ಟವಲಿನಲ್ಲೆರಡು ಮಾವು



ಅವರೊಬ್ಬರು ಸೆಕ್ಯುರಿಟಿ ತಾತ.ನನಗೆ ಅವರೆಂದರೆ ಇಷ್ಟ. ಅವರಿಗೂ ನಾನೆಂದರೆ ಬಹಳ ಪ್ರೀತಿ. ಪ್ರತೀ ದಿನ ಮಾತಾಡುತ್ತೇವೆ, ಹರಟೆ ಹೊಡೆಯುತ್ತೇವೆ,ಒಟ್ಟಿಗೆ ನಗುತ್ತೇವೆ.


ಇವತ್ತು ಕೂಡ ಕೆಲಸಕ್ಕೆ ಹೋಗುವಾಗ ಸಿಕ್ಕಿದರು. ದೂರದಿಂದಲೇ ಕೈ ಬಿಸಿ ಹಾಯ್ ಎಂದು ಹೇಳಿದೆ. ಕೈಯಲ್ಲಿ ಸನ್ನೆ ಮಾಡಿ ಬನ್ನಿ ಎಂದರು. ಏನು ಎಂದು ಕೇಳಿದೆ.ಇಲ್ಲಿ ಬನ್ನಿ ಒಮ್ಮೆ ನೀವು ಅಂದರು. ಅವರದೊಂದು ಸೆಕ್ಯುರಿಟಿ ರೂಮ್ ಇದೆ.ಅದರ ಒಳಗೆ ಹೋದರು. ನಾನು ಅವರ ಹಿಂದೆಯೇ ಹೋದೆ.


ಪ್ಯಾಂಟಿನ ಕಿಸೆಯಿಂದ ಒಂದು ಟವೆಲಿನಲ್ಲಿ ಕಟ್ಟಿದ ಚಿಕ್ಕ ಗಂಟು ತೆಗೆದರು.ನೋಡಿದರೆ ಎರಡು ಕಾಟು ಮಾವು.ಅವರಿಗೂ ನನ್ನ ವಿಪರೀತ ಮಾವು ಪ್ರೀತಿ ಗೊತ್ತು. ನನಗಾಗಿ ಮಾವು ಹೆಕ್ಕಿ, ಬೆಲೆಬಾಳುವ ಬಂಗಾರವೋ ಎಂಬಂತೆ ಜೋಪಾನವಾಗಿ ಟವೆಲಿನಲ್ಲಿ ಕಟ್ಟಿಕೊಂಡು ಬಂದಿದ್ದರು. ಆಹಾ.. ಈ ಪ್ರೀತಿಗೆ ಅದರ ರೀತಿಗೆ ಏನು ಹೇಳಲಿ..ತಾತ ಸುಖವಾಗಿರಲಿ  🧡💛


ಬೇರೆ ಹೇಳಬೇಕೆ, ಪ್ರೀತಿಯಿಂದ ಯಾರು ಏನೇ ಕೊಟ್ಟರೂ ಸಿಹಿಯಾಗಿಯೇ ಇರುತ್ತದೆ. 🧡🧡

ಪಚ್ಚುಪಟಗಳು

ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ