Posts

Showing posts from August, 2021

ವಿಷಯ ಎಂತ ಗೊತ್ತುಂಟಾ

Image
ಹಿಂದೆ ಒಮ್ಮೆ ಒಂದು ರಾತ್ರಿ ಭಯಂಕರ ಗೋಳಿನ ಮೆಸೇಜ್ ಬರೆದು ಫೇಸ್ಬುಕ್ ನಲ್ಲಿ ಹಾಕಿದ್ದೆ." ನನ್ನದು ಸ 5K ಫ್ರೆಂಡ್ಸ್ ಆಗಿದ್ದಾರೆ.ಹಾಗಾಗಿ ಈ ಸುಸಂದರ್ಭದಲ್ಲಿ ನಾನು ಹೇಳತಕ್ಕಂತಹ ಈ ಒಂದು ಮಾತು ಏನೆಂದರೆ.. ಅಪರಿಚಿತರಂತೆ ಕಂಡು ಬರುವವರನ್ನು ನನ್ನ ವಾಲಿನಿಂದ ಈ ಕ್ಷಣವೇ ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಲಾಗುವುದು...ದಯವಿಟ್ಟು ಯಾರೂ ಕೂಡ ಬೇಜಾರು ಮಾಡ್ಬಾರ್ದು..ಎಲ್ಲರೂ ಶಾಂತಚಿತ್ತರಾಗಿ ವರ್ತಿಸಿ..ಕಾನೂನನ್ನು ಕೈಗೆ ತೆಗದುಕೊಳ್ಳದೇ... ಆಕ್ರೋಶಕ್ಕೆ ಒಳಗಾಗದೇ..ಜೀವನ ಎಂಬ ಏನು ಈ ಮೂರು ದಿನದ ಬಾಳಿನಲ್ಲಿ ನಾವೆಲ್ಲರೂ.." ಎಂದೆಲ್ಲಾ ಬಾಯಿಗೆ ಬಂದದ್ದು ಬರೆದು ಹಾಕಿದ್ದೆ. ಅದಕ್ಕೆ ಒಬ್ಬರು ಹೇಳಿದರು "ನೋಡಿ ನೀವು ಹೀಗೆ ಮಾಡಿ,ಡೈಲಿ ಈ ಬರ್ತ್ ಡೇ ನೋಟಿಫಿಕೇಶನ್ ಬರ್ತದೆ ಅಲ,ಆವಾಗ "ಸರಿಯಾಗಿ" ನೋಡಿಕೊಂಡು ನೋಡಿಕೊಂಡು  ದಿನಾಲೂ ಒಂದಿಷ್ಟು ಜನರನ್ನು ರಿಮೂವ್ ಮಾಡುತ್ತಲೇ ಹೋಗಿ,ಈ ಹುಡುಕಿ ಹುಡುಕಿ ರಿಮೂವ್ ಮಾಡುವುದಕ್ಕಿಂತಲೂ ನಿಮಗೆ ಇದೇ ಸುಲಭವಾಗಬಹುದು ..." ಎಂದು ಅವರು ಸಜೇಷನ್ ಕೊಟ್ಟಿದ್ದರು. ಮೊದಲೇ ಅತೀ ದೊಡ್ಡ ಉದಾಸೀನದ ಮಾರಿ ನಾನು.ನನಗೆ ಈ ಐಡಿಯಾ ಹೇಳಿ ಮಾಡಿಸಿದಂತಿತ್ತು ಮತ್ತು ಹಿಡಿಸಿತು.ನಿಜವಾಗಿಯೂ ನಾನು ಹಾಗೇ ಮಾಡುತ್ತಿದ್ದೆ.ದಿನಾಲೂ ಎದ್ದು ಯಾರಿಗೆ ಸ ಬರ್ತಡೆ ವಿಶ್ ಮಾಡದಿದ್ದರೂ,ಬರ್ತಡೇ ಲಿಸ್ಟ್ ಗೆ ತಪ್ಪದೇ ಹೋಗಿ ಅಪರಿಚಿತರಂತೆ ಕಂಡು ಬರುವ ಒಂದಿಷ್ಟು ಮುಖಗಳನ್ನು "ಸರಿಯಾಗಿ&qu

The Bridge on the river kwai

Image
ಜಪಾನ್ 1943 ರಲ್ಲಿ ಸೆರೆ ಸಿಕ್ಕ ಬ್ರಿಟಿಷ್ ಹಾಗೂ ಮಿತ್ರ ಪಕ್ಷಗಳ ಸೈನಿಕರನ್ನು ಬರ್ಮಾದ ಕಾಡಿನ ನಡುವೆ ಇರುವ ತನ್ನದೊಂದು ಪ್ರಿಸಂನ್ ಕ್ಯಾಂಪಿನಲ್ಲಿ ಯುದ್ಧ ಖೈದಿಗಳನ್ನಾಗಿ ಇರಿಸಿಕೊಳ್ಳುತ್ತದೆ.  ಬ್ಯಾಂಕಾಕ್ ಮತ್ತು ರಂಗೂನ್ ನಡುವೆ ಸಂಪರ್ಕ ಕಲ್ಪಿಸುವುದಕ್ಕಾಗಿ ಅಲ್ಲಿಯ ಕ್ವಾಯಿ ನದಿಯ ಮೇಲೊಂದು ರೈಲ್ವೆ ಸೇತುವೆ ನಿರ್ಮಿಸುವ  ತುರ್ತು ಅಗತ್ಯ ಜಪಾನ್ ಗೆ ಇರುತ್ತದೆ.  ಇದೇ ಬ್ರಿಟಿಷ್ ಯುದ್ಧ ಕೈದಿಗಳನ್ನು ಬಳಸಿಕೊಂಡು ಅದು ಕ್ವಾಯಿ ನದಿಯ ಮೇಲೆ ಒಂದು ಸೇತುವೆ ಕಟ್ಟಲು ಮುಂದಾಗುತ್ತದೆ.  ಆದರೆ ಆ ಪ್ರಿಸಂನ್ ಕ್ಯಾಂಪ್ ನ ಜಪಾನ್ ಕರ್ನಲ್, ಬ್ರಿಟಿಷ್ ಸೈನಿಕರು ಮಾತ್ರವಲ್ಲ ಬ್ರಿಟಿಷ್ ಅಧಿಕಾರಿಗಳು ಕೂಡ ಕೂಲಿ ಕಾರ್ಮಿಕರಂತೆ ಕೆಲಸ ಮಾಡಬೇಕು ಎಂದು ಆದೇಶಿಸಿ ಬಿಡುತ್ತಾನೆ.  ಆದರೆ ಬ್ರಿಟಿಷ್ ಅಧಿಕಾರಿಗಳು ಅದಕ್ಕೆ ಒಪ್ಪುವುದಿಲ್ಲ. ಒಂದಷ್ಟು ಘರ್ಷಣೆ ಆ ದಟ್ಟ ಕಾಡಿನ ನಡುವಿನ ಕ್ಯಾಂಪ್ ನಲ್ಲಿ ತಣ್ಣನೆ ನಡೆದು ಬಿಡುತ್ತದೆ. ಕೆಲವರು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಪಟ್ಟು ಕೊಲ್ಲಲ್ಪಡುತ್ತಾರೆ.ಆದರೆ ಅದರಲ್ಲಿ ಯುದ್ಧ ಖೈದಿಯಾಗಿದ್ದ ಯು.ಸ್ ನೇವಿ ಯ ಕಮಾಂಡರ್ ಒಬ್ಬ ಮಾತ್ರ ಯಶಸ್ವಿಯಾಗಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಪಕ್ಕದ ಸಿಲೋನ್ (ಈಗಿನ ಶ್ರೀಲಂಕಾ)ನ ಬ್ರಿಟಿಷ್ ಕ್ಯಾಂಪ್ ಗೆ ಸೇರಿಕೊಳ್ಳುತ್ತಾನೆ. ಇಲ್ಲಿ ಜಪಾನ್ ಕರ್ನಲ್ ಕೊನೆಗೂ ಬ್ರಿಟಿಷ್ ಅಧಿಕಾರಿಗಳ ಮನವಿಗೆ ಒಪ್ಪಿಗೆ ನೀಡುತ್ತಾನೆ. ಏಕೆಂದರೆ ಅವನಿಗೆ ಆದಷ್ಟು ಬೇಗ ಸೇತುವೆ ಪೂರ

ಅತ್ತಿಗೆಯ ಮೂಡೆ ಬ್ಯುಸಿನೆಸ್

Image
ಇದು ಯಾವುದೇ ಕ್ರಾಪ್ಟ್ ಮಾಡಲು ಬಳಸುವ ಚುಚ್ಚು ಕಡ್ಡಿ ಅಲ್ಲ.ಇದು ಈಗ ಮಾರುಕಟ್ಟೆಗಳಲ್ಲಿ ಸಿಗುವ ಗುಂಡ/ಮೂಡೆ ಗಳನ್ನು ಎಟ್ಟಲು(ಕಟ್ಟಲು)ಬಳಸುವ ಕಡ್ಡಿ. ಹಿಂದೆ ಎಲ್ಲಾ ಗುಡ್ಡೆಯಲ್ಲಿ ಬೇಕಾದಷ್ಟು ಸಿಗುತ್ತಿದ್ದ ಈ ಕರ್ಕಟೆ ಮುಳ್ಳುಗಳು ಇದಕ್ಕಾಗಿಯೇ ಬಳಸಲ್ಪಡುತ್ತಿತ್ತು.ಈಗಲೂ ಅದು ಹಳ್ಳಿಗಳಲ್ಲಿ ಅಲ್ಲಲ್ಲಿ ಅಲ್ಪ ಸ್ವಲ್ಪ ಇದ್ದು,ಬಹುಶಃ ಮುಳ್ಳಿನ ಗಿಡವಾದ ಕಾರಣ ಸದ್ದಿಲ್ಲದೆ ಅಳಿವಿನಂಚಿಗೆ ಸರಿಯುತ್ತಿದೆ.ಕರ್ಕಟೆ ಮುಳ್ಳು ಬಿಟ್ಟರೆ ಬಿದಿರಿನ ಕಡ್ಡಿ ಹಾಗೂ ಈ ಮೈಪುಸೂಡಿಯ(ಹಿಡಿಸೂಡಿ ಕಡ್ಡಿ/ಪೊರಕೆ)ಕಡ್ಡಿಯನ್ನು ಸರಿಯಾಗಿ ಕಟ್ ಮಾಡಿ ಚೆನ್ನಾಗಿ ಕ್ಲೀನ್ ಮಾಡಿ ಕೂಡ ಬಳಸಬಹುದು. ಈ ಅಷ್ಟಮಿ ಹಬ್ಬ ಬಂದಾಗ ತುಳುನಾಡಿನಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುವ ತಿಂಡಿಗಳು ಎರಡೇ ಒಂದು ಗುಂಡ ಮತ್ತೊಂದು ಮೂಡೆ.ಗೊತ್ತಿಲ್ಲದವರಿಗೆ ಸರಳವಾಗಿ ಹೇಳಬೇಕೆಂದರೆ ಮೂಡೆ ಎಂದರೆ ಮೂಡೆಯ ಒಲಿ(ಕೇದಗೆಯ ಎಲೆ)ಯನ್ನು ಕಡ್ಡಿಯಿಂದ ಚುಚ್ಚಿ ಕೊಟ್ಟೆ(ಮೌಲ್ಡ್)ಮಾಡಿ ಅದಕ್ಕೆ ನಮ್ಮ ಇಡ್ಲಿ ಹಿಟ್ಟು ಹಾಕಿ ಹಬೆಯಲ್ಲಿ ಬೇಯಿಸುವುದು,ಗುಂಡ ಎಂದರೆ ಹಲಸಿನ ನಾಲ್ಕು ಎಲೆಗಳನ್ನು ಬಳಸಿಕೊಂಡು ಅದನ್ನು ಕಡ್ಡಿ ಚುಚ್ಚಿ ಅದರಿಂದೊಂದು ಮೌಲ್ಡ್ ತಯಾರಿಸಿ ಅದಕ್ಕೂ ಇಡ್ಲಿ ಹಿಟ್ಟು ಸುರಿದು ಅದನ್ನು  ಹಬೆಯಲ್ಲಿ ಬೇಯಿಸಿದರೆ ಆಗ ಅದು ಗುಂಡ. ಇದೇ ರೀತಿ ಬಾಳೆಎಲೆಯನ್ನೂ ಕೂಡ ಬಾಡಿಸಿ ಕಟ್ಟಿಕೊಂಡು ಕೊಟ್ಟಿಗೆ ಎಲ್ಲಾ ಮಾಡ್ತಾರೆ.ಆದರೆ ಅದರಲ್ಲಿ ಕಡ್ಡಿ ಬಳಕೆ ಕಡಿಮೆ,ಇಡ್ಲಿ ಹಿಟ್ಟು ಹಾಕಿದ ಬಾಳೆಎಲೆಯ

Anveshanam

Image
ಪುಟ್ಟ ಮಗುವೊಂದು ರಾತ್ರಿಯ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಾಗುತ್ತದೆ. ಮನೆಯ ಮೆಟ್ಟಿಲಿನಿಂದ ಕೆಳಗೆ ಜಾರಿ ಬಿದ್ದು ತಲೆಗೆ  ಏಟಾಗಿರುವುದೇ ಇದಕ್ಕೆ ಕಾರಣ. ಆದರೆ ಪೋಲಿಸರಿಗೆ ಬಂದ ಒಂದು ಅಪರಿಚಿತ ಕಾಲ್  ಬೇರೆಯೇ ಕಥೆ ಹೇಳಿ ಬಿಡುತ್ತದೆ.ಇದು ಜಾರಿ ಬಿದ್ದು ಆದ ಅಪಘಾತವಲ್ಲ,ಬದಲಿಗೆ ಮಗುವಿನ ಮೇಲೆ ದೌರ್ಜನ್ಯ ಎಸಗಲಾಗಿದೆ.. ಎಂಬುದೇ ಆ ಕಥೆ.  ಏನೋ ಒಂದು ಅರ್ಧ ಗಂಟೆಯ ವಿಚಾರಣೆ ಮಾಡಿ,ಬೇಗ  ಹಿಂದಿರುಗಬಹುದೆಂದು ಪೋಲಿಸ್ ಟೀಮ್ ಕೂಡ ಆ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡುತ್ತದೆ. ಆದರೆ ಕಥೆ ಅಷ್ಟು ಬೇಗನೆ ಮುಗಿಯುವುದಿಲ್ಲ, ಬದಲಿಗೆ ಉದ್ದಕ್ಕೆ ಬೆಳೆಯುತ್ತದೆ.  ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲಿಯೇ ಸತ್ತು ಬಿಡುತ್ತದೆ!  ಪೋಲಿಸರಿಗೆ ಅನುಮಾನ ಹೆಚ್ಚಾಗುತ್ತದೆ. ತನಿಖೆ ಶುರುವಾಗುತ್ತದೆ. ಎಲ್ಲರ ಹೇಳಿಕೆಯನ್ನೂ ಪಡೆಯಲಾಗುತ್ತದೆ.  ಮಗುವಿನ ತಂದೆ ಮಾರ್ಮಿಕವಾಗಿ ತನ್ನದೊಂದು ಹೇಳಿಕೆಯಲ್ಲಿ ಈ ರೀತಿ ಬರೆದುಕೊಳ್ಳುತ್ತಾನೆ " ಮಗು ಒಂದು ಹುಟ್ಟಿದ ಕೂಡಲೇ ಆ ಕ್ಷಣವೇ ತಂದೆ ಹಾಗೂ ತಾಯಿ ಕೂಡ ಈ ಲೋಕದಲ್ಲಿ ಹುಟ್ಟಿ ಬಿಡುತ್ತಾರೆ.ನನ್ನ ಮಗ ಈಗ ಕೆಲವು ಕ್ಷಣಗಳ ಹಿಂದೆಯೇ ಸತ್ತು ಹೋದ.ಹಾಗಾಗಿ ಅವನ ಜೊತೆಯಲ್ಲಿಯೇ ನಾನೂ ಕೂಡ ಎಲ್ಲೋ ಒಂದು ಕಡೆ ಸತ್ತು ಹೋದೆ.ನನ್ನ ಮಗುವಿನ ಸಾವಿಗೆ ನಾನೇ ಕಾರಣ,ಕೇವಲ ನಾನೊಬ್ಬನೇ ಕಾರಣ..! " ಎಂದು ಬರೆದು ಬಿಡುತ್ತಾನೆ.  ಆದರೆ ಈ ಹೇಳಿಕೆ ಎಷ್ಟು ನಿಜ?!!  Prasobh Vi

Nizhal

Image
ಶಾಲಾ ಮಕ್ಕಳಿಗೆ ಕ್ಲಾಸಿನಲ್ಲಿ ಯಾವುದಾದರೊಂದು ಕಥೆ ಹೇಳಲು ಹೇಳಿದರೆ ಎಂತಹ ಕಥೆ ಅವರು ಹೇಳಬಹುದು..? ಸಾಮಾನ್ಯವಾಗಿ ಪಂಚತಂತ್ರವೋ,ರಾಜ ರಾಣಿಯರ ಕಥೆಯೋ ಇಂತಹದ್ದೇ ಏನಾದರೊಂದು ಸಣ್ಣ ಪುಟ್ಟ ಕಥೆ ಹೇಳಬಹುದು ಅಷ್ಟೇ.  ಆದರೆ ಇಲ್ಲಿ ಒಬ್ಬ ಎಂಟು ವರ್ಷದ ಪುಟ್ಟ ಬಾಲಕ ಹೇಳಿದ ಕಥೆ ಎಂದಿನಂತೆ ಹಾಗೂ ಎಲ್ಲರಂತೆ ಇರಲಿಲ್ಲ.  ಅದರಲ್ಲಿ ಒಂದಲ್ಲ... ಹಲವಾರು ಕೊಲೆಗಳು ಇತ್ತು! ಹುಡುಗ ತಾನು ನೋಡಿರದ ಮಾತ್ರವಲ್ಲ ಕೇಳಿಯೇ ಇರದ ಊರಿನ ಹೆಸರುಗಳನ್ನು ಹೇಳಿ ಕೊಲೆಯ ಕಥೆಗಳನ್ನು  ಹೇಳುತ್ತಿದ್ದ! ಆ ಸ್ಥಳಗಳಿಗೆ ಹೋಗಿ ಕೂಲಂಕಷವಾಗಿ ಪರಿಶೀಲಿಸಿದಾಗ ಮೂವತ್ತು,ನಲವತ್ತು ವರ್ಷಗಳ ಹಿಂದೆ ಅಲ್ಲೆಲ್ಲ ನಿಜವಾಗಿಯೂ ಒಂದರ ಮೇಲೊಂದು ಕೊಲೆಗಳು ಆಗಿದ್ದವು! ಆ ಹುಡುಗ ಏಕೆ ಬರೀ ಇಂತಹದ್ದೇ ಕಥೆ ಹೇಳುತ್ತಾನೆ?!!! Appu N. Bhattathiri ಇದನ್ನು ನಿರ್ದೇಶಿಸಿದ್ದಾರೆ. Kunchacko Boban ಹಾಗೂ Nayanthara ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.  #Nizhal | Prime  Malayalam Movie  Mystery Thriller  Release - April 2021  #Movies  Ab

ಪರೇಡ್

Image
 3T_D4 ಪರೇಡ್..!  ಸಂಡೆಯ ದಿನವೂ ಮ್ಯಾಚ್ ನೋಡಬಹುದು ಎಂದು ಇನ್ನಿಲ್ಲದಂತೆ ಕನಸು ಕಂಡಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹೆಡಿಂಗ್ಲಿಯಲ್ಲಿ ಇಂದು ಕಂಡು ಬಂದಿದ್ದು ಕೇವಲ ನಮ್ಮ ಬ್ಯಾಟ್ಸ್‌ಮನ್ ಗಳ ಪೆವಿಲಿಯನ್ ಪರೇಡು ಅಷ್ಟೇ! ಒಬ್ಬರ ನಂತರ ಒಬ್ಬರು ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಗಳು ಹೇಗೆ ಪೆವಿಲಿಯನ್ ಸೇರಿಕೊಂಡರು ಅಂದರೆ ಮೊದಲ ಸೆಷನ್ ಹೆಚ್ಚು ಕಡಿಮೆ ಹೈಲೈಟ್ಸ್ ನೋಡಿದ ಫೀಲಿಂಗ್ ಅನ್ನೇ ಕೊಟ್ಟು ಬಿಟ್ಟಿತ್ತು. ನಿಜಕ್ಕೂ ತುಂಬಾನೇ ನಿರಾಶಾಧಾಯಕ ಪ್ರದರ್ಶನ ಇವತ್ತಿನದ್ದು. ನಿನ್ನೆಯ ನಮ್ಮವರ ಆ ಒಂದು ರೆಸಿಸ್ಟೆನ್ಸ್ ಎಲ್ಲಿ,ಇವತ್ತಿನ ಪರದಾಟ,ಪೇಚಾಟ ಎಲ್ಲಿ. ನಿನ್ನೆ ನಾವು ಇಡೀ ದಿನ ಕಳೆದುಕೊಂಡದ್ದೇ ಎರಡು ವಿಕೆಟ್. ಆದರೆ ಇವತ್ತಿನ ಕಥೆ ಮಾತ್ರ ಬೇರೆಯೇ ಇತ್ತು. ಇಂತಹದ್ದೊಂದು ಪತನಕ್ಕೆ ಮೊದಲು ಮಹೂರ್ತ ಬರೆದದ್ದೇ ನಮ್ಮ ಚೇತೆಶ್ವರ್ ಪೂಜಾರ. ರಾಬಿನ್ಸನ್ ಬೌಲಿಂಗ್ ನಲ್ಲಿ ಅವನು ಮೊದಲು ಎಲ್.ಬಿ.ಡಬ್ಲ್ಯು ಔಟಾಗಿ ಬಿಟ್ಟ. ಕೆಲವರಿಗೆ ಈ ಚೇತೆಶ್ವರ್ ಪೂಜಾರ ಎಲ್. ಬಿ.ಡಬ್ಲ್ಯು ಔಟಾದ ರೀತಿಯ ಬಗ್ಗೆಯೂ ಒಂದಷ್ಟು ಗೊಂದಲಗಳಿದ್ದವು. ಆದರೆ ಕ್ರಿಕೆಟ್ ನಿಯಮದ ಪ್ರಕಾರ ಅದು ಔಟೇ ಆಗಿದೆ. ಯಾವ ಬ್ಯಾಟ್ಸ್‌ಮನ್ ಔಟ್ ಸೈಡ್ ದಿ ಆಫ್ ಸ್ಟಂಪ್ ಬೀಳುವ ಬಾಲನ್ನು ಆಡದೆ ಇದ್ದರೆ ಕ್ರಿಕೆಟ್ ಬಾಷೆಯಲ್ಲಿಯೇ ಹೇಳಬೇಕಾದರೆ "not offering shot" ಕಾರಣದಿಂದಾಗಿ ಅವನದ್ದೊಂದು ಪ್ಯಾಡ್ ಗೆ ಬಾಲ್ ಬಡಿದರೆ,ಆಗ ಯಾವುದೇ ಕಾರಣಕ್ಕೂ impact ನೋಡಬೇಕಾ

ಕಿರು ಪರೀಕ್ಷೆ

Image
ಇನ್ನೂ ಎರಡು ದಿನ ಬಾಕಿ ಇರುವುದರಿಂದ ಮುಂದಿನ ದಿನಗಳು ಇನ್ನಷ್ಟು ಕಠಿಣವಾಗಿರಲಿದೆ ಎನ್ನುವುದು ನಿಜವೇ ಆದರೂ...  ಅವೆಲ್ಲಕ್ಕೂ ಪೂರ್ವಭಾವಿ ಎಂಬಂತೆ ನಡೆದ ಈ ದಿನದ  ಪರೀಕ್ಷೆಯಲ್ಲಿ ಪೂರ್ಣಾಂಕದೊಂದಿಗೆ ಉತ್ತೀರ್ಣರಾದ ನಮ್ಮವರಿಗೆ ನಾವು ಹೃದಯದಿಂದ ಒಂದಷ್ಟು ಅಭಿನಂದಿಸಲೇಬೇಕು.  ಜಗತ್ತು ಕಾದು ಕುಳಿತ್ತಿದ್ದದ್ದು...ಇಂದಿನ ಆಟ ಹೀಗೆ ಶುರುವಾಗಿ ಹಾಗೇ ಇವತ್ತೇ ಮುಗಿದು ಹೋಗುತ್ತದೆ ಎಂದು. ಖಂಡಿತವಾಗಿಯೂ ಅಂತಹ ಪರಿಸ್ಥಿತಿಯಲ್ಲಿಯೇ ಟೀಮ್ ಇಂಡಿಯಾ ಕೂಡ ಇದ್ದುದರಿಂದ ಯಾರೇ ಆಗಲಿ ಆ ರೀತಿ ಯೋಚಿಸಿದ್ದರೆ ಅದರಲ್ಲಿ ತಪ್ಪು ಕೂಡ ಇಲ್ಲ.  ಆದರೆ ಆ ರೀತಿಯ ಎಲ್ಲಾ ಜಗತ್ತಿನ ಯೋಚನೆಗಳನ್ನು,ಆಂಗ್ಲರ ಬಹಳಷ್ಟು ಯೋಜನೆಗಳನ್ನು ಧೂಳೀಪಟ ಮಾಡಿ ಟೀಮ್ ಇಂಡಿಯಾದ ಅಭಿಮಾನಿಗಳಲ್ಲಿ ಇನ್ನಿಲ್ಲದಂತೆ ಹರುಷ ಉಕ್ಕಿಸಿದ್ದು ನಮ್ಮ ಬ್ಯಾಟ್ಸ್‌ಮನ್ ಗಳು.ಅದರಲ್ಲೂ ಮುಖ್ಯವಾಗಿ ಪೂಜಾರ ಮತ್ತು ರೋಹಿತ್.  ಈ ದಿನ  432 ರನ್ನುಗಳಿಗೆ ತನ್ನದೊಂದು ಉದ್ದವಾದ ಮೊದಲ ಇನ್ನಿಂಗ್ಸ್ ಬಲು ಬೇಗ ಕೊನೆ ಗೊಳಿಸಿದ ಆಂಗ್ಲರು ಸುಮಾರು 354 ರನ್ನುಗಳಷ್ಟು ಬೃಹತ್ ಮುನ್ನಡೆಯನ್ನು ಗಳಿಸಿಕೊಂಡಿದ್ದರು.  ಟೀಮ್ ಇಂಡಿಯಾದ ಎರಡನೇ ಇನಿಂಗ್ಸ್ ಆರಂಭಿಸಿದ ರೋಹಿತ್ ಮತ್ತು ರಾಹುಲ್ ನದ್ದೊಂದು ಢಿಫೆನ್ಸ್ ಬಹಳಷ್ಟು ಸ್ಟ್ರಾಂಗ್ ಹಾಗೂ ಅಷ್ಟೇ ಸಾಲಿಡ್ ಕೂಡ ಆಗಿತ್ತು.  ಟೆಸ್ಟ್ ನಲ್ಲಿ ಬ್ಯಾಟ್ಸ್‌ಮನ್ ಒಬ್ಬ ಬೌಂಡರಿ ಮೇಲೆ ಬೌಂಡರಿ ಬಾರಿಸುವುದಕ್ಕಿಂತಲೂ ಸರಾಗವಾಗಿ ಬಾಲ್ ಮೇಲೆ ಬಾಲ್ ಯಾವುದೇ ಅಳುಕಿಲ್ಲ

ರೋಷಾಗ್ನಿ ಜ್ವಾಲೆ ಉರಿದುರಿದು..

Image
ಅದೇ ಹೇಳ್ಲಿಕ್ಕೆ ಎಂತ ಸ ಇಲ್ಲ. ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದೇ. ನಮ್ಮವರು  ಹಿಂದೆ ಉಳಿದಿದ್ದಾರೆ,ಅವರು ಮಾತ್ರ ನಮ್ಮನ್ನು ಬಿಟ್ಟು ಬಹಳಷ್ಟು ಮುಂದೆ ಓಡಿ ಹೋಗಿದ್ದಾರೆ. ಆದರೆ ನಾವು ಬಿಡುವುದಿಲ್ಲ. ಸಾಧಿಸಿ ತೋರಿಸುತ್ತೇವೆ. ಆಂಗ್ಲರಿಗೆ ನೀರು ಕುಡಿಸುತ್ತೇವೆ ಹಾಗೂ ಅವರನ್ನು ಬಗ್ಗು ಬಡಿದು ಮಣ್ಣು ಸ ಮುಕ್ಕಿಸುತ್ತೇವೆ... ಅನ್ನತಕ್ಕಂತಹ ಏನು ಈ ಒಂದು ಬೆಚ್ಚದ ಮನದ ಮಾತಿನೊಂದಿಗೆ ಇವತ್ತಿದ್ದು ಟಾಪಿಕ್ ನಾವು ರಪ್ಪ ಅಂತ ಇಲ್ಲಿಗೆ ವೈಂಡ್ ಅಫ್ ಮಾಡಿ ಬಿಡುತ್ತಿದ್ದೇವೆ. ಕೊನೆಯ ಒಂದು ಹನಿ ಮುತ್ತು...ನಮ್ಮ ಈ ಏನು ಒಂದು ಹೋರಾಟ ಅದು ಇಲ್ಲಿಗೆ ನಿಲ್ಲುವುದಿಲ್ಲ.ಬ್ಯಾಟಿಂಗ್ ನಮ್ಗೆ ಸ ಬರ್ತದೆ.ನೆಕ್ಸ್ಟ್ ನಮ್ಗೆ ಸ ಅದು ಸಿಕ್ತದೆ.ನಮ್ಮ ಸರದಿ ಬಂದಾಗ ನಮ್ಮವರು ಸಹ ಮ್ಯಾಜಿಕ್ ಹಾಗೂ ಜಾದು ಎರಡನ್ನೂ ಮಾಡಿ ನಿಮ್ಮನ್ನೆಲ್ಲಾ ಖಂಡಿತವಾಗಿಯೂ ಬೆಚ್ಚಿ ಬೀಳಿಸುತ್ತಾರೆ ಹಾಗೂ ಎದುರಾಳಿಯನ್ನು ಚಕಿತಗೊಳಿಸುತ್ತಾರೆ.ಯಾರೂ ಕೂಡ ಆಕ್ರೋಶಗೊಳದ್ದೇ ಶಾಂತಚಿತ್ತರಾಗಿ ಸಂಯಮ ಹಾಗೂ ಸಹನೆಯಿಂದ ಮ್ಯಾಚ್ ನೋಡುವುದರಿಂದ ರಕ್ತದೊತ್ತಡವನ್ನು ಕಂಟ್ರೋಲ್ ಮಾಡಬಹುದು.ತಾಜಾ ಸೊಪ್ಪು ತರಕಾರಿ ಹಾಗೂ ಪ್ರೆಶ್ಶು ಹಣ್ಣು ಹಂಪಲುಗಳ ಸೇವನೆಯಿಂದ ಕೂಡ ಅಧಿಕ ರಕ್ತದೊತ್ತಡವನ್ನು ಸಾಕಷ್ಟು ನಿಯಂತ್ರಿಸಬಹುದಂತೆ.ನಾಳೆ ಸಿಗೋಣ.ಮಿರಾಕುಳ್ ಸಂಭವಿಸಲಿ.... ಅರ್ಧಶತಕ ಸಿಡಿಸಿದ ರಾರಿ ಬರ್ನ್ಸ್ ಅವರಿಗೆ ಅಭಿನಂದನೆಗಳು, ಅರ್ಧಶತಕ ಹೊಡೆದ ಹಸೀಬ್ ಹಮೀದ್ ಅವರಿಗೆ ಅಭಿನಂದನೆಗಳು, ಅರ್ಧಶತಕ

ಪತನ..!

Image
ಅಂತು ಇಂತು ಕೊನೆಗೂ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬಿಟ್ಟ ಎಂಬ ಮೊದಲ ಸಾಲಿನೊಂದಿಗೆ ಈ ಪಂದ್ಯದ ಕಥೆಯೊಂದು ಹಾಗೇ ಹೆಡಿಂಗ್ಲಿಯಲ್ಲಿ ನಿಧಾನಕ್ಕೆ ಬಿಚ್ಚಿಕೊಳ್ಳಲು ಶರುವಾಯಿತು. ಲಾರ್ಡ್ಸ್ ವಿಜಯದ ಗುಂಗಿನಲ್ಲೇ ಇದ್ದ ನೋಡುಗನಿಗೆ ಈ ಸ್ಟೋರಿ ಹೇಗಿರಬಹುದು,ಇದರಲ್ಲಿ ಇಷ್ಟೊಂದು ಟರ್ನ್ & ಟ್ವಿಸ್ಟ್ ಇರಬಹುದೇ.. ಎಂಬುದಂತು ಖಂಡಿತವಾಗಿಯೂ ಗೊತ್ತೇ ಇರಲಿಲ್ಲ ಬಿಡಿ. ಇದು ಬರೀ ಪತನದ ಕಥೆಯಲ್ಲ. ಭಾರತದ ಬ್ಯಾಟಿಂಗ್ ಗೆ ಸಂಬಂಧಿಸಿದಂತೆ ಮಹಾಪತನವೇ ಇದು!  ಟಾಸ್ ಗೆದ್ದ ಕ್ಯಾಪ್ಟನ್ ಕೊಹ್ಲಿ ಆಯ್ಕೆ ಮಾಡಿಕೊಂಡಿದ್ದು  ಬ್ಯಾಟಿಂಗ್ ಅನ್ನೇ. ಟಾಸ್ ಸೋತು ಫೀಲ್ಡಿಂಗ್ ಗೆ ಇಳಿದರೂ ಖುಷಿ ಪಟ್ಟದ್ದು ಮಾತ್ರ ಜೋ ರೂಟ್.ಮುಂದಿನ ದಿನಗಳಲ್ಲಿ ಪಿಚ್ ಯಾವ ರೀತಿ ಬ್ಯಾಟಿಂಗ್ ಗೆ ನೆರವಾಗಬಲ್ಲದು ಎನ್ನುವುದು ಅವನಿಗಿಂತ ಚೆನ್ನಾಗಿ ಬಹುಶಃ ಬೇರೆ ಯಾರಿಗೆ ಗೊತ್ತಿರಲು ಸಾಧ್ಯವಿಲ್ಲ,ಏಕೆಂದರೆ ಹೆಡಿಂಗ್ಲಿ ನಿಜವಾಗಿಯೂ ಅವನದ್ದೊಂದು  ಬ್ಯಾಕ್ ಯಾರ್ಡ್. ಆ ಗ್ರೌಂಡಿನ ಮನಸ್ಥಿತಿ ಅವನು ಬಹಳ ಸುಲಭವಾಗಿಯೇ ಅರಿಯಬಲ್ಲ. ವಿನ್ನಿಂಗ್ ಕಾಂಬಿನೇಶನ್ ಅನ್ನೇ ಮುಂದುವರಿಸಲು ಮನಸ್ಸು ಮಾಡಿದ ಟೀಮ್ ಇಂಡಿಯಾ,ತನ್ನ ಆಡುವ ಹನ್ನೊಂದರ ಬಳಗದಲ್ಲಿ ಅಂತಹ ಯಾವುದೇ ಬದಲಾವಣೆ ಮಾಡಿಕೊಳ್ಳದೇ ಲಾರ್ಡ್ಸ್ ಟೆಸ್ಟ್ ನಲ್ಲಿ ಆಡಿದಂತಹ ತಂಡವನ್ನೇ ಇಂದು ಕೂಡ ಆಯ್ಕೆ ಮಾಡಿಕೊಂಡಿತ್ತು.ಹಾಗಾಗಿ ಆರ್. ಅಶ್ವಿನ್ ಈ ಪಂದ್ಯಕ್ಕೂ ಕೂಡ ಹೊರಗುಳಿಯಬೇಕಾಯಿತು. ಅವನನ್ನು ಈ ಪಂದ್ಯದಲ್ಲಾದರೂ ಟೀಮ್ ಇಂಡಿಯಾ ಆಡ

ಮೋಡ ಕವಿದ ವಾತಾವರಣ

Image
ಆಂಗ್ಲರ ಅಂಗಣದಲ್ಲಿ ಕಾಣಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಸದ್ಯಕ್ಕೆ ಒಂದಷ್ಟು ಆತಂಕದ ಮೋಡಗಳು ಆಂಗ್ಲರ ಮನದಂಗಣದಲ್ಲಿಯೇ ಹಾಗೇ ಸಂತೆ ಸೇರಿ ಬಿಟ್ಟಿವೆ. ಒಂದು, ಎರಡು ಮುಗಿದು ಇದು ಮೂರನೆಯದ್ದು. ಅದೃಷ್ಟ ಕೈ ಹಿಡಿದಿದ್ದರೆ,ವರುಣ ಮತ್ತು ಸೂರ್ಯನಾರಾಯಣ ದೇವರ ಕೃಪೆಯೂ ಅಷ್ಟೇ ಇದ್ದಿದ್ದರೆ ಮೊದಲ ಪಂದ್ಯದ ಮೇಲೂ ಅದು ನಮ್ಮದೇ ಎನ್ನುವ ಒಂದು ಶಾಶ್ವತ ರುಜು ಇರುತ್ತಿತ್ತು. ಹಂಚಿಕೊಂಡ ರೊಟ್ಟಿ ರುಚಿ ಹೌದು,ಅದು ಹಸಿವು ನೀಗಿಸುವ  ಸುಖವೂ ಹೌದು.ಆದರೆ ಪಂದ್ಯದ ಅಂಕ ಒಂದು ಹರಿದು ಹಂಚಿ ಹೋಗುವುದರಲ್ಲಿ ಗೆಲ್ಲಬಹುದಾದ ತಂಡಕ್ಕೆ ಎಲ್ಲಿಯ ಸುಖ. ಒಂದಿಷ್ಟು ಸಿಕ್ಕಾಪಟ್ಟೆ ಬೇಜಾರುಗಳಿಗೆ ಮುಂದೆ ಗೆಲುವು ದಕ್ಕಿದರಷ್ಟೇ ಮನಸ್ಸಿಗೊಂದಿಷ್ಟು ಹಾಯೆನಿಸುವ ಹಿತ. ಕ್ರಿಕೆಟ್ ಕಾಶಿ ಬರೀ ನಗುವಿನ ಹೂ ಅರಳಿಸಲಿಲ್ಲ, ಪೂರ್ಣಾಂಕದೊಂದಿಗೆ ದಯಪಾಲಿಸಿತ್ತು ಉಲ್ಲಾಸ,ಉತ್ಸಾಹದ ಮತ್ತದೇ ಗಾಬಾ ದ್ದೊಂದು  ಜೋಶು. ಐದರಲ್ಲಿ ಎರಡು ಕಳೆದು ಇವತ್ತಿಗೆ ಇದು ಮೂರನೆಯದ್ದು.  ಹೌದು,ಲೀಡ್ಸ್ ನ ಹೆಡಿಂಗ್ಲಿ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಈ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವೊಂದು ಎಂದಿನಂತೆ ಐದು ದಿನಗಳ ಕಾಲ ಇಂದಿನಿಂದ ನಡೆಯಲಿದೆ.ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಿಸ್ತು,ಸಂಯಮದ ಹಬ್ಬ.  ಇಂದು ಈ ಮೂರನೇ ಪಂದ್ಯದ ಮೊದಲ ದಿನ.ಅದಾಗಲೇ ಸರಣಿಯ ಎರಡೂ ಪಂದ್ಯಗಳಲ್ಲಿ ಸ್ಪಷ್ಟ ಮೇಲುಗೈಯನ್ನು ಸಾಧಿಸಿದ್ದು ಮಾತ್ರವಲ್ಲದೇ ಒಂದು ಪಂದ್ಯವನ್ನು ಭರ್ಜರಿಯಾಗಿಯೇ ಗೆ

ತಿಂದು ನೋಡಿದರೆ ರುಚಿ ಬಹಳ

Image
ಇದೆರಡರ ಆಕಾರ,ಡಯಾಮೀಟರು ಹೆಚ್ಚು ಕಡಿಮೆ ಒಂದೇ.ಆದರೆ ಬಣ್ಣ ಹಾಗೂ ರುಚಿ ಮಾತ್ರ ಬೇರೆ ಬೇರೆ.ಹೆಸರು ಕೂಡ ಬೇರೆಯೇ.ಒಂದರ ಹೆಸರು "ಸಂಜೀರಾ" ಮತ್ತೊಂದರ ಹೆಸರು "ಬಿಸ್ಕುಟ್ಟ್ ರೊಟ್ಟಿ". ಅದು ಜಾಸ್ತಿ ಎಲ್ಲೋ ಕಲರ್ ಇದೆ ನೋಡಿ ಅದರ ಸ್ವೀಟ್ ನೇಮ್   ಸಂಜೀರಾ,ಮತ್ತೊಂದು ಸ್ವಲ್ಪ ಬ್ರೌನು ಕಲರಿನಲ್ಲಿ ಉಂಟಲ್ಲಾ ಅದರ ಪೇರು ಬಿಸ್ಕುಟ್ಟ್ ರೊಟ್ಟಿ. ಸಂಜೀರಾ ಹೆಚ್ಚಾಗಿ ಸಿಹಿ ಇರುತ್ತದೆ.ಬಿಸ್ಕುಟ್ಟ್ ರೊಟ್ಟಿಯಲ್ಲಿ ಬೇರೆಯೇ ತರಹದ ಮಸಾಲೆ ಇದ್ದರೂ ಅದು ಅಷ್ಟೊಂದು ಸಿಹಿಯಲ್ಲ, ಹಾಗಂದ ಮಾತ್ರಕ್ಕೆ ಅದು ಅಷ್ಟೊಂದು ಖಾರ ಕೂಡ ಅಲ್ಲ. ಸಂಜೀರಾಕ್ಕೆ ಕೆಲವರು ಸ್ವೀಟ್ ಪೂರಿ,ಸಿಹಿ ಪೂರಿ ಎಂದೆಲ್ಲ ಹೇಳುವುದಿದೆ.ಆದರೆ ಎಲ್ಲಿಯ ಪೂರಿ,ಎಲ್ಲಿಯ ಸಂಜೀರಾ? ಪೂರಿಯ ತರಹ ಲಟ್ಟಿಸುತ್ತಾರೆ,ಬಿಸಿ ಎಣ್ಣೆಯಲ್ಲಿ ಕರಿದು ಅದರ ಹೊಟ್ಟೆಯುಬ್ಬಿಸಿ ತೆಗೆಯುತ್ತಾರೆ ಎಂಬುದು ಬಿಟ್ಟರೆ ಅಂತಹ ಯಾವುದೇ ಸಾಮ್ಯತೆ ಈ ಎರಡೂ ತಿಂಡಿಗೂ ಇಲ್ಲ. ಸಂಜೀರಾ ಹಾಗೂ ಬಿಸ್ಕುಟ್ಟ್ ರೊಟ್ಟಿ ಎರಡೂ ಸಿಕ್ಕಾಪಟ್ಟೆ ಕ್ರಿಸ್ಪಿ. "Fragile, Handle with Care" ತರಹದ ತಿಂಡಿಗಳು ಇವು. ಮೆಲ್ಲಗೆ ಉಬ್ಬಿದ ಹೊಟ್ಟೆಗೆ ಪಟ್ಟನೆ ಎರಡೆಟು ಕೊಟ್ಟರೆ ಹಾಗೇ ಪುಡಿ ಪುಡಿಯಾಗಿ ಬಿಡುವುದು. ತುಪ್ಪದಲ್ಲಿ ಹುರಿದ ಕಾಯಿತುರಿ,ಸಕ್ಕರೆ,ರವೆ ಸಂಜೀರಾದ ಒಳಗೊಡೆಯಲ್ಲಿ ಹರಡಿಕೊಂಡು ಹಾಗೇ ಕಚ್ಚಿಕೊಂಡು ತಿನ್ನುವಾಗ ಬಹಳಷ್ಟು ಸಿಹಿ ರುಚಿ ಕೊಡುತ್ತದೆ.ಸಂಜೀರಾದಲ್ಲಿ ಕನಿಷ್ಟ ಪಕ್ಷ &quo