The Priest.!
ತೆರೆಮರೆಗೆ ಸರಿದಿರುವ ಒಂದು ನಿಗೂಢ ಸಾವಿನ ಸುತ್ತ ನಡೆಯುತ್ತದೆ ಇದರ ಕಥೆ.
ಕಥೆಯ ಶುರುವಲ್ಲಿಯೇ ಒಂದು ಆತ್ಮಹತ್ಯೆ ಆಗುತ್ತದೆ..!
ಆಮೇಲೆ ಒಂದರ ನಂತರ ಒಂದರಂತೆ ಒಟ್ಟು ಮೂರು ಆತ್ಮಹತ್ಯೆ ನೋಡು ನೋಡುತ್ತಿದ್ದಂತೆ ಆಗಿಯೇ ಬಿಡುತ್ತದೆ !!
ಅದೂ ಕೂಡ ಒಂದೇ ಮನೆಯಲ್ಲಿ..!
ನೋಡಲು ಆತ್ಮಹತ್ಯೆ ಎಂದೇ ಕಾಣುವ ಅದು ಆತ್ಮಹತ್ಯೆ ಅಲ್ಲ!
ಕಥೆ ಆರಂಭವಾದ ಇಪ್ಪತ್ತು ನಿಮಿಷದಲ್ಲಿಯೇ ಕೊಲೆಗಾರ ಕೂಡ ಸಿಕ್ಕಿ ಬಿಡುತ್ತಾನೆ.
ಆದರೆ ಇದು ಮೂವಿಯ ಮುಖ್ಯ ಕಥೆ ಅಲ್ಲ!!
ಇನ್ನೇನು ಕಥೆ ಈ ಮೂವಿಯಲ್ಲಿ ಉಳಿದಿದೆ ಎಂದು ನೋಡುಗ ತಡಕಾಡುವಾಗಲೇ....
ಶುರುವಾಗುವುದು ಮೂವಿಯ ಅಸಲಿ ಕಥೆ..!
ಯೆಸ್...Para Normal Activity ಯ ಕಥೆ!
ಆ ಕಥೆ ಹೇಳಲ್ಲ..
ನೀವೇ ನೋಡಬೇಕು.
ಇಂತಹ ಕಥೆಗಳಲ್ಲಿ ನಟರ ನಟನೆಗಿಂತಲೂ ಹಿನ್ನಲೆ ಸಂಗೀತವೇ ಒಂದು ಬಹು ಮುಖ್ಯ ಪಾತ್ರವಾಗಿ ನೋಡುಗನಲ್ಲಿ ಭಯ ಹುಟ್ಟಿಸಿ,ಬೆಚ್ಚಿ ಬೀಳಿಸಬೇಕು.
ಆಗಲೇ Horror Mystery ಗೊಂದು ಕಳೆ ಬರುವುದು,ನಿಧಾನಕ್ಕೆ ಹುಟ್ಟಿಕೊಳ್ಳುವ ಭಯ.. ತೀವ್ರವಾಗಿ ಹೆಚ್ಚಾಗುತ್ತಾ ಹೋಗುವುದು!
ಇದೆ..
ಅಂತಹದ್ದೊಂದು Background score ಇದಕ್ಕೆ ಇದೆ!
ಉದ್ದ ಕೋಟು,ತಲೆಗೊಂದು ಹ್ಯಾಟು,ಜೊತೆಗೊಂದು ಸದಾ ಹಿಂಬಾಲಿಸುವ ನಾಯಿ.. Mammootty ನಿಮಗೂ ಇಷ್ಟ ಆಗಬಹುದು.
ಮಾರ್ಚ್ 2021 ರಲ್ಲಿ ಬಂದಂತಹ ಈ Supernatural Horror mystery ಮಲಯಾಳಂ ಚಿತ್ರ " #The_Priest "Prime ನಲ್ಲಿ ಇದೆ.
Movie_Review
Ab
Comments
Post a Comment