Posts

Showing posts from February, 2021

ಇಲ್ಲಿ ಎಳ್ಳು ಜ್ಯೂಸ್ ಸಿಗುತ್ತದೆ..

Image
  ಹಿಂದೆ ಅಲ್ಲಲ್ಲಿ ಅಂಗಡಿಗಳಲ್ಲಿ  "ಇಲ್ಲಿ ಎಳ್ಳು ಜ್ಯೂಸ್ ಸಿಗುತ್ತದೆ.." ಎಂದು ಕೈ ಬರಹದ  ಬೋರ್ಡ್ ಅಂಗಡಿಗಳ ಮುಂದೆ ತೂಗು ಹಾಕಿರುವುದು ಕಂಡು ಬರುತ್ತಿತ್ತು.ಈಗ ಅಂತಹ ಬೋರ್ಡ್ ಅಂಗಡಿಗಳ ಮುಂದೆ ಇಲ್ಲ.ಆದರೆ ಈಗಲೂ ಕೇಳಿ ನೋಡಿದರೆ ತಂಪು ತಂಪಾದ ಎಳ್ಳು ಲೋಟದಲ್ಲಿ ಇಲ್ಲವೇ ಬಾಟಲ್ ನಲ್ಲಿ ನಮ್ಮ ಅಂಗಡಿಗಳಲ್ಲಿ ಸದಾ ದೊರೆಯುತ್ತದೆ. ಬಿರು ಬಿಸಿಲಿಗೆ ಯಾವ ಕಂಪೆನಿಯ ಎಂತಹ ಸಾಫ್ಟ್ ಡ್ರಿಂಕ್ಸ್ ಇದ್ದರೂ ಕೂಡ ಮಂಗಳೂರಿನಲ್ಲಿ.." ಅಣ್ಣಾ..ಲೋಕಲ್ ದಾಲ ಇಜ್ಜೆ" (ಲೋಕಲ್ ತಂಪು ಪಾನೀಯ ಯಾವುದೂ ಇಲ್ಲವೇ) ಅಂತ ಕೇಳುವವರು ಇಂದಿಗೂ ಕಡಿಮೆ ಆಗಿಲ್ಲ.ಹಾಗಾಗಿ  ಪುನರ್ಪುಳಿ,ಎಳ್ಳು,ಇಸುಬುಕೋಲ್,ಹಿಬುಲ,ಚಿಪ್ಪಡ್,ಬೊಂಡ ಜ್ಯೂಸ್.. ಇಲ್ಲಿಯ ಅಂಗಡಿಯ  ಪ್ರಿಡ್ಜ್  ಗಳಲ್ಲಿ ಇಂದಿಗೂ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ.. ದಾಹಕ್ಕೂ ಒಳ್ಳೆಯದು,ಆರೋಗ್ಯಕ್ಕೂ ಒಳ್ಳೆಯದು..ಕಡಿಮೆ ಬೆಲೆಯ ಜೊತೆ ಜೊತೆಗೆ ಮನಸ್ಸಿಗೂ ಉಲ್ಲಾಸ ಮಾತ್ರವಲ್ಲ ಬಾಯಿಗೂ ಅಷ್ಟೇ ರುಚಿ😋 ಕೋಕ್,ಪೆಪ್ಸಿ ಇತ್ಯಾದಿ ಇತ್ಯಾದಿ ಎಲ್ಲಾ ಕಡೆ ಸಿಗುತ್ತದೆ,ಊರಲ್ಲಿ ಇದ್ದಾಗ ಊರಿನದ್ದೇ ಪ್ಲೇವರ್ ನದ್ದು ಕುಡೀಬೇಕು..ಏನಂತೀರಾ... ab pacchu

ಅಮ್ಮನಿಗದು ಬರೀ ಹಳೇ ಸೀರೆ ಮಕ್ಕಳಿಗದೇ ಒಲವ ಮಾಯೆ...

Image
  ಹೆಣ್ಣು ಮಕ್ಕಳಿಗೆ ತೊಡಲು ಒಡವೆ,ಹಣೆಗೆ ಸಿಂಧೂರ,ಎರಡೂ ಕೈಗೆ ಗಾಜಿನ ಬಳೆ,ಮುಡಿಗೆ ಹೂವು ಹಾಗೇ ಉಡಲು ಮೈ ತುಂಬಾ ಸೀರೆ.. ಇದಿಷ್ಟು ತುಂಬಾನೇ ಇಷ್ಟವಂತೆ. ಇವಿಷ್ಟು ಇದ್ದರೆ ಅವಳೇ ಮನೆಯ ಅನ್ನಪೂರ್ಣೆ.. ಮನೆಯ ಸಾಕ್ಷಾತ್ ಲಕ್ಷೀ. ನಮ್ಮ ಮನೆಗೆ ನಮ್ಮ ಅಮ್ಮನೇ ಅನ್ನಪೂರ್ಣೆ ಮತ್ತು ಅವಳೇ ಮಹಾಲಕ್ಷೀ. ಅವಳಲ್ಲಿ ನಗುವಿಗಿಂತ  ದೊಡ್ಡ ಆಭರಣ ಬೇರೆ ಯಾವುದೂ ಇರಲಿಲ್ಲ.ಹಾಗಾಗಿ ಆಭರಣ ಕಡಿಮೆ ಹಾಕಿ ಸದಾ ನಗುತ್ತಿದ್ದಳು. ಎರಡೂ ಕೈಗೆ ಒಂದಷ್ಟು ಬಳೆ,ಹಣೆಗೊಂದು ದೊಡ್ಡ ಕುಂಕುಮ ಅವಳು ಯಾವತ್ತೂ ತಪ್ಪಿಸಿದವಳಲ್ಲ.ಜೀವನ ಪೂರ್ತಿ ಅವಳು ಉಡುತ್ತಿದ್ದುದೇ ಅವಳಿಗಿಷ್ಟದ ಸೀರೆಯನ್ನೇ  ಹೊರತು ಬೇರೆ ಯಾವುದನ್ನೂ ಅಲ್ಲ. ಅಮ್ಮನ ಸೀರೆ ಅವಳಿಗೆ ಬರೀ ಸೀರೆ ಮಾತ್ರ ಆಗಿತ್ತು.. ಆದರೆ ಚಿಕ್ಕಂದಿನಲ್ಲಿ ಎಲ್ಲಿ ಹೋದರೂ ಅವಳ ಸೀರೆಯ ತುದಿಯನ್ನೇ  ಹಿಡಿದುಕೊಂಡು ಅವಳ ಹಿಂದೆ ಹಿಂದೆಯೇ ಹೆಜ್ಜೆ ಹಾಕುತ್ತಿದ್ದ ನನಗದು ನನ್ನ ಜೀವನದ ಎಲ್ಲವೂ ಆಗಿತ್ತು. ಅಮ್ಮನ ಸೀರೆಯಡಿಯಲ್ಲಿ ನನಗೊಂದು ಬೇಕಾದಾಗ ನೆರಳಿತ್ತು,ತಂಪಿತ್ತು,ಅಕ್ಕರೆಯ ಬಿಸುಪು ಬಾಲ್ಯವನ್ನು ಸದಾ ಬೆಚ್ಚಗೆ ಇರಿಸಿತ್ತು. ಅವಳು ಸಮಾರಾಧನೆಗೆ ಹೋದಾಗ ಸೀರೆಯ ಸೆರಗಲ್ಲಿ ಮರೆಯದೇ ಕಟ್ಟಿಕೊಂಡು ಬರುತ್ತಿದ್ದ ಹೋಳಿಗೆ,ಲಾಡುಗಳ ರುಚಿ ಅಮ್ಮ ಎಂಬುವವಳ ಮಾತೃ ಪ್ರೇಮದಿಂದಲೇ ದ್ವಿಗುಣವಾಗಿ ಬಿಡುತ್ತಿತ್ತು.ಆಹಾ... ಅವಳು ಅದೆಷ್ಟು ದೇವತೆಯಾಗಿದ್ದಳು. ಅವಳಿಗೆ ಲಾಡು ಇಷ್ಟವೋ ಇಲ್ಲವೋ ಎಂದು ಆವಾಗ ನನಗೆ ಗೊತ್ತಿರಲಿಲ್ಲ

ಹಪ್ಪಳ ಮತ್ತು ಲಾಡು...

Image
  ವಿಷಯ ಎಂತ ಗೊತ್ತುಂಟಾ.. ಒಂದು ಸಮಾರಾಧನೆ ಉಂಟು.ಇನ್ನು ಶುರು ಆಗ್ಲಿಲ್ಲ..ಹಪ್ಪಳ ಮತ್ತು ಲಾಡು ಹಂಚಲು ನಾನು ಸದ್ಯಕ್ಕೆ ಮನಸು ಮಾಡಿದ್ದೇನೆ.ಹೀಗೆ ಮನಸು ಮಾಡುವ  ನಡುವಲ್ಲಿ ಒಂದೆರಡು ಲಾಡು ಹಾಗೂ ಹಲವು ಹಪ್ಪಳಗಳನ್ನು  ಬಡಿಸುವುದಕ್ಕಿಂತ ಮೊದಲೇ ಟೇಸ್ಟ್ ನೋಡಿ ನೋಡಿಯೇ ನಾನು  ಸಪಾಯಿ ಮಾಡಿದ್ದೇನೆ..ನಾಲ್ಕು ಪೋಡಿಯ ಟೇಸ್ಟ್ ಸಹ ಸೂಪರ್ ಇತ್ತು. ಪುಣ್ಯಕ್ಕೆ ಗೋಬಿ ಮಂಚೂರಿ ಇರ್ಲಿಲ್ಲ.  ಹಾಗಾಗಿ  Next ನಾನು ಊಟಕ್ಕೆ ಕುಳಿತಾಗ ಲಾಡು, ಪೋಡಿ ಮತ್ತು ಹಪ್ಪಳ ಈ ಮೂರನ್ನು ಬಡಿಸಿಕೊಳ್ಳಲೇಬಾರದೆಂದು ಮನಸ್ಸಿನಲ್ಲಿಯೇ ದೃಢ ನಿಶ್ಚಯ ಮಾಡಿದ್ದೇನೆ..ಮತ್ತೆ ಯಾರಾದರೂ ಜಾಸ್ತಿ ಒತ್ತಾಯ  ಮಾಡಿದರೆ ಆಗ ಮಾತ್ರ ನಾನು ಎಂದಿನಂತೆ ಸಭೆಗೆ ಮರ್ಯಾದೆ ಕೊಡ್ಲೇ  ಬೇಕಾಗ್ತದೆ...ಅದು ನನ್ನ ಧರ್ಮ, ಕರ್ತವ್ಯ ಹಾಗೂ ಜವಾಬ್ದಾರಿ ಆಗಿದೆ ಎಂದು ನಾನು ಅರಿತಿದ್ದೇನೆ..  ಊಟದ ಗೌರವ ಯಾವತ್ತೂ ನಾವು ಎತ್ತಿ ಹಿಡಿಯಬೇಕು😌😎😋🤟 ಪಚ್ಚುಪಟಗಳು ab

ಹಣ್ಣು ಬಿದ್ದಿದೆ..

Image
ಗಾಳಿ ಬಂದಿದೆ ಹಣ್ಣು ಬಿದ್ದಿದೆ ಬಿಡದೇ ಎಲ್ಲವನ್ನೂ ಹೆಕ್ಕಬೇಕು ನಡು ನಡುವೆ ಒಂದೆರಡು ಹಣ್ಣು ಚೀಪಿ ತಿಂದು ಹಾಗೇ ಧನ್ಯನಾಗಬೇಕು... 😌💛🧡 "ಮಾ... ಅಂದರೆ ಮಾವು" ab

ಸೈನ್ಯವಿಲ್ಲದ ರುಚಿಕರ ದಾಳಿಯಿದು - ದಾಳಿ ತೊವ್ವೆ

Image
ಹೆಚ್ಚಾಗಿ ಈ ಅಡುಗೆಗಳ ಬರವಣಿಗೆ ಬರೆದಾಗ ಅಥವಾ ಯಾವುದೇ ಬರವಣಿಗೆಗಳ ಮಧ್ಯೆ ನಮ್ಮ ಕಡೆಯ  ಅಡುಗೆಯೊಂದು ಕಾಣಿಸಿಕೊಂಡಾಗ ಹಲವರು ಹೇಳುವುದಿದೆ... ನೀವು ಹೇಳುವ ತಿಂಡಿ ನಾವು ತಿಂದೂ ಇಲ್ಲ,ಕೇಳಿಯೂ ಇಲ್ಲ.. ನೀವು ಬಿಡಿ ಭಾಗ್ಯಶಾಲಿಗಳು ಎಂದು. ಹೌದು ಕೆಲವೊಮ್ಮೆ ಅನಿಸುವುದಿದೆ,ಆ ರೀತಿಯಲ್ಲಿ ನೋಡಿದರೆ ತಕ್ಕ ಮಟ್ಟಿಗೆ ನಾವು ಭಾಗ್ಯಶಾಲಿಗಳೇ ಎಂದು.ಅದಕ್ಕೆ ಕಾರಣವೂ  ಇದೆ.ಈ ನಮ್ಮ ತುಳುನಾಡು ಪ್ರಾಂತ್ಯದ ಸಾಂಪ್ರದಾಯಿಕ ಅಡುಗೆಗಳು ಮಂಗಳೂರು, ಉಡುಪಿ ಮತ್ತು ಕಾಸರಗೋಡು ಭಾಗಗಳಲ್ಲಿ ಬಿಟ್ಟರೆ ಬೇರೆ ಎಲ್ಲೂ ಕಾಣಸಿಗುವುದಿಲ್ಲ.ಅಷ್ಟೇ ಏಕೆ ಮಂಗಳೂರಿಗೆ ಬಂದರೂ ಕೂಡ ಇಲ್ಲಿಯ ಹೋಟೆಲ್ ನಲ್ಲೂ ಕೂಡ ತುಳುನಾಡಿನ ಮನೆಯ ತಿನಿಸುಗಳು ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ಅದಕ್ಕೆ ನೀವು ಇಲ್ಲಿಯ ಮನೆಗಳಿಗೆಯೇ ಹೋಗಬೇಕು.ಅದರಲ್ಲೂ ಹಳ್ಳಿ ಕಡೆಗೆ. ಇಲ್ಲಿಯೂ ಕೂಡ ಬದಲಾವಣೆಯ ಗಾಳಿ ಬೀಸಿದೆ.ಮನೆಯಲ್ಲಿ ಹಿರಿಯರು ಇದ್ದರೆ ಅಥವಾ ಗೊತ್ತಿದ್ದವರು ಇದ್ದರು ಗೆಂಡದಡ್ಡೆ, ಸಾರ್ನೆದಡ್ಡೆ,ಮಣ್ಣಿ,ಗಟ್ಟಿ,ಮೂಡೆಗಳು  ಘಮಘಮಿಸುತ್ತದೆ.ಆದರೂ ಅಪರೂಪಕ್ಕೆ ಒಮ್ಮೆ ಆವಾಗವಾಗ ಹಳೆಯ ಕಾಲದ ಅಡುಗೆಗಳು ಎಲ್ಲಾದರೂ ಒಂದು ಕಡೆಯಲ್ಲಿ ನಮ್ಮವರ ಬಾಯಿ ತಣಿಸುತ್ತಲೇ ಇರುತ್ತದೆ.ನಮ್ಮ ಪುಣ್ಯಕ್ಕೆ ಆಟಿ ತಿಂಗಳಿನಲ್ಲಿ ಅಲ್ಲಲ್ಲಿ "ಆಟಿಡೊಂಜಿ ದಿನ",  " ಕೆಸರ್ಡ್ ಒಂಜಿ ದಿನ " ಎಂಬ ಕಾರ್ಯಕ್ರಮಗಳು ಪ್ರತೀ ಮಳೆಗಾಲದಲ್ಲಿ ನಡೆದಾಗ ತುಳುನಾಡಿನ ಎಲ್ಲಾ ಹಳೆಯ ಕಾಲದ ತಿಂಡಿಗ

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಮ್..

Image
  ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಗುಜರಾತ್ ನ ಅಹಮದಾಬಾದ್ "#ನರೇಂದ್ರ_ಮೋದಿ_ಸ್ಟೇಡಿಯಮ್" ನಲ್ಲಿ ಇಂದಿನಂತೆ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಕ್ರಿಕೆಟ್ ಪಂದ್ಯದ  ಕಲರವ  ಶುರು ಆಗಲಿದೆ 😍❤️ 1,10,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ  ಇದು ನಿಜವಾಗಿಯೂ ಬಹು ಸುಂದರವೂ ಹೌದು ಅದೇ ರೀತಿ ಇನ್ನು ಮುಂದೆ ಭಾರತದ ಹೆಮ್ಮೆಯ ಕ್ರಿಂಡಾಗಣವೂ ಕೂಡ ಹೌದು.ಎಲ್ಲಾ ಕ್ರೀಡೆಗಳಿಗೆ ಸಂಬಂಧಿಸಿದಂತೆ ಇದು ವಿಶ್ವದ ಎರಡನೆಯ ಅತೀ ದೊಡ್ಡ ಸ್ಟೇಡಿಯಮ್...❤️😍ವಿಶ್ವ ಕ್ರಿಕೆಟ್ ನಲ್ಲಿ ಇನ್ನು ಮುಂದೆ ಇದೇ ದೈತ್ಯ ಹಾಗೂ ವಿರಾಟ.. 🤘❤️ Ind Vs Eng 3rd Test Ahmedabad - 2021 Cricket_Review ab

ಹೋಟೆಲ್ ಮೆನುವಿನಲ್ಲಿ ಕೇದಗೆಯ ಮೂಡೆ...

Image
  ಮೆನುವಿನಲ್ಲಿ "ಮೂಡೆ" ಇರುವುದನ್ನು ನೋಡಿ ಅದೇ ಕೊಡಿ ಅಂದೆ. ಸಾಂಬಾರ್, ಚಟ್ನಿ ಹಾಗೂ ತೊವ್ವೆ..ಇದರಲ್ಲಿ ಯಾವುದರ ಜೊತೆಗೆ ಕೊಡಲಿ ಅಂದರು, ಮೂರೂ ಇರಲಿ ಅಂದೆ.ಪರಿಚಯದ ಸಪ್ಲೈರ್  ನನ್ನನ್ನು ನೋಡಿ  ಹಾಗೇ ನಗುತ್ತಲೇ ಹೋಟೆಲ್ ನ ಅಡುಗೆ ಕೋಣೆಗೆ ಹೋಗಿ ಒಂದಿಡೀ ಮೂಡೆ ಜೊತೆಗೆ ಚಟ್ನಿ, ತೊವ್ವೆ, ಸಾಂಬಾರ್ ಗಳನ್ನು ಅಕ್ಕ ಪಕ್ಕ ಪ್ಲೇಟ್ ನಲ್ಲಿ ಅಲಂಕರಿಸಿ ತಂದು ನನ್ನೆದುರು ಇಟ್ಟರು. ನಿಧಾನವಾಗಿ ಕೇದಗೆಯ ಒಲಿಗಳನ್ನು(ಎಲೆ)ಜತನದಿಂದ ಬಿಡಿಸಿದ ಅದರೊಳಗಿನ ಮೂಡೆಯನ್ನು ಮೊದಲಿಗೆ ತೊವ್ವೆ,ಆ ನಂತರ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಕೂಡ ಮನದಣಿಯೆ ಬಾಯಿ  ಚಪ್ಪರಿಸಿದೆ.ಧಣಿ ಎಷ್ಟಾಯಿತು ಎಂದು ಕೊನೆಯಲ್ಲಿ ಕೇಳಿದರೆ.. 40 Rs ಅಂದರು.ಬೇರೆ ತಿಂಡಿಗೆ ಆದರೆ 25,ಮೂವತ್ತು.ಆದರೆ ಮೂಡೆಗೆ 40,ಕೆಲವೊಮ್ಮೆ 50 ಅಂತೆ.ಸೀಸನ್ ನಲ್ಲಿ ಹೋಟೆಲ್ ನ ತಿಂಡಿಗಳಲ್ಲಿ ನಮ್ಮ "ಮೂಡೆ" ಗೆ ರಾಜ ಮರ್ಯಾದೆ.  ಮನೆಯಲ್ಲಿ ಆದರೆ ಮುಕ್ಕಾಲು ಕೆ.ಜಿ ಅಕ್ಕಿಗೆ ಅರ್ಧ ಕೆಜಿ ಉದ್ದಿನಬೇಳೆಯನ್ನು ಹಾಕಿ, ತುಂಬಾ ಮೆದುವಾಗಬೇಕಾದರೆ ಎರಡನ್ನೂ ಸಮ ಪ್ರಮಾಣದಲ್ಲಿ ಹಾಕಿ,ಎರಡನ್ನೂ ಚೆನ್ನಾಗಿ ರುಬ್ಬಿ ..ನೈಸರ್ಗಿಕವಾಗಿ ಸಿಗುವ ಕೇದಗೆಯ ಎಲೆಗಳನ್ನು ಮೂಡೆ ಕಟ್ಟಿ,ಅದರಲ್ಲಿ ಹೊಯ್ದು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ.. ಒಂದೆರಡು ದಿನ ಅದೆಷ್ಟೋ ಮೂಡೆ ಯನ್ನು ಹಾಗೇ ಬಾರಿಸಬಹುದಿತ್ತು ಅಲ್ಲವೇ ಎಂಬ ಮೂಡೆಗಳ  ಲೆಕ್ಕಾಚಾರ ಹಾಕುವ ಮೂಡ್ ನಿಂದ ಹೊರಬಂದು,ಹೋ

ಸಿಹಿ ಮಾವಿಗೆ ಜಯವಾಗಲಿ,ಕಾಟು ಕುಕ್ಕು ಅಮರವಾಗಲಿ..

Image
  #ಸಿಹಿ_ಮಾವಿಗೆ_ಜಯವಾಗಲಿ_ಕಾಟು_ಕುಕ್ಕು_ಅಮರವಾಗಲಿ .. ಮಾವು ಎಷ್ಟೇ ದೊಡ್ಡ ಮರವಾಗಿ ಬೆಳೆದು ನಿಂತರೇನು..ಮರದ ತುಂಬೆಲ್ಲಾ ಹಾಗೇ ಹೂಗಳು ಅರಳಿ ಸಿಂಗಾರಗೊಳ್ಳದಿದ್ದರೆ,ಹೇಳಿ.. ಅದೊಂದು ಮಾವಿನ ಮರವೇನು? ಹೂವುಗಳಿಂದ ಪೀಚು ಆ ನಂತರ ಮಿಡಿ ಕಾಯಿಗಳಾಗಿ ಮರದ ತುಂಬಾ ಮಿನಿಯೇಚರ್ ಬಲ್ಬುಗಳಂತೆ,ಮರವೇ ಪೂರ್ತಿ ಮುಚ್ಚಿ ಹೋಗುವಂತೆ.. ಅವುಗಳು ನೇತಾಡುತ್ತಾ ಅಲಂಕಾರಗೊಳದಿದ್ದರೆ,ಅದೊಂದು ಮಾವಿನ ಮರ ಎಂದು ನನಗೆ ಅನ್ನಿಸುವುದೇ ಇಲ್ಲ.ಮಾವು ಆಗಿ ಹುಟ್ಟಲು ಭಾಗ್ಯ ಬೇಕು. ಕಾಯಿ,ಹಣ್ಣುಗಳನ್ನು ಹೊತ್ತುಕೊಂಡು ಮೆರೆಯಲು ಮರಕ್ಕೂ ಕೂಡ ಸೌಭಾಗ್ಯ ಬೇಕು. ನನಗೆ ಹಣ್ಣುಗಳಲ್ಲಿ ಮಾವು ಅಂದರೆ ತುಂಬಾನೇ ಇಷ್ಟ.. ಮಾವಿನಲ್ಲಿ ಕಾಟು ಮಾವು ಮೊದಲು ಇಷ್ಟ.ಅದರದ್ದೊಂದು ಗೊರಟೆಯನ್ನು ಚೀಪಿ ಚೀಪಿ ರಸವನ್ನು ಹಾಗೇ ಸವಿಯದಿದ್ದರೆ.. ಆ ವರ್ಷ ನನ್ನ ಪಾಲಿಗೆ ಅಪೂರ್ಣ ಎಂದೇ ತಿಳಿದವನು ನಾನು. ಅದೊಂದು ತರಹದ  ಬಿಡದ ಮಾವಿನ ಮಾಯೆ.. ಕಾಟು ಮಾವಿನ ಗೆಲ್ಲುಗಳ ಇಕ್ಕೆಲಗಳಲ್ಲಿ ಒಂದೆರಡು ಹೂವಿನ ಗೊಂಚಲು ಹಾಗೇ ಇಣುಕಿ ದರ್ಶನ ಕೊಟ್ಟ ದಿನದಂದೇ ನನ್ನಲ್ಲಿ ಮೊದ ಮೊದಲು ಹುಳಿ ಹುಳಿಯಾದ ಆ ನಂತರ ಅತೀ  ಸಿಹಿಯಾದ ಕನಸೊಂದು ಹೇಳದೇ ಕೇಳದೆ ಜನ್ಮ ತಾಳುವುದು.ನನ್ನಲ್ಲಿ ಅದು ಕಾಡುವುದಿಲ್ಲ,ಹಾಗೇ ಕಾದಾಡಿ ಬಿಡುತ್ತದೆ.ಬಹುಶಃ ಅದಕ್ಕೂ ಗೊತ್ತಿರಬೇಕು ಯಾರ ಕನಸಲ್ಲಿ ಕಾದಾಡಬೇಕು ಎಂದು. ಹೌದು ಯಾವತ್ತೂ ಕಾಡುವುದು  ಎಂಬುವುದು  ಅವಳೆಂಬ  "ಅವಳು" ಆಗಿದ್ದರೆ, ಕಾದಾಡುವುದು  ಅವನ

ನೆನಪಿನ ಹುಡುಗಿಯೇ..

Image
  ಭಟ್ಟರ ಒಲವಿನ ಸಾಲಿಗೆ ವಿಜಯ ಪ್ರಕಾಶ್ ನೇರಾ ಹೃದಯಕ್ಕೆ ನಾಟುವಂತೆಯೇ ಹಾಡಿದ "#ನೆನಪಿನ_ಹುಡುಗಿಯೇ..." ನಿಜವಾಗಿಯೂ ಕಳೆದುಹೋಗುವಷ್ಟು ಚೆನ್ನಾಗಿದೆ.. ಅಜನೀಶ್ ಲೋಕನಾಥ್ ಸಂಗೀತದ ಇದರಲ್ಲಿ ವಾಯಲಿನ್ BGM ತೀವ್ರವಾಗಿ ಕಾಡುವಂತಿದ್ದರೆ,ಈ ಕೆಳಗಿನ ಸಾಲುಗಳು ಹೃದಯಕ್ಕೆ ತಕ್ಕ ಮಟ್ಟಿಗೆ ಗಾಯ ಮಾಡಬಲ್ಲದು.... " ಈ ಮುಗಿಯದ ಕಥೆಯಲ್ಲಿ   ಮೊದಲ ಸಾಲು ನನದೇ   ಕೊನೆ ಸಾಲು ಕೂಡ ನನದೇ   ನಿಂದೇನಿದೆ.?!...." " ಹಳೆ ಬಯಕೆಯ ‌ಬಳ್ಳಿಯಲಿ,    ಹೂವೆಲ್ಲವು ನಿನದೇ..    ಮುಳ್ಳು ಕೂಡ ನಿನದೇ,   ನಂದೇನಿದೆ?!.... " ಇನ್ನೂ ಕೇಳದಿದ್ದರೆ, ಒಮ್ಮೆ ಕೇಳಿ... ನಿಮಗೂ ಇಷ್ಟ ಆಗಬಹುದು. (ಪೂರ್ತಿ ಹಾಡು YouTube ನಲ್ಲಿದೆ) ab

ಕೆಂಪು ಮುಂಚಿ ಜೊತೆಗೊಂದು ಕಪ್ಪು ಮಜ್ಜಿ..

Image
  ಕೆಲವೊಂದು ಕ್ರಮಗಳು ಹಾಗೇನೇ.. ಅದರಲ್ಲೊಂದು ಶ್ರದ್ಧೆಯಿದೆ,ಎಷ್ಟೋ ಕಾಲದ ಸ್ಥಿರವಾದ ನಂಬಿಕೆ ಇದೆ.ಜನರೇಶನ್ ಬದಲಾದರೂ ನಂಬಿಕೆಗಳು ಸುಲಭವಾಗಿ ಬದಲಾಗುವುದಿಲ್ಲ. ನಂಬಿಕೆಗಳಲ್ಲಿ ಬೆಸುಗೆ ಇದೆ.. ಅಕ್ಕರೆಯೂ ಇದೆ. ಏನಾದರೂ ಫಂಕ್ಷನ್ ಗಳು ಇದ್ದಾಗ ಅಲ್ಲಿಗೆ ಹೋಗದೆ ಇದ್ದರೆ ಅಲ್ಲಿಂದ ಒಂದು ಕಟ್ಟು ಏನಾದರೂ ಈ ರೀತಿ  ಮನೆಗೆ ಬರುವ ವಾಡಿಕೆ ನಮ್ಮಲ್ಲಿ ಎಲ್ಲರ ಮನೆಯಲ್ಲೂ ಇದೆ.ಅದೇ ರೀತಿ ನಮ್ಮ ನಮ್ಮ ಮನೆಯಲ್ಲಿ ಫಂಕ್ಷನ್ ಗಳು ಇದ್ದಾಗ ಕೂಡ...ಫಂಕ್ಷನ್ ಗೆ ಬಂದವರು ಪುನಃ ಅವರ ಮನೆಗೆ ಹೋಗಿ ಅಡುಗೆ ಮಾಡಲು ಅವರಿಗೆ ಕಷ್ಟವಾಗಬಹುದು ಎಂದು.. ಅಥವಾ ಮಾಡಿದ್ದ ಆಹಾರ ಪದಾರ್ಥಗಳು ತುಂಬಾನೇ ಉಳಿದಿದೆ ಎಂದು.. ಇಲ್ಲವೇ ಫಂಕ್ಷನ್ ಗೆ ಬರದೇ ಇದ್ದವರಿಗೆ ಯಾವುದಾದರೂ ಒಂದು ಪದಾರ್ಥ ತುಂಬಾನೇ ಇಷ್ಟವಿದೆ ಎಂದು ಮೊದಲೇ  ಗೊತ್ತಿದ್ದರೆ.. ಆಗಲೂ  ಕೂಡ ಈ ರೀತಿ ಮನೆಗೆ ಬಂದವರಿಗೆ ಅತಿ ಪ್ರೀತಿಯಿಂದ ಕಟ್ಟಿ ಕೊಡುವ ಕ್ರಮವೊಂದು ನಮ್ಮಲ್ಲಿ ಹಿಂದಿನಿಂದಲೂ ಇದೆ. ಆದರೆ ನನಗೆ ಯಾವಾಗಲೂ ಇದರಲ್ಲಿ ಕುತೂಹಲ ಮೂಡಿಸುವುದು ಯಾವುದು ಎಂದರೆ ಅದನ್ನು ಕಟ್ಟಿ ಕೊಡುವ ಒಂದು ವಿಶಿಷ್ಟವಾದ ಕ್ರಮ.ಕೆಲವೊಮ್ಮೆ ಬುತ್ತಿ ಇಲ್ಲದಿದ್ದರೆ ಕೆಲವೊಮ್ಮೆ ಬಾಳೆಎಲೆಯಲ್ಲಿ ಎಲ್ಲವನ್ನೂ ಗಟ್ಟಿಯಾಗಿ ಕಟ್ಟಿ ಇಟ್ಟ ನಂತರ ಆ ತೊಟ್ಟೆಯಲ್ಲಿ ಒಂದು ತುಂಡು ಮಜ್ಜಿ(ಇದ್ದಿಲು) ಅಥವಾ ಮುಂಚಿ(ಒಣ ಮೆಣಸು)ಇಡದಿದ್ದರೆ ನಮ್ಮವರಿಗೆ ಸಮಾಧಾನ ಆಗುವುದೇ ಇಲ್ಲ.ಅದರಲ್ಲೂ ಕಟ್ಟಿನಲ್ಲಿ ನಾನ್ ವೆಜ್ ಇದ್ದರೆ ಈ

Vellam

Image
  #Vellam  ದಿನವಿಡೀ ಬೆವರು ಸುರಿಸಿ ದುಡಿದು ಸಂಜೆ ಮನೆಗೆ ಹೋಗುವಾಗ ಮಗುವಿಗಾಗಿ ಏನಾದರೂ ಬೇಕರಿಯಿಂದ ತಿಂಡಿ ಕಟ್ಟಿಕೊಂಡು,ಹೆಂಡತಿಗೆ ಮುಡಿಯಲು ಒಂದಷ್ಟು ತಾಜಾ ಮಲ್ಲಿಗೆ,ಮನೆಗೆ ಹಾಲು,ತರಕಾರಿ,ಒಂದು ತೊಟ್ಟೆ ಮೀನು.. ಇಷ್ಟನ್ನು ದಿನವೂ ಕೈಯಲ್ಲಿ ಹಿಡಿದುಕೊಂಡು,ಅಪರೂಪಕ್ಕೆ ಒಮ್ಮೆ ಲಿಮಿಟ್ ನಲ್ಲಿ ಕುಡಿದು ಕತ್ತಲೆ ಆಗುವುದಕ್ಕಿಂತ ಮೊದಲೇ ಮನೆ ಸೇರುವಂತಹ ನಾಯಕ.... ಅವನು ಅಲ್ಲವೇ ಅಲ್ಲ!  ಅವನೊಬ್ಬ ಕುಡುಕ.  ಸಾಮಾನ್ಯ ಅಲ್ಲ... ಅಸಮಾನ್ಯ ಕುಡುಕ ಅವನು.  ಎಷ್ಟು ಕುಡಿತಾನೇ ಅಂದರೆ ಮೂವಿ ತುಂಬಾ ಬರೀ ಕುಡಿತಾನೇ ಇರ್ತಾನೆ. ಅವನು ಕುಡಿಯುವುದು ಹೋದಲ್ಲಿ ಬಂದಲ್ಲಿ ಪೆಟ್ಟು ತಿನ್ನುವುದು...ಮನೆಯಿಂದ ಸಾಮಾನುಗಳನ್ನು ಕದ್ದು ಮಾರಿ ಕುಡಿಯುವುದು,ಎಲ್ಲಾದರೂ ಯಾರಾದರೂ ಕುಡಿದು ಉಳಿಸಿದ್ದರೆ ಆ ಲೋಟವನ್ನು ನೆಕ್ಕುವುದು,ಮಗಳ ಸ್ಕೂಲ್ ನ ಎದುರು ಕುಡಿದು ಬೀಳುವುದು, ಅಲ್ಲಲ್ಲಿ, ರೋಡ್ ಅಲ್ಲಿ, ಮನೆಯ ಎದುರಲ್ಲಿ ಬಿದ್ದು ಹೊರಳಾಡುವುದು...ಮನೆಯವರು ಅವನು ಮನೆಯ ಸಾಮಾನು ಕದಿಯಬಾರದು ಎಂದು ಅಡಗಿಸಿಡುವುದು,ಮಗುವಿನ ಚೇರ್ ಅನ್ನು ಕೂಡ ಸಂಕೋಲೆಯಿಂದ ಕಂಬಕ್ಕೆ ಕಟ್ಟಿ ಹಾಕುವುದು,ಕೊನೆಗೊಮ್ಮೆ ಹೆಂಡತಿ ಕೈಯಿಂದ ಕೂಡ ಅವನು ಪೆಟ್ಟು ತಿನ್ನುವುದುನ್ನು  ನೋಡುವಾಗಲೆಲ್ಲ ತುಂಬಾನೇ ಬೇಜಾರು ಹಿಡಿದು ಹೋಗುತ್ತದೆ. ಅವನ ಬಡ ಪರಿವಾರದ ಆ ಮನೆಯಲ್ಲಿ ಅವನಿಗೊಬ್ಬಳು ಮುದ್ದಾದ ಹೆಂಡತಿ ಮತ್ತು ಒಬ್ಬಳು ಹೆಣ್ಣು ಮಗಳು.. ಅದೇ ರೀತಿ ಒಟ್ಟಿಗೆ ವಯಸ್ಸಾದ ತಂದೆ ತಾಯಿ ಕೂಡ ಇರ

ಕಡಲ್ದ ಬರಿತ ಪಿಚ್ಚರ್ಗ್ ಇತ್ತೆ ಬರ್ತಿ ಐವ್ವ ವರ್ಷದ ಸಂಬ್ರೊಮ..

Image
  ನಮ್ಮ ತುಳು ಭಾಷೆಡ್ ಪಿಚ್ಚರ್ ಬತ್ತ್ ದ್ ಫೆಬ್ರುವರಿ 19,2021 ಗ್ ಬರ್ತಿ ಐವ್ವ ವರ್ಷ ಆಪುಂಡು.ಉಂದು ನಮ್ಮ ಮೋಕೆದ ತುಳು ಚಲನಚಿತ್ರ ರಂಗಗ್ ಒಂಜಿ ಐತಿಹಾಸಿಕ ಕ್ಷಣ ಪಂದೇ ಪನೊಲಿ.  ತುಳು ಭಾಷೆದ ಸುರುತ ಪಿಚ್ಚರ್  ಒವ್ವ್ ಪಂಡ ಅವ್ವ್ " #ಎನ್ನ_ತಂಗಡಿ.." . ಈ ಪಿಚ್ಚರ್ ದ ಹೀರೋ ಅಂಚನೇ ತುಳುತ ಸುರುತ ಹೀರೋ ಪನ್ಪಿನ ಮಾನದಿಗೆ  ಅವ್ವ್ "ಆನಂದ ಶೇಖರ್" ಬೊಕ್ಕ ತುಳುತ ಸುರುತ ಹೀರೋಯಿನ್ ಪನ್ಪಿನ ಮಾನದಿಗೆ "ಹೇಮಲತಾ" ಮೊಕ್ಲೆಗ್ ರಡ್ಡ್ ಜನಕ್ ಸಂದುಂಡು. ಎಸ್. ಆರ್ ರಾಜನ್ ಪನ್ಪಿನಾರ್ ಉಂದೆನ್ ನಿರ್ದೇಶನ ಮಲ್ತದ್ ಇತ್ತೆರ್. ಉಂದು ಪಿಚ್ಚರ್ ನ್ 1970 ಡ್ ಮಲ್ಪರೆ ಸುರು ಮಲ್ತದ್,1971 ಡ್ ಮುಗಿಯುಂಡು.ನಮ್ಮ ಜ್ಯೋತಿ ಟಾಕೀಸ್ ಡ್ ಫೆಬ್ರುವರಿ 19 ಗ್ ಉಂದು ಬಿಡುಗಡೆ ಆದ್ ಇತ್ತಂಡ್.ಈ ವರ್ಷದ ಫೆಬ್ರುವರಿ 19,2021 ಗ್ ಸರಿಯಾದ  ಈ ಪಿಚ್ಚರ್ ಗ್ ಐವ್ವ ವರ್ಷ ಆಪುಂಡು.ತುಳು ಪಿಚ್ಚರ್ ದ ಅಭಿಮಾನಿಲೆಗ್ ಲ ಉಂದು ಒಂಜಿ ಕುಸಿತ  ವಿಷಯನೇ ಸರಿ.  ಸುರುತ ಪಿಚ್ಚರ್ "ಎನ್ನ ತಂಗಡಿ" ಆಯಿ ಬೊಕ್ಕ ಅವ್ವೇ ವರ್ಷ ಕೆ.ಎನ್ ಟೈಲರ್ ಮೆರೆನ "ದಾರೆದ ಬುಡೆದಿ " ಬತ್ತ್ಂಡ್. ಉಂದು ನಮನ ತುಳು ಚಿತ್ರರಂಗದ ರಡ್ಡನೇ ಪಿಚ್ಚರ್. ಅವ್ವ್ ಆಯಿ ಬೊಕ್ಕ "ಬಿಸತ್ತಿ ಬಾಬು" 1972 ಡ್ ಬತ್ತ್ಂಡ್. ಉಂದು ರಾಜ್ಯ ಪ್ರಶಸ್ತಿ ಪಡೆಯಿನ ಸುರುತ ತುಳು ಪಿಚ್ಚರ್. 1973 ಡ್ "ಕೋಟಿ ಚೆನ್ನಯ" ಪಿಚ್ಚರ್

ಆವಾಗ ಅದು ಬರೀ ಮೂರ್ಖರ ಪೆಟ್ಟಿಗೆ ಆಗಿರಲಿಲ್ಲ..

Image
  ನಾನು ಮೊದಲು ಈ ಡೈನಾಸೋರ್ ಗಳನ್ನು ನೋಡಿದ್ದೇ ಈ ಟಿವಿ ಪರದೆಯಲ್ಲಿ.ಹಾಗಾದರೆ ಆಮೇಲೆ ನೀನು ನಿಜ ಡೈನಾಸೋರ್ ಗಳನ್ನು ಕೂಡ ಬಹಳ ಹತ್ತಿರ ಹೋಗಿ ಮುಟ್ಟಿ,ಮುದ್ದಾಡಿ ಎಲ್ಲಾ ನೋಡಿದ್ದಿಯಾ.. ಎಂದೆಲ್ಲ ಕೇಳ್ಬೇಡಿ ಆಯ್ತ, ಡೈನಾಸೋರ್ ಗಳು ಹೇಗಿರುತ್ತವೆ ಎಂಬ ಒಂದು  ಕಲ್ಪನೆಯನ್ನು ನನ್ನಂತೆ ಹೆಚ್ಚಿನವರಿಗೆ ಮೊದಲ ಬಾರಿಗೆ ತೋರಿಸಿ ಕೊಟ್ಟಿದ್ದೇ ಈ ಟಿವಿ ಅಲ್ಲವೇ ಅದಕ್ಕಾಗಿ ಹಾಗೆ ಹೇಳಿದೆ ಅಷ್ಟೇ. ಟಿವಿ ಎಂದರೆ ಬರೀ ಒಂದಲ್ಲ ಅದು ಹತ್ತು ಹಲವು ಬಾಲ್ಯದ  ನೆನಪುಗಳ ಬಣ್ಣ ಬಣ್ಣದ ಗೊಂಚಲು.ಅದರಲ್ಲಿ ಮೊತ್ತ ಮೊದಲನೆಯ ನೆನಪೇ ನಮ್ಮ  ಪಕ್ಕದ ಮನೆಯ ಅಂಬಕ್ಕನ  ಮನೆಯ ಟಿವಿ.ಆಗ ನಾನು ಬಹಳ ಚಿಕ್ಕವನಿದ್ದೆ.ಸಮಯವಿದ್ದಾಗಲೆಲ್ಲ ಅಂಬಕ್ಕನ ಮನೆಗೆ ಹೋಗಿ ಟಿವಿ ನೋಡುತ್ತಿದ್ದೆ.ನಾನು ಶಕ್ತಿಮಾನ್ ಮೊದಲಿಗೆ  ನೋಡಿದ್ದೆ ಅವರ ಮನೆಯ ಟಿವಿಯಲ್ಲಿ. ಆಗ ಮನೆಯಲ್ಲಿ ಟಿವಿ ಇರಲಿಲ್ಲ.  ನನಗೆ ಬಾಲಮಂಗಳ ಓದುವಾಗ ಲಂಬೋದರನಿಗೆ ಶಕ್ತಿಮದ್ದಿನ ಲೇಹ್ಯ ತಯಾರಿಸಿ ಕೊಡುವ ವೈದ್ಯರು ನಮ್ಮ ಮನೆಯ ಪಕ್ಕದ ಮನೆಯಲ್ಲಿಯೇ ಇದ್ದಿದ್ದರೆ,ನಾನೂ ಕೂಡ ಶಕ್ತಿಮದ್ದು ಸೇವಿಸಿ ತುಂಬಾನೇ ಶಕ್ತಿಶಾಲಿ ಆಗಿ,ದೊಡ್ಡ ತರಗತಿಯ ಹುಡುಗರನ್ನು ಎಷ್ಟೊಂದು ಸುಲಭವಾಗಿ ಹಣ್ಣುಗಾಯಿ ನೀರುಗಾಯಿ ಮಾಡುಬಹುದಿತ್ತು ಎಂದು ಅನ್ನಿಸುತ್ತಿದ್ದರೆ... ಅಂಬಕ್ಕನ ಮನೆಯ ಟಿವಿಯಲ್ಲಿ ಶಕ್ತಿಮಾನ್ ನೋಡುವಾಗ ಯಾವುದಾದರೂ ಕಟ್ಟಡದ ಮೇಲೆ ಹೋಗಿ ಹಾಗೇ ಸುಮ್ಮನೆ ಕೆಳಗೆ ಹಾರಿ ಬಿಡುವ ಅಂತ ಅನ್ನಿಸುತ್ತಿತ್ತು.ಏಕೆಂದರೆ ಕಾಪಾಡಲು ಶ

Drishyam - 2

Image
ಪರಿಮಳದ ಫಿಲ್ಟರ್ ಕಾಫಿ ಕುಡಿದ ನಂತರವೂ ಅದರ ಘಮವೊಂದು ಕ್ಷಣಕಾಲ ಹೇಗೆ ಬಾಯಿ ತುಂಬಾ ಹಾಗೇ  ಆವರಿಸಿಕೊಂಡಿರುವುದೋ,ಅದೇ ರೀತಿ ಈ ಮೂವಿ ಕೂಡ. ಆದರೆ ಇಲ್ಲಿ ಇದರ ಪ್ಲೇವರ್ ಕ್ಷಣಕ್ಕಿಂತಲೂ ದೀರ್ಘವಾಗಿದೆ... ಒಬ್ಬ ಹೀರೋ ಹೇಗಿರಬೇಕು? ಸರಳವಾಗಿ ಹೇಳಬೇಕೆಂದರೆ ಅವನು ನಮ್ಮ ನಿಮ್ಮಂತೆ ಸಾಮಾನ್ಯನಂತೆಯೇ ಇರಬೇಕು.ಯಾವಾಗ ನೋಡಿದರೂ  ಅವನೇ ಗಾಳಿಯಲ್ಲಿ ಹಾರಿಕೊಂಡು ಕೆಳಗೆ ನಿಂತ ಐವತ್ತು ಜನ ಅಸಮಾನ್ಯ ವಿಲನ್ ಗಳಿಗೆ ಹೊಡೆಯುವುದಲ್ಲ.ಹೀರೋ ಅದವನು ಸಾಮಾನ್ಯರಂತೆ ಉಳಿದವರಿಂದ ಕೂಡ ಚೆನ್ನಾಗಿ ಹೊಡೆಸಿಕೊಂಡು ಹಣ್ಣುಗಾಯಿ ನೀರುಗಾಯಿ ಆಗುವುದು,ಅವನೂ ಕೂಡ ಹಾರೆ  ಪಿಕ್ಕಾಸು ಹಿಡಿದುಕೊಂಡು ಬಾಳೆಗಿಡ ನೆಡುವುದು,ತೋಟದಲ್ಲಿ ಗೊಬ್ಬರ ಹೊರುವುದು,ರಿಕ್ಷಾ ಬಿಡುವುದು..ಇದೆಲ್ಲ ಮಾಡುವ ಹೀರೋ ನಮಗೆ ಬಹಳ ಹತ್ತಿರವಾಗಿ ಬಿಡುತ್ತಾನೆ. ಹೀರೊಯಿನ್ ಹೇಗಿರಬೇಕು? ಹೀರೋಯಿನ್ ಎನಿಸಿಕೊಂಡವಳು ಕೇವಲ ಗ್ಲ್ಯಾಮರ್ ಗೆ ಮಾತ್ರ ಸೀಮಿತವಾಗದೇ,ಡಾನ್ಸ್ ಗೆ, ಡ್ಯುಯೆಟ್ ಗೆ,ಚಿತ್ರದಲ್ಲಿ ಹೆಸರಿಗೆ ಮಾತ್ರ ನಾಯಕಿ ಎಂದು ಆಗದೆ,ಅವಳು ಕೂಡ ಸಾಮಾನ್ಯ ಹೆಂಗಸರಂತೆ ಸೀರೆ ಉಟ್ಟುಕೊಂಡು,ಕತ್ತಿ ಹಿಡಿದುಕೊಂಡು ಗುಡ್ಡಕ್ಕೆ ಹೋಗಿ ಕಟ್ಟಿಗೆ ಒಟ್ಟು ಮಾಡುವುದು,ಮನೆಯಲ್ಲಿ ಮೀನು ಕ್ಲೀನ್ ಮಾಡುವುದು,ಹೊಳೆ ಬದಿ ಬಟ್ಟೆ ಒಗೆಯುವುದು, ತೆಂಗಿನ ಸಿಪ್ಪೆ ಸುಲಿಯುವುದು.. ಇದು ಕೂಡ ಮಾಡಿದರೆ ನಮ್ಮ ಮಹಿಳೆಯರಿಗೆ ಇವಳು  ನಮ್ಮವಳೇ ಅನ್ನಿಸದೇ ಇರದು. ಇನ್ನೂ ಸಾಮಾನ್ಯ ಜನರು ಮಾಡುವ ಅನೇಕ  ಇತ್ಯಾದಿಗಳನ್ನು ಆ

ನೀರಲ್ಲಾದರು ಹಾಕು ಹಾಲಲ್ಲಾದರು ಹಾಕು

Image
  ಜೀವನದಲ್ಲಿ ಹಣ ಎಲ್ಲರ ಬಳಿ ಇರುವುದಿಲ್ಲ. ಆದರೂ ಅವರಾರು ಬಡವರಲ್ಲ. ಅದೇ ರೀತಿ ಶ್ರೀಮಂತರಾಗಿದ್ದರೂ ಕೂಡ ಕೆಲವರು ನಿಜವಾಗಿಯೂ ಶ್ರಿಮಂತರಲ್ಲ. ಹೃದಯ ಶ್ರೀಮಂತಿಕೆಯೇ ಇಲ್ಲದೆ ಹೋದರೆ ಅವರಷ್ಟು ಕಡು ಬಡವರು ಈ ಜಗತ್ತಿನಲ್ಲಿಯೇ ಬೇರೆ ಯಾರೂ ಇರಲು ಸಾಧ್ಯವೇ ಇಲ್ಲ..!  ನಂದಿನಿ ತನ್ನ ತಂದೆ ತಾಯಿಯ ಮೂರು ಹೆಣ್ಣು ಮಕ್ಕಳಲ್ಲಿ ಹಿರಿಯ ಮಗಳು.ತಾರ ಮತ್ತು ರಾಣಿ ನಂದಿನಿಯ ಇಬ್ಬರು ಪ್ರೀತಿಯ ತಂಗಿಯರು.  ಮಗ ಅನ್ನುವ ಗಂಡು ಸಂತಾನ ರಾಮಣ್ಣ ಮತ್ತು ಸೀತಕ್ಕ ದಂಪತಿಗೆ ಇರದ ಕಾರಣ ಅವರ ಪಾಲಿನ ಮಗ ಮಗಳು ಎಲ್ಲವೂ  ನಂದಿನಿಯೇ ಆಗಿದ್ದಳು. ಸೀತಕ್ಕ ಹುಟ್ಟು ಪೋಲಿಯೊ ಪೀಡಿತೆ.ಒಂದು ಕಾಲನ್ನು ಸದಾ ಕುಂಟುತ್ತಲೇ ಅತ್ತಿಂದಿತ್ತ ಕಷ್ಟ ಪಟ್ಟು ನಡೆಯುವ ಅವರ ಪಾಲಿನ ಊರುಗೋಲು ಕೂಡ ಸ್ವತಃ ನಂದಿನಿಯೇ ಆಗಿದ್ದಳು.  ರಾಮಣ್ಣ ಪೇಟೆಯಲ್ಲಿ ತರಕಾರಿ ಮಾರುತ್ತಾರೆ.ಹೆಚ್ಚಿನ ದಿನ ಅವರಿಗೆ ಏನೂ ವ್ಯಾಪಾರ ಆಗುವುದೇ ಇಲ್ಲ.ತಕ್ಕ ಮಟ್ಟಿಗೆ  ವ್ಯಾಪಾರ ಆದ ದಿನ ಮನೆಗೆ ಬನ್ನು,ಹಣ್ಣು ಒಯ್ಯುತ್ತಾರೆ.ಆದರೆ ಇಡೀ ಮನೆಯ ಜವಾಬ್ದಾರಿಯನ್ನು  ತನ್ನ ಅಪ್ಪನ ಹೆಗಲ ಮೇಲೆ ಇರಿಸಲು ಮನಸ್ಸಾಗದೆ ತಾನೂ ಕೂಡ ರಾಮಣ್ಣನಿಗೆ ಕುಟುಂಬದ  ಭಾರ ಹೊರಲು ಹೆಗಲು ನೀಡಿ ಬಿಟ್ಟಳು ನಂದಿನಿ. ಎಲ್ಲರಿಗಿಂತ ಬೇಗ ಏಳುವ ನಂದಿನಿ,ಅಮ್ಮ ಅಪ್ಪನಿಗೆ ತಿಂಡಿ ಚಹಾ ಮಾಡಿಟ್ಟು,ಆ ನಂತರ ಹಟ್ಟಿಯಲ್ಲಿರುವ ಎರಡು ದನಗಳ ಹಾಲು ಕರೆದು,ಅದನ್ನು ಕ್ಯಾನ್ ನಲ್ಲಿ ಹಾಕಿಕೊಂಡು ಡೈರಿಗೆ ಹೋಗಿ ದಿನಾಲೂ ಹಾಲು ಹಾಕುತ್ತಾಳೆ.  ದನ