುವುದು ಅದರಲ್ಲೂ ರಾಬರಿಯಂತಹ ಉಸಾಬರಿಗೆ ಕೈ ಹಾಕಿ ಜೀವಂತವಾಗಿ ಹಿಂದಿರುಗುವುದು ತುಂಬಾ ಅಂದರೆ ತುಂಬಾನೇ ಕಷ್ಟ. ಒಳಗೆ ಹೋದರೂ ದರೋಡೆ ಮಾಡಿದರೂ ಬಂಗಾರದ ಗಟ್ಟಿಗಳನ್ನು ಅದರಲ್ಲೂ ಅಷ್ಟೊಂದು ಬಂಗಾರವನ್ನು ಹೊರ ತರಲು ಸಾಧ್ಯವೇ ಇಲ್ಲ.ಏಕೆಂದರೆ ಮುಖ್ಯ ದ್ವಾರ ಬಿಟ್ಟರೆ ಹೊರ ಬರಲು ಅಲ್ಲಿ ಅನ್ಯ ಮಾರ್ಗಗಳಿಲ್ಲ.  ಆದರೆ ಇಲ್ಲಿಯ ಕಳ್ಳರು ಬುದ್ಧಿವಂತರು ಮಾತ್ರ ಅಲ್ಲ,ಅವರು ಒಂದು ರೀತಿಯಲ್ಲಿ ಕಲಾವಿದರೇ ಹೌದು;ಏಕೆಂದರೆ ಡರೋಡೆ ಎನ್ನುವುದು ಅವರಿಗೆ ಬಹಳಷ್ಟು ಆರ್ಟ್. ಅಪ್ಲಿಕೇಷನ್ಸ್ ಆಫ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಇರುವುದೇ ತಮ್ಮದೊಂದು ಆರ್ಟ್ ಗೆ ಚಂದದ ಬಣ್ಣ ಬಳಿಯಲು ಎಂದು ತಿಳಿದವರು ಈ ಕಿಲಾಡಿ ಕಳ್ಳರು ಅವರುಗಳು.  ದೋಚಬೇಕು,ಯಾವುದನ್ನು ಯಾರಿಂದಲೂ ಎಂದೂ ದೋಚಲು ಸಾಧ್ಯವೇ ಇಲ್ಲವೋ,ದೋಚಿದರೆ ಅದನ್ನೇ ದೋಚಬೇಕು ಅದರಲ್ಲೂ ಯಶಸ್ವಿಯಾಗಿ ದೋಚಬೇಕು ಎನ್ನುವುದೇ ಅವರ ಜೀವನದ ಮೂಲ ಮಂತ್ರ,ಕದಿಯುವ ಪಾಠ ಬಹಳ ಶ್ರದ್ಧೆಯಿಂದ ಹೇಳಿ ಕೊಡುವ 'ಪ್ರೋಫೆಸರ್' ಇಲ್ಲಿ ಅ

Churuli

Image
 #Churuli | SonyLIV ಸ್ವಲ್ಪವಲ್ಲ,ಇದೊಂದು ಬಹಳಷ್ಟು ವಿಚಿತ್ರವಾದ ಮೂವಿಯೇ  ಹೌದು! ನಿಮಗೆ ಬಹಳ ಪರಿಚಯದ ಒಬ್ಬ ಗೆಳೆಯ ಇದ್ದಾನೆ ಎಂದು ತಿಳಿದುಕೊಳ್ಳಿ.ಅವನ ಹೆಸರು ರಮೇಶ.ಒಂದು ದಿನ ಅವನು ನಿಮ್ಮ ಜೊತೆ ಇರುವಾಗ ಯಾರೋ ಒಬ್ಬರು ಹಿಂದಿನಿಂದ ಅವನನ್ನು 'ಸುರೇಶ..' ಎಂದು ಕೂಗಿ  ಕರೆದಾಗ,ಅವನು ಸಹಜವಾಗಿಯೇ ಅವರತ್ತ ತಿರುಗಿ ಒಂಚೂರು ಗೊಂದಲವಿಲ್ಲದೇ ಅವರ ಆ ಕರೆಗೆ ಪ್ರತಿಸ್ಪಂದಿಸಿ ಮಾತಾಡಿ ಬಿಟ್ಟರೆ ಆವಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?ರಮೇಶ ಒಬ್ಬನೇ ಅಲ್ಲ ನಿಮ್ಮ ಸುತ್ತಲಿನ ಬಹಳಷ್ಟು ಜನ ಈ ರೀತಿಯಾಗಿ ಒಮ್ಮೆಲೇ ವರ್ತಿಸಲು ಶುರು ಮಾಡಿದರೆ,ಸ್ವತಃ ನಿಮ್ಮನೇ ಜನರು ನಿಮಗೇ ಗೊತ್ತಿಲ್ಲದ ಬೇರೆಯದ್ದೇ ಹೆಸರಿನಿಂದ ಕರೆಯಲು ಶುರು ಮಾಡಿದರೆ ಆವಾಗ ಆ ಒಂದು ಕಥೆ ಹೇಗಿರಬಹುದು?  ಇದು ಅಂತಹದ್ದೇ ಕಥೆ!!  ಅದರೆ ಈ ವಿಚಿತ್ರ ಕಥೆಯ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಎರಡು ಬಹಳ ಸಣ್ಣ ಕಥೆಯನ್ನು ಕೂಡ ಹೇಳಲಾಗುತ್ತದೆ. ಆ ಎರಡು ಸಣ್ಣ ಕಥೆಗಳ ನಡುವೆಯೇ ಈ ಬಹು ಮುಖ್ಯವಾದ ವಿಚಿತ್ರ ಕಥೆ ಇರುವುದು.ಎಂದಿನಂತೆ ಆ ಮುಖ್ಯ ಕಥೆಯನ್ನು ಇಲ್ಲಿ ನಾನು ಹೇಳುವುದಿಲ್ಲ.ವಿಶೇಷ ಏನೆಂದರೆ  'Spoiler Alert'  ಎಂದು ಮೊದಲೇ ಹೇಳಿ ಆ ಸಂಪೂರ್ಣ ಕಥೆಯನ್ನು ಹಲಸಿನ ಹಣ್ಣಿನ ಸಿಪ್ಪೆ ಸುಲಿದು ಬಹಳ ಚೆನ್ನಾಗಿ ಬಿಡಿಸಿ ಬಿಡಿಸಿ ನಿಮ್ಮ ಕೈಯಲ್ಲಿಟ್ಟಂತೆ ಕಥೆ ಹೇಳಿದರೂ ಕೂಡ... ಇದು ಅಷ್ಟು ಸುಲಭಕ್ಕೆ ಮಂಡೆಗೆ ಹೋಗುವ ಕಥೆಯಲ್ಲ ಅನ್ನುವುದೇ ಇಲ್ಲಿ ಬೇರೆಯದ್ದ