Posts

Showing posts from October, 2021

ಒಂದು ಹೊಳೆಯ ಸಿಲ್ಕು ಸೀರೆ..!

Image
ನೀರಿಗೆ ಬಣ್ಣ ಹಚ್ಚಲು ಸಾಧ್ಯವಿಲ್ಲ,ಆದರೆ ಬಣ್ಣವನ್ನು  ಹಾಸಬಹುದು.ನಾನು ನೋಡಿದ್ದೇನೆ,ನಮ್ಮೂರ ಹೊಳೆ  ರಂಗಾಗಿದ್ದನ್ನು,ನಿಧಾನಕ್ಕೆ ಬಣ್ಣ ಬದಲಾಯಿಸಿದ್ದನ್ನು ನಾನು ಬಹಳ ಹತ್ತಿರದಿಂದಲೇ ಗಮನಿಸಿದ್ದೇನೆ.ಅದೂ ಕೂಡ ಒಂದೆರೆಡು ಬಾರಿ ಅಲ್ಲ,ನಾನು ಹೋದ ಪ್ರತೀ ಬಾರಿಯೂ ಹರಿಯುವ ಹೊಳೆಯ ಆ ನೀರಿಗೆ ಹಲವಾರು ಬಣ್ಣ. ಹೊಳೆ ಬದಿ ಹೋಗಲು ಒಬ್ಬೊಬ್ಬರಿಗೆ ಒಂದೊಂದು ಕಾರಣ.ನನ್ನ ತಮ್ಮ ಸತೀಶನೂ ಅಲ್ಲಿಗೆ ಹೋಗುತ್ತಾನೆ.ಅವನಲ್ಲಿ ಗಾಳ ಹಾಕುತ್ತಾನೆ;ಹೊಳೆಯ ರುಚಿಯಾದ ಮೀನುಗಳಿಗೆ.ಗಾಳ ಮೀನಿಗೆ ಮಾತ್ರ ಹಾಕುತ್ತಾರೆ,ಹಾಗಂತ ನಾನು ತಿಳಿದುಕೊಂಡಿದ್ದೆ!  ಅವನು ಮಾತ್ರವಲ್ಲ ಊರಿನ ಹಲವು ಹುಡುಗರು ಬಿಡುವಿನ ವೇಳೆಯಲ್ಲಿ ಆ ಹೊಳೆಯ ದಂಡೆಯಲ್ಲಿ ಗಾಳ ಹಿಡಿದು ನಿಂತಿರುತ್ತಾರೆ.ಕೆಲವರಿಗೆ ಸಮಯ ಕಳೆಯಲು ಗಾಳ ಹಾಕುವುದು ಒಂದು ಹವ್ಯಾಸ,ಇನ್ನು ಕೆಲವರಿಗೆ ಹೊಳೆಯೊಳಗಿನ ರುಚಿಕರ  ಮೀನು ತಿಂದೇ ಅಭ್ಯಾಸ.  ನನಗೆ ಈ ಗಾಳ,ಹೊಳೆಯ ಮೀನು ಎಲ್ಲದಕ್ಕಿಂತಲೂ ಹೆಚ್ಚು ಇಷ್ಟವಾಗುವುದು ಸ್ವತಃ ಹೊಳೆಯೇ. ತೀರಾ ಒಬ್ಬಂಟಿ ಅಂತ ಅನಿಸಿದಾಗ ಹೊಳೆ ಬದಿಗೆ ಬಂದು ಸುಮ್ಮನೆ ಕುಳಿತುಕೊಳ್ಳುತ್ತೇನೆ.ಮನಸ್ಸು ಹೇಳಿದರೆ ಮೈಯ ಬಟ್ಟೆ ಬಿಚ್ಚಿ ನೀರಿಗೆ ಜಿಗಿಯುತ್ತೇನೆ,ಮೀನು ಕೂಡ ಬೆರಗಾಗುವಂತೆ ಸಲೀಸಾಗಿ ಈಜುತ್ತೇನೆ.ಹೊಳೆ ಇನ್ನು ಈಜು ಸಾಕು ಎಂದು ಮನಸ್ಸಿಗೆ ಹೇಳಿ ಬಿಟ್ಟರೆ ಮತ್ತೆ ದಡ ಸೇರುತ್ತೇನೆ.ಒದ್ದೆಯಾದ ನಂತರ ಬಿಸಿಲಿಗೆ ಮೈ ಒಡ್ಡುವುದರಲ್ಲಿ ಕೆಲವರಿಗಷ್ಟೇ ಸುಖ ಸಿಗುವುದು.ಮನಸ್ಸೊಳಗೆಯೇ ಸುಡು

My Name

Image
 #My_Name |  Netflix ಅವಳ ತಂದೆ ಗ್ಯಾಂಗ್​​ಸ್ಟರ್.ಒಂದು ದಿನ ಅವನು ತನ್ನ ಮನೆಯ ಬಾಗಿಲಿನಲ್ಲಿಯೇ ಕೊಲೆಯಾಗಿ ಬಿಡುತ್ತಾನೆ.ಅದು ಕೂಡ ಅವಳ ಕಣ್ಣೆದುರೇ.ಆದರೆ ಕೊಲೆಗಾರ ಯಾರೆಂದು ಅವಳಿಗೆ ಗೊತ್ತಿಲ್ಲ!  ಮುಂದೆ ಅವಳು ಕೂಡ ಗ್ಯಾಂಗಿನ ಮೆಂಬರ್ ಆಗಿ ಬಿಡುತ್ತಾಳೆ.  ತಂದೆಯ ಕೊಲೆಗಾರನನ್ನು ಕೊಲ್ಲುವುದೇ ಅವಳ ಗುರಿಯಾಗಿ ಬಿಡುತ್ತದೆ. ಅವಳ 'ಹೆಸರು' ಬದಲಾಯಿಸಲಾಗುತ್ತದೆ. ಒಂದು ದಿನ ಅವಳೇ ಸ್ವತಃ ಪೋಲಿಸ್ ಆಗಿ ಬಿಡುತ್ತಾಳೆ!  ಹಾಗೂ ಕೊಲೆಗಾರನನ್ನು ಬೇಟೆಯಾಡಲು ಹೊರಡುತ್ತಾಳೆ.  ಇಲ್ಲಿ ಕೊಲೆಗಾರ ಯಾರು..? ಗ್ಯಾಂಗ್​​ಸ್ಟರ್ ಯಾರು..? ನಿಜವಾಗಿಯೂ ಪೋಲಿಸ್ ಇಲ್ಲಿ ಯಾರು.. ? ಹಾಗೂ ಅವಳು ಯಾರು ಮತ್ತು ಅವಳ ಹೆಸರೇನು?  ಇದೊಂದು ಸೌತ್ ಕೊರಿಯನ್ ಸಿರೀಸ್.ಇದರಲ್ಲಿ ಒಟ್ಟು 8 ಎಪಿಸೋಡ್ ಗಳಿದ್ದು ಇದನ್ನು Kim Jin-min ನಿರ್ದೇಶನ ಮಾಡಿದ್ದು Han So-hee ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಎಲ್ಲರ ನಟನೆಯೂ ಇಷ್ಟವಾಗುತ್ತದೆ ಇಲ್ಲಿ. ಬ್ಯಾಕ್ಗ್ರೌಂಡ್ ಸ್ಕೋರ್ ಇಂಪಾಗಿದೆ.ಇದೊಂದು ಫಿಮೇಲ್ ಲೀಡ್ ಇರುವ ಸೀರಿಸ್.ಆಕ್ಷ್ಯನ್, ಕ್ರೈಮ್ ಹಾಗೂ ಥ್ರಿಲ್ಲರ್ ಎಲ್ಲವನ್ನೂ ಇದು ಒಳಗೊಂಡಿದೆ. ತುಂಬಾ ಒಳ್ಳೆಯವನು ತುಂಬಾ ಕೆಟ್ಟವನಂತೆ ಕಾಣುವುದು,ಅದೇ ರೀತಿ ತುಂಬಾ ಕೆಟ್ಟವನು ತುಂಬಾ ಒಳ್ಳೆಯವನಂತೆ ಕಾಣುವುದು,ಪರಸ್ಪರ ದ್ವೇಷಿಸುತ್ತಲೇ ಗೊತ್ತಿಲ್ಲದಂತೆಯೇ ಹತ್ತಿರವಾಗುವುದು,ಹತ್ತಿರವಾಗುತ್ತಲೇ ಮತ್ತಷ್ಟು ದೂರವಾಗಿ ಬಿಡುವುದು ಎಲ್ಲವೂ ಇಲ್ಲಿದೆ.ಖಂಡಿ

ರತ್ನನ್ ಪ್ರಪಂಚ

Image
 #ರತ್ನನ್_ಪ್ರಪಂಚ | Prime  ಕೆಲವೊಂದನ್ನು ಹುಡುಕಬಾರದು. ಕೆದಕುತ್ತಾ ಅಂತು ಎಂದಿಗೂ ಹೋಗಲೇ ಬಾರದು!  ಇಲ್ಲಿ ಎಲ್ಲವನ್ನೂ ಮೊದಲಿನಿಂದಲೇ ಸರಿ ಪಡಿಸಲು ಯಾರಿಗೆ ಸಾಧ್ಯವಿದೆ ಹೇಳಿ?  ಸತ್ಯಾನ್ವೇಷಣೆ ತುಂಬಾ ಒಳ್ಳೆಯದೇ,ಆದರೆ ಸಂಬಂಧಗಳಿಗೆ ಪೆಟ್ಟು ಬೀಳುವುದಾದರೆ ಆ ಮೂಲದ ಶೋಧನೆಯಲ್ಲಿ ಸುಖಕ್ಕಿಂತಲೂ ದುಃಖದ ಪಾಲೇ ಅಧಿಕ!  ಇಲ್ಲಿಯೂ ಒಬ್ಬ ಇದ್ದಾನೆ. ಅವನಿಗೆ ಒಂದು ದಿನ ಸತ್ಯ ಗೊತ್ತಾಗಿ ಬಿಡುತ್ತದೆ.ಅದೇನೆಂದರೆ ನನ್ನ ತಾಯಿ ನನ್ನ ಹೆತ್ತ ತಾಯಿಯಲ್ಲ, ಬದಲಿಗೆ ಅವಳು ಸಾಕು ತಾಯಿ ಎಂದು!  ಕೇಳುತ್ತಾನೆ..  ಅವನು ತನ್ನ ಸಾಕು ತಾಯಿಯ ಬಳಿಯೇ ಕೇಳುತ್ತಾನೆ...ಯಾಕಮ್ಮಾ ನನಗೆ ಹೀಗೆ ಮಾಡಿದೆ? ನೀನೇ ನನ್ನ ತಾಯಿ ಎಂದು ಏಕೆ ಸುಳ್ಳು ಹೇಳಿ ನಂಬಿಸಿದೆ..?  ಅದಕ್ಕೆ ಆ ತಾಯಿ ಅವನ ಹೆತ್ತ ಅಮ್ಮನಂತೆಯೇ ಹೇಳುತ್ತಾಳೆ..ಇಲ್ಲ ಅಪ್ಪ... ನಾನು ನಿನ್ನನ್ನು ಹೆತ್ತಿಲ್ಲ ನಿಜ.. ಆದರೆ ಯಾವತ್ತೂ ನೀನು ಮಾತ್ರ ನನಗೆ ಮಗನೇ ಆಗಿದ್ದೆ.ನೀನು ಬಂದ ಮೇಲೆಯೇ ನಾನು ತಾಯಿ ಆಗಿದ್ದು.ನಾನು ಹೆತ್ತ ಮಗ ಬೇರೆ ಅಲ್ಲ,ನೀನು ಬೇರೆ ಅಲ್ಲ.. ಯಾವತ್ತೂ ನಾನು ಅಂತಹ ತಾರತಮ್ಯ ಇಬ್ಬರಿಗೂ ಕೂಡ ಮಾಡಿದವಳೇ ಅಲ್ಲ,ನೀನು ನನ್ನ ಮಗನೇ ಅಪ್ಪ... ನೀನು ನನ್ನ ದೊಡ್ಡ ಮಗ.. ಎಂದು ಹೇಳುತ್ತಾಳೆ ಆ ತಾಯಿ.  ಆದರೆ ಯಾವತ್ತಿದ್ದರೂ ಹೆತ್ತ ತಾಯಿನೇ ನಿಜವಾದ ತಾಯಿ,ಸಾಕು ತಾಯಿ ಎಂದಿಗೂ ಹೆತ್ತ ತಾಯಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ ಮಗ.. ತನ್ನ ನಿಜವಾದ ತಾಯಿಯನ್ನೇ  ಹುಡುಕುಲು ಹೊರಡುತ್ತಾನೆ.  ಸ

ವರಂಗದ ಬಣ್ಣಗಳು

Image
ವರಂಗ ತುಂಬಾ ಪುಟ್ಟ ಊರು.ಮೆಲ್ಲಗೆ ಉಸಿರಾಡುತ್ತದೆ.ಆದರೆ ಅದು ಕೂಡ ತನ್ನೊಳಗೆ ಹಲವಾರು ರಂಗು ತುಂಬಿಕೊಂಡಿದ್ದು,ನಿಮಗೊಂದಿಷ್ಟು ನಿಮಗೆ ಬೇಕೆನಿಸುವ ಬಣ್ಣವನ್ನೇ ಬಳಿದು ಮತ್ತೆ ಸುಖವಾಗಿ ನಿಮ್ಮೂರಿಗೆ ಕಳುಹಿಸಿ ಕೊಡುತ್ತದೆ;ಅಜ್ಜಿ ಮನೆಯ ನಮ್ಮೆಲ್ಲರ ಅಜ್ಜಿಯಂತೆ.ದೂರದ ಊರಿನವರಿಗೆ ಪಕ್ಕನೆ ಅದರ ಬಣ್ಣ ಮಾಸುವುದಿಲ್ಲ.ಇಲ್ಲೇ ಸಮೀಪದವರು ಆಗಿದ್ದರೆ ಮಾತ್ರ ಅದರದ್ದೊಂದು ಬಣ್ಣ ಬಲು ಬೇಗನೆ ಕಳೆದುಕೊಂಡು ಬಿಡಬೇಕು,ಹಾಗೂ ಮತ್ತೆ ಹೋಗಿ ವರಂಗದ ಎದುರೇ ಬಣ್ಣ ತುಂಬಿಸಿಕೊಳ್ಳಲು ಮನಸ್ಸು ಬಿಚ್ಚಿಕೊಂಡು ಕಣ್ಣಗಲಿಸಿಕೊಂಡು ನಿಲ್ಲಬೇಕು ಎಂಬುವುದೇ ನನ್ನ ಎಂದಿನ ಅಭಿಪ್ರಾಯ.  ಹೌದು ವರಂಗಕ್ಕೆ ಅದೆಷ್ಟೋ ಬಣ್ಣ.ಸುಮ್ಮನೆ ನಿಂತುಕೊಂಡು ನೋಡಬೇಕು,ನೋಡುತ್ತಲೇ ಅಲ್ಲಲ್ಲಿ ಹುಡುಕಬೇಕು. ಸಿಕ್ಕಷ್ಟನ್ನು ಹಾಗೇ ನಮ್ಮೊಳಗೆ ತುಂಬಿಸಿಕೊಳ್ಳಬೇಕು.ಹಸಿರು ಗದ್ದೆ ನೋಡುತ್ತಿದ್ದರೆ ಖಾಲಿ ಮನಸ್ಸು ಅರ್ಧ ಭರ್ತಿ.ತೀರದಲ್ಲಿರುವ ನೇಮಿನಾಥ ಸ್ವಾಮಿಯ ಹಳೆಯ ಕಲ್ಲಿನ ಮಾನಸ್ತಂಭಕ್ಕೆ ಪ್ರಕೃತಿಯೇ ಸಮಯ ತೆಗೆದುಕೊಂಡು ಬಳಿದಿರುವುದು ಆಕರ್ಷಕ ಕಪ್ಪು ಬಣ್ಣ.ಕೆರೆ ಬಸದಿಗೆ ಹೋಗಲು ದಂಡೆಯಲ್ಲಿ ಕುಳಿತುಕೊಂಡು ದೋಣಿಗೆ ಕಾಯುವಾಗ ಮೇಲಿನ ಆಕಾಶ ಹೆಚ್ಚಾಗಿ ನೀಲಿ.ಆಕಾಶದಲ್ಲಿ ಅಲ್ಲಲ್ಲಿ ಮೊಸರು ಚೆಲ್ಲಿದಂತಹ ಮೋಡಗಳಿದ್ದರೆ ಅದರ ಬಣ್ಣ ಅಚ್ಚ ಬಿಳಿಯದ್ದೇ ಬಣ್ಣ;ಮುದ್ದು ಕೃಷ್ಣ ಅರ್ಧ ತಿಂದು ಅರ್ಧ ಚೆಲ್ಲಿ ಎಲ್ಲೋ ಆಟವಾಡಲು ಎದ್ದು ಹೋಗಿರಬೇಕು ಎಂದು ಒಮ್ಮೆ ಅನ್ನಿಸಿಬಿಡಬೇಕು.ಕೆರೆ ದಂಡೆಯ ಬಳಿ

No Country for Old men

Image
 #No_Country_for_Old_Men |  Netflix ಅವನೊಬ್ಬ ಹಿಟ್ ಮ್ಯಾನ್.ಅವನ ದಾರಿಗೆ ಅಡ್ಡ ಬಂದವರನ್ನೆಲ್ಲಾ ನಿರ್ದಾಕ್ಷಿಣ್ಯವಾಗಿ ಮುಗಿಸುವುದೇ ಅವನ ವೃತ್ತಿ. ಆದರೆ ಅವನಲ್ಲೊಂದು ವಿಚಿತ್ರ ಪ್ರವೃತಿ ಇದೆ. ಅದೇನೆಂದರೆ ಅವನು ಟಾಸ್ ಹಾಕುತ್ತಾನೆ.ಎದುರಾಳಿ ಹೇಳಬೇಕು ಹೆಡ್ ಆರ್ ಟೈಲ್. ಎದುರಿರುವವನು ಟಾಸ್ ಗೆದ್ದರೆ ಬದುಕುತ್ತಾನೆ,ಸೋತರೆ ಇಲ್ಲ!  ಅಂತಹ ಹಿಟ್ ಮ್ಯಾನ್ ನನ್ನೇ  ಸತಾಯಿಸುವನು ಕೂಡ ಒಬ್ಬ ಇರುತ್ತಾನೆ.ಡ್ರಗ್ ದಂಧೆಯ ದೊಡ್ಡ ಮೊತ್ತದ ಹಣವೊಂದು ಅವನಿಗೆ ಅನಾಯಾಸವಾಗಿ ಒಂದು ಕಡೆ  ಸಿಕ್ಕಿರುತ್ತದೆ.ಅದನ್ನು ಹಿಡಿದುಕೊಂಡು ಹಿಟ್ ಮ್ಯಾನ್ ನಿಂದ ತಪ್ಪಿಸಿಕೊಂಡು ಅವನು  ಊರಿಡೀ ಓಡುತ್ತಿರುತ್ತಾನೆ.ಈ ಹಣ ಸಿಕ್ಕಿದವನಿಗೆ ಡ್ರಗ್ ಜಗಳದಲ್ಲಿ ಸಾಯುತ್ತಿದ್ದ ವ್ಯಕ್ತಿಯ ಮೇಲೆ ಕರುಣೆ ಅವಶ್ಯವಾಗಿ ಇರುತ್ತದೆ,ಆದರೆ ತನ್ನ ಹೆಂಡತಿಗೆ ತನ್ನ ಕೆಲಸಗಳಿಂದಾಗಿ  ಅಪಾಯ ಬರಬಹುದು ಎಂದು ಗೊತ್ತಿದ್ದರೂ ಒಂದು ಘಳಿಗೆ ದಿವ್ಯ ನಿರ್ಲಕ್ಷ್ಯ ತೋರಿಬಿಡುತ್ತಾನೆ ಆತ!  ಈ ಕಥೆಯ ಆತ್ಮದಂತಹ ಪಾತ್ರ ಅಂದರೆ ಅದು ಒಬ್ಬ ವೃದ್ಧ ಪೋಲಿಸ್ ಅಧಿಕಾರಿ.ಹೌದು ಅವನು ಗುಡ್ ಓಲ್ಡ್ ಡೇಸ್ ನ ಪೋಲಿಸ್. ಅವನಿಗೆ ಹಳೆಯ ಕಾಲದ ಕಥೆಗಳು ಇಷ್ಟ.ಅವನು ಮೆತ್ತಗೆ  ಹೇಳುತ್ತಾನೆ " ಹಿಂದೆ ಎಲ್ಲಾ ಈಗಿನಂತೆ ಇಷ್ಟೊಂದು ಕ್ರೈಮ್ ಇರಲಿಲ್ಲ.ನೀವು ಹೇಳಿದರೆ ನಗುತ್ತೀರಾ ಆವಾಗ ಪೋಲಿಸರ ಬಳಿ ಗನ್ ಕೂಡ ಇರಲಿಲ್ಲ.ಆದರೆ ಈಗ ಹಾಗಲ್ಲ,ಕೇಳಿರದ  ಹೊಸ ಹೊಸ ಕ್ರೈಮ್.ಅದೂ ಕೂಡ ಎಲ್ಲವೂ ಡೇಂಜರಸ್ ಕ್ರ

ಅವನೊಬ್ಬ ಇದ್ದ ಸೆಹ್ವಾಗ್..

Image
 " ಅವನೊಬ್ಬ ಇದ್ದ ಸೆಹ್ವಾಗ್.."  ಭಾರತದ ಆರಂಭಿಕರ ಆಟಕ್ಕೊಂದು ಕಿಚ್ಚು ಹಚ್ಚಿದ್ದು ಅದಕ್ಕೊಂದು ಇನ್ನಿಲ್ಲದಂತೆ ಸ್ಫೋಟಕತೆಯ ಸ್ಪರ್ಶ ನೀಡಿದ್ದು  ಅಂತ ಯಾರಾದರೊಬ್ಬರು ಇದ್ದರೆ ಅದು ನಿಸ್ಸಂಶಯವಾಗಿ ಒಬ್ಬನೇ ಆಗಿರುತ್ತಾನೆ.ಅದುವೇ ವಿರೇಂದ್ರ ಸೆಹ್ವಾಗ್. ಇದು ಭಾರತೀಯ ಕ್ರಿಕೆಟ್ ಗೆ ಮಾತ್ರ ಸಂಬಂಧಿಸಿದ್ದು ಅಲ್ಲ. ಆಗೀನ ಸೆಹ್ವಾಗ್ ಸಮಕಾಲೀನ ಆಟಗಾರರು ಕೂಡ ಜಗತ್ತಿನ ಅತೀ ವಿಸ್ಫೋಟಕ ಆಟಗಾರರಲ್ಲಿ ಸೆಹ್ವಾಗ್ ಹೆಸರನ್ನು ಇಂದಿಗೂ ಹೇಳುತ್ತಾರೆ ಮತ್ತೆ ಮತ್ತೆ ಆ ಸೆಹ್ವಾಗ್ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಸೆಹ್ವಾಗ್ ಇದ್ದಿದ್ದೇ ಹಾಗೇ. ಬಾರಿಸು... ಬಾರಿಸು.. ಮತ್ತೆ ಬಾರಿಸು ಅಷ್ಟೇ.ಇದು ಸೆಹ್ವಾಗ್ ಬ್ಯಾಟಿಂಗ್ ನ ಮೂಲ ಮಂತ್ರ.  ತನ್ನ ವಿಕೆಟ್ ಮೇಲಿನ ಆಸೆಯನ್ನೇ ಹೊಂದದೆ ಮೊದಲ ಓವರಿನ ಮೊದಲ ಎಸೆತಕ್ಕೆಯೇ ಬೌಂಡರಿ ಬಾರಿಸಲು ಮುಂದಾಗುತ್ತಾನೆ ಎಂದರೆ ಅದು ಸೆಹ್ವಾಗ್ ನ ನಿರ್ಭೀತಿಯ ಕ್ರಿಕೆಟ್ ಗೆ ಸಾಕ್ಷಿ. ಸೆಹ್ವಾಗ್ ಗೆ ಬೌಲಿಂಗ್ ಮಾಡುವುದು ಎಂದರೆ ಪ್ರತೀ ಬೌಲರ್ ಗೂ ಅಕ್ಷರಶಃ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವೇ ಪ್ರತೀ ಎಸೆತಕ್ಕೂ ಆಗುವುದು. ಸೆಹ್ವಾಗ್ ಅದೆಷ್ಟು ಸ್ಫೋಟಕವಾಗಿ ಆಡುತ್ತಿದ್ದ ಎಂದರೆ ಆಗಿನ ಏಕದಿನ ಪಂದ್ಯಗಳಲ್ಲಿ ಮೊದಲ 10 ಓವರ್ ಗಳಲ್ಲಿಯೇ ತಂಡದ ಮೊತ್ತ 100 ದಾಟುತ್ತಿತ್ತು.ಈಗ ಫೀಲ್ಡಿಂಗ್ ನಲ್ಲಿ ಅದೆಷ್ಟು ಸಡಿಲತನವಿದ್ದರೂ ಅಂತಹ ವಿದ್ಯಮಾನ ಕಾಣುವುದು ಬಲು ಅಪರೂಪವೇ ಬಿಡಿ.  ಸೆಹ್ವಾಗ್ ಬಗ್ಗೆ ತುಂಬಾ ಹೇಳ

Squid Game

Image
#Squid_Game | Netflix ಕೆಲವರಿಗೆ ಆಟ ಆಡುವುದರಲ್ಲಿ ಸುಖ ಇದೆ, ಇನ್ನು ಕೆಲವರಿಗೆ ಅದನ್ನು ನೋಡುವುದರಲ್ಲಿ. ಕೆಲವೊಂದು ಆಟದಲ್ಲಿ ಆಡುವವನು ಹಣ ಗಳಿಸುತ್ತಾನೆ, ಇನ್ನು ಕೆಲವೊಂದರಲ್ಲಿ ಆಟ ನೋಡುವವನು ಕೂಡ!!  ಹೆಸರಿಗೆ ತಕ್ಕಂತೆ ಈ ಸಿರೀಸ್ ನಲ್ಲಿ ಆಟ ಇದೆ. ಒಂದಲ್ಲ ನಾಲ್ಕೈದು ಆಟಗಳಿವೆ. ಅದೂ ಕೂಡ ಅಂತಿಂಥ ದೊಡ್ಡ ಆಟವೇನೂ ಅಲ್ಲ. ಜಸ್ಟ್ ಮಕ್ಕಳು ಆಡುವ ಬಾಲ್ಯ ಕಾಲದ ಆಟಗಳು! ಗೋಲಿಯಾಟ,ಕುಂಟೆ ಬಿಲ್ಲೆಯಂತಹ ಆಟ,ರನ್ ಆಂಡ್ ಸ್ಟ್ಯಾಚ್ಯು ನಂತಹ ಆಟ ಇತ್ಯಾದಿ ಇತ್ಯಾದಿ.. ಆದರೆ ಇಲ್ಲಿ ಆಟ ಮಕ್ಕಳು ಆಡುವುದಿಲ್ಲ!  ದೊಡ್ಡವರು ಆಡುತ್ತಾರೆ.  ಆದರೆ ಖಂಡಿತವಾಗಿಯೂ ಮಕ್ಕಳಂತೆಯೇ ಆಡುತ್ತಾರೆ.  ಅಷ್ಟಾಗಿ ಬಿಟ್ಟರೆ ಹೇಗೆ ಈ ಸಿರೀಸ್,ಇದರಲ್ಲಿನ ಆಟ  ಅಷ್ಟೊಂದು ಇಂಟ್ರೆಸ್ಟಿಂಗ್ ಅನ್ನಿಸುತ್ತದೆಯಾ? ಕೇಳಬೇಕಾದ ಪ್ರಶ್ನೆ ಇದು.  ಆದರೆ ಇಂಟ್ರೆಸ್ಟಿಂಗ್ ಇದೆ. ಇಂಟ್ರೆಸ್ಟಿಂಗ್ ಹುಟ್ಟಿಸುತ್ತಾ ಹೋಗುತ್ತದೆ.  ಸ್ವಲ್ಪ ಅಲ್ಲ.. ತುಂಬಾ!  ನೋಡುಗನಿಗೆ ಬೇಕಾದ ಕುತೂಹಲ,ಥ್ರಿಲ್ ಎಲ್ಲವನ್ನೂ ಆಟದ ಫಲಿತಾಂಶ ನಿರ್ಧರಿಸುತ್ತದೆ.  ಒಬ್ಬ ಗೆದ್ದರೆ ಮತ್ತೊಬ್ಬ ಸೋಲಬೇಕು.  ಇಲ್ಲಿ ಗೆದ್ದವನಿಗಿಂತಲೂ ಸೋತವನು ನಿಮಗೆ ಹೆಚ್ಚು ಕುತೂಹಲ ಮೂಡಿಸುತ್ತಾನೆ,ಥ್ರಿಲ್ ಕೊಡುತ್ತಾನೆ!  ಏಕೆ?  ಏಕೆಂದರೆ ಸೋತವನು ದಂಡ ತೆರಬೇಕಾಗುತ್ತದೆ.  ಏನು?  ಪ್ರಾಣ!!!  ಇದೊಂದು ಕೊರಿಯನ್ ಡ್ರಾಮ,ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಸೌತ್ ಕೊರಿಯನ್ ಸರ್ವೈವಲ್ ಡ್ರಾಮ. Squid game ಇದು ಒಂದ

Sardar Udham

Image
  #Sardar_Udham | Prime ಒಬ್ಬ ಸೇಲ್ಸ್‌ಮ್ಯಾನ್ ಆಗಿ ಜನರಲ್ ಡಯರ್ ನನ್ನು ಆಂಗ್ಲರ ನೆಲದಲ್ಲಿ ಭೇಟಿ ಮಾಡುವ ಉಧಮ್ ಸಿಂಗ್ ದುಬಾರಿ ಪೆನ್ ಒಂದನ್ನು ಅವನಿಗೆ ಕೊಡುತ್ತಾನೆ. ಇದರ ಬೆಲೆ ಎಷ್ಟು?. ಡಯರ್ ಕೇಳುತ್ತಾನೆ. ಉಧಮ್ ಸಿಂಗ್ ಹೇಳುತ್ತಾನೆ... ಫ್ರೀ ಸರ್.. ನಿಮಗೆ. ಫ್ರೀ..! ನನಗೆ?.. ಡಯರ್ ವಿಚಿತ್ರವಾಗಿ ಕೇಳುತ್ತಾನೆ. ಹೌದು ಸರ್ ನಿಮಗೆ ಫ್ರೀ,ನನಗೆ ನೀವು ಗೊತ್ತು,ನಾನು ನಿಮ್ಮ ಆಡಳಿದಲ್ಲಿ ಕೆಲಸ ಮಾಡಿದವನು.. ಫ್ಯಾಕ್ಟರಿಯಲ್ಲಿ,ರೈಲ್ವೆ ಯಲ್ಲಿ..ಕೆಲಸ ಮಾಡಿದವನು ನಾನು.. ಇಂಡಿಯಾದಲ್ಲಿ ಸರ್!.. ಎಂದು ಹೇಳುತ್ತಾನೆ ಯುವಕ ಉಧಮ್. ಅದಕ್ಕೆ ಜನರಲ್ ಡಯರ್ ಈ ಕೆಳಗಿನ ಮಾತುಗಳನ್ನು ಉಧಮ್ ಗೆ ಹೇಳುತ್ತಾನೆ.. - ಓಹ್ ಇಂಡಿಯಾ..! ಕೆಟ್ಟ ಫುಡ್,ಕೆಟ್ಟ ವೆದರ್,ಅದೇ ರೀತಿ ಅಲ್ಲಿಯ ಜನರು.. ಅಲ್ಲಿಯ ಜನರು ಕೂಡ ತುಂಬಾ ಸಾಮಾನ್ಯ ಜನರು,ವೆರಿ ಆರ್ಡಿನರಿ ಪೀಪಲ್ಸ್. ಅಲ್ಲಿಯ ಜನರಿಗೆ ಇದೊಂದು ಅಭ್ಯಾಸ.. ನಮ್ಮಂತಹ ಆಂಗ್ಲರನ್ನು ಈ ರೀತಿಯಾಗಿ ಏನಾದರೂ ನೀಡಿ ಖುಷಿ ಪಡಿಸುವುದು,ಅವರಿಗೆ ಅದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ.. ಅಷ್ಟು ಮಾತ್ರವಲ್ಲ ನಮ್ಮ ವಿರುದ್ಧ ಅವರು ಎಂದೂ ತಿರುಗಿ ಬಿದ್ದೇ ಇಲ್ಲ. ಆದರೆ ನಾನು ಮಾತ್ರ ಅಲ್ಲಿ ನನ್ನ ಕೆಲಸವನ್ನು ಈ ಬಿಟ್ರಿಷ್ ಸಾಮ್ರಾಜ್ಯಕ್ಕಾಗಿ ಬಹಳ ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂಬ ನೆಮ್ಮದಿ ನನಗಿದೆ..! ಎಂದು ಹೇಳಿ ಮುಗಿಸುತ್ತಾನೆ ಜಲಿಯನ್‌ ವಾಲಾ ಭಾಗ್ ಹತ್ಯಾಕಾಂಡದ ಪ್ರಮುಖ ರೂವರಿ ಈ ಜನರಲ್ ಮೈ

ಬೆಟ್ಟದ ಸುಖ

Image
ಮನಸ್ಸು ಬಂದಾಗಲೆಲ್ಲ ಸುಮ್ಮನೆ ಬೆಟ್ಟ ಹತ್ತುವುದು, ಗೊತ್ತಿದ್ದರೂ ಪ್ರತೀ ಬಾರಿಯೂ ತುದಿಯಲ್ಲಿ ಕುಳಿತುಕೊಂಡು  ಎಲ್ಲಿ ನಮ್ಮೂರು,ಹಸಿರು ಗದ್ದೆ,ಆಟದ ಮೈದಾನ ಎಂದು ಇಂಚಿಚೂ ಕ್ಷಣಕಾಲ ಕಣ್ಣಗಲಿಸಿ ಹುಡುಕುವುದು,ದೃಷ್ಟಿಗೆ ಬಿದ್ದಾಗ ಬಹಳಷ್ಟು ಸಿಕ್ಕಂತೆ ಸುಮ್ಮನೆ ನಗುವುದು,ಮತ್ತೆ ಬೆಟ್ಟದಲ್ಲಿ ಬೇಕೆಂದೇ ದಾರಿ ತಪ್ಪುವುದು,ಹಳೆ ಗಿಡ,ಹೊಸ ಹೂವು,ಪುರಾತನ ಬಂಡೆಯ ಕಥೆ ಇಷ್ಟಿಷ್ಟೇ ಅರ್ಥವಾಗದಿದ್ದರೂ  ಕೇಳುವುದು,ಮುಂದಿನ ಬಾರಿಗೆ ಬಹಳಷ್ಟನ್ನು ಉಳಿಸಿಕೊಳ್ಳುವುದು,ಕೊರಕಲಿನಲ್ಲಿ ತನ್ನಷ್ಟಕ್ಕೆ ಹರಿಯುವ ಹೆಸರಿಲ್ಲದ ತೊರೆಯ ಜುಳುಜುಳು ಸಂಗೀತ ಕಛೇರಿಗೆ ಕಿವಿಯಾಗುವುದು,ಮೊದಲೇ ಕೇಳುತ್ತಿದ್ದ ಅಸಂಖ್ಯಾ ಚಿಟ್ಟೆ ಬಳಗದ ಶೋತೃ ವೃಂದದಲ್ಲಿ ಒಬ್ಬನಾಗುವುದು,ಮಿಠಾಯಿಯಂತಹ ಸಿಹಿ ನೀರು ಮನಸ್ಸು ತಣಿವಂತೆ ಮೊಗೆ ಮೊಗೆದು ಕುಡಿಯುವುದು,ಕಾಡೊಳಗಿನ ಪೇರಳೆ ಸೀತಾಫಲಕ್ಕಾಗಿ ಇನ್ನಿಲ್ಲದಂತೆ ತಡಕಾಡುವುದು,ಬೆಟ್ಟದ ಹಸಿರು ಹೊಟ್ಟೆ ತುಂಬಿದಾಗ ಬೇರೆ ಬಣ್ಣಗಳಿಗಾಗಿ ಗಗನದಂಚಿಗೆ ನೋಡುವುದು,ಆಕಾಶದ ನೀಲಿಯಲ್ಲಿ ಮುದ್ದುಕೃಷ್ಣನ ಬೆಣ್ಣೆ ಮುದ್ದೆಯ ಆಕಾರ ಯಾವುದೆಂದು ಗೊಂದಲಕ್ಕೆ ಬೀಳುವುದು,ಬೆಟ್ಟದಲ್ಲಿ ಶ್ವೇತ ಮಯೂರ ಅಪರೂಪಕ್ಕೆ ಕಣ್ಣಿಗೆ ಬಿದ್ದು ಮರೆಯದಾಗ ಮೈ ಮನವೆಲ್ಲಾ ನವಿಲಿನಂತೆಯೇ ಸಾವಿರ ಕಣ್ಣಾಗುವುದು,ಸಂಜೆಗೆ ನೀಲಿ ಬಾನು ಮೆಲ್ಲಗೆ ಹವಳಗೆಂಪಿಗೆ ತಿರುಗುವುದು,ಮತ್ತೊಮ್ಮೆ ಮೇಲಿಂದ ಮನೆಯ ಕಡೆಗೆ ನೋಡುವುದು,ಸಂಜೆಯ ಸ್ನಾನಕ್ಕೆ ಎಲ್ಲರ ಬಚ್ಚಲು ಮನೆಯ ಹಂಚಿನ ಹೊಗೆ ಊರಿ

ಕಿಲಾಡಿ ಹಾವು..

Image
ನಮ್ಮೂರಲ್ಲಿ ಒಂದು ಹಾವು ಇದೆ.ಅದು ಬೇರೆಲ್ಲಿಯೂ ಇಲ್ಲ.ನಮ್ಮ ಮನೆಯ ಹಿಂದಿನ ಕಲ್ಪನೆಯಲ್ಲಿಯೇ ಇದೆ.ಕಲ್ಪನೆ ಅಂದರೆ ಕೆಂಪು ಕಲ್ಲಿನ ಕೋರೆ.ಯಾವುದೇ ಸಣ್ಣಪುಟ್ಟ ಕೇರೆ ಹಾವು,ಪಜ್ಜಿಮರಿ(ಹಸಿರು ಹಾವು)ಹಾವು ಅದಲ್ಲ.ಅದೊಂದು ದುಷ್ಟಪುಷ್ಟವಾಗಿ ಬೆಳೆದಿರುವ ದಡೂತಿ ಹೆಬ್ಬಾವು. ಊರಿನ ಜನರು ಅದನ್ನು ನಮ್ಮ ಮನೆಯ ಹಾವು.. ಪಚ್ಚುನ  ಮನೆಯ ಹಾವು.. ಎಂದೇ ಹೇಳುತ್ತಾರೆ.ದೇವರಾಣೆಗೂ ಅದು ನಮ್ಮ ಮನೆಯ ಹಾವು ಅಲ್ಲ.ನಾವು ಹಾವು ಎಲ್ಲಾ  ಸಾಕುವುದಿಲ್ಲ.ಅದು ಎಲ್ಲಿಂದಲೋ ಬಂದು ಅಲ್ಲಿ ಹೊಕ್ಕಿ ಬಿಟ್ಟಿದೆ...ಇದು ನನ್ನದೇ ಸಾಮ್ರಾಜ್ಯ ..ಇಲ್ಲಿ ನಾನು ಮಾಡಿದ್ದೇ ಶಾಸನ,ನನ್ನದೇ ಕಾನೂನು.. ಎಂದೆಲ್ಲಾ ಆ ಕಲ್ಲಿನ ಕಲ್ಪನೆಯೊಳಗಿನ ಲೋಕವನ್ನು ಆ ಹೆಬ್ಬಾವು ಈಗ ಆಳುತ್ತಿದೆ. ಮೊದಲು ನಮ್ಮ ಮನೆಯ ಬೆಕ್ಕುಗಳು ಮಾಯ ಆಗುತ್ತಿದ್ದದ್ದು ತುಂಬಾ ಕಡಿಮೆ.ಒಂದು ದಿನ ಗಂಡು ಬೆಕ್ಕು ಮಾಯವಾಯಿತು. ನಮ್ಮೂರಲ್ಲಿ ಒಂದು ಮಾತಿದೆ.ಗಂಡು ಬೆಕ್ಕುಗಳು ಮನೆಯಲ್ಲಿ ಹೆಚ್ಚಾಗಿ ಇರುವುದಿಲ್ಲ,ಅದು ದೊಡ್ದದಾದ ನಂತರ ಕಾಡು ಸೇರುತ್ತವೆ,ಮುಂದೆ ಕಾಡು ಬೆಕ್ಕು ಆಗುತ್ತದೆ,ಲೋಕಲ್ ಹುಲಿ ಆಗುತ್ತದೆ ಎಂಬೆಲ್ಲಾ ಬಹಳ ರೋಚಕವಾದ ಕಥೆಗಳಿವೆ. ನಾನು ಮೊದಲಿಗೆ ನಮ್ಮ ಮನೆಯ ಗಂಡು ಬೆಕ್ಕು ಮಾಯವಾದಾಗ ಇದು ಸ ಅದೇ ಮ್ಯಾಟರ್ ಇರಬೇಕು ಎಂದುಕೊಂಡು ಸುಮ್ಮನಾದೆ.ಆದರೆ ದಿನಕಳೆದಂತೆ ಮನೆಗೆ ತಂದ ಹೆಣ್ಣು ಬೆಕ್ಕುಗಳು ಕೂಡ ಒಂದರ ನಂತರ ಒಂದು  ಮಾಯವಾಗತೊಡಗಿತು.ಅದಕ್ಕೂ ಹಿಂದೆ ಆ ರೀತಿ ಎಲ್ಲಾ ಆಗಿದ್ದೇ ಇಲ್ಲ.ಹೆಣ್ಣು

ಬೆಟ್ಟದ ಮಾತು..

Image
ದೂರದ ಬೆಟ್ಟ ನುಣ್ಣಗೆ ಅಂತಾರೆ.ಬೆಟ್ಟ ಮಾತಾಡುವುದಿಲ್ಲ ಎಂದು ಹೆಚ್ಚಿನ ಎಲ್ಲರೂ ಹೇಳುತ್ತಾರೆ.ಆದರೆ ದಿನಾ ಎದ್ದು ಅದರತ್ತ ನೋಡುತ್ತಿದ್ದರೆ ಅದು ಮಾತ್ರ ನನಗೆನೋ ಹೇಳುವುದರಲ್ಲಿಯೇ ಅತೀ ಉತ್ಸುಕವಾಗಿದೆ ಎಂದೇ ನನಗೆ ಪ್ರತೀ ಸಲ ಅನಿಸುತ್ತದೆ.ಬಹುಶಃ ಅದಕ್ಕೆ ಹೇಗೆ ಹೇಳಬೇಕು ಎಂದು ಗೊತ್ತಿಲ್ಲ ಪಾಪ,ನನಗಂತು ಅದರ ಸಂವಹನ ಶೈಲಿಯೇ ಇನ್ನೂ ಅರ್ಥವಾಗುತ್ತಿಲ್ಲ.ಆದರೆ ಸಂವೇದನೆ ನಮ್ಮಿಬ್ಬರಲ್ಲಿಯೂ  ಇದೆ.ಊರಿನಲ್ಲಿ ಎಲ್ಲೇ ನಿಂತರೂ ಅದು ಎದ್ದು ಕಾಣುತ್ತದೆ.ಚಲಿಸುವ ಬಸ್ಸಿನ ಕಿಟಕಿಯಿಂದ ಮೆಲ್ಲಗೆ ಇಣುಕಿ ನೋಡಿದರೆ ಮಲೆಗಳಲ್ಲಿ ಮದುಮಗಳಂತೆ ಅದು ಸದಾ ಸೂಜಿಗಲ್ಲು.ಆದರೆ ಅದು ಬರೀ ಮಗಳೂ ಅಲ್ಲ,ಮಗನೂ ಅಲ್ಲ.ಕೆಲವೊಮ್ಮೆ ಎರಡೂ ಹೌದು ಅವರವರ ಭಾವಕ್ಕೆ. ಆ ಕಲ್ಲಿನ ಬೆಟ್ಟದ ತುದಿಗೂ ತುಂಬಾ ಸಲ ಹೋಗಿದ್ದೇನೆ.ಅದರ ಬುಡದಲ್ಲಿಯೇ ಒಂದು ಬೋರ್ಡ್ ಕೂಡ ನೆಟ್ಟಿದ್ದಾರೆ.ಈ ಬೆಟ್ಟದ  ದೊಡ್ಡ ಜೋಡಿ ಕಲ್ಲುಗಳು ಶಿವ ಪಾರ್ವತಿಯರ ಪ್ರತೀಕ ಎಂದು ಅದರಲ್ಲಿ ಸಣ್ಣಗೆ ಬರೆದಿದ್ದಾರೆ.ಹಾಗಾಗಿ ನನಗೆ ಅದರಲ್ಲಿ ದೇವರು ಮೊದಲು ಕಾಣಿಸುತ್ತಾರೆ.ಈ ಬೆಟ್ಟ ಕಣ್ಣಿಗೆ ಬಿದ್ದಾಗಲೆಲ್ಲ ನಾನು ಅವರಿಬ್ಬರನ್ನು ಮನಸ್ಸಿನಲ್ಲಿ ನೆನೆದುಕೊಂಡು ಶ್ರದ್ಧೆಯಿಂದ ಕೈ ಮುಗಿಯುತ್ತೇನೆ.ಏನಾದರೂ ಹೇಳಿ ಎಂದು ಕೂಡ ಕೇಳುತ್ತಾನೆ.ಬಹುಶಃ ಅವರಿಬ್ಬರು ಹೇಳಿರಬಹುದು,ನನಗೆ ಅರ್ಥವಾಗದಿದ್ದರೆ ಅದು ಅವರ ತಪ್ಪೇ..?  ಮನೆಯ ಮೇಲಿನ ಸಣ್ಣ ಗುಡ್ಡದ ಅನನಾಸು ತೋಟಕ್ಕೆ ನಾನು ಹೆಚ್ಚಾಗಿ ಒಬ್ಬನೇ ಹೋಗುತ್ತೇನೆ.ಅಲ್ಲಿಂದ

ಉಪ್ಪಿಟ್ಟಿಗೆ ಜಯವಾಗಲಿ..

Image
ನಾನು ಉಪ್ಪಿಟ್ಟಿನ ಭಯಂಕರ ದ್ವೇಷಿ ಅಲ್ಲ.ಅದರದ್ದೊಂದು ಡಿಪಿ,ವಾಲ್ ಪೇಪರ್ ಹಾಕಿಕೊಳ್ಳುವಷ್ಟು ಕಟ್ಟರ್ ಅಭಿಮಾನಿಯೂ ನಾನಲ್ಲ.ಆದರೆ ಮಾಡುವ ರೀತಿಯಲ್ಲಿ ಮಾಡಿದರೆ ನಾನೂ ಕೂಡ ಒಂದೆರಡು ಪ್ಲೇಟಿಗೆ ಉಪ್ಪಿಟ್ಟಿಗೆ ದಾಸನೇ,ಮನಸ್ಸಿನಿಂದಲೇ ಆಹೋ..ಒಹೋ..ಎಂದು ಹೇಳುವ ಉಪ್ಪಿಟ್ಟು ಪ್ರಿಯನೇ.ಒಂದೊಳ್ಳೆಯ ಒಗ್ಗರಣೆ,ಸರಿಯಾಗಿ ಹದವಾಗಿ ಬೆಂದು ಅರಳುವ ರವೆ,ಕಣ್ಣಿಗೆ ಆಕರ್ಷಕವಾಗಿ ಕಾಣುವ ಹಸಿ ಮೆಣಸು,ಪಕ್ಕಕ್ಕೆ ಎತ್ತಿ ಇಡಲು ಇರುವ ಕರಿಬೇವು,ದೃಷ್ಟಿ ಬೊಟ್ಟಿನಂತೆ ಮುದ ನೀಡುವ ಸಾಸಿವೆ,ಒಗ್ಗರಣೆಯಲ್ಲಿ ಬಾಡಿ ಬಂಗಾರವಾಗುವ ಉದ್ದಿನ ಬೇಳೆ.. ನೋಡುತ್ತಿದ್ದರೆ ನನಗೆ ಬೇಕು ಇನ್ನೊಂದು ಪ್ಲೇಟು ಉಪ್ಪಿಟ್ಟು.. 😋 ಉಪ್ಪಿಟ್ಟಿಗೆ ಕಾಂಕ್ರೀಟು ಅಂತ  ಹೇಳಬಾರದು... ಎಂದು ಜನ ಜಾಗೃತಿ ಮೂಡಿಸುತ್ತಿರುವ,ಆಕ್ರೋಶದ ಹರತಾಳ ಮಾಡುತ್ತಿರುವ ಉಪ್ಪಿಟ್ಟು ಅಭಿಮಾನಿಗಳಿಗೆ ನನ್ನದೊಂದು ಬೆಂಬಲ ಸದಾ ಇದೆ..ಆದರೆ "ಯೆಬೇ ಡೈಲಿ ನಿರ್ದೋಸೆಯಾ.." ಎಂದು ಹೇಳುವವರ ವಿರುದ್ಧ ನಾವು ಆಕ್ರೋಶದ ಧ್ವನಿ ಎತ್ತಿದಾಗ,ನೀವು ಸ ನಮ್ಮೊಂದಿಗೆ ಧ್ವನಿಗೂಡಿಸಬೇಕು..ಹಾಗೂ ನಿರ್ದೋಸೆಗೆ ಕೂಡ ಜೈ ಹೇಳಬೇಕೆಂದು ನಾನು ಈ ಸಂಧರ್ಭದಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಉಪ್ಪಿಟ್ಟ್ ಬಂಧುಗಳೇ.ನಾವೆಲ್ಲರೂ ಒಟ್ಟಾದರೆ ನಮ್ಮ ಸುತ್ತ ಮುತ್ತ ಇರುವ ಈ ವಿರೋಧಿಗಳ ಹುಟ್ಟಡಗಿಸಬಹುದು..ಒಗ್ಗಟಿನಲ್ಲಿ ಬಲವಿದೆ...ದಯವಿಟ್ಟು ನಿಮ್ಮ ಮುಂದಿನ ಹೋರಾಟದಲ್ಲಿ ಒಂದೊಳ್ಳೆಯ ಉಪ್ಪಿಟ್ಟೇ  ಮಾಡಿ... ನಾವು ಬರುತ್ತೇ

Bhramam

Image
 #Bhramam | Prime " ಅದೊಂದು ದೊಡ್ಡ ಕಥೆ.. ಕೇಳ್ತಿಯಾ..? " ಎಂದು ಶುರುವಲ್ಲಿಯೇ ಕಥೆ ಹೇಳುವ ಶುರು ಮಾಡುವ ಅವನೊಬ್ಬ ಅಂಧ...! ಕಣ್ಣು ಕಾಣದಿದ್ದರೂ ಅವನು ಬಹಳ ಸೊಗಸಾಗಿ ಪಿಯಾನೊ ನುಡಿಸಬಲ್ಲ. ಆದರೆ ಅವನು ನಿಜವಾಗಿಯೂ ಕುರುಡನಾ? ಅಲ್ಲ! ಅವನು ಕುರುಡನಲ್ಲ...! ಸಮಾಜದೆದುರು ಬೇಕೆಂದೇ ಕುರುಡನಂತೆ ನಟಿಸುವ ಅವನಿಗೆ ಎರಡೂ ಕಣ್ಣು ಬಹಳ ಚೆನ್ನಾಗಿಯೇ ಕಾಣಿಸುತ್ತದೆ!!  ಒಂದು ದಿನ ಅವನು ಅಪಾರ್ಟ್ಮೆಂಟ್ ಒಂದರಲ್ಲಿ ಜೋಡಿಯೊಂದರ ವೆಡ್ಡಿಂಗ್ ಅನಿವರ್ಸರಿ ನಿಮಿತ್ತ ಪಿಯಾನೋ ನುಡಿಸಲು ಹೋಗುತ್ತಾನೆ. ಆದರೆ ಅಲ್ಲಿ ಹೆಂಗಸಿನ ಗಂಡ ಇರುವುದಿಲ್ಲ. ಆ ಹೆಂಗಸು ಅವನನ್ನು ಒಳಗೆ ಬರಲು ಹೇಳುತ್ತಾಳೆ. ಗಂಡ ಬರಲು ಇನ್ನೂ ಸಮಯವಿದೆ.. ಎಂದು ಆ ಹೆಂಗಸು ಮೆತ್ತಗೆ ಹೇಳುತ್ತಾಳೆ.  ಅಲ್ಲಿಯವರೆಗೆ ನಾನು ಪಿಯಾನೋ ನುಡಿಸುತ್ತೇನೆ.. ಎಂದು ಇವನು ಅಲ್ಲಿಯೇ ಇದ್ದ ಪಿಯಾನೋ ನುಡಿಸಲು ಶುರು ಮಾಡಿ ಬಿಡುತ್ತಾನೆ.  ಕುರುಡನಂತೆ ನಟಿಸಿದರೂ ಕಣ್ಣು ಸರಿಯಾಗಿ ಕಾಣುವ ಇವನು ಪಿಯಾನೋ ನುಡಿಸುತ್ತಲೇ ಮನೆಯೊಳಗೆ ಒಮ್ಮೆ ಹಾಗೇ ದೃಷ್ಟಿ ಹರಿಸುತ್ತಾನೆ.  ಅಗಲೇ ಅವನ ಕಣ್ಣಲ್ಲಿ ಬೀಳುವುದು.. ಅಲ್ಲಿ ಸತ್ತು ಬಿದ್ದಿದ್ದ ಆ ಮಹಿಳೆಯ ಗಂಡನ ಶವ!  ಮಾತ್ರವಲ್ಲ ಆ ಕೊಲೆಯನ್ನು ಮಹಿಳೆಯ ಜೊತೆಗೆ ಸೇರಿ ಮಾಡಿರುವ ಅವಳ ಪ್ರಿಯಕರ ಕೂಡ ಅದೇ ರೂಮಿನಲ್ಲಿ ಇರುತ್ತಾನೆ!! ಶವವನ್ನು,ಮಹಿಳೆಯ ಪ್ರಿಯಕರನನ್ನು ಎಲ್ಲವನ್ನೂ ಕಣ್ಣಾರೆ ನೋಡಿದರೂ..ಏನು ನೋಡದವನಂತೆ ಇವನು ನಟಿಸುತ್ತಾನೆ.ಆ ಮಹಿಳೆ

Chehre

Image
#Chehre | Prime ಅದೊಂದು ಹಿಮದ ಬೆಟ್ಟ.ಬಿಡದೇ ಮಂಜು ಸುರಿಯುವ ಆ ಒಂಟಿ ರೋಡಿನಲ್ಲಿ ಅವನೊಬ್ಬ ಕಾರು ಡ್ರೈವ್ ಮಾಡುತ್ತಾ ಹೋಗುತ್ತಿರುತ್ತಾನೆ. ಗಮ್ಯ ತಲುಪಬೇಕಾದ ಸಿಕ್ಕಾಪಟ್ಟೆ ಅರ್ಜೆಂಟು ಆ ಯುವಕನಿಗೆ.ಹಾಗಾಗಿ ನೇರ ದಾರಿಯ ಬದಲಾಗಿ ಶಾರ್ಟ್ ಕಟ್ ದಾರಿಯನ್ನೇ ಹಿಡಿಯುತ್ತಾನೆ ಅವನು!  ಆದರೆ ಅವನು ಹಿಡಿದ ದಾರಿ ಅವನನ್ನು ಮುಂದಕ್ಕೆ ಕರೆದುಕೊಂಡು ಹೋಗುವುದಿಲ್ಲ.ಕಾರಣ ಕಾರು ಮುಂದೆ ಹೋಗದಷ್ಟು ದೊಡ್ಡದಾದ ರೋಡ್ ಬ್ಲಾಕ್ ಎದುರಲ್ಲಿ ಇರುತ್ತದೆ ! ಕತ್ತಲೆ ನಿಧಾನಕ್ಕೆ ಆವರಿಸಿಕೊಳ್ಳುವ ಸಮಯ ಅದು.ಅಲ್ಲಿಯೇ ಇದ್ದ ಒಂದು ದೊಡ್ಡ ಬಂಗಲೆಗೆ ಹೋಗಿ ಸೇರಿಕೊಳ್ಳುತ್ತಾನೆ ಅವನು.  ಅಲ್ಲಿ ಮನುಷ್ಯರು ಕೂಡ ಅವಶ್ಯವಾಗಿ ಇರುತ್ತಾರೆ!  ಮೂರು ವಯಸ್ಸಾದ ವೃದ್ಧರು ಹಾಗೂ ಒಬ್ಬಳು ತರುಣಿ.  ನಂತರ ಇನ್ನೊಬ್ಬ ಮುದುಕ ಕೂಡ ಆ ಬಂಗಲೆಗೆ ಎಲ್ಲಿಂದಲೋ ಬಂದು ಸೇರಿಕೊಳ್ಳುತ್ತಾನೆ! ಅಂದ ಹಾಗೆ ಆ ವೃದ್ಧರೆಲ್ಲಾ ಮೊದಲೇ   ಗೆಳೆಯರು!  ಬಂಗಲೆಗೆ ಬಂದ ಅಪರಿಚಿತ ಯುವಕನನ್ನು ಆ ನಾಲ್ವರು ವೃದ್ಧರು ಹಾಗೂ ಯುವತಿ ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ.  ಆ ಚಳಿಗೆ ಒಂದೊಳ್ಳೆಯ ವಿಸ್ಕಿ,ರುಚಿಯಾದ ಊಟ ಎಲ್ಲವೂ ಅಲ್ಲಿ ದೊರೆಯುತ್ತದೆ ಆ ಯುವಕನಿಗೆ.  ಯುವಕ ಆ ಒಂಟಿ ಬಂಗಲೆ ಹಾಗೂ ಆ ವೃದ್ಧರನ್ನು ನೋಡಿ ಒಂದು ಪ್ರಶ್ನೆ ಅವರಲ್ಲಿಯೇ ಕೇಳುತ್ತಾನೆ...  - ಜಗತ್ತಿನ ಎಲ್ಲಾ ಸಂಪರ್ಕ ಕಳೆದುಕೊಂಡು,ಒಂದು ಪೋನೂ  ಇಲ್ಲದೇ, ಇಂಟರ್ನೆಟ್ ಕೂಡ ಇಲ್ಲದೇ,ಇಂತಹ ವಯಸ್ಸಿನಲ್ಲಿ ಈ ಒಂಟಿ ಬಂಗಲೆಯಲ್ಲಿ

ಸೀತಾರಾಂ ಬಿನೋಯ್ : Case No.18 | Prime

Image
ಆ ಒಂದು ಪುಟ್ಟ ಹಳ್ಳಿಯಲ್ಲಿ ಕಳ್ಳತನವಾಗುತ್ತದೆ.ಆದರೆ ಅದು ಮೊದಲ ಕಳ್ಳತನವಲ್ಲ.ಅಲ್ಲಿ ನಡೆದ ಒಟ್ಟು ಸರಣಿ ಕಳ್ಳತನದಲ್ಲಿ ಅದು ನಾಲ್ಕನೆಯದ್ದು.ಆದರೆ ಈ ಬಾರಿ ಕಳ್ಳತನವಾಗಿದ್ದು ಇನ್ಸ್‌ಪೆಕ್ಟರ್ ನ ಮನೆಯಲ್ಲಿಯೇ!  ತನಿಖೆ ಶುರುವಾಗುತ್ತದೆ. ಒಂದು ಕ್ರಮಬದ್ದವಾದ ಪ್ಯಾಟರ್ನ್ ನಲ್ಲಿಯೇ ಕಳ್ಳತನವಾಗುತ್ತಾ ಹೋಗಿರುತ್ತದೆ.ಅದುವೇ ಆ ಊರಿನ ಪಿನ್ ಕೋಡ್ ನಂಬರ್! ಪಿನ್ ಕೋಡಿನಲ್ಲಿರುವ ಸಂಖ್ಯೆಗೆ ಅನುಗುಣವಾಗಿ ಒಂದು ಸಂಖ್ಯೆ ಆದ ನಂತರ ಬರುವ ಮತ್ತೊಂದು ಸಂಖ್ಯೆಯನ್ನೇ ಗುರುತಾಗಿ ಇಟ್ಟುಕೊಂಡು,ಆ ಸಂಖ್ಯೆಯಷ್ಟೇ ಕಿಲೋಮೀಟರ್ ದೂರದಲ್ಲಿ ಮುಂದಿನ ಮನೆಯಲ್ಲಿ ಕಳ್ಳತನವಾಗುತ್ತಾ ಹೋಗುತ್ತಿರುವುದು  ತನಿಖೆಯಲ್ಲಿ ಮೇಲ್ನೋಟಕ್ಕೆ ತಿಳಿದು ಬರುತ್ತದೆ.  ಮೊದಲಿಗೆ ಹೀಗಿರಲು ಸಾಧ್ಯವೇ ಅಂತ ಅನಿಸಿದರೂ ಐದನೇ ಮನೆ ಕೂಡ ಪಿನ್ ಕೋಡ್ ನ ಆ ಐದನೇ ಸಂಖ್ಯೆಯಷ್ಟು ದೂರದಲ್ಲಿಯೇ ಕಳ್ಳತನಕ್ಕೆ ಒಳಗಾಗಿ ಬಿಡುತ್ತದೆ..ಆದರೆ ಅದು ವಿಫಲ ಕೂಡ ಆಗುತ್ತದೆ.  ಅರ್ಧ ಮೂವಿ ನೋಡುವಾಗ ಏನು ಬರೀ ಮನೆ ಕಳ್ಳರ ಬೆನ್ನು ಹತ್ತುವುದೇ ಇದರ ಕಥೆಯಾ ಎಂದು ಕೊಂಡರೆ... ಆಗ ನಡೆಯುತ್ತದೆ ಮೊದಲ ಕೊಲೆ! ಅದೂ ಕೂಡ ಇನ್ಸ್‌ಪೆಕ್ಟರ್ ನ ಹೆಂಡತಿಯದ್ದೇ ಕೊಲೆ!!  ಅಲ್ಲಿಂದ ಶುರುವಾಗುವುದೇ ಇದರ ಅಸಲಿ ಕಥೆ! ಒಂದಲ್ಲ.. ಎರಡಲ್ಲ.. ಒಟ್ಟು ನಾಲ್ಕು ಕೊಲೆಗಳು ಅದಾಗಲೇ ನಡೆದಿರುತ್ತದೆ!! ಮುಂದೆಯೂ ಕೊಲೆಗಳು ನಡೆಯುತ್ತದೆ!! ಏಕೆ? ಅಸಲಿಗೆ ಇದರ ಕಥೆಯಾದರೂ ಏನು?  ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ಈ ಮೂವಿಯ