Posts

Showing posts from July, 2021

ಕಪ್ಪು ಸೂರ್ಯ

Image
ನೈತನುಪ್ಪು ತಿನ್ನುವುದಕ್ಕಿಂತಲೂ ಕೆಲವೊಮ್ಮೆ ನೋಡಲು ಇಷ್ಟವಾಗುತ್ತದೆ.ತುಪ್ಪದ ಅನ್ನ ಉದುರುದುರಾಗಿ ಘಮ್ಮೆನ್ನುತ್ತಾ ಹರಡಿಕೊಂಡರೂ ಬರೀ ಅಷ್ಟಕ್ಕೆ ಅದು ಚಂದ ಅಲ್ಲ,ಚಕ್ರ ಮೊಗ್ಗು ಬಿಳಿಯ ಅನ್ನದ ಯಾವುದೇ ಒಂದು ಕೆನ್ನೆಯಲ್ಲಿ ಆತುಕೊಂಡು ಒಂಚೂರೇ ಚೂರು ದರ್ಶನ ಕೊಟ್ಟರೂ ಸಾಕು ಕಣ್ಣಿಗೆ ಅದೆನೋ ಹಿತ.ಪೋಟೋ ಸೆಷನ್ ಗೆ ಅಂತು ಅದು ಯಾವತ್ತೂ ಅನ್ನದ  ಸೆಂಟರ್ ನಲ್ಲಿಯೇ ಇರಬೇಕು.. ಹೈಸ್ಕೂಲ್ ನ ಖಡಕ್ ಪ್ರಿನ್ಸಿಪಾಲರಂತೆ ಬಾಯಿ ಬಿಟ್ಟು ನಗದಿದ್ದರೂ ಸಹ.  ತಿನ್ನಲು ಬರುವುದಿಲ್ಲ ನಿಜ,ಆದರೆ ಅದು ಇರಬೇಕು.ಚಕ್ರ ಮೊಗ್ಗು ನೈಚೋರಿನ ಕಪ್ಪು ಸೂರ್ಯನಂತೆ.ಹೊಳೆಯದಿದ್ದರೂ ಬಿಳಿಯ ಬಣ್ಣದ ಘೀರೈಸಿನಲ್ಲಿ ಅದು ಎಲ್ಲಾದರೂ ಒಂದು ಕಡೆ ಅದರಷ್ಟಕ್ಕೆ ಹೊರಳಲೇಬೇಕು.ಆಗಲೇ ಮನಸ್ಸಿಗೆ ತಕ್ಕ ಮಟ್ಟಿನ ಸಮಾಧಾನ. ಅಲಂಕಾರವೇ ಅಡುಗೆ ಅಲ್ಲ.ಒಗ್ಗರಣೆಯೇ ಇಲ್ಲದಿದ್ದರೂ ಹೊಟ್ಟೆ ತಂಪಾಗಬಹುದು ಆದರೆ ಕಣ್ಣು ಅಲ್ಲ.ಜಿಹ್ವೆಗೂ ಕಣ್ಣಿಗೂ ದಿವ್ಯವಾದ ಒಂದು ಕನೆಕ್ಷನ್ ಬಹಳ ಹಿಂದಿನಿಂದಲೇ ಇದೆ.ನನಗಂತು ಮೊದಲು ಕಣ್ಣು ಇಷ್ಟ ಪಡಬೇಕು, ಹೃದಯ ಅಲ್ಲ.ಆಮೇಲೆ ಅಷ್ಟೇ ಉದರಕ್ಕೆ ಅದರ ಕಾರ್ಯ ಮಾಡಲು ಶರತ್ತು ರಹಿತ ಅನುಮತಿ. ಬರೀ ಇದೊಂದೇ ಅಲ್ಲ.. ಇಂತಹದ್ದು ತುಂಬಾ ಇದೆ.ಶ್ಯಾವಿಗೆ ಪಾಯಸದ ಕೆನೆ ಬಣ್ಣದ ಮೇಲ್ಬಾಗದಲ್ಲಿ ಹುರಿದ ಗೋಡಂಬಿ ಇದ್ದರಷ್ಟೇ ಆ ಪರಮಾನ್ನಕ್ಕೊಂದು ಭೂಷಣ,ಬೇಕರಿ ಲಾಡಿನಲ್ಲಿ ಒಂದೆರಡು ಲವಂಗ, ತಿಮ್ಮಪ್ಪನ ಲಡ್ಡು ಪ್ರಸಾಧದಲ್ಲಿ ಗೋಡಂಬಿ ಸಹಿತ ಸಾಕಷ್ಟು ಏಲಕ್ಕಿ ಸಿಪ್ಪೆ,ಪುಳ

Breaking Bad

Image
ಇದು ಎಷ್ಟು ಬ್ರೇಕಿಂಗ್ ಬ್ಯಾಡೋ.. ಅಷ್ಟೇ "ಬೇಕಿಂಗ್ ಬ್ಯಾಡ್" ಕೂಡ ಹೌದು! ಆದರೆ ಈ ಸಿರೀಸ್ ನ ಕಥೆ ಒಂದು ಉಂಟಲ್ಲಾ,ಅದನ್ನು ನಮ್ಮ ಮುಂದೆ ಪ್ರಸ್ತುತ ಪಡಿಸಿದ ಆ ರೀತಿ ಉಂಟಲ್ಲಾ....  ಅದು ಮಾತ್ರ ಗ್ರೇಟು,ಅಧ್ಭುತ,ವಾಹ್,ಆಹಾ..ಎನ್ನುವ ಎಲ್ಲವನ್ನೂ ಮೀರಿ ಹೃದಯಕ್ಕೆ ತುಂಬಾನೇ ಹತ್ತಿರವಾಗುವ ಚೀಝು.  ಇವತ್ತಿಗೂ ಜಗತ್ತಿನ ಯಾವುದೇ ಟಾಪ್ ರೇಟಿಂಗ್ ಲಿಸ್ಟ್ ತೆಗೆದು ನೋಡಿ ಟಾಪ್ ಟೆನ್ ಸಿರೀಸ್ ಗಳ ಪಟ್ಟಿಯಲ್ಲಿ ಮೊದಲ ಮೂರರಲ್ಲಿ ಒಂದು ಸ್ಥಾನ ಯಾವತ್ತಿಗೂ ಈ ಸಿರೀಸ್ ಗೇ ಇದ್ದೇ ಇದೆ.ಅದರಲ್ಲೂ ಮೂವಿಗಿಂತಲೂ ಹೆಚ್ಚಾಗಿ ಕೇವಲ ಸಿರೀಸ್ ಒಂದನ್ನೇ ನೋಡಿ ಮನರಂಜನೆ ಪಟ್ಟುಕೊಳ್ಳುವಂತಹ ಕಟ್ಟರ್ ಸಿರೀಸ್ ಪ್ರೇಮಿಗಳ ಮನದಲ್ಲಿ ಎದೆಯಲ್ಲಂತು ಮೊದಲ ಸ್ಥಾನದಲ್ಲಿ ಯಾವತ್ತಿಗೂ ರಾರಾಜಿಸುವುದು Breaking Bad ಎಂಬ ಈ ಅಮೋಘ ಅತ್ಯಧ್ಭುತ ಸಿರೀಸ್ ಹಾಗೂ ಇದರ Heisenberg ಖ್ಯಾತಿಯ ಕೆಂಚು ಮೀಸೆಯ Walter White. ಕಥೆ ಹೇಳುವುದಿಲ್ಲ... ಪೂರ್ತಿ ಕಥೆ ಹೇಳಲು ಸಾಧ್ಯ ಆಗುವುದು ಕೂಡ ಇಲ್ಲ! ಆದರೂ ಒಂದಷ್ಟನ್ನು ಇಲ್ಲಿ ಮೆಲುಕಿ ಹಾಕಿಕೊಳ್ಳಲು ಹಾಗೇ ಇಷ್ಟ ಪಡುತ್ತೇನೆ.  ಅವರಿಬ್ಬರು ಮೂಲತಃ ಗುರು ಶಿಷ್ಯರೇ.ಶಿಷ್ಯ ಪ್ರತಿಯೊಂದರಲ್ಲೂ  ಸಿಕ್ಕಾಪಟ್ಟೆ ವೀಕು ಎಂಬಂತಿದ್ದರೆ ಗುರು ಎಲ್ಲವನ್ನೂ ಮೀರಿದ ಅಪ್ರತಿಮ ಜೀನಿಯಸ್.ಬಹುಶಃ ಅವನಿಗೆ ಗೊತ್ತಿರದ ವಿಷಯವೇ ಇಲ್ಲ.ಶಿಷ್ಯ ಡ್ರಗ್ ಹೊಗೆಯಲ್ಲಿ ಅದರ  ಪರಿಮಳದಲ್ಲೇ ಪ್ರತಿನಿತ್ಯ ಅರಳುವ ಹರೆಯದ  ಹುಡುಗ ಆಗಿದ್ದರೆ,ಗ

Mimi

Image
ಆ ಹಾಡಿನ ಸಾಲಿನಂತೆಯೇ ಅವಳು "ಪರಮ ಸುಂದರಿ". ಹೆಸರು ಮಿಮಿ.ಹಣಕ್ಕಾಗಿ ಸ್ಟೇಜ್ ಏರಿ ಚಂದಗೆ ಡಾನ್ಸ್ ಮಾಡುತ್ತಾಳೆ.ಕನಸು ಆಸೆ ಎರಡೂ ಒಂದೇ,ಅದೇ ಬಾಲಿವುಡ್ ನಲ್ಲಿ ನಾಯಕಿಯಾಗಿ ರಾಣಿಯಂತೆ ಮೆರೆಯಬೇಕು ಎಂದು.  ಅವನು ಭಾನು.ಭಾನು ಪ್ರತಾಪ್ ಪಾಂಡೆ.ಕೆಲಸ ಕಾರ್ ಡ್ರೈವರ್.ಅವನೇ ಹೇಳಿಕೊಳ್ಳುವಂತೆ ಅವನೊಬ್ಬ ಆರ್ಟ್ ಲವ್ವರ್.ಆದರೆ ಕಮಿಷನ್ ಸಿಗುವ  ಕೆಲಸಗಳನ್ನು ಮಾಡಲು ಮಾತ್ರ ಅವನು ಎಂದೆಂದಿಗೂ ಹಿಂಜರಿಯುವುದೇ ಇಲ್ಲ. ತಮ್ಮ ಹೊಲದಲ್ಲಿ ಕಬ್ಬು ಬೆಳೆಯಲಾರದು ಎಂದು ಗೊತ್ತಾದಾಗ ಮತ್ತೊಬ್ಬರ ಫಲವತ್ತಾದ ಹೊಲದಲ್ಲಿ ಕಬ್ಬು ಬೆಳೆದು ಖುಷಿ ಪಟ್ಟುಕೊಳ್ಳುವಂತಹ ಕಥೆ ಇದು.ಹೊಲ ಯಾರದ್ದೋ.. ಕಬ್ಬು ಯಾರದ್ದೋ.ಈ ರೀತಿ ಹೇಳಿ ಬಿಟ್ಟರೆ ಇದು ಕಬ್ಬು ಬೆಳೆಯುವ ರೈತರುಗಳ ಕಥೆ ಖಂಡಿತವಾಗಿಯೂ ಅಲ್ಲ.ಬಾಡಿಗೆ ತಾಯಿಯ ಹೊಟ್ಟೆಯಲ್ಲಿ ಇನ್ನಾರಾದೋ ದಂಪತಿಗಳ ಮಗು ಸ್ವತಃ ಸಮ್ಮತಿ ಇದ್ದೇ ಕಸಿಯಾಗುವ Surrogacy ಯ ಕಥೆ ಇದು.  ಆ ಕಥೆ ಹೇಳಲಾರೆ.. ಅದನ್ನು ನೀವೇ ನೋಡಿ,ಏಕೆಂದರೆ ಇದು ಒಂಥರಾ ಚೆನ್ನಾಗಿದೆ,ಮಜವಾಗಿದೆ,ಅಲ್ಲಲ್ಲಿ ನಗು ಇದೆ,ಒಂದಷ್ಟು ಭಾವನೆಗಳಿವೆ.. ಒಟ್ಟಿನಲ್ಲಿ ಇದೊಂದು ಫೀಲ್ ಗುಡ್ ಮೂವಿ ಎಂದೇ ಹೇಳಬಹುದು.  Pankaj Tripathi ಎಂಬ ನಟ ದಿನದಿಂದ ದಿನಕ್ಕೆ ಇಷ್ಟವಾಗುತ್ತಾ ಹೋಗುತ್ತಿದ್ದಾನೆ ಎಂದರೆ ಅದು ಅವನ  ಅಭಿನಯಕ್ಕೆ ಹಿಡಿದ ಕೈಗನ್ನಡಿಯೇ ಹೊರತು ಮತ್ತೇನೂ ಅಲ್ಲ. ಸ್ವಲ್ಪ ಕಾಮಿಡಿ ಸ್ವಲ್ಪ ಭಾವುಕತೆ ಎರಡನ್ನೂ ಇಲ್ಲಿ ಹದವಾಗಿ ಬೆರೆಸುವ ಪಂಕಜ್ 

Sarpatta Parambarai

Image
ಜಿದ್ದಾಜಿದ್ದಿನ ಹತ್ತು ರೌಂಡ್ ಗಳು ಮುಗಿದು ಅದು ಹನ್ನೊಂದನೇ ರೌಂಡಿನ ಆಟ....  ಇಬ್ಬರೂ ಇನ್ನೂ ಸೋತಿಲ್ಲ! ನೋಡುವವರಿಗೆ ಒಂಥರಾ ನೇಲ್ ಬೈಟಿಂಗ್ ಮ್ಯಾಚ್ ಅದು.  "ಅಡಿ ಮಾಮ.. ಅಡಿ" ಎಂದು ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಗಂಡನಿಗಾಗಿ ಗಂಟಲು ಹರಿಯುವಂತೆ ಕೂಗುವ ಮಾರಿಯಮ್ಮ ಒಂದು ಕಡೆ.. "Don't care this buggers man..hit hard man.."  ಎಂದು ತಮಿಳಿಂಗ್ಲಿಷಿಗೆ Anglo Indian accent ಅನ್ನು ಬೆರೆಸಿಯೇ ಮಾತಾಡುವ Daddy ಯದ್ದೊಂದು ಇಲ್ಲಿ ಎಂದೆಂದಿಗೂ ಮುಗಿಯದ ಪ್ರೋತ್ಸಾಹ...ಅವನ ಹೆಸರು ಮಾತ್ರ ಡ್ಯಾಡಿ. ಅವನು ತಂದೆಯಲ್ಲ. ತಮ್ಮ ಪರಂಪರೆಯ ಗೌರವ ಮಣ್ಣು ಪಾಲು ಆಗಬಹುದೋ  ಇಲ್ಲವೋ ಎಂಬ ಭಯ ಹಾಗೂ ಕುತೂಹಲದಿಂದ ಅಲ್ಲಿಯವರೆಗೆ ದೂರದಲ್ಲಿಯೇ ಕುಳಿತಿದ್ದ ಕೋಚ್ ರಂಗನ್ ವಾತಿಯರ್,ಕೊನೆ ಕೊನೆಗೆ ತಡೆದುಕೊಳ್ಳಲು ಆಗದೆ ತನ್ನ ಶಿಷ್ಯನಿಗೆ ಚಿಯರ್ ಅಪ್ ಮಾಡುವುದಕ್ಕಾಗಿ ಕುಳಿತಲ್ಲಿಂದ ಎದ್ದು ರಿಂಗಿಗೆ ಮತ್ತಷ್ಟು ಹತ್ತಿರವಾಗಿಯೇ ಬಿಡುತ್ತಾನೆ..  ಡ್ಯಾನ್ಸು ಮಾಡುತ್ತಲೇ ರಿಂಗ್ ಅಲ್ಲಿ ಕೈಚಳಕ, ಕಾಲ್ಚಳಕ ತೋರಿಸುವ Dancing Rose ನ ಕೋಚಿಂಗ್ ಇಲ್ಲಿ ಕೇವಲ ಎದುರಾಳಿಗಷ್ಟೇ ಸೀಮಿತ... ಅವರ ತಂಡ ಸೋತಿದ್ದು ಕಡಿಮೆ. ಗೆಲವು ಅವರಿಗೆ ಸಾಮಾನ್ಯ ವಿಷಯ.  ತೆಂಗಿನ ಗರಿಗಳ ಆ ಮಡಲಿನ ಚಪ್ಪರಡಿಯ ಕ್ರಿಂಡಾಗಣದಲ್ಲಿ ಸೇರಿದ್ದ ಎರಡೂ ಪಂಗಡಗಳ ನೂರಾರು ಜನರ  ಬಾಯಲ್ಲಿ ಇದ್ದ ಹೆಸರುಗಳು ಎರಡೇ...  ಒಂದು Vembuli.. ಮತ್ತೊಂದ

ಮೂಡೆ ಮತ್ತು ಕರ್ಕಟ್ಟೆ ಮುಳ್ಳು

Image
  ಗುಡ್ಡದ ನೆತ್ತಿಯಲ್ಲಿ ಇದೊಂದು ಮುಳ್ಳು ಅದರಷ್ಟಕ್ಕೆ ಯಾವ ಆರೈಕೆಯೂ ಇಲ್ಲದೆ ತನ್ನಿಂತಾನೆ ಬೆಳೆದು ಬಿಡುತ್ತದೆ.  ನನಗೆ ಚಿಕ್ಕಂದಿನಿಂದಲೂ ಈ ಮುಳ್ಳೆಂದರೆ ಇಷ್ಟ,ಅದೇ ರೀತಿ ವಿಚಿತ್ರವಾದ ಅಕ್ಕರೆ ಕೂಡ.ಆದರೆ ಇದರೊಂದಿಗೆ ಆಟವಾಡಲು ಅಲ್ಲ,ತಿಂಡಿ ಮಾಡುವಲ್ಲಿ ಇವುಗಳದ್ದೊಂದು ವಿಶಿಷ್ಟವಾದ ಸಹಕಾರಕ್ಕಾಗಿ ನನಗಿದು ಇಷ್ಟ.ಹಾಗಾಗಿ ಹಲವಾರು ಬಗೆಯ ಮುಳ್ಳುಗಳಲ್ಲಿ ಇದೊಂದು ಮುಳ್ಳು ಹೆಚ್ಚು ಇಷ್ಟವಾಗಿ ಬಿಟ್ಟಿದೆ ನನಗೆ.  ಮೂಡೆ,ಗುಂಡ ದಂತಹ ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳನ್ನು ಮಾಡಲು ಬೇಕಾಗುವ ಕೊಟ್ಟೆಗಳನ್ನು ಕಟ್ಟಲು ಈ ಒಂದು ಮುಳ್ಳು ಇದ್ದು ಬಿಟ್ಟರೆ ಬಹಳನೇ ಅನುಕೂಲ. ಹಾಗಾಗಿ ಇದರದ್ದೊಂದು ಗಿಡ ಗುಡ್ಡದಲ್ಲಿ ಆಗಲಿ ಅಥವಾ ನಮ್ಮ ಜಾಗದಲ್ಲಿ ಎಲ್ಲೇ ಕಣ್ಣಿಗೆ ಬಿದ್ದರೂ ಹಿಂದೆ ಎಲ್ಲಾ ನನ್ನಮ್ಮ ಅದನ್ನು ಕಡಿಯದೇ ಹಾಗೇ ಅದರ ಬುಡದಲ್ಲಿರುವ ಇತರ ಪೊದೆಗಳನ್ನಷ್ಟೇ ತೆಗೆದು ಈ ಮುಳ್ಳಿನ ಗಿಡಕ್ಕೆ ನೆಮ್ಮದಿಯಾಗಿ ಉಸಿರಾಡಲು ಮತ್ತು ಬೆಳೆದು ದೊಡ್ಡದಾಗಿ ತಲೆ ಎತ್ತಿ ನಿಲ್ಲಲು ಅನುಕೂಲ ಮಾಡಿ ಕೊಡುತ್ತಿದ್ದಳು. ಆದರೆ ಈಗೀಗ ನಮ್ಮ ಜಾಗದಲ್ಲೂ ಇದರದ್ದೊಂದು ಪತ್ತೆಯೇ ಇಲ್ಲ.ಹಾಗೇ ನಾಪತ್ತೆಯಾಗಿ ಬಿಟ್ಟಿದೆ ಈ ಮುಳ್ಳಿನ ಗಿಡ.ಅಳಿವಿನಂಚಿಗೆ ಸರಿದಿದೆ ಎಂದರೆ ಮತ್ತಷ್ಟು ಸರಿಯಾಗುತ್ತದೆ! ಮೊನ್ನೆ ಮನೆಯ ಮೇಲಿನ  ಗುಡ್ಡದಲ್ಲಿ ಸುಮ್ಮನೆ ಸುತ್ತಾಡುವಾಗ ಒಂದಷ್ಟು ಪೊದೆಗಳ ನಡುವೆ ಈ ಮುಳ್ಳಿನ ದೊಡ್ಡ ಗಿಡಗಳು ಕಣ್ಣಿಗೆ ಬಿದ್ದು ಬಿಟ್ಟವು.ನೋಡಿ ಖುಷಿಯಾಯಿತು.ಹಾಗಾ

ಇಕ್ಕಟ್

Image
ತುಂಬಾ ಗಮ್ಮತ್ ಉಂಟು ಆಯ್ತಾ ಈ ಮೂವಿ.ಎರಡು ಗಂಟೆ ಹಾಗೇ ನಕ್ಕು ಹಗುರಾಗಲು,ಮನಸ್ಸನ್ನು ಒಂದಿಷ್ಟು ಉಲ್ಲಾಸಿತಗೊಳಿಸಲು ಹೇಳಿ ಮಾಡಿಸಿದ ಮೂವಿ ಇದು.ವೀಕೆಂಡ್ ಗೆ ನೋಡಲು ದಿನ ಫಿಕ್ಸ್ ಮಾಡುವಿರಾದರೆ  ಖಂಡಿತವಾಗಿಯೂ ಒಳ್ಳೆಯ ಸರಕೇ ಇದು.  ಲಾಕ್ ಡೌನ್ ಸಂದರ್ಭದಲ್ಲಿ ಮನೆಯೊಳಗಿನ ಎಡವಟ್ಟುಗಳೇ ಇದರ ಕಥೆ.ಕಥೆ ಹೇಳುವುದಿಲ್ಲ ಅದನ್ನು ನೀವು ನೋಡಿಯೇ ಎಂಜಾಯ್ ಮಾಡಬೇಕು.ಎಲ್ಲರ ಅಭಿನಯವೂ ಬಹಳನೇ ಸೊಗಸಾಗಿದೆ ಇಲ್ಲಿ.Nagabhushana N S,Bhoomi Shetty ಸಂಭಾಷಣೆಗಳು ಮೂವಿಯ ಉದ್ದಕ್ಕೂ ಕಚಗುಳಿ ಇಡುತ್ತಲೇ ಇರುತ್ತವೆ.Sundar Veena ಮತ್ತು Rj Vikki ಅಭಿನಯವೂ ಕೂಡ ಅಷ್ಟೇ ಚೆನ್ನಾಗಿದೆ.Esham Khan ಮತ್ತು Haseen Khan ಇದನ್ನು ನಿರ್ದೇಶಿಸಿದ್ದಾರೆ.ಅಲ್ಲಲ್ಲಿ ಒಂಚೂರ್ಚೂರು ಕುಂದಾಪುರ ಕನ್ನಡ ಭಾಷೆಯ ಸೊಗಡು Bhoomi Shetty ಮಾತಲ್ಲಿ ಕೇಳಲು ಇಂಪಾಗಿದೆ.ಒಂದೆರಡು ಕ್ಯಾಚಿ ಹಾಡುಗಳು ಕಿವಿಗಳೆರಡನ್ನು ಹಾಗೇ ಕ್ಯಾಚ್ ಮಾಡಿಕೊಳ್ಳುವಲ್ಲಿ ಸಫಲವಾಗಿವೆ.  ಇಂತಹ ಕನ್ನಡ ಸಿನಿಮಾಗಳು OTT platform ಗೆ ಹೇಳಿ ಮಾಡಿಸಿದ್ದು.ಕನ್ನಡದಲ್ಲಿ OTT ಗೆ ಸುಲಭವಾಗಿ ಒಗ್ಗಿಕೊಳ್ಳುವ ಹಾಗೂ ನೋಡುಗರಿಗೂ ಅಷ್ಟೇ ಇಷ್ಟವಾಗುವ ಇಂತಹ ಮೂವಿಗಳು ಇನ್ನಷ್ಟು ಬರಲಿ...  #IKKAT | Prime Kannada Movie Romantic Comedy Year - 21 july 2021 Movies ab

ಟೀಮ್ ಇಂಡಿಯಾದ B ಟೀಮ್

Image
ಟೀಮ್ ಇಂಡಿಯಾದ "B Team " ಎಂದೇ ಕರೆಸಿಕೊಳ್ಳುತ್ತಿರುವ ರಾಹುಲ್ ದ್ರಾವಿಡ್ ಕೋಚಿಂಗ್ ಇರುವ, ಶಿಖರ್ ಧವನ್ ನಾಯಕತ್ವದ ನಮ್ಮ ಭಾರತದ ತಂಡ  ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಬಹಳ ಸುಲಭದಲ್ಲಿ ಗೆದ್ದುಕೊಂಡಿದೆ.  ಪ್ರಥ್ವಿ ಶಾ ಬಾಲ್ ಇರುವುದೇ ಚಚ್ಚಿ ಬಿಸಾಕಲು ಎಂಬ ತನ್ನ ನೆಚ್ಚಿನ ಥಿಯರಿಯಿಂದ ಒಂದಿಚೂ ಹಿಂದೇ ಸರಿದೇ ಇಲ್ಲ,ಕೆಟ್ಟ ಎಸೆತ ಬಿಡಿ ಒಳ್ಳೊಳ್ಳೆಯ ಬಾಲ್ ಗೆ ಕೂಡ ಆತ ಸರಾಗವಾಗಿ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಲೇ ಇದ್ದ, ಅದೂ ಕೂಡ ಹೆಚ್ಚಿನ ಎಲ್ಲವೂ Copy book Shots ಗಳು.ಅವನು ಆಡುವ ರಭಸ ನೋಡಿ ಸ್ವತಃ ಶ್ರೀಲಂಕಾ ಕೋಚ್ Mickey Arthur ತಲೆ ಚಚ್ಚಿಕೊಳ್ಳುತ್ತಿದ್ದ ದೃಶ್ಯವಂತು ನಿಜವಾಗಿಯೂ ಬಹಳ ಮಜವಾಗಿತ್ತು. ಪ್ರಥ್ವಿ ಶಾ ಎದುರಿಸುತ್ತಿದ್ದ ಪ್ರತೀ ಎಸೆತದಲ್ಲಿಯೂ ಸಹ ಈಗ ಯಾವ ಕಡೆಗೆ ಇವ ಬೌಂಡರಿ ಹೊಡೆಯಬಹುದು ಎಂಬ ಕುತೂಹಲ,ನಿರೀಕ್ಷೆಗಳು ನೋಡುವ ನಮಗೆ ಮಾತ್ರವಲ್ಲ ಸ್ವತಃ ಶ್ರೀಲಂಕಾದ ಫೀಲ್ಡರ್ಸ್ ಗಳಿಗೆ ಕೂಡ ಅಧಿಕವಾಗಿಯೇ ಇತ್ತು  ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಬಿಡಿ.ಆ ಹುಡುಗ 100  ಹೊಡೆಯಬೇಕಿತ್ತು.ಪರವಾಗಿಲ್ಲ ಮುಂದೆ ಬೇಕಾದಷ್ಟು ನೂರುಗಳನ್ನು ತ್ವರಿತವಾಗಿ ಆತ ಹೊಡೆಯುತ್ತಾನೆ ಎಂದು ಈಗಲೇ ಅನ್ನಿಸುತ್ತಿದೆ.ಯಾಕೋ ಈ ಹುಡುಗ ವಿರೇಂದ್ರ ಸೆಹ್ವಾಗ್ ನ ಓಪನಿಂಗ್ ಬ್ಯಾಟಿಂಗ್ ಅನ್ನೇ ಪ್ರತೀ ಸಲ ನೆನಪಿಸುತ್ತಾನೆ ಅನ್ನುವುದು ಕೂಡ ಸುಳ್ಳಲ್ಲ. ಇವತ್ತು ಒಂದು ಸಮಯದಲ್ಲಿ 9 ಓವರ್ ಗೆ 90 ರನ್ ವರೆಗೂ

ಕಾಫಿಗೆ ಸಕ್ಕರೆ ಕಡಿಮೆ ಆಗಿದೆ..

Image
ಮೋಡರೇಟರ್ - ಓಕೆ..ಈಗ ನಾವು ನಮ್ಮ ಗಣ್ಯವ್ಯಕ್ತಿ X ಅವರೊಂದಿಗೆ ಮಾತನಾಡಲು ಕೆಳಗೆ ಆಡಿಯನ್ಸ್ ಬಾಕ್ಸ್ ನಲ್ಲಿರುವವರಿಗೆ ಕೂಡ ಅವಕಾಶ ನೀಡುತ್ತಿದ್ದೇವೆ.ಆಸಕ್ತ ಕೇಳುಗರು ದಯವಿಟ್ಟು ತಮ್ಮ ಬಲಗೈಯನ್ನು ಮೇಲೆ ಎತ್ತಿ ಬೇಗನೇ ಮೇಲೆ ಬಂದು,ನಿಮ್ಮ ಪ್ರಶ್ನೆಗಳನ್ನು ಇಂದಿನ ನಮ್ಮ ಗಣ್ಯವ್ಯಕ್ತಿ X ಅವರಲ್ಲಿ ಕೇಳಬಹುದು.  ಕೇಳುಗ 1 - ನಮಸ್ತೆ X ಸರ್.. ನಾನು ನಿಮ್ಮ ಬಹಳ ದೊಡ್ಡ ಅಭಿಮಾನಿ ಸರ್. ಗಣ್ಯವ್ಯಕ್ತಿ - ಹೌದೇ.. ಬಹಳ ಸಂತೋಷ.. ಬಹಳ ಸಂತೋಷ.. ಕೇಳುಗ 1 - ನಿಮ್ಮ ಬಗ್ಗೆ ಬಹಳ ಕೇಳಿದ್ದೇನೆ ಸರ್.. ನಿಮ್ಮ ಜೊತೆ ನೇರವಾಗಿ ಮಾತಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಗಣ್ಯ ವ್ಯಕ್ತಿ - ಹಹ್ಹಾ.. ಬಹಳ ಸಂತೋಷ.. ಬಹಳ ಸಂತೋಷ... ಕೇಳುಗ 1- ಇಂತಹ ಒಂದು ರೂಮ್ ಕ್ರಿಯೆಟ್ ಮಾಡಿದ ಮಿಸ್ಟರ್ Y ಅವರಿಗೆ ವಿಶೇಷ ಧನ್ಯವಾದಗಳು. ಮೋಡರೇಟರ್ - ದಯವಿಟ್ಟು ನೇರವಾಗಿ ಪ್ರಶ್ನೆಗಳನ್ನು ಕೇಳಿ ಸರ್. ಕೇಳುಗ 1 - ಪ್ರಶ್ನೆ ಎಲ್ಲಾ ಏನಿಲ್ಲ ಸಾರ್.. ನಾನು ಸುಮ್ಮನೆ X ಸರ್ ಅವರೊಂದಿಗೆ ಮಾತಾಡುವ ಅಂತ ಬಂದದ್ದು... ಆಯಿತು ಸಾರ್.. ನಂದು ಇನ್ನು ಏನಿಲ್ಲ.. ನೀವು ಮುಂದುವರಿಸಬಹುದು.  ಮೋಡರೇಟರ್ - ಸಮಯದ ಅಭಾವ ಇರುವುದರಿಂದ ದಯವಿಟ್ಟು ಮುಂದಿನ ಎಲ್ಲರೂ ನೇರವಾಗಿ ನಿಮ್ಮ ಪ್ರಶ್ನೆಗಳನ್ನಷ್ಟೇ ಕೇಳಿ ಹಾಗೂ ಇತರರಿಗೂ ಹೆಚ್ಚಿನ ಅವಕಾಶ ಸಿಗುವಂತೆ ನೋಡಿಕೊಳ್ಳಿ. ಓಕೆ.. ಈಗ ನಮ್ಮೊಂದಿಗೆ ಕೇಳುಗ 2 ಇದ್ದಾರೆ.ಹೇಳಿ ಸರ್..ನಮ್ಮ ಗಣ್ಯವ್ಯಕ್ತಿ X ಅವರಲ್ಲಿ ಏನಾದರೂ ಪ್ರಶ್ನೆ

Malik

Image
ನಾಯಕ ಇಲ್ಲಿ "Godfather" ನಂತೆ ಕಾಣುತ್ತಾನೆ,ಕಥೆ ಹೇಳುವವರು ಆವಾಗವಾಗ "ಉಳಿದವರು ಕಂಡಂತೆ" ಮೋಡ್ ಗೆ ಜಾರುತ್ತಾರೆ! ಒಬ್ಬ ಪ್ರಮುಖ ಕೊಲೆಗಾರ....ಕೈ ಮೀರಿ ನಡೆದು ಹೋಗುವ ಹಲವು ಕೊಲೆ,ಮುಗಿಯದ ಕೋಮು ಗಲಭೆ(ಮುಸ್ಲಿಂ - ಕ್ರಿಶ್ಚಿಯನ್),ಹಗಲು ರಾತ್ರಿಯೆನ್ನದೆ ವಿಶ್ರಮಿಸದ ಆ ಎರಡು ಕಡಲ ತೀರ(ಲಕ್ಷದ್ವೀಪ-ತಿರುವನಂತಪುರ),ಹಲವು ಸುಳ್ಳು,ಒಂದೆರಡು ಕಡು ಸತ್ಯ,ನಡುನಡುವೆ ಗೊಂದಲ,ರಾಜಕೀಯದ ಲಾಭ ನಷ್ಟ,... ಇವಿಷ್ಟನ್ನು ಒಳಗೊಂಡ 2 ಗಂಟೆ 40 ನಿಮಿಷಗಳ ಮೂವಿ ಇದು.  ಎಲ್ಲಾ ಮೂವಿ ಎಲ್ಲರಿಗೂ ಇಷ್ಟ ಆಗಬೇಕಾಗಿಲ್ಲ.FaFa ನ ಹೆಚ್ಚಿನ ಮೂವಿ ಇಷ್ಟ ಆಗುತ್ತದೆಯಾದರೂ ಯಾಕೋ ಅವನ ರೇಂಜಿಗೆ ಒಟ್ಟಾರೆ ಮೂವಿ ಅಷ್ಟಾಗಿ ರುಚಿಸಲಿಲ್ಲ.ಕೊನೆಯಲ್ಲಿ ಮೂವಿಯ ಕಥೆ ಆಸಕ್ತಿ ಮೂಡಿಸುತ್ತದೆಯಾದರೂ ಅಷ್ಟು ಉದ್ದದ ಮೂವಿಗೆ ಹಿಡಿದು ನಿಲ್ಲಿಸುವ ತಾಕತ್ತು ಸ್ವಲ್ಪ ಕಡಿಮೆ ಇದೆ ಎಂದೇ ಅನಿಸಿತು.  1960 ರಿಂದ ಈಗಿನವರಿಗೆ ಕಥೆಯನ್ನು ಇಲ್ಲಿ ತೋರಿಸಲಾಗಿದೆ.ಕೆಲವು ನಿಜ ಘಟನೆಗಳನ್ನೇ ಹೆಕ್ಕಿ ಹೆಕ್ಕಿ ಈ ಕಥೆಯನ್ನು ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ. Mahesh Narayanan ಇದನ್ನು ನಿರ್ದೇಶಿಸಿದ್ದಾರೆ.Fahad Fasil, Nimisha Sajayan, Vinay Forrt, Joju George, Dileesh Pothan ಮುಂತಾದವರ ಅಭಿನಯವಿದೆ.FaFa ನ ಅಭಿನಯ ಎಂದಿನಂತೆ ಅವನ ಅಭಿಮಾನಿಗಳಿಗೆ ಇಷ್ಟವಾಗಬಹುದು ಆದರೆ ಒಟ್ಟಾರೆ ಮೂವಿ... ಅದು ಅವರವರ ಅಭಿರುಚಿಗೆ ಬಿಟ್ಟದ್ದು!  #Malik

Perfume :The Story of a Murderer

Image
ಸುವಾಸನೆ ಯಾರಿಗೆ ಇಷ್ಟವಿಲ್ಲ ಹೇಳಿ.ಚಿಕ್ಕವರಿಂದ ಹಿಡಿದು ದೊಡ್ಡವರಿಗೆ ಪರಿಮಳವೆಂದರೆ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಇಷ್ಟವೇ. ಕೆಲವರಿಗಂತು ಅದು ಅತೀ ಅಗತ್ಯ ಎಂಬಂತಹ ಸರಕು.ಸೆಂಟ್ ಆಗಿ ಅಂದ ಚಂದದ ಬಾಟಲ್ ಗಳಲ್ಲಿ ಹಾಗೇ ತುಂಬಿ  ತುಳುಕಾಡಿ,ನಮ್ಮ ಮನೆ ಸೇರಿ ಇನ್ನೊಬ್ಬರ ಮನ ಗೆಲ್ಲಲು ನಮ್ಮ ಸುತ್ತ ಮುತ್ತ ಆಹ್ಲಾದಕರ ವಾತಾವರಣವನ್ನೇ ನಿರ್ಮಿಸುವ ಈ ಸೆಂಟ್ ಗಳ ಮೂಲ ಸುಗಂಧ ಭರಿತ ಹೂವುಗಳು,ಬೇರು,ನಾರು,ತೊಗಟೆ,ಜಿಡ್ಡು ಇತ್ಯಾದಿ ಇತ್ಯಾದಿ.ಸಸ್ಯ ಮೂಲದಿಂದ ಮಾತ್ರವಲ್ಲ ಪ್ರಾಣಿ ಮೂಲದಿಂದಲೂ ಸೆಂಟ್ ತಯಾರಿಸುತ್ತಾರೆ.ಆದರೆ ಯಾವತ್ತಾದರೂ ಮನುಷ್ಯನೇ ಘಮಘಮಿಸುವ ಸೆಂಟಿನ ಮೂಲವಾದರೆ ಆಂದರೆ ಮನುಷ್ಯನನ್ನೇ ಕೊಂದು ಅವನಿಂದ ಸೆಂಟ್ ಮಾಡಿ ಬಿಟ್ಟರೆ..?!  ಅವನೊಬ್ಬ ಹುಡುಗ.ಅವನ ಬಡ ತಾಯಿ ಮೀನು ಮಾರುತ್ತಾಳೆ.ಹುಟ್ಟುವಾಗ ತಾಯಿ ಇದ್ದರೂ ಹುಟ್ಟಿದ ಕೂಡಲೇ ಅವನು ಅನಾಥ.ಹುಡುಗನಲ್ಲಿ ಮಾತು ಕಡಿಮೆ. ಆದರೂ ಅವನಿಗೊಂದು ವಿಶೇಷ ಶಕ್ತಿ ಇತ್ತು.ಅದುವೇ ಅವನ ಮೂಗು.ಆದರೆ ಅವನದ್ದು ಅಂದದ ಚಂದದ ಮೂಗು ಅಲ್ಲ. ಜಗತ್ತಿನ ಯಾವುದೇ ವಸ್ತುವಿನ ಪರಿಮಳವನ್ನು ಆಘ್ರಾಣಿಸುವ, ಅದರ ಮೂಲಕ ಆ ಪರಿಮಳವನ್ನು ಬಹುಕಾಲ ನೆನಪಿಟ್ಟುಕೊಳ್ಳುವ ಮತ್ತು ಪರಿಮಳದಿಂದಲೇ ವಸ್ತುವನ್ನಾಗಲಿ, ಮನುಷ್ಯರನ್ನಾಗಲಿ ಗುರುತು ಹಿಡಿದು ಬಿಡುವ ದೈವದತ್ತ ಕಲೆ ಅವನಿಗೆ ಹುಟ್ಟಿನಿಂದಲೇ ಲಭಿಸಿರುತ್ತದೆ. ಅಂತಹ ಅವನು ಜಗತ್ತಿನ ಎಲ್ಲಾ ರೀತಿಯ ಸುಪ್ರಸಿದ್ಧವಾದ ಸುವಾಸಿತ ಸೆಂಟ್ ಗಳನ್ನು ಮಾಡಿದ ನಂತರ ಕೊ

RAY

Image
ಇದು ಸಿರೀಸ್ ಗಿಂತಲೂ ಹೆಚ್ಚಾಗಿ ದೃಶ್ಯ ರೂಪದ ಕಥಾ ಸಂಕಲನವಾಗಿದೆ.ಸದ್ಯಕ್ಕೆ ಇದರಲ್ಲಿ ನಾಲ್ಕು ಎಪಿಸೋಡ್ ಗಳಿದ್ದು ಪ್ರತೀ ಎಪಿಸೋಡ್ ನಲ್ಲಿಯೂ ನಾಲ್ಕು ಬೇರೆ ಬೇರೆಯೇ ಕಥೆಗಳಿವೆ.  Satyajit Ray ಅವರ ಕಥೆಗಳಿಂದ ಪ್ರೇರಿತವಾಗಿ ಈಗಿನ ಕಾಲಮಾನಕ್ಕೆ ತಕ್ಕಂತೆ ಇದರ ಕಥೆಗಳನ್ನು ಹೆಣೆಯಲಾಗಿದೆ.ನಾನಂತು Satyajit Ray ಅವರ ಕಥೆಗಳನ್ನು ಓದಿಲ್ಲ ಹಾಗಾಗಿ ಮೂಲ ಕಥೆಯೊಂದಿಗೆ ಹೋಲಿಕೆ ಮಾಡಿ ನೋಡಲು ಸಾಧ್ಯವಾಗದು.ಆದರೆ ಲೇಖಕರ ಓರಿಜಿನಲ್ ಕಥೆ ಓದಿರುವವರ ಪ್ರಕಾರ ಸತ್ಯಜಿತ್ ರೇ ಅವರ ಆ ಎಲ್ಲಾ ಕಥೆಗಳು ಕ್ಲಾಸಿಕ್ ಕಥೆಗಳು ಆಗಿದ್ದು,ಅಲ್ಲಿ ಇಲ್ಲದನ್ನು ಇಲ್ಲಿ ಯಥೇಚ್ಛವಾಗಿ ತುರುಕಿಸಿ ಮೂಲ ಕಥೆಗಳಿಗೆ ಸರಿಯಾದ ನ್ಯಾಯವನ್ನೇ ಒದಗಿಸಿಲ್ಲ,ಒಂದು ರೀತಿಯಲ್ಲಿ ಇದು ಸತ್ಯಜಿತ್ ರೇ ಅವರಿಗೆ ಮಾಡಿದ ಅವಮಾನ ಎಂದೇ ಹೇಳಲಾಗುತ್ತಿದೆ.ಅದೇ ರೀತಿ ಇನ್ನು ಕೆಲವರ ಪ್ರಕಾರ ಇದೊಂದು ಅತ್ಯಧ್ಭುತ ಭಾರತೀಯ Anthology ಸಿರೀಸ್ ಆಗಿದೆ. ನಿಜ ಹೇಳಬೇಕೆಂದರೆ ಇದೊಂದು Anthology ಅನ್ನುವುದೇ  ನನಗೆ ಗೊತ್ತಿರಲಿಲ್ಲ.ಟ್ರೈಲರ್ ನೋಡಿ Manoj Bajpayee, Kay Kay Menon, Ali Fazal, Gajraj Rao ನಂತಹ ಅತ್ಯುತ್ತಮ ನಟರು ಒಂದೇ ಸಿರೀಸ್ ನಲ್ಲಿ ಒಂದೇ ಕಥೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದೇ ತಿಳಿದು ಥ್ರಿಲ್ ಆಗಿ ಹೋಗಿದ್ದೆ ನಾನು. ಹಾಗಾಗಿ ಸಿರೀಸ್ ಹೇಗೆ ಬರಬಹುದು ಎಂಬ ಭಯಂಕರ ಕುತೂಹಲ ಇತ್ತು.ಆದರೆ ಸಿರೀಸ್ ನೋಡಿದ ಮೇಲೆ ಇಲ್ಲಿರುವ ಕಥೆ ಒಂದೇ ಕಥೆ ಆಗಿರದೇ,

Kala

Image
ಮೊದಲ ಫ್ರೇಮ್ ನಿಂದಲೇ ಏನೋ ಒಂದು  ತುಂಬಾ ಭೀಕರವಾದದ್ದು ಈಗ ಇಲ್ಲಿ ಘಟಿಸಲಿದೆ ಎಂದು ಇನ್ನಿಲ್ಲದಂತೆ ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುತ್ತಾ ಶುರುವಾಗುವ ಈ ಮೂವಿಯ ಮೊದಲ 46 ನಿಮಿಷ ಏನೂ ನಡೆಯುವುದೇ ಇಲ್ಲ! ಆದರೆ ನಂತರ ನಡೆಯುವ ಘಟನೆಗಳು ಮೊದಲ ಆ 46 ನಿಮಿಷಗಳೇ ನೆನಪಿನಲ್ಲಿರದಂತೆ ಮಾಡಿಬಿಡುತ್ತದೆ!!  ನಾಯಿಯ ಹೆಸರು ಬ್ಲ್ಯಾಕಿ.ಹೆಸರಿಗೆ ತಕ್ಕಂತೆಯೇ ಕಪ್ಪು ಬಣ್ಣದ Cane Corso ಜಾತಿಯ ನಾಯಿ.ಕಥೆಯಲ್ಲಿ ಅದೊಂದೇ ನಾಯಿ ಇರುವುದಲ್ಲ.ಇನ್ನೊಂದು ಲೋಕಲ್ ನಾಯಿಯೂ ಇದೆ.ಆದರೆ ಕಥೆ ಶುರುವಾಗ ಮೊದಲೇ ಅದರ ಕಥೆ ಮುಗಿದಿರುತ್ತದೆ,Sorry ಮುಗಿಸಲಾಗಿರುತ್ತದೆ!  ಅಷ್ಟು ಹೇಳಿದ ಕೂಡಲೇ ಇದು ಬರೀ ನಾಯಿಯ ಕಥೆಯಲ್ಲ.ನಾಯಿಯೂ ಇದೆ,ನಾಯಿಯ  ಯಜಮಾನನೂ ಇದ್ದಾನೆ,ಜೊತೆಗೆ ತೋಟದಲ್ಲಿ ಕೆಲಸ ಮಾಡುತ್ತಾ ಕ್ಷಣ ಕ್ಷಣಕ್ಕೂ ಬೀಡಿ ಸೇದುತ್ತಾ ತೋಟದ ತುಂಬಾ ವಿಲಕ್ಷಣವಾಗಿ ವಿಷಲ್ ಹೊಡೆಯುವ ಆ ಸಪೂರ ಕಾಯದ ಕಪ್ಪು ಮೈಬಣ್ಣದ ಬಿಳಿ ಹಲ್ಲಿನ ಹುಡುಗನೂ ಇದ್ದಾನೆ!!  ತೋಟ ಹಾಗೂ ತೋಟದ ನಡುವಿನ ಮೌನದಲ್ಲಿ ಒಂದು ಫೈಟ್ ಹಾಗೇ ನಡೆದು ಬಿಡುತ್ತದೆ.ಇಲ್ಲಿ ಬರೀ ಇಬ್ಬರೇ ಜಿದ್ದಿಗೆ ಬಿದ್ದು ಹೊಡೆದಾಡುತ್ತಾರೆ,ಬಡಿದಾಡುತ್ತಾರೆ,ರಕ್ತವನ್ನು ಹೊಳೆಯಂತೆ ಹರಿಸಿ ಬಿಡುತ್ತಾರೆ.ಇವರ ಫೈಟ್ ಈಗ ಮುಗಿಯುತ್ತದೆ,ಆಗ ಮುಗಿಯುತ್ತದೆ,ಬೇರೆಯೇ ಕಥೆ ಇನ್ನು ಶುರುವಾಗಲಿದೆ.. ಎಂದುಕೊಂಡರೆ ಅವರಿಬ್ಬರ ಫೈಟ್ ಮುಗಿಯುವುದೇ ಇಲ್ಲ...! ಅವರಿಬ್ಬರದ್ದು ಮುಗಿಯದ ಕದನ.. ಹೌದು ಮೂವಿ ಮುಗಿಯುವವರೆಗೂ ಅದಕ್ಕ

The Family Man-2

Image
ಎಂದಿನಂತೆ ಎಲ್ಲರಿಗಿಂತ ಸ್ವಲ್ಪ ಲೇಟ್ ಆಗಿಯೇ ನೋಡಿ ಮುಗಿಸಿರುವುದರಿಂದ ಇಲ್ಲಿ ಜಾಸ್ತಿ ಏನು ಹೇಳಲು ಹೋಗುವುದಿಲ್ಲ.Manoj Bajpayee ಎಂತಹ ಅದ್ಭುತ ನಟ ಎಂದು ಎಲ್ಲರಿಗೂ ಗೊತ್ತಿರುವಂತಹದ್ದೇ.ಆದರೆ ಇಲ್ಲಿ ಮನೋಜ್ ಗಿಂತಲೂ ನಮ್ಮನ್ನು ಅಧಿಕವಾಗಿ ಸೂಚಿಗಲ್ಲಿನಂತೆ ಸೆಳೆಯುವುದು Samantha Akkineni.ಭಾವನೆಗಳೇ ಇಲ್ಲದಂತೆ ನಿರ್ಲಿಪ್ತವಾಗಿ ನಟಿಸಿದ ಸಮಂತಾ ಅಭಿನಯ ಇಲ್ಲಿ ಹೆಚ್ಚು ಗಮನ ಸೆಳೆಯುತ್ತದೆ ಹಾಗೂ ಅಷ್ಟೇ ಇಷ್ಟವಾಗುತ್ತದೆ ಕೂಡ.ತಮಿಳು ಹಾಗೂ ಶ್ರೀಲಂಕಾದ ತಮಿಳು ಸೀರಿಸ್ ಉದ್ದಕ್ಕೂ ಆವರಿಸಿಕೊಂಡಿದೆ.ನೋಡಿರದಿದ್ದರೆ ನೋಡಿ The Family Man - 2.  #The_Family_Man_2 | Prime  Hindi Series  Action Thriller  Year - 2021

Cold Case

Image
 #Cold_Case | Prime ಮೀನು ಹಿಡಿಯಲು ಕೆರೆಗೆ ಬಲೆ ಬೀಸಿದಾಗ ಎಂದಿನಂತೆ ಮೀನುಗಳಷ್ಟೇ ಸಿಕ್ಕಿ ಬಿದ್ದರೆ ಅದು ಬರೀ ಅಷ್ಟೇ ಕಥೆ,ಅದರ ಬದಲು ಮನುಷ್ಯನದ್ದು ತಲೆಬರುಡೆಯೊಂದು ಬಲೆಯೊಳಗೆ ಸಿಕ್ಕಿ ಹಾಗೇ ಅದು ಮೇಲೆ ಬಂದು ಬಾಯ್ಬಿಟ್ಟು ನಕ್ಕು ಬಿಟ್ಟರೆ..? ಆಗ ಅಲ್ಲಿಂದಲೇ ಶುರು ಥ್ರಿಲ್ ಎನಿಸುವ ಹೊಸತೊಂದು ಕಥೆ!  ನಡುರಾತ್ರಿಯ ನಿಶ್ಶಬ್ಧತೆಯಲ್ಲಿ ಮನೆಯ ಫ್ರಿಡ್ಜ್ ತಂಪಗೆ ತೆಪ್ಪಗೆ ಇರುವುದು ಬಿಟ್ಟು ಗಡಗಡ ಎಂದು ತಾನೇ ಸ್ವತಃ ಅದುರಿಕೊಂಡು,ನಡುಗಿಕೊಂಡು ಇನ್ನಿಲ್ಲದಂತೆ ಹೆದರಿಸಲು ಶುರುಮಾಡಿ ಬಿಟ್ಟರೆ,ಆ ರಾತ್ರಿ ಮಾತ್ರವಲ್ಲ ಪ್ರತೀ ರಾತ್ರಿಯೂ ಆ ಮನೆಯಲ್ಲೊಂದು ನಿದ್ದೆ ಅತೀ ಕಷ್ಟವೇ! ಈ #Cold_Case ಮೂವಿಗೆ Tanu Balak ಅವರ ನಿರ್ದೇಶನವಿದ್ದು,Prithviraj Sukumaran, Aditi Balan, Lakshmi Priyaa Chandramouli ಮುಂತಾದವರ ಅಭಿನಯವಿದೆ. Murder Mystery ಮೂವಿಗಳನ್ನು ಇಷ್ಟ ಪಡುವವರಿಗೆ ಇದೂ ಕೂಡ ಇಷ್ಟವಾಗಬಹುದು. #Cold_Case | Prime  Malayalam Movie  Crime Thriller  Year - 2021 #Movies  Ab Pacchu

ನೈಚೋರು ರುಚಿಸುವುದಿಲ್ಲ!

Image
  ಬದುಕು ನಿಂತ ನೀರಲ್ಲ.ಹಾಗಂತ ಅನಿಸುವುದು ಹರಿಯುವ ನದಿ, ಧುಮುಕುವ ತೊರೆಯನ್ನು ತುಂಬಾ ಹೊತ್ತು ದಿಟ್ಟಿಸಿ ನೋಡಿದಾಗಲೇ.ನಾನು ಈಗ ಎಲ್ಲಿ ನಿಂತಿದ್ದೇನೆ ಎಂದು ನನ್ನೊಳಗೆ ನಾನೇ ಚರ್ಚಿಸಿದಾಗ ನೀನು ಇನ್ನೂ ನಿಂತೇ ಇದ್ದೀಯಾ,ಎಲ್ಲರೂ ಅದಾಗಲೇ ಸರಿಯಾದ ಟ್ರ್ಯಾಕ್ ನಲ್ಲಿ ಎದ್ದು ಬಿದ್ದು ಓಡುತ್ತಿದ್ದಾರೆ ಎಂದು ಮನಸ್ಸು ಬೆತ್ತ ಹಿಡಿದು ಎಚ್ಚರಿಸಿ ಬಿಡುತ್ತದೆ.ಒಮ್ಮೆಗೆ ಹೊಳೆಯಂತೆ ಧುಮುಕಿ ರಭಸವಾಗಿ ಹರಿಯದಿದ್ದರೂ ಸಣ್ಣಗೆ ನಡೆಯಬೇಕು ಈಗ !  ಹಣ್ಣುಕಾಯಿ ಹಿಡಿದುಕೊಂಡು ದೇವಸ್ಥಾನಕ್ಕೆ ಬಂದಾಗ ದೇವರ ದರ್ಶನದ ಜೊತೆಗೆ ಅವನ ದರ್ಶನವೂ ಆಯಿತು.ನೋಡಿದರೂ ನೋಡದಂತೆ ಇಬ್ಬರೂ ರಪ್ಪನೇ ಮುಖ ತಿರುಗಿಸಿಕೊಂಡು ಬಿಟ್ಟೆವು. ಬಾಲ್ಯದ ಗೆಳೆಯ.ನಮ್ಮಿಬ್ಬರಲ್ಲಿ ಮಾತು ಸತ್ತ ದಿನವೇ  ನಮ್ಮ ಸ್ನೇಹಕ್ಕೂ ಎಳ್ಳು ನೀರು ಬಿಟ್ಟುಕೊಂಡು ಶ್ರಾದ್ಧವೊಂದನ್ನು ಅತೀ ಶ್ರದ್ಧೆಯಿಂದ ನೆರವೇರಿಸಿದಂತೆ ಇಬ್ಬರೂ ಪರಸ್ಪರ ವಿರುದ್ಧ ದಿಕ್ಕಿನತ್ತ ಹೆಜ್ಜೆ ಹಾಕಿ ನಡೆದಿದ್ದೆವು.ಆ ನಂತರ ಅವನೂ ಮಾತಾಡಲಿಲ್ಲ,ನಾನೂ ಮಾತಾಡಲಿಲ್ಲ.ತಪ್ಪು ಇಬ್ಬರದ್ದೂ ಇತ್ತು.ಕಾಲ, ಸಮಯ, ಸಂಧರ್ಭಗಳು ಮಾತ್ರ ಆ ವಿಷ ಘಳಿಗೆಗೆ ತುಪ್ಪವನ್ನೇ ಅತಿಯಾಗಿ ಸುರಿದು ಬಿಟ್ಟಿದ್ದವು.ಈಗಲೂ "ಘೀ"ರೈಸ್ ಮಾಡುವಾಗ ಅವನು ನೆನಪಾಗಿ ಬಿಡುತ್ತಾನೆ,ನೈಚೋರು ರುಚಿಸುವುದಿಲ್ಲ! ಮೊನ್ನೆ ತಡರಾತ್ರಿ ಕ್ಲಬ್ ಹೌಸ್ ನೊಳಗಿನ ಆ ಒಂದು ಸಂಗೀತದ ಕೋಣೆಯಲ್ಲಿ ಯಾರೋ ಒಬ್ಬ ಚಂದದ ಮೀಸೆಯ ಹುಡುಗ ಅವನೂರಿನ ಪ್ರೇಯಸಿಗಾಗಿ ಹಾಡೊಂ

ಮೊದಲ ಬಿರಿಯಾಣಿ ಮತ್ತು ಪಾಕ ಪ್ರವೀಣ..

Image
  ಬಿರಿಯಾನಿ ತಿನ್ನುವುದು ಎಂದರೆ ಎಲ್ಲರಿಗೂ ಬಾರೀ ಇಷ್ಟ.ವೆಜ್ ಆಗಲಿ ನಾನ್ವೆಜ್ ಆಗಲಿ ಆ ಉದುರುದುರಾದ ಭಾಸ್ಮತಿ ಅನ್ನದ ಘಮವನ್ನು ಮೂಗಿಗೊಂದಿಷ್ಟು ಆಹ್ವಾನಿಸಿಕೊಂಡು,ಹಾಗೇ ಆಘ್ರಾಣಿಸಿ ಆಘ್ರಾಣಿಸಿಯೇ ಮನಸ್ಸೋಯಿಚ್ಛೆ ಬಿರಿಯಾನಿಯನ್ನು ಬಾಯಿ ಚಪ್ಪರಿಸಿಕೊಂಡು ಸವಿದವರೇ ನಾವು ನೀವು ಎಲ್ಲರೂ.ಆದರೆ ಬಿರಿಯಾನಿ ಮಾಡುವುದು? ಅದು ಮಾತ್ರ ಕಂಡಾಪಟ್ಟೆ ಕಷ್ಟವೇ.  ಕಷ್ಟಕ್ಕಿಂತಲೂ ಬಹು ಸಾಮಗ್ರಿಗಳನ್ನು ಬಳಸಿ ಬಹು ಹಂತದಲ್ಲಿ ಮಾಡುವ ಅಡುಗೆಯಾಗಿರುವುದರಿಂದ ನಮ್ಮಲ್ಲಿ ಹೆಚ್ಚಿನವರಿಗೆ ಈಗಲೂ ಅದೊಂತರಹದ ಕ್ಲಿಷ್ಟಕರ ರಾಕೇಟು ಸೈನ್ಸು ಎಂಬಂತಹ ಭಾವವೇ ಅಧಿಕವಾಗಿ ಬಿಟ್ಟಿದೆ. ಮೊದಲ ಪ್ರಯತ್ನದಲ್ಲಿಯೇ ತಕ್ಕ ಮಟ್ಟಿಗೆ ಯಶಸ್ವಿಯಾದರೆ ಆ ನಂತರ ನಮ್ಮ ನಮ್ಮ ಮನೆಯಲ್ಲೊಂದು ಬಿರಿಯಾನಿಯ ಸುವಾಸನೆ ನಿರಂತರವಾಗಿ ಆವಾಗವಾಗ ಘಮಘಮಿಸುತ್ತಲೇ ಇರುತ್ತದೆ. ಒಂದೆರಡು ಪ್ರಯತ್ನದಲ್ಲಿ ಸರಿಯಾಗಿ ಬಿರಿಯಾನಿ ಬರದಿದ್ದರೆ ಆವಾಗ ಮನೆಯಲ್ಲಿಯೇ ಕಷ್ಟಪಟ್ಟು ಬೆವರು ಸುರಿಸಿಕೊಂಡು ಬಿರಿಯಾನಿ ಮಾಡಿಕೊಳ್ಳುವ ಆ ನಮ್ಮ ಉಮೇದು ನಿಧಾನಕ್ಕೆ ಕರಗುತ್ತಾ ಹೋಗಿ,ಕೊನೆಗೆ ಹೋಟೆಲ್-ರೆಸ್ಟೋರೆಂಟ್ ಗಳಿಗೆ ನಡೆದು ಬಿರಿಯಾನಿ ತಿನ್ನುವತ್ತ ಮನಸ್ಸು ಮಾಡುತ್ತಾರೆ ನಮ್ಮಲ್ಲಿ ಹೆಚ್ಚಿನವರು.  ಭಾರತದ ಜನರ ಮನೆ ಬಾಗಿಲಿಗೆ ಬರುವ ಫುಡ್ ಡೆಲಿವರಿಯಲ್ಲಿ ಕೂಡ  ಅತೀ ಹೆಚ್ಚಿನ ಸ್ಥಾನವನ್ನು ಈ ಬಿರಿಯಾನಿಯೇ ಆಕ್ರಮಿಸಿಕೊಂಡಿದೆ ಎನ್ನುವುದು ಕೂಡ  ನಮ್ಮಲ್ಲಿ ಹೆಚ್ಚಿನ ಜನರು ಬಿರಿಯಾನಿಯನ್ನು  ಸ್ವತಃ ಮಾಡಿಕ