Posts

Showing posts from November, 2021

Chhorii

Image
 #Chhorii  | Prime ಅವಳು ತುಂಬು ಗರ್ಭಿಣಿ ಹಾಗೂ ನಗರದ ಹುಡುಗಿ. ಒಂದು ದಿನ ಸಿಟಿಯಿಂದ ಗಂಡನೊಡನೆ ಹಳ್ಳಿಯಲ್ಲಿರುವ ಆ ಒಂದು ದೊಡ್ಡ ಕಬ್ಬಿನಗದ್ದೆಯ ನಡುವಿನ ಒಂಟಿ ಮನೆಗೆ ಆಕೆ ಬರುತ್ತಾಳೆ. ಅಲ್ಲಿಯ ವಿಚಿತ್ರ ಹೆಂಗಸು ಆ ಗರ್ಭಿಣಿ ಹುಡುಗಿಗೊಂದು ಕಥೆ  ಹೇಳುತ್ತಾಳೆ. ಆ ಕಥೆ ಹೀಗಿದೆ... " ಒಂದು ಸಣ್ಣ ಹಳ್ಳಿಯಲ್ಲಿ ಒಂದು ದೊಡ್ದ ಮರವಿತ್ತು.   ಆ ಮರದಲ್ಲಿ ಒಂದು ಕಾಗೆಗಳ ಸುಖಿ ಪರಿವಾರವೂ ಇತ್ತು.  ಎಲ್ಲವೂ ಸರಿ ಇತ್ತು ಮತ್ತು ಕಾಗೆಗಳು ಕೂಡ ಆ ಮರದಲ್ಲಿ ಬಹಳ ಸಂತೋಷವಾಗಿದ್ದವು.  ಒಂದು ದಿನ ಒಂದು ವಿಷಯುಕ್ತ ಹಾವು ಆ ಮರಕ್ಕೆ ಬಳ್ಳಿಯಂತೆ ಹಾಗೇ ಶಾಶ್ವತವಾಗಿ ಸುತ್ತಿ ಹಾಕಿಕೊಂಡು ಬಿಟ್ಟಿತ್ತು.  ನೋಡು ನೋಡುತ್ತಿದ್ದಂತೆ ಮರದ ಎಲೆಗಳು ಬಾಡಿದವು.  ಅದರ ಹಣ್ಣುಗಳು ಕೂಡ ಉದುರಿದವು.  ದಿನ ಕಳೆದಂತೆ ವಿಧವೆಯ ಭವಿಷ್ಯದಂತೆ ಆ ಮರವೂ ಕೂಡ  ಒಣಗತೊಡಗಿತು..!  ಕಾಗೆ ಪ್ರತೀ ಬಾರಿ ಮೊಟ್ಟೆ ಇಟ್ಟಾಗಲೂ ಆ ವಿಷಕಾರಿ ಹಾವು ಬಂದು ಕಾಗೆಯ ಮೊಟ್ಟೆಗಳನ್ನು ನುಂಗಿ ಹಾಕುತ್ತಿತ್ತು.  ಕಾಗೆಗೆ ಇದನ್ನು ನೋಡಿ ದಿಕ್ಕು ತೋಚದಂತಾಯಿತು.  ಇದೇ ಸಂಧರ್ಭದಲ್ಲಿ ಆ ಪಾಳು ಮರಕ್ಕೆ ಒಂದು ಚಂದದ  ಗುಬ್ಬಿಯ ಸುಂದರ ಸಂಸಾರ ಬಂದು ನೆಲೆಸಿತು.  ಗುಬ್ಬಿ ಆ ಮರದ ಮೇಲೊಂದು ತನ್ನ ಪುಟ್ಟ ಗೂಡು ಕೂಡ ಕಟ್ಟಿಕೊಂಡಿತು. ಒಂದು ದಿನ ಅದು ಮೊಟ್ಟೆ ಕೂಡ ಇಟ್ಟಿತು.  ಅದನ್ನು ನೋಡಿದ ಕಾಗೆಗೆ ಒಂದು ಉಪಾಯ ಹೊಳೆಯಿತು.  ಸಮಯ ಸಂಧರ್ಬ ನೋಡಿಕೊಂಡು ತನ್ನ ಗೂಡಿನಲ್ಲಿದ್ದ ಮೊಟ್ಟೆಗಳನ

The Game

Image
  #The_Game | Netflix ಇಲ್ಲಿ ಒಂದು ಆಟವಿದೆ.ನಿಜವಾಗಿಯೂ ಇದು ಆಟವೇ.ಆದರೆ ಹೊತ್ತು ಸರಿದಂತೆ ಇದು ಆಟವೆಂದು ಅನಿಸುವುದಿಲ್ಲ! ಸೈನ್ಸ್ ಫಿಕ್ಷನೋ ಎಂಬತೆ ನೋಡುವವನೊಂದಿಗೆ ಫ್ಲರ್ಟ್ ಮಾಡಲಿಳಿಯುವ ಇದರ ಕಥೆ ನಿಜ ಹೇಳಬೇಕೆಂದರೆ ರಿಯಾಲಿಟಿಗೆ ಸಂಬಂಧಿಸಿದ್ದೇ ಆಗಿದೆ. ಅವನೊಬ್ಬ ಇನ್ವೆಸ್ಟ್ ಮೆಂಟ್ ಬ್ಯಾಂಕರ್.ಅವನಿಗೊಬ್ಬ ತಮ್ಮ. ಬ್ಯಾಂಕರ್ ನ 48 ನೇ ಹುಟ್ಟು ಹಬ್ಬಕ್ಕೆಂದು ಅವನ ತಮ್ಮ ವಿಶೇಷವಾದ ಗಿಫ್ಟ್ ವೋಚರ್ ಒಂದನ್ನು ಅವನಿಗೆ ಕೊಡುತ್ತಾನೆ ಮತ್ತು ಹೇಳುತ್ತಾನೆ'ಇದರಿಂದಾಗಿ ನಿನ್ನ ಬದುಕೇ ಬದಲಾಗುತ್ತದೆ..' ಎಂದು.ಆ ಸ್ಪೆಷಲ್ ವೋಚರ್ ಬ್ಯಾಂಕರ್ ನನ್ನು ಗೇಮ್ ಒಂದರಲ್ಲಿ ಭಾಗವಹಿಸುವಂತೆ ಮಾಡುತ್ತದೆ.ಅವನು ಅದನ್ನು ಆಡಲು ಒಪ್ಪುತ್ತಾನೆ ಕೂಡ. ನಿಜವಾಗಿಯೂ ಬ್ಯಾಂಕರ್ ನ ಬದುಕೇ ಬದಲಾಗುತ್ತಿದೆ.ಅವನು ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬೀದಿ ಬಿಕರಿಯಾಗುತ್ತಾನೆ!! ಆದರೆ ಏಕೆ? ಏನದು ಗೇಮ್? ಮತ್ತು ನಿಜವಾಗಿಯೂ ಅದು ಎಷ್ಟೊಂದು ಗೇಮ್?!! David Fincher ನಿರ್ದೇಶಿಸಿದ ಈ ಮೂವಿಯಲ್ಲಿ Michael Douglas ಹಾಗೂ Sean Penn ಅಭಿನಯಿಸಿದ್ದಾರೆ. ಇದೊಂದು ಬ್ರೈನ್ ಟೀಸರ್.ಮೂವಿಯ ಕೊನೆಯವರೆಗೂ ಇದು ಸಿಕ್ಕಾಪಟ್ಟೆ ತಲೆ ಕೆರೆಯುವಂತೆ ಮಾಡಿ ಬಿಡುತ್ತದೆ.ಏಕೆಂದರೆ  ಜಸ್ಟ್ ಗೇಮ್ ಒಂದು ಎಕ್ಸ್ಟ್ರೀಮ್ ಗೇಮ್ ಆಗಿ ಕಥೆಯ ತೀವ್ರತೆಯನ್ನು ಕ್ಷಣ ಕ್ಷಣಕ್ಕೂ ಇಲ್ಲಿ ಎಕ್ಸಲರೇಟ್ ಆಗುವಂತೆ ನೋಡಿಕೊಳ್ಳುತ್ತದೆ.ಈ ಮೂವಿ ಹಳೆಯದಾದರೂ David F

Peaky Blinders

Image
 #Peaky_Blinders | Netflix ಅವರೇನು ಸಮಾಜ ಉದ್ಧಾರ ಮಾಡುವುದಕ್ಕಾಗಿ ಗ್ಯಾಂಗ್ ಕಟ್ಟಿಕೊಂಡವರಲ್ಲ. ಬರ್ಮಿಂಗ್ಹ್ಯಾಮ್ ನ ಬೀದಿಗಳಲ್ಲಿ ಮೈ ತುಂಬಾ ಚಂದದೊಂದು ಸೂಟು,ಕಾಲಿಗೆ ಲೆದರ್ ಬೂಟು,ತಲೆಗೊಂದು ಪ್ಲ್ಯಾಟ್  ಕ್ಯಾಪು,ಕ್ಯಾಪ್ ನೊಳಗೊಂದು ಹರಿತವಾದ ರೇಝರ್ ಬ್ಲೇಡು ಸಿಕ್ಕಿಸಿಕೊಂಡು ಒಂದರ ನಂತರ ಒಂದು ಸ್ಟ್ರೀಟ್ ಪೈಟ್ ಗಳನ್ನು ಮಾಡಿಕೊಂಡು ವಿರೋಧಿಗಳ ನೆತ್ತರ ಹೊಳೆಯನ್ನೇ  ಹರಿಸಿಕೊಂಡು ಬೆಳೆದ ಆ ಫ್ಯಾಮಿಲಿ ಗ್ಯಾಂಗಿನ ಹೆಸರೇ Peaky blinders.  ' By order of the Peaky Plinders' ಎಂದು ಹೇಳುತ್ತಾ  ಅದೇ ಹೆಸರಿನಲ್ಲಿಯೇ ಪುಟ್ಟ ಕಂಪೆನಿಯೊಂದನ್ನು ಕೂಡ ಕಟ್ಟುತ್ತಾ,ಯಾರ ಊಹೆಗೂ ನಿಲುಕದಂತೆ ದೈತ್ಯವಾಗಿ ಬೆಳೆಯುತ್ತಾ ಬೆಳೆಯುತ್ತಾ ಹೋದ ಆ ಗ್ಯಾಂಗಿನ ನಾಯಕನೇ ಥಾಮಸ್ ಶೆಲ್ಬಿ.ಆ ಶೆಲ್ಬಿ ಫ್ಯಾಮಿಲಿಗೆ,ಅವನ ಹಿಂಬಾಲಕರಿಗೆ ಮಾತ್ರ ಅವನು ಯಾವತ್ತೂ ನೆಚ್ಚಿನ ಟಾಮಿ ಶೆಲ್ಬಿ.  ಮೊದಲ ವರ್ಲ್ಡ್ ವಾರ್ ನಂತರ ಬ್ರಿಟನ್ ಗೆ ಹಿಂದಿರುಗಿದ ಈ ಸೈನಿಕ ಟಾಮಿ ಅವನ ಪ್ರಕಾರ ಅವನು ಮಾಡಿದ್ದು ಪಕ್ಕಾ ಬ್ಯುಸಿನೆಸ್ ಅಷ್ಟೇ..!  ನೀನು ಏಕೆ ಜನರನ್ನು ಕೊಲ್ಲುತ್ತೀಯಾ ಎಂದು ಕೇಳಿದರೆ ಅವನ ಉತ್ತರ ಇಷ್ಟೇ ಇರುತ್ತಿತ್ತು  'ಆಗ ಜನರು ನನ್ನ ಮಾತು ಕೇಳುತ್ತಾರೆ..!'. ಹಾಗಂತ ಅವನು ಎಲ್ಲರನ್ನೂ ಕೊಲ್ಲುತ್ತಿರಲಿಲ್ಲ,ಸ್ಟ್ರೀಟ್ ಫೈಟರ್ ಆದರೂ ತೀರಾ ಲೋಕಲ್ ಗೂಂಡಾ ಅವನಲ್ಲ,ತುಂಬಾ ಓದದಿದ್ದರೂ ಬಹಳ ದಡ್ಡನಲ್ಲ,ಬುದ್ದಿವಂತರಲ್ಲಿ ಬುದ್ಧಿವಂತ ಈ ಟ

Kammatipaadam

Image
 #Kammatipaadam | Hotstar ಅವರಿಬ್ಬರು ಹುಟ್ಟುತ್ತಾ ಅಣ್ಣ ತಮ್ಮಂದಿರಲ್ಲ. ಬೆಳೆಯುತ್ತಾ ಒಂದು ರೀತಿಯಲ್ಲಿ ಹೌದು. ಸ್ನೇಹ ಅವರನ್ನು ಬಹಳ ಚಿಕ್ಕಂದಿನಲ್ಲಿಯೇ ಬೆಸೆದಿತ್ತು.ಕ್ರೈಮು ಮಾತ್ರ ಅವರ ನಡುವಿನ ಆ ಬೆಸುಗೆಯನ್ನು ಮತ್ತಷ್ಟು ಬಲಪಡಿಸಿತ್ತು! ಸ್ಮಶಾನದೊಳಗೊಂದು ಹೂವು,ಕ್ರೈಮ್ ನೊಳಗೊಂದು ಲವ್ವು ನೋಡಲು ಆಕರ್ಷಕವೇ,ಆದರೆ ಯಾರಿಗೂ ಬೇಡ!! ಒಟ್ಟೊಟ್ಟಿಗೆ ಇದ್ದವರು ಇದ್ದಕ್ಕಿದ್ದಂತೆ ದೂರ ಆದರೆ ಅಲ್ಲಿಂದಲೇ  ಮತ್ತೊಂದು ಹೊಸ ಕಥೆ ಚಿಗುರಿಕೊಂಡು ಬಿಡುತ್ತದೆ. ಇಲ್ಲೂ ಅಂತಹದ್ದೇ ಒಂದು ಕಥೆ ಇದೆ.  ಏನದು?  Rajeev Ravi ನಿರ್ದೇಶನದ ಈ ಮೂವಿಯಲ್ಲಿ Dulquer Salmaan, Vinayakan, Shine Tom Chacko, Shaun Romy ಮುಂತಾದವರ ಅಭಿನಯವಿದೆ.  ಹೊಡೆದಾಟ ಬಡಿದಾಟದ ಇರುವ ಇದು ಬರೀ ಗ್ಯಾಂಗ್ಸ್ಟರ್ ಕಥೆಯಲ್ಲ.ರಿಯಲ್ ಎಸ್ಟೇಟ್ ಮಾಫಿಯಾದಲ್ಲೊಂದು ಭೂಮಿಗಾಗಿ ಕೆಳ ವರ್ಗದವರ ಶೋಷಣೆ,ಅವರನ್ನು ಬಳಸಿಕೊಂಡು ಅವರನ್ನೇ  ಹೊಸಕಿ ಹಾಕುವ ಪರಿ,ಚಡ್ಡಿ ದೋಸ್ತಿಗಳಾಗಿ ಬೆಳೆದವರು ಚಾಕು ಚೂರಿ ಹಿಡಿದು ನೆತ್ತರು ಹರಿಸುವಾಗಲೂ ಬಹಳಷ್ಟು ದೋಸ್ತಿಯೇ,ನಡುವಲ್ಲೊಂದು ತೀರಾ ಅನಾಥವಾಗುವ ಪ್ರೀತಿ..ಹೀಗೆ ಬಹಳಷ್ಟು ಕಥೆಗಳನ್ನು ಇದು ಹೇಳುತ್ತಾ ಹೋಗುತ್ತದೆ.ದಕ್ಕಿದಷ್ಟು ನಮ್ಮದು! 80 ರ ದಶಕದ ಕಥೆ ಹೊಂದಿರುವ ಇದು ನಿಮಗೆ ಇಷ್ಟ ಆದರೂ ಆಗಬಹುದು,ಎಂದಿನಂತೆ ಎಲ್ಲರಿಗೂ ಅಲ್ಲ.. #Kammatipaadam | Hotstar  Malayalam Movie  Action Drama  Release - 2016

Mindhunter

Image
 #Mindhunter | Netflix ಇದು ಸಂದರ್ಶನದ ಕಥೆ.  ಬರೀ ಒಂದೆರೆಡು ಸಂದರ್ಶನವಲ್ಲ.ಸಾಲು ಸಾಲಾಗಿ ಒಂದರ ನಂತರ ಒಂದೊಂದು ಸಂದರ್ಶನಗಳು ಇಲ್ಲಿವೆ. ಸಿನಿಮಾ ತಾರೆಯರು,ಕ್ರೀಡಾಪಟುಗಳು,ರಾಜಕಾರಣಿಗಳು ಅಥವಾ ಯಾವುದೇ ರೀತಿಯ ದೊಡ್ಡ ಸೆಲೆಬ್ರಿಟಿಯ ಸಂದರ್ಶನ ಇಲ್ಲಿಲ್ಲ ! ಹಾಗಾದರೆ ಯಾರದ್ದು ಸಂದರ್ಶನ? ಜೈಲಿನಲ್ಲಿ ಬಂಧಿಯಾಗಿರುವ ಸೀರಿಯಲ್ ಕಿಲ್ಲರ್,ಸೈಕೋಪಾಥ್,ರೇಪಿಸ್ಟ್ ಹಾಗೂ ಕೊಲೆಪಾತಕರ  ಸಂದರ್ಶನ ಇಲ್ಲಿದೆ! ಏತಕ್ಕಾಗಿ ಅವರ ಸಂದರ್ಶನ ..? ಕೊಲೆಗಾರ ಕೊಲೆಯೊಂದನ್ನು ಹೇಗೆ ಮಾಡುತ್ತಾನೆ,ಏತಕ್ಕಾಗಿ ಆತ ಮತ್ತೆ ಮತ್ತೆ ಸಾಲು ಸಾಲು ಕೊಲೆಗಳನ್ನು ಮಾಡಲು ಮುಂದಾಗುತ್ತಾನೆ ಹಾಗೂ ಅದರಿಂದ ಅವನಿಗೆ ಸಿಗುವ ಆ ಪರಮ ಸುಖ ಆದರೂ ಎಂತಹದ್ದು ಎಂಬುದನ್ನು ತಿಳಿಯಲು ಇಲ್ಲಿ ಕೊಲೆಗಾರರ ಸಂದರ್ಶನವನ್ನು ನಿರಂತರವಾಗಿ ಮಾಡಲಾಗುತ್ತದೆ. ಕೊಲೆಯಂತಹ ಘಟನೆಯ ಸಂದರ್ಭದಲ್ಲಿ ಯಾವುದೇ ಕೊಲೆಗಾರನ ಅದರಲ್ಲೂ ಒಬ್ಬ ಸೀರಿಯಲ್ ಕೊಲೆಗಾರನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಅರಿಯಲು FBI ಯ BSU(Behavioral Science Unit) ಈ ಒಂದು ಸಂದರ್ಶನ ಹಾಗೂ ಅದರ ಮೇಲೆ ಅಧ್ಯಯನ ಮಾಡಲು ಮುಂದಾಗುತ್ತದೆ.ಇದು 1970- 80 ರಲ್ಲಿ ಅಮೇರಿಕಾದಲ್ಲಿ ನಡೆಯುವಂತಹ ಘಟನಾವಳಿಗಳ ಕಥೆ. ಇದೊಂದು ಸೈಕೋಲಾಜಿಕಲ್ ಕ್ರೈಮ್ ಥ್ರಿಲ್ಲರ್.ಆದರೆ ಆ ಒಂದು ನಿಜವಾದ ಥ್ರಿಲ್ ನಿಮ್ಮದಾಗಬೇಕಾದರೆ ನೀವು ಇಲ್ಲಿ ವ್ಯಯ ಮಾಡಬೇಕಾಗಿರುವುದು ನಿಮ್ಮ ಸಮಯವನ್ನು ಮಾತ್ರವಲ್ಲ ನಿಮ್ಮ ಸಹನೆಯನ್ನು ಕೂಡ ಇಲ್ಲಿ ಬಹಳಷ್ಟು

ಗರುಡ ಗಮನ ವೃಷಭ ವಾಹನ

Image
(ವಿ.ಸೂ - ಓದಬಹುದು,ಕಥೆ ಹೇಳಿ ಮೂವಿಯ ಅಂದಗೆಡಿಸುವ,ನಿಮ್ಮನ್ನು ಆ ಒಂದು ಸುಖದಿಂದ ಬಹಳಷ್ಟು ವಂಚಿಸುವ ಒಂಚೂರು ಮನಸ್ಸು ನನಗೂ ಕೂಡ ಇಲ್ಲ,ಹಾಗಾಗಿ ಇಲ್ಲಿ ಅಂತಹ ಯಾವುದೇ *Spoiler Alert ಇಲ್ಲ*,ನೆಮ್ಮದಿಯಾಗಿ ಓದಿ)  ಅಂಡರ್ ಆರ್ಮ್ ಕ್ರಿಕೆಟ್,ದಪ್ಪದ ಬ್ಯಾಟು,ತಾಸೆಯ ಪೆಟ್ಟು,ಮಾರ್ನೆಮಿಯ ಹುಲಿ,ಅಬ್ಬರಿಸುವ ವೇಷವೇ ಹಾಕದ ಪಿಲಿ,ಪದೇ ಪದೇ ಮೇಲಕ್ಕೆತ್ತಿ ಗಟ್ಟಿಯಾಗಿ ಕಟ್ಟಿಕೊಳ್ಳುವ ಆ ಮುಂಡು,ಒಂದರ ನಂತರ ಒಂದೊಂದಾಗಿ ಬದಲಾಗುವ ಚಪ್ಪಲಿಗಳು,ರಕ್ತಸಿಕ್ತ ಆ ಒಂದು ಜೋಡಿ ಬಿಳಿ ಬಣ್ಣದ ಶೂ,ಗೂಡಂಗಡಿಯ ಚಿಂಗಂ,ಬೇಕಾದಷ್ಟು ಸಲ 'ಎಂತ ಸಾವ','ನೋಡುವುದು ಎಂತ ಹಾಕ ಹಾಕ..' ಎಂಬ ಮಂಗಳೂರಿನದ್ದೇ ಕನ್ನಡ,ಹದವಾಗಿ ಅಲ್ಲಲ್ಲಿ ಬೆರೆತುಕೊಂಡಿರುವ ನಮ್ಮದೇ ತುಳು,ಬಹಳಷ್ಟು ಸಲ ಸಹಜವಾಗಿ ಕೇಳಿ ಬರುವ ಆ 'ಪೋ ನಿನ್ನ ಅಮ್ಮೆರ್ಡ ಪನ್ ***', ಒಂದು ಕಡೆಯಲ್ಲಿ ಮಂಜುನಾಥನ ಕದ್ರಿ,ಮತ್ತೊಂದು ಕಡೆಯಲ್ಲಿ ಮಂಗಳ್ದೇವಿ...ಇವುಗಳ ನಡುವೆ ಅವನೊಬ್ಬ ತಣ್ಣನೆಯ ಹರಿ,ಇವನೊಬ್ಬ ಅತೀ ರುದ್ರನೆನಿಸುವ ಶಿವ,ಇದುವೇ ಗರುಡ ಗಮನ ವೃಷಭ ವಾಹನ!  ಕಥೆ ಹೇಳದೆಯೇ ಅದರ ಬಗ್ಗೆ ಬಹಳಷ್ಟು ಹೇಳಬೇಕು,ಹೇಳಲೇಬೇಕು ಎಂದು ಅನ್ನಿಸುವಂತೆ ಮಾಡಿ ಬಿಟ್ಟರೆ ಅಲ್ಲಿಗೆ ಆ ಮೂವಿ ನನ್ನ ಪ್ರಕಾರವಂತು ಗೆದ್ದಂತೆಯೇ ಸರಿ.ಹೌದು ಇದು ಅಂತಹದ್ದೇ  ಮೂವಿ. ಇದು ಸ್ವಲ್ಪ ಅಲ್ಲ,ಬಹಳಷ್ಟು ಮಂಗಳೂರು ಪ್ಲೇವರಿನದ್ದೇ  ಮೂವಿ.ಹಾಗಂತ ಇದು ಬರೀ ಮಂಗಳೂರಿಗೆ  ಸೀಮಿತವಲ್ಲ.ಕಥೆಯೊಂದೇ ನಿಜವಾದ

Zodiac

Image
 #Zodiac | Netflix ಅವನೊಬ್ಬ ಕೊಲೆಗಾರ.ಸೀರಿಯಲ್ ಕಿಲ್ಲರ್ ಎಂದು ಹೇಳಿದರೆ ಹೆಚ್ಚು ಸರಿಯಾಗುತ್ತದೆ. ಅವನ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಡೇಂಜರಸ್ ಪ್ರಾಣಿ ಅಂದರೆ ಅದು ಮನುಷ್ಯ ಮಾತ್ರ.ಹಾಗಾಗಿ ಅವನಿಗೆ ಪ್ರಾಣಿಗಳನ್ನು ಬೇಟೆಯಾಡುವುದಕ್ಕಿಂತಲೂ ಹೆಚ್ಚು ಸಂತೋಷ ಮನುಷ್ಯನನ್ನು ಕೊಲ್ಲುವುದರಲ್ಲಿ ಸಿಗುತ್ತದೆ.ಅವನದ್ದೂ ಒಂದು ಆನಂದ;ವಿಕೃತವಾದದ್ದು!  ಅವನು ಏಕಾಂತದಲ್ಲಿರುವ ಜೋಡಿಗಳನ್ನು,ಒಬ್ಬಂಟಿಯಾಗಿರುವ   ಮನುಷ್ಯರನ್ನು ಕೊಲ್ಲುತ್ತಾನೆ. ಕೊಂದ ನಂತರ ಆತ ಸುಮ್ಮನೆ ಇರುವುದಿಲ್ಲ. ನ್ಯೂಸ್ ಪೇಪರ್ ಗೆ ಬಹಳ ಶ್ರದ್ಧೆಯಿಂದ ಲೆಟರ್ ಬರೆಯುತ್ತಾನೆ.ನಾನು ಇವತ್ತು ಯಾರನ್ನು ಕೊಂದೆ,ಎಲ್ಲಿ ಕೊಂದೆ, ಯಾವುದರಿಂದ ಕೊಂದೆ ಇತ್ಯಾದಿ ಇತ್ಯಾದಿ ಸಂಗತಿಗಳನ್ನು ಸವಿವರವಾಗಿ ಬರೆದು ತಿಳಿಸುತ್ತಾನೆ.  ಜೊತೆಗೆ ರಕ್ತ ಸಿಕ್ತ ಬಟ್ಟೆಯ ಒಂದು ಚೂರು,ನಿಗೂಢ ಅರ್ಥ ಹೇಳುವ ಭಿನ್ನ ವಿಭಿನ್ನ ಚಿಹ್ನೆಗಳಿರುವ ಒಂದು ಕೋಡೆಡ್ ಪತ್ರವನ್ನು ಕೂಡ ಲಗತ್ತಿಸಿಯೇ ಅವನು ಪೇಪರ್ ಸಂಸ್ಥೆಯೊಂದಕ್ಕೆ ಕಳುಹಿಸುತ್ತಾನೆ! ತನ್ನನ್ನು ತಾನು Zodiac ಎಂದು  ಹೇಳಿಕೊಳ್ಳುವ ಅವನು ತನ್ನನ್ನು ಸಾಧ್ಯ ಆದರೆ ಪತ್ತಿ ಹಚ್ಚಿ ಎಂದು ಈ ರೀತಿಯಾಗಿ ಸವಾಲು ಹಾಕುವುದರ ಜೊತೆಗೆಯೇ,ಪೇಪರ್ ನಲ್ಲಿ ತಾನು ಕಳುಹಿಸಿದ ಪತ್ರವನ್ನು ಪ್ರಕಟಿಸದಿದ್ದರೆ ಇನ್ನೂ 12 ಜನರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ. ಪೇಪರ್ ನವರು ಅದನ್ನು ಅಷ್ಟೇನು ಸೀರಿಯಸ್ ಆಗಿ ತೆಗೆದುಕೊಳ್ಳದೇ,ಕೊಲೆಗಾರ ಕಳುಹಿಸಿದ

Court

Image
  #Court | Netflix ಅವನ ಹೆಸರು ನಾರಾಯಣ ಕಾಂಬ್ಳೆ.ಅವನು ಬಹಳಷ್ಟು ವೃದ್ಧ,ನಿವೃತ್ತ ಶಿಕ್ಷಕ ಹಾಗೂ ಇಳಿ ವಯಸ್ಸಿನ ಸಾಮಾಜಿಕ ಹೋರಾಟಗಾರ. ಅವನು ಹಾಡು ಹಾಡುತ್ತಾನೆ.ಅಂತಿಂತಹ ಹಾಡು ಅವನದಲ್ಲ.ಕ್ರಾಂತಿ ಗೀತೆಗಳನ್ನು ಬೀದಿ ಬೀದಿಗಳಲ್ಲಿ ನಿರಂತರವಾಗಿ ಅವನು  ಹಾಡುತ್ತಾನೆ.ಅನ್ಯಾಯದ ವಿರುದ್ಧ,ಶೋಷಣೆಯ ವಿರುದ್ಧ ಮತ್ತು ದೀನ ದಲಿತರ,ಬಡವರ ಪರವಾಗಿ ಅವನು ಹಾಡುತ್ತಾನೆ. ಒಂದು ದಿನ ಅವನ ಏರಿಯಾದಲ್ಲಿಯೇ ಮ್ಯಾನ್ ಹೋಲ್,ಚರಂಡಿ,ಗಟಾರ ಇತ್ಯಾದಿಗಳನ್ನು ಕ್ಲೀನ್ ಮಾಡುವ ಒಬ್ಬ   ಕಾರ್ಮಿಕ ಗಟಾರದೊಳಗೆಯೇ ಆತ್ಮಹತ್ಯೆ ಮಾಡಿಕೊಂಡು ಸತ್ತು  ಬಿಡುತ್ತಾನೆ. ಪೋಲಿಸರು ಬಂದು ನಾರಾಯಣ ಕಾಂಬ್ಳೆಯನ್ನು ಎತ್ತಿಕೊಂಡು ಹೋಗುತ್ತಾರೆ.ಜೈಲಿಗೂ ಹಾಕುತ್ತಾರೆ. ಅವನ ಬಂಧನಕ್ಕೆ ಪೋಲಿಸರು ನೀಡುವ ಕಾರಣ ಅವನ  ಹಾಡುಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಿಕ್ಕಾಪಟ್ಟೆ ಪ್ರೋತ್ಸಾಹ ಹಾಗೂ ಪ್ರಚೋದನೆ ಇತ್ತು ಎಂಬುದೇ ಪೋಲಿಸರ ವಾದ. ಆದರೆ ಎಲ್ಲೋ ಒಬ್ಬ ಅವನಷ್ಟಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ನಾರಾಯಣ ಕಾಂಬ್ಳೆಯ ಹಾಡು ಹೇಗೆ ಕಾರಣವಾಗುತ್ತದೆ?ಇದಕ್ಕೆ ಎಲ್ಲಿಯ ಸಾಕ್ಷಿ? ಯಾವ ರೀತಿಯ ವಾದ-ಪ್ರತಿವಾದ? ಕೋರ್ಟ್ ಹಾಲ್ ನಲ್ಲಿ ಇದರದ್ದೊಂದು ಕಥೆ ನಿಧಾನಕ್ಕೆ ಹಾಗೇ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಸಲಿಗೆ ಇದರ ಕಥೆ ಏನು ? Chaitanya Tamhane ನಿರ್ದೇಶನದ ಈ ಮೂವಿಯಲ್ಲಿ Vira Sathidar, Vivek Gomber ಮುಂತಾದವರ ಅಭಿನಯವಿದೆ.ಇದು ಮೂಲತಃ ಮರಾಠಿ ಮೂವಿ ಆಗಿ

Judas and the black messiah

Image
#Judas_and_the_Black_Messiah | Prime ಇದೊಂದು ಐತಿಹಾಸಿಕ ಘಟನೆ ಆಧಾರಿತ ಮೂವಿ.1960 ರಲ್ಲಿ ಚಿಕಾಗೊದಲ್ಲಿ ಬ್ಲ್ಯಾಕ್ ಪ್ಯಾಂಥರ್ ಪಾರ್ಟಿಯ ಚೇರ್ಮ್ಯಾನ್  ಆಗಿದ್ದ ಫ್ರೆಡ್ ಹ್ಯಾಂಪ್ಟನ್ ನನ್ನು ಅವನ ಪಾರ್ಟಿ ಸದಸ್ಯನನ್ನೇ ಅಂಡರ್ ಕವರ್ ಏಜೆಂಟ್ ರೀತಿ ಬಳಸಿಕೊಂಡು FBI ಹೇಗೆ ಬಲೆ ಬೀಸಿ ಬಲಿ ಪಡೆಯುತ್ತದೆ ಎನ್ನುವುದೇ ಇದರ ಒಂದು ಕಥೆ. ಇದನ್ನು ಫ್ರೆಡ್ ಹ್ಯಾಂಪ್ಟನ್ ನ ಬಯೋಪಿಕ್ ಎಂದು ಹೇಳಲು ಕೂಡ ಅಡ್ಡಿಯಿಲ್ಲ.ಅಮೇರಿಕಾದಲ್ಲಿ ನಡೆದ ಕರಿಯರ ಬಿಳಿಯರ ವರ್ಣ ಸಂಘರ್ಷ,ಕಪ್ಪು ವರ್ಣದವರ ಪರ ನಿಲ್ಲುವ 'ಬ್ಲ್ಯಾಕ್ ಪ್ಯಾಂಥರ್ ಪಾರ್ಟಿ',ತಮ್ಮ ಹಕ್ಕುಗಳಿಗಾಗಿ ಸದಾ ಸರಕಾರ ಹಾಗೂ FBI ಯನ್ನು ವಿರೋಧಿಸುವ ಈ ಪಾರ್ಟಿಯ ನಿರಂತರ ಯೋಜನೆ ಹಾಗೂ ಚಟುವಟಿಕೆಗಳಿಂದಲೇ ಈ ಮೂವಿ ಆವೃತವಾಗಿದೆ. Shaka King ನಿರ್ದೇಶನದ ಈ ಮೂವಿಯಲ್ಲಿ Daniel Kaluuya, Lakeith Stanfield ಹಾಗೂ Jesse Plemons ನವರ ಬಹಳ ಸೊಗಸಾದ ಅಭಿನಯವಿದೆ.Daniel Kaluuya ನ ಮಜವಾದ ಮಾತುಗಳು ಕೂಡ ಅಷ್ಟೇ ಇಷ್ಟವಾಗುತ್ತದೆ ಮಾತ್ರವಲ್ಲ ಆತ ತನ್ನದೊಂದು ಈ ಅಭಿನಯಕ್ಕಾಗಿ ವಿಶ್ವದೆಲ್ಲೆಡೆ ಬಹಳಷ್ಟು ಪ್ರಶಂಸನೆಗೆ ಪಾತ್ರನಾಗಿದ್ದಾನೆ ಮತ್ತು ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಗಾಗಿ ಅಕಾಡೆಮಿ ಆವಾರ್ಡ್ ಅನ್ನು ಕೂಡ ಗೆದ್ದಿದ್ದಾನೆ.  ಈ ಮೂವಿ ಕೂಡ ಹೆಚ್ಚಿನ ಜನರ ಮೆಚ್ಚುಗೆಯನ್ನು  ಪಡೆದುಕೊಂಡಿದೆ.The Trial of the chicago 7(Netflix) ನೀವು ನೋಡಿದ್ದರೆ,ಅದು ನಿಮಗೆ ಇಷ್ಟ

ಒಂದು ಗೆಣಸಿನ ಸಣ್ಣ ಕಥೆ

Image
ಸಂಜೆ ಮನೆಗೆ ಮರಳುವಾಗ ಅಂಗಡಿಯಿಂದ ಒಂದು ಕೆಜಿ ಸಿಹಿಗೆಣಸು ಖರೀದಿಸಿದೆ.ನಡೆಯುತ್ತಾ ಮನೆಗೆ ಮರಳುವ ದಾರಿಯಲ್ಲಿ ಒಬ್ಬರು ಪರಿಚಿತರು ಸಿಕ್ಕರು.ಅಧಿಕ ಪ್ರಸಂಗ ಮಾತಾಡಲು ಹೇಳಿ ಮಾಡಿಸಿದ ಜನ ಅವರು. ಹಾಗಾಗಿ ಇಬ್ಬರೂ ಒಟ್ಟೊಟ್ಟಿಗೆ ನಡೆಯುತ್ತಾ ಜಗತ್ತಿನ ಸಮಸ್ಯೆಗಳ ಬಗ್ಗೆ ಡೀಪಾಗಿ ಚಿಂತನ ಮಂಥನ ಮಾಡುತ್ತಾ,ಬಿಟ್ ಕಾಯಿನ್ ಕೆಜಿಗೆ ಎಷ್ಟು ಬರುತ್ತದೆ ಎಂದು ಲೆಕ್ಕ ಹಾಕುತ್ತಾ,ನಮ್ಮ  ಸಮಾಜದಲ್ಲಿ ಆ ಜನ ಒಂದು ಸರಿ ಇಲ್ಲ ಅವರೊಂದು ಮೊದಲು ಅವರ ಪೆದಂಬು(ದುಷ್ಟ ಬುದ್ಧಿ) ಬಿಡಬೇಕು ಎಂದು ಟೀಕಾ ಪ್ರಹಾರ ಮಾಡುತ್ತಾ,ಇವರು ಹೀಗೆ ಮಾಡಬೇಕಿತ್ತು,ಅವರು ಹಾಗೆ ಮಾಡಬೇಕಿತ್ತು ಎಂದು ಪ್ರತಿಯೊಂದಕ್ಕೂ ನಮ್ಮ ಜ್ಞಾನಕ್ಕೂ ಕಲ್ಪನೆಗೂ ಮೀರಿದ ಪರಿಹಾರ ಸೂಚಿಸುತ್ತಾ,ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಸೋಲಿನ ಬಗ್ಗೆಯೂ ಆಳವಾದ ವಿಶ್ಲೇಷಣೆ ಮಾಡುತ್ತಾ,ಕೊನೆಯಲ್ಲಿ ಇಬ್ಬರೂ ಒಕ್ಕೊರಲಿನಿಂದ 'ನಾವು ದುಡಿದರೆ ನಾವು ತಿನ್ನಬಹುದು,ನಮ್ಮ ಮನೆಗೆ ಏನು ಈ ರೋಹಿತ್,ವಿರಾಟ್,ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅಕ್ಕಿ ತಂದು ಹಾಕುತ್ತಾರಾ..' ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತಾ ಕೊನೆಗೂ ನಾನು ನನ್ನ ಮನೆಗೆ ಆ ಜನ ಅವರ ಮನೆಗೆ ತಲುಪಿ ಬಿಟ್ಟೆವು. ಇನ್ನೇನು ಮನೆಯ ಅಂಗಳಕ್ಕೆ ಬಲಗಾಲು ಎತ್ತಿ ಇಡಬೇಕು ಅನ್ನುವಾಗಲೇ ನಾನು ನನ್ನ ಚೀಲದಲ್ಲಿ ಇದ್ದ ಒಂದು ಸಿಹಿ ಗೆಣಸು ಕಣ್ಮರೆಯಾಗಿದ್ದನ್ನು ಗಮನಿಸಿದ್ದು.ಒಂದು ಕೆಜಿಗೆ ಅಂಗಡಿಯವರು 3 ಗೆಣಸು ಕೊಟ್ಟಿದ್ದರು.ನಾನ

The Trial of the chicago 7

Image
ಇದೊಂದು ಕೋರ್ಟ್ ಟ್ರಯಲ್ ನ ಕಥೆ.ಒಟ್ಟು 7 ಜನರ ಮೇಲಿನ ನ್ಯಾಯಾಂಗ ವಿಚಾರಣೆಯ ಈ ಮೂವಿಯ ಕಥೆಯು ಬಹುತೇಕ ಕೋರ್ಟ್ ಹಾಲ್ ನಲ್ಲಿಯೇ ನಡೆದು ಬಿಡುತ್ತದೆ.1968 ರಲ್ಲಿ ಚಿಕಾಗೊದಲ್ಲಿ ನಡೆದ ದೊಂಬಿ ಗಲಾಟೆಗಳಿಗೆ ಕಾರಣರಾದವರೆಂದು ಅಮೇರಿಕಾದ ವಿಯೆಟ್ನಾಂ ಯುದ್ಧ ನೀತಿಯ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದವರಲ್ಲಿ ಏಳು ಜನರನ್ನು ಬಂಧಿಸಲಾಗುತ್ತದೆ.ಅವರು ನಿಜಕ್ಕೂ ಎಷ್ಟು ತಪ್ಪಿತಸ್ಥರು ಎನ್ನುವುದನ್ನು ಸಾಬೀತು ಪಡಿಸುವುದಕ್ಕಾಗಿಯೇ ಈ ಟ್ರಯಲ್ ನಡೆಸಲಾಗುತ್ತದೆ.ಪೂರ್ವಾಗ್ರಹ ಪೀಡಿತ ಜಡ್ಜ್,ಕೆಲವೊಂದು ತೆರೆ ಮರೆಯ ಸತ್ಯ,ಒಂದಿಷ್ಟು ಹಾಸ್ಯ,ಬಹಳಷ್ಟು ರಹಸ್ಯ ಎಲ್ಲವೂ ಇದರಲ್ಲಿ ಇದೆ. Aaron Sorkin ಇದನ್ನು ನಿರ್ದೇಶಿಸಿದ್ದು Sacha Baron Cohen, Joseph Gordon-Levitt ಮೊದಲಾದವರ ಅಭಿನಯ ಈ ಚಿತ್ರಕ್ಕಿದೆ.ವಿಶ್ವ ಸಿನಿರಂಗದ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಈ ಮೂವಿ,ಲೀಗಲ್ ಡ್ರಾಮಗಳನ್ನು ಅತಿಯಾಗಿ ಇಷ್ಟ ಪಡುವವರಿಗೆ ಖಂಡಿತವಾಗಿಯೂ ಇಷ್ಟವಾಗಬಹುದು.  #The_Trial_of_the_Chicago_7 | Netflix English Movie Historical Legal Drama Release - September 2020 #Movies Ab

ರವಿ ನೀನು ಆಗಸದಿಂದ..

Image
ಟಿವಿಯಲ್ಲಿ ಕಣ್ಣಿಗೆ ಬಿದ್ದಾಗಲೆಲ್ಲ ಹೆಚ್ಚಾಗಿ ನಿದ್ದೆಯ ಮಂಪರಿನಲ್ಲಿಯೇ ಇರುವಂತೆ ಕಂಡರೂ ಸಿಕ್ಕಾಪಟ್ಟೆ ಬಿಂದಾಸ್ ಜನ ನಮ್ಮ ಈ ರವಿ ಭಾಯ್.ನೆಟ್ಟಿಗರು ತನ್ನನ್ನು ಎಷ್ಟೇ ಟ್ರೋಲ್ ಮಾಡಿದರೂ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೇ ತಾನು ಕಟ್ಟಿಕೊಂಡಿದ್ದ ಬಾಯ್ಸ್ ಗ್ಯಾಂಗಿಗೊಂದು ಒಟ್ರಾಸಿ ಜೋಶ್ ತುಂಬುತ್ತಿದ್ದ ಕೋಚ್ ಅಂದರೆ ಅದು ಈ ರವಿ ಬಾಯ್ ಯೇ. 2017 ರಲ್ಲಿ ಟೀಮ್ ಡೈರೆಕ್ಟರ್ ಆಗಿದ್ದ ರವಿ ಶಾಸ್ತ್ರಿ ಮುಂದೆ ಹೆಡ್  ಕೋಚ್ ಆಗಿ ಇಲ್ಲಿಯವರೆಗೂ ಟೀಮ್ ಇಂಡಿಯಾಕ್ಕೆ  ಮಾರ್ಗದರ್ಶನ ಮಾಡಿದ್ದಾರೆ.ಇಂದು ನಮೀಬಿಯಾದ ಎದುರಿನ ಈ ವಿಶ್ವಕಪ್ ಪಂದ್ಯವೇ ಅವರ ಕೋಚಿಂಗ್ ನ ಕೊನೆಯ ಪಂದ್ಯ. ಏನೇ ಹೇಳಿ ನಾವು ರವಿ ಭಾಯ್ ಕೋಚಿಂಗ್ ನಲ್ಲಿ ದೊಡ್ಡ ದೊಡ್ಡ ಐಸಿಸಿ ಯ ಟೈಟಲ್ ಗಳನ್ನು ಗೆದ್ದಿಲ್ಲ ಎನ್ನುವುದು ನಿಜವೇ ಆದರೂ ನಾವು ರವಿ ಬಾಯ್ ಕೋಚಿಂಗ್ ಅಡಿಯಲ್ಲಿ ಸೋತಿದ್ದು ಕೂಡ ಕಡಿಮೆಯೇ ಅನ್ನುವುದು ಕೂಡ ಅಷ್ಟೇ ಸತ್ಯ. ಚೊಚ್ಚಲ ಡಬ್ಲ್ಯು.ಟಿ.ಸಿ ಯ ಫೈನಲ್ ಗೆ ಲಗ್ಗೆ ಹಾಕಿದ್ದು,ಗಾಬಾದ ಗಮಂಡ್ ಮುರಿದದ್ದು,ಟೆಸ್ಟ್ ನಲ್ಲಿ ಇಂಗ್ಲೆಂಡ್ ನಲ್ಲಿಯೂ ದಾಂಧಲೆ ಮಾಡಿದ್ದು ಹಾಗೂ ಇನ್ನೂ ಹಲವು ಗೆಲುವುಗಳು ರವಿ ಭಾಯ್ ಯ ಮಾರ್ಗದರ್ಶನಡಿಯೇ ನಮಗೆ ಬಂದಿದ್ದು. ವಿರಾಟ್ ಕೊಹ್ಲಿಗೆ ಹೇಳಿ ಮಾಡಿಸಿದ ಕೋಚ್ ಅಂದರೆ ಅದು ಈ ರವಿ ಶಾಸ್ತ್ರಿ ಎಂಬ ಮಾತು ಕೂಡ ಇದೆ.ಕಾರಣ ಇಬ್ಬರದ್ದು ಫಿಯರ್ ಲೆಸ್ ನಡವಳಿಕೆಗಳು ಹಾಗೂ ಜಟ್ಟಿ ಬಿದ್ದರೂ ಎಂದಿಗೂ ಮೀಸೆ ಮಣ್ಣಾಗದ ಮಾತುಗಳು.ಅವರಿಬ್ಬರದ್ದು ಭಲ

Doctor

Image
 #Doctor | Netflix ಇದೊಂದು ಬಹಳ ಮಜವಾದ ಮೂವಿ.ಚಂದದ ಕಾಮಿಡಿ ಇದರಲ್ಲಿ ಉಂಟು.ನೀವು ಕಾಮಿಡಿ ಮೂವಿಗಳನ್ನು ನೋಡಲು  ಇಷ್ಟಪಡುವಿರಾದರೆ ಖಂಡಿತವಾಗಿಯೂ ಇದನ್ನು ಮಿಸ್ ಮಾಡಿಕೊಳ್ಳಬೇಡಿ ಆಯ್ತಾ.ನಕ್ಕು ನಕ್ಕು ಹಾಗೇ ಮನಸ್ಸು ಬಹಳಷ್ಟು ಹಗುರವಾಗಿ ಬಿಡುತ್ತದೆ.ತಕ್ಕ ಮಟ್ಟಿಗೆ ಮೂಡ್ ರಿಫ್ರೆಶ್ ಕೂಡ ಮಾಡಿ ಬಿಡಬಲ್ಲದು.ಇಲ್ಲಿರುವ ಕಚಗುಳಿ ಇಡುವ ಸಂಭಾಷಣೆಗಳು,ಕೆಲವೊಂದು ಪಾತ್ರಗಳು ತುಂಬಾನೇ  ಇಷ್ಟವಾಗುತ್ತದೆ.ಕಥೆ ಸಾಗಿದಂತೆ ಏನೇನೋ ಲೆಕ್ಕಚಾರ ಎಲ್ಲಾ ಮಾಡ್ಲಿಕ್ಕೆ ಹೋಗ್ಬೇಡಿ,ಅದರ ಬದಲು ಸುಮ್ಮನೆ ನೋಡುತ್ತಾ ಹೋಗಿ ಪಾತ್ರಗಳು ನಗಿಸುವಾಗ ಹಾಗೇ ಮನಸ್ಸು ಬಿಚ್ಚಿ ನಕ್ಕು ಬಿಡಿ.ಇಂತಹ ಮೂವಿಗಳನ್ನು ಹೆಚ್ಚಾಗಿ ಹೀಗೆಯೇ ನೋಡುವುದರಿಂದ ಬಹಳಷ್ಟು ಸುಖವಿದೆ.  ನೆಲ್ಸನ್ ದಿಲೀಪ್ ಕುಮಾರ್ ಇದನ್ನು ನಿರ್ದೇಶಿಸಿದ್ದು ಶಿವಕಾರ್ತಿಕೇಯನ್,ಪ್ರಿಯಾಂಕಾ ಅರುಲ್ ಮೋಹನ್,ಯೋಗಿ ಬಾಬು ಮುಂತಾದವರ ನಟನೆ ಇಲ್ಲಿ ಇದ್ದು,ಎಲ್ಲರೂ ಹೊಟ್ಟೆ ಹುಣ್ಣಾಗಿಸುವ ಅಭಿನಯವನ್ನೇ ಇದರಲ್ಲಿ ಮಾಡಿದ್ದಾರೆ.ನನಗೆ ಕಾಮಿಡಿ,ಡಾರ್ಕ್ ಕಾಮಿಡಿ ಮೂವಿಗಳು ಬಹಳನೇ  ಇಷ್ಟ,ಹಾಗಾಗಿ ಇದು ಇಷ್ಟವಾಯಿತು.ಎಲ್ಲರಿಗೂ ಇಷ್ಟ ಆಗಬೇಕಾಗಿಯೂ ಇಲ್ಲ.ಒಬ್ಬೊಬ್ಬರ ರುಚಿ ಅಭಿರುಚಿ ಒಂದೊಂದು ರೀತಿ.ಆದರೂ ನೋಡಿ,ನಿಮಗೆ ಇಷ್ಟ ಆದರೂ ಆಗಬಹುದು. #Doctor | Netflix Tamil Movie Comedy/Action  Release - October 2021 Movies  ab pacchu

ನಾವು ಪಟಾಕಿ ಪ್ರೀಯರು ಅಷ್ಟೇ..!

Image
"    ಚಿಕ್ಕಂದಿನಲ್ಲಿ ಈ ದೀಪಾವಳಿ ಬಂತೆಂದರೆ ನಾನು ಬಹಳಷ್ಟು ಪಟಾಕಿಗಳನ್ನು,ಬಾಂಬುಗಳನ್ನು ಧೈರ್ಯದಿಂದ ಸಿಡಿಸುತ್ತಿದ್ದೆ.ಮಾಲೆ ಪಟಾಕಿಗಳನ್ನು ಕೈಯಲ್ಲಿಯೇ ಹಿಡಿದು ಗಿರ ಗಿರ ತಿರುಗಿಸುತ್ತಾ ಬಿಡುತ್ತಿದ್ದೆ.ದುರ್ಸು(ಹೂ ಕುಂಡ) ಪಟಾಕಿಯನ್ನು ತಲೆಯ ಮೇಲೆ ಇಟ್ಟು ಬೆಳಕಿನ ಮಳೆಯನ್ನೇ ನನ್ನ ಮೇಲೆ ಸುರಿಸುತ್ತಿದ್ದೆ.ಬೆರಳುಗಳ ನಡುವೆ ಸಿಕ್ಕಿಸಿ ಆಕಾಶಕ್ಕೆ ರಾಕೆಟ್ ಉಡಾವಣೆ ಮಾಡುತ್ತಿದ್ದೆ,ನೆಲ ಚಕ್ರವನ್ನು ಅಂಗೈಯಲ್ಲಿ ಬಿಡುತ್ತಾ ಸುತ್ತೆಲ್ಲಾ ಬೆಳಕಿನ ಕೋಡಿ ಹರಿಸುತ್ತಿದ್ದೆ,ಕೆಂಪಿನ ಮೆಣಸಿನ ಪಟಾಕಿಯನ್ನು ತುಟಿಗಳ ನಡುವೆ ಸಿಕ್ಕಿಸಿಕೊಂಡು ಬೀಡಿಯಂತೆ ಸೇದುತ್ತಿದ್ದೆ.ಆಗ ಎಲ್ಲರೂ ನನ್ನನ್ನು ಧೈರ್ಯಶಾಲಿ ಎಂದು ಕರೆಯುತ್ತಿದ್ದರು.ಪಕ್ಕದ ಮನೆಯ ಆಂಟಿ ನನ್ನ ಸಾಹಸಗಳನ್ನು ನೋಡಿ ಇವನು ದೊಡ್ಡವನಾದ ನಂತರ ಖಂಡಿತವಾಗಿಯೂ ಏನೋ ಒಂದು ಆಗುತ್ತಾನೆ,ಏನೋ ಒಂದು ದೊಡ್ದದನ್ನೇ ಮಾಡುತ್ತಾನೆ ಬಹುಶಃ ವಿಜ್ಞಾನಿಯೇ ಆಗುತ್ತಾನೆ ಎಂದು ನನ್ನಲ್ಲಿ ಏನೋ ವಿಶೇಷತೆ ಇರುವುದನ್ನು ಗುರುತಿಸಿ ಹಾಡಿ ಹೊಗಳುತ್ತಿದ್ದರು.ದೊಡ್ಡವನಾದ ನಂತರ ನಾನು ಅಂತಹ ಏನೂ ಆಗದಿದ್ದರೂ ಈಗ ತೆಂಗಿನ ಮರಗಳಿಗೆ ಬರುವ ಮಂಗಗಳನ್ನು ಓಡಿಸಲು ನಿರಂತರವಾಗಿ ಗರ್ನಲ್(ಸಿಡಿಮದ್ದು)ಎಸೆಯುವಾಗ ಚಿಕ್ಕಂದಿನಲ್ಲಿ ಆಂಟಿ ಹೇಳಿದುದರಲ್ಲಿ ನಿಜಕ್ಕೂ ಇದೇ ಸತ್ಯಾಂಶ ಇದ್ದದ್ದು ಎಂದು ನನಗೀಗ ಸಿಕ್ಕಾಪಟ್ಟೆ ಅರಿವಾಗುತ್ತಿದೆ.ಹೀಗೆ ಚಿಕ್ಕಂದಿನಲ್ಲಿ ನಾನು ನಿರ್ಭಿತಿಯಿಂದ ಬಾಂಬುಗಳನ್ನು ಬಿಡುವಾಗ ನನ್ನನ್ನು

ಹಸಿರು ಬಾಂಬು..

Image
ಹಿಂದಿನಿಂದಲೂ ಬಹಳ ಪಾಪದ ಕೆಟಗರಿಯಲ್ಲಿ ಬರುವ ಪಟಾಕಿಗಳಾದ ಈ ಸುರ್ಸುರು ಕಡ್ಡಿ,ಮುಂಚಿ ಪಟಾಕಿ,ದುರ್ಸು ಪಟಾಕಿ,ನೆಲ ಚಕ್ರಗಳನ್ನು ಎಂದಿನಂತೆ ಒಂದಿಷ್ಟು ಖರೀದಿಸಿದ ನಂತರ ಕೊನೆಯಲ್ಲಿ ಲಕ್ಷಣಕ್ಕೆ ಇರಲಿ ಅಂತ ಒಂದು ಬಾಂಬು ಖರೀದಿಸುವ ಮನಸ್ಸಾಯಿತು ನನಗೆ. ಪಟಾಕಿ ಅಂಗಡಿಯವನಿಗೆ ಕೇಳಿಯೇ ಬಿಟ್ಟೆ...ಅದು..ಒಂದು ಹಸಿರು ಬಾಂಬು ಕೊಡಿ ನನಗೆ...  ಅಂಗಡಿಯವನು ತೆಗೆದು ಒಂದು ಆಟಂ ಬಾಂಬು ನನ್ನ ಕೈಗಿಟ್ಟ. ನಾಗಸಾಕಿ-ಹೀರೋಶಿಮಾ ಮೇಲೆ ಹಾಕಿದ ಆ ಪರಮಾಣು ಬಾಂಬು ಅಲ್ಲ ಇದು.ಇದು ಕಮ್ಮಿ ರೇಟಿನ ಆಟಂ ಬಾಂಬು.ಹದಿನೈದು ರೂಪಾಯಿ,ಮೂವತ್ತು ರೂಪಾಯಿಗೆ ಬರುವ ಅಪ್ಪಟ ದೀಪಾವಳಿಯದ್ದೇ ತೀರಾ ನಮ್ಮದೆನಿಸುವ  ಬಾಂಬು. ನಾನು ಹೇಳಿದೆ ...ನೋಡಿ ಇದು ಆಟಂ ಬಾಂಬು.. ಇದು ನನಗೆ ಬೇಡ, ನನಗೆ ಒಂದು ಗ್ರೀನ್ ಬಾಂಬು ಕೊಡಿ.. ಅಂದೆ.  ಅದಕ್ಕೆ ಅವನು ಹೇಳಿದ.. ನೋಡಿ ಅಣ್ಣಾ... ಇದು ಗ್ರೀನ್ ಇದೆ.. ಹಾಗಾಗಿ ಇದು ಕೂಡ ಗ್ರೀನ್ ಬಾಂಬೇ..ಇದು ಸ ಗ್ರೀನ್ ಪಟಾಕಿಯೇ.. ಎಲ್ಲರೂ ಇದೇ ತಗೊಂಡು ಹೋಗ್ತಾರೆ.ನೀವು ಸ ತಗೊಂಡು ಹೋಗಿ.. ಏನು ತೊಂದ್ರೆ ಇಲ್ಲ.. ಆಹಾ.. ಏನು ತಲೆ ಅವನದ್ದು.  ಹಿಂದೆ ಎಲ್ಲಾ ಈ ಮಾಲೆ ಪಟಾಕಿ,ಬತ್ತಿ ಪಟಾಕಿಗಳೆಲ್ಲ ಸಣ್ಣಪುಟ್ಟ ಪಟಾಕಿಗಳಾಗಿದ್ದರೆ ಈ ಹಸಿರು ಕಲರಿನ ಆಟಂ ಬಾಂಬು ಒಂದೇ ನಮ್ಮ ಪಾಲಿನ ಅತೀ ದೊಡ್ಡ ಪಟಾಕಿ ಆಗಿತ್ತು.ಹಾಗಾಗಿ ಅದು  ಸ್ವಲ್ಪ ಡೇಂಜರ್ ಅಂತ ನಮ್ಮಲ್ಲೊಂದು ಭಾವನೆ ಮನೆ ಮಾಡಿತ್ತು.ವಠಾರದ ಧೈರ್ಯಶಾಲಿ ಬಾಲಕ  ಮಾತ್ರ ಆ ಪಟಾಕಿ ಹೊಡೆಯಬಲ್ಲ ಅ

ಬಂದಿದೆ ಹರುಷದ ದೀಪಾವಳಿ

Image
  ಹಬ್ಬಗಳು ಬೇಕು.ಮನೆಯನ್ನು ಮಾತ್ರವಲ್ಲ ಮನಸ್ಸನ್ನು ಕೂಡ ಹಬ್ಬವಾಗಿಸಲು ಹಬ್ಬಗಳು ಒಂದಿಷ್ಟು ಅಲ್ಲ,ಬಹಳಷ್ಟು ಬೇಕು.ನಮ್ಮೆಲ್ಲರ ಪುಣ್ಯ ನೋಡಿ ನಮಗೆ ಆಚರಿಸಲು ಅದೆಷ್ಟೋ ವಿಧ ವಿಧದ ಹಬ್ಬಗಳು.ಅದರಲ್ಲೂ ಒಂದೊಂದು ಹಬ್ಬವೂ  ಒಂದೊಂದು ರೀತಿ,ಸಡಗರಕ್ಕೆ ಉಂಟು ನಮ್ಮಲ್ಲಿ ನೂರಾರು ದಾರಿ.  ಖುಷಿ ಖಷಿಯಾಗಿ ಇರುವವರಿಗೆ ದಿನವೂ ಹಬ್ಬವೇ ಅನ್ನುವುದು ಕೂಡ ಸರಿಯೇ ಆದರೂ ಎಲ್ಲರೊಡನೆ ನಮ್ಮವರೊಡನೆ ಆ ಖುಷಿಯನ್ನು ಹಂಚಿಕೊಳ್ಳಲು ಆಚರಣೆಯ ಹಬ್ಬಗಳು ಕೂಡ ನಮಗೆ ಒಂದರ ನಂತರ ಒಂದು ಬೇಕು.ಯಾವುದನ್ನೇ ಆಗಲಿ ಒಟ್ಟಿಗೆ ಎಲ್ಲರೂ ಸೇರಿಕೊಂಡು ಆಚರಿಸಿಕೊಂಡಾಗಲೇ ಅದರ ಸಂಭ್ರಮ ದುಪ್ಪಟ್ಟು ಆಗುವುದು.ಈ ಬಾರಿಯ ಆ ಸಂಭ್ರಮದ ಹಬ್ಬವೇ ಅದು ದೀಪಾವಳಿ. ದೀಪಾವಳಿ ಇನ್ನಿತರ ಹಬ್ಬಗಳಂತೆ ಅಲ್ಲ.ಇದು ತುಂಬಾನೇ ವೈವಿಧ್ಯಮಯವಾದ ಹಬ್ಬ.ಮೂರ್ನಾಲ್ಕು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಎಲ್ಲವೂ ಇದೆ. ಇಲ್ಲಿ ಸಾವಿರ ನೆರಿಗೆಯ ಕತ್ತಲಿಗೆ ಹಣತೆಗಳು ಬಹಳ  ಮುತುವರ್ಜಿಯಿಂದ ಉಡಿಸುವವು ಶುಭ್ರ ಬೆಳಕಿನದ್ದೇ ಸೀರೆ,ಬಚ್ಚಲು ಮನೆಯ ಎಣ್ಣೆ ಸ್ನಾನದ ಹಬೆಗೆ ಮೈ ಅದೆಷ್ಟೋ ಸಡಿಲ,ಮನಸ್ಸು ಕೂಡ ಎಂದಿಗಿಂತ ಬಹಳಷ್ಟು ಪ್ರಪ್ರುಲ್ಲ,ಹಂಡೆಯ ಕೊರಳಿಗೆ ಹಸಿರಿನೆಲೆಯ ಮಾವಿನ ಮಾಲೆ,ಗೋವಿನ ಕೊರಳಿಗೆ ಕಿತ್ತಳೆ ರಂಗಿನ ಗೊಂಡೆ ಹೂವಿನದ್ದೇ  ಮಾಲೆ,ಹಾಕುವ ರಂಗವಲ್ಲಿಯಲ್ಲೂ ಬಣ್ಣ,ಮಾಡುವ ಸಿಹಿ ತಿಂಡಿಯಲ್ಲೂ ಹುಡುಕಿದರೆ ಅದೆಷ್ಟೋ ಬಣ್ಣ,ಗೋವಿಗೂ ಪೂಜೆ,ಲಕ್ಷ್ಮಿಗೂ ಪೂಜೆ,ದೀಪಾವಳಿಯಲ್ಲೂ ಉಂಟು ಆಯುಧಗಳಿಗೂ ಪೂಜ

Jai Bhim

Image
 #Jai_Bhim | Prime ಅವರು ಗದ್ದೆಯ ಅಂಚಲ್ಲಿ ಸುಳಿದಾಡುವ ಇಲಿಗಳನ್ನು ತಮ್ಮ ಕೈಚಳಕದಿಂದ ಹಿಡಿಯುತ್ತಾರೆ;ಕೆಲವೊಮ್ಮೆ ಹಾವುಗಳನ್ನು ಕೂಡ! ಅಂತಹ ಅವರಲ್ಲಿ ಒಬ್ಬ ಅದೊಂದು ದಿನ ಊರಿನ ಸಿರಿವಂತನ ಮನೆಗೆ ಹಾವು ಬಂದಿದೆ ಎಂದು ಹಾವು ಹಿಡಿಯಲು ಹೋಗುತ್ತಾನೆ. ಅವನು ಹಾವು ಹಿಡಿಯುತ್ತಾನೆ ಕೂಡ.ಅದನ್ನು ಅವನು ಕಾಡಿಗೆ ಬಿಡುತ್ತಾನೆ;ಮೂಲತಃ ಅವನು ಕೂಡ ಬಹಳಷ್ಟು ಕಾಡಿನವನೇ.ಬುಡಕಟ್ಟು ಜನಾಂಗಕ್ಕೆ ಸೇರಿದವನು ಅವನು.ಅವನಂತೆಯೇ ಹಲವರು ಇಲ್ಲಿ.ಎಲ್ಲರೂ ಮುಗ್ಧರು, ಅಮಾಯಕರು.ಧಣಿಗಳೇ ಅವರ ಪಾಲಿನ ದೇವರು! ಆದರೆ ಅದೇ ದಿನ ಆ ಸಿರಿವಂತನ ಮನೆಯಲ್ಲಿ  ಕಳ್ಳತನವಾಗಿಬಿಡುತ್ತದೆ. ಆಭರಣಗಳ ಲೂಟಿ ಆಗಿರುತ್ತದೆ!  ಕಳ್ಳ ಯಾರೆಂದು ಪತ್ತೆ ಹಚ್ಚಲು ಸಾಧ್ಯವಾಗದ ಪೋಲಿಸರು ಆ ಹಾವು ಹಿಡಿದವನನ್ನು ಹಾಗೂ ಅವನೊಂದಿಗೆ ಮತ್ತೆ ಇಬ್ಬರನ್ನು ಸುಮ್ಮನೆ ಸಂಶಯದ ಆಧಾರದ ಮೇಲೆ ಒದ್ದು ಜೈಲಿಗೆ ಹಾಕುತ್ತಾರೆ! ಮಾಡದ ತಪ್ಪನ್ನು ಒಪ್ಪಿಕೊಳ್ಳಲು ಇನ್ನಿಲ್ಲದಂತೆ ಪೀಡಿಸಲಾಗುತ್ತದೆ. ಆದರೆ ಅವರು ಒಪ್ಪುವುದಿಲ್ಲ. ಒಂದು ದಿನ ಆ ಮೂವರೂ ಜೈಲಿನಿಂದಲೇ ಕಣ್ಮರೆಯಾಗಿ ಬಿಡುತ್ತಾರೆ!! ಆದರೆ ಹೇಗೆ?  ನಿಜಕ್ಕೂ ಅವರು ಹೋಗಿದ್ದಾದರೂ ಎಲ್ಲಿಗೆ?? ಇಲ್ಲಿಂದ ಇದರ ಕಥೆ ಆರಂಭವಾಗುತ್ತದೆ ಹಾಗೂ ಕೋರ್ಟ್ ಹಾಲ್ ನಲ್ಲಿ ಒಂದೊಂದೇ ಕಥೆ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ! ಏನದು ಕಥೆ?  T. J. Gnanavel ನಿರ್ದೇಶನದ ಈ ಮೂವಿಯಲ್ಲಿ Suriya, K. Manikandan, Rajisha Vijayan ಮುಂತಾದವರ ಅಭಿ