ಭುವಿಯ ಮಾಯೆ - ತಾಯಿ


 

ಅಪಾಯವಿದೆ ಎಂದಾಗ ತನ್ನೆಲ್ಲಾ ಮರಿಗಳನ್ನು ತನ್ನ ರೆಕ್ಕೆಗೂಡಲ್ಲಿ ಭದ್ರವಾಗಿ ಬಚ್ಚಿಟ್ಟುಕೊಳುವ ಹೇಂಟೆ ಕೋಳಿಯು ಕೂಡ ಒಬ್ಬಳು ಅದ್ಭುತವಾದ ತಾಯಿ...

ಬಿಸಿಲಿಗೆ ಸೆಡ್ಡು ಹೊಡೆದು ದಾರಿಹೋಕರಿಗೆ ನೆರಳ ನೀಡುವ ಸಾಲು ಮರವೂ ಕೂಡ ಒಂದು ರೀತಿಯಲ್ಲಿ ತಾಯಿಯೇ...

ಗುಂಡಿಯಲ್ಲಿ ಬಿದ್ದ ತನ್ನ ಪುಟ್ಟ ಕಂದನನ್ನು ಎತ್ತಲಾಗದೇ ಮೇಲೆ ನಿಂತುಕೊಂಡು ಕಣ್ಣೀರಿಟ್ಟು  ಘೀಳಿಡುವ ದೊಡ್ಡ ಹೆಣ್ಣಾನೆಯೂ ಕೂಡ... ಅದೆಂತಹ ಅದ್ಭುತವಾದ ತಾಯಿ...

ಭೂಮಿಗೆ ಬಾಯಾರಿಕೆ ಆದಾಗಲೆಲ್ಲ ತಪ್ಪದೇ ಮಳೆ ಸುರಿಸಿ ನೀರಾಡಿಕೆ ನೀಗಿಸುವ ಆ ಮೋಡವೂ ಕೂಡ ಒಬ್ಬಳು ತಾಯಿಯೇ...

ತನ್ನ ಮಕ್ಕಳಿಗೆ ಉಣ್ಣಲು ಬೆಳೆ ಬೆಳೆಯಲು ಸಹಕಾರಿಯಾಗುವ ಆ  ಭೂಮಿತಾಯಿ... ಹೆಸರಲ್ಲಿಯೇ ತಾಯಿ ಯನ್ನು ಇಟ್ಟುಕೊಂಡ ಮಹಾ ತಾಯಿ...

ತಟ್ಟೆಯಲ್ಲಿ, ಎಲೆಯಲ್ಲಿ ಬಡಿಸಿರೋ ಅನ್ನ.. ಸಾಕ್ಷಾತ್ ಅನ್ನಪೂರ್ಣೆಶ್ವರೀ ತಾಯಿ...

ಹಸಿದಾಗ ಅಕ್ಷರ ದಾಸೋಹ ದ ತಟ್ಟೆಗೆ ಒಂದು ತುತ್ತು ಜಾಸ್ತಿಯೇ ಬಡಿಸುವ ಸ್ಕೂಲ್ ಟೀಚರ್ ಕೂಡ ಒಬ್ಬಳು ತಾಯಿಯೇ...

ತುಂಬಾನೇ ಬೇಜಾರು ನಲ್ಲಿ ಇರುವಾಗ ಹೇಳಿಕೊಳ್ಳದಿದ್ದರೂ ಅರ್ಥ ಮಾಡಿಕೊಂಡು  ಕಾಲ್ ಮಾಡಿ ಸಮಾಧಾನ ಹೇಳೋ ಗೆಳತಿಯಲ್ಲೂ ಕೂಡ ಅದೆಂತಹ ಮಾತೃ ಹೃದಯ...

"ಮನೆಯಲ್ಲಿ ಹಲಸಿನ ಕಡುಬು ಮಾಡಿದ್ದೆ, ನಿಮ್ಮ ಮಗಳಿಗೆ ಇಷ್ಟ ಅಲ್ಲ, ಅದಕ್ಕೆ ತಂದೆ ಧಣಿ .." ಎಂದು ಹೇಳೋ ನಿಮ್ಮ ಮನೆಯ ಕೆಲಸದಾಕೆ ಆಹಾ ಅದೆಂತಹ ತಾಯಿ

"ಅಣ್ಣಾ ನನ್ನ ಫಸ್ಟ್ ಸ್ಯಾಲರಿಯಲ್ಲಿ  ನಿನಗೇನು ಬೇಕು.."ಎಂದು ಮುಗ್ಧವಾಗಿ  ಕೇಳುವ ನಮಗಿಂತ ಚಿಕ್ಕವಳಾದ ತಂಗಿ ಅಕ್ಕರೆ ಯಲ್ಲಿ ಯಾವ ತಾಯಿಗಿಂತ ಕಮ್ಮಿ ಹೇಳಿ...

ಕೇಳದಿದ್ದರೂ ಕಾಲೇಜ್ ಬ್ಯಾಗ್ ನಲ್ಲಿ ನೂರರ ನೋಟು ಇಟ್ಟು ಹೋಗೋ ನಿಮ್ಮ ಅಕ್ಕ.. ಮತ್ತೊಂದು ತಾಯಿ ಅಲ್ಲವೇ..

ಕದ್ದು ಮುಚ್ಚಿ ತಿಂಡಿ ಕೊಡುವುದು ಮಾತ್ರವಲ್ಲ, ಅಮ್ಮನ ಅಪ್ಪನ ಬೈಗುಳಗಳಿಂದ ಹೊಡೆತಗಳಿಂದ ನಮ್ಮನ್ನು ಪಾರು ಮಾಡೋ ನಮ್ಮೆಲ್ಲರ ಅಜ್ಜಿ ತಾಯಂದಿರ ತಾಯಿ...

ಅಜ್ಜಿ ಮನೆಯಲ್ಲಿ ನಮಗಿಷ್ಟದ ತಿಂಡಿ ಮಾಡಿ ಕೊಡೋ ಚಿಕ್ಕಮ್ಮ.. ನನ್ನ ಮಗಳು ನಿನಗೆ ಕಾಣೋ ಎನ್ನೋ ಅತ್ತೆ... ಅಧಿಕಾರದಲ್ಲಿ ಮಮತೆಯಲ್ಲಿ ತಾಯಿ ಸಮಾನರಾದ  ಅತ್ತಿಗೆ... ತಾಯಿಯಂದಿರ ಮತ್ತೊಂದು ರೂಪ ಅಲ್ಲವೇ...

ಪುರುಷನಿಗೆ ಮಡದಿಯಾಗಿ ಕೊನೆಯವರೆಗೂ ಆತನ ಸುಖ ಕಷ್ಟದಲ್ಲಿ ಬಾಗಿಯಾಗೋ  ಹೆಣ್ಣು, ಪ್ರತೀ ಗಂಡುಮಕ್ಕಳ  ಎರಡನೇ ತಾಯಿ...

ಇನ್ನು ಫಂಕ್ಷನ್ ಗೆ ಹೋದರೆ ಲಾಡೋ, ಹೋಳಿಗೆಯನ್ನು ತಾನು ತಿನ್ನದೇ ತನ್ನ ಮಗನಿಗೋ, ಮಗಳಿಗೋ ಕಟ್ಟಿಕೊಂಡು ಬರೋ ನಮ್ಮೆಲ್ಲರ ಸ್ವಂತ ತಾಯಿಯ ಬಗ್ಗೆ ಏನೆಂದು ಹೇಳಲಿ... ಅವಳು ಪದಗಳಿಗೆ ಸಿಲುಕುವಳಲ್ಲ... ನಾವೆಲ್ಲರೂ ಅವಳ ಗಾಳಕ್ಕೆ ಬಿದ್ದ ಮೀನುಗಳೇ. ಅದರೆ ಅವಳು ಸಾಯಲು ಬಿಡುವುದಿಲ್ಲ, ಜಾಗ್ರತೆಯಿಂದ ಗಾಳದಿಂದ ಬಿಡಿಸಿ ಅವಳ ವಾತ್ಸಲ್ಯ ದ ಸಮುದ್ರ ದಲ್ಲಿ ಮತ್ತೆ  ಮನಸ್ಸೋ ಇಚ್ಛೆ ಈಜಲು ಬಿಟ್ಟು ಬಿಡುತ್ತಾಳೆ.

ದೇವರಿಗೂ ಮಿಗಿಲು ಅವಳು. ಅವಳ ಋಣ ತೀರಿಸುವುದು ಸಾಧ್ಯವಾಗದ ಮಾತು. ಕೇಳಿಲ್ಲವೇ ಕೆಟ್ಟ ಮಕ್ಕಳು ಹುಟ್ಟಬಹುದು... ಆದರೆ ಕೆಟ್ಟ ತಾಯಿ, ಉಹುಂ.. ಸಾಧ್ಯವೇ ಇಲ್ಲ.

ನಮ್ಮ ಸುತ್ತಮುತ್ತಲಿನ ಹೆಣ್ಣು ಮಕ್ಕಳು ಒಬ್ಬಳು ಎಷ್ಟು ಮಗಳೋ,ಅಷ್ಟೇ ಆಕೆ ತಾಯಿಯೂ ಕೂಡ ಹೌದು. ಬರೀ ತಾಯಿ ಅಂದರೆ ಸಾಕೇ, ದೇವತೆ ಅವಳು.

ಅಮ್ಮ ಎಂದಾಗ ಅದೆಷ್ಟು ಹಾಡು. ಅದರಲ್ಲೂ ಬಿ.ಆರ್ ಲಕ್ಷ್ಮಣ್ ರಾವ್ ಅದೆಷ್ಟು ಚೆನ್ನಾಗಿ ಬರೆದಿದ್ದಾರೆ.

" ಅಮ್ಮ, ನಿನ್ನ ಎದೆಯಾಳದಲ್ಲಿ, ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು,
ಕಡಿಯಲೋಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ.. "

                  

ನಮ್ಮಲ್ಲಿ 'ಮದರ್ಸ್ ಡೇ' ಗೆ ಮಾತ್ರ ಅವಳು ಸೀಮಿತಳಾಗುವುದು ಬೇಡ,ಅನುದಿನವೂ ಅವಳದ್ದೇ ದಿನವಾಗಿರಲಿ 😍😊🙏
😊

                             #ಮಾತೃದೇವೋಭವ ❤️🙏🏻

.....................................................................................

#ಏನೋ_ಒಂದು

AB Pacchu
Moodubidire


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ