Posts

Showing posts from September, 2022

ನಾವು ಶಾಲೆಗೆ ಹೋಗುವೆವು

Image
 .                      " ನಾವು ಶಾಲೆಗೆ ಹೋಗುವೆವು... "      ಅಂಗನವಾಡಿ ಎಂದರೆ ಮೊದಲು ನೆನಪಾಗುವುದೇ ಸಜ್ಜಿಗೆ.ಅದಕ್ಕೆ ಬೇರೆ ಹೆಸರಿದ್ದರೂ,ಇಲ್ಲದಿದ್ದರೂ ಅಂಗನವಾಡಿ ಸಜ್ಜಿಗೆ ಎಂದೇ ಊರ ತುಂಬಾ ಅದರದ್ದೊಂದು ಖ್ಯಾತಿ,ವಿಖ್ಯಾತಿ.ಉಪ್ಪಿಟ್ಟಿನ ರವಾ ಇಲ್ಲದಿದ್ದರೂ ಅಂದಕಾಲತ್ತಿಲ್ ಮನೆ ಮನೆಯಲ್ಲಿ ಈ ಅಂಗನವಾಡಿ ಸಜ್ಜಿಗೆಯದ್ದೊಂದೇ ಒಟ್ರಾಶಿ ಹವಾ. ಎರಡು,ಮೂರು ಮಕ್ಕಳಿದ್ದು ಬಿಟ್ಟರೆ ಮನೆಯಲ್ಲಿ ಈ ಅಂಗನವಾಡಿ ಸಜ್ಜಿಗೆ ಪ್ಯಾಕೇಟುಗಳು ಹಾಗೇ ಬಂದು ಅಟ್ಟಿ ಬೀಳುತ್ತಿದ್ದವು;ಈಗ ಕುಚಲಕ್ಕಿ ಪ್ರಿಯರ ಮನೆಯಲ್ಲಿ,ರೇಷನಿನ್ನ  ಬಿಳಿಕುಚಲಕ್ಕಿ ಗೋಣಿಗಳು ರಾಶಿ ಬೀಳುವಂತೆ.ಆ ಸಮಯದಲ್ಲಿ ಅಮ್ಮ ಈ ಸಜ್ಜಿಗೆ ಹಿಟ್ಟಿನಲ್ಲಿ ತನ್ನದೊಂದು ಪಾಕ ಪ್ರಾವೀಣ್ಯತೆಯನ್ನು ತೋರಿಸಲು ಒಂದಿಷ್ಟು ಮಂಡೆ ಓಡಿಸುತ್ತಿದ್ದಳು.ಅದರಿಂದ ಸಜ್ಜಿಗೆ ದೋಸೆಯಂತೆ,ಸಜ್ಜಿಗೆ ರೊಟ್ಟಿಯಂತೆ ಇನ್ನೂ ಏನೇನೋ ಪ್ರಯೋಗಗಳು ಅವಳದ್ದು.ಈಗಿನ ಪಾಕ ಪ್ರವೀಣೆಯರು ಹೊಸ ರುಚಿ,ನಳಿನಿ ಪಾಕ ಎಂದೆಲ್ಲಾ ಮಾಡುತ್ತಾರಲ್ಲಾ ಹಾಗೆಯೇ.ಆವಾಗ ಎಲ್ಲಾ ತಾಯಂದಿರಿಗೆ ಅಡುಗೆ ಮನೆಯಲ್ಲಿ ಪ್ರಯೋಗಕ್ಕೊಂದು ಅವಕಾಶ ಕಲ್ಪಿಸಿದ್ದೇ ಈ ಅಂಗನವಾಡಿ ಸಜ್ಜಿಗೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲವೆನೋ.  ನಮ್ಮಲ್ಲಿನ ನೀರ್ದೋಸೆ, ಕಪರೊಟ್ಟಿ,ಕೊರ್ರೊಟ್ಟಿ ಎಲ್ಲಾ ತಿಂದುಂಡ ನಾಲಿಗೆಗೆ ಈ ಸಜ್ಜಿಗೆಯ ದೋಸೆ,ರೊಟ್ಟಿಗಳು ಹೇಗೆ ಪ್ರಿಯವಾಗಬೇಕು ಹೇಳಿ.ಶೀರಾದ ಸಹವರ್ತಿ ಈ ಉಪ್ಪಿಟ್ಟೆಂಬ ಸಜ್ಜಿಗೆಯಾದರೂ ಒಂದು ರೇಂಜಿ

ನೇತ್ರಾವತಿಯ ಹುಡುಗಿ

Image
 .                                          #ಪುಷ್ಯರಾಗ                                 ( ನೇತ್ರಾವತಿಯ ಹುಡುಗಿ )  "   ಮನಸೂರೆಗೊಂಡ ದಿನ ನೀನು ಕೊಳ್ಳೆ ಹೊಡೆದದ್ದಾದರೂ  ಏನನ್ನು? ನಿಜ ಹೇಳಲೇ,ನನ್ನ ಮೊದಲ ಏಕಾಂತದ ದಿನಗಳೇ ಬಹಳಷ್ಟು ತಂಪಾಗಿದ್ದವು.  ನನಗೆ ಸೋಲಲು ಇಷ್ಟವಿರಲಿಲ್ಲ,ಒಲಿದು ಮೊದಲೇ  ಗೊತ್ತಿರಲಿಲ್ಲ.ಒಲಿಸಿಕೊಳ್ಳುವವರಾದರೂ ಒಂದಿಷ್ಟು ಜನ ಅಲ್ಲಲ್ಲಿ ಅವಶ್ಯವಾಗಿಯೇ ಇದ್ದರು;ಆದರೆ ಅಲ್ಲೆಲ್ಲೂ ನೀನಿರಲಿಲ್ಲ,ನಿನ್ನಂತೆ ಅವರಿರಲಿಲ್ಲ.ಬದುಕು ಸುಖವಾಗಿತ್ತು,ನನ್ನೆದೆಯ ಹಾಡು ಕೇವಲ ನನಗಾಗಿಯೇ ಮಿಡಿಯುತ್ತಿತ್ತು,ಗುನುಗಿದ ಮೇಘ ಮಲ್ಹಾರ ರಾಗದಲ್ಲಿ ಬರೀ ಮಳೆಯಿತ್ತು.  ನಾನು ನನ್ನಷ್ಟಕ್ಕೆ ಇದ್ದೆ ಮತ್ತೆ ನೀನು ನಿನ್ನಷ್ಟಕ್ಕೆ;ಮೇಲಿನ ಆ ಬಾನು,ಕೆಳಗಿನ ಈ ಭೂಮಿ ಸದಾ ಎದುರೆದುರೇ ಇದ್ದರೂ  ಒಂದಾಗಲು ಎಂದಿಗೂ ಮನಸ್ಸೇ ಮಾಡದಂತೆ.ಹಾಗಾದರೆ ಕೈ ಚಾಚಿದ್ದು ಯಾರು?  ನೀನು ನನಗೆ ಕೈಕೊಟ್ಟು ಎಲ್ಲಿಗಾದರೂ ಹೇಳದೆ ಕೇಳದೆ ತುಂಬಾ ದೂರ ಓಡಿ ಹೋಗಿದ್ದರೂ,ನಾನಿಂದು ಹಿಡಿಶಾಪ ಹಾಕುತ್ತಲೇ ಒಂದಿಷ್ಟು ನೆಮ್ಮದಿಯಿಂದಿರುತ್ತಿದ್ದೆ.ಆದರೆ ಅದಕ್ಕಾದರೂ ಮೊದಲೊಮ್ಮೆ ಕೈ ಹಿಡಿಯಬೇಕಲ್ಲವೇ. '' ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ...' ಕತೆಗೆ ನಾನೇ ಮುಂದೆ ನಿಂತು ಮುನ್ನುಡಿ ಬರೆಯಬಾರದಿತ್ತು.  ಆದರೂ ನಾನು ಗಗನ ಕುಸುಮವಲ್ಲ,ನಿನಗೆ ಕೈಗೆಟುಕುವಷ್ಟು ಎತ್ತರದಲ್ಲಿಯೇ ಹತ್ತಿರದಲ್ಲಿಯೇ ಇರಬೇಕು ಎಂದು ಸದಾ  ಹಂಬಲಿಸಿದ ನಿನ

ಪಯ್ಯನ ಪರಾಕ್ರಮ

Image
                                         #ನೀಲಮೇಘ                                 (  ಪಯ್ಯನ ಪರಾಕ್ರಮ ) ಒಂದು ಮದುವೆಗೆ ಹೋಗಿದ್ದೆ.ಕೇವಲ ಅಷ್ಟೇ ಹೇಳಿ ಬಿಟ್ಟರೆ ಅದು ನನಗೆ ನಾನೇ ಮಾಡಿಕೊಳ್ಳುವ ಮೋಸ,ವಂಚನೆ ಹಾಗೂ ಬಹುತ್ ಬಡಾ ದ್ರೋಹ.ಮದುವೆ ಊಟಕ್ಕೆಂದೇ ಹೋಗಿದ್ದೆ ಎಂದು ಮುಜುಗರವಿಲ್ಲದೆ ನೇರವಾಗಿ ಹೇಳಿ ಬಿಟ್ಟರೆ ಆಗ ನಾನು ಬಹಳಷ್ಟು ನಾನೇ ಎಂದು ಅನ್ನಿಸಿಕೊಳ್ಳುತ್ತೇನೆ. ಊಟ ನಿಜಕ್ಕೂ ಚೆನ್ನಾಗಿರಲಿಲ್ಲ.ಎಷ್ಟೇ ಆಡಂಬರದಲ್ಲಿ ಮದುವೆ ಮಾಡಿದರೂ,ವರ ಕುದುರೆಯಲ್ಲಿಯೇ ಜಿಗಿದು ಕುಣಿದು ಕುಪ್ಪಳಿಸಿ ಮದುವೆಯ ಹಾಲಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟರೂ,ಕೆಜಿಗಟ್ಟಲೆ ಬಂಗಾರವನ್ನು ತೊಡಿಸಿ ವಧುವಿಗೆ ಒಂದು ರೀತಿಯ ದೈಹಿಕ ಹಲ್ಲೆ ಮಾಡಿಬಿಟ್ಟರೂ,'ಆಶೀರ್ವಾದವೇ ಉಡುಗೊರೆ' ಎಂದು ಲಗ್ನಪತ್ರಿಕೆಯ ಕೆಳಗೆ ದಪ್ಪ ಅಕ್ಷರಗಳಲ್ಲಿ ಎದ್ದುಕಾಣುವಂತೆ ಬರೆಸಿಕೊಂಡರೂ ಈ ಮದುವೆಯ ಊಟ ಒಂದು ಚೆನ್ನಾಗಿರದೆ ಹೋದರೆ,ಚೆನ್ನಾಗಿದ್ದರೂ ಮಾಡಿಟ್ಟ ಊಟವನ್ನು ಸರಿಯಾಗಿ ಸಮರ್ಪಕವಾಗಿ ಎಲ್ಲರಿಗೂ ಬಡಿಸದಿದ್ದರೆ ಆಗ ಆ ಅದ್ದೂರಿ ಸಂಭ್ರಮಕ್ಕೆನೇ ಅದೊಂದು ಕಪ್ಪು ಚುಕ್ಕೆ. ಆಗ ಮದುವೆ ಊಟಕ್ಕೆ ಬಂದವರು ವಧುವರರಿಗೆ ಮನಸಾರೆ ಹರಸದಿದ್ದರೂ ಹಿಡಿ ಶಾಪ ಹಾಕಲು ಮಾತ್ರ ಹಿಂದೆ ಮುಂದೆ ನೋಡುವುದೇ ಇಲ್ಲ.ಎಲ್ಲರೂ ವರ ಬಲದಿಂದ ಮೆರೆಯುವ ಸಿದ್ದಿಪುರುಷರಂತೆ ನಾ ಮುಂದು ತಾ ಮುಂದು ಶಾಪ ಕೊಟ್ಟು ಮದುವೆ ಮನೆಯವರನ್ನು ಶಾಪಗ್ರಸ್ತರನ್ನಾಗಿ ಮಾಡಲು ಕ್ಯೂ ನಿಂತು ಬಿಡುತ್ತಾರ

Sita Ramam

Image
 #Sita_Ramam |  [         ]  ಒಂದೊಳ್ಳೆಯ ಕಾಫಿ ಕುಡಿದರೆ ಹೇಗೆ ಅದರ ಸ್ವಾದ ಕೆಲವೊಂದಿಷ್ಟು ಹೊತ್ತು ಬಾಯಿ ತುಂಬಾ ಹರಡಿಕೊಂಡಿರುತ್ತದೋ,ಅದೇ ರೀತಿ ಉಳಿದು ಬಿಡುವಂತಹದ್ದು ಈ ಕತೆಯ ವಿಷಾದ.  ಇದರಲ್ಲೊಂದು ಬಹಳ ಅಪೂರ್ವವಾದ ಪ್ರೇಮವಿದೆ;ಎಷ್ಟು ಸುಂದರವೋ ಇದು ಅಷ್ಟೇ ಪರಿಶುದ್ಧವೂ ಹೌದು.ಎಲ್ಲೂ ಸಂಯಮ,ಸೌಜನ್ಯತೆಗಳ ಗಡಿಯನ್ನು ಮೀರುವ ಸಾಹಸ ಇಲ್ಲಿಯ ಎರಡೂ ಪಾತ್ರಗಳು ಮಾಡುವುದೇ ಇಲ್ಲ.ಹಾಗಾಗಿಯೇ ಇದರ ಕತೆ ಹಾಗೇ ದಿವ್ಯವೆನಿಸಿಬಿಡುತ್ತದೆ. ಗಡಿ ಕಾಯುವ ಮಡ್ರಾಸ್ ರೆಜಿಮೆಂಟಿನ ಯೋಧ ರಾಮ್ ತನಗಾಗಿ ಯಾರು ಇಲ್ಲದೆ ಇದ್ದಾಗಲೇ ಬಹಳ ಸುಖವಾಗಿದ್ದ;ಜೊತೆಗೆ ಅವನ ಕತೆಗೆ ತೆರೆದುಕೊಳ್ಳುವ ನಮಗೆ ಕೂಡ ಕತೆಯ ಆರಂಭದಲ್ಲಿ ತುಂಬಾನೇ ನೆಮ್ಮದಿಯಿಂದಿದ್ದೆವು ಎಂದು ಕತೆ ಮುಂದೆ ಮುಂದೆ ಹೋದಂತೆ ಅನ್ನಿಸದೇ ಇರದು.ಈ ಕತೆಯ ನಾಯಕಿ ಸೀತಾ ಮಹಾಲಕ್ಷ್ಮಿ.ಅವಳ ಮೌನ ಅದೆಷ್ಟು ಗಾಢವೋ ಅವಳ ದುಃಖವೂ ಅಷ್ಟೇ ಪ್ರಖರವಾದದ್ದು ಹಾಗೂ ತೀಕ್ಷ್ಣವಾಗಿಯೇ  ಸುಡುವಂತಹದ್ದು.ಕೊನೆಯಲ್ಲಿ ಮಾತ್ರ ನೋಡು ನೋಡುತ್ತಿದ್ದಂತೆಯೇ ನೋಡುಗನ ಎದೆಯಲ್ಲೊಂದು ಬೆಂಕಿ ಹೊತ್ತಿಕೊಂಡು ಹಾಗೇ ಧಗಧಗ ಎಂದು ಉರಿದು ಬಿಡುವಂತಹ ಸಂಕಟ. ಮೃಣಾಲ್ ಠಾಕೂರ್ ಮತ್ತು ದುಲ್ಕರ್ ಸಲ್ಮಾನ್ ಈ ಇಬ್ಬರ ಜೋಡಿಯದ್ದು ಎಂತಹ ಅಭಿನಯ ಎಂದರೆ ಇವರ ಬದಲಿಗೆ ಬೇರೆ ಯಾರನ್ನೂ ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಾಗದು.ಈ ಎರಡೂ ಪಾತ್ರಗಳಿಗಾಗಿಯೇ ಇವರಿಬ್ಬರು ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ್ದೋ ಎಂದು ಅನ್ನಿಸ