ಅಪ್ಪನೂ ಅಳುತ್ತಾನೆ
ಬತ್ತದ ಗದ್ದೆಯ ಮುಂದೆ
ಮನಸ್ಸು ಹೇಳಿತು
ಬಂಗಾರ ಕೊಳ್ಳಬಾರದು
ಬೆಳೆಯ ಬೇಕು
* * * * * * * * * * * * * * * * * *
ಜೇಡ ಬಲೆ ಹೆಣೆದಾಗ
ಇಬ್ಬನಿ ಮುತ್ತಾಯಿತು
ಚಿಟ್ಟೆ ಭೋಜನವಾಯಿತು
* * * * * * * * * * * * * * * * * *
ಕಾವ್ಯ ಬರೆದಾಗ ಬರಲಿಲ್ಲ
ಪ್ರೀತಿಸಿದಾಗ
ಕವಿತೆಯಾಗಿ ಉಳಿದಳು
* * * * * * * * * * * * * * * * * *
ಗಡಿಗೆಯಲ್ಲಿ ತುತ್ತು ಅನ್ನವಿದ್ದಾಗ
ಮಗು ಹಟ ಮಾಡದೇ ಎಲ್ಲವನ್ನೂ ತಿಂದಿತು
ಅಮ್ಮನಿಗೆ ಹಸಿವೆಯೇ ಆಗಲಿಲ್ಲ
* * * * * * * * * * * * * * * * * *
ಕನ್ಯಾದಾನ ನಡೆದಂದು
ಭೂರಿ ಭೋಜನ ಸೊಗಸಿತ್ತು
ತಂದೆಯ ಕಣಲ್ಲಿ ಚೊಂಬು ನೀರಿತ್ತು
* * * * * * * * * * * * * * * * * *
#ಹಿತವಾಗಿ_ಹದವಾಗಿ
ab pacchu
moodubidire

Comments
Post a Comment