ಪಾಯಸ ಮತ್ತು ನಾನು

 



ಬೆಳಿಗ್ಗೆ ಒಬ್ಬರು ಆಂಟಿ ತಾವರೆ ಬೀಜ(Makhana)ಮತ್ತು ಸಾಬಕ್ಕಿಯಿಂದ ಮಾಡಿದ ಪಾಯಸ ತಂದು ಕೊಟ್ಟಿದ್ದರು,ಪ್ರಿಡ್ಜ್ ನಲ್ಲಿ ಇಟ್ಟಿದ್ದರು ಅಂತ ಕಾಣುತ್ತೆ, ತುಂಬಾ ತಂಪಾಗಿ ಬೆಳಿಗ್ಗೆ ಬೆಳಿಗ್ಗೆ ಒಂಥರಾ ಹಿತವಾಗಿತ್ತು. ಸ್ಪೂನ್ ನಲ್ಲಿ ಒಂದೊಂದೇ ತುತ್ತು ಬಾಯಿಗಿಟ್ಟು ಹಾಗೇ ಕಣ್ಣು ಮುಚ್ಚಿ ತಂಪು ತಂಪಾದ ಪಾಯಸ ತಿಂದಿದ್ದೇ ತಿಂದಿದ್ದು.ಆಹಾ ಎಷ್ಟು ರುಚಿ.. ಅದಲ್ಲದೇ ಈ ಮಖಾನ(lotus seed)ದ ಪಾಯಸವನ್ನು ನಾನಂತು ಈ ಮೊದಲು ತಿಂದವನಲ್ಲ,ಹಾಗಾಗಿ ಅದೊಂತರಹ ನನ್ನ ಪಾಲಿಗೆ ವಿಶೇಷವಾದ ಪಾಯಸವೇ ಆಗಿತ್ತು😋


ಈಗ ಮತ್ತೊಬ್ಬರು ಆಂಟಿ ಬಿಸಿ ಬಿಸಿಯಾದ ಶ್ಯಾವಿಗೆ ಪಾಯಸ  ತಂದು ಕೊಟ್ಟಿದ್ದಾರೆ. ನಾನು "ಬೇಡ ಆಂಟಿ, already ಬೆಳಿಗ್ಗೆ ಒಮ್ಮೆ ಪಾಯಸ ತಿಂದು ಆಗಿದೆ... " ಎಂದು ಹೇಳಿದರೆ, "ನಿಂಗೆ ಖೀರು ಅಂದ್ರೆ ಇಷ್ಟ ಅಲಾ ಪಚ್ಚು , ಅದಕ್ಕೆ ನಿನಗಾಗಿಯೇ  ತಂದೆ, ಸ್ವಲ್ಪ ತಿನ್ನು ,ಏನಾಗಲ್ಲ.." ಅಂತ ಕೊಟ್ಟು ಹೋದರು.


ನಾನು ಮೊದಲೇ  ಬಸಳೆ ಬಳ್ಳಿಯಂತೆ ತುಂಬಾ ಸಪೂರ, ಇನ್ನು ಹೀಗೆ ಎಲ್ಲರೂ ಸಾಕಷ್ಟು ಪ್ರಮಾಣದಲ್ಲಿ ತುಪ್ಪ,ಹಾಲು  ಗೋಡಂಬಿ ಎಲ್ಲ ಹಾಕಿದ  ಪಾಯಸ ಪ್ರೀತಿಯಿಂದ ತಿನ್ನಿಸಿ ತಿನ್ನಿಸಿ, ನಾನು ಪೆಲಕಾಯಿ ಯ ಹಾಗೆ, ಉಬ್ಬಿದ ಪೂರಿಯ ಹಾಗೆ, ಕೊಬ್ಬಿದ ಗೂಳಿಯ ಹಾಗೇ ಆಗದಿದ್ದರೆ ಸಾಕು.


ಯಾರೇ ಆಂಟಿ ಪಾಯಸ ಕೊಟ್ಟರೂ ಮೊದಲು ನಾನು usually ಈ ಡೈಲಾಗ್ ಹೇಳುತ್ತೇನೆ " ಯಾಕೆ ಆಂಟಿ.. ಸುಮ್ಮನೆ ಈ ಪಾಯಸ ಎಲ್ಲಾ,ನಿಮಗೂ ಕೂಡ ಎಷ್ಟೊಂದು ತೊಂದರೆ.. ಅದು ಬೇರೆ ಅಲ್ಲಿಂದ  ಇಲ್ಲಿಯ ತನಕ ಪಾಯಸ ಹಿಡಿದುಕೊಂಡು ನೀವು ಒಬ್ಬರೇ ಬರಲಿಕ್ಕೆ ಯಾಕೆ ಹೋದಿರಿ, ಮಗಳ ಕೈಯಲ್ಲಿ ಕೊಟ್ಟು  ಕಳುಹಿಸಬಹುದಿತ್ತಲ್ಲ,ಅವಳಿಗೆ ಬೇರೆ ಈಗ  ರಜೆ, lock down ಆಗಿ ಆತ್ತ ಕಾಲೇಜು ಸ ಇಲ್ಲ,ಮನೆಯಲ್ಲಿಯೇ ಇದ್ದರೂ ಒಂದು ಕಡ್ಡಿ ಆ ಕಡೆಯಿಂದ ಈ ಕಡೆ ಇಡಲ್ಲ,ಇದನ್ನಾದರೂ  ಅವಳ ಕೈಯಲ್ಲಿಯೇ ಕೊಟ್ಟು ಕಳುಹಿಸಬಹುದಿತ್ತಲ್ಲ.. ಎಷ್ಟೊಂದು ಶ್ರಮ ತಗೋತೀರಾ ಹೇಳಿ.. ಏನು ಆಂಟಿ ನೀವೊಂದು..ನಿಮಗೆ ಅರ್ಥನೇ ಆಗಲ್ಲ ನೋಡಿ.. "


ಪಾಯಸ ತಿಂದಾದ ಮೇಲೆ ಮತ್ತೊಂದು ಡೈಲಾಗ್  " ಆಹಾ.. ಪಾಯಸನಾ  ಇದು, ಅಮೃತ.. ಅಮೃತ ಇದ್ದ ಹಾಗೆ ಇದೆ,ಇಂತಹ ಪಾಯಸ ನಾನು ನನ್ನ ಜನ್ಮದಲ್ಲಿಯೇ ಎಲ್ಲೂ ಕುಡಿಲಿಲ್ಲ.. ನೆಕ್ಸ್ಟ್ ಟೈಂ ಈ ಚಿಕ್ಕ ಲೋಟದಲ್ಲಿ ಎಲ್ಲಾ ಪಾಯಸ  ತರ್ಬೇಡಿ.. ದೊಡ್ಡ ಚೊಂಬಲ್ಲೇ ತನ್ನಿ..ಏನು ಆಂಟಿ ನೀವೊಂದು..ನಿಮಗೆ ಅರ್ಥನೇ ಆಗಲ್ಲ ನೋಡಿ.." ಎಂದು ಹೇಳ್ತೇನೆ.


ಹೀಗೆ ಅವರೆಲ್ಲಾ  ಅಷ್ಟೊಂದು ಪ್ರೀತಿಯಿಂದ, ಆಸ್ಥೆಯಿಂದ  ಪ್ರತೀ ಸಲವೂ ಪಾಯಸ ತಂದು ಕೊಟ್ಟಾಗ, ಬೇಡ ಎನ್ನಲು ನನಗೆ  ಮನಸೇ ಬರುವುದಿಲ್ಲ.ಈ ರೀತಿಯ ಪ್ರೀತಿಗೆ, ಬಗೆ ಬಗೆಯ ಪಾಯಸದ ರೀತಿಗೆ.. ಇವತ್ತು ಎರಡು ತರಹದ ಪಾಯಸವನ್ನು ಮನಸೋ ಇಚ್ಛೆ ಸವಿಯಲಾಯಿತು. ನೋಡುವ ಸಂಜೆ ಬೇರೆ ಯಾರಾದರೂ ಗಸಗಸೆ ಪಾಯಸ ತಂದು ಕೊಟ್ಟರೂ ಕೊಡಬಹುದು...


ಲೋಟದಲ್ಲಿ ಆದರೂ ಓಕೆ.. ಚೊಂಬಲ್ಲಿ ಆದರೂ ಓಕೆ.. ಕೊಡಪಾನದಲ್ಲಾ ಆದರೂ ಓಕೆ... ಪಾಯಸ ಸೇವೆ,ಪಾಯಸ ಸೇವನೆ ನಿರಂತರಂ ಆಗತ್ತಿರಲಿ ..😊🙏


🙄🤔🏃‍♂️🏃‍♂️


#ಪಾಯಸ_ಪ್ರೇಮಿ ❤️


ab pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ