Posts

Showing posts from May, 2021

ಮೊಬೈಲ್ ಗೇಮು ಮತ್ತು ಗ್ರೌಂಡಿನ ಆಟ..

Image
  ಪ್ರತೀ ಗ್ರೌಂಡಿನಲ್ಲಿ ಒಬ್ಬ ಕೊಡುಗೈ ದಾನಿ ಇದ್ದೇ ಇರುತ್ತಾನೆ  ಮತ್ತು  ಪ್ರತೀ ಸಲ ಬಾಲ್ ಒಡೆದು ಹೋದಾಗ ಇಲ್ಲವೇ ಬಾಲ್ ಬಿಸಾಡಿ ಹೋದಾಗ ದೇವರಂತೆ ಅವನು ಎಲ್ಲರಿಗೂ ಅತೀ ಹೆಚ್ಚು ನೆನಪಾಗಿ ಬಿಡುತ್ತಾನೆ. ಈಗ ಆಟವಾಡಲು ಎಲ್ಲರಿಗೂ ಬಾಲ್,ಬ್ಯಾಟ್ ಅಂತಹ ದೊಡ್ಡ ಸಮಸ್ಯೆಯೇ ಅಲ್ಲ.ಆದರೆ ಚಿಕ್ಕಂದಿನಲ್ಲಿ ಇಂತವರು ಇರದಿದ್ದರೆ ಗ್ರೌಂಡಿನಲ್ಲಿ ಆಟವೇ ಮುಂದುವರಿಯುತ್ತಿರಲಿಲ್ಲ.ಪ್ರತೀ ಹೊಸ ಬಾಲ್ ಕೂಡ ಆವಾಗ ನಮಗೆ ಗಗನ ಕುಸುಮವೇ ಆಗಿತ್ತು. ಆಗ ಆಡಲು ಬೇಕಾದಷ್ಟು ಜನ ಇದ್ದರು,ಆದರೆ ಬಾಲ್ ತೆಗೆಸಿಕೊಡುವವರು ಕಮ್ಮಿ ಇದ್ದರು.ಈಗ ಬಾಲ್ ಬ್ಯಾಟ್ ಏನೋ ರಾಶಿ ರಾಶಿಯೇ ಇದೆ,ಆದರೆ ಆಟವಾಡುವುದಕ್ಕಾಗಿ ಗ್ರೌಂಡಿನಲ್ಲಿ ಒಂದತ್ತು ಜನ ಒಟ್ಟು ಮಾಡುವುದೇ ಭಯಂಕರ ಕಷ್ಟವಾಗಿ ಬಿಟ್ಟಿದೆ.ಗ್ರೌಂಡಿಗೆ ಬನ್ನಿ ಎಂದು ಕೈ ಕಾಲು ಹಿಡಿಯಬೇಕಾದ ಪರಿಸ್ಥಿತಿಯೇ ನಿರ್ಮಾಣವಾಗಿ ಬಿಟ್ಟಿದೆ.  ಇಂದು ಮೊಬೈಲ್ ಇನ್ನಿಲ್ಲದಂತೆ ಎಲ್ಲಾ ಕಡೆ ವಿಜೃಂಭಿಸಿದೆ,ಅದು ಮಕ್ಕಳ ಮೈದಾನದ ಆಟವನ್ನು ಹಾಗೇ ನಿಧಾನಕ್ಕೆ ಕಸಿದುಕೊಳ್ಳುತ್ತಿದೆ,ಗ್ರೌಂಡಿಗೆ ಹೋಗಿ ಆಟವಾಡುವ ಉಮೇದು   ಈಗೀನ ಕಾಲದ ಪುಟ್ಟ ಮಕ್ಕಳಲ್ಲಿ ಕಂಡು ಬರುತ್ತಲೇ ಇಲ್ಲ.  ಸಂಜೆಯ ವೇಳೆ ಎಲ್ಲಾದರೂ ಖಾಲಿ ಖಾಲಿಯಾಗಿ ಬಣಗುಡುವ ಮೈದಾನ ಕಣ್ಣಿಗೆ ಬಿದ್ದರೆ ಅದಕ್ಕಿಂತ ಬೇಜಾರಿನ ಸಂಗತಿ ನಿಜವಾಗಿಯೂ ಬೇರಾವುದೂ ಇಲ್ಲ.ಚಿಕ್ಕಂದಿನಲ್ಲಿ ಆದರೆ ನಾವೆಲ್ಲರೂ ಮನೆಯ ಸುತ್ತ ಮುತ್ತ,ಗುಡ್ಡ,ಗದ್ದೆ ಎಲ್ಲೇ ಸ್ವಲ್ಪ ಜಾಗ ಕಂಡರೂ ಇಲ್ಲಿ 30 ಯಾರ್ಡ್ ಕ

Who am I

Image
#Who_Am_I | Netflix  FRI3NDS ಎಂಬ ನಾಲ್ಕು ಜನರ ನಟೋರಿಯಸ್ ಹ್ಯಾಕಿಂಗ್ ಗ್ರೂಪ್ ಬಗ್ಗೆ ಹಾಗೂ ಜಗತ್ತಿನ ಯಾವುದೇ ಸಿಸ್ಟಂ ಅನ್ನು ಅತೀ ಸುಲಭವಾಗಿ ಹ್ಯಾಕ್ ಮಾಡಬಲ್ಲ Darknet ನ ವೆರೀ ಫೇಮಸ್ ಹ್ಯಾಕರ್ MRX ನ ಬಗ್ಗೆಯೂ ಎಲ್ಲವನ್ನೂ ಹೇಳುತ್ತೇನೆ, ಅವರೆಲ್ಲರನ್ನು ಹಿಡಿಯಲು ನಿಮಗೆ ಸಹಾಯ ಮಾಡುತ್ತೇನೆ ಎಂದು Europol ನ Cyber Devision ನ ಮುಖ್ಯಸ್ಥೆಯ ಎದುರು ಬಂಧಿಯಾಗಿ ಹೇಳುವ Benjamin Engel ಎಂಬುವವ  ಸ್ವತಃ ಒಬ್ಬ ಬುದ್ಧಿವಂತ ಹ್ಯಾಕರ್ ಮಾತ್ರವಲ್ಲ CLAY (Clowns Laughing At You) ಎಂಬ ನಾಲ್ಕು ಜನರ ಹ್ಯಾಕಿಂಗ್ ತಂಡದ ಸಕ್ರೀಯ ಸದಸ್ಯ ಕೂಡ ಹೌದು.. !! "NO SYSTEM IS SAFE" ಎಂದು ಹೇಳಿಕೊಂಡು ದೊಡ್ಡ ದೊಡ್ದ ಸೇಫೆಸ್ಟ್ ಸಿಸ್ಟಂಗಳನ್ನು ಕೂಡ ಮಾಸ್ಕ್ ಹಿಂದೆ ಮುಖ ಮರೆಸಿಕೊಂಡು ಹ್ಯಾಕ್ ಮಾಡುತ್ತಲೇ ಹೋಗುವ ಈ ಟೆಕ್ನೋ ಥ್ರಿಲ್ಲರ್ ಕಥೆಯ ಟ್ವಿಸ್ಟ್ ಗಳು ಕೂಡ ಅಷ್ಟೇ ಚೆನ್ನಾಗಿದೆ.Baran bo Odar ನಿರ್ದೇಶನ ಈ ಜರ್ಮನ್ ಮೂವಿಯಲ್ಲಿ Tom Schilling, Elyas M'Barek ಮೊದಲಾದವರ ಅಭಿನಯವಿದೆ.  #Who_Am_I | Netflix  German Movie  Techno Thriller  Year - 2014 #Movies  Ab Pacchu

ಬೊಲ್ಲದ ತಾರಾಯಿ..

Image
ಕೆಲವೆರೆಗ್ ಬರ್ಸ ಪಂಡ ಬಾರೀ ಇಷ್ಟ,ಕೆಲವೆರೆಗ್ ದಾದನ ಬರ್ಸ ಪಂಡ ಅವ್ವ್ ಒಂತೆ ಪನೀತ್ ಕಷ್ಟ.ಪಿದಯಿಡ್ ರಡ್ಡ್ ಪನಿ ಕುಡ್ತಿ ಕೂಡ್ಲೆ ರಪ್ಪ ಒಲಯಿ ಪೋದು ಕುಲ್ಲುದು ಬುಡ್ಪೆರ್.  ಆಂಡ ತುಳುನಾಡ್ ದ ಈ ಬರ್ಸದ ಪೊರ್ಲು ಬೊಕ್ಕ ಅಯ್ತ ಅವ್ವೊಂಜಿ ಐಸಿರ ಬೇತೆನೇ ಬುಡ್ಲೆ .ಬೂಮಿಅಪ್ಪೆ ಬರ್ಸದ ಪಸೆಗ್ ಪಚ್ಚೆ ಆವೊಂದು ಪೋನಗ.. ಅವ್ವ್ ಏತೋ ದುಂಬುದ ನೆಂಪುಲು,ಅವ್ವ್ ಏತೋ ಕಥೆಕುಲು ಅಂಚನೇ ಒರಾನೇ ನೆನಪಾಪುಂಡು ಮಾತೆರೆಗ್ಲ.  ಅಂದ್ ತುಳುವೆರೆಗ್ ಬರ್ಸ ಏಪಲ ಇಷ್ಟನೇ.  ಜೋಕ್ಲೆಗ್ ಚಂಡಿ ಆವೊಂದು ಗೊಬ್ಬರೆ ಪಿರಿ ಪಿರಿ ಬರ್ಸನೇ ಬೋಡು.ಬೆನ್ನಿದಕ್ಲೆಗ್ ಏತ್ ಬರ್ಸ ಬೋಡಾ ಆತೇ ಬರ್ಸ ಇತ್ತ್ಂಡ ಸಾಗುವಳಿಗ್ ಬಾರೀ ಲಾಯ್ಕ್.ಕಂಡದ ಕೈಯ್ ಕೊಯ್ನಗ ಪಾರೊಂದು ರಾವೊಂದು ಬತ್ತ್ ದ್,ಬುಲೆತ ಒಟ್ಟಿಗೆ ಬಂಗಾರ್ ಬದ್ಕ್ ನ್ಲ ಹಾಲ್ ಮಲ್ಪಿನ ಬರ್ಸ ನಿಜವಾದ್ಲ ಆವ್ವ್ ಮಾತ್ರ ತಡೆವೊನರೆ ಆವಂದಿನನೇ ಬಂಙನೇ. ಆಂಡಲ ಕೆಲವೆರೆಗ್ ಬೊಲ್ಲ ಬರ್ಸ ಪಂಡನೆ ಬಾರೀ ಇಷ್ಟ.ಇನಿ ನಮ ಅಕ್ಲೆನ ಬಗ್ಗೆ ಬೊಕ್ಕ ಬೊಲ್ಲದ ಬಗ್ಗೆನೇ ಒಂತೆ ಞಕ್ಕ್ ಞೈ  ಮಲ್ಪುಗ.  ಬೊಲ್ಲ ಬರ್ಸ ದಾಯೆಗ್ ಇಷ್ಟ ಪಂಡ ತುದೆಟ್ ಬೊಲ್ಲ ಏರ್ದ್ ಅಯ್ಟ್ ಬರ್ಪಿನ ತಾರಾಯಿ ಪತ್ತರೆಗೋಸ್ಕರ ಬೊಲ್ಲ ಬರ್ಸ ಕೆಲವೆರೆಗ್ ಇಷ್ಟ.  ಬೊಲ್ಲಡ್ ತಾರಾಯಿ ಪತ್ತುನ ಉಮೇದ್ ಇತ್ತಿನಕ್ಲೆಗ್ ಪನೀತ್ ಪಿರಿ ಪಿರಿ ಬರ್ಸ ಓಲು ಯಾವುಂಡು. ಜೋರು ಬರ್ಸ ಬತ್ತ್ಂಡನೇ ಇಲ್ಲಗ್ ನಾಲ್ ತಾರಾಯಿ ಆಂಡಲ ಎಂಚಲ ಒಟ್ಟು ಆಪುಂಡು.  ಅಂಚ ಪಂದ್ ಇಲ್ಲಡ್ ತಾರಾಯಿ ಇಜ್ಜ

ಗ್ರೌಂಡಿನ ಕೊಡಪಾನ

Image
ಗ್ರೌಂಡಿನ ಬದಿಯಲ್ಲಿರುವ ಮನೆಯಿಂದ ಆಟವಾಡುವವರಿಗೆ ಹೇಳಿದ ಕೂಡಲೇ ಕುಡಿಯಲು ಕೊಡಪಾನದಲ್ಲಿ ನೀರು ತರುವ ಬಾಲಕ,ಯಾವತ್ತೂ ಆಟಗಾರರ ವಿಶೇಷ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾನೆ ಮತ್ತು ಅವನು ಎಲ್ಲರ ಪ್ರೀತಿಯನ್ನು ಸಂಪಾದಿಸುತ್ತಾನೆ.  ಆದರೆ ಆಟ ಮುಗಿದು ಕೊನೆಯಲ್ಲಿ ಅದೇ ಕೊಡಪಾನವನ್ನು ಮತ್ತೆ ಆ ಮನೆಗೆ ಹಿಂದಿರುಗಿಸಲು ನಕ್ರ ಮಾಡುವ ಯಾವುದೇ ದುಷ್ಟ ಬಾಲಕ,ಹಿರಿಯ ಆಟಗಾರರ ತೀವ್ರವಾದ ಕೆಂಗಣ್ಣಿಗೆ ಗುರಿಯಾಗುವುದು ಮಾತ್ರವಲ್ಲ ಅವನಿಗೆ ಎಲ್ಲರೂ ಸೇರಿ ಚೀಮಾರಿ ಹಾಕುತ್ತಾರೆ ಮತ್ತು ಅವನಿಗೆ ಶಿಸ್ತಿನ ಪಾಠವನ್ನು ಸಹ ಮಾಡುತ್ತಾರೆ. ಅದರಲ್ಲೂ ಕೆಲವರು..ಒಂದಾನೊಂದು ಕಾಲದಲ್ಲಿ ನಾವು ಚಿಕ್ಕವರಿರುವಾಗ ನಮಗೆ ಕೇವಲ ಬಾಲ್ ಹೆಕ್ಕುವುದು ಮತ್ತು ಕೊಡಪಾನದಲ್ಲಿ ನೀರು ತರುವ ಕೆಲಸ ಅಷ್ಟೇ ಸಿಗುತ್ತಿತ್ತು,ನಾವು ಬ್ಯಾಟ್ ಹಿಡಿದಿದ್ದೇ ಹಲವು ವರ್ಷಗಳ ನಂತರ,ದಶಕದ ನಂತರ.. ಎಂಬ ಉದಾಹರಣೆಗಳ ಮೂಲಕ ಆ ಬಾಲಕನ ಮನ ಪರಿವರ್ತನೆ ಮಾಡಲು ಸಿಕ್ಕಾಪಟ್ಟೆ ಪ್ರಯತ್ನ ಮಾಡುತ್ತಾರೆ. ಆದರೆ ಆ ಬಾಲಕ ಹುಟ್ಟಿನಿಂದಲೇ ಸ್ವಲ್ಪ ಸೀಂತ್ರಿ(ಎಲ್ಲದಕ್ಕೂ ಅಸಹಕಾರ ಮನೋಭಾವ)ಸ್ವಭಾವ ಹೊಂದಿದ್ದರೆ..." ಪೋಲೆಯೇ ಪೋಲೆಯೇ.. ಎಂಕ್ ಆವಂದ್,ಬೊಡಿತ್ತ್ಂಡ ನಿಕುಲೆ ಪಿರ ಪತೊಂದು ದೀಲೆಯೇ... ಏಪಲ ಯಾನೇ ಕೊಡಪಾನ ದಿವೋಡಾ.... ಪೋಪುಂಡ ನಿಕ್ಲೆಗ್.. ಅಜ್ಜಿ ಬೆಡಿ ನಿಕ್ಲೆನ(ಮಾನ್ಯರೇ.. ಕೇವಲ ಇಂತಹ ಕೆಲಸ ಮಾಡಲೆಂದು ನಾನು ಗ್ರೌಂಡಿಗೆ ಬಂದಿಲ್ಲ,ಆಟ ಕಲಿತು ಸೆಹ್ವಾಗ್,ಸಚಿನ್ ಆಗಬೇಕೆಂಬ ಇಚ್

ನಮ್ಮ ಕಾಲದಲ್ಲಿ ಹೀಗೆಲ್ಲಾ ಇರ್ಲಿಲ್ಲ..

Image
  ಹಿಂದೆ ಚಿಕ್ಕವನಿದ್ದಾಗ ದೊಡ್ಡವರೆಲ್ಲಾ ಮಾತು ಮಾತಿಗೂ ಇದೊಂದು ಮಾತು ತಪ್ಪದೇ  ಹೇಳ್ತಾ ಇದ್ರು... "ಇದೆಲ್ಲ ಎಂತದ ಲಾಟ್ ಪೋಟ್(ನಿಕೃಷ್ಟ),ಒಂದು ಟೈಮಿನಲ್ಲಿ ನಾವೆಲ್ಲ ಉಂಟಲ್ಲಾ..ಅದು ಮಾಡಿದ್ದೆವು, ಇದು ಮಾಡಿದ್ದೆವು...ಆ ಕಾಲನೇ ಬೇರೆ..ಈಗ ಎಂತದು ಮಣ್ಣಂಗಟ್ಟಿ " ಎಂದು ಹೇಳಿಯೇ  ಮುಗಿಸುತ್ತಿದ್ದರು.ಆಗ ನನಗೆಲ್ಲ,ಆಹಾ.. ಎನಪ್ಪಾಆಆಆ ಇವರು,ಎಂತಹ ಚಿನ್ನದ ಯುಗದಲ್ಲಿ ಬದುಕಿದ್ದರು ಅಂತಲೇ ಅನ್ನಿಸುತ್ತಿತ್ತು.  ನಂತರ ದೊಡ್ಡವನಾಗಿ ಮುಂದೆ ಕಾಲೇಜಿಗೆ ಬಂದಾಗ ಒಬ್ಬ ಫ್ರೆಂಡ್ ಸಿಕ್ಕಿದ,ಅವನೂ ಕೂಡ ಮಾತು ಮಾತಿಗೆ " ಹಿಂದೆ ನಾವೆಲ್ಲ ಉಂಟಲ್ಲಾ... ನಮ್ಮ ಕಾಲದಲ್ಲಿ ಹೀಗೆಲ್ಲಾ ಇರ್ಲೇ ಇಲ್ಲ.. " ಅಂತಾನೇ ಹೇಳ್ತಾ ಇದ್ದ.ಹೆಚ್ಚು ಕಡಿಮೆ ನನ್ನ ವಯಸ್ಸಿನ ಅವನು ಯಾವ ತೆನಾಲಿರಾಮನ ಕಾಲದಲ್ಲಿ ಜೀವಿಸಿದ್ದ ಎಂಬ ಪ್ರಶ್ನೆಯೊಂದು ಯಕ್ಷ ಪ್ರಶ್ನೆಯಾಗಿಯೇ ನನ್ನಲ್ಲಿ ಉಳಿದಿತ್ತು. ಆದರೆ ಮಾತು ಮಾತಿಗೂ ಅದೊಂದು ಮಾತ್ರ ತಪ್ಪದೇ ಹೇಳ್ತಾ ಇದ್ದ... "ಹಿಂದೆ ನಾವೆಲ್ಲ ಉಂಟಲ್ಲಾ...".  ಮೊನ್ನೆ ನಮ್ಮ ಗುಡ್ಡದ ಗ್ರೌಂಡಿಗೆ ಹೋಗಿದ್ದೆ.ಅಲ್ಲಿ ಐದನೇ ಕ್ಲಾಸಿನ  ಬಾಲಕ ಒಬ್ಬ ಕ್ರಿಕೆಟ್ ಆಡ್ಲಿಕ್ಕೆ ಬರ್ತಾನೆ.ಅವನು ಸ ಮಾತು ಮಾತಿಗೆ.. "ಹಿಂದೆ ನಾವೆಲ್ಲ ಕ್ರಿಕೆಟ್ ಆಟ ಆಡುವಾಗ ಉಂಟಲ್ಲಾ...." ಎಂದು ಡಾನ್ ಬ್ರಾಡ್ಮನ್ ಜೊತೆಗೆ ಕ್ರಿಕೆಟ್ ಆಡಿದ್ದೆ ಎಂಬ ರೇಂಜಿನ ಕಥೆಗಳನ್ನೇ ಹೇಳ್ತಾ ಇದ್ದ. ಇದೆಲ್ಲಾ ನೋಡಿದ ಮೇಲೆ ನನ

ಗಡಂಗ್ ಎಂಬ ಚಿಂತಕರ ಚಾವಡಿ

Image
  ಬೆಳಿಗ್ಗೆ ಬೇಗ ಅಂಗಡಿಗೆ ಅಂತ ಹೋದದ್ದು.ಎಲ್ಲಾ ಸಾಮಾನುಗಳನ್ನು ತಗೊಂಡ ನಂತರ ಈ ಉಪ್ಪಿನಕಾಯಿ ಕೂಡ ಒಂದು ನೆನಪಾಗಿ ಬಿಟ್ಟಿತು.  ಹೋದ ವರ್ಷದ್ದು ಅದಾಗಲೇ ಖಾಲಿ. ಈ ಬಾರಿ ಮನೆಯಲ್ಲಿ ಹೊಸ  ಉಪ್ಪಿನಕಾಯಿ ಹಾಕಿಲ್ಲ.ಹಾಕಿಟ್ಟ ಮಿಡಿ ಉಂಟು,ಆದ್ದರಿಂದ ಅಂತಹ  ಚಿಂತೆ ಏನೂ ಇಲ್ಲ,ಮುಂದೆ ಅದಕ್ಕೊಂದು ಸಾಸಿವೆ ಮೆಣಸಿನ ಉಪಚಾರ ಎಂದಿನಂತೆ ಮಾಡಿದರೆ ಆಯಿತು.ಉಪ್ಪಿನಕಾಯಿಯೊಂದು ಅನ್ನದ ತಟ್ಟೆಯ ಯಾವುದಾದರೊಂದು ಮಗ್ಗುಲಲ್ಲಿ ಇದ್ದರೆ ಆ ಊಟಕ್ಕೊಂದು ವಿಶೇಷ ಕಳೆ.ಗಟ್ಟಿ ಮೊಸರೆಂಬ ಸಹಚಾರಿಯೂ ಜೊತೆಯಾಗಿ ಬಿಟ್ಟರೆ ಬೇರೆ ಪಲ್ಯ,ಉಪ್ಪುಕರಿ,ಕೊದ್ದೆಲ್ ಗಳು ಅದೆರೆಡರ ಮುಂದೆ ಎಂದಿಗೂ ತೀರಾ ಸಪ್ಪೆಯೇ ಬಿಡಿ.  ಅಂಗಡಿ ಪಕ್ಕವೇ ಮದ್ಯಪ್ರಿಯರ ಗಡಂಗ್(ಸಾರಾಯಿ ಅಂಗಡಿ) ಕೂಡ ಒಂದು ಉಂಟು.ಅಲ್ಲಿ ಒಳ್ಳೆಯ ಉಪ್ಪಿನಕಾಯಿ ಪ್ಯಾಕೇಟು ಗಳು ಸಿಗುತ್ತದೆ. 10 ರೂಪಾಯಿ,15 ರೂಪಾಯಿಯ ಒಳಗೆ. ಖಾರಕ್ಕಿಂತಲೂ ಹೆಚ್ಚಿನ ಹುಳಿ ಇರುವ ಉಪ್ಪಿನಕಾಯಿಗಳು ಅವು.ಮದ್ಯಪ್ರೀಯರು ಹೆಚ್ಚಾಗಿ ಹುಳಿ ಪ್ರಿಯರು.ಉಪ್ಪಿನಕಾಯಿಯ ನೆನಪಗಾಗಿ ಹಾಗೇ ಆ ಗಡಂಗ್ ಕಡೆ ಮುಖ ಮಾಡಿದೆ.  ಅದಾಗಲೇ ಹಳ್ಳಿಯ ಖ್ಯಾತ ಮದ್ಯಪ್ರೀಯರೆಲ್ಲರೂ ಅಲ್ಲಿಗೆ ಬಹಳ ಬೇಗ ಶ್ರದ್ಧೆಯಿಂದ ತುಂಬಾ ಉಮೇದಿನಿಂದ ಬಂದು ನೆರೆದಿದ್ದರು.ಆ ಉತ್ಸಾಹ ಆ ಜೋಶ್ ಅವರ ಮುಖದಲ್ಲಿ ಹಾಗೇ ಎದ್ದು ಕಾಣುತ್ತಿತ್ತು."ಉಲ್ಲಾಸದ ಹೂ ಮಳೆ ಜಿನುಗುತ್ತಿದೆ ನನ್ನಲ್ಲಿ ..ನಾನನಾನಾನಾ ನಾನನಾನಾನ.." ಹಾಡು ಅವರಾರೂ ಗುನುಗದೇ ಇದ್ದರೂ,ಆ ಸಿಚುವೇಷನ

Chernobyl

Image
#Chernobyl | Hotstar ಆ ಸಭೆಯಲ್ಲಿ Mikhail Gorbachev ಕೂಡ ಇದ್ದ. ಅಂದು ಪಾರ್ಟಿಯ ಜನರಲ್ ಸೆಕ್ರೆಟರಿ ಆಗಿದ್ದ ಅವನ ಅಧ್ಯಕ್ಷತೆಯಲ್ಲಿಯೇ ಆ ದಿನದ ಆ ಸಭೆ ಕೂಡ ನಡೆದಿತ್ತು. ಯಾವುದೋ ವಿಷಯದ ಚರ್ಚೆ ಮುಗಿದ ನಂತರ ಕುಶಲೋಪರಿಯ ಮಾತುಗಳೊಂದಿಗೆ ನಿಧಾನಕ್ಕೆ ಉಪ್ಪಿಟ್ಟು ಶೀರಾ ತಿಂದು,ಬಿಸಿ ಚಹಾ ಹೀರಿ ಕೊನೆಯಲ್ಲಿ ನಗು ನಗುತ್ತಾ ಬಂದಿದ್ದವರ ಕೈ ಕುಲುಕಿ ಮೇಲೆಳುವ ನಾರ್ಮಲ್ ಟೀ- ಪಾರ್ಟಿಯಂತಹ ಮೀಟಿಂಗ್.. ಖಂಡಿತವಾಗಿಯೂ ಅದಾಗಿರಲಿಲ್ಲ! Pripyat ನಗರದ Chernobyl Nuclear Power Plant ನ ನಾಲ್ಕನೇ Reactor ಒಂದು ತನ್ನ ಹೃದಯ ಎಂದೆನಿಸುವ Core ಅನ್ನೇ ಹರಿದುಕೊಂಡು,ಊರ್ಧ್ವಮುಖವಾಗಿ ನೆಲದಿಂದ ಆಕಾಶಕ್ಕೆ ಇಂಟೆನ್ಸಿವ್ ಲೇಸರ್ ಬೀಮ್ ಒಂದನ್ನು ಹರಿಬಿಟ್ಟಂತೆ  ಪ್ರಖರ ವಿಕಿರಣವನ್ನು ಹೊರ ಸೂಸುತ್ತಾ ನಿಂತುಕೊಂಡು ಅದಾಗಲೇ ಬಹಳ ಹೊತ್ತೇ ಆಗಿತ್ತು!!  ಆದರೆ ಆ ಸಭೆಯಲ್ಲಿ ಇದ್ದಂತಹ ನಡೆದ ಘಟನೆಗೆ ಸ್ಪಷ್ಟನೆ ಕೊಡಬೇಕಾಗಿದ್ದ ಜವಾಬ್ದಾರಿಯುತ ಅಧಿಕಾರಿ ವರ್ಗಕ್ಕೆ  ಸಂಭವಿಸಿದ್ದು ಎಂತಹ ಘನಘೋರ ದುರಂತ ಎಂದು ಗೊತ್ತಿದ್ದರೂ ಸಹ... ಮಂಗಗಳನ್ನು ಒಡಿಸಲು ಗರ್ನಲ್ ಒಂದನ್ನು ಸಿಡಿಸಲಾಗಿದೆ,ಇಲ್ಲವೇ ಸಂಭ್ರಮದ ಜಾತ್ರೆಯಲ್ಲೊಂದು ದೊಡ್ಡ ಸದ್ದಿನ ಕದೋನಿಯಂತಹ ಸಿಡಿಮದ್ದು ಸಿಡಿದಿದೆ ಮತ್ತು ಅದರ ತೀವ್ರತೆಗೆ Plant ನ ಒಂದಷ್ಟು ಸಿಮೆಂಟ್ ಚೆಕ್ಕೆಗಳು ಗಾಳಿಯಲ್ಲಿ ಹಾರಿ ನೆಲದಲ್ಲಿ ಅಲ್ಲಲ್ಲಿ ಬಿದ್ದಿದೆ ಅಷ್ಟೇ.. ಎಂಬ ರೇಂಜಿಗೆ ಬಹಳ ಸರಳವಾಗಿ ಆದರೆ ಅತ್ಯಂತ

ಮಣ್ಣಿನ ಘಮದ ಮಶ್ರೂಮು ಈ ಕಲಲಾಂಬು..

Image
ನಿಧಾನಕ್ಕೆ ಹಲಸಿನ ಮರ ಹತ್ತಿ,ಮರದ ಕೊಂಬೆಯಲ್ಲೇ ಕುಳಿತುಕೊಂಡು ಅದರದ್ದೊಂದು ಗೆಲ್ಲಿನಲ್ಲಿ ಹಣ್ಣಾಗಿ ಸುತ್ತಲೂ ಘಮ ಘಮಿಸುತ್ತಾ ನೇತಾಡುತ್ತಿರುವ ತುಳುವೆ ಹಲಸಿನ ಉದರಕ್ಕೆ ಕೈ ಹಾಕಿ ಅದರ ಸೋಳೆಗಳನ್ನು ಹಾಗೇ ಕೈಗೆತ್ತಿಕೊಳ್ಳುವುದು ಎಂದರೆ.. ಅದೊಂತರಹ ಚಿನ್ನದ ಗಣಿಯಲ್ಲಿ ಕೈ ಹಾಕಿ ಹೊರಳಾಡಿಸಿದಾಗ ಬೊಗಸೆ ಪೂರ್ತಿ ಹಳದಿಯಾಗುವ ಬಗೆ. ಒಂದೆರಡು ಹಲಸಿನ ಸೋಳೆಗಳನ್ನು ಹಾಗೇ ಬಾಯಿಗೆ ಹಾಕಿಕೊಳ್ಳುವುದಕ್ಕಿಂತ ಮೊದಲು ಮರದಡಿಯಲ್ಲಿ ಆಸೆಯಿಂದ ಮೂಗಿನ ಹೊಳ್ಳೆಗಳೆರಡನ್ನು ಅರಳಿಸಿ,ಬಾಲ ಬೀಸುತ್ತಾ ಉದ್ದದ ನಾಲಗೆಯಿಂದ ತನ್ನದೇ ಮೂತಿ ಸವರುತ್ತಾ ಮರದ ಮೇಲಕ್ಕೆಯೇ ತದೇಕಚಿತ್ತದಿಂದ ನೋಡುತ್ತಾ ನಿಂತಿರುವ ಬಿಟ್ಟು,ಬೂಚೆ,ಗೆಂದೆ,ಲಕ್ಷ್ಮೀ,ಗೌರಿ ಯಂತಹ ಮನೆಯ ಹಸುಗಳಿಗೆ ಒಂದಷ್ಟು ಹಣ್ಣುಗಳನ್ನು ದಯಪಾಲಿಸುವುದು ಎಂದರೆ ಚಿಕ್ಕಂದಿನಲ್ಲಿ ಅದೇನೋ ನಮ್ಮಂತಹ ಹುಡುಗರಿಗೆ ಸ್ವರ್ಣ ದಾನದಂತಹ ಅನುಭೂತಿಯೇ ಸರಿ. ಹಲಸಿನ ತಮ್ಮ ಹೆಬ್ಬಲಸಿನ ಹಣ್ಣುಗಳು ಕೂಡ ಬಂಗಾರ ಬಣ್ಣದ್ದೇ,ಮರದ ಮೇಲೆ ಚಿಕ್ಕ ಚಿಕ್ಕ ಪೊಟ್ಟಣದಲ್ಲಿ ಕಟ್ಟಿಟ್ಟ ಸ್ವರ್ಣದ ಬೀಜಗಳು ಅವು.ಆದರೆ ಹಿಂದೆ ಎಲ್ಲಾ ಎಣ್ಣೆ ಮಾಡುವುದಕ್ಕಾಗಿ ಅದರದ್ದೊಂದು ಪುಟ್ಟ ಪುಟ್ಟ ಬೀಜಗಳನ್ನು ಅದರ ಮರದಡಿ ಹೆಕ್ಕುವುದು ಎಂದರೆ ಅದೊಂತರಹ ಬೇಕಂತಲೇ ಬಂಗಾರವನ್ನು ತ್ಯಜಿಸಿ ಶ್ರದ್ಧೆಯಿಂದ ಬೆಳ್ಳಿಯನ್ನಷ್ಟೇ ಆಯ್ದು ಕೊಳ್ಳುವಂತಹ ಕೆಲಸ. "ಬಂಗಾರ ನುಂಗಿ ಬೆಳ್ಳಿ ಉಗುಳುವುದು" ಹೆಬ್ಬಲಸಿಗೆ ಸಂಬಂಧಿಸಿದಂತೆ ಇರುವ ಒಂದು ಗಾ

ಬಂಧುಗಳೇ,ವಿಷಯ ಏನೆಂದರೆ...

Image
ಬಂಧುಗಳೇ...  ಬೆಳಿಗ್ಗಿನ ತಿಂಡಿಗೆ ನಿರಂತರವಾಗಿ ನೀರುದೋಸೆ ಒಂದನ್ನೇ  ಮಾಡಿದುದರ ಪರಿಣಾಮ ಫೇಸ್ಬುಕ್ ನ ಜನ ಸಮುದಾಯ  ಅಲ್ಲಲ್ಲಿ ರೊಚ್ಚಿಗೆದ್ದಿರುವುದು ಲೈಟಾಗಿ ಬೆಳಕಿಗೆ ಬಂದಿದೆ. ತಾಳ್ಮೆಯ ಡ್ಯಾಮ್ ಒಡೆದು ಹೋಗಿ ನೇರವಾಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದು ಮಾತ್ರವಲ್ಲ ಇದೊಂದು ಮಾನಸಿಕ ಕಿರುಕುಳ ಎಂದು ಮನಸ್ಸಿನಲ್ಲಿಯೇ ಕತ್ತಿ,ಲಾಂಗ್ ಹಾಗೂ ಹರಿತವಾದ ಮಚ್ಚು ಮಸೆಯುತ್ತಿರುವುದು ಅರಿವಿಗೆ ಬಂದಿದೆ. ಯಾಕಪ್ಪಾಆಆಆಆ...ಇವನು ಹೀಗೆ ಮಾಡಿ ಸಾಯ್ತಾನೆ,ನಮ್ಮ ನೆಚ್ಚಿನ ನೀರುದೋಸೆಯ ಮೇಲೆ ನಮಗೆಯೇ ಜಿಗುಪ್ಸೆ ಬರುವಂತೆ ಮಾಡುತ್ತಿದ್ದಾನೆ.. ಎಂದು ಹೆಂಗೆಳೆಯರು,ಮಹಿಳಾಮಣಿಗಳು ಹಲ್ಲುಗಳನ್ನು ಕಟ ಕಟ ಎಂದು ಕಡಿಯುತ್ತಾ ಹಿಡಿಶಾಪ ಹಾಕುತ್ತಿರುವುದು ಸ ಮಸುಕು ಮಸುಕಾಗಿ ಗೋಚರಿಸುತ್ತಿದೆ. ಕೆಲವು ಪುರುಷ ಪುಂಗವರು ಹಾಗೂ ವೀರಬಾಲಕರು..."ಇಲ್ಲ.. ಇನ್ನು ಸಹಿಸಲು ಸಾಧ್ಯವೇಏಏಏಏ ಇಲ್ಲ.. ಇವನನ್ನು ಎತ್ತಿ ಬಿಡುವ.." ಎಂದು ಅಲ್ಲಲ್ಲಿ ಗಂಭೀರವಾಗಿ ಡಿಸ್ಕಸನ್ ಮಾಡುತ್ತಿರುವುದು ಸ ಬೆಳಕಿಗೆ ಬಂದಿದೆ. ನನ್ನ ಫೇಸ್ಬುಕ್ ಗೆ ಹೊಸದಾಗಿ ಲಗ್ಗೆ ಹಾಕಿದವರು "Kaun Hai yeh log -kaha se aate hai yeh log.. " ಎಂದು ಅನ್ಯಗ್ರಹ ಜೀವಿಯೊಂದನ್ನು ಮೇಲಿಂದ ಕೆಳಗೆ ನೋಡಿದಂತೆ ನೋಡುತ್ತಿರುವ ಆ ಮಾಹಿತಿಯೂ ಬಂದಿದೆ. ಬಂಧುಗಳೇ & ಬ್ರದರ್ ಗಳೇ..ಮಹಿಳಾಮಣಿಗಳೇ,ಪುರುಷ ಪುಂಗವರೇ & ನನ್ನ ನೆಚ್ಚಿನ ವೀರಬಾಲಕರೇ... ಇಷ್ಟೆಲ್ಲ ವ

ತಂಡಕ್ಕಾಗಿ ಆಟ ಆಡುವವನು..

Image
ಲಾಕ್ ಡೌನ್ ಗಿಂತ ಸ್ವಲ್ಪ ಹಿಂದೆ ನಮ್ಮ ಮನೆಯ ಅಕ್ಕಪಕ್ಕ ಇರುವ ಮಕ್ಕಳು ನನ್ನನ್ನು ಬಿಟ್ಟು ಕ್ರಿಕೆಟ್ ಆಡುತ್ತಿರಲಿಲ್ಲ.ಈಗ ಅದೇ ಮಕ್ಕಳು ಈ ಜನ ಒಂದು ಬರದಿದ್ದರೆನೇ ನಮಗೆ ಒಳ್ಳೆಯದು ಎಂದು ತಮ್ಮ ತಮ್ಮಲ್ಲಿಯೇ ಚರ್ಚಿಸಿ ಒಮ್ಮತದ ನಿರ್ಧಾರವೊಂದು ತೆಗೆದುಕೊಂಡು,ಕ್ರಿಕೆಟ್ ಆಡ್ಲಿಕ್ಕೆ ಹೋಗುವಾಗ ಬೇಕಂತಲೇ ನನ್ನನ್ನು ಕರೆಯದೇ ಸೈಲೆಂಟ್ ಆಗಿ ಅವರಷ್ಟಕ್ಕೇ ಗ್ರೌಂಡಿಗೆ ಹೋಗಿ ಕ್ರಿಕೆಟ್ ಆಡಿ ಬರುತ್ತಿದ್ದಾರೆ. ಏಕೆ ಒಮ್ಮೆಲೇ ಹೀಗೆ ಆಗ್ತ ಇದೆ ಅಂತ ಈ ರಹಸ್ಯವನ್ನು ಬೇಧಿಸಲು ಹೊರಟಾಗ ನನಗೆ ಗೊತ್ತಾದ ಸಮಾಚಾರ ಏನೆಂದರೆ ಮತ್ತು ಆ ಎಲ್ಲಾ ಮಕ್ಕಳ ಆಕ್ರೋಶಭರಿತ ಆ ಒಕ್ಕೊರಲಿನ ಕೂಗು ಎನೆಂದರೆ  " ಈರ್ ಏತ್ ಅರಂಟ್ ದ್ ಸೈಪರ್  ಮಾರ್ರೆ,ಫಸ್ಟ್ ಬ್ಯಾಟಿಂಗ್ ಲ ಈರೇ.. ಫಸ್ಟ್ ಬೌಲಿಂಗ್ ಲ ಈರೇ..ಬೊಕ ಎಂಕುಲ್ ದಾಯೆಗ್ ಗ್ರೌಂಡ್ ಗ್ ಖಾಲಿ ಬಾಲ್ ಪೆಜ್ಜರೆ ಬರೋಡಾ😡😡..." ಸಿಂಪುಳ್ ಶಬ್ದಗಳಲ್ಲಿ ಇದರ ಭಾವಾನುವಾದ ಹಾಗೂ ಆ  " ಅರಂಟುವುದು" ಎಂಬ ಪೆಸಲ್ ವರ್ಡ್ ನ ಮೀನಿಂಗ್ ಏನೆಂದರೆ.. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಜೀವವನ್ನು ಪಣಕ್ಕಿಟ್ಟು ತಂಡದ ಹಿತಕ್ಕಾಗಿ,ತಂಡ ಗೆಲ್ಲಲೇಬೇಕು ಎಂಬ ಏಕೈಕ ಉದ್ದೇಶದಿಂದ ನಿರಂತರವಾಗಿ ಬೆವರು ಹರಿಸಿ ಪರ್ಫಾಮ್  ಮಾಡುವವ ತಂಡದ ಒಬ್ಬ ಸ್ಟಾರ್ ಆಟಗಾರ. ನೋಡಿ... ತಂಡ ಗೆಲ್ಲಲ್ಲಿ ಎಂದು ಯಾರಿಗೂ ಏನನ್ನೂ ಕೊಡದೆ ನಾನೊಬ್ಬನೇ ಇಷ್ಟೊಂದು ಕಷ್ಟ ಪಟ್ಟು ಬ್ಯಾಟಿಂಗ್,ಬೌಲಿಂಗ್ ಎಲ್ಲಾ ಮಾಡಿದರೂ ಸ.. ಕೇವಲ ಜ

Inside Man

Image
#Inside_Man | Netflix  “My name is Dalton Russell. Pay strict attention to what I say because I choose my words carefully and I never repeat myself. I’ve told you my name: that’s the Who.The Where could most readily be described as a prison cell. But there’s a vast difference between being stuck in a tiny cell and being in prison.The What is easy: recently I planned and set in motion events to execute the perfect bank robbery...! " ಈ ತರಹ ಮೊದಲ ಫ್ರೇಮ್ ನಲ್ಲಿಯೇ ಕುತೂಹಲವನ್ನು ನಿಧಾನಕ್ಕೆ ಕೆರಳಿಸುವಂತೆ ಮಾತಾಡುವ ಅವನೊಬ್ಬ Robber.  ಬುದ್ಧಿವಂತ ದರೋಡೆಕೋರ.  Plan ಮಾಡಿ ಬ್ಯಾಂಕ್ ಒಂದನ್ನು ರಾಬರಿ ಮಾಡುವುದು.. ಮಾಡಿದ ನಂತರ ಅಲ್ಲಿಂದ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುವ Heist ಕಥೆಗಳು ಥ್ರಿಲ್ಲರ್ ಮೂವಿಗಳಿಗೆ ಯಾವತ್ತೂ ಹೇಳಿ ಮಾಡಿಸಿದ ಸರಕುಗಳೇ ಆಗಿರುತ್ತದೆ.ನೋಡುಗ ಕೂಡ ಕಳ್ಳನ ಜಾಣ್ಮೆಯನ್ನು Appreciate ಮಾಡಲು ಹೊರಡುವ,ಕಳ್ಳ ಅವನ ಸಾಹಸ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಮನಸಾರೆ ಬಯಸುವ Genre ಅಂತ ಒಂದು ಇದ್ದರೆ ಅದು ಇಂತಹದ್ದೇ  Heist Thriller ಗಳು ಆಗಿರುತ್ತದೆ.  ಇಲ್ಲೊಂದು ಅಂತಹದ್ದೇ ಕಥೆ ಇದೆ.  ರಾಬರ್ ಕೂಡ ಬುದ್ದಿವಂತನೇ. ಬುದ್ಧಿವಂತ ಆದವನು ಮಾತ್ರ ಇಂತಹ ಸಾಹಸಗಳಿಗೆ ಹೆಚ್ಚಾಗಿ ಕೈ

Pariyerum Perumal

Image
#Pariyerum_Perumal | Prime " ನಿಂಗೆ ನಿಜವಾಗಿಯೂ ಇಂಗ್ಲಿಷ್ ಬರಲ್ವಾ..? "  " ಇಲ್ಲ..."  "ಮತ್ತೆ 10th, PUC ಎಲ್ಲಾ ಹೇಗೆ ಪಾಸ್ ಮಾಡಿದೆ..?"  "ಹೇಗೋ Adjust ಮಾಡಿ ಪಾಸ್ ಆದೆ.. ಟೀಚರ್ ಒಬ್ರು ದೇವತೆ ತರಹ ಎಕ್ಸಾಂ ಹಾಲ್ ನಲ್ಲಿ ಹೆಲ್ಪ್ ಮಾಡಿದ್ರು.."  " ಆದ್ರೆ ಇದು Law ಕಾಲೇಜು, ಇಲ್ಲಿಯೆ ಕೂಡ ಇಂಗ್ಲಿಷ್ ಸಬ್ಜೆಕ್ಟ್ ಇದೆ..  ಹೇಗೆ ಪಾಸ್ ಆಗ್ತೀಯಾ..? " " ಹೇಗೋ Adjust ಮಾಡಿದ್ರೆ ಆಯಿತು ಬಿಡು.. " "ನಿಂಗೆ ನಾನು ಇಂಗ್ಲಿಷ್ ಕಲಿಸಿ ಕೊಡ್ಲಾ...  ಮತ್ತೆ ನೀನು Advocate ಆಗ್ಬಹುದು ಮತ್ತು ನಾನು ಆಗ್ತೇನೆ ದೇವತೆ.. " " ನೀನು ದೇವತೆ ಆಗ್ತೀಯಾ.. ಅದು ಹೇಗೆ?"  " ನಿಂಗೆ ಇಂಗ್ಲಿಷ್ ಕಲಿಸುವವರು ಎಲ್ಲರೂ ದೇವತೆಗಳು ಅಲ್ವಾ.. ಹಾಗೇ ನಾನು ಕೂಡ ದೇವತೆ ಆಗ್ತೇನೆ.. " " ಆಗ್ತೇನೆ ಅಲ್ಲ... ನೀನು ಈ ಕ್ಷಣದಿಂದಲೇ ನನಗೆ ದೇವತೆಯೇ ಆಗಿ ಬಿಟ್ಟಿದ್ದೀಯಾ... " ಇಂತಹ ಸಂಭಾಷಣೆಗಳೊಂದಿಗೆ ಸಾಗುವ ಇದರ ಕಥೆ ಬರೀ ಪ್ರೇಮ ಕತೆ ಅಲ್ಲ...  ಬೇರೆ ಏನೋ ಇದೆ.  ಈಗಾಗಲೇ Karnan ನೋಡಿದ್ದರೆ ಆದರೆ ಇದ್ದನ್ನು ಇನ್ನೂ ಕೂಡ  ನೋಡಿಲ್ಲದಿದ್ದರೆ..  ಒಮ್ಮೆ ಇದನ್ನು ಸಹ ನೋಡುವ ಮನಸ್ಸು ಮಾಡಿ. ಎರಡರ ಡೈರೆಕ್ಟರ್ ಕೂಡ ಒಬ್ಬರೇ... ಎರಡೂ ಮೂವಿಗಳು ಚೆನ್ನಾಗಿಯೇ ಇದೆ. ಆದರೆ ಯಾಕೋ ಇದನ್ನು ನೋಡಿದ ಮೇಲೆ Karnan ಗಿಂತಲೂ ಹೆಚ್

ಒಂದು ಘೀ ರೋಸ್ಟ್ ಪುರಾಣ

Image
ಕರಾವಳಿ ಎಂದ ತಕ್ಷಣ ಜನರಿಗೆ ಮೊದಲು ನೆನಪಾಗುವ ಹಲವಾರು ವಿಷಯಗಳಲ್ಲಿ ಇಲ್ಲಿಯ ಫುಡ್ ಕೂಡ ಒಂದು. ಅಂತಹ ಹಲವು ಫುಡ್ ಗಳಲ್ಲಿ ಬಹಳನೇ ಫೇಮಸ್ ಆದ,ಮಾಡುವ ಕ್ರಮದಿಂದಲೇ ತುಂಬಾನೇ ವಿಶಿಷ್ಟವಾದ ಹಾಗೂ ಅಷ್ಟೇ ರುಚಿಯಾದ,ಸೊಗಸಾದ,ಆಕರ್ಷಕವಾದ ಫುಡ್ ಒಂದರ ಬಗ್ಗೆಯೇ ನಾವಿತ್ತು ಸ್ವಲ್ಪ ಡಿಟೈಲ್ ಆಗಿ ಹರಟೆ ಹೊಡೆಯೋಣ.  ಮಂಗಳೂರು,ಉಡುಪಿ ಹಲವು ವಿಶಿಷ್ಟ ಖಾದ್ಯಗಳನ್ನು ಜಗತ್ತಿಗೆ ನೀಡುವ ಮೂಲಕ ಭೋಜನ ಪ್ರೀಯರ ಜಿಹ್ವೆಯನ್ನು  ನಿರಂತರವಾಗಿ ಕಾಲಕಾಲಕ್ಕೆ ತಣಿಸುತ್ತಲೇ ಬಂದಿದೆ.ಅಂತಹ ರೆಸಿಪಿಗಳು ಮೂಲತಃ ಹುಟ್ಟಿದ್ದು ಇಲ್ಲಿಯ ಮಣ್ಣಿನಲ್ಲಿಯೇ.ಆ ನಂತರ ಜಗತ್ತಿನ ಆಹಾರದ ತಟ್ಟೆಯೊಳಗೆ,ವಿಸ್ತಾರವಾದ ಥಾಲಿಯೊಳಗೆ ತನ್ನದೊಂದು ಸ್ಥಾನವನ್ನು ಗುರುತು ಹಾಕಿಕೊಂಡು ಅದನ್ನು ಮತ್ತಷ್ಟು ಭದ್ರಗೊಳಿಸುವತ್ತ ಅವುಗಳು ವೇಗವಾಗಿ ಎಲ್ಲೆಡೆ ದಾಪುಗಾಲು ಹಾಕಿದ್ದು ಮಾತ್ರವಲ್ಲ ಹಾಗೇ ರಾರಾಜಿಸಿದ್ದು ಈಗ ಅಂತು ಇತಿಹಾಸ.ಅಂತಹ ಅತ್ಯದ್ಭುತ ಅಡುಗೆಗಳಲ್ಲಿ ಒಂದು ಈ "#ಘೀ_ರೋಸ್ಟ್". ಕುಂದಾಪುರ ಎಂದರೆ ಮುಖ್ಯವಾಗಿ ನಾಲ್ಕು ವಿಷಯಗಳು ನೆನಪಾಗಿ ಬಿಡುತ್ತದೆ.ಒಂದು ಇಲ್ಲಿ ಇರುವ  ಕರಾವಳಿಯ ಸಂಸ್ಕೃತಿ,ಎರಡನೆಯದ್ದು ಕುಂದಾಪುರ ಕನ್ನಡ ಭಾಷೆಯ ಆ ಸೊಗಡು,ಮೂರನೆಯದ್ದು" ಚಂದದ ಲೇಡಿ" ಬಲು ರುಚಿಕರ ಕಾಣೆ ಮೀನು... ಖಂಡಿತವಾಗಿಯೂ ನಾಲ್ಕನೆಯದ್ದು ಅಂತ ಇದ್ದರೆ,ಯಾವುದೇ ಡೌಟೇ  ಬೇಡ ಅದುವೇ ಇಲ್ಲಿಯ "#Chicken_Ghee_Roast". ಹೌದು ಇಂದು ಮಂಗಳೂರು,ಉಡುಪಿ

Operation java

Image
#Operation_Java | Zee5 ಇದೊಂದು Crime Thriller ಕಥೆ. ಒಂದಲ್ಲ...  ಮೂರು ಬೇರೆ ಬೇರೆ ಕಥೆಗಳಿವೆ. Film Piracy,Job Praud ಮತ್ತು Murder Case.. ಈ ಮೂರು ಕೇಸನ್ನು Cyber Cell ನವರು ಪತ್ತೆ ಹಚ್ಚಲು ಹೊರಡುವುದೇ ಇದರ ಕಥೆ.  ಕಥೆ Thriller ಆದರೂ ಈ ಮೂವಿಯನ್ನು ಬೇರೆ ಬೇರೆ Public Sector ಗಳಲ್ಲಿ ದುಡಿಯವ Skillful Temporary Worker ಗಳಿಗೆ ಈಚಿತ್ರತಂಡ ಅರ್ಪಿಸಿದೆ.ಅದಕ್ಕೆ ಕಾರಣವೂ ಇದೆ. ಅದಕ್ಕಾಗಿ ಮೂವಿಯನ್ನೇ ನೋಡಬೇಕು.  ಕೆಲವೊಮ್ಮೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದೇಇಲ್ಲ! ಜಾಣ್ಮೆ, ಬುದ್ಧಿವಂತಿಕೆ ಅರ್ಹತೆಯಾಗುವುದಿಲ್ಲ! ಕೊನೆಯಲ್ಲಿ ಈ ಮೂವಿ ಹಾಗೇ ಒಂದಷ್ಟು ಕಾಡಿ ಬಿಡುತ್ತದೆ. ನಿಜ ಘಟನೆಗಳನ್ನೇ ಆಧಾರಿಸಿ ಮಾಡಿದ ಮೂವಿ ಇದು.  Tharun Moorthy ಇದನ್ನು ನಿರ್ದೇಶಿಸಿದ್ದಾರೆ.Balu Varghese, Lukman Avaran, Binu Pappu,Irshad, Vinayakan,Mamitha Baiju, Mathew Thomas,Shine Tom Chacko ಇದರಲ್ಲಿ ಅಭಿನಯಿಸಿದ್ದಾರೆ. ಅಪಾರ ಪ್ರಶಂಸೆಯನ್ನು ಪಡೆದುಕೊಂಡಿರುವ ಈ ಮೂವಿಯ Sequel ಕೂಡ ಮುಂದಿನ ದಿನಗಳಲ್ಲಿ ಬರಬಹುದು..  #Operation_Java | Zee5 Malayalam Movie Crime Thriller Year - Feb 2021 #Movies Ab Pacchu

One

Image
 #One | Netflix ಅದೊಂದು ಬಿಲ್. The Right to Recall ಅಂತ. ಐದು ವರ್ಷಗಳ ಅವಧಿಗಾಗಿ  ಆಯ್ಕೆಯಾದ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡದಿದ್ದರೆ,ಅವರನ್ನು ಮತ್ತೆ ಅಧಿಕಾರದಿಂದ ಕೆಳಗಿಳಿಸುವ ಹಕ್ಕನ್ನು ಜನರು ಹೊಂದುವ ಬಿಲ್ ಅದು! ರಾಜ್ಯದ ಮುಖ್ಯಮಂತ್ರಿಯೇ ಇಂತಹದ್ದೊಂದು ಬಿಲ್ ಅನ್ನು ಅಸೆಂಬ್ಲಿಯಲ್ಲಿ ಪಾಸ್ ಮಾಡಲು ಮನಸ್ಸು ಮಾಡುತ್ತಾನೆ. ರಾಜಕಾರಣಿಗಳು ಎಂದರೆ ಹೆಚ್ಚಾಗಿ ಕಳ್ಳರು ಇದ್ದೇ ಇರುತ್ತಾರೆ. ಯಾವ ರಾಜಕಾರಣಿ ತಾನೇ ಇಂತಹ ಬಿಲ್ ಅನ್ನು  ಬಯಸುತ್ತಾನೆ! ನಿರೀಕ್ಷಿಸಿದಂತೆ ಘರ್ಷಣೆ ಇದ್ದದ್ದೇ.. ಅದೇ ಈ ಮೂವಿಯ ಕಥೆ.ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು. Santhosh Viswanath ಇದನ್ನು ನಿರ್ದೇಶಿಸಿದ್ದಾರೆ.Mammootty,Murali Gopy, Joju George, Mathew Thomas, Nimisha Sajayan ಮುಂತಾದವರ ಅಭಿನಯವಿದೆ.  ಇತ್ತೀಚಿನ ದಿನಗಳಲ್ಲಿ Mammootty,Mohan Lal ನಂತಹ ನಟರು ವಯಸ್ಸಾಗುತ್ತಾ ಬಂದಂತೆ ಮತ್ತಷ್ಟು ಯುವಕರಾಗುತ್ತಿದ್ದಾರೆ ಎಂದು ಅನ್ನಿಸುತ್ತದೆ.ಅದಕ್ಕೆ ಕಾರಣ ಅವರುಗಳು ಅಭಿನಯವೇ ಹೊರತು ಮತ್ತೇನು ಅಲ್ಲ.ಅವರು ಆಯ್ಕೆ ಮಾಡಿಕೊಳ್ಳುವ ಕಥೆಗಳು ಕೂಡ ಅವರನ್ನು ಅಲ್ಲಿ ಹೀರೋ ಆಗಿ ಮತ್ತಷ್ಟು Enrich ಮಾಡುತ್ತಿದೆಯೇ ಹೊರತು ಮಸುಕಾಗಿಸುತ್ತಿಲ್ಲ..ಬೋರ್ ಅಂತ ಖಂಡಿತಾ ಹೊಡಿಸುತ್ತಿಲ್ಲ.  #One | Netflix  Malayalam Movie Political Drama  Year - March 2021 #Movies  Ab Pacchu