ಮೆನ್ಷನಿಗರು
ವಿಷಯ ಎಂತ ಗೊತ್ತುಂಟಾ..ನಾನು ಇವತ್ತು ನಿಮ್ಗೆ ನಿಮ್ಮ ಫೇಸ್ಬುಕ್ ನಲ್ಲಿರುವ ಒಬ್ಬ ವಿಚಿತ್ರ ಫ್ರೆಂಡ್ ಬಗ್ಗೆ ಹೇಳ್ತೇನೆ ಆಯ್ತಾ.
ನಿಮಗೇ ಗೊತ್ತು ಈ ಫೇಸ್ಬುಕ್ ಅಲ್ಲಿ ಹಲವಾರು ಭಿನ್ನ ವಿಭಿನ್ನ ಪ್ರಕಾರದ ಜನಗಳು ಇರ್ತಾರೆ.
ಬರೆಯುವವರು,ನಿರಂತರವಾಗಿ ಇತರರ ಬರಹಗಳನ್ನು ಶೇರ್ ಮಾಡುವವರು,ನಿರಂತರವಾಗಿ ಇತರರಿಗೆ ಲೈಕ್ಸ್, ಕಾಮೆಂಟ್, ರಿಯ್ಯಾಕ್ಟ್ ಮಾಡಿ ಹುರಿದುಂಬಿಸುವವರು,ತಮ್ಮ ಅಕ್ಕ ಬಾವ ನನ್ನು "Cute Couple" ಸ್ಪರ್ಧೆಯಲ್ಲಿ ಇನ್ನಷ್ಟು ವೋಟ್ ಮಾಡಿ,ನೀವೂ ವೋಟ್ ಮಾಡಿ ನಿಮ್ಮ ಮನೆಯವರೂ ವೋಟ್ ಮಾಡಿ,ಊರವರಿಗೆ ಎಲ್ಲಾ ವೋಟ್ ಮಾಡ್ಲಿಕ್ಕೆ ಹೇಳಿ... ಒಟ್ರಾಸಿ ನಮ್ಮನ್ನು ಒಂದು ಗೆಲ್ಲಿಸಿ ಪ್ಲೀಸ್ ಪ್ಲೀಸ್ ... ಎಂದು Messenger ಅಲ್ಲಿ ಮೆಸೇಜ್ ಮಾಡುವವರು etc.. etc ಪ್ರಕಾರದ ಜನರು ಇರ್ತಾರೆ.
ಆದರೆ ನನಗೆ ವಿಶೇಷ ಆಸಕ್ತಿ ಹುಟ್ಟಿಸುವವರು ಯಾರು ಎಂದರೆ ಈ ಬೇರೆಯವರ ಪೋಸ್ಟ್ ಗಳಲ್ಲಿ ನಮ್ಮನ್ನು,ನಿಮ್ಮನ್ನು Mention ಮಾಡುವವರು.ತಮಾಷೆಗೆ ಅಥವಾ ಒಳ್ಳೆಯ ಬರವಣಿಗೆಗೆ, ಉತ್ತಮ ವಿಷಯದ ಪೋಸ್ಟ್ ಇದ್ದರೆ Mention ಮಾಡುವುದು ಸಾಮಾನ್ಯ ವಿಷಯ. ಅದನ್ನು ನಾವೆಲ್ಲರೂ ಮಾಡ್ತೇವೆ.
ನಾನೀಗ ಆ ತರಹ Mention ಮಾಡುವವರ ಬಗ್ಗೆ ಮಾತಾಡುತ್ತಿಲ್ಲ.ಏಕೆಂದರೆ ನಾನೂ ಕೂಡ ಕೆಲವೊಮ್ಮೆ Mention ಮಾಡ್ತೇನೆ.ಮಾಡಬೇಕಾಗಿ ಬರ್ತದೆ.ಒಳ್ಳೆಯ ವಿಷಯ ಇತರರಿಗೂ ಅದರಲ್ಲೂ ಆಸಕ್ತರಿಗೆ ಗೊತ್ತಾದರೆ ಒಳ್ಳೆಯದೇ ಅಲ.
ಇನ್ನು ಕೆಲವರು ವಿಚಿತ್ರವಾಗಿ Mention ಮಾಡುವವರು ಇದ್ದಾರೆ ಆಯ್ತಾ... ಅವರು ಯಾವ ತರಹದ ಜನ ಅಂದ್ರೆ ಕೇವಲ ಪೆಟ್ಟ್ ಲಡಾಯಿ ಪೋಸ್ಟ್ ಗಳಿಗೆ ಮಾತ್ರ Mention ಮಾಡುವುದು ಆಯ್ತಾ. ಎಲ್ಲೋ ಇರ್ತಾರೆ ಅವರು,ಅವರದ್ದೇ ಒಂದು ಸಪರೇಟ್ ದುನಿಯಾದಲ್ಲಿ.ನಿಮ್ಮ ಪರಿಚಯದವರೇ.ಆದ್ರೆ ಫೇಸ್ಬುಕ್ ಅಲ್ಲಿ ಇದ್ರೂ ಅವರದ್ದೂ ಒಂದು ಸುದ್ದಿಯೇ ಇರುವುದಿಲ್ಲ ಆಯ್ತಾ.
ಆದರೆ ಎಲ್ಲಾದರೂ ವಿವಾದಾತ್ಮಕ ಪೋಸ್ಟ್ ಇದ್ದರೆ ರಪ್ಪ ಅಂತ ನಿಮ್ಮನ್ನು Mention ಮಾಡಿ ನಿಮಗೆ ಒಂದು ಶಾಲು ಹಾಕಿ, ಕೈಗೆ ಕುಕ್ಕು ಚಿಕ್ಕು ಹಣ್ಣು ಹಂಪಲು ಪ್ರೂಟ್ಸ್ ಎಲ್ಲಾ ಕೊಟ್ಟು ಅಲ್ಲಿಗೆ ನಿಮಗೆ ಸ್ವಾಗತ ಕೋರಿಯೇ ಬಿಡ್ತಾರೆ. ನೀವು ಆ ಕೂಡಲೇ ಅವ Mention ಮಾಡಿದ ಪೋಸ್ಟ್ ಗೆ ಹೋಗಿ ಅಲ್ಲಿ ನಿಮ್ಮದೊಂದು ಬೆಂಕಿ ಕಾಮೆಂಟ್ ಮಾಡಿ ನಿಮ್ಮ ವಾದ ಮಂಡಿಸದಿದ್ದರೆ ಅವ ಪುನಃ ಮೆಸೆಂಜರ್ ಅಲ್ಲಿ ಮೆಸೇಜ್ ಮಾಡಿ ಕೂಡ ಕರೀಲಿಕ್ಕೆ ಉಂಟು... ಬಾರ... ಬೇಗ ಬಾರ... ಲೇಟ್ ಆಗ್ತಾ ಉಂಟು ಅಂತ.ಎಂತ ಮರ್ರೆ ಇದು ಹುಡುಗಿ ನೋಡ್ಲಿಕ್ಕೆ ಹೋಗುವುದಾ..
ಒಟ್ರಾಸಿ ಅವನಿಗೆ.. ನೀವು ನಿಮಗೆ ಗುರುತೇ ಇರದ ಅಸಾಮಿಯ ವಾಲ್ ಗೆ ಹೋಗಿ ಚೊರೆಪಟ್ ಮಾಡ್ಬೇಕು ಅಷ್ಟೇ.ಆಗಲೇ ಅವನಿಗೆ ಹಾಲು ಕುಡಿದಷ್ಟು ತೃಪ್ತಿ. ಕೆಲವೊಮ್ಮೆ ನಿಮ್ಮ ವಾದ ಈ Mention ಮಾಡಿದವನಿಗೆ ಅಷ್ಟಾಗಿ ಹಿಡಿಸುವುದಿಲ್ಲ ಆಯ್ತಾ.ಅಂದ್ರೆ ನಿಮ್ಮ ಮಾಹಿತಿಯಿಂದ ಅಲ್ಲೊಂದು ಧಗಧಗ ಎನಿಸುವ ಸೀನ್ ಕ್ರಿಯೇಟ್ ಆಗದಿದ್ದರೆ ಈ Mention ಮಾಡಿದವನಿಗೆ ತಿಂದ ಅನ್ನ ಕರಗುವುದಿಲ್ಲ.
ಆಗ ಎಂತ ಗೊತ್ತುಂಟಾ... ಇವನೇ ಪುನಃ ನಿಮ್ಗೆ ಮೆಸೆಂಜರ್ ನಲ್ಲಿ ಹೇಳಿ ಕೂಡವುದು... ಹಾಗೇ ಹೇಳ... ಹೀಗೆ ಹೇಳ..ಈ ಪಾಯಿಂಟ್ ಬಿಡ..ಅವನನ್ನು ಪಡ್ಚಾ ಮಾಡ ಅಂತ..
ಅಲ... ನಾನು ಕೇಳುವುದು.. ಈ ಜನಕ್ಕೆ ಅಷ್ಟು ಟ್ಯಾಲೆಂಟ್ ಇರುವಾಗ ಇವನಿಗೆಯೇ ಬೇರೆಯವರ ಪೋಸ್ಟ್ ನಲ್ಲಿ ನಿರಂತರವಾಗಿ ಪೆಟ್ ಲಡಾಯಿ ಮಾಡ್ತಾ ಇರ್ಲಿಕ್ಕೆ ಸನ್ನಿಯಾ ಮರ್ರೆ..
ಕೆಲವೊಮ್ಮೆ ಈ Mention ಮಾಡುವವನ ಅತಿಯಾದ ಉತ್ಸಾಹ, ಒಟ್ರಾಸಿ ಪ್ರೋತ್ಸಾಹದಿಂದ ನೀವು ಮಾಡುವ ಕಾಮೆಂಟ್ ನಿಂದ ಆ ಪೋಸ್ಟ್ ಹಾಕಿದವ ಉಗ್ರ ಉಗ್ರ ಆಗಿ.. ಫೇಸ್ಬುಕ್ ನಲ್ಲಿ ಪರಿಚಯವೇ ಇಲ್ಲದ ನಿಮ್ಮ ಜೊತೆ ಆತ ಅನ್ಯಾಯವಾಗಿ ದುಶ್ಮನ್ ಆಗಿ ಬಿಡ್ತಾನೆ.ಎಂತ ಅವಸ್ಥೆ ಅಲ..🤦♂️
ಮತ್ತೆ ಈ ರೀತಿಯಾಗಿ Mention ಮಾಡುವ ಈ ಜನ ಇನ್ನೊಂದು ಪೆಟ್ಟ್ ಲಡಾಯಿ ಪೋಸ್ಟ್ ಅವನ ಕಣ್ಣಿಗೆ ಬೀಳುವವರೆಗೆ.. ನಮ್ಮ ಕಣ್ಣಿಗೆ ಫೇಸ್ಬುಕ್ ಅಲ್ಲಿ ಬೀಳುವುದೇ ಇಲ್ಲ... 🤦♂️
ಎಂತಹ ಭಯಾನಕ ವ್ಯಕ್ತಿಗಳು ಮರ್ರೆ .. 🙆♂️🏃♂️
Ab

Comments
Post a Comment