Posts

Showing posts from April, 2021

Grandmaster

Image
                                    #Grandmaster  ತಾನೊಂದು ಕೊಲೆ ಮಾಡುತ್ತೇನೆ ಎಂದು ಮೊದಲೇ ಹೇಳಿ, ಹೇಳಿದ ದಿನ ಹೇಳಿದ ಜಾಗದಲ್ಲಿಯೇ ನಿಖರವಾಗಿ ಕೊಲೆ ಮಾಡುವ ಕೊಲೆಗಾರ ಯಾವತ್ತೂ ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ  ಸಿಕ್ಕಾಪಟ್ಟೆ ಥ್ರಿಲ್ ಕೊಟ್ಟು ಬಿಡುತ್ತಾನೆ!  ಇದರ ಕಥೆ ಕೂಡ ಅಂತಹದ್ದೇ !!  ಪೋಲಿಸರಿಗೆ ಕಾಗದದ ಮೇಲೆ ಕಾಗದ ಬರೆದು ಒಂದು ನಿರ್ದಿಷ್ಟ ಪ್ಯಾಟರ್ನ್ ನಲ್ಲಿ ಅಂದರೆ Alphabetical Order ನಲ್ಲಿ ಒಂದಾದ ನಂತರ ಒಂದು ಕೊಲೆ ಮಾಡುತ್ತಾ ಹೋಗುವುದು ಮಾತ್ರವಲ್ಲ.. ಮುಂದೆ ನಡೆಯಬಹುದಾದ ಕೊಲೆಯ ಬಗ್ಗೆ ಕೂಡ ಸುಳಿವು ನೀಡುತ್ತಾ ತೆರೆ ಮರೆಯಲ್ಲಿ ನಿಂತು ಚಳ್ಳೆಹಣ್ಣು ತಿನ್ನಿಸುವ ಕೊಲೆಗಾರ ಇಲ್ಲಿ ಕೇವಲ ಹೆಂಗಸರ ಕೊಲೆ ಮಾತ್ರ ಮಾಡ್ತಾನೆ! ಆದರೆ ಪೋಲಿಸ್ ಅಧಿಕಾರಿ ಕೂಡ ತುಂಬಾನೇ ಬುದ್ಧಿವಂತ.  ಚದುರಂಗ ಆಡಲು ಅತಿಯಾಗಿ ಇಷ್ಟ ಪಡುವ ಅವನು ಚದುರಂಗದ ಆಟದ ರೀತಿಯಲ್ಲಿಯೇ ಕೊಲೆಗಾರನಿಗಾಗಿ ಕೆಲವೊಂದು ತನಿಖೆಯ ನಡೆಗಳನ್ನು ತನ್ನ ಕಂಟ್ರೋಲ್ ನಲ್ಲಿ ಇರುವಂತೆಯೇ ನಡೆಸುತ್ತಾನೆ,ಬಲೆ ಬೀಸುತ್ತಾನೆ.  ಕೊಲೆಗಾರ ಯಾರು?  ಏತಕ್ಕಾಗಿ ಆ ರೀತಿಯ ಕೊಲೆಗಳು?  ಪೋಲಿಸ್ ಅಧಿಕಾರಿ ನಡೆಸಿದ Gambit ನಿಜವಾಗಿಯೂ ಯಶಸ್ವಿಯಾಗುತ್ತಾ? ಕೊನೆಗೆ ಈ ಆಟದಲ್ಲಿ ಚೆಕ್ ಮೇಟ್ ಆಗುವುದು ಯಾರು?!! ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು.  2012 ರಲ್ಲಿ ಬಂದಂತಹ ಈ Action Thriller ಮಲಯಾಳಂ ಮೂವಿ #Grandmaster ಅನ್ನು B.Unnikrishnan ನಿರ್ದೇಶನ ಮಾಡಿದ್

ಸುಂದರ ಹೊಡೆತಗಳ ಆಟಗಾರ ಈ ಶರ್ಮರ ಹುಡುಗ..

Image
ಬಹಳ ಸುಂದರವಾಗಿ ಸ್ಟ್ರೈಟ್ ಡ್ರೈವ್ ಹಾಗೂ ಕವರ್ ಡ್ರೈವ್ ಗಳನ್ನು  ಬಾರಿಸುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್..ಬ್ಯಾಕ್ ಫುಟ್ ಹೊಡೆತಗಳ ಆಟಗಾರ ತಂಡದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್...ಕಣ್ಣುಗಳನ್ನು ಪಿಳಿ ಪಿಳಿ ಮಾಡುತ್ತಾ ಕ್ರೀಸ್ ನಿಂದ ಒಂದಷ್ಟು ಮುಂದಕ್ಕೆ ಬಂದು ಗಗನ ಚುಂಬಿ ಸಿಕ್ಸರ್ ಗಳನ್ನು ಬಾರಿಸುತ್ತಿದ್ದ ಬಂಗಾಲದ ದೊರೆ ಆಫ್ ಸೈಡಿನ ಗಾಡ್ ಸೌರವ್ ಗಂಗೂಲಿ... ಬಾಲ್ ಇರುವುದೇ ನನಗೆ ಗ್ರೌಂಡಿನ ಮೂಲೆ ಮೂಲೆಗೆ ಅಟ್ಟಲು ಎಂದು ಮನ ಬಂದಂತೆ  ದಾಂಧಲೆ ಮಾಡಿ ಕ್ರಿಕೆಟ್ ರಸಿಕರ ಮನತಣಿಸಿದ ವಿರೇಂದ್ರ ಸೆಹ್ವಾಗ್....ಎದ್ದು ಬಿದ್ದು ಆಟವಾಡಿ ಹೃದಯ ಗೆದ್ದ ಎಡಗೈ ಒಪನರ್ ಗೌತಮ್ ಗಂಭೀರ್... ರೊಚ್ಚಿಗೆದ್ದು ಆಡುತ್ತಿದ್ದ ಮುದ್ದು ಮುಖದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ... ಇವರೆಲ್ಲರ ನಂತರ ತಂಡದಲ್ಲಿ ನನಗೆ ಅತಿಯಾಗಿ ಇಷ್ಟ ಆದ ಆಟಗಾರ ಎಂದರೆ ಅದು ನಮ್ಮ ಶರ್ಮರ ಹುಡುಗ ರೋಹಿತ್. 2007 ರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಕಣ್ಣಿಗೆ ಬಿದ್ದ ಈ ರೋಹಿತ್ ಶರ್ಮ ಆ ನಂತರ ಅದ್ಯಾಕೋ ಗೊತ್ತಿಲ್ಲ ಇನ್ನಿಲ್ಲದಂತೆ ಇಷ್ಟವಾಗುತ್ತಾ ಹೋದ. ಅವನದೊಂದು ಆ Lazy Elegance ಜೊತೆ ಜೊತೆಗೆ Quality of Cricket Shots ಗಳು ಕಣ್ಣಿಗೆ ಹಬ್ಬವಾಗಿ ಕಾಣಲು ಆ ನಂತರ ಅದೇ ಬಿಡದೇ ಕಾಡಲು ಶುರುವಾಯಿತು. ನನಗೆ ಕ್ರಿಕೆಟ್ ನಲ್ಲಿ ಯಾರೇ ಇರಲಿ ಅದೊಂದು Art Form ಎಂಬಂತೆ ತುಂಬಾನೇ ಕಲಾತ್ಮಕತೆಯಿಂದ ಬ್ಯಾಟು ಬೀಸುವ ಆಟಗಾರರು ಬಲು ಬೇಗ ಇಷ್ಟ ಆಗಿ

ಸಂಜೆಯ ಕಾಫಿಗೆ ಒಂದೊಳ್ಳೆಯ ಹಲಸಿನ ಸೋಂಟೆ

Image
  .    #ಸಂಜೆಯ_ಕಾಫಿಗೆ_ಒಂದೊಳ್ಳೆಯ_ಹಲಸಿನ_ಸೋಂಟೆ ಈಗ ಸಂಜೆಯ ಕಾಫಿಗೆ ಕ್ರಿಸ್ಪೀ & ಸ್ಪೈಸಿ ಹಲಸಿನ ಸೋಂಟೆ ರೆಡಿ ಮಾಡಿಕೊಳ್ಳುವುದು ಹೇಗೆ ಎಂದು ನೋಡೋಣ ಆಯಿತಾ. ಇದು ಮಸಾಲೆ ಸೋಂಟೆ,ಹಾಗಾಗಿ ಲೈಟ್ ಆಗಿ ಖಾರ ಸ ಉಂಟು. ಇದು ಮಾಡುವುದು ತುಂಬಾ ಅಂದ್ರೆ ತುಂಬಾನೇ ಸುಲಭ. ಇದಕ್ಕಿಂತ ಸುಲಭದ ಕುರುಕಲು ತಿಂಡಿಯೇ ನಮ್ಮಲ್ಲಿಲ್ಲ. ಮೊದಲಿಗೆ ಚೆನ್ನಾಗಿ ಬಲಿತ ಹಲಸಿನ ಕಾಯಿಯ ಸೋಳೆಗಳನ್ನು ಉದ್ದಕ್ಕೆ ಸೀಳಿಕೊಂಡು ಕಟ್ ಮಾಡಿಕೊಳ್ಳಿ.  ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಬಿಡಿ. ನಮ್ಮಲ್ಲಿ ತೆಂಗಿನೆಣ್ಣೆ ಬಳಕೆ ಜಾಸ್ತಿ. ಹಾಗಾಗಿ ನಾನು ಇದಕ್ಕೆ ಅದನ್ನೇ ಬಳಸಿದ್ದೇನೆ.ತೆಂಗಿನೆಣ್ಣೆಯ ಹಲಸಿನ ಸೋಂಟೆಯೇ ತುಂಬಾ ಚೆನ್ನಾಗಿರುತ್ತದೆ.  ಎಣ್ಣೆ ಕಾದ ನಂತರ ಈ ಹಲಸಿನ ಸೋಳೆಗಳನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಕ್ರಿಸ್ಪಿ ಆಗುವಂತೆ ಕರಿಯಿರಿ.ಆ ನಂತರ ಎಣ್ಣೆಯಿಂದ ತೆಗೆದು ಬಿಡಿ.  ಈಗ ಒಂದು ಬೌಲ್ ಗೆ ಸ್ವಲ್ಪ ಉಪ್ಪಿನ ಹುಡಿ,ಸ್ವಲ್ಪ ಅರಶಿನ ಹುಡಿ,ಸ್ವಲ್ಪ ಮೆಣಸಿನ ಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಕರಿದ ಹಲಸಿನ ಸೋಳೆಗಳನ್ನು  ಈ ಮಿಕ್ಸ್ ಮಾಡಿ ಇಟ್ಟುಕೊಂಡಿರುವ ಮಸಾಲೆ ಹುಡಿಯೊಂದಿಗೆ ಹಾಗೇ ಮಿಕ್ಸ್ ಮಾಡಿ ಬಿಟ್ಟರೆ.. ಹಲಸಿನ ಮಸಾಲೆ ಸೋಂಟೆ ಸವಿಯಲು ಸಿದ್ದ.ತುಳು ಭಾಷೆಯಲ್ಲಿ ಇದಕ್ಕೆ ಸೋಂಟೆ ಎಂದು ಹೇಳುತ್ತೇವೆ. ಕನ್ನಡದಲ್ಲಿ ಇದಕ್ಕೆ ಹಲಸಿನ ಚಿಪ್ಸ್ ಅಂತ ಹೇಳ್ತಾರೆ. ಖಾರ ಏನೂ ಹಾಕದೇ ಬರೀ ಉಪ್ಪು ಹಾಕಿ ಸಾದ ಹಲಸಿನ ಸೋಂಟೆ ಕೂಡ ಮಾಡ

ಗಂಜಿಯ ಊಟಕ್ಕೆ ತೇರೆದ ಚಟ್ನಿ

Image
  ನೋಡಿ ಇದೇ ತೇರೆದ ಚಟ್ನಿ. ಇದಕ್ಕೆ ಹುಳಿಗಾಗಿ ಪುನರ್ ಪುಳಿ ಎಲೆಯನ್ನು ಹಾಕಿದ್ದು ಬಿಟ್ಟರೆ ಬೇರೆ ಯಾವುದೇ ಚಿಗುರೆಲೆಗಳನ್ನು ಹಾಕಿಕೊಂಡಿಲ್ಲ. ಹಲವು ಬಗೆಯ ಎಲೆಗಳ ಚಿಗುರುಗಳನ್ನು(ಹುಳಿ ಇಲ್ಲವೇ ಒಗರು ರುಚಿ ಹೊಂದಿರುವ) ಹಾಕಿ ಕೂಡ ಚಿಗುರೆಲೆಗಳ ಚಟ್ನಿ ಮಾಡಿಕೊಂಡರೆ ಅದೂ ಕೂಡ ಬಾರೀ ರುಚಿ ಆಯ್ತಾ. ಕಾಡು ಗುಡ್ಡಗಳಲ್ಲಿ ಇರುವ ಸೂಕ್ತ ಎಲೆಗಳನ್ನು ಆಯ್ದುಕೊಳ್ಳಲು ಗೊತ್ತಿದ್ದರೆ ಮಾತ್ರ ಅದನ್ನು ಮಾಡಲು ಹೋಗಿ.. ಇಲ್ಲದಿದ್ದರೆ ಎಂತೆಂತದೋ ವಿಷಕಾರಿ ಎಲೆಗಳನ್ನು ಹಾಕಿಕೊಂಡು ಚಟ್ನಿ ಮಾಡಿ ತಿಂದು ಸ್ವಯಂ ನೀವೇ ಮಟ್ಯಾಷ್ ಆಗಿ ಕಲಾಸ್ ಆಗುವ  ಸಂಭವ ಜಾಸ್ತಿ ಇರುತ್ತದೆ.ಸರಿಯಾಗಿ ಗೊತ್ತಿಲ್ಲದಿದ್ದರೆ ಅದನ್ನೆಲ್ಲ ಮಾಡಿ ಸುಮ್ಮನೆ ಯಾಕೆ ಸಾಯುವುದು ಅಲ್ವಾ..  ಈಗ ಇದನ್ನು ಬಹಳ ಸುಲಭವಾಗಿ ಮಾಡುವುದನ್ನು ಹೇಗೆ ಎಂದು ನೋಡುವ.. #ತೇರೆದ_ಚಟ್ನಿ_ಮಾಡುವ_ವಿಧಾನ.. ಮೊದಲು ಒಂದಷ್ಟು ತೇರೆದ ಚಿಗುರುಗಳನ್ನು ಹಾಗೂ ಸ್ವಲ್ಪ ಪುನರ್ ಪುಳಿ ಚಿಗುರುಗಳನ್ನು ಕಿತ್ತು ತಂದು ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು.ತೇರೆದ ಚಟ್ನಿಯ ಚಿಗುರು ಸ್ವಲ್ಪ ಜಾಸ್ತಿ ಇರಲಿ. ಹೇಳಿ ಕೇಳಿ ತೇರೆದ ಚಟ್ನಿ ಅಲ್ವಾ.. ಅದೇ ಕಮ್ಮಿ ಇದ್ದು ಪುನರ್ ಪುಳಿ ಎಲೆ ಜಾಸ್ತಿ ಇದ್ದರೆ ಆಗ ಇದು ಪುನರ್ ಪುಳಿ ಚಟ್ನಿಯಾಗುವ ಸಂಭವ ಅಧಿಕವಾಗಿರುತ್ತದೆ.ನಾವು ಹೆಸರಿಗೆ ಹೇಳಬಹುದು ಇದು ತೇರೆದ ಚಟ್ನಿ ಎಂದು,ಆದರೆ ಯಾವ ಎಲೆಯ ಪ್ರಮಾಣ ಜಾಸ್ತಿ ಇರುವುದೋ ರೂಲ್ಸ್ ಪ್ರಕಾರ ಅದೇ ಹೆಸರು ಚಟ್ನಿಯದ್ದಾಗಿರುತ್ತ

ನಮ್ಮೂರ ದ್ರಾಕ್ಷಿ ಗಿಡ ಈ ತೇರೆದ ಮರ..

Image
  ಗುಡ್ಡದ ಪಕ್ಕದಲ್ಲಿಯೇ ಒಂದಷ್ಟು ತೇರೆ ಮರದ ಚಿಗುರುಗಳು ಕಣ್ಣಿಗೆ ಬಿದ್ದವು.ಸೊಂಪಾಗಿ ಕೆಂಪಾಗಿ ಚಿಗುರು ಚಿಗುರಾಗಿ ಗಾಳಿಯ ಜೋಗುಳಕ್ಕೆ ತಲೆದೂಗುತ್ತಾ ಅದರಷ್ಟಕ್ಕೆ ನಳನಳಿಸುತ್ತಿತ್ತು.ಕೈ ಹಾಕಿ ಒಂದಷ್ಟು ಕುಡಿಗಳನ್ನು ಕಿತ್ತುಕೊಂಡೆ.ಇನ್ನೊಂದಿಷ್ಟು ಕಾಡು ಗಿಡಗಳ ಕೊಡಿಗಳನ್ನು ಜೊತೆ ಮಾಡಿ ಮರೆಯದೇ ಹುಳಿಯಾದ ಪುನರ್ ಪುಳಿ ಚಿಗುರುಗಳನ್ನು ಕೂಡ ಸೇರಿಸಿ ಬಿಟ್ಟರೆ.. ಮಧ್ಯಾಹ್ನದ ಬಿಸಿ ಗಂಜಿ ಊಟಕ್ಕೊಂದು ಆಹಾ..ಎಂದು ಬಾರಿಸಬಹುದಾದ ಸೊಗಸಾದ ಚಟ್ನಿ ರೆಡಿಯಾಗುವುದು.  ವಿ.ಸೂ - ತೇರೆದ ಮರ(ಚೇರೆ/ಗೇರ್ಕಾಯಿ/ಗೇರೆ/)ಎಲ್ಲರನ್ನೂ ಹಾಗೇ ಬರಸೆಳೆದು ಅಪ್ಪಿಕೊಳ್ಳುವುದಿಲ್ಲ.ಕೆಲವರಿಗೆ ಅದರ ಮರದಡಿ ಹೋದರೂ ಮೈ ಕೈ ತುರಿಸುತ್ತದೆಯಂತೆ.ಹಾಗಾಗಿ ಒಟ್ರಾಸಿ ಅಬತರ ಕಟ್ಟಿಕೊಂಡು ಕೈ ಹಾಕಲು ಹೋಗಬೇಡಿ.ಅದರ ಸೋನೆ ಚರ್ಮವನ್ನು ತಕ್ಕ ಮಟ್ಟಿಗೆ ಘಾಸಿ ಮಾಡಬಲ್ಲದು.ಕಣ್ಣಿಗೆ ಅಂತು ಅದು ಬೀಳಲೇ ಬಾರದು.ನನಗೆ ಸದ್ಯಕ್ಕೆ ಏನೂ ಆಗಿಲ್ಲ.ತಕ್ಕ ಮಟ್ಟಿನ ಅಭ್ಯಾಸ ಇರುವುದರಿಂದ ಈ ಗಿಡಕ್ಕೂ ನನ್ನದೊಂದು ಪರಿಚಯವಿದೆ.ಹಾಗಾಗಿ ಏನೂ ಮಾಡುವುದಿಲ್ಲ ಎಂಬ ಹುಂಬ ಧೈರ್ಯ ನನ್ನದು. ಇದರ ಹೂವು ಜೇನು ಹುಳುಗಳಿಗೆ ಬಹಳ ಪ್ರೀಯವಂತೆ. ಇದರಲ್ಲಿ ಹೂ ಜಾಸ್ತಿ ಆದರೆ ಕಾಡು ಗುಡ್ಡಗಳಲ್ಲಿ ಹೇರಳವಾಗಿ ಜೇನು ಆಗುವುದು ಎಂಬ ಒಂದು ನಂಬಿಕೆ ಇದೆ.ಇದರ ಹಣ್ಣು ನೇರಳೆ ಇಲ್ಲವೇ ದ್ರಾಕ್ಷಿಗಿಂತಲೂ ನೋಡಲು ಬಹಳ ಸೊಗಸಾಗಿ ಕಾಣುವುದು ಮಾತ್ರವಲ್ಲ ತಿನ್ನಲು ಇನ್ನಿಲ್ಲದಂತೆ ಅತಿಯಾದ ಆಸೆ ಹುಟ್ಟಿಸುತ್ತದೆ.ಇ

ಒಂದೇ ನೋಟ ಎರಡು ಗುರಿ!

Image
  ನಾನು ಅದೆಂತಹ ಶಾರ್ಪ್ ಶೂಟರ್ ಎಂದರೆ.. ಗುರಿ ಇಟ್ಟು ಜೋರಾಗಿ ಬೀಸಿದ ಜಲ್ಲಿ ಕಲ್ಲಿಗೆ ಎರಡು ಮಾವು ಹಾಗೇ ಕೆಳಗೆ  ಉದುರಿ ಬಿಟ್ಟಿತು,ಒಂದು ಕಲ್ಲು ಮಾತ್ರ ಪಕ್ಕದ ಮನೆಯೊಂದರ ಮೇಲೆಯೇ ಬಿದ್ದು ಫಟ್ ಅಂತ ಜೋರಾದ ಶಬ್ಧ ಕೂಡ ಬಂತು.. ಬಹುಶಃ ಅವರ ಮನೆಯ ಹೆಂಚು ಒಡೆದು ಪೀಸ್ ಪೀಸ್ ಆಗಿರಬೇಕು. ಏಕೆಂದರೆ ಮನೆಯೊಳಗಿನಿಂದ "ಸೈತೆರ್ ಮಾರಿಲು(ದುಷ್ಟರು ಆಕ್ರಮಣ ಮಾಡಿದ್ದಾರೆ,ಹಿಡಿಯಿರಿ ಬಡಿಯಿರಿ).. " ಎಂಬ ಆಕ್ರೋಶದ ಬೊಬ್ಬೆ ಕೇಳಿ ಬರ್ತಾ ಉಂಟು.ನಾನು ಈಗ ವೇಗವಾಗಿ ಓಡಬೇಕು.. 🏃🏻‍♂️🏃🏻‍♂️ ದೇವರೇ.. ಅವರ ಮನೆಯ ಹೆಂಚು ಒಡೆಯದೇ ಇರಲಿ,ಇಲ್ಲದಿದ್ದರೆ ದೊಡ್ಡ Issue ಆಗ್ತದೆ.ಏಕೆಂದರೆ ಈ ಹಿಂದೆ ನಾನು ಆ ಮನೆಯದ್ದೇ ಹೆಂಚು ಒಡೆದು ಹಾಕಿದ ತುಂಬಾ ಕರಾಳ  ಇತಿಹಾಸ ಬೇರೆ ಉಂಟು.ಮಾತ್ರವಲ್ಲ ಬೇರೆ ಯಾರೇ ಒಡೆದು ಹಾಕಿದ್ದರೂ ಸ ಅದು ನಾನೇ ಎಂಬ ಆರೋಪ ಕೂಡ ತುಂಬಾ ಸಲ ಎದುರಿಸಿದ್ದೇನೆ.. ಶೇ.. ಬೆಳಿಗ್ಗೆ ಬೆಳಿಗ್ಗೆಯೇ.... ಎಂತ ಅವಸ್ಥೆ ಮರ್ರೆ.. #ಮಾ_ಅಂದರೆ_ಮಾವು ಎರಡನೆಯ ಅಳೆ ಪಚ್ಚುಪಟಗಳು  ab

Mumbai Police

Image
  ಅವರಿಬ್ಬರು  ಪೋಲಿಸರು ಹಾಗೂ ಅಷ್ಟೇ ಒಳ್ಳೆಯ ಗೆಳೆಯರು. ಒಬ್ಬ ಓಕೆ ಓಕೆ ಟೈಪ್ ಜನ ಆಗಿದ್ದರೆ ಮತ್ತೊಬ್ಬನಂತು ತುಂಬಾನೇ ಖಡಕ್,ರಗಡ್ ಹಾಗೂ ಸ್ವತಃ ಪೋಲಿಸ್ ಡಿಪಾರ್ಟ್‌ಮೆಂಟ್ ಗೆನೇ ವಿಪರೀತ ಕಿರಿಕಿರಿ ಅಂತೆನಿಸುವ ಮನುಷ್ಯ. ಒಂದು ರಾತ್ರಿ ಇಂಡಿಯನ್ನೇ ನೇವಿಯ ಹುಡುಗರೊಂದಿಗೆಯೇ ಅವರಿಬ್ಬರು ಸಿಕ್ಕಾಪಟ್ಟೆ ಕಿರಿಕಿರಿ ಮಾಡಿಕೊಳ್ಳುತ್ತಾರೆ! ಆ ನಂತರ ಅವರಿಬ್ಬರಲ್ಲಿ ಒಬ್ಬ ಸ್ಟೇಜ್ ಮೇಲೆ ಗ್ಯಾಲಂಟರಿ ಆವಾರ್ಡ್ ತೆಗೆದುಕೊಂಡು ಸ್ಪೀಚ್ ಕೊಡುತ್ತಿರುವ ಸಂದರ್ಭದಲ್ಲಿ... ಸ್ನೈಪರ್ ಬಳಸಿ ತುಂಬಾ ದೂರದಿಂದಲೇ ಗುಂಡಿಕ್ಕಿ ಕೊಲ್ಲಲಾಗುತ್ತದೆ!! ಈಗ ಉಳಿದ ಮತ್ತೊಬ್ಬ ಪೋಲಿಸ್ ಆಫೀಸರ್ ತನ್ನ ಗೆಳೆಯನ ಕೊಲೆಯ ತನಿಖೆಯನ್ನು ಕೈಗೆ ತೆಗೆದುಕೊಂಡು ಕೊಲೆಗಾರನನ್ನು ಪತ್ತೆ ಹಚ್ಚಲು ಶುರು ಮಾಡುತ್ತಾನೆ. ಅವನಿಗೆ ಕೊನೆಗೊಂದು ದಿನ ಕೊಲೆಗಾರ ಯಾರು ಎಂದು ಕೂಡ ಗೊತ್ತಾಗುತ್ತದೆ. ಆದರೆ ಅದನ್ನು ಜಗತ್ತಿನೆದುರು ಸಾಬೀತು ಪಡಿಸುವ ಮೊದಲೇ ಅವನಿಗೆ ರೋಡ್ Accident ಆಗಿ ಅವನ ನೆನಪುಗಳೆಲ್ಲವೂ ತಾತ್ಕಾಲಿಕವಾಗಿ ಮರೆತು ಹೋಗಿರುತ್ತದೆ.! ಅವನಿಗೆ ಈ ರೀತಿಯಾಗಿ Partial memory loss ಆಗಿರುವ ವಿಷಯ..ಅವನಿಗೆ,ವೈದ್ಯರಿಗೆ ಮತ್ತು ಅವನ ಹಿರಿಯ  ಆಫೀಸರ್ ಗೆ ಒಬ್ಬರಿಗೆ ಅಷ್ಟೇ ಗೊತ್ತಿರುತ್ತದೆ. ಈ ವಿಷಯವನ್ನು ಹೊರಗಿನ ಯಾರಿಗೂ ಗೊತ್ತು ಪಡಿಸದೇ ಆ ಹಿರಿಯ ಆಫೀಸರ್.. ಅವನನ್ನೇ ಮತ್ತೆ ಅವನ ಸ್ನೇಹಿತನ ಕೊಲೆಯ ತನಿಖೆ ಮುಂದುವರಿಸಲು ಹೇಳುತ್ತಾನೆ! ಅವನೂ ಕೂಡ ಕಷ್ಟಪ

Vaarikkuzhiyile Kolapathakam

Image
  ಅದೊಂದು Backwaters ನಿಂದ ಆವೃತ್ತವಾದ ಚಿಕ್ಕ ದ್ವೀಪದಂತಹ ಪ್ರದೇಶ. ಆ ನಡುವಿನ ಪುಟ್ಟ ಹಳ್ಳಿಯಲ್ಲಿ ಒಂದು ರಾತ್ರಿ ಒಂದು ಕೊಲೆ ನಡೆಯುತ್ತದೆ! ಕೊಲೆ ಮಾಡಿ ಒಬ್ಬನನ್ನು ಗುಂಡಿ ತೆಗೆದು ಹೂಳಲಾಗುತ್ತದೆ! ಆದರೆ ಕೊಲೆ ನಡೆಯುವುದನ್ನು ಆ ಊರಿನ ಚರ್ಚಿನ ಫಾದರ್ ಮರೆಯಲ್ಲಿ ನಿಂತು ನೋಡಿರುತ್ತಾರೆ! ಚರ್ಚಿನ ಫಾದರ್ ನೋಡಿರುವುದನ್ನು ಕೊಲೆಗಾರ ಕೂಡ ಸೂಕ್ಷ್ಮವಾಗಿ ಗಮನಿಸುತ್ತಾನೆ. ಅದೇ ದಿನ ಆ ಕೊಲೆಗಾರ ಚರ್ಚಿಗೆ ಬಂದು ಫಾದರ್ ಬಳಿ Confession ಮಾಡ್ತಾನೆ. ನಾನೊಂದು ಕೊಲೆ ಮಾಡಿದ್ದೇನೆ ಎಂದು! ಅವನಿಗೂ ಗೊತ್ತು Confess ಮಾಡಿದ ನಂತರ ಫಾದರ್ ಯಾರಿಗೂ ತಾನು ಹೇಳಿರುವ ವಿಷಯವನ್ನು ಬಹಿರಂಗ ಪಡಿಸಲ್ಲ ಎಂದು.ನಿಯಮ ಪ್ರಕಾರ ಮಾಡಬಾರದು. ಆದರೆ ಫಾದರ್ ಗೆ ಏನೋ ಸಮಾಧಾನವಿಲ್ಲ. ಅವರಿಗೆ ಕೊಲೆಗಾರನಿಗೆ ಶಿಕ್ಷೆ ಆಗಲೇಬೇಕೆಂದು ಇರುತ್ತದೆ.ಆದರೆ ನಿಯಮ ಮುರಿಯಲು ಅವರಿಗೆ ಕೂಡ ಮನಸ್ಸಿಲ್ಲ. ಈ ಫಾದರ್ ಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೊಲೆಗಾರ  ಧೈರ್ಯದಲ್ಲಿಯೇ ಇರುತ್ತಾನೆ. ಆದರೆ ಕಣ್ಣ ಮುಂದೆಯೇ ಆರಾಮವಾಗಿ ತಿರುಗಾಡುತ್ತಿರುವ  ಕೊಲೆಗಾರನಿಗೆ ಫಾದರ್  ಚಾಲೆಂಜ್ ಮಾಡ್ತಾರೆ... ನಾನು ಬಾಯಿ ಬಿಡಲ್ಲ,ಆದರೆ ನಿನಗೆ ಶಿಕ್ಷೆ ಸಿಗುವಂತೆ ಮಾಡುತ್ತೇನೆ ಎಂದು! ಆದರೆ ಹೇಗೆ?.. ಕೊಲೆ ಆದವನು ಯಾರು? ಏತಕ್ಕಾಗಿ ಕೊಲೆ ಆದ..? ಇದುವೇ ಈ ಮೂವಿಯ ಕಥೆ. 2019 ರಲ್ಲಿ ಬಂದಂತಹ ಈ Mystery Thriller ಮಲಯಾಳಂ ಮೂವಿ  #Vaarikkuzhiyile_Kolapathaka

Diamond Necklace

Image
  ಅವನು ವೃತ್ತಿಯಲ್ಲಿ ಡಾಕ್ಟರ್. ಸಿಕ್ಕಾಪಟ್ಟೆ ಸಾಲಗಾರನಾಗಿರುವ ಆತ ಸ್ವಲ್ಪ ರಸಿಕನೂ ಕೂಡ ಹೌದು. ದುಬೈ ಆಸ್ಪತ್ರೆಯೊಂದರಲ್ಲಿ Oncology ವಿಭಾಗದಲ್ಲಿ ಅವನಿಗೆ ಕೆಲಸ.  ಮೊದಲು ಆಸ್ಪತ್ರೆಯ ನರ್ಸ್ ಜೊತೆ ಅವನು ಪ್ರೇಮದ ಬಲೆಯಲ್ಲಿ ಬೀಳುತ್ತಾನೆ. ನಂತರ ತನ್ನ ಪೇಷೆಂಟ್ ಜೊತೆ ಕೂಡ ಅವನು ಡ್ಯುಯೆಟ್ ಸಾಂಗ್ ಹಾಡುತ್ತಾನೆ. ಊರಿಗೆ ಬಂದಾಗ ಮನೆಯವರ ಮಿತಿ ಮೀರಿದ ಒತ್ತಾಯ, ಮುಗಿಲು ಮುಟ್ಟಿದ ಆಕ್ರಂದನ, ಆಕ್ರೋಶಕ್ಕೆ ಮಣಿದು ಒಬ್ಬಳನ್ನು ಮದುವೆ ಕೂಡ ಆಗಿ ಮತ್ತೆ ದುಬೈಗೆ ಮರಳುತ್ತಾನೆ. ಡಾಕ್ಟರ್ ಆದರೂ ಎಲ್ಲಾ ಬ್ಯಾಂಕುಗಳಲ್ಲಿ ಸಿಕ್ಕಾಪಟ್ಟೆ ಲೋನ್ ಇರುವ ಅವನಿಗೆ ಲೈಫ್ ಕಷ್ಟ ಆದಾಗ ತನ್ನ ಪೇಷೆಂಟ್ ನದ್ದೇ  Diamond Necklace ಮೇಲೆ ಕಣ್ಣು ಬೀಳುತ್ತದೆ.ನಂತರ ಈ Necklace ಸುತ್ತವೇ ಈ ಚಿತ್ರದ ಕಥೆ ಸಾಗುತ್ತದೆ.  Romantic Drama ಆಗಿರುವ ಈ ಮೂವಿಯಲ್ಲಿ ಅಲ್ಲಲ್ಲಿ ಕಾಮಿಡಿ,ಒಂದೆರಡು ಚಂದದ ಹಾಡು ಕೂಡ ಇದೆ.2012 ರಲ್ಲಿ ಬಂದಂತಹ ಇದನ್ನು Lal Jose ನಿರ್ದೇಶಿಸಿದ್ದಾರೆ. Fahadh Faasil, Anusree, Samvrutha Sunil, Gauthami Nair ಮುಂತಾದವರ ಅಭಿನಯವಿದೆ. Nilamalare,Thotte Thotte  ಡೌನ್‌ಲೋಡ್ ಮಾಡಿಕೊಂಡು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳು.ಈ ಮೂವಿ ನೋಡಲೇಬೇಕು ಎಂದು ಹೇಳಲಾರೆ,Fahadh ನ ಲೈಟ್ ಕಾಮಿಡಿ ಇಷ್ಟ ಪಡುವವರಿಗೆ ಇದೂ ಕೂಡ ಇಷ್ಟ ಆಗಬಹುದು.ಈ #Diamond_Necklace ಮೂವಿ MX Player ನಲ್ಲಿ ಇದೆ.  #Movies  ab

ಆವೆ ಮಣ್ಣಿನ ಅಂಗಣಕ್ಕೆ ಅವನೊಬ್ಬನೇ ಗೂಳಿ.. ಹೆಸರು Rafa!

Image
  ಒಂದು ಕಡೆ ಸ್ವಿಸ್ ನ ಬಹು ಸುಂದರ ಆಟಗಾರ  ಪೆಡರರ್,ಮತ್ತೊಂದು ಕಡೆ  ಸರ್ಬಿಯಾದ ಸಪೂರ ಹುಡುಗ ಜೊಕೋವಿಕ್,ಇವರಿಬ್ಬರೊಂದಿಗಿನ ತನ್ನದೊಂದು Rivalry ಯಲ್ಲಿ ತನ್ನ ಹಿಡಿತವನ್ನು ಆವಾಗವಾಗ ಗಟ್ಟಿ ಗೊಳಿಸುತ್ತಾ,ಬಿದ್ದಾಗಲೆಲ್ಲ ಬಲು ಬೇಗ ಎದ್ದು ವೇಗವಾಗಿ ತನ್ನ ಕೈಯಲ್ಲಿರುವ racket ಬೀಸುತ್ತಾ.. ಆವೆ ಮಣ್ಣಿನ ಅಂಗಣ ಇರುವುದೇ ತಾನು ದೂಳೆಬ್ಬಿಸಲು,ಮಾತ್ರವಲ್ಲ ಪ್ರೆಂಚ್ ಓಪನ್ ಎಂದರೆ ಅದು ತಾನು,ನಾನು ಎಂದರೆ ಕ್ಲೇ ಕೋರ್ಟ್ ಎಂದು ಸಾರಿ ಸಾರಿ ಜಗತ್ತಿಗೆ ಹೇಳಿದ,ಪ್ರತೀ ಸಲ ಪ್ರೂವ್ ಮಾಡಿ ತೋರಿಸಿದ,ಬಲು ಸುಂದರ ಟೆನಿಸ್ ಆಟದಲ್ಲಿ ತೀರಾ ಒರಟನಂತೆ ಕಾಣುವ ಆವೆ ಮಣ್ಣಿನ ಅಂಗಣದ ರಾಜನಿಗೆ ಮತ್ತು ಸ್ಪೆನ್ ನ ಗೂಳಿಗೆ ಈಗ ಹನ್ನೆರಡನೆಯ ಬಾರಿಗೆ Barcelona Open ಪ್ರಶಸ್ತಿಯ ಗೌರವ. ನೋಡುವ ಆಸಕ್ತಿ ಇದ್ದರೆ ಕ್ರಿಕೆಟ್ ಗಿಂತಲೂ ತುಂಬಾ ಶಿಸ್ತಿನ ಹಾಗೂ ಅತೀ ಸುಂದರ ಗೇಮ್ ಎಂದು ಅನ್ನಿಸುವ, ಅತ್ಯಂತ ಹೆಚ್ಚಿನ ದೈಹಿಕ ಸಾಮರ್ಥ್ಯ ಬೇಡುವ ಟೆನ್ನಿಸ್ ಆಟದಲ್ಲಿ ನಿಮಗೆ Big Three (Federer,Djokovic,Rafa) ಯಲ್ಲಿ ಯಾರಾದರೂ ಒಬ್ಬರು ಇಷ್ಟ ಆಗಿಯೇ ಆಗುತ್ತಾರೆ. ಕೆಲವರಿಗೆ ಚಾಂಪಿಯನ್ ಆಟಗಾರ ಉದ್ದದ ವಿಂಬಲ್ಡನ್ ದೊರೆ 20 Grand Slam ಗಳ ಸರದಾರ ಫೆಡರರ್ ಇಷ್ಟ ಆಗ್ತಾನೆ.ಗ್ರಾಸ್ ಕೋರ್ಟ್ ಅಲ್ಲಿ ಗೆದ್ದಾಗ ಹುಲ್ಲು ತಿಂದು ಪ್ರೇಕ್ಷಕರನ್ನು ರಂಜಿಸುವುದು ಮಾತ್ರವಲ್ಲ ತಾನು ಕೂಡ ಯಾರಿಗೂ ಕಮ್ಮಿ ಇಲ್ಲ ಎಂದು ಪದೇ ಪದೇ ಟಕ್ಕರ್ ಕೊಡುವ 18 Grand slam ಗಳನ

ನಿಜವಾಗಿಯೂ ಕನ್ನಡದ ಪಾಲಿಗೆ ಅವರು ವರನಟನೇ ಹೌದು..

Image
  ರಾಜಕುಮಾರ್ ಹಾಡಿದ ಹೆಚ್ಚಿನ ಹಳೆಯ ಹಾಡುಗಳು ನನಗೆ ಇಷ್ಟ.ಈಗಲೂ ನನ್ನ ಬಳಿ ಅವರ ಹಾಡುಗಳ ಸಾಕಷ್ಟು ಸಂಗ್ರಹ ಇದೆ.ಆವಾಗವಾಗ ಕೇಳುತ್ತಲೇ ಇರುತ್ತೇನೆ.ಹಾಡು ಹಳೆಯದಾದರೇನು ಭಾವ ನವ ನವೀನ. ಹಳೆಯ ಸಾಹಿತ್ಯ ಕೂಡ ಅಷ್ಟೇ ಚಂದ,ಜೊತೆಯಲ್ಲಿ ರಾಜಕುಮಾರ್ ಅವರ ಹಿತವೆನಿಸುವ ಧ್ವನಿ.ಎಸ್.ಜಾನಕಿ,ಬಾಲಸುಬ್ರಹ್ಮಣ್ಯಂ,ಪಿ.ಬಿ ಶ್ರೀನಿವಾಸ್,ಅಶ್ವಥ್ ಅವರಂತೆಯೇ ಗಾಯಕ ರಾಜಕುಮಾರ್ ಕೂಡ ಎಂದಿಗೂ ಇಷ್ಟ ಆಗುತ್ತಾರೆ. ಏನೇ ಹೇಳಿ ರಾಜಕುಮಾರ್ ತುಂಬಾನೇ ಸ್ಪುರದ್ರೂಪಿ ನಟ ಕೂಡ ಹೌದು.ಈಗಲೂ ಪೌರಾಣಿಕ ಪಾತ್ರಗಳಾದ ಪಾರ್ಥ,ಕೃಷ್ಣದೇವರಾಯ,ಮಯೂರ,ಬಬ್ರುವಾಹನ,ಶ್ರೀಕೃಷ್ಣ, ಸತ್ಯ ಹರಿಶ್ಚಂದ್ರ,ಕಾಳಿದಾಸ.. ಎಂದರೆ  ರಾಜ್‌ಕುಮಾರ್ ಅವರೇ  ಕಣ್ಣ ಮುಂದೆ ಬಂದು ನಿಂತು ಬಿಡುತ್ತಾರೆ. ಆ ಕಣ್ಣು,ಆ ನಗು..ಎಲ್ಲಾ ನವರಸಗಳು.. ಆಹಾ.. ಆಹಾ.. ಅದರಲ್ಲೂ ಹಿರಣ್ಯಕಶಿಪುವಿನ ಆ ಉದ್ದದ ಡೈಲಾಗ್ .. " ಹ್ಞೂಂ... ನಾನಾರು ಕಶ್ಯಪ ಬ್ರಹ್ಮನ ಮಗ,ವಿಧಿಗರ್ಭ ಸಂಜಾತ ಚತುರ್ಮುಖ ಬ್ರಹ್ಮನ ಮೊಮ್ಮಗ....ವಿಧಾತನಿಂದ ವಿಧಿಬರಹವನ್ನೆ ಬದಲಾಯಿಸಿ ಮರಣವನ್ನೆ ಮೆಟ್ಟಿನಿಂತ ಮಹಾವೀರ,ಅದಿತಿಯ ಮಕ್ಕಳ ಅಟ್ಟಹಾಸವನ್ನ ಸುಟ್ಟು,ಆದಿತ್ಯನ ಅಟ್ಟಹಾಸವನ್ನು ಮಟ್ಟ ಹಾಕಿದ ಸಾಹಸಿ,ಅತಳ ವಿತಲ ಸುತಳ ರಸಾತಳ ತಳಾತಳ ಮಹಾತಳ ಪಾತಾಳಗಳನ್ನು ಪಾದದಡಿಯಲ್ಲಿ ತುಳಿದಿಟ್ಟ ಪರಾಕ್ರಮಶಾಲಿ... " ಈಗಲೂ ಪದೇ ಪದೇ ಕೇಳಬೇಕು ಎಂದೆನಿಸುತ್ತದೆ.  ಬಬ್ರುವಾಹನದ "ಏನು ಪಾರ್ಥ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನ

ಅನ್ನ ಕಡಿಮೆ ಸಾಕು ಇದ್ದಾಗ ಬಿಸಿ ಬಿಸಿ ಗುಜ್ಜೆ ಕಜಿಪು..

Image
  ಊಟಕ್ಕೆ ಒಂದೊಳ್ಳೆಯ ಗುಜ್ಜೆ ಕಜಿಪು(ಹಲಸಿನ ಪದಾರ್ಥ) ತಟ್ಟೆಯಲ್ಲಿ ಇದ್ದರೆ ಅನ್ನಕ್ಕಿಂತ ಗುಜ್ಜೆ ಕಜಿಪೇ ಜಾಸ್ತಿ ಬೇಕು ಎಂದೆನಿಸುತ್ತದೆ. ಹಲಸಿನ ಸೋಳೆಗಳು ಸ್ವಲ್ಪ ಬಲಿತ ನಂತರ ಹಾಗೇ ಅದನ್ನು ಪೆಲತರಿ(ಬೋಳೆ/ಬೀಜ) ಸಹಿತ ಎಲ್ಲವನ್ನು ಕೊಚ್ಚಿ ಮಾಡುವ ಸೊಗಸಾದ ಒಂದು ಗುಜ್ಜೆ ಕಜಿಪು ಉಂಟಲ್ಲಾ .. ಕೇವಲ ಊಟಕ್ಕೆ ಮಾತ್ರವಲ್ಲ ಮಳೆಗಾಲದಲ್ಲಿ ಆವಾಗವಾಗ ಬೇಕೆನಿಸಿದಾಗ ಒಂದು ದೊಡ್ಡ ಬೌಲ್ ನಲ್ಲಿ ಹಾಕಿಕೊಂಡು ಬಿಸಿ ಬಿಸಿಯಾಗಿ ತಿನ್ನುತ್ತಿದ್ದರೆ ಅದರದ್ದೊಂದು ಮಜಾನೇ ಬೇರೆ. ಗುಜ್ಜೆ ಕಜಿಪು ಇದ್ದಾಗ ಅನ್ನ ಅದರ ಮುಂದೆ ಯಾವತ್ತೂ ತಲೆ ಬಾಗುತ್ತದೆ.ದಕ್ಷಿಣ ಕನ್ನಡದ ಕೆಲವು ಮನೆಯಲ್ಲಿ ಕೇವಲ ಹಾಗೇ  ತಿನ್ನಲೆಂದೇ ಗುಜ್ಜೆ ಕಜಿಪು ಮಾಡುತ್ತಾರೆ.ಆ ರೀತಿಯ ಒಂದು ಮನೆಗಳಲ್ಲಿ ನನ್ನದೂ ಒಂದು ಮತ್ತು ನಾನು ಹೇಳಿ ಕೇಳಿ ಗುಜ್ಜೆ ಕಜಿಪಿನ ಅತೀ ದೊಡ್ಡ ಪ್ರೇಮಿಯು ಹೌದು.  ಬಾಲ್ಯ ಎಂಬ ಮಿಡಿ ಹಲಸಿಗೆ,ಯೌವನ ಎಂಬ ಕಾಯಿ ಹಲಸಿಗೆ ಹಾಗೂ ವೃದ್ಧಾಪ್ಯ ಎಂಬ ಪೆಲಕಾಯಿಗೆ(ಹಣ್ಣು ಹಲಸು) ಅದರದ್ದೇ ಆದ ಉಪಚಾರಗಳನ್ನು ಆಯಾಯ ಕಾಲದಲ್ಲಿ ಸರಿಯಾಗಿ ಮಾಡಿದರಷ್ಟೇ ಹಲಸಿನ ಜೀವನ  ಧನ್ಯವಾಗುವುದು,ನಮ್ಮ ಬಾಳಿನ ರುಚಿ ಹೆಚ್ಚಾಗುವುದು.  ಹಲಸು ಬಾಲ್ಯ ಎಂಬ ಕಲ್ಲಿಗೆ (ಮಿಡಿ) ಆಗಿದ್ದಾಗ ಅದರ ಸಿಪ್ಪೆ ತೆಗೆದು ತಲೆಗೆ ಗೂಟ ಹೊಡೆದು ಇಡಿಯಾಗಿ ಅದನ್ನು ಕೊಚ್ಚಿ ಅದರದ್ದೊಂದು ಪಲ್ಯ ಮಾಡಬೇಕು..ಕಲ್ಲಿಗೆಗಿಂತ ಸ್ವಲ್ಪ ದೊಡ್ಡದು ಆಗಿ ಯೌವನಾವಸ್ಥೆಗೆ ಬಂದಾಗ ಅದನ್ನು ಕಟ್ ಮಾಡಿ ಕೊದ್ದೆಲ್ ಗೆ

Iyobinte Pusthakam

Image
  #Iyobinte_Pusthakam!  ಕಾಡು,ಕ್ರೌರ್ಯ,ಕೊಲೆ,ಹೋರಾಟ,ಹೊಡೆದಾಟ,ಸೇಡು,ಸಂಚು, ಮುಗಿಯದ ಅತ್ಯಾಚಾರ,ನಿಲ್ಲದ ಅನಾಚಾರ...ನಡುವೆ ಒಂದು ಪ್ರೇಮ ಕಥೆ ಈ ಕಥೆ! ಮುನ್ನಾರ್ ಹಾಗೂ ಪಶ್ಚಿಮ ಘಟ್ಟದ ಹಸಿರ ಸೆರಗಿನಲ್ಲಿ ಈ ಕಥೆ ನಡೆಯುತ್ತದೆ.1900 ರ ಕಾಲಮಾನದ ಕಥೆ.ಕುಟುಂಬವೊಂದರ ಆಂತರಿಕ ಕಾದಾಟ ದಟ್ಟ ಕಾಡಿನೊಳಗೆ ಒಂಚೂರು ಸದ್ದಿಲ್ಲದೆಯೇ ಇನ್ನು ಕೆಲವೊಮ್ಮೆ ಬಂದೂಕಿನ ಅತೀ ದೊಡ್ಡ ಸದ್ದಿನೊಂದಿಗೆಯೇ ನಡೆಯುತ್ತದೆ! 2014 ರಲ್ಲಿ ಬಂದಂತ ಈ ಮಲಯಾಳಂ ಥ್ರಿಲ್ಲರ್ ನಲ್ಲಿ Fahadh Faasil, Jayasurya, Lal, Isha Sharvani, Padmapriya, Lena,Soubin Shahir.. ಮುಂತಾದವರ ಬಹು ದೊಡ್ಡ ತಾರಾಗಣವಿದೆ.Amal Neerad ಇದನ್ನು ನಿರ್ದೇಶಿಸಿದ್ದಾರೆ. ಇದರ ಪಾತ್ರಗಳ ಹೆಸರುಗಳು  Fyodor Dostoyevsky ಯ ರಷ್ಯನ್ ಕಾದಂಬರಿ The Brothers Karamazov ಆಧಾರಿತವಾದದ್ದು.ಈ ಮೂವಿ ಹಲವಾರು State Award ಗಳನ್ನು ಕೂಡ ಬಾಚಿಕೊಂಡಿದೆ.Movie Hotstar ನಲ್ಲಿ ಇದೆ.ಕೊನೆಯವರೆಗೆ ನೋಡುವ ಉಮೇದು ಇದ್ದರೆ #Iyobinte_Pusthakam ಇಷ್ಟವಾಗಬಹುದು.  #Movies Ab

Ishq(not a love story!)

Image
  #Ishq (not a love story!)  ಒಂದು ಪ್ರೇಮದ ಕಥೆ ಇಲ್ಲಿ ಮೊದಲ ಮುತ್ತಿನ ಕಥೆಯೊಂದಿಗೆ ಆರಂಭವಾಗುತ್ತದೆ!  ಪಬ್ಲಿಕ್ ಪ್ಲೇಸ್ ಅಲ್ಲಿ  ರಾತ್ರಿ ವೇಳೆ ಕಾರ್ ನೊಳಗೆ ಪರಸ್ಪರ ಮುತ್ತುಗಳನ್ನು Exchange ಮಾಡುವ ವೇಳೆಯಲ್ಲಿ.. ಯುವ ಪ್ರೇಮಿಗಳಿಬ್ಬರು ರೆಡ್ ಹ್ಯಾಂಡ್ ಆಗಿ ಪಬ್ಲಿಕ್ ಗೆ ಸಿಕ್ಕಿ ಬೀಳುತ್ತಾರೆ!  ಪಬ್ಲಿಕ್ ಎನ್ನುವುದಕ್ಕಿಂತ  ಕಿಡಿಗೇಡಿಗಳು ಎಂದರೆ ಹೆಚ್ಚು ಸರಿಯಾಗಿರುತ್ತದೆ.  ಆ ನಂತರ ಶೇಕಡ 40% ಭಾಗ ಮೂವಿಯ ಕಥೆ ಕಾರ್ ನ ಒಳಗೆಯೇ ನಡೆದು ಬಿಡುತ್ತದೆ! ಇದು ಪ್ರೇಮಿಗಳಿಬ್ಬರ ಕಥೆ ಆದರೂ.. ಅದಕ್ಕಿಂತ ಹೆಚ್ಚಾಗಿ ಇದು Revenge ನ ಅದರಲ್ಲೂ ಬಹಳ ಸೊಗಸಾಗದ Sweet Revenge ನ ಕಥೆ ಇದು. ಚೆನ್ನಾಗಿದೆ.. ತುಂಬಾನೇ ಚೆನ್ನಾಗಿದೆ ಈ ಮೂವಿಯ ಕಥೆ.  ಮೊದಲ ಭಾಗದಲ್ಲಿ ಯಾವಾಗೊಮ್ಮೆ ಈ ಕಥೆ  ಆದಷ್ಟು ಬೇಗ ಮುಗಿದು ಹೋಗಲಿ ಎಂದು ಅನ್ನಿಸುವಂತೆ  ಮಾಡುವ ಮೂವಿ... ಎರಡನೆಯ ಭಾಗದಲ್ಲಿ ಇನ್ನಷ್ಟು ಇರಬಾರದಿತ್ತೇ ಎಂದು ಮಾಡಿಬಿಡುತ್ತದೆ. ರಿವೇಂಜ್ ಇಷ್ಟ ಆಗುತ್ತದೆ. ಜೊತೆ ಜೊತೆಗೆಯೇ ಬಹಳ ಒಳ್ಳೆಯ ಮೆಸೇಜ್ ಕೂಡ ಇದೆ.  ಪ್ರೀತಿಗೆ ಸಂಬಂಧಿಸಿದಂತೆ ಪ್ರೇಮಿಸುವವರ ನಿಯತ್ತು, ನಂಬಿಕೆಯನ್ನು ಕೂಡ ಇದು ಕೊನೆಯಲ್ಲಿ ಬಹಳ ಚೆನ್ನಾಗಿ ಪ್ರಶ್ನೆ ಮಾಡುತ್ತದೆ!!  2019 ರಲ್ಲಿ  ಬಂದಂತಹ ಈ Romantic Thriller ಮಲಯಾಳಂ ಮೂವಿ #Ishq ಅನ್ನು Anuraj Manohar ನಿರ್ದೇಶಿಸಿದ್ದಾರೆ. Shane Nigam, Ann Sheetal, Shine Tom Chacko,Leona Lishoy ಇದ

ಅಪರೂಪಕ್ಕೊಮ್ಮೆ ಶ್ಯಾವಿಗೆ ಉಪ್ಪಿಟ್ಟು

Image
  ಸಜ್ಜಿಗೆ ಉಪ್ಪಿಟ್ಟು ಕೆಲವೊಮ್ಮೆ ಬೋರ್ ಹೊಡೆಸಬಹುದು.. ಆದರೆ ಶ್ಯಾವಿಗೆ ಉಪ್ಪಿಟ್ಟು ಹಾಗಲ್ಲ.ಮುಖ್ಯವಾಗಿ ಅದರ  ಒಗ್ಗರಣೆ ಕೂಡ ತುಂಬಾ ಚೆನ್ನಾಗಿದ್ದು,ಶ್ಯಾವಿಗೆ ಎಷ್ಟು ಬೇಕೋ ಅಷ್ಟು ಹದಕ್ಕೆ ಸರಿಯಾಗಿ ಉದುರುದುರಾಗಿ ಬೆಂದಿದ್ದರೆ.. ಶ್ಯಾವಿಗೆ ಉಪ್ಪಿಟ್ಟು ಕೂಡ ಆ ಕ್ಷಣಕ್ಕೆ.. ಆಹಾ👌🏻😋 #ಸೇಮೆ_ಉಪ್ಪುಕರಿ ತುಳುನಾಡ್_ಫುಡ್  ಪಚ್ಚುಪಟಗಳು Ab

Athiran!

Image
  #Athiran!  ಅವನೊಬ್ಬ Psychiatrist. Inspection ಗೆ ಎಂದು Inspection Letter ಹಿಡಿದುಕೊಂಡು ಕಾಡಿನ ನಡುವೆ ಇರುವ ಆ ಮಾನಸಿಕ ರೋಗಿಗಳಿರುವ ಆಸ್ಪತ್ರೆಗೆ ಅವನು ಹೋಗ್ತಾನೆ. ಒಬ್ಬನೇ ಹೋಗ್ತಾನೆ! ರೋಗಿಗಳನ್ನು ಸರಿಯಾಗಿ ಅಲ್ಲಿ ನೋಡಿಕೊಳ್ಳುತ್ತಿದ್ದಾರಾ ..ಡಾಕ್ಟರ್ ಸರಿಯಾದ ಚಿಕಿತ್ಸೆಯನ್ನೇ ರೋಗಿಗಳಿಗೆ ಕೊಡುತ್ತಿದ್ದಾನಾ.. ಅಥವಾ ಅಲ್ಲಿ ರಹಸ್ಯವಾಗಿ ಬೇರೆ ಏನಾದರೂ ನಡೆಯುತ್ತಿದೆಯಾ.. ಎಂಬುದು ಅವನ ಸಂದೇಹ!  5 +1.. ಒಟ್ಟು 6 ಜನ ಮಾನಸಿಕ ರೋಗಿಗಳು ಅಲ್ಲಿರುತ್ತಾರೆ. ಅರಮನೆ + ಭೂತ ಬಂಗಲೆಯಂತಿರುವ ಆ ರಾಯಲ್ ಆಸ್ಪತ್ರೆಯಲ್ಲಿ ಡಾಕ್ಟರ್,ನರ್ಸ್, ಕೆಲಸದವರು ಎಲ್ಲರೂ ಇದ್ದಾರೆ  ಮೇಲ್ನೋಟಕ್ಕೆ ಎಲ್ಲವೂ ಸರಿ ಇರುವ ಅಲ್ಲಿ.. ಏನೋ ಒಂದು ಸರಿ ಇಲ್ಲ! ಆ ಸರಿ ಇರದ ಒಂದೇ ಈ ಮೂವಿಯ ಪ್ರಧಾನ ಕಥೆ. ಕಥೆ ಕುತೂಹಲಗಳನ್ನು ಹುಟ್ಟಿಸುತ್ತಾ,ಸಂದೇಹಗಳನ್ನು ಬೆಳೆಸುತ್ತಾ,ಆರೋಪಿ ಸ್ಥಾನದಲ್ಲಿ ಒಬ್ಬನನ್ನೇ ಕೂರಿಸುತ್ತಾ...Psychiatrist ನ ಒಂದೊಂದೇ ಸಂಶಯಗಳನ್ನು ನಿವಾರಿಸುತ್ತಲೇ ಕೊನೆಯವರೆಗೂ ಸಾಗುತ್ತದೆ. ನೋಡುಗನ ದೌಟುಗಳು ಕೂಡ ಕ್ಲೀಯರ್ ಆಗಿರುತ್ತದೆ.  ಆದರೆ ಕೊನೆಯ ಆ ಐದು ನಿಮಿಷ..  ಮೊದಲಿನಿಂದ ತೋರಿಸಿದ ಕಥೆಯೇ ಸಂಪೂರ್ಣ ಉಲ್ಟಾಪಲ್ಟ ಆಗಿರುತ್ತದೆ..! Martin Scorsese ನಿರ್ದೇಶನದ  DiCaprio ಅಭಿನಯದ Shutter island ಮೂವಿಯ ತರವೇ  ಇರುವ ಈ ಮೂವಿ  Shutter Island ಗಿಂತ ಒಂದಷ್ಟು ಭಿನ್ನವಾಗಿದೆ.Shutter Island ಮೂವಿಯನ್ನು ನೀವು ಈ

Uppena

Image
  #Uppena..  ಅವಳು ಒಬ್ಬಳೇ ಮಗಳು. ಮುದ್ದಾದ ಮಗಳು ಮತ್ತು ಸಿರಿವಂತನ ಮಗಳು ಕೂಡ ಹೌದು. ಅವನು ಅವಳ ತಂದೆ. ಊರಿಗೆ ಅವನೇ ದೊಡ್ಡ ಜಮೀನ್ದಾರ.  ಅವನು ತುಂಬಾ ಒಳ್ಳೆಯವನಲ್ಲ.  ತುಂಬಾ ತುಂಬಾ ಕೆಟ್ಟವನು..!  ಅದಾಗಲೇ ಅವನು ತನ್ನ ಮಗಳನ್ನು,ಅವಳು ಪ್ರೀತಿಸಿದವನಿಂದ ದೂರ ಮಾಡಿ ಮನೆಗೆ ಅವಳನ್ನು  ಕರೆದುಕೊಂಡು ಬಂದಿರುತ್ತಾನೆ !  ಮನೆಯ ನಡುವಲ್ಲಿ ನಿಲ್ಲಿಸಿ ತಂದೆ ಮಗಳಿಗೆ ಹೇಳುತ್ತಾನೆ... ನಾನು ಅವನಿಂದ ನಿನ್ನನ್ನು ಮಾತ್ರ ದೂರ ಮಾಡಿಲ್ಲ,ನಿನ್ನವನ ಪುರುಷತ್ವವನ್ನು ಕೂಡ ಅವನಿಂದ ಕಸಿದುಕೊಂಡಿರುವೆ ಎಂದು!!  ಆ ದಿನ ಆ ಕ್ಷಣ.. ಮಗಳು ತಂದೆಯ ಎದುರು ನಿಂತು ಮಾತಾಡುತ್ತಾಳೆ. ಪ್ರೀತಿಯ ಬಗ್ಗೆ,ತನ್ನ ಪ್ರೀತಿಯ ಬಗ್ಗೆ,ತನ್ನವನ ಪ್ರೀತಿಯ ಬಗ್ಗೆ...ಪುರುಷನ ಬಗ್ಗೆ.. ಪುರುಷತ್ವದ ಬಗ್ಗೆ... ಬರೋಬ್ಬರಿ ಹತ್ತು  ನಿಮಿಷ ಅವಳು ಒಬ್ಬಳೇ ಬಿಡದೇ ಮಾತಾಡಿ ಬಿಡುತ್ತಾಳೆ..!  ತಂದೆ ಸೋಲುತ್ತಾನೆ..!  ಒಂದೇ ಒಂದು ಮಾತು ಕೂಡ ಆಡಲಾಗದೆ ತಂದೆ ಸೋತು ಬಿಡುತ್ತಾನೆ!  ಮಗಳು ಮನೆಯಿಂದ ಹೊರ ನಡೆಯುತ್ತಾಳೆ!! ಖಡಕ್ ತಂದೆಯಾಗಿ Vijay Sethupathi ಇದ್ದರೆ,ಮಗಳಾಗಿ Krithi Shetty ಯದ್ದು ಚಂದದ ಅಭಿನಯ. Panja Vaisshnav Tej ಇದರಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.Sethupathi ಗೆ ರವಿಶಂಕರ್ ಧ್ವನಿ ನೀಡಿದ್ದಾರೆ.ಸೇತುಪತಿಯ ಆ ಓರಿಜಿನಲ್ ರಗಡ್ ವಾಯ್ಸ್ ಇದ್ದಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು.  ಲವ್ ಸ್ಟೋರಿ ಮೂವಿ ಇಷ್ಟ ಆಗುವವರಿಗೆ ಈ ಮೂವಿ ಕೂಡ ಇಷ್ಟ

A(Ad Infinitum)

Image
  ಅದೊಂದು ರಾತ್ರಿ ಜೋರಾದ ಮಳೆ. ದಟ್ಟ ಕಾಡಿನ ಮಧ್ಯೆ ಒಂದು Ambulance ಅದರಷ್ಟಕ್ಕೆ ವೇಗವಾಗಿ ಹೋಗ್ತಾ ಇರ್ತದೆ. ಆಗ ಅಲ್ಲೊಬ್ಬ ಆ ಕಾಡಿನ ರೋಡ್ ಪಕ್ಕವೇ ತೀವ್ರವಾಗಿ ಗಾಯಗೊಂಡು ಬಿದ್ದಿರ್ತಾನೆ! ನೋವಿನಿಂದ ಜೋರಾಗಿ ನರಳಾಡುತ್ತಾ ಇರ್ತಾನೆ. Ambulance ನವರ ಕಣ್ಣಿಗೆ ಅವನು ಬೀಳ್ತಾನೆ. Ambulance ನವರು ಅವನನ್ನು ಅವರ Ambulance ನಲ್ಲಿ ಹಾಕಿಕೊಂಡು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. ಅವನು ಸಾಯಲ್ಲ. ಹೇಗೋ ಬದುಕಿ ಬಿಡ್ತಾನೆ. ಆದರೆ ಅವನಿಗೆ ಹಿಂದಿನ ಯಾವುದೂ ನೆನಪಿನಲ್ಲಿ ಇರುವುದೇ ಇಲ್ಲ..! ಯೆಸ್... ಮೆಮೊರಿ ಲಾಸ್ ಕೇಸ್. ಈಗ ಅವನಿಗೆ ಅವನು ಯಾರೆಂದೇ ಗೊತ್ತಿಲ್ಲ!! ಅವನು ಅಮಾಯಕ!!! ಆಸ್ಪತ್ರೆಯ ನರ್ಸ್ ಗೆ ಅವನ ಮೇಲೆ ಲವ್ ಆಗ್ತದೆ. ಅವಳೇ ಅವನಿಗೊಂದು ಹೆಸರು ಇಡ್ತಾಳೆ. ಆ ಹೆಸರೇ ಸಂಜೀವ್. ಅವಳು ಅವನನ್ನೇ  ಮದುವೆ ಕೂಡ ಆಗ್ತಾಳೆ ಮುದ್ದಾದ ಒಂದು ಮಗು ಕೂಡ  ಹುಟ್ಟುತ್ತದೆ. ಹೆಣ್ಣು ಮಗು! ಅದೇ  ಸಮಯದಲ್ಲಿ ಆ ನಗರದಲ್ಲಿ ಒಂದು ವಿಚಿತ್ರ ಕೇಸ್ ಪೋಲಿಸರ ತಲೆ ತಿನ್ನಲು ಶುರು ಮಾಡ್ತದೆ. ಅದೇ ರಾತ್ರಿ ಹೊತ್ತಿನಲ್ಲಿ ಫುಟ್‌ಪಾತ್ ನಲ್ಲಿ ಮಲಗಿರುವ ಅನಾಥ ಮಕ್ಕಳ ಕಿಡ್ನಾಪ್! ಒಂದಲ್ಲ ಎರಡಲ್ಲ.. ಹತ್ತಿಪ್ಪತ್ತು ಮಕ್ಕಳು...!! ನಿರಂತರವಾಗಿ ಮಕ್ಕಳು ನಗರದಲ್ಲಿ ಕಿಡ್ನಾಪ್ ಆಗಿ ಹೋಗ್ತಾನೆ ಇರ್ತಾರೆ..! ಕಿಡ್ನಾಪರ್ ಭೀತಿ ಹುಟ್ಟಿಸಿ ತನ್ನ ಕಾರ್ಯ ಮುಂದುವರಿಸುತ್ತಲೇ ಇರುತ್ತಾನೆ!! ಆದರೆ ಒಂದೇ ಒಂದು

ತುಳು ಭಾಷೆ ಮತ್ತು ನಮ್ಮ ಮಂಗಳೂರು ಆಕಾಶವಾಣಿ...

Image
  ಮಂಗಳೂರು ಅಂದ ತಕ್ಷಣ ಇಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು,ಪುರತಾನ ದೇವಾಲಯಗಳು,ಬಂದರು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಹೇಗೆ ಮಂಗಳೂರಿನವರಿಗೆ  ಅತಿಯಾಗಿ ನೆನಪಾಗುತ್ತದೋ ಅಷ್ಟೇ ನೆನಪಾಗುವ ಹಾಗೂ ನೆನಪಾಗಲೇಬೇಕಾದ ಒಂದು ಸಂಸ್ಥೆ ಎಂದರೆ... ಅದು ಆಕಾಶವಾಣಿ ಮಂಗಳೂರು. ಮಂಗಳೂರನ್ನೇ ತನ್ನ ಹೆಸರಿನಲ್ಲಿ  ಇಟ್ಟುಕೊಂಡು ಸದಾ ಗುರುತಿಸಲ್ಪಡುವ ಮಂಗಳೂರು ಆಕಾಶವಾಣಿ ಮಂಗಳೂರಿಗರ ಹೆಮ್ಮೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.  ಅದೂ ಕೂಡ ದೂರದರ್ಶನ ಎಲ್ಲರ ಕೈಗೆ ಕೈಗೆಟುಕದ ಕಾಲದಲ್ಲಿ,ಹೊಸ ಹೊಸ FM ಚಾನೆಲ್ ಗಳು ಗಾಳಿಯಲ್ಲಿ ಪ್ರಸರಣಗೊಳ್ಳದ ಸಮಯದಲ್ಲಿ... ಮನರಂಜನೆಯ ಜೊತೆ ಜೊತೆಗೆ ಜ್ಞಾನದ ದಾಹವನ್ನು ಇಲ್ಲಿನವರಿಗೆ  ತಕ್ಕ ಮಟ್ಟಿಗೆ ತಣಿಸಿದ್ದು ಇದೇ ಮಂಗಳೂರು ಆಕಾಶವಾಣಿ. ನ್ಯೂಸ್ ನಿಂದ ಹಿಡಿದು ಸಂಗೀತ,ಯಕ್ಷಗಾನ, ಮಾತುಕತೆ,ಕ್ರಿಕೆಟ್ ಕಾಮೆಂಟರಿ,ನಾಟಕ,ಕೃಷಿರಂಗ.. ಕಾರ್ಯಕ್ರಮಗಳ ಮೂಲಕ ನಮ್ಮಲ್ಲಿ ಮನೆ ಮನೆಯನ್ನು ಮುಟ್ಟಿದ್ದು ಇದೇ 100.3 Mega Hertz Frequency ಯಲ್ಲಿ ಬರುತ್ತಿದ್ದ ನಮ್ಮ ಮಂಗಳೂರು ಆಕಾಶವಾಣಿ. ಮಂಗಳೂರು ಆಕಾಶವಾಣಿ ಎಂದರೆ ಹಲವು ನೆನಪುಗಳು.ಮಂಗಳೂರಿನಲ್ಲಿರುವ ಎತ್ತರದ ಗುಡ್ಡಗಳಲ್ಲಿ ಒಂದಾದ ಕದ್ರಿ ಹಿಲ್ಸ್ ನಲ್ಲಿ ಇರುವ ಆಕಾಶವಾಣಿ ಹಾಗೂ ಅದರದ್ದೊಂದು ಉದ್ದದ ಟವರ್  ಮಂಗಳೂರಿನಲ್ಲಿರುವ ಎಲ್ಲರಿಗೂ ಬಹಳ ಚಿರಪರಿಚಿತ. ಅದರ ಒಳಗೆ ಏನಿರಬಹುದು, ಹೇಗೆ ಅಷ್ಟು ದೂರದವರೆಗೆ ಆಕಾಶವಾಣಿ ಎಲ್ಲರಿಗೂ ರೇಡಿಯೋ ಕಾರ್ಯಕ್ರಮಗಳನ್ನು

ತುಳುವೆ ಪೆಲಕಾಯಿ ಎಂಬ ಹತ್ತಿಯಂತಹ ಹಲಸು..

Image
  ತುಳುವೆ ಪೆಲಕಾಯಿಗೆ ನಮ್ಮಲ್ಲಿ ಸಪರೇಟ್ ಫ್ಯಾನ್ ಬೇಸ್ ಇದೆ. ಅಂತಹ ಹಲವರಲ್ಲಿ ನಾನೂ ಕೂಡ ಒಬ್ಬ.ಪೆಲಕಾಯಿ ಎಂದರೆ ತುಳುವಲ್ಲಿ ಹಲಸಿನ ಹಣ್ಣು. ಬರೀ ಕೈಯಲ್ಲಿಯೇ ನರಸಿಂಹ ದೇವರು ಹಿರಣ್ಯಕಶಿಪುವಿನ ಹೊಟ್ಟೆ ಬಗೆದಂತೆ ಈ ಹಣ್ಣಿನ ಉದರವನ್ನು ನಾವೂ ಕೂಡ  ಸುಲಭವಾಗಿ ಬಗೆದು ಬಿಡಬಹುದು ಮಾತ್ರವಲ್ಲ ಒಂದೊಂದೇ ಸೋಳೆಗಳನ್ನು ಗುಳುಂ ಮಾಡುತ್ತಾ ಮಾಡುತ್ತಾ ಕೆಲವೊಮ್ಮೆ ಒಂದಿಡೀ ಹಣ್ಣನ್ನು ಒಬ್ಬರೇ ಮಾಯ ಮಾಡಿರುವುದು ಕೂಡ  ನಮ್ಮ ಅರಿವಿಗೆ ಬಂದಿರುವುದಿಲ್ಲ. ಹಿಂದೆ ಬಡತನ ಹೆಚ್ಚಿದ್ದಾಗ,ಹಸಿವು ಇನ್ನಿಲ್ಲದಂತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಈ ಹಲಸುಗಳೇ ಹೆಚ್ಚಿನವರ ಕೈ ಹಿಡಿದು ಮೇಲೆತ್ತಿದ್ದು.ಬಹುಶಃ ಅದಕ್ಕಾಗಿಯೇ ಹೇಳಿದ್ದು ಇರಬೇಕು " ಹಸಿದು ಹಲಸು ತಿನ್ನು - ಉಂಡು ಮಾವು ತಿನ್ನು ಎಂದು".ಇದು ಎಷ್ಟು ನಿಜ ಎಂದರೆ ತುಂಬಾ ಹಸಿದಾಗ ಹತ್ತು ಹದಿನೈದು ಹಲಸಿನ ಸೋಳೆ ಯನ್ನು ಹಾಗೇ ತಿಂದು ಬಿಟ್ಟರೆ ಹೊಟ್ಟೆ ಸಂಪೂರ್ಣ ಭರ್ತಿಯಾಗಿ ಬಿಡುತ್ತದೆ.ಮತ್ತೆ ಬೇರೇನು ಬೇಕು ಎಂದು ಅನಿಸುವುದಿಲ್ಲ.ಹಲಸಿ ಹಣ್ಣಿನ ಮಹಾತ್ಮೆ ತುಂಬಾ ದೊಡ್ಡದಿದೆ. ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳು ಅಂತು ಇದನ್ನು ತಮ್ಮ ರಾಷ್ಟ್ರೀಯ ಹಣ್ಣು ಎಂದು ಘೋಷಿಸಿ ಬಿಟ್ಟಿವೆ. ಬರ್ಕೆ ಹಲಸಿಗೆ ಹೋಲಿಸಿ ನೋಡಿದರೆ ಈ ತುಳುವೆ ಹಲಸಿನ ಮರಗಳು ಹಳ್ಳಿಗಳಲ್ಲಿಯೂ ಕೂಡ ತುಂಬಾನೇ ಕಡಿಮೆ ಇದೆ.ಹೆಚ್ಚಾಗಿ ಬರ್ಕೆ ಮರವೇ ಎಲ್ಲಾ ಕಡೆ ಕಂಡು ಬರುವುದು. ಈ ತುಳುವೆ ಪೆಲಕಾಯಿ ಮರಗಳಲ್ಲಿಯೇ  ಹಣ್ಣಾ

The Priest.!

Image
  ತೆರೆಮರೆಗೆ ಸರಿದಿರುವ ಒಂದು ನಿಗೂಢ ಸಾವಿನ ಸುತ್ತ ನಡೆಯುತ್ತದೆ ಇದರ ಕಥೆ. ಕಥೆಯ ಶುರುವಲ್ಲಿಯೇ ಒಂದು ಆತ್ಮಹತ್ಯೆ ಆಗುತ್ತದೆ..! ಆಮೇಲೆ ಒಂದರ ನಂತರ ಒಂದರಂತೆ ಒಟ್ಟು ಮೂರು ಆತ್ಮಹತ್ಯೆ ನೋಡು ನೋಡುತ್ತಿದ್ದಂತೆ ಆಗಿಯೇ ಬಿಡುತ್ತದೆ !! ಅದೂ ಕೂಡ ಒಂದೇ ಮನೆಯಲ್ಲಿ..! ನೋಡಲು ಆತ್ಮಹತ್ಯೆ ಎಂದೇ ಕಾಣುವ ಅದು ಆತ್ಮಹತ್ಯೆ ಅಲ್ಲ! ಕಥೆ ಆರಂಭವಾದ ಇಪ್ಪತ್ತು ನಿಮಿಷದಲ್ಲಿಯೇ ಕೊಲೆಗಾರ ಕೂಡ  ಸಿಕ್ಕಿ ಬಿಡುತ್ತಾನೆ. ಆದರೆ ಇದು ಮೂವಿಯ ಮುಖ್ಯ ಕಥೆ ಅಲ್ಲ!! ಇನ್ನೇನು ಕಥೆ ಈ ಮೂವಿಯಲ್ಲಿ ಉಳಿದಿದೆ ಎಂದು ನೋಡುಗ ತಡಕಾಡುವಾಗಲೇ.... ಶುರುವಾಗುವುದು ಮೂವಿಯ ಅಸಲಿ ಕಥೆ..! ಯೆಸ್...Para Normal Activity ಯ ಕಥೆ! ಆ ಕಥೆ ಹೇಳಲ್ಲ.. ನೀವೇ ನೋಡಬೇಕು. ಇಂತಹ ಕಥೆಗಳಲ್ಲಿ ನಟರ ನಟನೆಗಿಂತಲೂ ಹಿನ್ನಲೆ ಸಂಗೀತವೇ ಒಂದು ಬಹು ಮುಖ್ಯ ಪಾತ್ರವಾಗಿ ನೋಡುಗನಲ್ಲಿ ಭಯ ಹುಟ್ಟಿಸಿ,ಬೆಚ್ಚಿ ಬೀಳಿಸಬೇಕು. ಆಗಲೇ Horror Mystery ಗೊಂದು ಕಳೆ ಬರುವುದು,ನಿಧಾನಕ್ಕೆ ಹುಟ್ಟಿಕೊಳ್ಳುವ ಭಯ.. ತೀವ್ರವಾಗಿ ಹೆಚ್ಚಾಗುತ್ತಾ ಹೋಗುವುದು! ಇದೆ.. ಅಂತಹದ್ದೊಂದು Background score ಇದಕ್ಕೆ ಇದೆ! ಉದ್ದ ಕೋಟು,ತಲೆಗೊಂದು ಹ್ಯಾಟು,ಜೊತೆಗೊಂದು ಸದಾ ಹಿಂಬಾಲಿಸುವ ನಾಯಿ.. Mammootty ನಿಮಗೂ ಇಷ್ಟ ಆಗಬಹುದು. ಮಾರ್ಚ್ 2021 ರಲ್ಲಿ ಬಂದಂತಹ ಈ  Supernatural Horror mystery ಮಲಯಾಳಂ ಚಿತ್ರ

ದೋಸೆ ಇಲ್ಲದ ದೋಷಪೂರ್ಣ ಬಾಳು..

Image
  ಕೆಲವೊಂದು ತಿಂಡಿಗಳೇ ಹಾಗೇ... ದಿನಾಲೂ ತಿಂದರೂ ಎಂದಿಗೂ ಒಂಚೂರು ಬೋರು ಹೊಡಿಸದೇ ಇನ್ನೂ ಸ್ವಲ್ಪ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಆಸೆಯನ್ನು ಇನ್ನಿಲ್ಲದಂತೆ ಹೆಚ್ಚು ಮಾಡಿ ಬಿಡುತ್ತದೆ. ತಯಾರಿಗೆ ಬೇಕಾದ ಹಿಟ್ಟಿನ ಆಧಾರದಲ್ಲಿ ಇಡ್ಲಿ ಮತ್ತು ದೋಸೆ ಬಹುಶಃ ಸಹೋದರ - ಸಹೋದರಿಯರು ಇರಬೇಕು ಎಂದು ನನಗನಿಸುತ್ತದೆ. ಬಿಸಿ ಕಾವಲಿ ಮೇಲೆ ಬಿದ್ದಾಗಲೆಲ್ಲ ಚುಂಯ್ಯ್ ಎನ್ನುವ ಸದ್ದು ಮಾಡುತ್ತಲೇ,ಮಾತಾಡುತ್ತಾ ಮಾತಾಡುತ್ತಾ ಪೂರ್ಣ ರೂಪ ಪಡೆಯೋ ದೋಸೆ ನನ್ನ ಪ್ರಕಾರ ಹೆಣ್ಣೇ ಇರಬೇಕು. ಇಡ್ಲಿ ಪಾತ್ರೆಯೊಳಗಿದ್ದು,ಮಾತು ಕಡಿಮೆ- ಬೇಯುವುದು ಜಾಸ್ತಿ ಎನ್ನುವ ಬಾಳು ಬದುಕುವ ಇಡ್ಲಿ ಖಂಡಿತವಾಗಿಯೂ ಪುರುಷನೇ ಬಿಡಿ. ಬರೀ ಮಾತು ಜಾಸ್ತಿ ಎಂಬ ಕಾರಣಕ್ಕಾಗಿ ಹೇಳಲಿಲ್ಲ.. ಅಲಂಕಾರ ಮಾಡಿಕೊಳ್ಳುವ ಬಗೆಯನ್ನು ಕೂಡ ನೀವು ಸ್ವಲ್ಪ ಗಮನಿಸಿ ನೋಡಬೇಕು. ಇಡ್ಲಿ ಮಹಾಶಯನ ಗಾತ್ರ ಸ್ವಲ್ಪ ದೊಡ್ಡದು ಚಿಕ್ಕದು ಆಗಬಹುದು ಬಿಟ್ಟರೆ ಆ ಶೇಪು,ಆ ರೂಪು.. ಬಿಳಿ ಪಂಚೆಯಂತಹ  ಅವನದ್ದೊಂದು ವೇಷಭೂಷಣ ಹೆಚ್ಚಾಗಿ ಬದಲಾಗಿಯೇ  ಇಲ್ಲ.ಬಹುಶಃ ಇಡ್ಲಿ ಮಲ್ಲಿಗೆ ಬಿಳುಪಿನಲ್ಲಿ ಇರದಿದ್ದರೆ ಅದು ಇಡ್ಲಿ ಎಂದು ಒಪ್ಪಲು ಕೂಡ ಮನಸ್ಸಿಗೂ ಒಂಥರಾ ಕಸಿವಿಸಿ.ಇಡ್ಲಿ ಹೇಗಿರಬೇಕೋ ಹಾಗೇ ಇದ್ದರೆನೇ ಚಂದ. ಆದರೆ ದೋಸೆ ಹಾಗಲ್ಲ.. ಹಲವು ರೂಪದಲ್ಲಿ,ಅದೆಷ್ಟೋ ಹೆಸರಿನಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ನಾರಿಯಂತೆಯೇ ಕಂಡಾಪಟ್ಟೆ ಅಲಂಕಾರದಲ್ಲಿ ಗುರುತಿಸಿಕೊಳ್ಳುವ ದೋಸೆ... ಖಂಡಿತವಾಗಿ

ಉಪ್ಪಿನಕಾಯಿಯ ಅಂದದ ಚಂದದ ಜೋಡಿ..

Image
 ಮೊಸರನ್ನಕ್ಕೂ ಉಪ್ಪಿನಕಾಯಿಗೂ ಜೊತೆ ಮಾಡಿದವರಾರೋ...ಎರಡೂ ಹುಳಿಯೇ,ಆದರೂ ಉಪ್ಪಿನಕಾಯಿಯ ಖಾರ ಈ ಎರಡರ ಹುಳಿಯನ್ನೇ   ಮೀರಿಸುವಂತಿದ್ದರೆ,ಪರಮಾನ್ನದ ರೇಂಜಿಗೆ ಮೊಸರನ್ನವನ್ನು ಕೂಡ ಹೊಡೆದು ಬಾಯಿ ಚಪ್ಪರಿಸಬಹುದು..ಅದರಲ್ಲೂ ಅಲ್ಲೊಂದು ಇಲ್ಲೊಂದು ಹೆಕ್ಕಿ ತಿನ್ನಲು ತಾಜಾ ಹಣ್ಣುಗಳು ಕೂಡ ಕೈ ಸಿಕ್ಕುವಂತಿದ್ದರೆ,ಚಂದದ ಒಗ್ಗರಣೆಯ ತಂಪಾದ ಮೊಸರನ್ನ ಕೂಡ ಒಂದು ರೇಂಜಿಗೆ ಸ್ವರ್ಗವನ್ನು ತೊರಿಸಬಲ್ಲುದು.. 😋 ಅಪರೂಪಕ್ಕೊಮ್ಮೆ ಮೊಸರನ್ನ ಇಷ್ಟ❤️ ಪಚ್ಚುಪಟಗಳು Ab