Posts

Showing posts from March, 2021

ಭಕ್ತಿಯ ಜೊತೆಗೆ ಭಯವೂ ಇರಲಿ..

Image
ಮನೆಯ ಹಿಂದೆ ಒಂದು ಗುಡ್ಡ ಇದೆ.ಅದರಲ್ಲಿ ರಾಹು ಗುಳಿಗ ದೈವದ ಕಲ್ಲು ಕೂಡ ಉಂಟು. ಅದು ಅಲ್ಲಿ ಪ್ರಾಕೃತಿಕವಾಗಿಯೇ ಎಷ್ಟೋ ಸಮಯದಿಂದ ಇನ್ನೂ ಹಾಗೆಯೇ ಇದೆ.ಯಾವಾಗ ಬೇಕಾದರೂ ಆ ಗುಡ್ಡದ ಬಳಿ ಸುತ್ತಾಡಬಹುದು.ಆದರೆ ಮಧ್ಯಾಹ್ನದ ಹೊತ್ತು ಆ ಗುಡ್ಡ ಸುತ್ತ ಸುತ್ತಾಡಲು ನಮಗೆ ಮಾತ್ರವಲ್ಲ ಮನೆಯ ಹಸುಗಳಿಗೆ ಕೂಡ ಯಾರ ಮನೆಯಲ್ಲೂ ಬಿಡುವುದೇ ಇಲ್ಲ.ಕಾರಣ ಅಲ್ಲಿರುವ  ದೈವದ ಮೇಲಿನ ಭಕ್ತಿಯ ಜೊತೆಗೆ ಅಷ್ಟೇ ಭಯ.. ಬೈಲು ಬದಿಯಲ್ಲೊಂದು ಕಲ್ಲುಟ್ಟಿ(ಕಲ್ಲುರ್ಟಿ)ದೈವದ ಸಾನವೊಂದು ಇದೆ.ಅಮ್ಮ ದನಕ್ಕೆ ಹುಲ್ಲು ತರಲು ಹೋಗುವಾಗ  ಕಾಲಿನಲ್ಲಿರುವ ಚಪ್ಪಲಿಯನ್ನು ಕೆಳಗಿಟ್ಟು ತುಂಬಾ ದೂರದಿಂದಲೇ ಪ್ರತೀ ನಿತ್ಯವೂ ಕಲ್ಲುಟ್ಟಿಗೆ ಶ್ರದ್ಧೆಯಿಂದ ಕೈ ಮುಗಿಯುತ್ತಾಳೆ.ಹಾಗೆ ಮಾಡದಿದ್ದರೆ ಅವಳಿಗೆ ಆ ದಿನ ನಿದ್ದೆಯೇ ಬರುವುದಿಲ್ಲ. ಕಷ್ಟ ಅಂತ ಬಂದಾಗ ದೇವರಿಗಿಂತ ಮೊದಲು ಅವಳಿಗೆ ನೆನಾಪುಗುವುದೇ ಬೈಲಿನ ಕಾರಣಿಕದ ಕಲ್ಲುಟ್ಟಿ.ದೈವಕ್ಕೊಂದು ಚೆಂಡು ಮಲ್ಲಿಗೆ ಹೂವು ಹೇಳಿ ಬಿಟ್ಟರೆ ಸಾಕು.. ಅವಳು ಆ ಕ್ಷಣಕ್ಕೆ ಎಷ್ಟೋ ನಿರಾಳ. ಕಾರಣ ಅವಳ ಸಮಸ್ಯೆಗಳಿಗೆ ಪರಿಹಾರ ಕ್ಷಣ ಮಾತ್ರದಲ್ಲಿ ಆಗುವುದು ಈ ದೈವಗಳಿಂದಲೇ ಎಂದು ಅವಳು ದೃಢವಾಗಿ ನಂಬಿದ್ದಾಳೆ.ಹೌದು ದೈವ ಅಂದರೆ ಅವಳಿಗೆ ಎಂದಿಗೂ  ಮುಗಿಯದ ನಂಬಿಕೆಯೇ ಆಗಿದೆ.  ಬೆಟ್ಟದ ತುದಿಯಲ್ಲಿ ಎಲ್ಲರಿಗಿಂತ ಎತ್ತರದಲ್ಲಿ ರಾಜನ್ ದೈವವಾಗಿ ಕೊಡಮಂದಾಯ ಇದ್ದಾನೆ.ಊರಲ್ಲಿ ಯಾರೇ ಇರಲಿ ಒಳ್ಳೆಯ ಕೆಲಸ ಮಾಡುವಾಗ ಇಲ್ಲವೇ ಮನೆಯಿಂದ ಹೊರಗಿಳಿದು ಹೋಗ

ಗೋಳಿಬಜೆ ಕಟ್ಟಿಗೂ ಸೈ ಮಲ್ಲಿಗೆಯ ಚೆಂಡಿಗೂ ಜೈ..

Image
  ಎಲೆಗಳಿಗೂ ಒಬ್ಬ ರಾಜ ಎಂದು ಇದ್ದರೆ ಅದು ಬಹುಶಃ ಬಾಳೆ ಎಲೆಯೇ ಇರಬೇಕು. ಪಟ್ಟಿ ಮಾಡುತ್ತಾ ಹೋದರೆ ಅದರ ಕಾರ್ಯವ್ಯಾಪ್ತಿಯೇ ಬಹಳ ವಿಸ್ತಾರವಾದದ್ದು.ಎಲೆಗಳ ವಿಷಯ ಬಂದಾಗ ಪ್ರತಿಯೊಂದಕ್ಕೂ ಅದುವೇ ಬೇಕು.ಹುಟ್ಟಿನಿಂದ ಸಾವಿನವರೆಗೂ ಅದರದ್ದೊಂದು ಕೊಡುಗೆ ನಮ್ಮ ಜೀವನದಲ್ಲಿ ಬಹಳಷ್ಟಿದೆ.  ಬಾಳೆ ಎಲೆಗೆ ಹೋಲಿಸಿದರೆ ಈ ಗಿಡದ ಎಲೆಯೆನೋ ತುಂಬಾ  ಸಣ್ಣದೇ.. ಆದರೆ ಬಳಕೆ ಮತ್ತು ಉಪಯೋಗದಲ್ಲಿ ಬಾಳೆ ಎಲೆಗೂ ಕೂಡ ಈ ಗಿಡದ ಎಲೆಗಳು ತಕ್ಕ ಮಟ್ಟಿಗೆ ಆರೋಗ್ಯಕರ ಪೈಪೋಟಿಯನ್ನು ನಮ್ಮಲ್ಲಿ ನಿರಂತರವಾಗಿ ಕಾಲಕಾಲಕ್ಕೆ ನೀಡುತ್ತಲೇ ಬಂದಿದೆ.  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(ಮಂಗಳೂರು+ಉಡುಪಿ) ಬಾಳೆ ಎಲೆಗೆ ಮತ್ತೊಂದು ಪರ್ಯಾಯ ಎಲೆ ಅಂತ ಇದ್ದರೆ ಅದು ಎಂದಿಗೂ ಇದುವೇ ಆಗಿದೆ.ಇದರ ಹೆಸರು ಉಪ್ಪಳಿಗೆ. ಕೆಲವು ಕಡೆ ತಂದೇವು ಎಂದು ಕೂಡ ಹೇಳುತ್ತಾರೆ. ಇದರ ಹದ ಬಲಿತ ಎಲೆಗಳು ಪಚ್ಚೆ ಪಚ್ಚೆಯಾಗಿ ನೋಡಲು ಬಹಳ ಆಕರ್ಷಕ.ಎಲೆಗಳ ಆಕಾರ ಕೂಡ ನೋಡಲು ಚಂದ ಇದ್ದು,ಬಡಗು ತಿಟ್ಟಿನ ಯಕ್ಷಗಾನದ ಪಗಡೆಯಂತೆ(ಕಿರೀಟ) ತೋರುತ್ತದೆ.ಇದು  ನಮ್ಮಲ್ಲಿ  ಬಾಳೆ ಎಲೆಯಂತೆಯೇ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಅನಾದಿ ಕಾಲದಿಂದಲೂ ಬಳಕೆಯಾಗುತ್ತಲೇ ಇದೆ.  ಇಂದಿಗೂ ನಮ್ಮ ಹಳ್ಳಿಯಲ್ಲಿ ಬಾಳೆ ಎಲೆಯನ್ನು ಬಿಟ್ಟರೆ ತಿಂಡಿಯನ್ನು ಸುತ್ತಿಕೊಡುವುದು ಈ ಉಪ್ಪಳಿಗೆಯ ಎಲೆಯಿಂದಲೇ.ಹೂವಿನ ಕಟ್ಟೆಯಲ್ಲಿ ಮಲ್ಲಿಗೆ ಚೆಂಡು(ದಂಡೆ) ಅನ್ನು ಕೂಡ ಇದರಲ್ಲಿ ಒಪ್ಪವಾಗಿ ಸುತ್ತಿ ಕೊಟ್ಟರೆ ನೋಡಲು ಅದೆನೋ ಚ

Freedom @ Midnight

Image
  ಮದುವೆಯಾದ ನಂತರ ಗಂಡ ಆದವನು ತನ್ನ ಪತ್ನಿ  ಸಾಮಾಜಿಕವಾಗಿ,ಕೌಟುಂಬಿಕವಾಗಿ ಹೀಗೆಯೇ ಜೀವನ ಸಾಗಿಸಬೇಕು ಎಂದು ಬಯಸುತ್ತಾನೆ. ಮತ್ತು ಅಂತಹದ್ದೊಂದು Imaginary ಚೌಕಟ್ಟನ್ನು ಅವಳ ಸುತ್ತಲೂ ಅವನೇ ಸದಾ ಹಾಕಿಕೊಂಡಿರುತ್ತಾನೆ.ಅದುವೇ ನೈತಿಕ  ಸಂಬಂಧ. ಕಣ್ಣಿಗೆ ಕಾಣುವ ಬೇಲಿ ಏನೋ ಅಲ್ಲಿ ಇರುವುದಿಲ್ಲ. ಆದರೂ ಅಂತಹದ್ದೊಂದು ಇದೆ ಎಂದುಕೊಂಡು ಪತ್ನಿ ಆದವಳು ಅದನ್ನು ಕ್ಷಣ ಮಾತ್ರಕ್ಕೂ ದಾಟದೇ ತನ್ನೊಂದಿಗೆ ಜೀವನ ಸಾಗಿಸಬೇಕೆಂದು ಅವನು ಜೀವನ ಪೂರ್ತಿ ಬಯಸುತ್ತಾನೆ.  ಅನೈತಿಕತೆಯ ಕಬಂದ ಬಾಹುಗಳಿಗೆ ಸಿಲುಕಿ ತಮ್ಮ ನಡುವಿನ ಪವಿತ್ರ ಸಂಬಂಧವೊಂದು  ಗಾಳಿ-ಮಳೆಯ ಜೋರಾದ ಹೊಡೆತಕ್ಕೆ ನಲುಗಿ ಹೋಗುವ ಹೂವಿನಂತಾಗುವುದು ಅವನಿಗೆ ಎಂದಿಗೂ ಇಷ್ಟವಾಗದು. ಒಂದು ವೇಳೆ ಅದನ್ನೇನಾದರೂ ಪತ್ನಿಯಾದವಳು ಮೀರಿದರೆ, ಮೀರಿದ್ದು ಅವನಿಗೆ ಗೊತ್ತಾದರೆ.. ಅವನು ಆ ಕ್ಷಣ ವಿಲವಿಲ ಒದ್ದಾಡುವ ನೀರಿನಿಂದ ಮೇಲೆ ತೆಗೆದ ಮೀನು..! ಒಳ್ಳೆಯ ಗಂಡ ಆದವನು ಈ ರೀತಿ ಚಡಪಡಿಸಿದರೆ ಅದು ಸಹಜ ಮತ್ತು ಅಷ್ಟೇ ಸ್ವಾಭಾವಿಕ.ಆದರೆ ಕಥೆಯೇ ಉಲ್ಟಾಪಲ್ಟ ಆಗಿದ್ದರೆ..!  ಅಂದರೆ ಗಂಡ ತಾನೇ ಬೇಲಿ ಹಾರುವ ಗಿರಾಕಿ ಆಗಿದ್ದರೂ ಸಹ.. ಮನೆಯಲ್ಲಿ ತನ್ನ ಪತ್ನಿ ಮಾತ್ರ ಎಂದಿಗೂ ನೈತಿಕತೆಯ ಚೌಕಟ್ಟಿನಲ್ಲಿಯೇ ಬದುಕ ಬೇಕು ಎಂದು ಅಪೇಕ್ಷೆ ಪಡುವವನಾಗಿದ್ದರೆ.... ಕಥೆ ಸ್ವಲ್ಪ ಅಲ್ಲ, ತುಂಬಾನೇ Complicate ಆಗಿರುತ್ತದೆ ಅಲ್ವಾ? ಇದರ ಕಥೆಯೂ ಅಂತಹದ್ದೇ ಆಗಿದೆ.  ಅವಳು ಚಂದ್ರ.ಚಂದ್ರನಂತೆಯೇ ಸಹಜ ಸುಂದರಿ.

Gutrogooooo(ಗುಟ್ರ್ ಗೂ..)

Image
  " ವೇಶ್ಯೆಯ ಬಳಿ ಹೋಗುವವ ತಾನು ಅವಳಲ್ಲಿಗೆ ಏತಕ್ಕಾಗಿ ಹೋಗಿದ್ದೆ ಎನ್ನುವುದಕ್ಕೆ ಏನೇ ಕಾರಣ ಕೊಟ್ಟರೂ...ಅದು ಕಾರಣವಾಗುವುದಿಲ್ಲ, ಕೇವಲ ಸಮರ್ಥನೆ ಆಗಿರುತ್ತದೆ ಅಷ್ಟೇ.ನಿಜ ಕಾರಣ ಯಾವತ್ತಿಗೂ ಅದೇ ಆಗಿರುತ್ತದೆ..! " ಹೀಗೆ ನಿಧಾನವಾಗಿ ಒಂದು ಕಿಡಿ ಹೊತ್ತಿಸುವ ಸಾಲಿನೊಂದಿಗೆ ಆರಂಭವಾಗುವ ಈ ಕಥೆಯೊಳಗಿನ ಕಥೆಯೊಂದರ  ಸಂಭಾಷಣೆಯಲ್ಲಿ ಮತ್ತಷ್ಟು ಬೇಕೆನಿಸುವ ನಶೆ ಲೆಕ್ಕಕ್ಕಿಂತ ಅಧಿಕವಾಗಿಯೇ ಇದೆ. ಪ್ರೋಪೆಸರ್ ಮತ್ತು ವೇಶ್ಯೆಯ ನಡುವಿನ ನವಿರಾದ ಸಂಭಾಷಣೆಯ ಈ ಕಥೆ ಕೇವಲ 14.57 ನಿಮಿಷದ್ದು ಅಷ್ಟೇ. ಹೌದು ಇದು ಮೂವಿಯಲ್ಲ. ಕನ್ನಡ ಶಾರ್ಟ್ ಮೂವಿಯಿದು.  ಅದ್ಭುತ ಲಹರಿಯಲ್ಲಿ ಮಾತಾಡುವ Sridhar K.S ಮಾತುಗಳನ್ನು ಇಲ್ಲಿ ಕೇಳುತ್ತಲೇ ಇದ್ದರೆ ಅದೆನೋ ತಿಳಿಯದ  ಕಿಕ್ ಕೊಡುವ ಮಜಾ.Ganavi Laxman ಅವರ ಕಪ್ಪು ಕಣ್ರೆಪ್ಪೆಯ ಅಗಲದ ಕಣ್ಣುಗಳು ಯಾವಾಗ ನೋಡಿದರೂ ಚಂದವೇ.ಇಲ್ಲಿ ಅವರ ಹೆಸರು ಕೂಡ "ನಯನ" ಎಂದೇ ಇದೆ. ಇಲ್ಲಿ ಇವರಿಬ್ಬರು ಪರಸ್ಪರ ಮಾತಾಡುತ್ತಾರೆ.ಹೌದು ವೇಶ್ಯೆಯ ಕೋಣೆಯಲ್ಲಿ.ಇವರು ಪ್ರಶ್ನೆ ಕೇಳುತ್ತಾರೆ, ಅವಳು ಕಣ್ಣರಳಿಸಿಯೇ ನಗುತ್ತಾಳೆ.ಕೆಲವೊಮ್ಮೆ ನಗುತ್ತಾ,ಇನ್ನು ಕೆಲವೊಮ್ಮೆ ನಗು ನಿಲ್ಲಿಸಿ  ಉತ್ತರಿಸುತ್ತಾಳೆ.ಅವಳ ಮಾತಿನಲ್ಲಿಯೇ ನಶೆ ಇದ್ದರೂ ಎಣ್ಣೆ ಬಾಟಲಿಯನ್ನು  ಕೈಯಲ್ಲಿ ಹಿಡಿದುಕೊಂಡು ನಶೆಯನ್ನು ಮತ್ತಷ್ಟು ತೀವ್ರವಾಗಿಸುತ್ತಾಳೆ.ಕೋಣೆಯ ಮೂಲೆಯಲ್ಲಿರುವ ಗ್ರಾಮಫೋನ್ ತಟ್ಟೆ ಅದರಷ್ಟಕ್ಕೆ ತಗ್ಗಿದ ಸ್

ರಣ ಬೇಟೆಗಾರರು..

Image
  ಈ ಚಿತ್ರ ನೋಡ್ಲಿಕ್ಕೆ ಎಷ್ಟೊಂದು ಚಂದ ಅಲ.... ಇದೆಲ್ಲವು ಒಂದೇ ಸೀರಿಸ್ ನಲ್ಲಿ ದಕ್ಕಿದ ಬೇಟೆಯಾಗಿರಬಹುದು.ಆದರೆ ಈ ತಂಡಕ್ಕೆ ಇಂತಹದ್ದೊಂದು ಯಶಸ್ಸು ಸಿಗಲು,ತುಂಬಿ ತುಳುಕುವ ಆತ್ಮವಿಶ್ವಾಸ ನಮ್ಮ ಯುವ ಆಟಗಾರರ ನರನಾಡಿಯಲ್ಲಿ ಹರಿದಾಡಲು.. ಅದರ ಹಿಂದೆ ಹಲವು ದಶಕಗಳ ಪರಿಶ್ರಮ ಹಾಗೂ ಹಲವಾರು ಅತ್ಯದ್ಭುತ ಆಟಗಾರರ ಹಾಗೂ ನಾಯಕರುಗಳ ಕೊಡುಗೆಯೂ ಅಷ್ಟೇ ಇದೆ.  ಹಿಂದೆ ಹೋದಲ್ಲಿ ಬಂದಲ್ಲಿ ನಿರಂತರವಾಗಿ ಕಪ್ ಗಳನ್ನು ಕೊಳ್ಳೆ ಹೊಡೆಯುತ್ತಿದ್ದ ಆಸ್ಟ್ರೇಲಿಯಾ ಎಂಬ ದೈತ್ಯ ತಂಡವನ್ನು ಬೆರಗುಗಣ್ಣಿನಿಂದ ಬೆದರಿಕೊಂಡೇ ನೋಡುವಾಗ,ನಮ್ಮ ತಂಡ ಕೂಡ ಹೀಗೆ ಜಿದ್ದಿಗೆ ಬಿದ್ದವರಂತೆ ಸರಣಿ ಗೆಲ್ಲುವುದು ಯಾವಾಗ,ಕಪ್ ಗಳ ಬೇಟೆಯಾಡುವುದು ಯಾವಾಗ ಎಂದು.. ಬಾಲ್ಯದಲ್ಲಿ ಸಚಿನ್ ತೆಂಡೂಲ್ಕರ್ ಎಂಬ ಕ್ರಿಕೆಟ್ ದೇವರು ಔಟ್ ಆದಾಗ ಟಿವಿ ಮುಂದೆ ಕನವರಿಸುತ್ತಿದ್ದ ಹುಡುಗ ನಾನು. ನನ್ನಂತೆಯೇ ಹಲವರು ಇದ್ದರು.ನಮ್ಮೆಲ್ಲರ ಹಸಿವು ಹಾಗೂ ಆಧ್ಯಾತ್ಮ ಆವಾಗ ಬರೀ ಕ್ರಿಕೆಟ್ ಒಂದೇ ಆಗಿತ್ತು.ಮನೆಯಲ್ಲಿ ಬೈಸಿಕೊಂಡು ಗ್ರೌಂಡಿನಲ್ಲಿ ಬಿಸಿಲು ಮಳೆಯನ್ನು ಲೆಕ್ಕಿಸದೇ ಬ್ಯಾಟ್ ಬೀಸುತ್ತಾ ಕ್ರಿಕೆಟ್ ಆಡುತ್ತಿದ್ದೆವು,ಟಿವಿ ಮುಂದೆ ಕೂತಾಗ  ಭಾರತ ಗೆಲ್ಲಲ್ಲಿ ಎಂದು ಮುಗ್ಧವಾಗಿ ಪ್ರಾರ್ಥಿಸುತ್ತಿದ್ದೆವು ಮತ್ತು  ಆಸೆ ಕಣ್ಣುಗಳಿಂದಲೇ ಪಂದ್ಯ ನೋಡುತ್ತಿದ್ದೆವು. ಆದರೆ ಆಗಿದ್ದು ನಿರಾಸೆಯೇ ಹೆಚ್ಚು.ಆಸ್ಟ್ರೇಲಿಯಾದ ಪ್ರಾಬಲ್ಯ ತೊಂಬತ್ತರ ದಶಕದಲ್ಲಿ ಎಗ್ಗಿಲ್ಲದೇ ಮುಂದುವರಿದಿತ್ತು. ಅವರ

ಇಂಗ್ಲಿಷ್ - ಎಂಕ್ಲೆಗ್ ಬರ್ಪುಜಿ ಬ್ರೋ

Image
  ತುಳು ಮೂವಿಯಲ್ಲಿ ಬರೀ ನಗು ಇರುವುದಕ್ಕಿಂತಲೂ ಎದ್ದು ಬಿದ್ದು ನಗುವಂತಿದ್ದರೆ  ಮಾತ್ರ ಆಗ ಅದು ಒಂದು ಸಕ್ಸಸ್  ಮೂವಿ ಎಂದು ಗುರುತಿಸಲ್ಪಡುತ್ತದೆ.ಆ ಪ್ರಯತ್ನದಲ್ಲಿ "ಇಂಗ್ಲಿಷ್.." ಖಂಡಿತವಾಗಿಯೂ ಯಶಸ್ವಿಯಾಗಿದೆ. ಅರವಿಂದ್ ಬೋಳಾರ್ ಇದ್ದ ಮೇಲೆ ಕಾಮಿಡಿಯ ಬಗ್ಗೆ ಹೆಚ್ಚು ಮಾತಾಡಬೇಕಾಗಿಯೇ ಇಲ್ಲ. ಅವರು ಸ್ಕ್ರೀನ್ ನಲ್ಲಿ ಇದ್ದಷ್ಟೂ ಹೊತ್ತು ತುಳು ಸಿನಿ ಪ್ರೀಯರಿಗೆ ಅದೊಂತರಹ ರಸದೌತಣ ಇದ್ದಂತೆ. ಜೊತೆಗೆ ಭೋಜರಾಜ್ ವಾಮಂಜೂರ್, ನವೀನ್ ಡಿ.ಪಡೀಲ್,ವಿಸ್ಮಯ್ ವಿನಾಯಕ್,ಪ್ರಥ್ವಿ ಅಂಬರ್, ಉಮೇಶ್ ಮಿಜಾರ್ ಮುಂತಾದವರನ್ನು ಬಳಸಿಕೊಂಡು ಬಹಳ ಸೊಗಸಾಗದ ಔತಣವನ್ನೇ ಉಣಬಡಿಸಿದ್ದಾರೆ ನಿರ್ದೇಶಕ ಸೂರಜ್ ಶೆಟ್ಟಿ ಅವರು. ಇಂಗ್ಲಿಷ್ ಭಾಷೆ ಸರಿಯಾಗಿ ಬರದಿದ್ದರೆ ಏನೆಲ್ಲಾ ಪಜೀತಿ ಆಗಬಹುದೋ ಅದೆಲ್ಲವೂ ಇದರಲ್ಲಿ ಇದೆ. ಜೊತೆಗೆ ಸ್ವಲ್ಪ ಡಿಫರೆಂಟ್ ಆದ ಕಥೆ. ಅದೇ ದೆವ್ವಗಳ ಮದುವೆ. ಭಾಷೆಗಳಿಗೆ ಸಂಬಂಧಿಸಿದಂತೆ ಒಂದೊಳ್ಳೆಯ ಮೆಸೇಜ್ ಈ ಚಿತ್ರದಲ್ಲಿ ಇದೆ.ನನ್ನಿಷ್ಟದ ನಟ ಅನಂತ್ ನಾಗ್ ಕೂಡ ಮೂವಿಯಲ್ಲಿ ಕಾಣಿಸಿಕೊಂಡಿದ್ದು ಬಹಳ ಖುಷಿ ನೀಡಿತು. ಇಷ್ಟವಾಯಿತು.. ನೋಡಿ ನಿಮಗೂ ಇಷ್ಟ ಆಗಬಹುದು,ನಿಮಗೆ ಎಕ್ಕಸಕ ದ ಗುಣನಾಥ್ ಇಷ್ಟ ಆಗಿದ್ದರೆ ಇಂಗ್ಲಿಷ್ ನ ಮಹೇಂದ್ರ ಕೂಡ ಅಷ್ಟೇ ಇಷ್ಟ ಆಗ್ತಾನೆ..ಖಂಡಿತವಾಗಿಯೂ ಎರಡು ಗಂಟೆಗಳ ನಗುವಿಗೆ ಒಂಚೂರು ಮೋಸವಿಲ್ಲ.. Movie_Review ab pacchu

ಹಿಬುಲ ಎಂಬ ಕುಡಿಯುವ ಮತ್ತು ತಿನ್ನುವ ಮಿಲ್ಕು ಶೇಕು..

Image
  ಈ ಬೇಸಿಗೆ ಬಂತೆಂದರೆ ಸಾಕು ಎಲ್ಲರಿಗೂ ಅದೇನೋ ತೀರದ ದಾಹ.ಸದಾ ಏನಾದರೂ ತಣ್ಣಗೆ ಕುಡಿಯುತ್ತಿರಬೇಕು ಎಂದು ಅನ್ನಿಸಿಬಿಡುತ್ತದೆ. ಇಂತಹ ಸಂದರ್ಭದಲ್ಲಿಯೇ ಹೆಚ್ಚಿನ ಸಾಫ್ಟ್ ಡ್ರಿಂಕ್ಸ್ ಗಳು ಗ್ರಾಹಕರ ಕಣ್ಣು ಕುಕ್ಕುವುದು.ಅದನ್ನು ಹಾಗೇ ಸ್ಟೈಲ್ ಆಗಿ ಕೈಯಲ್ಲಿ ಹಿಡಿದುಕೊಂಡು,ಬಾಯಿಗೆ ಸುರಿದುಕೊಂಡು ಬಿಟ್ಟರೆ ಥಂಡಾ ಥಂಡಾ ಕೂಲ್ ಕೂಲ್ ಎನ್ನುವ ಮನಸ್ಥಿತಿ ಎಂದೋ  ನಮ್ಮದಾಗಿ ಬಿಟ್ಟಿದ್ದೆ.  ನನಗಂತು ಈ ಕೋಕ್, ಪೆಪ್ಸಿಗಳನ್ನು ಕುಡಿದು ಉಲ್ಲಾಸ ಹೊಂದುವ ಆಸಕ್ತಿ ಯಾವತ್ತಿಗೂ ತುಂಬಾನೇ ಕಡಿಮೆಯೇ.  ಊರಿನಲ್ಲಿ ಇದ್ದಾಗ ದೇಸಿ ಪಾನೀಯ,ದೇಸಿ ಪೇಯಗಳನ್ನೇ ಕುಡಿಯಬೇಕು ಎಂಬುವುದು ನನ್ನ ವಾದ.  ಆರೋಗ್ಯದ ದೃಷ್ಟಿಯಿಂದಲೂ ಅದೇ ಒಳ್ಳೆಯದು ಹಾಗೂ ದೇಸಿಯ ಪೇಯಗಳ ಸ್ವಾದ ಮತ್ತು ಆ ರುಚಿ ಈ ನೊರೆಯೇಳಿಸುವ ಬಣ್ಣದ ಸಾಫ್ಟ್ ಡ್ರಿಂಕ್ಸ್ ನಲ್ಲಿ ಎಂದಿಗೂ ಬರಲು ಸಾಧ್ಯವೇ ಇಲ್ಲ ಎನ್ನುವುದು ನನ್ನ ಅಭಿಪ್ರಾಯ.  ಅಂಗಡಿಯಲ್ಲಿ ಎಂತಹ ಸಾಫ್ಟ್ ಡ್ರಿಂಕ್ಸ್ ಇದ್ದರೂ  "ಅಣ್ಣಾ ಲೋಕಲ್ ಕೋಲ್ಡ್ ದಾಲ ಇಜ್ಜೆ.." ( ಲೋಕಲ್ ತಂಪು ಪಾನೀಯ ಯಾವುದು ಇಲ್ಲವೇ?) ಎನ್ನುವ ಮಾತು ಮಂಗಳೂರಿನಲ್ಲಿ ಅಂತು ಕೇಳಿಬರುವುದು ಸರ್ವೇ ಸಾಮಾನ್ಯ.  ಮಂಗಳೂರಿಗರ ಲೋಕಲ್ ಪಾನೀಯ ಎಂದರೆ ಅದು ಕಡುಗೆಂಪು ಬಣ್ಣದ ಪುನರ್ ಪುಳಿ,ಎಳನೀರು ಗಂಜಿಯ  ಬೊಂಡ ಶರಬತ್ತು,ಬೊಂಡದ ಬಾವೆಯಿಂದಲೇ ಮಾಡಿದ ಮಿಲ್ಕು ಶೇಕು,ತಂಪಾದ ಎಳ್ಳು,ಪರಿಮಳದ ಕಾಮಕಸ್ತೂರಿ,ರುಚಿ ಎನಿಸುವ ಚಿಪ್ಪಡ್,ದಪ್ಪನೆಯ ಹಿಬುಲ,ಅಧಿಕ ಹ

ದೃಷ್ಟಿಕೋನ ಮತ್ತು ದೃಷ್ಟಿಕೋಣ..!

Image
  ನಮ್ಮ ಸುತ್ತ ಮುತ್ತಲಿನ ಸಮಾಜದಲ್ಲಿ ದಿನ ನಿತ್ಯವೂ ಘಟನೆಗಳು ಘಟಿಸುತ್ತಲೇ ಇರುತ್ತದೆ.  ಕೆಲವು ಒಳ್ಳೆಯದು,ಇನ್ನು ಕೆಲವು ಕೆಟ್ಟದು... ಮತ್ತು ಕೆಲವು ತುಂಬಾ ತುಂಬಾ ಕೆಟ್ಟದು.  ಕೆಲವು ಬೆಳಕಿಗೆನೇ ಬರಲ್ಲ,ಇನ್ನು ಕೆಲವು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಜಗತ್ತಿನೆಲ್ಲೆಡೆ ಹಾಗೇ ಪಸರಿಸಿ ಬಿಡುತ್ತದೆ.ನಂತರ ಅದಕ್ಕೆ ಅಂಕೆಯೇ ಇಲ್ಲ.  ಅದು ಬೇಕಿದ್ದರೆ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯ ಇರಬಹುದು ಇಲ್ಲವೇ ಯಾವುದಾದರೂ ಒಂದು ಘಟನೆಗೆ ಸಂಬಂಧಿಸಿದ ವಿಷಯವೇ ಆಗಿರಬಹುದು.ಈ ಕಾಲದಲ್ಲಿ ಜಸ್ಟ್ ಅದು ಸೋಷಿಯಲ್ ಮೀಡಿಯಾಕ್ಕೆ ಬೇಕಾದ ಒಂದು  ಬಿಸಿ ಬಿಸಿಯಾದ ಗರಿ ಗರಿಯಾದ ಮಸಾಲೆ ದೋಸೆಯಂತಹ ಸರಕು ಅಷ್ಟೇ. ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ ನಾವು ನೀವು ಮತ್ತು ಹೆಚ್ಚಿನ ಎಲ್ಲರು ಮಾಡುವುದು ಈ ಕೆಳಗಿನವುಗಳನ್ನೇ...  ಆ ಕೂಡಲೇ ಈ ವಿಷಯಕ್ಕೆ ನಾವು  React ಮಾಡಬೇಕು..  ನಮ್ಮ ವಾಲಿನಲ್ಲಿಯೂ ಎಲ್ಲರಿಗಿಂತ ಮೊದಲು ಅದರ ಬಗ್ಗೆ ಬರೆದು ಕೊಳ್ಳಬೇಕು... ಈ ವಿಷಯದ ಕುರಿತು ಯಾರಾದರೂ ಬರಹಗಾರ ಇಲ್ಲವೇ ನಾವೇ ಅತಿಯಾಗಿ ಇಷ್ಟ ಪಡುವ ನಮ್ಮ ನೆಚ್ಚಿನ ಬರಹಗಾರ ಬರೆದ ಬರಹವೊಂದನ್ನು ಶೇರ್ ಮಾಡಿ ಕೊಳ್ಳಬೇಕೆಂಬ ಆತುರತೆ ಹಾಗೂ ಹಪಾಹಪಿಯೇ ನಮ್ಮಲ್ಲಿ ಜಾಸ್ತಿಯಾಗಿ ಇರುತ್ತದೆಯೋ ವಿನಹ.. ಆ ಘಟನೆಯ ಸತ್ಯಾಸತ್ಯತೆ ನಮಗೆ ಬೇಕಾಗಿಯೂ ಇಲ್ಲ,ಅದರೆಡೆಗೆ ನಮ್ಮ ಲಕ್ಷ್ಯವೂ ಕೂಡ ಇರುವುದಿಲ್ಲ.  ಆಯಿತು ನಾವು ರಪ ರಪ ಅದರ ಬಗ್ಗೆ ಬರೆದೋ ಇಲ್ಲ ಬೇ

ಉಪ್ಪಿನಕಾಯಿಯೇ ಊಟವಲ್ಲ, ಆದರೂ..

Image
  ಚಿತ್ರದಲ್ಲಿರುವುದು ಬೆಳ್ಳುಳ್ಳಿಯದ್ದು.. ಜಾತ್ರೆಗೆ ಹೋದಾಗ,ಯಾವುದೇ ಸಾಹಿತ್ಯ ಸಮ್ಮೇಳನ ಅಥವಾ ಕೃಷಿ ಮೇಳ, ಆಹಾರ ಮೇಳಕ್ಕೆ ಹೋದಾಗ ಅಲ್ಲಿರುವ ಉಪ್ಪಿನಕಾಯಿಯ ಸ್ಟಾಲ್ ಗಳಿಗೆ ನನ್ನನ್ನು ಬರ ಸೆಳೆದು ಅಪ್ಪಿಕೊಳ್ಳುವ ಅಯಸ್ಕಾಂತ ಶಕ್ತಿ ಯಾವತ್ತಿಗೂ ಕಡಿಮೆ ಆಗಿಯೇ ಇಲ್ಲ. ಅವುಗಳನ್ನೇ ಹುಡುಕಿಕೊಂಡು ಹೋಗಿ ಆ ಸ್ಟಾಲ್ ಗಳ ಎದುರು ನಿಂತುಕೊಳ್ಳುವ ನನ್ನ ಉತ್ಸಾಹ ಕೂಡ ನಿನ್ನೆ ಮೊನ್ನೆಯದಲ್ಲ.  ಅಲ್ಲಿ ಹೋಗಿ ಹಾಗೇ ನಿಂತುಕೊಂಡು ಕಣ್ಣರಳಿಸಿ ಭರಣಿಯಲ್ಲಿ ತುಂಬಿಸಿಟ್ಟಿರುವ ಹೋಮ್ ಮೇಡ್ ಉಪ್ಪಿನಕಾಯಿಗಳನ್ನು ನೋಡುವಾಗ,ತಡೆಯಲು ಆಗದೆ ಬಾಯಲ್ಲಿ ಅದರಷ್ಟಕ್ಕೆ ನೀರೂರುವಾಗ.. ಹಾಗೇ ಎಲ್ಲಾ ವಿಧದ ಉಪ್ಪಿನಕಾಯಿಯನ್ನು ಒಮ್ಮೆ ಗಂಟು ಮೂಟೆ ಕಟ್ಟಿ ಮನೆಗೆ ಒಯ್ಯುವ ಎಂದೇ  ಮನಸ್ಸಾಗುತ್ತದೆ. ಹಾಗೆ ಏನಾದರೂ ಮಾಡಿದರೆ ಅಮ್ಮ ಮನೆಯಲ್ಲಿ ಖಂಡಿತ ಉಗಿದು ಉಪ್ಪಿನಕಾಯಿ ಹಾಕುತ್ತಾಳೆ ಎಂದು ಗೊತ್ತು ಹಾಗಾಗಿ ಒಂದೆರಡು ಬಾಟಲ್ ಗಳನ್ನು ಅಷ್ಟೇ ಖರೀದಿಸಿ ಮನೆಗೆ ಮರಳುತ್ತೇನೆ. ಯಾವುದೇ ಮೇಳಕ್ಕೂ ಹೋದರೂ  ನನ್ನೊಡನೆ ಕೈ ಕೈ ಹಿಡಿದು ಮನಗೆ ನಡೆದು ಬರುವುದು ಉಪ್ಪಿನಕಾಯಿ ಒಂದೇ. ಉಪ್ಪಿನಕಾಯಿ ಯಾವತ್ತಿಗೂ ನನಗೆ ಕೈಕೊಡದ ಸಂಗಾತಿ.ತುಂಬಾ ಬೇಕೆನಿಸುವವಳು..  ಕೆಲವರಿಗೆ ಕೆಲವೊಂದರಲ್ಲಿ ಆಸಕ್ತಿ ಇರುತ್ತದೆ.ಆದರೆ ಜಾತ್ರೆಯ ಸಂತೆಯಲ್ಲಿ ಅಥವಾ ಯಾವುದೇ ಮಳಿಗೆಯಲ್ಲಿ ನನಗಂತು ಇಷ್ಟ ಆಗುವುದು ಈ ಉಪ್ಪಿನಕಾಯಿಯ ಅಂಗಡಿಗಳೇ. ಹೌದು ವಿವಿಧ ರೀತಿಯ ಉಪ್ಪಿನಕಾಯಿಗಳನ್ನು ಸಂಗ್ರಹಿಸಿಟ್ಟು ಕ

ಕರಂಡೆ ಎಂಬ ರುಚಿಯಾದ ಉಪ್ಪಿನಕಾಯಿ..

Image
  ಇದು #ಕರಂಡೆಕಾಯಿ ಯದ್ದು.ಜೊತೆಗೆ ನಮ್ಮಲ್ಲಿ "ನಮ್ಮ ಊರ್ದ.. ನಮ್ಮ ನೀರ್ದ" ಎಂಬ ಉದ್ಘೋಷದ ಉಪ್ಪಿನಕಾಯಿ ಇದು. ಇಷ್ಟೇ ದಕ್ಕಿದ್ದು.. ದಿನಾಲೂ ಇದನ್ನೇ ಆಹಾ.. ಎನ್ನುತ್ತಾ ಬೆರಳು ಚೀಪುವ ರೇಂಜಿಗೆ ತಿಂದು ಬಿಟ್ಟರೆ,ಬಾಟ್ಲಿಯದ್ದೂ  ಸೇರಿ ನನಗಿದು ಒಂದು ವಾರಕ್ಕೆನೇ ಮುಗಿಯುವ ಸರಕು ಅಷ್ಟೇ.. ಕರಂಡೆ ಎಂದರೆ ಕವಳಿಕಾಯಿ.ಕರಾವಳಿ ಹಾಗೂ ಮಲೆನಾಡಿನ ಗುಡ್ಡ ಹತ್ತಿದರೆ  ಬೇಕಾದಷ್ಟು ಸಿಗುತ್ತದೆ ಇದು.ಹಣ್ಣಾಗುವ ಮೊದಲು ಇದನ್ನು ಕೊಯ್ದು ಉಪ್ಪಿನಕಾಯಿ ಹಾಕಬಹುದು. ಹಣ್ಣು ಆದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹಣ್ಣು ಕೂಡ ತಿನ್ನಬಹುದು. ಈ ಗಿಡದಲ್ಲಿ ತುಂಬಾ ಮುಳ್ಳು ಕೂಡ ಇರುತ್ತದೆ. ಮತ್ತು ಕಾಯಿಯಲ್ಲಿ ಸಿಕ್ಕಾಪಟ್ಟೆ ಸೊನೆ ಸಹ ಇರುತ್ತದೆ.ಕಾಯಿ ಕೂಡ ತುಂಬಾನೇ ಹುಳಿ. ಹಾಗಾಗಿಯೇ ಉಪ್ಪಿನಕಾಯಿ ಮಾಡಲು ಹೇಳಿ ಮಾಡಿಸಿದ್ದು ಇದು.ಇದರ ಹೂವು ಮಲ್ಲಿಗೆಯಂತೆ ಕಾಣುತ್ತದೆ. ಇದನ್ನು Carissa Berry ಎಂದು ಕರೆಯುತ್ತಾರೆ. ಈಗ ಇದರ ಉಪ್ಪಿನಕಾಯಿ ಮಾಡುವುದು ಹೇಗೆ ಎಂದು ನಿಮಗೆ ನಾನು ಬಹಳ ಸಿಂಪುಳ್ ಆಗಿ ಹೇಳಿಕೊಡುತ್ತೇನೆ.. ನಮ್ಮ ಪಾಕ ಪ್ರವಿಣೆ ಸರಳ ಆಂಟಿಯ ಹಾಗೆ. ಅವರು ಹಾಗೆಯೇ.. ತುಂಬಾ ಸರಳ ಆಗಿರುವ ಎಲ್ಲವನ್ನೂ ಬಹಳ ಸಿಂಪುಳ್ ಆಗಿಯೇ  ಹೇಳಿಕೊಡುವುದು. #ಮಾಡುವ_ವಿಧಾನ ಸುಮಾರು ಒಂದು ಕೆ.ಜಿ ಯಷ್ಟು ಕರಂಡೆ ಕಾಯಿ ನಿಮ್ಮ ಬಳಿ ಇದ್ದರೆ ಈ ಕೆಳಗಿನಷ್ಟು ಸಾಮಾನು ಹಾಕಿ ಈ ಉಪ್ಪಿನಕಾಯಿ ಮಾಡಬಹುದು. ಮೊದಲು ಕರಂಡೆಕಾಯಿಯನ್ನು ಚೆನ್ನಾಗಿ

ಮಾಮರದ ಹೋಳಿ..

Image
  ವಸಂತ ಬಂದು  ಶ್ರದ್ಧೆಯಿಂದ ಹಚ್ಚಿಯಾಗಿದೆ ಮಾಮರದ ಎಲೆ ಎಲೆಗೂ ಹೋಳಿಯ ಬಣ್ಣ ಯೌವನದ ಪ್ರತೀ ಎಲೆ ಹಾಗೂ ಮಿಡಿ ಮಾವಿಗಿದೆ ಹಚ್ಚ ಹಸಿರು ಪಚ್ಚೆ ಪೈರಿನ ಒಂದೇ ಬಣ್ಣ ಆದರೆ ಚಿಗುರಿನ ಬಾಲ್ಯಕ್ಕೆ ಐದಾರು ದಿನಗಳ ಕಂದು,ನೀಲಿ ಪಿಂಕು, ಪರ್ಪಲ್ಲು, ಕೆಂಪುಗಳೆಂಬ ಚಂದದ ನಾಲ್ಕೈದು ಬಣ್ಣ.. "ಮಾ ಅಂದರೆ ಮಾವು" 🧡💛 ab pacchu 

ಅವನನ್ನು ಮನೆಗೆ ಕಳುಹಿಸಿ ಬಿಡಿ ಪ್ಲೀಸ್..!

Image
  ನಾನು ಇವತ್ತಾದರೂ ರೋಹಿತ್ ಶರ್ಮ ಆಡುತ್ತಾನೋ ಇಲ್ಲವೋ ಎಂದು  ಬಕ ಪಕ್ಷಿಯಂತೆ ಕಾಯುತ್ತಿದ್ದೇನೆ...  ಬಹುಶಃ ಇವತ್ತೂ ಕೂಡ ನಿರಾಸೆ ಆಗುವುದು ಗ್ಯಾರಂಟಿ ಎಂದು ನನ್ನ ಮನಸ್ಸು ನನಗೆ ಕುಟ್ಟಿ ಕುಟ್ಟಿ ಹೇಳುತ್ತಲೇ ಇದೆ. ..ಒಂದು ವೇಳೆ ಹಾಗೆ ಆದ ಪಕ್ಷದಲ್ಲಿ ನನ್ನ ಹೃದಯ ಸಮುದ್ರ ಕಲಕಿ,ರೋಷಾಗ್ನಿ ಜ್ವಾಲೆ ಉರಿದುರಿದು.. ಹತಾಶೆ,ಮುಗಿಲು ಮುಟ್ಟುವ ಆಕ್ರಂದನ Accelerate ಆಗುವುದು ಮಾತ್ರ ಪಕ್ಕಾ..ಅದು ಕೈ ಕೈ ಹಿಸುಕಿಕೊಳ್ಳ ಬೇಕೆ ಹೊರತು ಮತ್ತೇನು ಮಾಡಲಾಗದ ಅಸಹಾಯಕತೆ.  ಏನೇ ಹೇಳಿ ಮನುಷ್ಯನಿಗೆ ಅವನ ಒಟ್ರಾಸಿ ಟ್ಯಾಲೆಂಟೇ ಅವನಿಗೆ ಮುಳುವಾಗಬಾರದು..ಅದಕ್ಕೆ Perfect example ಈ ರೋಹಿತ್. ಯಾವುದೇ ಇಂಜುರಿ ಪ್ರಾಬ್ಲಂ ಇರದೇ,ಕೈ ಕಾಲು ಗಟ್ಟಿ ಮುಟ್ಟಾಗಿ ಇದ್ದು..ಫಾರ್ಮ್ ನ ಉತ್ತುಂಗದಲ್ಲಿ ಇರುವಾಗ...ನಿಗದಿತ ಓವರ್ ಗಳ ಲೆಜೆಂಡ್ ಎಂದೇ ವಿಶ್ವದಾದ್ಯಂತ ಗುರುತಿಸಿಕೊಂಡರೂ ಸಹ.... ತಂಡದಲ್ಲಿ ಆಡದೇ,ಡಗ್ ಔಟ್ ನಲ್ಲಿ ಕುಳಿತುಕೊಂಡು ಗಡ್ಡ ಕೆರೆದು ಕೊಳ್ಳುತ್ತಾ,ಏನನ್ನೋ ಕೈಗೆ ಸಿಕ್ಕಿದ್ದನ್ನು ತಿನ್ನುವುದನ್ನು  ನೆಟ್ಟಿಗರು ಅವನು ಡಗ್ ಔಟ್ ಅಲ್ಲಿ ಸ ಏನೋ ತಿನ್ತಾನೇ ಇರ್ತಾನೆ ಡುಮ್ಮ.. ಅಂತ ಹೇಳಿದರೆ..ಪಕ್ಕ ರೋಹಿತ್ ವಿರೋಧಿಗಳು ಇಲ್ಲ ಅವ Confirm ವಡಾ ಪಾವೇ ತಿನ್ತಾ ಇದ್ದ ಅಂತ ಟ್ರಾಲ್ ಮಾಡುವುದನ್ನು ನೋಡುವಾಗ... ರೋಹಿತ್ ಅಭಿಮಾನಿ ಆಗಿ ಬಾರೀ ಬೇಜಾರ್ ಆಗ್ತದೆ ಮರ್ರೆ ಸತ್ಯ.  ಇವತ್ತಾದರೂ ಆಡಿಸಿ.. ಇಲ್ಲದಿದ್ದರೆ ದಯವಿಟ್ಟು ಅವನನ್ನು ಮನೆಗೆ ಕ

ಬಳ್ಳಿಯಲ್ಲೊಂದು ಸೌತೆಕಾಯಿ ಬಿಟ್ಟಿದೆ..

Image
  ಈ ಸೌತೆಕಾಯಿಗೂ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೂ ಒಂದು ಅವಿನಾಭಾವ ಸಂಬಂಧ ಇದೆ. ಆದರೆ ಅಂತಹ ನಂಟಿನ ಸಂಬಂಧದ ಬಗ್ಗೆ ನನಗೆ ಮೊದಲು ಅಷ್ಟಾಗಿ ಗೊತ್ತಿರಲಿಲ್ಲ.ಎಲ್ಲಾ ಕಡೆಯಂತೆ ಅದು ನನಗೆ ಜಸ್ಟ್ ಸೌತೆಕಾಯಿ ಅಷ್ಟೇ ಆಗಿತ್ತು.. ಯಾವಾಗ ನಮ್ಮೂರು ಬಿಟ್ಟು ಬೆಂಗಳೂರು ಕಡೆಗೆ ಹೋದೆನೋ ಆವಾಗಲೇ ಗೊತ್ತಾಗಿದ್ದು ಈ ಸೌತೆಕಾಯಿಗೂ ನಮ್ಮ ಜಿಲ್ಲೆಗೂ ಇರುವ ಆ ಒಂದು ಸೊಗಸಾದ ಬೆಸುಗೆ. ಅದೇನೆಂದರೆ ನಮ್ಮಲ್ಲಿ ಸೌತೆಕಾಯಿ ಎಂದು ಕರೆಸಿಕೊಳ್ಳುವ ಇದು ಹೊರಗಡೆ ಹೋದ ಕೂಡಲೇ "ಮಂಗಳೂರು ಸೌತೆಕಾಯಿ" ಎಂದೇ ಗುರುತಿಸಿಕೊಳ್ಳುತ್ತದೆ.ನಿಜವಾಗಿಯೂ ಮೊದಲಿದು ನನಗೆ ಗೊತ್ತಿರಲಿಲ್ಲ.ನಮ್ಮಲ್ಲಿ ಇದಕ್ಕೆ ಹಾಗೇ ಹೇಳುವುದೂ ಕೂಡ  ಇಲ್ಲ. ಹಾಗಾದರೆ ನೀವು ಸೌತೆಕಾಯಿ ಎಂದು ಯಾವುದಕ್ಕೆ ಕರೆಯುತ್ತೀರಿ ಎಂದು ಬೆಂಗಳೂರಿನಲ್ಲಿ ತರಕಾರಿ ಮಾರುವವರಲ್ಲಿಯೇ ಕೇಳಿದರೆ ಅದಕ್ಕೆ ಅವರು "Cucumber" ಅನ್ನು ತೋರಿಸುತ್ತಾರೆ.ನಮ್ಮಲ್ಲಿ ಈ Cucumber ನ ಚಂದದ ಹೆಸರು  "ಮುಳ್ಳುಸೌತೆಕಾಯಿ " ಎಂದು. ತುಳುವಿನಲ್ಲಿ ಆದರೆ ತೆಕ್ಕರೆ ಇಲ್ಲವೇ ತೆಕ್ಕರ್ಪೆ.ಅದರ ಸಿಹಿಯಾದ, ರುಚಿಯಾದ ಖಾದ್ಯಗಳು ಕೂಡ  ಹಲವಾರು ಇದೆ. ಅದರಲ್ಲೂ "ಏಳ್ ಇರೆತ ತೆಕ್ಕರೆ"(ಏಳು ಎಲೆಯ ಮುಳ್ಳು ಸೌತೆ) ಊರಿನದ್ದೇ ಬಹಳ  ರುಚಿಯಾದ ತೆಕ್ಕರೆ ಎಂದು ಹೆಸರುವಾಸಿ. ಇನ್ನು ಗೂಗಲ್ ಸರ್ಚ್ ಮಾಡುವಾಗ ಬರೀ ಸೌತೆಕಾಯಿ ಎಂದು ಹುಡುಕಿದರೇ ನಿಜವಾಗಿಯೂ ಮುಳ್ಳುಸೌತೆಕಾಯಿಯೇ(Cuc