ಆ ಹದಿಮೂರು ದಿನಗಳು
ಆ ಹದಿಮೂರು ದಿನಗಳು | ಸುಧೀರ ಸಾಗರ
ಹುಟ್ಟಿದ ದಿನ ಸಂಭ್ರಮದಿಂದಲೇ ಮನೆ ಮಂದಿಗೆಲ್ಲಾ ಸೋನ್ಪಾಪುಡಿಯನ್ನು ಹಂಚುವ ಯುವಕನಿಗಿಂತಲೂ,ಪಕ್ಕದ ಪಾಕಿಸ್ತಾನದ ವಿರುದ್ಧ ನಮ್ಮ ಸೇನೆ ವಿಜಯೋತ್ಸವ ಮಾಡಿದಾಗಲೆಲ್ಲ ಬೀದಿ ತುಂಬಾ ಗೆಲುವಿನ ಮಿಠಾಯಿ ಹಂಚುವ ಪುಟ್ಟ ಹುಡುಗನೇ ನನಗಂತು ಹೆಚ್ಚು ಇಷ್ಟವಾಗಿ ಬಿಡುತ್ತಾನೆ.ಬರೀ ಅಷ್ಟು ಮಾತ್ರವಲ್ಲ ಅಂದದ ಹುಡುಗಿ ಮೇಲೊಂದು ಸದಾ ಚಂದದ ಪ್ರೇಮಪದ್ಯ ಕಟ್ಟುವ ಕವಿಗಿಂತಲೂ,ನಮ್ಮ ಯೋಧರ ಬಗ್ಗೆ,ಅವರದ್ದೊಂದು ದೇಶಪ್ರೇಮದ ಬಗ್ಗೆ,ಸಾಹಸಗಾಥೆಗಳ ಬಗ್ಗೆ ಬಹಳಷ್ಟು ಹೆಮ್ಮೆಯಿಂದಲೇ ರಣರೋಚಕವಾಗಿ ಬರೆಯುವ ಲೇಖಕನಂತು ನನಗೆ ಇನ್ನೂ ಹೆಚ್ಚೇ ಇಷ್ಟ.
ನೇರವಾಗಿ ಪುಸ್ತಕದ ವಿಷಯಕ್ಕೆನೇ ಬರೋಣ.
" ಆ ಹದಿಮೂರು ದಿನಗಳು". ಇದು ಬಾಂಗ್ಲಾ ವಿಮೋಚನೆಯ ಸಂಧರ್ಭದಲ್ಲಿ ಅಂದರೆ 1971 ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಯುದ್ಧದ ಕುರಿತಾದ ಪುಸ್ತಕ.ಹೆಚ್ಚು ಬೆಳಕಿಗೆ ಬಾರದ ಬಹಳಷ್ಟು ರೋಚಕವಾದ ಕಥೆಗಳು ಇದರಲ್ಲಿ ಉಂಟು.ಇದು ಬರೀ ಕಥೆಯೂ ಅಲ್ಲ,ಇದೊಂದು ಇತಿಹಾಸ;ನಮ್ಮ ಯೋಧರದ್ದೇ ನಿಜ ಇತಿಹಾಸ.
ಇಲ್ಲಿ ಕೆಲವು ಕಥೆಗಳು ಇನ್ನಿಲ್ಲದಂತೆ ಮನಸ್ಸನ್ನು ಕಲಕಿ ಸಿಕ್ಕಾಪಟ್ಟೆ ಘಾಸಿಗೊಳಿಸಿ ಬಿಡುತ್ತದೆ,ಹಾಗೇ ಬಹಳಷ್ಟು ಕಾಡುತ್ತವೆ,ಇನ್ನು ಕೆಲವು ಕಥೆಗಳು ನಮಗೆ ತುಂಬಿಸಿಕೊಳ್ಳಲಾಗದಷ್ಟು ಗರ್ವವನ್ನು ಮೂಡಿಸುತ್ತವೆ.ಎಷ್ಟಾದರೂ ನಮ್ಮ ಹೆಮ್ಮೆಯ ಯೋಧರ ಕಥೆಗಳಲ್ಲವೇ.ಅಂತಹ ಅಭಿಮಾನವನ್ನು ಅವರ ಕಥೆಗಳು ಸದಾ ಬೇಡುತ್ತವೆ.
ಈ ವೈರಿ ಪಾಕಿಸ್ತಾನವನ್ನು ಬರೀ ಪಾಕಿಸ್ತಾನ ಎಂದು ಯಾವತ್ತೂ ಹೇಳಲೇಬಾರದು.ಅದಕ್ಕೆ ಪಾಪಿ ಪಾಕಿಸ್ತಾನ ಎಂದು ಸೇರಿಸಿ ಹೇಳಿದರೆನೇ ಅವರ ಅರ್ಹತೆಗೆ,ಯೋಗ್ಯತೆಗೆ ಅದು ಸರಿ ಹೊಂದುವುದು ಎಂದು ಸದಾ ಅನಿಸುತ್ತದೆ.
ಇದ್ದಿಲಿನ ಬಿಸಿ ಕಾವಿನಲ್ಲಿ ಹಾಗೇ ಸುಟ್ಟು ತಿನ್ನುವಂತಹ ಈ ಚಿಕನ್ ಟಿಕ್ಕಾ ದ ಬಗ್ಗೆ ಬಹಳ ಚೆನ್ನಾಗಿಯೇ ಗೊತ್ತಿರುವ ನಮಗೆ,ಅವನೊಬ್ಬ ಟಿಕ್ಕಾ ಖಾನ್ ಬಗ್ಗೆ ಬಹುಶಃ ಅಷ್ಟಾಗಿ ಗೊತ್ತಿರಲಿಕ್ಕಿರಲಿಲ್ಲ.
ಹೌದು,ಅವನೊಬ್ಬ ಪಾಕಿಸ್ತಾನಿ ಇದ್ದ.ರಕ್ತಪಿಪಾಸು ಅಂದರೆನೇ ಹೆಚ್ಚು ಸರಿಯಾಗುತ್ತದೆ.ಅವನ ಕಥೆ ಈ ಪುಸ್ತಕದ ಆರಂಭದಲ್ಲಿಯೇ ಬರುತ್ತದೆ.
"ಆಪರೇಷನ್ ಸರ್ಚ್ ಲೈಟ್" ಎಂಬ ಅಪರೇಷನ್ ಹೆಸರಿನಲ್ಲಿ ತಮ್ಮ ದೇಶದ್ದೇ ಭಾಗವಾಗಿದ್ದ ಪೂರ್ವ ಪಾಕಿಸ್ತಾನದಲ್ಲಿ ಇವನು ಮಾಡಿದ್ದು ಕೇವಲ ಮಾರಣಹೋಮ ಒಂದನ್ನೇ.ಅದೂ ಹುಡುಕಿ ಹುಡುಕಿ ಬರೀ ಮುಗ್ಧ ಹಿಂದೂಗಳದ್ದೇ ಮಾರಣಹೋಮ ಇವನು ಮಾಡಿ ಬಿಟ್ಟಿದ್ದ.ಕೆಲವೊಮ್ಮೆ ಇವನು ಹಿಟ್ಲರ್ ನನ್ನು ಮೀರಿಸುವ ರೇಂಜಿಗೆ ಇಲ್ಲಿ ಗೋಚರಿಸಿಬಿಡುತ್ತಾನೆ.
ಮೊದಲು ಈತ 85 ಜನರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಾನೆ,ನಂತರ 35 ಕ್ಕೂ ಹೆಚ್ಚು ಮುಗ್ಧ ವಿದ್ಯಾರ್ಥಿಗಳನ್ನು ಸಹ ದಾರುಣವಾಗಿಯೇ ಸಾಯಿಸುತ್ತಾನೆ,ಆ ನಂತರ ನಡೆದದ್ದು ಬರೋಬ್ಬರಿ ಮೂರು ಸಾವಿರ ಜನರ ಮಾರಣಹೋಮ,ಹೌದು ಎಲ್ಲರೂ ಹಿಂದೂಗಳೇ!.ಬರೀ ಇಷ್ಟಕ್ಕೆ ಮುಗಿಯಿತೇ?ಯಾವುದೇ ಅತ್ಯಾಚಾರವಿಲ್ಲದೇ ಈ ಪಾಕಿ ಮುಸ್ಲಿಂ ಮತಾಂಧರ ಕಥೆಗಳು ಎಂದಾದರೂ ನಮ್ಮಲ್ಲಿ ಕೇಳಲ್ಪಡಲು ಸಾಧ್ಯವೇ.ತನ್ನ ಸೈನಿಕರು ಹೆಚ್ಚು ಕಡಿಮೆ ನಾಲ್ಕು ಲಕ್ಷ ಹೆಣ್ಮಕ್ಕಳ ಅತ್ಯಾಚಾರ ನಡೆಸಲು ನೇರಾ ಕಾರಣನಾದವನು ಈ ದುಷ್ಟನೇ.ಕೇವಲ ಹಿಂದೂ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ,ಆ ನಂತರ ಅವರುಗಳನ್ನು ಕೊಲೆ ಮಾಡಿ ಬಿಸಾಕಿ ಎಂದು ಹೇಳುತ್ತಿದ್ದ ಈತ ಆಮೇಲೆ ಮುಸ್ಲಿಂ ಮಹಿಳೆಯರನ್ನು ಕೂಡ ಅತ್ಯಾಚಾರ ಮಾಡಲು ತನ್ನ ಯೋಧರನ್ನು ಇನ್ನಿಲ್ಲದಂತೆ ಪ್ರೋತ್ಸಾಹಿಸಿ ಬಿಟ್ಟ.ಆದರೆ ಮುಸ್ಲಿಂ ಮಹಿಳೆಯರನ್ನು ಮಾತ್ರ ಆತ ಕೊಲ್ಲಲು ಹೇಳುತ್ತಿರಲಿಲ್ಲ.ಏಕೆ ಗೊತ್ತೆ? ಅವನ ಪ್ರಕಾರ ಮುಸ್ಲಿಂ ಹೆಣ್ಣು ಮಕ್ಕಳ ಅತ್ಯಾಚಾರ ಆದರೂ ಮುಂದೆ ಆ ಮುಸ್ಲಿಂ ರಾಷ್ಟ್ರಕ್ಕೆ ಬೇಕಾಗುವ ಪರಿಶುದ್ಧ ಮುಸ್ಲಿಂ ಮಕ್ಕಳನ್ನೇ ಹೆರುತ್ತಾರೆ ಅಂತೆ.ತಾನು ಮಾಡಿಸಿದ ಪರಮ ನೀಚ ಅತ್ಯಾಚಾರದಲ್ಲೂ ಅದೆಂತಹ ಮತಾಂಧತೆ ಮೆರೆದಿದ್ದ ನೋಡಿ ಈತ!
ಇದು ಈ ಪುಸ್ತಕದಲ್ಲಿರುವ ಪಾಪಿ ಪಾಕಿಸ್ತಾನ ತನ್ನ ನೆಲದಲ್ಲಿ ತನ್ನ ಪ್ರಜೆಗಳ ಮೇಲೆಯೇ ಮಾಡುತ್ತಿದ್ದ ದೌರ್ಜನ್ಯದ ಒಂದು ಸಣ್ಣ ಸ್ಯಾಂಪಲ್ ಅಷ್ಟೇ,ಆದರೆ ಈ ಪುಸ್ತಕದಲ್ಲಿ ಮುಂದೆ ಬರುವಂತಹದ್ದು ಕಾಲು ಕೆದರಿಕೊಂಡು ಬಂದಂತಹ ಈ ಪಾಪಿ ಪಾಕಿಸ್ತಾನದ ಸೊಕ್ಕು ಅಡಗಿಸಿದ್ದು ಮಾತ್ರವಲ್ಲ ಅದರ ಸೈನಿಕ ಹಾಗೂ ಆರ್ಥಿಕ ಶಕ್ತಿಯನ್ನೇ ಧ್ವಂಸ ಮಾಡಿದ ಭಾರತೀಯ ಮೂರು ಸೇನೆಯ ಯೋಧರ ಬಹಳ ರೋಚಕವಾದ ಸಾಹಸದ ಕಥೆ ಹಾಗೂ ಅದರ ಕೊನೆಯಲ್ಲಿ ನಮ್ಮ ಸೈನ್ಯದ ಮುಂದೆ 93,000 ದಷ್ಟು ಪಾಕಿಸ್ತಾನಿ ಸೈನಿಕರ ಬೇಷರತ್ತ್ ಆಗಿ ಶರಣಾಗತಿ ಹೊಂದಿದ ಒಂದು ಐತಿಹಾಸಿಕವಾದ ಘಟನೆ.ಆ ಎಲ್ಲಾ ಕಥೆಗಳನ್ನು ಹಾಗೂ ಭಾರತೀಯ ಭೂ ಸೇನೆ,ವಾಯು ಸೇನೆ ಮತ್ತು ನೌಕಾ ಸೇನೆ ಕ್ಷಿಪ್ರವಾಗಿ ಮಾಡಿದಂತಹ ಯುದ್ಧತಂತ್ರವನ್ನು ನೀವುಗಳು ಓದಿಯೇ ಅದರದ್ದೊಂದು ರೋಚಕತೆಯನ್ನು ಅನುಭವಿಸಿಬೇಕು.ಹಾಗಾಗಿ ಅದರಿಂದ ನಿಮ್ಮನ್ನು ವಂಚಿತರನ್ನಾಗಿಸಲು ನನಗೂ ಮನಸ್ಸಿಲ್ಲ.ಅದಕ್ಕಾಗಿಯೇ ಬೇರೆ ಕಥಗೆಳ ಬಗ್ಗೆ ಇಲ್ಲಿ ನಾನು ಸ್ವಲ್ಪವೂ ಹೇಳುತ್ತಿಲ್ಲ.
ನಿಜಕ್ಕೂ ಇದು ಎಲ್ಲರೂ ಓದಲೇ ಬೇಕಾದ ಪುಸ್ತಕವಂತು ಹೌದು. ಹೆಚ್ಚಿನವರು ಅದಾಗಲೇ ಓದಿಯೂ ಇರುತ್ತೀರಾ.ನನಗಂತು ಇದು ತುಂಬಾನೇ ಹಿಡಿಸಿತು.ಹಾಗಾಗಿ ಮನಸ್ಸೋಯಿಚ್ಛೆ ಚಪ್ಪರಿಸಿಕೊಂಡೇ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.ಒಂದು ವೇಳೆ ನೀವು ಇದನ್ನು ಇನ್ನೂ ಓದದೇ ಇದ್ದಿದ್ದರೆ ಖಂಡಿತವಾಗಿಯೂ ಇದನ್ನೊಮ್ಮೆ ಓದಲೇಬೇಕು ಎಂದು ನಾನು ಸಹ ಹೇಳುತ್ತೇನೆ.ಕಾರಣ ನಮ್ಮ ಯೋಧರ ಇತಿಹಾಸದ ಬಗ್ಗೆ,ಅದರಲ್ಲೂ ಇಂತಹ ಇತಿಹಾಸಗಳ ಬಗ್ಗೆ ನಮಗೆ ಅಗತ್ಯವಾಗಿ ಗೊತ್ತಿರಲೇಬೇಕು.ಲೇಖಕರು ಕೂಡ ಇಲ್ಲಿ ಒಂದು ಕಡೆ ನಮ್ಮ ಕರಾಳ ಇತಿಹಾಸದ ಬಗ್ಗೆ ಹೇಳುತ್ತಾ ಈ ಮಾತುಗಳನ್ನು ಹೇಳಿದ್ದಾರೆ."ಓದಬೇಕು ನಾವು,ಓದದೇ ಹೋದರೆ,ಹಿಂದಿನ ತಲೆಮಾರುಗಳಿಗೆ ಆದ ಅನ್ಯಾಯ ಹಾಗೂ ದೌರ್ಜನ್ಯಗಳನ್ನು ಅರಿಯದೇ ಹೋದರೆ ಭವಿಷ್ಯದ ಎಚ್ಚರಿಕೆಗಳಿಗೆ ಸಿದ್ಧತೆ ಮಾಡಿಕೊಂಡು ಮುಂದೆ ಸಾಗೋದು ಅಸಾಧ್ಯ" ಎಂದು. ಈ ಮಾತು ತುಂಬಾನೇ ಹಿಡಿಸಿತು.
ಇನ್ನು ಇದರ ಲೇಖಕರು ಸುಧೀರ್ ಸಾಗರ್.ಅವರ ಬಗ್ಗೆ ಅವರ ಬರಹದ ಹರಿತದ ಬಗ್ಗೆ ಇಲ್ಲಿ ಎಲ್ಲರಿಗೂ ಗೊತ್ತಿರುವಂತಹದ್ದೇ.ನನಗೆ ತಿಳಿದಂತೆ ಅವರು ವ್ಯಕ್ತಿನಿಷ್ಠ ಬರಹಗಾರರಲ್ಲ.ಅವರು ವಸ್ತುನಿಷ್ಠ ಬರಹಗಾರರು.ಬರೆಯುವ ವಿಷಯಗಳ ಬಗ್ಗೆ ಹಾಗೂ ತಮ್ಮದೊಂದು ನಿಲುವುಗಳ ಬಗ್ಗೆ ಅವರಿಗೆ ಅವರದ್ದೇ ಆದ ಸ್ಪಷ್ಟತೆ ಇದೆ.ಹಾಗಾಗಿ ಸಹಜವಾಗಿಯೇ ಅವರ ಬರಹಗಳ ಮೌಲ್ಯ ಹಾಗೂ ತೂಕ ಕೂಡ ಹೆಚ್ಚೇ ಇರುತ್ತದೆ.ಇದರಲ್ಲಿಯೂ ಅದು ಕಾಣುತ್ತದೆ.ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೇ ಇರುವುದನ್ನು ಇರುವಂತೆಯೇ ಲೇಖಕರು ಇಲ್ಲಿ ಸ್ಪಷ್ಟವಾಗಿ ಹಾಗೂ ಮುಕ್ತವಾಗಿ ಬರೆದುಕೊಂಡಿದ್ದಾರೆ.
ನಮ್ಮಲ್ಲಿ ಕೆಲವೊಂದನ್ನು ಕೆಲವರು ಬರೆದರೆನೇ ಚಂದ.ನಿಜ ಹೇಳಬೇಕೆಂದರೆ ನಮ್ಮ ಯೋಧರ ಕಥೆಗಳು ಯಾವತ್ತೂ ರೋಚಕವಾಗಿಯೇ ಇರುತ್ತದೆ,ಆದರೆ ಅದರ ಮೇಲೆ ಇಲ್ಲಿ ಸುಧೀರ್ ಸಾಗರ್ ಅವರ ಬರಹದ್ದೊಂದು ಸೊಗಸಾದ ಶೈಲಿ ಅದೆಷ್ಟು ಚೆನ್ನಾಗಿದೆ ಎಂದರೆ ಬಿಸಿ ಬಿಸಿ ದೋಸೆಗೆ ಕೇಳದೆಯೇ ಎಕ್ಸ್ಟ್ರಾ ಚಟ್ನಿ ಕೊಟ್ಟು,ಒಂದಿಷ್ಟು ಕರಗುವ ಬೆಣ್ಣೆಯನ್ನು ಸಹ ದೋಸೆಯ ಮೇಲಿಟ್ಟೇ ಕೊಟ್ಟರೆ ಎಷ್ಟು ಖುಷಿಯಾಗುತ್ತದೋ,ಅಂತಹ ಖುಷಿ ಅವರ ಯೋಧರ ಬಗೆಗಿನ ಈ ಪುಸ್ತಕ ಓದುವಾಗ ಕೂಡ ನಮಗೂ ಆಗುತ್ತದೆ.ನನ್ನ ಪ್ರಕಾರ ಓದುಗನೊಬ್ಬನ ಓದಿನ ಸಾರ್ಥಕ್ಯ ಎಂದರೆ ಆಹಾ..ಎಂತಹ ಒಳ್ಳೆಯ ಪುಸ್ತಕ ನಾನು ಓದಿದೆ ಎಂಬುವುದರಲ್ಲಿ ಅಡಗಿದ್ದರೆ,ಬರಹಗಾರನೊಬ್ಬನ ದಿವ್ಯ ಸಾರ್ಥಕ್ಯ ನಾನು ಇದನ್ನು ಬರೆದಿದ್ದು ಇಂದು ಸಾರ್ಥಕವಾಯಿತು ಎಂಬ ಭಾವದ ಆಳದಲ್ಲಿಯೇ ಇರುತ್ತದೆ.ಈ ಎರಡೂ ವಿಷಯದಲ್ಲೂ ಲೇಖಕರು ಗೆದ್ದಿದ್ದಾರೆ ಎಂದು ನನಗನಿಸಿತು.ಮೊದಲನೆಯದಾಗಿ ಒಂದೊಳ್ಳೆಯ ಪುಸ್ತಕ ಬರೆದುದಕ್ಕಾಗಿ ಬಹಳಷ್ಟು ಅಭಿನಂದನೆಗಳು Sudheer Sagar ಅವರೇ,ಅದರ ಜೊತೆಗೆಯೇ ಯೋಧರ ಕಥೆಗಳನ್ನೇ ನಿಮ್ಮ ಮೊದಲ ಪುಸ್ತಕದ ವಿಷಯವನ್ನಾಗಿಸಿದ್ದಕ್ಕೆ ಹೃದಯದಿಂದಲೇ ಮತ್ತಷ್ಟು ಅಭಿನಂದನೆಗಳು.
ನನ್ನ ಹಾರೈಕೆ ಇಷ್ಟೇ.ಇಂತಹ ಪುಸ್ತಕಗಳು ಮತ್ತಷ್ಟು ಮಗದಷ್ಟು ಮರು ಮುದ್ರಣ ಆಗುತ್ತಲೇ ಇರಲಿ.ನಮ್ಮ ಯೋಧರ ಸಾಹಸದ ಕಥೆಗಳು ಎಲ್ಲರನ್ನೂ ತಲುಪಲಿ. ಅದೇ ರೀತಿ ಸುಧೀರ್ ಸಾಗರ್ ಅವರ ಬರವಣಿಗೆಯಿಂದ ಇನ್ನಷ್ಟು ಚಂದದ ಪುಸ್ತಕಗಳು ಸಹ ನಿರಂತರವಾಗಿ ಹೊರ ಬರುತ್ತಲೇ ಇರಲಿ.ಒಂದೇ ಒಂದು ಬೇಡಿಕೆ ಅಂದರೆ ಪುಟಗಳ ಸಂಖ್ಯೆಗಳು ಮುಂದಿನ ಪುಸ್ತಕಗಳಲ್ಲಿ ಸ್ವಲ್ಪ ಹೆಚ್ಚೇ ಇರಲಿ ಅಷ್ಟೇ.ಸುಗ್ರಾಸ ಭೋಜನ ಪುಷ್ಕಳವೂ ಆಗಿದ್ದರೆ ಭೋಜನದ ನಂತರವೂ ಅದೆಂತಹ ಸಂತೃಪ್ತಿ ಅಲ್ಲವೇ;ಆಗ ಭೋಜನ ಮಾಡುವವನಿಗೂ ಸುಖವೇ,ಜೊತೆಯಲ್ಲಿ ಬಡಿಸುವವನಿಗೂ ಸಹ..
#ಆ_ಹದಿಮೂರು_ದಿನಗಳು | ಕದನ ಕಥನಗಳು
ಲೇಖಕರು - ಸುಧೀರ ಸಾಗರ
ಪ್ರಕಾಶಕರು - ವಟಿಕುಟೀರ ಟ್ರಸ್ಟ್
ಪ್ರಥಮ ಮುದ್ರಣ - ನವೆಂಬರ್ 2021
ಪುಸ್ತಕಗಳು
Ab Pacchu
(https://phalgunikadeyavanu.blogspot.com)
Comments
Post a Comment