Posts

Showing posts from January, 2022

ಸೇಬುಗಲ್ಲದ ಹುಡುಗಿ

Image
                                      " ನೀಲಮೇಘ "                              (  ಸೇಬುಗಲ್ಲದ ಹುಡುಗಿ..)  ಅದು ಸಂಜೆಯ ಸಮಯ.ಬಹಳ ದೂರದಿಂದ ನೋಡುವಾಗ ಸೇತುವೆಯ ಮೇಲೆ ಯಾರೋ ಇರುವಂತೆ ಕಂಡಿತು ನನಗೆ.ಇನ್ನಷ್ಟು ಹತ್ತಿರಕ್ಕೆ ಹೋದಾಗ ನನ್ನ ಆ ಊಹೆ ನೂರಕ್ಕೆ ನೂರು ನಿಜವೇ ಆಗಿತ್ತು. ಸೇತುವೆಯ ನಡುವಲ್ಲಿ ಅದರ ಒಂದು ಬದಿಯ ಎತ್ತರದ ಆ ಕಟ್ಟೆಯನ್ನು ಹತ್ತಿ ಅದರ ಮೇಲೆಯೇ ಕುಳಿತುಕೊಂಡು ಕೆಳಗೆ ರಭಸದಿಂದ ಹರಿಯುವ ನೀರನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದಳು ಒಬ್ಬಳು ಹುಡುಗಿ. ಖಂಡಿತವಾಗಿಯೂ ಅವಳು ಮೀನು ಹಿಡಿಯಲು ಬಂದವಳಲ್ಲ ಎಂದು ನನಗೆ ಅನಿಸಿತು.ಏಕೆಂದರೆ ಅವಳ ಕೈಯಲ್ಲಿ ಯಾವುದೇ ಮೀನು ಹಿಡಿಯುವ ಗಾಳವಿರಲಿಲ್ಲ,ಮಾತ್ರವಲ್ಲ ಅವಳ ಪಕ್ಕದಲ್ಲಿ ಹಿಡಿದ ಮೀನುಗಳನ್ನು ಹಾಕುವುದಕ್ಕಾಗಿ ಯಾವುದೇ ತೊಟ್ಟೆಯೂ ಇರಲಿಲ್ಲ. ಅವಳು ಗಾಳಿ ಸೇವನೆಗೆ ಏನಾದರೂ ..? ಇಲ್ಲ..ಇಲ್ಲ.. ಅದಕ್ಕೂ ಕೂಡ ಅವಳು ಬಂದವಳಲ್ಲ ಎಂದೇ ನನಗೆ ಅನಿಸಿತು.ಅದರ ಬದಲು ಯಾಕೆ ಅವಳು ಸಿಗರೇಟು ಸೇದಲೆಂದೇ ಅಲ್ಲಿ  ಕುಳಿತಿರಬಾರದು? ಅವಳು ಪಕ್ಕದಲ್ಲಿಯೇ ಯಾಕೆ ತಣ್ಣನೆಯ ಬಿಯರ್ ಬಾಟಲಿ ಕೂಡ ಇಟ್ಟುಕೊಂಡಿರಬಾರದು?..ಎಂದೇ ನನಗೆ ಬಲವಾಗಿ ಅನಿಸಿತು.  ಯಾವುದಕ್ಕೂ ಈಗೀನ ಕಾಲದ ಹುಡುಗಿಯರನ್ನು ನಂಬಲು ಸಾಧ್ಯವಿಲ್ಲಪ್ಪ..ಖಂಡಿತವಾಗಿಯೂ ಇದು ಅಂತಹ ಗಿರಾಕಿಯೇ ಇರಬಹುದು ಎಂದು ನನಗೆ ನಾನೇ ಹೇಳಿಕೊಳ್ಳುತ್ತಾ,ಕೈಯಲ್ಲಿದ್ದ ಮಸಾಲೆ ಕಡಲೆಯ ಪ್ಯಾಕೇಟಿನಿಂದ ಒಂದೊಂದೇ ಕಡಲ

ಅದೃಷ್ಟದ ನಾಣ್ಯ..!

Image
                                          " ಪುಷ್ಯರಾಗ "                                     (ಅದೃಷ್ಟದ ನಾಣ್ಯ..!)  ದೇವರ ತೇರು ಎಳೆಯಲು ಅದೆಷ್ಟೋ ಕೈಗಳು.ಆ ನೂರಾರು ಕೈಗಳನ್ನು ಸುತ್ತಲೂ ಉರಿಯುತ್ತಿದ್ದ ಸಾವಿರಾರು ದೀಪಗಳ ಬೆಳಕಲ್ಲಿ ಹಾಗೇ ನೋಡುತ್ತಾ,ನಾನೂ ನನ್ನೆರಡು ಪುಟ್ಟ ಕೈಗಳನ್ನು ಭಯ ಭಕ್ತಿಯಿಂದ ಜೋಡಿಸಿ ತೇರಿನ ಮೇಲಿದ್ದ ದೇವರಿಗೆ ನಿಂತಲ್ಲಿಂದಲೇ ನಮಿಸಿ ಬಿಟ್ಟಿದ್ದೆ.  ಅರ್ಚಕರು ತೇರಿನ ಮೇಲಿನಿಂದಲೇ ಬಾಳೆಹಣ್ಣು,ಗೋಡಂಬಿ ಇನ್ನಿತರ ಸುವಸ್ತು,ಫಲವಸ್ತುಗಳನ್ನು ತೇರಿನ ಸುತ್ತ ನೆರೆದಿದ್ದ ಎಲ್ಲಾ ಭಕ್ತರತ್ತ,ಎಲ್ಲಾ ದಿಕ್ಕುಗಳತ್ತ ಹಾಗೇ ಎರಚುತ್ತಿದ್ದರು.ಸಾವಿರಾರು ಜನರ ಗುಂಪಿನಲ್ಲಿ ಯಾರ ಕೈಗೆ ಅವುಗಳು ಬಂದು ಬೀಳುತ್ತದೆಯೋ,ಅವರು ಅದನ್ನು ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ದೇವರ ಪ್ರಸಾದ ಎಂದೇ ತಿಳಿದು ತಮ್ಮ ಮನೆಗೆ ಒಯ್ಯುತ್ತಿದ್ದರು.  ಈ ಹಣ್ಣು ಹಂಪಲುಗಳ ಜೊತೆಗೆ ನಾಣ್ಯಗಳನ್ನು ಕೂಡ ತೇರಿನಿಂದಲೇ ಎರಚುತ್ತಿದ್ದರು.ಅದು ಅಷ್ಟೊಂದು ಜನರ ನಡುವೆ ಯಾರ ಕೈಗೂ ಸುಲಭಕ್ಕೆ ಸಿಕ್ಕಿ ಬೀಳುತ್ತಿರಲಿಲ್ಲ.ಹೆಚ್ಚಾಗಿ ಜನರ ಕಾಲಡಿಗೆ ಬಿದ್ದು,ಅದನ್ನು ಹೆಕ್ಕುವುದಕ್ಕಾಗಿಯೇ ನೂಕು ನುಗ್ಗಲೊಂದು ಹಾಗೇ ಶುರುವಾಗಿ ಬಿಡುತ್ತಿತ್ತು.ಉಳಿದೆಲ್ಲಾ ವಸ್ತುಗಳಿಗಿಂತಲೂ ನಾಣ್ಯವೇ ಸಿಗಬೇಕು ಎಂದು ಜನರು ಹೆಚ್ಚಾಗಿ ಬಯಸುತ್ತಿದ್ದರು.  ನನಗೂ ಒಂದು ಆಸೆ ಇತ್ತು.ಒಮ್ಮೆ ಆದರೂ ದೇವರ ತೇರಿನಿಂದ ಎಸೆಯುವ ಒಂದು ನಾಣ್ಯ ನನಗೂ ಸಿಗಬೇಕು

ಅವಳೆಂದರೆ ಅವಳೇ..

Image
                                         " ಪುಷ್ಯರಾಗ "                                  (ಅವಳೆಂದರೆ ಅವಳೇ...)  ಅದು ಮದುವೆಯ ಹಾಲ್.ಜನ ವಧು ವರರಿಗೆ ಶುಭಾಶಯ ಕೋರಲು ಸರತಿ ಸಾಲಿನಲ್ಲಿ ನಿಂತಿದ್ದರು.ನಾನು ಮಾತ್ರ ಆ ಹಾಲ್ ನಲ್ಲಿ ಇರದೇ ಊಟದ ಹಾಲ್ ನಲ್ಲಿ ಹಾಕಿದ್ದ ಸಾಲು ಎಲೆಗಳಲ್ಲಿ ಒಂದು ಎಲೆಯ ಮುಂದೆ ಆಗಷ್ಟೇ ಬಂದು ಕುಳಿತಿದ್ದೆ.ನನ್ನ ಪಕ್ಕದ ಒಂದು ಕುರ್ಚಿ ಖಾಲಿ ಇತ್ತು.ಯಾರಾದರೂ ಬಂದು ಕುಳಿತುಕೊಳ್ಳುತ್ತಾರೆ ಎಂದು ಗೊತ್ತಿತ್ತು,ಆದರೆ ಅವಳೇ ಬಂದು ಕುಳಿತುಕೊಳ್ಳುತ್ತಾಳೆ ಎಂದು ಗೊತ್ತಿರಲಿಲ್ಲ. ಅವಳು ಯಾರು ಎಂದು ನನಗೆ ಗೊತ್ತಿಲ್ಲ,ನಾನು ಯಾರೆಂದು ಅವಳಿಗೂ ಗೊತ್ತಿಲ್ಲ.ಊಟ ಆರಂಭವಾಯಿತು. ಉತ್ಸಾಹಿ ಯುವಕರು ಎಲೆಯ ಮೇಲೆ ಒಂದೊಂದಾಗಿ ತರಹೇವಾರಿ ಪಲ್ಯ,ಪದಾರ್ಥ,ಭಕ್ಷ್ಯ ಭೋಜ್ಯಗಳನ್ನು ಬಡಿಸುತ್ತಾ ಹೋದರು.ನಾನು ಹಾಗೇ ತಿನ್ನುತ್ತಾ ಹೋದೆ.ನಡು ನಡುವೆ ಟೇಬಲ್ ಮೇಲೆ ಇಟ್ಟಿದ್ದ ನೀರಿನ ಬಾಟಲಿಯಿಂದ ನೀರನ್ನು ಕೂಡ ಕುಡಿಯತೊಡಗಿದೆ.ನಾನು ಅವಳತ್ತ ನೋಡಲಿಲ್ಲ,ಅವಳು ನನ್ನತ್ತ ನೋಡಲಿಲ್ಲ.ಊಟ ಮುಂದುವರಿದಿತ್ತು. ಅವಳು ಎಷ್ಟು ಚೆನ್ನಾಗಿದ್ದಾಳೆ ಎಂದು ಮೆಲ್ಲಗೆ ಕಳ್ಳರಂತೆ ಅವಳತ್ತ ತಿರುಗಿ ನೋಡುವ ಯಾವುದೇ ದೊಡ್ಡ ಕುತೂಹಲ ನಿಜವಾಗಿಯೂ ನನ್ನಲ್ಲಿರಲಿಲ್ಲ.ನನ್ನೊಂದಿಗೆ ಹಾಗೇ ಸುಮ್ಮನೆ ಮಾತು ಬೆಳೆಸಬೇಕೆಂಬ ಸಣ್ಣ ಆಸಕ್ತಿ ಕೂಡ ಅವಳಲ್ಲಿಯೂ ಕಂಡು ಬರಲಿಲ್ಲ.  ಎಲೆಯ ಮೇಲೆ ಹಪ್ಪಳ ಬಂತು.ನನ್ನ ಸುತ್ತ ಮುತ್ತ ಇದ್ದ ನಾಲ್ಕು ಜನರ

ಪೌರ್ಣಮಿ

Image
                                         " ಪೌರ್ಣಮಿ"  ಬಹುಶಃ ಅವತ್ತು ಹುಣ್ಣಿಮೆಯೇ ಇರಬೇಕು.ಹೊರಗಡೆ ಚಂದ್ರ ಎಲ್ಲೆಲ್ಲಿ ಬೆಳಕು ಚೆಲ್ಲಿದ್ದಾನೆ ಎಂದು ನನಗೆ ಗೊತ್ತಿರಲಿಲ್ಲ,ಆದರೆ ಒಳಗಡೆ ಮಾತ್ರ ಎಂದಿನಂತೆಯೇ ದೀಪ ಉರಿವ ಸೊಬಗಿರಲಿಲ್ಲ. ಎದುರಿಗಿದ್ದ ಗೋಡೆ ಗಡಿಯಾರ ಹಾಗೇ ಒಮ್ಮೆ ಜೋರಾಗಿ ಉಸಿರೆಳೆದುಕೊಂಡು ಎರಡು ಸಲ " ಡಾಂಯ್.. ಡಾಂಯ್.. " ಎಂದು ಬಡಿದುಕೊಳ್ಳುವ ಮೂಲಕ ಎಷ್ಟು ಗಂಟೆಯಾಗಿದೆ ಎಂದು ಸರಿಯಾದ ಸಮಯವನ್ನೇ ಹೇಳಿತ್ತು. ನಾನು ಮಂಚದಲ್ಲಿ ಮಲಗಿದ್ದೆ,ನನ್ನ ಪಕ್ಕದಲ್ಲಿ ಎಂದಿನಂತೆಯೇ ಅವಳು.ಹೆಸರು ಜಾನಕಿ. ಒಮ್ಮೆ ಆವರಿಸಿಕೊಂಡಿದ್ದ ನಿದ್ದೆ ಅವತ್ತೂ ಕೂಡ ನಡುವಲ್ಲಿಯೇ  ಕೈ ತಪ್ಪಿ ಹೋಗಿತ್ತು.ನಡುರಾತ್ರಿ ನಿದ್ದೆಯೊಂದು ಹಾಗೆಲ್ಲಾ ಹಕ್ಕಿಯಂತೆ ಪುರ್ರೆಂದು ಎಲ್ಲೆಲ್ಲಿಗೋ ಹಾರಿ ಹೋಗಬಾರದು.ಆಮೇಲೆ ಏನೇನೋ ಆಲೋಚನೆಗಳು ಸುಳಿದಾಡಿ ಮತ್ತೆ ನಿದ್ದೆ ನಮ್ಮ ಕೈ ಹಿಡಿಯುವುದೇ ಇಲ್ಲ. ಒಂದೂವರೆ ಗಂಟೆಯ ಹೊತ್ತಿಗೆ ಎದ್ದು,ಬಾತ್ ರೂಮಿನ ಕಡೆಗೆ ಹೋಗಿ ಬಂದಿದ್ದೇ ಈ ರೀತಿಯಾಗಿ ಮತ್ತೆ ನನಗೆ ಸರಿಯಾಗಿ ನಿದ್ದೆ ಬಾರದಿರಲು ಮುಖ್ಯ ಕಾರಣವಾಗಿತ್ತು.  ಮಲಗಿದ್ದಲ್ಲಿಂದ ನೇರವಾಗಿ ಕಣ್ಣೆದುರಿಗೇ ಇದ್ದ ಆ ಗೋಡೆ ಗಡಿಯಾರವನ್ನು ಆ ಕತ್ತಲಿನಲ್ಲಿಯೇ ಕಣ್ಣು ಹಿಗ್ಗಿಸಿಕೊಂಡು ತೀಕ್ಷ್ಣವಾಗಿ ನೋಡಿದೆ.ಆಗಷ್ಟೇ ಎರಡು ಸಲ ಬಡಿದುಕೊಂಡಿದ್ದ ಅದು ಹೆಚ್ಚು ಕಡಿಮೆ ಎರಡು ಗಂಟೆಯನ್ನೇ ನನ್ನ ಕಣ್ಣಿಗೂ  ಅಸ್ಪಷ್ಟವಾಗಿ ತೋರಿಸುತ್ತಿತ್ತು. ಅ

ಡಿಮ್ & ಡಿಪ್ಪು

Image
 - ಸಮಯ ಸಂದರ್ಭ ಕಾರು ಯಾವಾಗ ರೋಡಿಗಿಳಿದರೂ  ಕತ್ತಲೆಯಲ್ಲಷ್ಟೇ ಡಿಮ್ & ಡಿಪ್ಪು ಇಡ್ಲಿ ವಡೆ ಈಗೀಗ ಪ್ಲೇಟಿಗಿಳಿದರೆ ಬೆಳಿಗ್ಗೆಯೂ ಡಿಪ್ಪು ರಾತ್ರಿಯೂ ಡಿಪ್ಪು * * * * * * * * * * * * * * * * * * * * * * - ನೆನಪು ನನಗೆ ಸೇಬು ಇಷ್ಟವಿಲ್ಲ ಕಚ್ಚಿ ತಿನ್ನುವುದು ಇನ್ನೂ ಇಷ್ಟವಿಲ್ಲ ಸೇಬುಗಲ್ಲದ ಹುಡುಗಿ ಸಿಗಬಾರದಿತ್ತಲ್ಲ! ಸೇಬು ಬದಲು ಸೀಬೆ ತಿನ್ನಬಹುದಲ್ಲ?  ಸೀಬೆಯೋ ಅದಂತು ಮೊದಲೇ ಇಷ್ಟವಿಲ್ಲ ಅವಳ ನಲ್ಲನಂತೆಯೇ ಅದರ ಒರಟು ಗಲ್ಲ * * * * * * * * * * * * * * * * * * * * * * - ಬೆಲೆ ಏರಿಕೆ ಹಿಂದೆ ಬರೀ ಹತ್ತು  ಈಗಾಗಿದೆ ಇಪ್ಪತ್ತು ಆಗಾಗ ಕುಡಿಯುತ್ತಿದ್ದೆ  ನಾನು ಸೋಡಾ ಶರಬತ್ತು * * * * * * * * * * * * * * * * * * * * * * - ವಿರಹ ಅವಳೇ ಎಲ್ಲಾ ಅಲ್ಲ ಪ್ರೀತಿಯೇಕೆ ಇದನ್ನೊಂದು ಕಲಿಸುವುದೇ ಇಲ್ಲ? * * * * * * * * * * * * * * * * * * * * * * - ಪ್ರೇರಣೆ  ನಾನಾಗಬೇಕು ಸಿ ಎಮ್ಮು ನೋಡುವಾಗಲಷ್ಟೇ ಅನಿಸುವುದು ಎತ್ತರದ ಹಕ್ಕಿ ಆ ಎಮ್ಮು * * * * * * * * * * * * * * * * * * * * * * - ಪ್ರಾಮುಖ್ಯತೆ  ಪಟದ ಇಡ್ಲಿ ವಡೆ ಆದರೆ ನೋಡಲು ವೆರಿ ಡಿಲೀಷಿಯಸ್  ಹನಿಗವನದೊಳಗಿನ ಇಡ್ಲಿ ವಡೆ  ಆದಂತೆಯೇ ವೆರಿ ಸೀರಿಯಸ್ * * * * * * * * * * * * * * * * * * * * * * #ಹಿತವಾಗಿ_ಹದವಾಗಿ ab pacchu moodubidire

ಕೊಹ್ಲಿಯ ಕ್ರಿಕೆಟ್ ಆಟ ಮತ್ತು ಕಾದಾಟ

Image
ಅವನು ಒರಟನೇ..? ಎಂಬ ನೂರು ಅಂಕದ ಪ್ರಶ್ನೆ ಕೇಳಿದರೆ ತೊಂಬತ್ತರ ಮೇಲೆ ಎಷ್ಟು ಅಂಕ ಕೊಡಲಿ ಎಂದೇ ನಾನು  ಯೋಚಿಸುತ್ತೇನೆ.ಅವನು ಶ್ರೇಷ್ಠನೇ ..? ಎಂಬ ಪ್ರಶ್ನೆಯನ್ನು ಸಹ ಆ ಮೊದಲ ಪ್ರಶ್ನೆಯ ಜೊತೆಗೆಯೇ ನನ್ನತ್ತ ಎಸೆದು ಬಿಟ್ಟರೆ ಆಗಲೂ ಸಹ ನನ್ನ ಅಂಕಗಳು ತೊಂಬತ್ತರ ಮೇಲೆ ಹಾಗೂ ನೂರಕ್ಕೆ ಬಹಳಷ್ಟು ಸನಿಹದಲ್ಲಿ ಬಂದು ನಿಲ್ಲುತ್ತವೆ. ಏಕೆ...?  ಇಂತಹ ಅದ್ಭುತ ಆಟಗಾರನೊಬ್ಬ ಯಾಕಿಷ್ಟು ಜಿಗುಟಾಗಿ, ಬಹಳಷ್ಟು ಒರಟಾಗಿ,ಒಂದಿಷ್ಟು ಒಗಟಾಗಿ ನಮಗೆ ಕಾಡುತ್ತಾನೆ? ಬಹುಶಃ ವಿರಾಟ್ ಎಂಬ ಆಟಗಾರ ಆಡುವುದು,ಕಾದಾಡುವುದು,ಕಾಯದೇ ಜಗಳವಾಡುವುದು ಮಾಡಿದರಷ್ಟೇ ಆತ ವಿರಾಟ್ ಕೊಹ್ಲಿಯಾಗಿ ನಮ್ಮನ್ನು ಕಾಡುತ್ತಾನೆ ಎಂದೇ ನನಗೆ ಪ್ರತೀ ಸಲ ಅನಿಸುತ್ತದೆ. ನಿಜ ಹೇಳಬೇಕೆಂದರೆ ವಿರಾಟ್ ಕೊಹ್ಲಿ ನನಗೆ ಕೆಲವೊಮ್ಮೆ ಆಟಗಾರನಿಗಿಂತಲೂ ಹೆಚ್ಚಾಗಿ ಶಾಪಗ್ರಸ್ತ ಗಂಧರ್ವನಂತೆಯೇ  ಕಾಣುತ್ತಾನೆ.ಅವನು ನಾಯಕನಾಗಿ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು.ಆದರೆ ನಾಯಕನಾಗಿ ಅವನಿಗೆ ಯಾವುದನ್ನು ಪ್ರಮುಖವಾಗಿ ಮುಟ್ಟಲು ಸಾಧ್ಯ ಆಗಲಿಲ್ಲವೋ,ಆ ಅದೇ ಅವನ ಬಾಕಿ ಸಾಧನೆಯನ್ನು ಪ್ರಶ್ನಿಸಲು ಶುರು ಮಾಡಿತ್ತು.ಅವನನ್ನು ವಿರೋಧಿಸುವವರು ಕೂಡ ಅದೇ ಪ್ರಶ್ನೆಗಳನ್ನು ಎತ್ತಿ ಎತ್ತಿ ಕುಹುಕವಾಡಿ ಬಿಟ್ಟಿದ್ದರು. ಜಗಳಗಂಟ,ಮುಂಗೋಪಿ ಎಂಬ ಕಾರಣಕ್ಕಾಗಿಯೇ ಟೀಮ್ ಇಂಡಿಯಾದ ಯಶಸ್ವಿ ನಾಯಕನೊಬ್ಬ ನಿಜಕ್ಕೂ ಹೆಸರು ಕೆಡಿಸಿಕೊಂಡಿದ್ದಂತು ಮಾತ್ರ ಸತ್ಯವೇ.ಕೊಹ್ಲಿಯ ವರ್ತನೆಗಳು ಹೇಗೆಯೇ ಇರಲಿ,ಆತ ಐಸಿಸಿಯ ದೊ

ಮದಿಮಾಲ್

Image
                               "  ಮದಿಮಾಲ್ "  ಆ ಹೊಳೆಯ ನಡುವಿಗೆ ದಡದಿಂದಲೇ ಬಲೆಯನ್ನು ಹೂವಾಗುವಂತೆ ಬೀಸಿ ಎಸೆದು,ಅರಳಿಕೊಂಡ ಬಲೆಯಲ್ಲಿ ಸಿಕ್ಕಿ ಬಿದ್ದ ಮೀನುಗಳನ್ನು ಮೇಲೆತ್ತುವುದಕ್ಕಾಗಿ ಮತ್ತೆ ಬಲೆಯನ್ನು ಮೊಗ್ಗಾಗಿಸುತ್ತಾ ದಡದತ್ತಲೇ ಬಲವಾಗಿ ಎಳೆಯುತ್ತಿದ್ದ ಆ ನನ್ನ ಅಮ್ಮನ ಬಳಿ ಚಿಕ್ಕಂದಿನಲ್ಲಿ ನಾನೊಂದು ಪ್ರಶ್ನೆ ಕೇಳಿದ್ದೆ;ಹ್ಞೂಂ..ಆ ಸಾವಿರ ಕಣ್ಣುಗಳ ಅಮ್ಮನದ್ದೊಂದು ಬಲೆಯನ್ನು ನನ್ನೆರಡು ಕಣ್ಣುಗಳಲ್ಲಿ ದಿಟ್ಟಿಸಿ ನೋಡುತ್ತಲೇ ಕೇಳಿದ್ದೆ...  - ಅಮ್ಮಾ..ಏತಕ್ಕಾಗಿ ಈ ಬಲೆಯ ಕಣ್ಣುಗಳು ಇಷ್ಟು ದೊಡ್ಡದಿವೆ? ಇದಕ್ಕೆ ಇನ್ನೂ ಪುಟ್ಟ ಪುಟ್ಟ ಕಣ್ಣುಗಳಿದ್ದರೆ,ಹೊಳೆಯ ಎಲ್ಲಾ ಮೀನುಗಳೂ ನಮ್ಮದೇ ಬಲೆಗೆ ಬೀಳುತ್ತಿದ್ದವು... ಅಲ್ಲವೇ ಅಮ್ಮಾ? ಎಂದು ನಾನು ಕೇಳಿದ್ದೆ.  ಅದಕ್ಕೆ ಅಮ್ಮ ಸೀರೆಯನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಿಕೊಂಡು ಬಲೆಯನ್ನು ಇನ್ನೂ ಜೋರಾಗಿ ಎಳೆಯುತ್ತಲೇ ಹೇಳಿದ್ದಳು - ಇಲ್ಲ ಅಮ್ಮಿ..ಬಲೆಗೆ ಇನ್ನೂ ಚಿಕ್ಕ ಕಣ್ಣುಗಳಿದ್ದರೆ ಈ ಸಣ್ಣ ಸಣ್ಣ ತರು ಮೀನುಗಳು ಸಹ ಬಲೆಗೆ ಬಂದು ಬೀಳುತ್ತವೆ.ಅಂತಹ ಮಿಡಿ ಮೀನುಗಳನ್ನು ನಾವು ಕೊಲ್ಲಬಾರದು,ಅವುಗಳಿಗೆ ಈ ಹೊಳೆಯಲ್ಲಿ ಇನ್ನೂ ಬದುಕುವ ಹಕ್ಕಿದೆ.. ಎಂದು ಹೇಳಿದ್ದ ಅಮ್ಮ ಮತ್ತೆ ಬಲೆ ಎಳೆಯುವುದನ್ನೇ ಮುಂದುವರಿಸಿದ್ದಳು.  ಹಾಗಾದರೆ ಅಮ್ಮ.. ಈ ದೊಡ್ಡ ಮೀನುಗಳಿಗೆ ಬದುಕುವ ಹಕ್ಕೇ ಇಲ್ಲವೇ? ಮತ್ತೆ ಕಣ್ಣರಳಿಸಿಕೊಂಡು ಅಮ್ಮನಲ್ಲಿಯೇ ಕೇಳಿದ್ದೆ ನಾನು.  - ಮೀನು ದೊ