Posts

ಗಗನದ ಸೂರ್ಯ

Image
ನಿನಗೆ ಹಣೆಗೆ ಬಿಂದಿ ಹಚ್ಚಿಕೊಳ್ಳಲು ಆ ಆಫೀಸಿನಲ್ಲಿ ಅದೆಷ್ಟೋ ಗಾಜಿನ ಗೋಡೆಗಳಿದ್ದವು. ಆದರೂ ನೀನು ನನ್ನೆದುರು ಇದ್ದ ಗಾಜಿನ ಮುಂದೆಯೇ ಪ್ರತೀ ಸಲವೂ ಬಂದು ನಿಲ್ಲುತ್ತಿದ್ದೆ. ಏಕೆ? ಅದೂ ಕೂಡ ನಾನು ಆ ಒಂದು ಗಾಜಿನ ಮತ್ತೊಂದು ಬದಿಯಲ್ಲಿ ಬಂದು ಎಲ್ಲೆಲ್ಲೋ ನೋಡಿಕೊಂಡು ನನ್ನಷ್ಟಕ್ಕೆ ನಿಂತುಕೊಂಡ ಮರುಘಳಿಗೆಯಲ್ಲೇ!  ಸಂಪೂರ್ಣ ಪಾರದರ್ಶಕ ಗಾಜದು. ಆ ಕೋಣೆಯ ನೀನು, ಈ ಕೋಣೆಯ ನಾನು, ನೀನು ಬಂದು ನಿಂತ ಆ ಕ್ಷಣಕ್ಕೆ ನಾವಿಬ್ಬರು ಅಲ್ಲೇ ಪರಸ್ಪರ ಎದುರುಬದುರು.  ಸರಿಯಾಗಿ ಬಿಂಬವೇ ಮೂಡದ ಅಂತಹದ್ದೊಂದು ಗಾಜಲ್ಲಿ ಏನನ್ನು ನೋಡಿಕೊಂಡು ಹಣೆಯ ಬಿಂದಿಯನ್ನು ಅಷ್ಟೊಂದು ಸರಿಯಾಗಿ, ಸಲೀಸಾಗಿ ಹಣೆಯ ನಡುವಿಗೆ ಸಿಕ್ಕಿಸಿಕೊಳ್ಳುತ್ತಿದ್ದೆ ನೀನು. ನಿನ್ನ ಈ ವರ್ತನೆಯಿಂದ ವಿಲವಿಲ ಎಂದು ಒದ್ದಾಡಿ ಬಿಟ್ಟ ನನ್ನ ಕಣ್ಣ ಫಳಫಳ ಗಾಜನ್ನು ನೋಡಿಯೇ?  ಬರೀ ಅಷ್ಟೇ ಆಗಿದ್ದರೆ ನಾನಂದು ಅಷ್ಟೊಂದು ಸೋಲುತ್ತಿರಲಿಲ್ಲ. ಬಿಂದಿ ಅಂಟಿಸುತ್ತಲೇ ಇದೊಂದು ಹಾಡಿನ ಸಾಲನ್ನು ಕೂಡ  ಮೆಲ್ಲಗೆ ಗುನುಗಿ ಬಿಟ್ಟಿದ್ದೆ ನೀನು ... " ಗಗನದ ಸೂರ್ಯ ಮನೆ ಮೇಲೆ,   ನೀ ನನ್ನ ಸೂರ್ಯ ಹಣೆ ಮೇಲೆ   ಚಿಲಿಪಿಲಿ ಹಾಡು ಎಲೆ ಮೇಲೆ   ನಿನ್ನ ಪ್ರೀತಿ ಹಾಡು ಎದೆ ಮೇಲೆ.... " ಅಮೃತವರ್ಷಿಣಿಯ ಹಾಡದು. ಆದರೆ ಏಕೆ? ಯಾರಿಗಾಗಿ!  ನೀನದನ್ನು ನನ್ನೆದುರು ಗುನುಗಬಾರದಿತ್ತು ಪುನರ್ವಸು!!  ಆಮೇಲೆಯೂ ನಾನು ಗಾಜಿನೆದುರು ಬಂದಾಗಲೆಲ್ಲ ನೀನು ಮತ್ತೊಂದು ಬದಿಯಲ್ಲಿ ನಿಂತು ನಿನ್ನ ಹಣೆಗೆ ಬಿ

ಬಿಡುಗಡೆ!

Image
                                    " ಬಿಡುಗಡೆ  " ಕೆಲವರು ಗೊಂಚಲು ಗೊಂಚಲು ಪುಗ್ಗೆಗಳನ್ನು  ಮಾರುತ್ತಾರೆ. ಇನ್ನು ಕೆಲವರು ಡಬ್ಬದಲ್ಲಿ ಸಿಹಿತಿಂಡಿಗಳನ್ನು ಮಾರುತ್ತಾರೆ; ಮತ್ತೆ ಕೆಲವರದ್ದು ಬುಟ್ಟಿಯ ತುಂಬಾ ಹೂ ಹಣ್ಣು, ನೆಲಗಡಲೆಯ ವ್ಯಾಪಾರ. ಆದರೆ ನಾನು ಹಕ್ಕಿ ಮಾರುತ್ತೇನೆ. ಬಣ್ಣದ ಜೀವಂತ ಹಕ್ಕಿಗಳನ್ನು ನನ್ನ ಪಂಜರದಲ್ಲಿಟ್ಟುಕೊಂಡು, ಹೆಗಲಿಗೊಂದು ಹಳೆಯ ಜೋಳಿಗೆ ಏರಿಸಿಕೊಂಡು ನಾನು ರಸ್ತೆಯ ಬದಿಯಲ್ಲಿ ನನ್ನಿಷ್ಟದ ಹಾಡುಗಳನ್ನು ಮೆಲುವಾಗಿ ಗುನುಗುತ್ತಾ ಪ್ರತೀ ದಿನವೂ ಉದ್ದಕ್ಕೆ ನಡೆಯುತ್ತೇನೆ. ದೇವರಿಗೆ ದಿನಾಲೂ ದೀಪ ಹೊತ್ತಿಸದಿದ್ದರೂ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಹಳಷ್ಟು ಹೊತ್ತು ಕೆಂಪು ದೀಪವೊಂದೇ ಪ್ರಜ್ವಲವಾಗಿ ಸದಾ  ಉರಿಯುತ್ತಿರಲಿ ಎನ್ನುವುದೇ ನನ್ನದೊಂದು ಅನುದಿನದ ಪ್ರಾರ್ಥನೆ. ಅಂದ ಹಾಗೆ ನನ್ನಲ್ಲಿ ಮಾರಲು ಮುದ್ದಾದ ಮೂರು ಹಕ್ಕಿಗಳಿವೆ. ಹೌದು, ಕೇವಲ ಮೂರು ಮಾತ್ರ. ಪ್ರತೀ ಬಾರಿಯೂ ಮಾರಲು ನನ್ನಲ್ಲಿರುವುದು ಈ ಮೂರು ಹಕ್ಕಿಗಳೇ!  ರಸ್ತೆ ಪಕ್ಕ ನಡೆಯುವಾಗ ಯಾರಾದರೊಬ್ಬರ ಕಣ್ಣಿಗೆ ನಾನು ಅವಶ್ಯವಾಗಿ ಬೀಳುತ್ತೇನೆ. ನನಗಿಂತಲೂ ಹೆಚ್ಚು ನನ್ನ ಪಂಜರದ  ಹಕ್ಕಿಗಳ ಕಲರವವೇ ಈ ಹೆತ್ತವರ ಸಣ್ಣಪುಟ್ಟ ಮಕ್ಕಳ ಗಮನವನ್ನು ಇನ್ನಿಲ್ಲದೆ ಸೆಳೆದು ಬಿಡುತ್ತದೆ. ಏಕೆಂದರೆ ನನ್ನ ಈ ಮೂರೂ ಹಕ್ಕಿಗಳಿಗೆ ನಾನು ಆಕರ್ಷಿಸುವುದನ್ನು ಸಹ ಬಹುವಾಗಿ ಕಲಿಸಿದ್ದೇನೆ..ಹಹ್ಹಾ... ಹಹಹ್ಹಾ..ಹೌದು, ಇದನ್ನು ಹೇಳಿದರೆ ಯಾರೂ ನಂಬು

ಬೆಟ್ಟದ ಹೆಜ್ಜೆಗಳು | ದಿನೇಶ್ ಹೊಳ್ಳ

Image
 ಬೆಟ್ಟದ ಹೆಜ್ಜೆಗಳು |  ದಿನೇಶ್ ಹೊಳ್ಳ " ಎಲೆಗಳೆಡೆಯಲವಿತಿದೆ ಹಣ್ಣು    ಹಣ್ಣಿನೊಳಗವಿತಿದೆ   ನಾಳೆಯ ಮರ    ನಿನ್ನೆಯ ಚಿಗುರು    ನಾಳೆಯ ಬಾಗಿಲು    ನಡುವೆ ಒಂದಿಷ್ಟು ಹೆಜ್ಜೆಗಳು...."  ಎಂದು ಕಾವ್ಯಾತ್ಮಕವಾಗಿಯು ಜೊತೆಗೆಯೇ ಬಹಳಷ್ಟು ಮಾರ್ಮಿಕವಾಗಿಯೂ ಹೇಳುವ ಲೇಖಕರು ಇಲ್ಲಿ ತಾವು ಸದಾ ಹೆಜ್ಜೆ ಹಾಕುವ ಬೆಟ್ಟದ ದಾರಿಯಲ್ಲಿ ನೇರವಾಗಿ ಕಂಡಿದ್ದನ್ನು,  ಒಂದಿಷ್ಟು ಕಲ್ಪಿಸಿಕೊಂಡಿದ್ದನ್ನು, ಸುತ್ತಲಿನ ಜಗತ್ತಿನಲ್ಲಿ ತಮಗೆ ಅನುದಿನವೂ ಕಾಡುವಂತಹದ್ದನ್ನು, ಸತತವಾಗಿ ಸತಾಯಿಸಿದ್ದನ್ನು, ಹೀಗೆ ಎಲ್ಲವನ್ನೂ ಒಟ್ಟು ಸೇರಿಸಿ ಅವುಗಳಿಗೊಂದು ಕತೆಯ ರೂಪ ಕೊಟ್ಟು, 'ಬೆಟ್ಟದ ಹೆಜ್ಜೆಗಳು' ಎಂಬ ಕಥಾ ಸಂಕಲನವನ್ನಾಗಿಸಿದ್ದಾರೆ.  ಮುನ್ನುಡಿ, ಬೆನ್ನುಡಿ ಎಂಬ ಯಾವುದೇ ಕನ್ನಡಿಯಿಲ್ಲದೆ ಬಹಳಷ್ಟು ವರ್ಷಗಳ ಹಿಂದೆಯೇ ಚಾರ್ಮಾಡಿ ಘಾಟಿಯ ಬೆಟ್ಟವೊಂದರ ಹಸಿರ ತಂಪಲ್ಲಿ ಬಿಡುಗಡೆಗೊಂಡ ಎಂಟು ಪುಟ್ಟ ಪುಟ್ಟ ಕತೆಗಳ ಗೊಂಚಲು ಈ ಬೆಟ್ಟದ ಹೆಜ್ಜೆಗಳು. ಇದರ ಕತೆಗಳು ಕೂಡ ಬಹಳಷ್ಟು ಸಣ್ಣವೇ, ಒಂದು ಪೇಜಿನಲ್ಲಿಯೇ ಮುಗಿದು ಹೋಗುವಂತಹ ಕತೆಗಳು ಕೂಡ ಇದರಲ್ಲಿದೆ. ಹೆಚ್ಚು ಕಡಿಮೆ ಅರ್ಧ ಮುಕ್ಕಾಲು ಗಂಟೆಯೊಳಗೆಯೇ ಇಡೀ ಪುಸ್ತಕವನ್ನು ರಪ್ಪನೆ ಓದಿ ಮುಗಿಸಿ ಬಿಡಬಹುದು. ಸೇರು ಉಪ್ಪಿಟ್ಟು ಜೊತೆಗೆ ಚೊಂಬು ಕಾಫಿ ಇದ್ದರೆ ಚಂದ ಎಂಬಂತೆ ಎಲ್ಲವನ್ನೂ ಪುಷ್ಕಳವಾಗಿಯೇ ಬಾರಿಸುವವರಿಗೆ ಮಾತ್ರ ಇದು ಕ್ಷಣಾರ್ಧದಲ್ಲಿ ಮುಗಿದುಹೋಗುವ ಫಳಾರವೇ ಸರಿ. ಸ್ವಲ್ಪವ

ವಿಲೇಜ್ ವರ್ಲ್ಡು ಮತ್ತು 24 ಕತೆಗಳು | ಗೋಪಾಲಕೃಷ್ಣ ಕುಂಟಿನಿ

Image
 ವಿಲೇಜ್ ವರ್ಲ್ಡು ಮತ್ತು 24 ಕತೆಗಳು | ಗೋಪಾಲಕೃಷ್ಣ ಕುಂಟಿನಿ ಇಲ್ಲಿರುವುದು ಕರಾವಳಿಯ ಹಿಮಾಲಯವೆನಿಸಿರುವ ಎತ್ತರದ  ಪಶ್ಚಿಮದ ಘಟ್ಟದ ಬೆಟ್ಟದ ತಪ್ಪಲಿನ ಕೆಳಗಿನ ಮೂಡಣದ ಕತೆಗಳು. ಉದ್ದುದ್ದ ಶೀರ್ಷಿಕೆಯ ಪುಟ್ಟ ಪುಟ್ಟ 24 ಹಸಿರ ಉಸಿರಿನ ಕತೆಗಳು ಇದರಲ್ಲಿದೆ. ಒಂದರ್ಥದಲ್ಲಿ ಪರಿಸರದ ಕತೆಗಳು ಎಂದು ಹೇಳಲು ಅಡ್ಡಿ ಇಲ್ಲ.  ' ಪೆಟ್ಟಿಸ್ಟ್ ಸಂತು ಮತ್ತು ರಾಮಣ್ಣನ ಹೋಟೇಲು.. ' ಎಂಬ ಕತೆಯಲ್ಲಿ ಪೋಲಿಸರ ವಿಭಿನ್ನ ರೀತಿಯ ವಸೂಲಿ ತಂತ್ರವನ್ನು ರಾಮಣ್ಣನ ಸೋಗೆ ಮಾಡಿನ ಚಹಾ ಹೋಟೆಲ್ ಪರಿಸರದಲ್ಲಿ ಕಟ್ಟಿಕೊಡಲಾಗಿದೆ. ಇದೊಂತರ ಚೆನ್ನಾಗಿದೆ ಆದರೆ ಪೆಟ್ಟಿಸ್ಟ್ ಸಂತು ಹೇಳಿದ್ದು ನಿಜವೋ ಅಲ್ಲವೋ ಎನ್ನುವುದು ಅವನಿಗಷ್ಟೇ ಗೊತ್ತು; ಅದೇ ರೀತಿ ರಾಮಣ್ಣನ ಪಜೀತಿ ರಾಮಣ್ಣನಿಗೆ. ನನಗೆ ಇದನ್ನು ಓದುವಾಗ ರಾಮಣ್ಣ ಮಾಡಿ ಕೊಡುವ ಕಲ್ತಪ್ಪದ ಘಮ ಹಾಗೇ ಬಂದು ಮೂಗಿಗೆ ಬಡಿಯಿತು. ನನಗೆ ಕರಟಿದ ಕಲ್ತಪ್ಪದ ಆ ಒಗ್ಗರಣೆಯ ಕ್ರಸ್ಟು ಇಷ್ಟ, ಹಾಗಾಗಿ ಈ ವಾರ ರಾಮಣ್ಣನ ನೆನಪಿನಲ್ಲಿ ಕಲ್ತಪ್ಪ ಸವಿಯುವ ಯೋಜನೆಯೊಂದು ಉಂಟು.  ' ಬೂಬಣ್ಣನ ಮಕ್ಕಳು ಮತ್ತು ಬಣ್ಣದ ಕಾಲಿನ ದೊಡ್ಡ ಹಕ್ಕಿ..' ಕತೆ ಎಲ್ಲಾ ಕತೆಗಳಿಗಿಂತ ಹೆಚ್ಚು ಇಷ್ಟವಾಯಿತು. ಈ ಕತೆ ಪೂರ್ಣಚಂದ್ರ ತೇಜಸ್ವಿಯವರ 'ಪರಿಸರದ ಕತೆ' ಸಂಕಲನದ 'ಸುಸ್ಮಿತಾ ಮತ್ತು ಹಕ್ಕಿ ಮರಿ' ಯನ್ನು ನೆನಪಿಸುತ್ತಾದರೂ ಇದು ಸ್ವಲ್ಪ ಬೇರೆಯೇ ಕತೆ. ಬೂಬಣ್ಣನ ಮಕ್ಕಳ ಮುಗ್ಧತೆ ಹಾಗೂ ಮನುಷ್ಯರೊಳಗೆ

ಘಾಚರ್ ಘೋಚರ್ | ವಿವೇಕ ಶಾನಭಾಗ

Image
                   ಘಾಚರ್ ಘೋಚರ್ l ವಿವೇಕ ಶಾನಭಾಗ ಒಂದು ನೀಳ್ಗತೆ ಹಾಗೂ ಐದು ಸಣ್ಣ ಸಣ್ಣ ಕತೆಗಳ ಗೊಂಚಲು ಈ ಘಾಚರ್ ಘೋಚರ್. ಇದರಲ್ಲಿ 'ಘಾಚರ್ ಘೋಚರ್ ' ಎಂಬ ದೊಡ್ಡ ಕತೆಯೇ ಈ ಸಂಕಲನದ ಪ್ರಮುಖ ಆಕರ್ಷಣೆ ಹಾಗೂ ಈ ಪುಸ್ತಕದ್ದೊಂದು ನಿಜವಾದ ಓದಿನ ಸುಖ.  ಘಾಚರ್ ಘೋಚರ್ ಎಂಬ ಕತೆಯ ಓದು ಅದೆಂತಹ ಮಜಾ ಕೊಡುತ್ತದೆ ಎಂದರೆ ಇದರಲ್ಲಿರುವ ವಿಭಿನ್ನ ವ್ಯಕ್ತಿತ್ವಗಳ ಮುಗಿಯದ ಹತ್ತಾರು ತೊಳಲಾಟಗಳ ನಡುವೆಯೂ, ಒಂದು ಹಾಸ್ಯದ ಹೊನಲು ಮಾತ್ರ ನಿರಂತರವಾಗಿ ಅದರಷ್ಟಕ್ಕೆ ತುಂಬಿ  ಹರಿಯುತ್ತಾ ಓದಿನ ಉದ್ದಕ್ಕೂ ಮನಸ್ಸಿಗೆ ಸಿಕ್ಕಾಪಟ್ಟೆ ಉಲ್ಲಾಸ ತುಂಬಿ ಬಿಡುತ್ತದೆ. ಅದು ಕತೆಯೊಳಗೆ ಸುಪ್ತವಾಗಿದ್ದರೂ ಗುಪ್ತಗಾಮಿನಿಯಾಗಲು ಮನಸ್ಸು ಮಾಡದ ಅದರದ್ದೊಂದು ಹರಿವಿನಿಂದಾಗಿ, ಪಾತ್ರಗಳು ಮಾಡಿಕೊಳ್ಳುವ ಪಜೀತಿಗಳಿಂದಾಗಿ ಓದುಗ ಈ ಕತೆಯ ಅಲ್ಲಲ್ಲಿ ಹಾಗೇ ನಗೆಗಡಲಿನಲ್ಲಿ ತೇಲಿಬಿಡುತ್ತಾನೆ.  ಸಾಮಾನ್ಯವಾಗಿ ಕುಟುಂಬವೊಂದರ ಒಳಗೆ ನಡೆಯುವ, ಅಲ್ಲಿಯ ಪಾತ್ರಗಳ ನಡುವೆ ಮನೆಯೊಳಗಷ್ಟೇ ತೆರೆದುಕೊಳ್ಳುವ, ಮೌನದೊಳಗೇ ಇದ್ದುಕೊಂಡು ಹರಿತವಾದ ಕತ್ತಿ ಮಸೆಯುವಂತಹ ಒಂದಿಷ್ಟು ಮನಸ್ಥಿತಿಗಳ ಕತೆಯೇ ಈ ಘಾಚರ್ ಘೋಚರ್. ಈ ಕತೆಯ ಹೆಸರೇ ತುಂಬಾ ವಿಭಿನ್ನವಾಗಿದೆ ಹಾಗೂ ಅಷ್ಟೇ ವಿಚಿತ್ರವಾಗಿದೆ. ಈ ಹೆಸರೇ ಇದಕ್ಕೆ  ಏಕೆ ಎನ್ನುವುದಕ್ಕೆ ಈ ಕತೆಯೊಳಗೆಯೇ ಒಂದು ಕತೆಯಿದೆ.  ಇದು ಸಂಪೂರ್ಣವಾಗಿ ನಗರ ಭಾಗದ ಕೂಡು ಕುಟುಂಬವೊಂದರಲ್ಲಿ ಜರಗುವ ಕತೆ. ಒಂದು ರೀತಿಯಲ್ಲಿ ಎಲ್ಲರ ಮನೆಯ

ಅನಾರ್ಕಲಿಯ ಸೇಫ್ಟಿಪಿನ್ | ಜಯಂತ್ ಕಾಯ್ಕಿಣಿ

Image
 ಅನಾರ್ಕಲಿಯ ಸೇಫ್ಟಿಪಿನ್ l ಜಯಂತ ಕಾಯ್ಕಿಣಿ  " ಪ್ರಪಂಚದಲ್ಲಿ ಯಾವುದೇ ಜಾಗಕ್ಕಿಂತ, ಮಕ್ಕಳನ್ನು ಹೆತ್ತು ಅವರ ಬಾಲ್ಯವನ್ನು ಪೊರೆದ ಜಾಗಗಳು ಎಂಥ ಕಾರ್ಪಣ್ಯಗಳ ನಡುವೆಯೂ ಜೀವದ ಭಾಗವೇ ಆಗಿರುತ್ತದೆ. ಮಕ್ಕಳ ಕಂಪನ್ನು ಮರೆಸುವ ಶಕ್ತಿ ಯಾವ ಬಿರುಗಾಳಿಗೂ ಇಲ್ಲ..."  ಇದೊಂದೇ ಅಲ್ಲ, ಇಂತಹ ಹಲವಾರು ಸಾಲುಗಳು ಇಲ್ಲಿರುವ ಎಲ್ಲಾ ಕಥೆಗಳ ಪ್ರತೀ ಪುಟ ಪುಟದಲ್ಲಿಯೂ ಗೊಂಚಲು ಗೊಂಚಲಾಗಿ ಕಣ್ಣಿಗೆ ಬೀಳುತ್ತವೆ. ಮಳೆಗೊಂದಿಷ್ಟು ಪದ ಬೆರೆಸಿ ಭಾವ ಸುರಿಸಿದ ಮಳೆಕವಿ ಜಯಂತ ಕಾಯ್ಕಿಣಿಯವರ ಗದ್ಯವೂ ಕೂಡ ಅವರ ಪದ್ಯಗಳಷ್ಟೇ ಚಂದ. ಕಥೆಯ ಪ್ರತೀ ಸಾಲನ್ನು(ಬಹುತೇಕ)ಎಷ್ಟೊಂದು ಕಾವ್ಯಾತ್ಮಕವಾಗಿ ಪೋಣಿಸಿ ಇಲ್ಲಿಯ ಕಥೆಗಳನ್ನು ಕಟ್ಟಿದ್ದಾರೆ ಎಂದರೆ ಹೆಚ್ಚಿನ ಸಾಲುಗಳನ್ನು ಎರಡೆರಡು ಬಾರಿ ಓದಿಯೇ ಇನ್ನಷ್ಟು ಚಪ್ಪರಿಸಬೇಕೆಂದು ಅನಿಸುತ್ತದೆ.  ಇಲ್ಲಿ ಒಟ್ಟು 9 ಕಥೆಗಳಿವೆ. ಎಲ್ಲಾ ಕಥೆಗಳು ಹೀಗೇ ಇರಬೇಕು, ಹಾಗೇ ಅಂತ್ಯ ಕಾಣಬೇಕು ಎಂಬ ಧಾವಂತದಿಂದ ಲೇಖಕರು ಯಾವ ಕಥೆಯನ್ನೂ ಇಲ್ಲಿ ಬರೆದಿಲ್ಲ. ಛಾಯಚಿತ್ರಗಾರನೊಬ್ಬ ಬೀದಿಯಲ್ಲಿ ನಿಂತುಕೊಂಡು ತೆಗೆದ ಸ್ಟ್ರೀಟ್ ಪೋಟೋಗಳು ಹೇಳುವ ಕಥೆಗಳಂತೆ ಇದೆ ಈ ಸಂಕಲನದ ಎಲ್ಲಾ ಕಥೆಗಳು. ತಾಜಾ ಸೀಬೆ ಹಣ್ಣುಗಳನ್ನು ಕತ್ತರಿಸಿ ಅದಕ್ಕೆ ಉಪ್ಪು, ಮೆಣಸಿನ ಹುಡಿಯನ್ನು ಇಷ್ಟಿಷ್ಟೇ ಉದುರಿಸಿ ಕೊಡುವ ಹಣ್ಣು ಹಣ್ಣು ಮುದುಕಿಯ ಪೋಟೋದಂತೆ, ಜೋರಾಗಿ ಅಳುತ್ತಿರುವ ಮಗುವನ್ನು ಕಂಕುಳದಲ್ಲಿ ಇಟ್ಟುಕೊಂಡು ಕೆಂಡದಲ್ಲಿ ಸುಡುತ್ತಿರುವ

ನವಿಲು ಕೊಂದ ಹುಡುಗ | ಸಚಿನ್ ತೀರ್ಥಹಳ್ಳಿ

Image
 ನವಿಲು ಕೊಂದ ಹುಡುಗ l ಸಚಿನ್ ತೀರ್ಥಹಳ್ಳಿ  ಒಂದೊಳ್ಳೆಯ ಕತೆ ಓದಿ ಮುಗಿಸಿದರೆ ರುಚಿಯ ಲಡ್ಡು ತಿಂದಷ್ಟೇ ಖುಷಿ ನನಗೆ. ಕತೆಗಳ ಮಾಯಲೋಕಗಳು ಹುಟ್ಟಿಸುವ ಬೆರಗುಗಳು ನನ್ನಲ್ಲಿ ಎಲ್ಲಾ ಕಾಲಕ್ಕೂ ಬಹಳ ಜೋಪಾನ. ಬೆರಗು ಬದುಕಿಗೆ ಬೇಕು. ಬೆರಗಿನಲ್ಲಿ ಒಂಥರಾ ಪುಳಕವಿದೆ. ಅಂತಹದ್ದರಲ್ಲಿ ಅವೆಲ್ಲವೂ ಇರುವ, ಬರೀ ಒಂದಲ್ಲ ಹತ್ತು ಚಂದ ಚಂದದ ಉಲ್ಲಾಸದ್ದೇ ಕತೆಗಳಿಂದ ಕೂಡಿರುವ ಈ ಒಂದು ಸಂಕಲನವನ್ನು ಮನೆಯಲ್ಲಿಟ್ಟುಕೊಂಡು, ಇನ್ನೂ ಓದದೇ ಉಳಿದುದಕ್ಕೆ ಸ್ವತಃ ನನಗೆಯೇ ನನ್ನ ಬಗ್ಗೆ ಸಿಕ್ಕಾಪಟ್ಟೆ ಬೇಜಾರಿದೆ. ಲಡ್ಡುಗಳ ತಟ್ಟೆಯೇ ಎದುರಿದ್ದರೂ ಸವಿಯದೇ ಸುಮ್ಮನುಳಿಯುವ ಉದಾಸೀನಕ್ಕೆ ಜೈ ಹೇಳಲೇಬಾರದು.  ಪ್ರದೀಪ್ ಬತ್ತೇರಿ ಕೈಚಳಕದ ಈ ಪುಸ್ತಕದ ಆಕರ್ಷಕ ಮುಖಪುಟದಲ್ಲಿ ನವಿಲು ತನ್ನದೊಂದು ಸಾವಿರ ಕಣ್ಣುಗಳ ಗುರಿಯನ್ನು ಬಿಚ್ಚದೆ, ತಲೆಗೆ ಹನ್ನೆರಡು ಪುಕ್ಕಗಳ ಬಿಡಿ ಬಿಡಿ ಜುಟ್ಟು ಹಾಕಿಕೊಂಡು, ಉದ್ದದ ಚುಂಚು ಕೆಳಗೇ ಮಾಡಿಕೊಂಡು ಏನನ್ನೋ ಹೇಳುವುದಕ್ಕಾಗಿ ನಿಂತಂತಿದೆ. ಅದರ ಒಂಟಿ ಕಣ್ಣಿನಲ್ಲಿ ನೆತ್ತರು ಕದಡಿದ ಸಂಜೆಯದ್ದೇ ಬಣ್ಣ. ಪುಸ್ತಕದ ಶೀರ್ಷಿಕೆಯಲ್ಲೂ ಒಂದು ಕೆಂಪು ಬಣ್ಣದ್ದೇ ಬೊಟ್ಟು. ನವಿಲಿನ ಕಂಠದಲ್ಲಿ ಕೋವಿ ಹಿಡಿದ ಶಿಖಾರಿಯವನ ಅಸ್ಪಷ್ಟ ಗೆಲುವಿನ ಚಿತ್ರ. ಶೀರ್ಷಿಕೆಯಲ್ಲಿ ವಿಭಕ್ತಿ ಪ್ರತ್ಯಯ ಮಾಯವಾಗಿ ಹುಡುಗ ನವಿಲನ್ನು ಕೊಂದದ್ದೋ ಅಥವಾ ನವಿಲೇ ಹುಡುಗನನ್ನು ಕೊಂದದ್ದೋ ಎಂಬ ವಿಶೇಷ ಗಲಿಬಿಲಿ ನನಗೆ. ಏನೇನೋ ಕುತೂಹಲಗಳಿಂದ ಕತೆ ಓದಲು ಆರಂಭಿಸಿ ಕ