ಇಲ್ಲಿ ಎಳ್ಳು ಜ್ಯೂಸ್ ಸಿಗುತ್ತದೆ..

 

ಹಿಂದೆ ಅಲ್ಲಲ್ಲಿ ಅಂಗಡಿಗಳಲ್ಲಿ  "ಇಲ್ಲಿ ಎಳ್ಳು ಜ್ಯೂಸ್ ಸಿಗುತ್ತದೆ.." ಎಂದು ಕೈ ಬರಹದ  ಬೋರ್ಡ್ ಅಂಗಡಿಗಳ ಮುಂದೆ ತೂಗು ಹಾಕಿರುವುದು ಕಂಡು ಬರುತ್ತಿತ್ತು.ಈಗ ಅಂತಹ ಬೋರ್ಡ್ ಅಂಗಡಿಗಳ ಮುಂದೆ ಇಲ್ಲ.ಆದರೆ ಈಗಲೂ ಕೇಳಿ ನೋಡಿದರೆ ತಂಪು ತಂಪಾದ ಎಳ್ಳು ಲೋಟದಲ್ಲಿ ಇಲ್ಲವೇ ಬಾಟಲ್ ನಲ್ಲಿ ನಮ್ಮ ಅಂಗಡಿಗಳಲ್ಲಿ ಸದಾ ದೊರೆಯುತ್ತದೆ.


ಬಿರು ಬಿಸಿಲಿಗೆ ಯಾವ ಕಂಪೆನಿಯ ಎಂತಹ ಸಾಫ್ಟ್ ಡ್ರಿಂಕ್ಸ್ ಇದ್ದರೂ ಕೂಡ ಮಂಗಳೂರಿನಲ್ಲಿ.." ಅಣ್ಣಾ..ಲೋಕಲ್ ದಾಲ ಇಜ್ಜೆ" (ಲೋಕಲ್ ತಂಪು ಪಾನೀಯ ಯಾವುದೂ ಇಲ್ಲವೇ) ಅಂತ ಕೇಳುವವರು ಇಂದಿಗೂ ಕಡಿಮೆ ಆಗಿಲ್ಲ.ಹಾಗಾಗಿ  ಪುನರ್ಪುಳಿ,ಎಳ್ಳು,ಇಸುಬುಕೋಲ್,ಹಿಬುಲ,ಚಿಪ್ಪಡ್,ಬೊಂಡ ಜ್ಯೂಸ್.. ಇಲ್ಲಿಯ ಅಂಗಡಿಯ  ಪ್ರಿಡ್ಜ್  ಗಳಲ್ಲಿ ಇಂದಿಗೂ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ..


ದಾಹಕ್ಕೂ ಒಳ್ಳೆಯದು,ಆರೋಗ್ಯಕ್ಕೂ ಒಳ್ಳೆಯದು..ಕಡಿಮೆ ಬೆಲೆಯ ಜೊತೆ ಜೊತೆಗೆ ಮನಸ್ಸಿಗೂ ಉಲ್ಲಾಸ ಮಾತ್ರವಲ್ಲ ಬಾಯಿಗೂ ಅಷ್ಟೇ ರುಚಿ😋


ಕೋಕ್,ಪೆಪ್ಸಿ ಇತ್ಯಾದಿ ಇತ್ಯಾದಿ ಎಲ್ಲಾ ಕಡೆ ಸಿಗುತ್ತದೆ,ಊರಲ್ಲಿ ಇದ್ದಾಗ ಊರಿನದ್ದೇ ಪ್ಲೇವರ್ ನದ್ದು ಕುಡೀಬೇಕು..ಏನಂತೀರಾ...


ab pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..