Posts

Showing posts from June, 2021

ವೀರಗಾಥೆ - ಯೋಧರ ಅಜ್ಞಾತ ಸಾಹಸ ಕಥನಗಳು

Image
ಹೀರೋಗಳು ಅಂದ ಕೂಡಲೇ ನಿಮಗೆ ತೆರೆಯ ಮೇಲೆ ಮೆರೆದು ಇನ್ನಿಲ್ಲದಂತೆ ಅಬ್ಬರಿಸುವ ಸಿನಿಮಾ ನಾಯಕನಟರು ನೆನಪಾಗದೇ,ಕೇವಲ ಗಡಿ ಕಾಯುವ ಆ ನಮ್ಮ ಯೋಧನೇ  ಮೊದಲು ನೆನಪಾಗುವುದಾದರೆ.. ಖಂಡಿತವಾಗಿಯೂ ಇದು ನೀವುಗಳು ಓದಲೇಬೇಕಾದ ಪುಸ್ತಕ. ನಮ್ಮ ಯೋಧರ ಕಥೆಗಳೇ ಹಾಗೇ.. ಕೆಲವೊಮ್ಮೆ ಮೈನವಿರೇಳಿಸುವಂತಹದ್ದು,ಇನ್ನು ಕೆಲವೊಮ್ಮೆ ಹಾಗೇ ಕಣ್ಣಂಚನ್ನು ಇಂಚಿಂಚು ತೇವಗೊಳಿಸುವಂತಹದ್ದು.ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಲು ಹಿಂದೆ ಮುಂದೆ ನೋಡದ ಯೋಧರ ಕಥೆಗಳು ಹೇಗೆ ನಮಗೆ ತೀವ್ರವಾಗಿ ಕಾಡುತ್ತದೋ ಅದೇ ರೀತಿ ಯೋಧನ ವೃದ್ಧ ತಂದೆ,ಅವನ ಹೆತ್ತ ತಾಯಿ,ಕೈ ಹಿಡಿದ ಮಡದಿ,ಪುಟ್ಟ ಮಗುವಿನ ಕಥೆ ಕೂಡ ಕೆಲವೊಮ್ಮೆ ಹಾಗೇ ಕರುಳು ಕಿವುಚಿ ಹಾಕಿ ಬಿಡುತ್ತದೆ. ಡಾ.ಸಿಂಧೂ ಪ್ರಶಾಂತ್ ಅವರು ಬರೆದಿರುವ ಈ "ವೀರಗಾಥೆ" ಯಲ್ಲೂ ಇಂತಹದ್ದೇ ಕಥೆಗಳಿರುವುದು.ನಾವು ಬೆಚ್ಚಗೆ ಮಲಗಿ ನಿದ್ರಿಸುವಾಗ ದೇಶದ ಗಡಿಯಲ್ಲಿ ಶತ್ರುಗಳ ನೆತ್ತರು ಹರಿಸಿದ್ದು ಮಾತ್ರವಲ್ಲ ಅವಶ್ಯಕತೆ ಬಿದ್ದಾಗ ನಮಗಾಗಿ,"ಕೇವಲ ನಮಗಾಗಿ "ಪ್ರಾಣ ತ್ಯಾಗ ಮಾಡಿ, ಆ ಮೂಲಕ ಈ ದೇಶದ ಧ್ವಜವೊಂದು  ಸದಾ ಎತ್ತರದಲ್ಲಿಯೇ ಬೆಚ್ಚಗೆ ಸ್ವಲ್ಪವೂ ಸುಕ್ಕಾಗದೇ ಹಾರಾಡುವಂತೆ ನೋಡಿಕೊಂಡ,ತಮಗೊಂದು ಚಂದದ ಹೆಸರಿದ್ದರೂ ಸಹ ದೇಶದ ಜನ ಮಾನಸದಲ್ಲಿ ಇನ್ನೂ ಅಜ್ಞಾತವಾಗಿಯೇ ಉಳಿದು ಹೋಗಿರುವ ಸುಮಾರು 50 ಹುತಾತ್ಮ ವೀರ ಯೋಧರ ಸಾಹಸ ಕಥೆಗಳೇ ಈ "ವೀರಗಾಥೆ". ಇಲ್ಲಿಯ ಎಲ್ಲಾ ಕಥೆಗಳಲ್ಲೂ ನಮ್ಮ ಯೋಧರ  ಅಪ್ರತ

ಅಂಬಕ್ಕನ ಮೀನು ಮತ್ತು ಮೂರು ತುಂಡುಗಳು!

Image
  ಒಂದು ಕೈಯಲ್ಲಿ ಮಣ್ಣಿನ ಬಿಸಲೆಯನ್ನು(ಪಾತ್ರೆ),ಮತ್ತೊಂದು ಕೈಯಲ್ಲಿ ಹರಿತವಾದ ಕತ್ತಿಯನ್ನು ಹಿಡಿದುಕೊಂಡು ಮನೆಯ ಅಂಗಳದ ಅಂಚಿಗೆ ನಡೆದು ಬಿಟ್ಟೆ.  ಅಂಗಳದ ಒಂದು ಮೂಲೆಯಲ್ಲಿ ಬಸಳೆ ಬಳ್ಳಿಗಳನ್ನು ತೂಗಿಕೊಂಡು ಇತ್ತು ನಾಲ್ಕು ಕಾಲುಗಳ ಆ ಒಂದು ಬಸಳೆ ಚಪ್ಪರ.ಚಪ್ಪರದ ಮೇಲೆ ಅಂಗಾತ ಮಲಗಿಕೊಂಡಿದ್ದ ಬಸಳೆಗಳಿಗೆ ಚಪ್ಪರವನ್ನೂ ಮೀರಿ ಬಳೆಯುವ ಹಂಬಲ.ಕೆಲವೊಂದು ಬಳ್ಳಿಗಳು ತಮ್ಮ ಆ  ಪ್ರಯತ್ನದಲ್ಲಿ ಯಶಸ್ವಿ ಕೂಡ ಆಗಿದ್ದವು.  ಚಪ್ಪರದ ಬಳಿ ಕುಳಿತುಕೊಂಡು ಬಿಸಲೆಯಲ್ಲಿದ್ದ ನಾಲ್ಕೈದು ಬಂಗುಡೆ ಮೀನುಗಳನ್ನು ಮೂಂಡಿ ಕೆಸುವಿನ ಒಂದು ದೊಡ್ಡದಾದ ಎಲೆಗೆ ಸುರಿದುಕೊಂಡು,ಪಕ್ಕದಲ್ಲಿಯೇ  ಕೊಡಪಾನದಲ್ಲಿ ನೀರು ಇಟ್ಟುಕೊಂಡು... ಹಾಗೇ ನಿಧಾನಕ್ಕೆ ಮೀನು ಕ್ಲೀನು ಮಾಡಲು ಶುರು ಮಾಡಿದೆ. ತಾಜಾ ಮೀನು.ಎಲ್ಲವೂ ಹಸಿರು ಹಸಿರಾಗಿ ಗಟ್ಟಿಯಾಗಿಯೇ ಇತ್ತು. ಕೈಯಲ್ಲಿದ್ದ ಕತ್ತಿಯಿಂದ ಬಂಗುಡೆ ಮೀನಿನ ಪಕ್ಕದ ಎರಡು ರೆಕ್ಕೆ,ಕೆಳಗಿನ ಬಾಲ ಎಲ್ಲವನ್ನು ಕತ್ತರಿಸಿ,ಅದರ ಮೈಯಲ್ಲಿದ್ದ ಪಾರದರ್ಶಕ ಪೊಡಸನ್ನು ಕೂಡ ಕತ್ತಿಯಿಂದ ಕೆರೆಸಿ ತೆಗೆದೆ. ನಂತರ ಹೊಟ್ಟೆ ಸೀಳಿ ಅದರ ಕರುಳನ್ನು ಹೊರ ತೆಗೆದು ಕರುಳಿನಲ್ಲಿದ್ದ ಮೀನಿನ ಮೊಟ್ಟೆಯನ್ನು ಕೂಡ ಬಹಳ  ಜಾಗರೂಕತೆಯಿಂದ ಬೇರ್ಪಡಿಸಿ,ಅದನ್ನೂ ಸಹ ಬೇರೆಯೇ ತೆಗೆದಿಟ್ಟುಕೊಂಡೆ. ನಂತರ ಪಕ್ಕದಲ್ಲಿ ಮಿಂಯ್ಯಾವ್.. ಮಿಂಯ್ಯಾವ್ ಅನ್ನುತ್ತಲೇ  ತುಂಬಾ ಆಸೆಯಿಂದ ಕುಳಿತಿದ್ದ ಮಂಗು ಪುಚ್ಚೆಯತ್ತ(ಬೆಕ್ಕು), ಒಂದೊಂದೇ ಮೀನಿನ ಕರುಳುಗಳನ್ನು ಎಸೆದೆ

ಸೀತಾಫಲ ಮತ್ತು ಒಬ್ಬ ಗೆಳೆಯ!

Image
            ಇಳಿಯ ಬೇಕಾಗಿದ್ದ ಜಾಗದಲ್ಲಿಯೇ ನನ್ನನ್ನು ಇಳಿಸಿ ಬಸ್ಸ್ ಅದರ ಪಾಡಿಗೆ ಮುಂದೆ ಹೋಗಿತ್ತು.ನನಗಾದರೂ ಇಳಿದು ಹೋಗಲು ಒಂದೇ ನಿಲ್ದಾಣ,ಆದರೆ ಬಸ್ಸಿಗೆ ನನ್ನಂತೆಯೇ ಹಲವರು ಹಾಗೂ ಹಲವಾರು ನಿಲ್ದಾಣ... ಆದರೆ ಬಸ್ಸು ಇಳಿಸಿದ್ದು ನನ್ನನ್ನು ಮಾತ್ರ.ಹೊತ್ತುಕೊಂಡು ಬಂದಿದ್ದ ನನ್ನ ಹೃದಯದ ಭಾರವನಲ್ಲ. ನಾನು ಹಗುರವಾಗಲು ಬಂದವನೋ,ಅಥವಾ ಭಾರ ಮತ್ತಷ್ಟು ಹೆಚ್ಚಿಸಿಕೊಳ್ಳಲು ಬಂದವನೋ ಎಂದು ನನಗೇ ಗೊತ್ತಿಲ್ಲ.ದೂಳೆಬ್ಬಿಸಿಕೊಂಡು ಹೋದ ಬಸ್ಸನ್ನೇ ಒಂದು ಕ್ಷಣ ಹಾಗೇ ದಿಟ್ಟಿಸಿ ನೋಡುತ್ತಾ ನಿಂತೆ. ಅದೊಂದು ಪುಟ್ಟ ಹಳ್ಳಿ.ಅರುವತ್ತರ ದಶಕದಲ್ಲಿ ಅದುವೇ ನನ್ನ ಹಳ್ಳಿ,ನನ್ನ ಪ್ರಪಂಚ ಹಾಗೂ ಎಲ್ಲವೂ ಆಗಿತ್ತು,ಆದರೆ ಈಗ ಅಲ್ಲ.ನನ್ನ ಚಿನ್ನದಂತಹ ಬಾಲ್ಯವನ್ನು ಇಲ್ಲೇ ಕಳೆದು,ಕೇವಲ ಅದರ ನೆನಪುಗಳನ್ನು ಮಾತ್ರ ಮೂಟೆ ಕಟ್ಟಿಕೊಂಡು ನನ್ನದಲ್ಲದ ಊರಿಗೆ ಸುಮಾರು ನಲ್ವತ್ತೈದು ವರ್ಷದ ಹಿಂದೆಯೇ ನಾನು  ಇಲ್ಲಿಂದ ಸದ್ದಾಗದಂತೆ ಎದ್ದು ಹೋಗಿದ್ದೆನು. ಆಗಲೂ ಇದು ಹಳ್ಳಿ,ಈಗಲೂ ಹೆಚ್ಚು ಕಡಿಮೆ ಹಳ್ಳಿಯೇ.ನಗರೀಕರಣ ತಕ್ಕ ಮಟ್ಟಿಗೆ ಆಗಿದೆ.ಊರು ತನ್ನಷ್ಟಕ್ಕೆ ಯಾವುದರ ಪರಿವೆಯೇ ಇಲ್ಲದೇ ಉಸಿರಾಡುತ್ತಿದೆ.ಚಡಪಡಿಕೆ, ಕುತೂಹಲ ಏನಿದ್ದರೂ ನನ್ನಲ್ಲಿ ಮಾತ್ರವೇ ಅತಿಯಾಗಿತ್ತು. ನಿಧಾನಕ್ಕೆ ನನ್ನ ಮುದಿ ಹೆಜ್ಜೆಗಳನ್ನು ಇಡುತ್ತಾ ನಡೆಯತೊಡಗಿದೆ.ಅದು ಶಾಲೆಯ ದಾರಿ.ಅಷ್ಟೇ ಗುಡ್ಡದ ದಾರಿಯೂ ಹೌದು.ಅರುವತ್ತು ವರುಷಗಳ ಹಿಂದೆ ಈ  ಹಳ್ಳಿಯಲ್ಲಿ,ಆ ನನ್ನ ಎರಡು ಶಾಲೆಗೆ ಹ

ಸೌತ್ಯಾಂಪ್ಟನ್ ಮಳೆ ಹಾಗೂ ಜಂಟಿ ವಿಜೇತರು..

Image
  ಪೈನಲ್ ಪಂದ್ಯದ ಆಯೋಜಕರಲ್ಲಿ ಒಂದು ಕಳಕಳಿಯ ವಿನಂತಿ...ಇನ್ನೂ ಮೂರ್ನಾಲ್ಕು ದಿನ ನಾವು ಹೀಗೇ ಕಾದು ನೋಡುವ ತಂತ್ರ ಅನುಸರಿಸೋಣ(ಅದು ಬಿಟ್ಟರೆ ನಮಗೆ ಬೇರೆನು ಮಣ್ಣಾಂಗಟ್ಟಿ ಮಾಡಲು ಆಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ),ಮಳೆ ಇದೇ ರೀತಿ ಸರಿಯಾಗಿ ಕ್ರಿಕೆಟ್ ಆಡ್ಲಿಕ್ಕೆ ಬಿಡದೇ ಇದ್ದರೆ,ಇವತ್ತಿನ ಹಾಗೆಯೇ ಕೊನೆಯವರೆಗೂ ಕೇವಲ ಕಣ್ಣ ಮುಚ್ಚಾಲೆ ಆಟವೊಂದನ್ನೇ ಅದಕ್ಕೆ ಖುಷಿ ಬಂದಂತೆ ಆಟವಾಡಿ ಬಿಟ್ಟರೆ,ದಯವಿಟ್ಟು ಯಾವುದೇ ಕಾರಣಕ್ಕೂ ಪಂದ್ಯ ಡ್ರಾ ಎಂದು ನಾವು ಅಮಸರ  ಅಮಸರದಿಂದ ಘೋಷಣೆ  ಮಾಡುವ ಮೂಲಕ ಎರಡೂ ತಂಡವನ್ನು ಜಂಟಿ ವಿಜೇತರನ್ನಾಗಿ ಮಾಡುವುದು ಬೇಡವೇ ಬೇಡ.. ಪ್ಲೀಸ್sss..  ಅದರ ಬದಲು ನಾಣ್ಯ ಚಿಮ್ಮುಗೆಯ ಮೂಲಕ ವಿಜೇತರು ಯಾರೆಂದು ಕಂಡು ಹಿಡಿಯುವ ತಂತ್ರಕ್ಕೆ ನಾವು ಮೊರೆ ಹೋಗುವುದೇ ನೂರು ಪಟ್ಟು ಬೆಟರ್.ನಮ್ಮ ಕಡೆ ಉಂಟಲ್ಲಾ ಈ ಗುಡ್ಡೆ ಹಾಗೂ ಕಂಡದಲ್ಲಿ ನಡೆಯುವ ಸಣ್ಣಪುಟ್ಟ ಲಾಟ್ಪೋಟ್ ಟೂರ್ನಮೆಂಟ್  ನಲ್ಲಿ ಸ ನಾವು ಹೆಚ್ಚಾಗಿ ಟೈ ಎಲ್ಲಾ ಆದರೆ ಜಂಟಿ ವಿಜೇತರ ಬದಲು ಹೀಗೆಯೇ ಟಾಸ್ ಹಾಕಿ ಹೇಗಾದರೂ ಮಾಡಿ ಸಿಂಗಲ್ ವಿಜೇತರನ್ನು ಆಯ್ಕೆ ಮಾಡಿಯೇ ಮಾಡುತ್ತೇವೆ.ಇಲ್ಲಿ ಯಾವುದೇ ಪೆಟ್ಟ್ ಲಡಾಯಿಗೆ ಅವಕಾಶವಿಲ್ಲ.ಆಯೋಜಕರ,ಸಂಘಟಕರ ಹಾಗೂ ಟೂರ್ನಮೆಂಟ್ ಗೆ ಅತೀ ಹೆಚ್ಚು Sponsor ನೀಡಿರುವ  ಗ್ರಾಮದ ಒಬ್ಬ ಧೀಮಂತ ಕೊಡುಗೈ ದಾನಿಯ ತೀರ್ಮಾನವೇ ಅಂತಿಮವಾಗಿರುತ್ತದೆ.ಚೊರೆ ಮಾಡುವ ತಂಡಕ್ಕೆ ಚೀಮಾರಿ ಹಾಕಿ ಮನೆಗೆ ಕಳುಹಿಸಲಾಗುವುದು

ಬಿಳಿ ಅಂಗಿಯ ಕ್ರಿಕೆಟ್ ಗೊಂದು ಚೊಚ್ಚಲ ಫೈನಲ್ ಪಂದ್ಯ ನಡೆಸಿಕೊಡುವ ಸಂಭ್ರಮ..

Image
ಕ್ರಿಕೆಟ್ ಇತಿಹಾಸದ ಮೊತ್ತ ಮೊದಲ Official ಕ್ರಿಕೆಟ್ ಪಂದ್ಯ ನಡೆದದ್ದು ಪ್ರಸಿದ್ಧವಾದ MCG ಗ್ರೌಂಡಿನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನಡುವೆ 1877 ಮಾರ್ಚ್ 15 ರಂದು.ಲೆಕ್ಕ ಹಾಕಿದರೆ ಇಂದಿಗೆ ಹೆಚ್ಚು ಕಡಿಮೆ 144 ವರ್ಷಗಳ ಆಯಸ್ಸು ಈ ಅಚ್ಚ ಬಿಳಿಯ ಬಣ್ಣದ ಕ್ರಿಕೆಟ್ ಎಂಬ ಓಲ್ಡು ವೈನಿಗೆ.  ಆ ನಂತರ ಕ್ರಿಕೆಟ್ ಹಲವಾರು ರೀತಿಯಲ್ಲಿ ಬದಲಾವಣೆಗೊಂಡು, ನಿಯಮದಲ್ಲಿ ಬದಲಾವಣೆ ಮಾತ್ರವಲ್ಲ ಪಂದ್ಯದ ಸ್ವರೂಪದಲ್ಲಿಯೂ ಬದಲಾವಣೆ ಆಗಿ ಏಕದಿನ ಪಂದ್ಯ ಹಾಗೂ ಟಿ-ಟ್ವೆಂಟಿ ಫಾರ್ಮೆಟ್ ಗಳು ಹುಟ್ಟಿಕೊಂಡದ್ದು ನಮಗೆಲ್ಲಾ ಗೊತ್ತೇ ಇದೆ. ಆ ನಂತರ T10 ಕೂಡ ಬಂತು, ಮುಂದೆ 100 ಎಸೆತಗಳ " The Hundred" ಎನ್ನುವ ಫಾರ್ಮೆಟ್ ಕೂಡ ಸದ್ಯದಲ್ಲಿಯೇ ಬಂದು ಕ್ರಿಕೆಟ್ ಪ್ರೀಯರನ್ನು ರಂಜಿಸಲಿದೆ.  ಆದರೆ ಎಂತಹ ಆಕರ್ಷಣೀಯ ಹಾಗೂ ಎಷ್ಟೇ ಮನೋರಂಜನೆಯ ಕ್ರಿಕೆಟ್ ಫಾರ್ಮೆಟ್ ಗಳು ಹುಟ್ಟಿಕೊಂಡರು ಕೂಡ ಪ್ರತೀ ಒಬ್ಬ ನೈಜ ಕ್ರಿಕೆಟ್ ಆಟಗಾರ ತನ್ನದೊಂದು ಎದೆಯಲ್ಲಿ ಅತೀ ಪವಿತ್ರ ಎಂಬಂತಹ ಜಾಗವನ್ನು ಕೊಟ್ಟಿದ್ದು ಕೇವಲ ಟೆಸ್ಟ್ ಕ್ರಿಕೆಟ್ ಗೆ ಮಾತ್ರ. ಇಂದಿಗೂ ಆ ಫಾರ್ಮೆಟ್ ಗೆ ಇರುವ ಗೌರವವೇ ಬೇರೆ. ಆಟದ ಐದು ದಿನಗಳೂ ಕೂಡ Scoreboard ನಿಂದ ಕಣ್ಣು ಹೊರಳಿಸದೇ ತದೇಕಚಿತ್ತದಿಂದ ಈ ಟೆಸ್ಟ್ ಕ್ರಿಕೆಟ್ ಅನ್ನು ಬಲು ಪ್ರೀತಿಯಿಂದ ನೋಡುವ ಅಭಿಮಾನಿಗಳು ಕೂಡ ವಿಶ್ವದಾದ್ಯಂತ ಇಂದಿಗೂ ಕೋಟ್ಯಂತರ ಇದ್ದಾರೆ.ಅಸಲಿ ಕ್ರಿಕೆಟ್ ಎಂದರೆ ಅದು ಯಾವತ್ತಿಗೂ ಟೆಸ್ಟ್ ಕ

ರೂಮಿನಲ್ಲಿ ಸಿಸ್ತು ಮುಖ್ಯ

Image
ಅದೊಂದು ಕಲಾಬು ಹೌಸಿನ ರೂಮು.ಅದರಲ್ಲಿ ಬೆಸ ಸಂಖ್ಯೆಯಲ್ಲಿ ಹುಡುಗರು,ಸಮ ಸಂಖ್ಯೆಯ ಪ್ರಮಾಣದಷ್ಟು ಯುವತಿಯರು.ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹುಡುಗಿಯರಿಗಿಂತ ಹುಡುಗರೇ ಹೆಚ್ಚಿನ ಪ್ರಮಾಣದಲ್ಲಿ ಇದ್ದರು.ಗಂಟೆ ರಾತ್ರಿ ಹನ್ನೆರಡು ಬಾರಿಸಿ ನಿಧಾನಕ್ಕೆ ಅದರಷ್ಟಕ್ಕೆ ತೆವಳಿಕೊಂಡು ಸಾಗುತ್ತಿತ್ತು.  ಮತ್ತೊಮ್ಮೆ ಒಳಗೆ ನುಗ್ಗದೇ ಬೇಲಿ ಹಕ್ಕಿಯಂತೆ ಅಲ್ಲೇ ಹೊರಗಿನ ಆವರಣದಲ್ಲಿಯೇ ಕುಳಿತುಕೊಂಡು ಎಲ್ಲವನ್ನೂ ಕೇಳುವುದರಲ್ಲಿಯೇ ಮಗ್ನನಾದೆ.ಅಲ್ಲಿಯ ಮಾತುಕತೆ ಎಲ್ಲಾ ಹೀಗೆಯೇ,ಟೈಂ ಪಾಸಿದ್ದೇ ಇತ್ತು.ಮನೆಯಲ್ಲಿ ಬೆಳಿಗ್ಗೆ ತಿಂಡಿಗೆ  ಎಂತ,ದೋಸೆಯಾ? ಕಡುಬಾ..? ದೋಸೆಗೆ ಸಾಂಬಾರಾ ಚಟ್ನಿಯಾ...? ನೀನು ಎಷ್ಟು ದೋಸೆ ತಿಂದೆ..? ನಿಮ್ಮ ಮನೆಯಲ್ಲಿ ಪೂರಿ ಮಾಡುವುದಿಲ್ಲವಾ..? ಮಸಾಲೆ ದೋಸೆ ಮಾಡುವುದಿಲ್ಲವಾ.ಹೀಗೆ ಇತ್ಯಾದಿ,ಇತ್ಯಾದಿ ತಿಂಡಿ ಮತ್ತು "ತೀರ್ಥ" ದ ಕಥೆಗಳು.  ಅಷ್ಟರಲ್ಲಿ ಯಾರೋ ಒಬ್ಬ ದುಷ್ಟನ ಆಗಮನವಾಯಿತು ಆ ರೂಮಿಗೆ.ಅವನು ಸಭ್ಯತೆಯ ಎಲ್ಲಾ ಎಲ್ಲೆಯನ್ನು ಮೀರಿ ಅಸಭ್ಯ ವರ್ತನೆಯನ್ನು ಅತೀ ಹೆಚ್ಚಾಗಿಯೇ ಪ್ರದರ್ಶಿಸಿದ.ನಿಜವಾಗಿಯೂ ಅದು ಅಸಭ್ಯ ವರ್ತನೆಯೇ ಆಗಿತ್ತು.ಹೆಚ್ಚಾಗಿ ಎಲ್ಲಾ ಟೈಂ ಪಾಸ್ ರೂಮಿನಲ್ಲಿ ಅರ್ಧ ಗಂಟೆಗೊಮ್ಮೆ ಯಾರಾದರೊಬ್ಬರು ಇಂತಹ ವಿಶೇಷ ತಳಿಗಳು ಬಲಗಾಲಿಟ್ಟು ಒಳಗೆ ಬಂದು ತಮ್ಮದೊಂದು ಜಳಕ್ ತೋರಿಸಿ ಕಿಡಿಗೇಡಿತನವನ್ನು ಬೇಕೆಂದೇ ಪ್ರದರ್ಶನ ಮಾಡುತ್ತಲೇ ಇರುತ್ತಾರೆ.ಅವರಿಗೆ ಅದೇ ಕೆಲಸ. ಆವಾಗ ರೂಮಿನ ಖಡಕ್ ಹುಡುಗ ಒ

ಹೊತ್ತು ಗೊತ್ತಿಲ್ಲದ ಕಥೆಗಳು

Image
ಇದರಲ್ಲಿರುವುದು ಕೊಡಗಿನ ಪ್ಲೇವರ್ ನ ಕಥೆಗಳು.ಕೊಡಗು ಅಂದ ಕೂಡಲೇ ಹೇಗೆ ಕಾಫಿಯ ಘಮ ಹಾಗೇ ಸುವಾಸಿತವಾಗಿ ಮೂಗಿಗೆ ಅಡರಿಕೊಳ್ಳುತ್ತದೋ ಹಾಗೆಯೇ ಒಂದಿಷ್ಟು ಸುಲಿದ ಕಿತ್ತಳೆಯ ಹುಳಿ ಸಿಹಿ ಬೆರೆತ ಪರಿಮಳವೂ ಕೂಡ ಅದರೊಂದಿಗೆ ಸೇರಿಕೊಂಡು,ಓದುಗನನ್ನು ಒಂದಿಷ್ಟು ಮುದಗೊಳಿಸುತ್ತಾ ಹಾಗೇ ಸಲೀಸಾಗಿ ಓದಿಸುತ್ತಾ ಹೋಗುತ್ತದೆ ಇಲ್ಲಿರುವ ಹೆಚ್ಚಿನ ಎಲ್ಲಾ ಕಥೆಗಳು. ಮಡಿಕೇರಿಯ ಮಂಜು,ಹೊಳೆಯ ಮಡೆಂಜಿ,ಮೊರಂಟೆ,ಕೊಂತಿ ಮೀನುಗಳು,ಮಲೆಯ ಮೊಟ್ಟೆ ಕೋಳಿಯ ಜೊತೆಗೆ ಲೇಖಕರು ದೇವರಕೊಲ್ಲಿ ಎಂಬ ತಮ್ಮ ಊರಿನಲ್ಲಿ ಅಲ್ಲಲ್ಲಿ ಉಸಿರಾಡಿದ,ಮೆಲುಕಾಡಿದ, ಚಡಪಡಿಸಿದ ಕಥೆಗಳನ್ನು ಒಂದೊಂದಾಗಿ ಎತ್ತಿಕೊಂಡು ಬಹಳ ಸೊಗಸಾಗಿ ಉಣಬಡಿಸಿದ್ದಾರೆ. ಕಥೆಗಳು ನಮ್ಮ ಸುತ್ತ ಎಲ್ಲಾ ಕಡೆ ಇರುತ್ತದೆ. ಹೂ ಹೆಕ್ಕುವ,ಹಣ್ಣು- ಅಣಬೆಗಳನ್ನು ಆಯ್ದುಕೊಳ್ಳುವ ಕೈಗಳಿಗೆ ಅದನ್ನು ಗಮನಿಸುವ ವ್ಯವಧಾನ ಅಷ್ಟಾಗಿ ಇರುವುದಿಲ್ಲ ಅಷ್ಟೇ.ಆದರೆ ದೇವರಕೊಲ್ಲಿಯಲ್ಲಿ ಲೇಖಕ ಅಬ್ದುಲ್ ರಶೀದ್ ಅವರಿಗೆ ಕೈ ಹಾಕಿದ ಕಡೆಯಲ್ಲೆಲ್ಲಾ ಬರೀ ಕಥೆಗಳೇ ಸಿಗುತ್ತಾ  ಹೋಗುತ್ತದೆ.ಏಕೆಂದರೆ ಅವರು ಹೂ ಹಣ್ಣಿಗಿಂತಲೂ ಶ್ರದ್ಧೆಯಿಂದ ಹೆಕ್ಕಿದ್ದು ಬರೀ ಕಥೆಗಳನ್ನೇ ಅಲ್ಲಿ.  ಇಲ್ಲಿ ಯಾವುದೂ ಕಾಲ್ಪನಿಕ ಕಥೆಯಿಲ್ಲ.ಎಲ್ಲವೂ ರಿಯಲಿಸ್ಟಿಕ್ ಎನಿಸುವ ಅನುಭವದ ಕಥೆಗಳು.ಕೆಲವೊಮ್ಮೆ ಕೊಡಗಿನಿಂದ ಕೆಳಗಿಳಿದು ಸಂಪಾಜೆ,ಬಂಟ್ವಾಳ ತಲುಪಿದರೆ ಇನ್ನು ಕೆಲವು ಮಂಗಳೂರು ಹಾಗೂ ಮಂಜೇಶ್ವರದವರೆಗೆ ತಮ್ಮ ಪರಿಧಿಯನ್ನು ವಿಸ್ತರಿಸಿಕೊಂಡಿವೆ.ಮೈಸೂ

ಕಲಾಬು ಹೌಸಿನ ಪೂವಡಿ ಪೆಣ್ಣೆ..

Image
  ನನಗೆ ರಾತ್ರಿ ಎಲ್ಲಾ ಮಧ್ಯದಲ್ಲಿ ಎಚ್ಚರ ಆಗುವುದು ಬಹಳ ಕಡಿಮೆಯೇ ಆಯ್ತ.ಒಮ್ಮೆ ಮಲಗಿ ಬಿಟ್ಟರೆ ಮುಗಿಯಿತು.ಆದ್ರೂ 2.0 ಗಂಟೆಗೆ ಎಚ್ಚರ ಆಗಿ ಬಿಟ್ಟಿತ್ತು.ಹೊರಗೆ ನಾಯಿ ಏನೋ ಜೋರಾಗಿ ಬೊಗಳುತ್ತಾ ಶಬ್ಧ ಮಾಡುತ್ತಿತ್ತು.ಅದೊಂದು ಭಯಂಕರ ಶಿಸ್ತಿನ ನಾಯಿ.ಅಪ್ಪ ಏನಿರಬಹುದು ಅಂತ  ನೋಡಲು ಮನೆಯ ಹೊರಗೆ ಹೋದರು. ಎಚ್ಚರ ಬೇರೆ ಆಗಿತ್ತು,ಹಾಗಾಗಿ ಮೊಬೈಲ್ ನಲ್ಲಿ ಒಂದು ಬಾರಿ ಕಣ್ಣು ಹಾಯಿಸುವ ಅಂತ ಮೊಬೈಲ್ ಕೈಗೆತ್ತಿಕೊಂಡೆ.ಫೇಸ್ಬುಕ್, ವಾಟ್ಸಪ್,ಇನ್ಸ್ಟಾ.. ಎಲ್ಲವೂ ಗಾಢ ನಿದ್ದೆಯಲ್ಲಿ ತೂಕಡಿಸುತ್ತಿತ್ತು.ಆಗ ನೆನಪಾಗಿದ್ದೇ ಈ Clubhouse.ಒಂದೆರಡು ದಿನಗಳ ಹಿಂದೆಯಷ್ಟೇ ಅದನ್ನು Install ಮಾಡಿದ್ದೆ. ನೋಡುವ ಅಲ್ಲಿ ಈ ಹೊತ್ತಿನಲ್ಲಿ ಏನಾದರೂ ಗೋಳಿಬಜೆ(ಮಾತುಕತೆ) ನಡೀತಾ ಉಂಟಾ ಅಂತ ಅದನ್ನು ಓಪನ್ ಮಾಡಿದೆ. ಅದರೊಳಗೆ ಹಲವಾರು ರೂಮ್ ಗಳು.ಎಷ್ಟೋ ಜನರು ನಿದ್ದೆ ಬಿಟ್ಟು Strangers ಗಳೊಂದಿಗೆ ದೋಸ್ತಿಕತೆ ಮಾಡುತ್ತಿದ್ದರು.ಇನ್ನಷ್ಟು ಜನ ಅದಕ್ಕಾಗಿ ಹವಣಿಸುತ್ತಿದ್ದರು, ಮತ್ತೊಂದಿಷ್ಟು ಜನ ಹಪಾಹಪಿಸುತ್ತಿದ್ದರು.ಏನಪ್ಪಾ ಇವರು ನಿದ್ದೆನೇ ಮಾಡ್ತಾ ಇಲ್ಲ.. ಏನಿದರ ಮರ್ಮ ಅಂತ ಒಂದೊಂದು ರೂಮುಗಳಿಗೆ ವಿಸಿಟ್ ಕೊಟ್ಟು ಬೇಲಿ ಹಕ್ಕಿಯಂತೆ ಸ್ವಲ್ಪ ಹೊತ್ತು ಅವರ ಮಾತುಕತೆ ನೋಡಿಕೊಂಡು, Sorry..ಕೇಳಿಕೊಂಡು ಇನ್ನೊಂದು ರೂಮಿಗೆ ಹಾರುವ ಕಾಯಕ ಮುಂದುವರಿಸುತ್ತಾ ಹೋದೆ.  ಅಲ್ಲೊಂದು ರೂಮ್ ಇತ್ತು. ಅಲ್ಲಿ ಕೂಡ ಒಂದಷ್ಟು ಜನ ಮಾತುಕತೆ ಎಲ್ಲಾ ಬೋರ್ ಆಗಿ ಕೊನೆಗೆ

ತೆಲ್ಲವ್ ಬೊಕ್ಕ ಗಸಿತೊಂಜಿ ಕತೆ..

Image
ಉರ್ದು ದೋಸೆದಾತ್ ದಪ್ಪಲ ಆವಂದಿಲಕ,ಒಡ್ಡೊಂದು ಪೋಪಿನ ಪನಿ ಬರ್ಸದ ನೀರ್ದಾತ್ ದಿಂಜ ತೆಲ್ಪುಲ ಆವಂದಿಲಕ, ಕಡೆದೀತಿ ಬಂದಗ್ ಏತ್ ಬೋಡಾ ಆತೇ ನೀರ್ ಕೂಟುದು,ನಡು ನಡುಟ್ ಆ ಬಂದನೊರ ಅಂಗೈಡ್ ಗೆತ್ತೊಂದು ಉಪ್ಪ್ ಏತ್  ಚಪ್ಪೆಂದ್  ನಾಲಾಯಿಡ್ ತೂದು,ಕೈಲ್ ಡ್ ಒರ ಬಂದನ್ ಅಂಚೆನೆ ಮಿತ್ತ್ ರ್ದ್ ತಿತ್ತ್ ಬಂದದ ತೋಪುಗ ಬುರ್ಪಾದ್ ರಾಪಾದ್ ಬಂದದ ಹದ ಬತ್ತಿ ಬೊಕ್ಕ,ಬೆಚ್ಚಾವೊಂದು ಬತ್ತಿ ಕರ್ಬದ ಕಾವಲಿದ ಬಂಜಿಗ್  ತಾರಾಯಿದ ಜುಟ್ಟುಡೋ ಇಜ್ಜಿಂಡ ಬಾರೆದ ದಂಡ್ ಡೋ  ಇಡೀಕ ಒರ್ಮೆಲ ಎಣ್ಣೆನ್ ಸಮೊಟ್ಟೆ ಒತ್ತುದು ಗಡ್ತ್ ದ್, ಒಂಜಿ ಕೈಲ್ ಬಂದನ್ ಚುಂಯ್ಯ್ ಪಂದ್ ಏತ್ ತೆಲ್ಪು ಆಪುಂಡಾ ಆತ್ ತೆಲ್ಪುಡು ಉರುಂಟಾದ್ ಕಾವಲಿ ನಿಲಿಕೆ ಒಂಜಿ ಸುತ್ತು ಮೈತ್ತ್ ದ್,ಮೈ ನಿಲಿಕೆ ಮೀನ್ ದ ಬಲೆತ ಲಕ ಒಟ್ಟೊಟ್ಟೆ ಕಣ್ಣ್ ಮೂಡೊಂದು ಕಾವಲಿಡೇ ಕಾಯೊಂದು ಬನ್ನಗ,ಬಲತ ಕೈಟ್ ಇಪ್ಪುನ ತಟ್ಟ್ ಗಡ್ ಲಕ್ಕಾದ್ ಬೊಕ್ಕೊಂಜಿ ಮರ್ಗಿಲ್ಡ್ ಇಪ್ಪುನ  ಬನಲೆದ ಮಟ್ಟೆಲ್ಡ್  ಬಾರೀ ಪೊರ್ಲುಡು ಒಂಜಾಯಿ ಬೊಕ್ಕೊಂಜಿ ಸುತ್ತಲಾ ಅಟ್ಟಿಕಟ್ಟೊಂದು ಪೋಪಿನ ದೋಸೆನೆ ನಮ್ಮ ತೆಲ್ಪುದ ನೀರ್ ತೆಲ್ಲವ್ ದೋಸೆ.  ತೆಲ್ಲವ್ ಗ್ ಕೋರಿ ಗಸಿ, ಮೀನ್ ಗಸಿ,ತೆತ್ತಿ ಗಸಿ,ಬೆಲ್ಲ ತಾರಾಯಿ,ಚೀಪೆ ಪೇರ್ ಇಂಚ ಪೂರಲ ಬಾರೀ ಲಾಯಿಕ್ ಆಪುಂಡು.ಎಂಕ್ಲೆಗ್ ಮಾತ್ರ ಇನಿ ಬಂಗುಡೆದ ಗಸಿ,ಗಸಿದೊಟ್ಟಿಗೆ ಒಂಜಾತ್ ತೆಲ್ಲವ್.ಇಂಚ ಅರಿತ ಚಪ್ಪೆ ಅಡ್ಡೆ ಕಂಙನ ದ ಸೊಡ್ಡುಡು ಇಪ್ಪುನಗ ಏಪಲ ಗಸಿ ಬಾರೀ ಬೇಗ ಅಂಚನೆ ಸುರುಕ್ಕೆ ಖಾಲಿ ಆಪಿನಿ

ಕಪ್ಪರೊಟ್ಟಿ

Image
ದಿಕ್ಕೆಲ್ಡ್ ದೀತಿನ ಕರಿಯ ಮಣ್ಣ್ ದ ಓಡು,ನುಂಗೆಲ್ ಕನಕ್ ದ ಸೊರ್ಕುದ ಸೂ ಕ್ ಒರ್ಮೆಲ ಬೆಚ್ಚಾವೊಂದು ಬನ್ನಗ,ಬಲತ   ಮರ್ಗಿಲ್ಡ್ ನೆಲಟ್ಟ್ ದೀವೊಂದಿನ ಮೈತಾತ್ ಸಣ್ಣ ಸುರುಕ್ಕೆ ಕಡೆಪಿ ಕಲ್ಲ್ ಡ್ ಪತ್ತಿರುವ ಸುತ್ತು ಹೆಚ್ಚೇ ಕಡೆತಿನ ಅರಿತ್ತ ಬಂದನ್ ತೋಪು ಒರ್ಮೆಲ ಕೈಲ್ ಡ್ ಒರ ಒಂಜಿ ಸುತ್ತು ಅಲಂಕಾದ್,ಅಯ್ಟ್ ಒಂಜಿ ಕೈಲ್ ಬಂದನ್ ದೆತ್ತ್ ದ್ ಬೆಚ್ಚ ಕಾವಲಿದ ನೆತ್ತಿಗ್ ಮಿತ್ತ್ ರ್ದ್ ಮೈತ್ತ್ ದ್ ಬಾವಡಿನೊರ ಆ ಕಾವಲಿದ ಮಂಡೆಗ್ ಮುಚ್ಚಿದ್,ಕುಡೊರ ದಿಕ್ಕೆಲ್ ದ ಕನಕ್ಕ್ ನ್ ಪನೀತ್ ದುಂಬು ಪಿರ ನೂಕುದು,ಕರ್ಬದ ಒಂಟೆ ಡ್ ಉಡಲ್ ರ್ದ್  ಗಾಲಿ ಊಊಊ ಪಂದ್ ಉರ್ತುದು ಬೊಡಾಪಿನಾತೆ ಸೂ ಕಾವಲಿದಡಿ ಅರ್ಲಾದ್,ಒಂತೆ ಪೊರ್ತು ಕರೀದ್ ಮುಚ್ಚಿ ದೀತಿನ ಬಾವಡಿನ್ ಕೈಕುಂಟುಡು ಪತ್ತ್ ದ್ ಪಿರ ದೆತ್ತ್ ದ್ ತೂನಗ,ಎಂಚ ಪುಣ್ಣಮೆದ ದಿನೊ ಚಂದ್ರ ದೇವೆರ್ ಉರುಂಟಾದ್ ಬಾನೊದ ಸೊಡ್ಡುಡು ತೆಲ್ತೊಂದು ನಲ್ತೊಂದು ಮೂಡುವೆರಾ,ಅಂಚನೆ ಬೆಚ್ಚ ಕಾವಲಿದ ಆ ಕರಿ ಕಪ್ಪು ರಂಗ್ ದ ನಡುಟ್ಟ್ ಅರ್ಲೊಂದು ಬೆಂದೊಂದು ಮೈ ನಿಲಿಕೆ ಸಾವಿರ ಕಣ್ಣ್ ಡ್ ಪುಟ್ಟೊಂದು ಅಕೇರಿಡ್ ಬೊಲ್ಯ ರಂಗ್ ದ ಪೊರ್ಲುಡೇ ಉಂಡಾದ್, ಲಕ್ಕಾವುನು ತಟ್ಟ್ ಗ ಗೋಸ್ಕರ ಕಾತೊಂದು ಇಪ್ಪುಂಡು ಪುಡ್ಕನೆ ಪುಡ್ಕನೆ ನಮ್ಮ ಇಲ್ಲದ  ಕಪ್ಪರೊಟ್ಟಿ. ಬಂಗುಡೆದನೇ ಗಸಿ ಇತ್ತ್ಂಡ್ ಕೈಟೇ ಪೊಲ್ತುದು ಆ ಕೊಡಕ್ಕೆನೆ ಗಸಿಟ್ ಅಂಚನೆ ಮುರ್ಕಾವೊಂದು ತಿನರೆ ಬೋಡು,ಅಮ್ಮ ಕಾವಲಿರ್ದ್ ಲಕ್ಕಾಯಿನ ಬೆಚ್ಚ ಬೆಚ್ಚ ನನ ರಡ್ಡ್ ಕಪ್ಪರೊಟ್ಟಿ(

ಚಿನ್ನದ ಹಣ್ಣುಗಳು

Image
ಚಿನ್ನದ ಹಣ್ಣುಗಳ ಮೈದವಡುವ ಭಾಗ್ಯ ಸಿಗುವುದು ತೀರಾ ಕಡಿಮೆಯೇ ಬಿಡಿ,ಆದರೆ ಒಂದೊಂದೇ ಕಾಟು ಮಾವನ್ನು ಕೈಗೆತ್ತಿಕೊಂಡು ಶ್ರದ್ಧೆಯಿಂದ ಅದರ ಸಿಪ್ಪೆ ಸುಲಿವಾಗ ನನ್ನ ಒಳಗೊಳಗೆ ಹುಟ್ಟಿ ಕೊಳ್ಳುವ ಆ ಭಾವದಲ್ಲಿ ಆ ಭಾಗ್ಯವೇ ಅಧಿಕವಾಗಿರುವುದು.. 😋 #ಮಾ_ಅಂದರೆ_ಮಾವು 🧡💛 ಪಚ್ಚುಪಟಗಳು Ab

ಬಿಸಿ ಬಿಸಿ ಕುಕ್ಕು ಸಾರು..

Image
  ಕುಕ್ಕು ಸಾರಿನೊಂದಿಗೆ ಒಂದೊಳ್ಳೆಯ ಊಟ ಮುಗಿಸಿ ಎದ್ದೇಳುವ ಸುಖದಲ್ಲಿ,ಗೊರಟೆ ಚೀಪಿ ಉಣ್ಣುವ ಆ ಸುಖವೇ ಒಂಥರಾ ಬೇರೆಯದ್ದೇ ಸುಖ...  ಈಗ ಬಹಳ ಸಿಂಪಲ್ ಆಗಿ ಕುಕ್ಕು ಸಾರು(ಕಾಟು ಮಾವಿನ ಸಾರು)ಮಾಡುವುದು ಹೇಗೆ ಎಂದು ನೋಡೋಣ...  ಒಂದು ಏಳು ಕಾಟು ಮಾವಿನ ಹಣ್ಣುಗಳನ್ನು ಸಿಪ್ಪೆ ಸುಲಿದು ಚೆನ್ನಾಗಿ ಕಿವುಚಿ..ಒಂದು ಪಾತ್ರೆಗೆ ಹಾಕಿ,ಅದಕ್ಕೆ ಬೇಕಾದಷ್ಟು  ನೀರು,ಉಪ್ಪು,ಬೆಲ್ಲ ಹಾಕಿ ಬೇಯಲು ಇಡಿ. ಬೇಕಾದರೆ ಮಾವಿನ ಸಿಪ್ಪೆ ಕೂಡ ಹಾಕಬಹುದು. ಈಗ ಮಸಾಲೆ ಪದಾರ್ಥಗಳನ್ನು ಡ್ರೈ ಆಗಿ ಹುರಿದುಕೊಳ್ಳಿ. ಒಣ ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ,ಸಾಸಿವೆ,ಉದ್ದೀನ ಬೇಳೆಗಳನ್ನು ಹುರಿಯಿರಿ. ನಂತರ ಇದನ್ನು ಮಿಕ್ಸರ್ ಜಾರ್ ಗೆ ಹಾಕಿ, ಅರಶಿನದ ಪೌಡರ್ ಹಾಗೂ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಕೂಡ ಹಾಕಿ ಚೆನ್ನಾಗಿ ಪೇಸ್ಟ್ ಆಗುವವರೆಗೆ ನುಣ್ಣಗೆ ಕಡೆಯಿರಿ.  ಮಾವು ಜಾಸ್ತಿ ಬೇಯುವುದು ಬೇಡ.ಇಲ್ಲದಿದ್ದರೆ ತುಂಬಾ ಹುಳಿಯಾಗುತ್ತದೆ.ಮಾವು ಬೆಂದ ನಂತರ ಕಡೆದ ಮಸಾಲೆಯನ್ನು ಹಾಕಿ. ಕುಕ್ಕು ಸಾರು ಜಾಸ್ತಿ ದಪ್ಪ ಬೇಡ. ಹಾಗಾಗಿ ಎಷ್ಟು ಹದ ಬೇಕೋ ಅಷ್ಟು ನೀರು ಹಾಕಿ. ನಂತರ ಉಪ್ಪು ಕಮ್ಮಿ ಇದ್ದರೆ ಉಪ್ಪು ಹಾಕಿ.  ಕೊನೆಯಲ್ಲಿ ಒಗ್ಗರಣೆ ಹಾಕಿ. ತೆಂಗಿನೆಣ್ಣೆಯಲ್ಲಿ ಸಾಸಿವೆ,ಉದ್ದಿನ ಬೇಳೆ, ಒಣ ಮೆಣಸು, ಬೆಳ್ಳುಳ್ಳಿ, ನೀರುಳ್ಳಿ, ಬೇವುರೆಯ ಒಗ್ಗರಣೆ ತುಂಬಾ ಚೆನ್ನಾಗಿರುತ್ತದೆ.ಇಷ್ಟು ಮಾಡಿದರೆ ಕುಕ್ಕು ಸಾರು ರೆಡಿ.ಕುಚಲಕ್ಕಿ ಅನ್ನಕ್ಕೆ ಬಿಸಿ ಬಿಸಿ ಕುಕ್ಕು ಸಾರು

ಸಾರ್ಥಕ್ಯ ಭಾವದ ಪ್ರಕೃತಿಗೆ ಸ್ವಾರ್ಥ ಎಂದರೆ ಏನೆಂದೇ ಗೊತ್ತಿಲ್ಲ..

Image
ಇರುವೆಗಳ ದಿಬ್ಬಣದಲ್ಲಿ ಶಿಸ್ತು ಇದೆ.ಸಾಲು ತಪ್ಪದೇ ಜಾಗ್ರತೆಯಲ್ಲಿ ನಿಧಾನವಾಗಿ ಹೊತ್ತುಕೊಂಡು ಸಾಗುವ ಅವುಗಳದ್ದೊಂದು ಭೋಜನ,ಬೆಚ್ಚನೆಯ ಗೂಡು ಎಂಬ ಗುರಿ ತಲುಪಿಸಿ ಬಿಟ್ಟರೆ,ಅವುಗಳಿಗೆ ಅದೇನೋ ಒಂದು ಸಾರ್ಥಕದ ಭಾವ.  ಬೆಟ್ಟದ ಯಾವುದೋ ಅಪರಿಚಿತ ಬುಡದಲ್ಲಿ ಹುಟ್ಟಿ,ಸೆಲೆಯಾಗಿ ತೊರೆಯಾಗಿ ಜಿಗಿದು ನಲಿದು ಓಡುತ್ತಾ ತನ್ನಷ್ಟಕ್ಕೆ ತನ್ನದೊಂದು ಹಾಡು ಗುನುಗುತ್ತಾ ಹರಿಯುವ ನದಿಗೆ,ಕಡಲನ್ನು ಒಮ್ಮೆ ಅಪ್ಪಿಕೊಂಡು ಬಿಟ್ಟರೆ ತಾನು ಹುಟ್ಟಿ ಹರಿದಿದ್ದಕ್ಕೊಂದೂ ಸಾರ್ಥಕದ ಭಾವ. ಮಾವಿನ ಮರದಲ್ಲಿ ಕೋಗಿಲೆಯೇ ಬಂದು ಸಂಗೀತ ಕಚೇರಿ ನಡೆಸದಿದ್ದರೂ ಅದಕ್ಕೇನೂ ಬೇಜಾರಿಲ್ಲ,ಕೊನೆಯ ಪಕ್ಷ ತನ್ನದೊಂದು ಹಣ್ಣು ಯಾರೂ ತಿನ್ನದೇ ಉದುರಿ ಮಣ್ಣಾಗುವ  ಮೊದಲು ಅಳಿಲುಗಳೋ ಗಿಳಿಗಳೋ ಬಂದು ಸ್ವಲ್ಪವೇ ಕಚ್ಚಿ  ಬಿಟ್ಟರೂ ತಾನು ಫಲ ಕೊಟ್ಟಿದುದಕ್ಕೆ ಅದಕ್ಕೂ ಒಂದು ಸಾರ್ಥಕದ ಭಾವ.  ನಲುಗಿ ಹೋಗುವ ಕಾಡು ಹೂವಿಗೆ ಎಂತಹ ಗಾಳಿ,ಮಳೆಯ ಹೆದರಿಕೆಯೂ ಇಲ್ಲ.ಅದರ ಕಾತರ ಆತುರ ಇನ್ನಿಲ್ಲದಂತೆ ಇರುವುದು ಜೋತು ಬಿದ್ದು ಸಿಹಿ ಇರುವ ಬಣ್ಣದ  ಚಿಟ್ಟೆಗಳಿಗಾಗಿಯೇ.ಅದು ಸಂಭವಿಸಿ ಬಿಟ್ಟರೆ ಆ ಒಂದು ಸಾರ್ಥಕ ಭಾವದೊಂದಿಗೆ ತೊಟ್ಟು ಕಳಚಿಕೊಂಡು ಮಣ್ಣಾಗಲು ಹೂವಿಗೂ  ಬೇಸರವಿಲ್ಲ.  ಹಲಸೊಂದು ಹಾಗೇ ಹಣ್ಣಾಗಿ ಘಮಘಮಿಸಿ ಬಿಟ್ಟರೆ ಕರಡಿಗೆ ಯಾವತ್ತೂ ಹಸಿವು ಹೆಚ್ಚು.ಕೇವಲ ಹಲಸು ಮಾತ್ರವಲ್ಲ ತನ್ನ ಬಳಿಯೂ ಕರಡಿ ಬರಲಿ ಎಂದು ಜೇನು ಆಸೆ ಪಟ್ಟರೆ ಅದಕ್ಕೂ ಹಾಗೇ ಬರಡಾಗುವ ಮೊದಲು ಸಾರ್ಥಕವಾಗುವ ಭಾವವೇ