ಸೀರೇಲಿ ಹುಡುಗಿ
ಅವಳು ಹೇಗೆ ಅಂತ ಗೊತ್ತಿರಲಿಲ್ಲ, ಆದರೆ ಅವಳು ಹಾಗೆಯೇ ಅಂತ ಒಂದು ದಿನ ಗೊತ್ತಾಯಿತು!!
ಹೊಸ ಪರಿಚಯ, ಹೆಚ್ಚೆಂದರೆ ಒಂದು ವಾರ ಆಗಿತ್ತು ಅಷ್ಟೇ.
ಆವತ್ತು ರಾತ್ರಿ ಅವಳೇ ಮೆಸೇಜ್ ಮಾಡಿದಳು.
"ನೀನು ಕುಡಿತೀಯಾ...? " ಕೇಳಿದಳು.
" ಇಲ್ಲ... ಯಾಕೇ? " ಅಂದೆ.
" ನಾನು ಕುಡಿತೇನೆ ಅದ್ಕೆ...!! " ಅಂದಳು.
" ನಿಜವಾಗಿಯೂ ಕುಡಿತೀಯಾ?" ಕೇಳಿದೆ
" ನಿಂಗೆ ಲೈಫ್ ಅಲ್ಲಿ ನೋವು ಅನ್ನುವುದು ಏನು ಇಲ್ವಾ..? "ಕೇಳಿದಳು
" ಇದೆ..ತುಂಬಾ ಇದೆ " ಅಂದೆ.
ಅವಳು ಏನೂ ರಿಪ್ಲೈ ಮಾಡಲಿಲ್ಲ..
ನಾನೇ ಕೇಳಿದೆ" ನಿಂಗೆ? "
" ಇದೆ, ಅದ್ಕೆ ಕುಡಿತೀನಿ" ಅಂದಳು.
"ಕುಡಿದ್ರೆ ನೋವು ಹೋಗುತ್ತಾ.." ಕೇಳಿದೆ
"ಖಂಡಿತವಾಗಿಯೂ... " ಅಂದಳು.
ನನಗೇನು ರಿಪ್ಲೈ ಮಾಡಬೇಕು ಎಂದು ತೋಚಲಿಲ್ಲ.
ಅವಳೇ ಕೇಳಿದಳು " ನನ್ನ ಜೊತೆ ಬರ್ತಿಯಾ... "
" ಎಲ್ಲಿಗೆ" ಕೇಳಿದೆ.
"ಬಾರಿಗೆ.. " ಅಂದಳು.
" ಆಶಾ ಬಾರಿಗೆ ನಾನು ಬರಲ್ಲ " ಅಂದೆ.
"ನೀನು ಆಶಾ ಬಾರ್ ಬಿಟ್ಟರೆ ಮತ್ಯಾವ ಬಾರ್ ಕೂಡ ಲೈಫ್ ಅಲ್ಲಿ ನೋಡಿಯೇ ಇಲ್ಲವಾ 😡" ಅಂದಳು.
"ಅದು.. ಅದು.. ಪ್ರೆಂಡ್ಸ್ ಎಲ್ಲಾ ಅದೇ ಬಾರಿಗೆ ಹೋಗ್ತಾ ಇದ್ರು.. ಹಾಗಾಗಿ.... " ಅಂದೆ.
" ಬರುವುದಾದರೆ ಬಾ.. ನಾನೊಂದು ಹೊಸ ಜಾಗ ಕ್ಕೆ ಕರ್ಕೊಂಡು ಹೋಗ್ತೀನಿ,ನಿನ್ನ ನೋವು ನಿವಾರಣೆಗೆ ನನ್ನಲ್ಲಿ ಮದ್ದು ಇದೆ, ನಾಳೆ PG ಬಳಿ ಬಂದು ಪಿಕ್ ಅಪ್ ಮಾಡ್ತಿನಿ, good night.. " ಎಂದು ಹೇಳಿ ಮೆಸೇಜ್ ಮುಗಿಸಿದಳು.
ಮರುದಿವಸ ರಾತ್ರಿ 10 ಗಂಟೆಗೆ ನನ್ನ PG ಮುಂದೆ ಅವಳಿಗಾಗಿ ಕಾಯುತ್ತಿದ್ದೆ. ನನ್ನ PG ಇದ್ದಿದ್ದು ಕುಳಾಯಿ ಬಳಿ. ಅವಳದ್ದು ಸುರತ್ಕಲ್. ನನಗೆ ಬಾರ್ ಹೋಸತೇನಲ್ಲ. ಫ್ರೆಂಡ್ಸ್ ಪಾರ್ಟಿ ಮಾಡುವಾಗ ನನ್ನನ್ನು ಕರ್ಕೊಂಡು ಹೋಗ್ತಾ ಇದ್ದರು. ಅವರಿಗೆ ಬೇಜಾರು ಆಗ್ಬಾರ್ದು ಅಂತ ಅಲ್ಲಿ ನಾನು sprite ಕುಡೀತಾ ಇದ್ದೆ.
ಅವಳು ಅವಳ ಸ್ಕೂಟಿಯಲ್ಲಿ ಬಂದಳು. ಸ್ಕೂಟಿ ನಿಲ್ಲಿಸಿದಳು.
Blue jeans ಮೇಲೆ ಟೈಟಾದ yellow tshirt ಹಾಕಿ.. ಉದ್ಧಗೆ curly hair ಬಿಟ್ಟುಕೊಂಡಿದ್ದ ಅವಳು modern ಹುಡುಗಿ. ಮನಸ್ಸಿನಲ್ಲೇ ಇವಳಿಗೆ beauty ಗಿಂತ babes ಅನ್ನುವುದೇ ಪಕ್ಕಾ suit ಆಗುತ್ತೆ ಅಂತ ಅನ್ಕೊಂಡೆ.
" ಗಾಡಿ ಬಿಡಕ್ಕೆ ಬರುತ್ತಾ.. " ಕೇಳಿದಳು.
" ಇಲ್ಲ.." ಅಂದೆ
ಮೇಲಿನಿಂದ ಕೆಳಗೆ ಅನ್ಯಗ್ರಹಜೀವಿಯಂತೆ ನನ್ನನ್ನು ನೋಡಿದಳು. ಇಂತವರೆಲ್ಲಾ ಇನ್ನೂ ಭೂಮಿಯಲ್ಲಿ ಇದ್ದಾರ ಅನ್ನುವಂತಿತ್ತು ಅವಳ ನೋಟ.
"ಓಕೆ. ಹಾಗಾದರೆ ಗಟ್ಟಿಯಾಗಿ ಕುತ್ಕೊ.. " ಅಂದಳು.
ಕುತ್ಕೊಂಡೆ. ಸ್ಕೂಟಿ ಹೊರಟಿತು.
ಅವಳ perfume ಮತ್ತು ಅವಳ ತಲೆಕೂದಲಿಗೆ ಹಾಕಿದ್ದ ಶ್ಯಾಂಪೂ ವಿನ ಪರಿಮಳ ಸ್ಕೂಟಿ ಮುಂದೆ ಹೋದಂತೆ ಗಾಳಿಯಲ್ಲಿ ನನ್ನ ಮೂಗಿಗೆ ಬಡಿದು ಮೈ ಮನವೆಲ್ಲಾ ಒಮ್ಮೆ ಅರಳಿದಂತೆ ಆಯಿತು.
" ಮಂಗಳೂರಲ್ಲಿ ಮಳೆಗಾಲಕ್ಕೆ ಹೊಂಡ ಬಿದ್ದು ರೋಡ್ ಎಲ್ಲಾ ಹಾಳಾಗಿದೆ, ರೋಡ್ ಅಲ್ಲಿ ಹಂಪ್ಸ್ ಕೂಡ ಜಾಸ್ತಿ, ನೀನು ಒಮ್ಮೆಲೇ ಬ್ರೇಕ್ ಹಾಕಿದ್ರೆ ನಾನು ಬ್ಯಾಲೆನ್ಸ್ ಗೆ ಅಂತ ನಿನ್ನ ಸೊಂಟ ಹಿಡ್ಕೊಬಹುದಾ .. " ಅಂತ ಕೇಳಿದೆ.
ಅವಳು ಮಾತಾಡಲಿಲ್ಲ. ಹಿಂದೆ ತಿರುಗಿ ನೋಡಿದಳು.
" ಯಾಕೆ..? " ಏನಾಯಿತು ಕೇಳಿದೆ.
" ಅಲ್ಲಾ ಯಾರೋ ಒಬ್ಬರು ಏನೋ ಹೇಳಿದ ಹಾಗೆ ಆಯಿತು,ಅದು ಅವರೇನಾ ಅಂತ confirm ಮಾಡ್ಕೊಳ್ಳೊಕ್ಕೆ ಹಿಂದೆ ತಿರುಗಿ ನೋಡಿದೆ " ಅಂದಳು.
ನಾನು ಕೆಟ್ಟಿದೆ ಅಂತ ನನಗೂ confirm ಆಯಿತು
ಈಗ ಸ್ಕೂಟಿ ಕೂಳೂರು ಬ್ರಿಡ್ಜ್ ಮೇಲೆ ಹೋಗುತ್ತಿತ್ತು.
" ನೀನು ತುಂಬಾ ಜಾಸ್ತಿ ರೊಮ್ಯಾಂಟಿಕ್ ಮೂವಿ ನೋಡ್ತಿ ಅಂತಾ ಕಾಣುತ್ತೆ.. " ಅಂದಳು.
"ಹೌದು ಕರೆಕ್ಟ್ ಆಗಿ ಗೆಸ್ ಮಾಡಿದೆ. ಆದರೆ ಇಮ್ರಾನ್ ಹಶ್ಮಿ ಪ್ಯಾನ್ ಅಂತು ಕಂಡಿತಾ ಅಲ್ಲ.. " ಅಂದೆ.
" ಆಯ್ತು ಆಯ್ತು.. ಅಷ್ಟೊಂದು ಬ್ಯಾಲೆನ್ಸ್ ಇಲ್ಲ ಅಂದರೆ ನನ್ನನ್ನು ಹಿಡ್ಕೊಬಹುದು .. " ಅಂದಳು
" ಥ್ಯಾಂಕ್ಸ್, ನೀನೇನು ಟೆನ್ಶನ್ ಆಗ್ಬೇಡ.. ನಾನು ರೇಪು ಗೀಪು ಏನು ಮಾಡಲ್ಲ " ಅಂದೆ.
" ಅದು ನಿನ್ನಿಂದ ಸಾಧ್ಯ ಇಲ್ಲ ಅನ್ನುವುದು ಕೂಡ ನಂಗೆ ಗೊತ್ತು.. " ಅಂದಳು.
ಕೊಟ್ಟಾರ ಚೌಕಿ, ಉರ್ವ ಸ್ಟೋರ್, ಚಿಲಿಂಬಿ, ಲೇಡಿ ಹಿಲ್ ಎಲ್ಲಾ ಪಾಸ್ ಆಗಿ ಲಾಲ್ ಬಾಗ್ ಮೂಲಕ ನಗರದ ಹೃದಯ ಭಾಗಕ್ಕೆ ಪ್ರವೇಶಿಸಿತು ನಮ್ಮ ಸ್ಕೂಟಿ.
ಕೊನೆಗೊಂದು ಜಾಗದಲ್ಲಿ ಸ್ಕೂಟಿ ನಿಲ್ಲಿಸಿದಳು. ಯಾವ ಬಾರ್ ಇರಬಹುದು ಎಂದು ಬೋರ್ಡ್ ನೋಡಿದೆ. ಹೆಸರಿನ ಕೊನೆಗೆ ಯಾವುದೋ ಪಬ್ ಎಂದು ಇತ್ತು.
ನಾವಿಬ್ಬರು ಈಗ ಎದುರು ಬದುರು ಕೂತ್ತಿದ್ದೆವೆ.
" ನೀನು ಏನು ಕುಡಿತೀಯಾ .. Beer? " ಕೇಳಿದೆ.
"ಇಲ್ಲ ವಿಸ್ಕೀ.. ನಿಂಗೆ ಐಸ್ ಕ್ಯೂಬ್ ಬೆರೆಸೋಕೆ ಬರುತ್ತಾ.." ಕೇಳಿದಳು.
"ಟ್ರೈ ಮಾಡ್ತೀನಿ" ಅಂದೆ.
ಅವಳ ವಿಸ್ಕಿ ಬಂತು. ಶ್ರದ್ಧೆಯಿಂದ ಐಸ್ ಕ್ಯೂಬ್ ಗಳನ್ನು ಬೆರೆಸಿದೆ.
"ನೀನು ನಿಜವಾಗಿಯೂ ಕುಡಿಯಲ್ವಾ.. " ಕೇಳಿದಳು.
" ಚಹಾ ಕಾಫಿ ಬಿಟ್ಟರೆ ಅಮ್ಮ ಮಾಡುವ ಕಷಾಯ ಕುಡೀತೀನಿ. ದೇವಸ್ಥಾನದಲ್ಲಿ ಪಾನಕ ಕುಡೀತೀನಿ.ಹೊರಗಡೆ ಹೋದ್ರೆ ಮಸಾಲ ಮಜ್ಜಿಗೆ, ಲೈಮ್ ಸೋಡ, ಪುನರ್ಪುಳಿ, ಬೊಂಡ ಶರಬತ್ ಎಲ್ಲಾ ಕುಡಿತೀನೀ . " ಅಂದೆ.
ಇನ್ನೊಮ್ಮೆ ಮೇಲೆ ಕೆಳಗೆ ನೋಡಿದಳು.
" ನೀನು ಗಂಡಸೇ ಅಲ್ಲಾ.. " ಅಂದಳು.
" ಹಾಗೇನಿಲ್ಲ, ಮದುವೆ ಆದರೆ ಮಕ್ಕಳು ಆಗುತ್ತೆ ಎನ್ನುವ confident ಇದೆ " ಅಂದೆ.
ಅವಳು ಏನು ಮಾತಾಡಲಿಲ್ಲ.
"ಈಗ ನಾನೇನು ಕುಡಿಬೇಕು... Beer? " ಕೇಳಿದೆ.
" ಇಲ್ಲ ನೀನೂ ವಿಸ್ಕೀ ನೇ ಕುಡಿಬೇಕು..ಐಸ್ ಕ್ಯೂಬ್ ನಾನು ಬೆರೆಸ್ತೀನಿ.. " ಅಂದಳು
" ವಿಸ್ಕಿ ಗೆ ನನ್ನ ನೋವು ಮರೆಸುವ ಶಕ್ತಿ ಇದೆಯಾ.. " ಕೇಳಿದೆ.
" ಹೂಂ.. " ಅಂದಳು.
ವಿಸ್ಕೀ ಬಂತು.. ಐಸ್ ಕ್ಯೂಬ್ ಬಂತು. ಅವಳೇ ಬೆರೆಸಿದಳು. ನೋಡಿದರೆ ಗೊತ್ತಾಗುತ್ತಿತ್ತು ಅವಳು ಈ ವಿಷಯದಲ್ಲಿ ಅದು ಎಷ್ಟು expert ಎಂದು.
" ಕುಡೀ... " ಅಂದಳು.
ಅವಳ ಗಾಜಿನ ಪಾತ್ರೆಗೆ ನನ್ನ ಗಾಜಿನ ಪಾತ್ರೆಯನ್ನು ತಾಗಿಸಿ ಚಿಯರ್ಸ್ ಎಂದು ಹೇಳಿ expert ಕುಡಿಯಂತೆ ಕುಡಿಯಲು ಶುರು ಮಾಡಿದೆ.
" ಹೇಳು ಲೈಫ್ ಅಲ್ಲಿ ತುಂಬಾ ನೋವಿದೆ ಅಂದೆ, ಏನದು ಹೇಳು.. "
" ಒಂದು ವಾರದಿಂದ ಜೋರು ತಲೆ ನೋವು, ಇದು ಕುಡಿದ್ರೆ ಹೋಗುತ್ತೆ ಅಲ್ವಾ.. ಅಂದೆ.
ಅವಳು ನನ್ನನ್ನು ಇನ್ನೊಮ್ಮೆ ಮೇಲೆ ಕೆಳಗೆ ನೋಡಿದಳು,ಗಟ ಗಟ ಅಂತ ವಿಸ್ಕೀ ಗಂಟಲಿಗೆ ಇಳಿಸಿಬಿಟ್ಟಳು.
"ಹೃದಯದ ನೋವು ಏನೂ ಇಲ್ವಾ.. " ಕೇಳಿದಳು.
" ಇಲ್ಲ ಹಾರ್ಟ್ ನದ್ದು ಯಾವುದೇ ಪ್ರಾಬ್ಲಂ ಇಲ್ಲ...BP, ಶುಗರ್, ಕಿಡ್ನಿ ಎಲ್ಲಾ ಸರಿ ಇದೆ ಈಗ ಡೈಲಿ ಸೂರ್ಯ ನಮಸ್ಕಾರ ಕೂಡ ಮಾಡ್ತಿನೀ.. "ಅಂದೆ.
ಅವಳಿಗೆ ಎದುರಿನಲ್ಲಿದ್ದ ವಿಸ್ಕಿ ಬಾಟಲಿನಿಂದ ಅವಳ ತಲೆಗೆಯೇ ಹೊಡೆದುಕೊಳ್ಳಬೇಕೆಂದು ಅನಿಸಿತೋ ಏನೋ,ಮುಖ ನೋಡುವಾಗಲೇ ಗೊತ್ತಾಯಿತು.
"ಲೈಫ್ ಅಲ್ಲಿ ಯಾರನ್ನೂ ಲವ್ ಮಾಡ್ಲಿಲ್ವಾ... " ಕೇಳಿದಳು.
" ಅದೇ ತರಹದ್ದು ಅಂತ ಏನೂ ಇಲ್ಲ,ಆದರೆ ಆ ತರಹದ್ದೇ ಒಂದು ಆಗಿದೆ. ನಮ್ಗೆಲ್ಲಾ ಯಾರು ಬೀಳ್ತಾರೆ ಅಂತ ಗೊತ್ತಿತ್ತು... ಅದ್ಕೆ ನಾನೇ ಒಬ್ಬಳ ಹಿಂದೆ ಬಿದ್ದುಬಿಟ್ಟೆ.. " ಅಂದೆ.
" ಮತ್ತೆ ಏನಾಯಿತು, ಸಕ್ಸೆಸ್ ಆಯಿತಾ.. "
" ಇಲ್ಲ, ಅವಳನ್ನು ನನ್ನನ್ನು ಬಿಟ್ಟು ದೂರ ಹೋದಳು.! "
" ಕಥೆ.. ಏನು? "
" ಅದು complicated.. "
"ಹೇಳು.. "
" ಈಗ ಅಗಲ್ಲ... "
" ಮತ್ತೆ ಯಾವಾಗ ಹೇಳ್ತೀಯಾ..."
" ಕಥೆ ಏನೋ ಇದೆ. ಆದರೆ ನನಗೆ ಈಗೀನ ವರೆಗೂ ಯಾರ ಬಳಿಯೂ ನನ್ನ ಕಥೆ ಹೇಳಬೇಕೆಂದು ಅನಿಸಿಯೇ ಇಲ್ಲ..." ಅಂದೆ.
"ನನಗೆ ಹೇಳು.. ನನಗೆ ಕಥೆ ಕೇಳುವುದು ಅಂದ್ರೆ ಇಷ್ಟ, ನನಗೆ ಅದು ಕೂಡ ಒಂಥರಾ ನಶೆ ಯೇ.. "ಅಂದಳು
" ಕಥೆ ಉದ್ದ ಇದೆ.. "
"ಬಾಹುಬಲಿ, KGF ತರಹ part 1,part 2 ಇದೆಯಾ.. " ಕೇಳಿದಳು.
"possibly.. " ಅಂದೆ.
ಅವಳೆರಡು ಪೆಗ್ ಏರಿಸಿದಳು.. ನಾನು ಕೂಡ..
ಅವಳೇ ಕೇಳಿದಳು" ಇದಕ್ಕೂ ಮೊದಲು ನೀನು ಕುಡಿಲೇ ಇಲ್ವಾ.. "
" ಅವಳು ಕುಡಿಬೇಡ ಅಂದಿದ್ಲು.. ಅದಕ್ಕೆ ಕುಡೀಲಿಲ್ಲ.. "
ಮತ್ತೆ ಈಗ..
" ಅವಳು ಕುಡೀಬೇಡ ಅಂತ ಅಂದಿದ್ಳು ಅಲ್ವಾ.. ಅದಕ್ಕೊಸ್ಕರನೇ ಬೇಕಂತಲೇ ಕುಡೀತಿದ್ದೆನೆ.." ಅಂದೆ.
"Good boy.. ಹುಡುಗರು ಈ ರೀತಿ ಉದ್ಧಾರ ಆಗ್ಬೇಕು " ಅಂದಳು.
" ನಿಂಗೆ ಏನು ನೋವು.. " ಅಂದೆ
" ಸೇಮ್ ಪಿಂಚ್.. ಬಾಯ್ ಫ್ರೆಂಡ್, ಕೈ ಕೊಟ್ಟ ಅದ್ಕೆ ಡೈಲಿ ಕುಡಿತೀನೀ.. ನೋವು ಮರೀತೀನಿ.. ಸ್ವಲ್ಪ ಸಮಾಧಾನ ಆದ ಮೇಲೆ ಎದ್ದು ಮನೆಗೆ ಹೋಗ್ತೀನಿ.. " ಅಂದಳು.
" ಹೂಂ... " ಅಂದೆ.
" ನಿನ್ನ ಹೆಸರೇನು ಒಮ್ಮೆ ಹೇಳು.. " ಅಂದಳು.
" ಯಾಕೆ... ಗೊತ್ತಿಲ್ವಾ... " ಅಂದೆ
" ಉಲ್ಲಾಸ್.... ಆದರೆ ನಿನ್ನನ್ನು ನೋಡಿದಾಗ ನಿನ್ನಲ್ಲಿ ಆ ರೀತಿಯ ಯಾವುದೇ ಉಲ್ಲಾಸ ಕಾಣ್ತ ಇಲ್ಲ... " ಅಂದಳು.
" ನನಗೂ ಅಷ್ಟೇ, ನಿನ್ನ ಹೆಸರಂತೆ ನೀನಿಲ್ಲ.. "ಅಂದೇ
" ಸೌಮ್ಯ... ಯಾವ angle ನಿಂದ ನೋಡಿದರೂ ಸೌಮ್ಯವಾದ ಯಾವುದೇ ಗುಣಲಕ್ಷಣಗಳು ಕಾಣ್ತ ಇಲ್ಲ.. " ಅಂದೆ.
ಅವಳು ಜೋರಾಗಿ ನಕ್ಕಳು.
ಅವಳ ಟಾಮ್ ಬಾಯ್ ಆದರೂ ನಕ್ಕಾಗ ಮಾತ್ರ ಒಂಥರಾ ಸುಂದರಿಯೇ..
ಇಲ್ಲದಿದ್ದರೂ ಅವಳು ಸುಂದರಿಯೇ.. ಆದರೆ ನನಗೆ ಅವಳು ಈ ಡ್ರೆಸ್ ನಲ್ಲಿ ಅಷ್ಟೊಂದು ಸುಂದರಿ ಅಲ್ಲ.
" ಉಲ್ಲಾಸ್,ನಿನ್ನನ್ನು ಯಾವ angle ನಿಂದ ನೋಡಿದರೂ ಕೂಡ ನಂಗೆ suit ಆಗಲ್ಲ.. " ಅಂದಳು.
" ನಂಗೂ ಅಷ್ಟೇ ನೀನು ನಂಗೆ suit ಆಗಲ್ಲ " ಅಂದೆ.
" ಆದರೆ ಕುಡಿದಾಗ ಮಾತ್ರ ನೀನು ಒಳ್ಳೆಯ ಕಂಪನಿ ಕೊಡಬಲ್ಲೆ, ಬೇಕಾದರೆ ಹೀಗೆಯೇ ರಾತ್ರಿ ಬೆಳಿಗ್ಗೆ ಆಗುವ ತನಕವೂ ನಿನ್ನ ಜೊತೆ ಹರಟೆ ಹೊಡಿಯುತ್ತಾ ಕುಳಿತುಕೊಳ್ಳಬಹುದು ಅಂತ ಅನಿಸ್ತಾ ಉಂಟು .. " ಅಂದಳು.
" ನಂಗೆ ನಿನ್ನ curly hair ಇಷ್ಟ, ನನ್ನ ಹಾಗೆಯೇ ಇದೆ. ಆದರೆ ನನ್ನ hair ನಿನ್ನಷ್ಟು ದೊಡ್ಡದಿಲ್ಲ.. " ಅಂದೆ.
" ನಿನ್ನ ಈ curly hair ತಲೆಯೊಳಗೆ ಪಕ್ಷಿಗಳು ಮೊಟ್ಟೆ ಇಟ್ಟು ..ಕಾವು ಕೊಟ್ಟು ..ಮರಿ ಮಾಡಲ್ವಾ... ಅಂತ ನಿಂಗೂ ತುಂಬಾ ಜನ ಕೇಳಿರ್ಬೇಕಲ್ವಾ..? " ಅಂದಳು.
" same here.. " ಅಂದೆ.
ಅವಳು ನಗುತ್ತಾ ಕೈ ಎತ್ತಿದಳು. ಅವಳ ಕೈಗೊಂದು ನನ್ನ ಕೈ ಎತ್ತಿ clap ಹೊಡೆದೆ.
ಅವಳಿಗೆ ವಿಸ್ಕಿಯ ನಶೆ ನಿಧಾನವಾಗಿ ಏರಿತು. ನನಗೂ ಕೂಡ.
" ಉಲ್ಲಾಸ್ ಒಂದು ಸಾಂಗ್ ಹಾಡು... "ಅಂದಳು.
" ನಾನು ಬಾತ್ ರೂಮ್ ಅಲ್ಲಿ ಮಾತ್ರ ಸಾಂಗ್ ಹಾಡ್ತೀನಿ.. " ಅಂದೆ.
" ನಾನು ಕೂಡ ನೀನೇನು indian Idol ನಲ್ಲಿ ಸಾಂಗ್ ಹಾಡುವಂತಹ ಟ್ಯಾಲೆಂಟ್ ಅಂತ ತಿಳ್ಕೊಂಡಿಲ್ಲ.. " ಅಂದಳು.
" ಓಕೆ...ಓಕೆ.. This is for you soumya..
' ಸೀರೇಲಿ ಹುಡುಗೀರ ನೋಡಲೇಬಾರದು ನಿಲ್ಲಲ್ಲ temperatureರು ..
ಸ್ಕೂಲ್ ಅಲ್ಲಿ ಹೇಳಿಕೊಡ್ಬಹುದಿತ್ತು ಹೇಳಿಲ್ಲ ನಮ್ ಟೀಚರು..
ನಂಗೆ answerರು ಒಂದು ಬೇಕಿದೆ..
ಸೀರೆ transparent ಯಾಕಿದೇ..
ಅದೆಷ್ಟು ಬೇಡ ಅಂದ್ರೂ ಕಣ್ಣು ಕದ್ದು ಕದ್ದು ನೋಡ್ತಾ ಇದೆ.. ಅದ್ಯಾಕೋ ಮನಸ್ಸು ಮೊನ್ನೆ ಯಿಂದ ಮುದ್ದು ಮುದ್ದು ಮಾತಾಡ್ತಿದ್ದೆ '.... "
"ಅಂದ್ರೆ ನಿಂಗೆ transparent ಸೀರೆ provoke ಮಾಡುತ್ತೆ... " ಅಂದಳು.
" ಹಾಗೇನಿಲ್ಲ, ನೀನು ಉಟ್ಟರೆ ಬಹುಶಃ provoke ಆಗಲೂ ಬಹುದು.. " ಅಂದೆ.
" ನಿಂಗೆ ಸ್ಕೂಲ್ ಅಲ್ಲಿ ಟೀಚರ್ ಹೇಳಿಕೊಟ್ಟಿದ್ದು ಇದೇನಾ.. " ಅಂದಳು.
" ನಾನು ಒಳ್ಳೆಯ ಹುಡುಗ ಉಲ್ಲಾಸ್, ಬಹುಶಃ ವಿಸ್ಕಿ ನನ್ನನ್ನು ಹಾಗೆ ಮಾತಾಡಿಸುತ್ತಿದೆ " ಅಂದೆ.
" ಇಲ್ಲ ನೀನು ರಸಿಕ.. " ಅಂದಳು.
"ನನಗೆ ದ್ರಾಕ್ಷಿ ಇಷ್ಟ, ನಾನು ರವಿ ಮಾಮ ಪ್ಯಾನ್.." ಅಂದೆ.
"ನೀನು ಪೋಲಿ ಕೂಡ ಹೌದು.. "ಅಂದಳು.
" ಆದರೆ ಕಾಮುಕ ಅಲ್ಲ..."ಅಂದೆ
"ರಸಿಕ..ಕಾಮುಕ ಇವೆರಡರಕ್ಕೂ ನಡುವೆ ಇರುವ difference ಏನು " ಕೇಳಿದಳು.
" ರಸಿಕ ಜಸ್ಟ್ imagination ಮಾಡ್ತಾನೆ, ಕಾಮುಕ ಅದನ್ನು Execute ಮಾಡ್ತಾನೆ " ಅಂದೆ.
" ಇವೆರಡರಲ್ಲಿ ನೀನು ಯಾವುದು..? " ಕೇಳಿದಳು.
" ಎರಡೂ ಅಲ್ಲ.. " ಅಂದೆ.
" ಮತ್ತೆ...? "
" ನಾನು ದೇಶ ಭಕ್ತ.. " ಅಂದೆ.
" ಅದು ಹೇಗೆ.. " ಕೇಳಿದಳು.
" ಯಾರಾದರೂ ಭೋಲೋ ಭಾರತ್ ಮಾತಾ ಕಿ.. ಅಂದ ಕೂಡಲೇ ಆಚೆ ಈಚೆ ನೋಡದೆ ಸೂರು ಕಿತ್ತು ಹೋಗುವಂತೆ, ಆಕಾಶ ಮುಟ್ಟುವಂತೆ... ಜೋರಾಗಿ ಜೈ ಹೇಳಬಲ್ಲೆ " ಅಂದಳು.
ಅವಳು ಅಲ್ಲೇ ಜೋರಾಗಿ ವಿಶಲ್ ಹೊಡೆದು, ಚಪ್ಪಾಳೆ ಹಾಕಿದಳು " ಮೊನ್ನೆ ನೀನಿರಬೇಕಿತ್ತು ಅಲ್ಲಿ ".. ಅಂದಳು
ಇನ್ನೊಂದು ಪೆಗ್ ಏರಿಸಿದಳು. ನನ್ನ ಪಾತ್ರೆಗೂ ಸುರಿದಳು.
" ಮತ್ತೆ ಪೋಲಿ ಅಂದ್ರೆ...? "
" ಅದು... ಅದು.. ನಾನು ಅಷ್ಟೊಂದು some ಸೋಧನೆ ಮಾಡಿಲ್ಲ".. ಅಂದೆ.
"ಮತ್ತೆ ಬಾಕಿ ಎಲ್ಲಾ ಹೇಗೆ ಗೊತ್ತು ..? " ಕೇಳಿದಳು.
" ನಾನು ಪೇಪರ್ ಓದಲ್ಲ... " ಅಂದೆ.
" ಮತ್ತೆ..?"
"ಅದು ನಾನು ನನ್ನ ಗುರು AB Pacchu ಅವರ ಫೇಸ್ಬುಕ್ ವಾಲ್ ಡೈಲಿ ಓದ್ತಾ ಇರ್ತೆನೆ.. ಹಾಗೆ ಅಲ್ಪ ಸ್ವಲ್ಪ ಜ್ಞಾನ ದ ಉದಯ ಆಗಿದೆ. " ಅಂದೆ.
" ಅದು ಸರಿ ನೀನು ಯಾಕೆ 'ಸೀರೇಲಿ ಹುಡುಗಿರ ನೋಡಲೇಬಾರದು..' ಹಾಡು ನನಗೆ ಹಾಡಿದೆ" ಕೇಳಿದಳು.
"ನೀನಗೂ ಸೀರೆಗೂ ಆಗಿ ಬರಲ್ವಾ...? " ಕೇಳಿದೆ.
"ಈಗ ಏನು ನಿನಗೆ ನನ್ನನ್ನು ಸೀರೆಯಲ್ಲಿ ನೋಡಬೇಕು ಅಷ್ಟೇ ತಾನೇ.. ಆಯ್ತು ನಾಳೆ ಸೀರೆ ಉಟ್ಟೊಂಡು ಬರ್ತಿನಿ.. ನಿಂಗೋಸ್ಕರ.. 'ಸೀರೇಲಿ ಹುಡುಗಿರ ನೋಡಲೇಬಾರದು..' ಹಾಡು ಮತ್ತೊಮ್ಮೆ ಹಾಡ್ತೀಯಾ? " ಅಂದಳು.
"ಸೀರೆ Transparent a?.. " ಕೇಳಿದೆ.
" ಪೋಲಿ.... " ಅಂದಳು.
" ಹಾಗೆ ಅಲ್ಲಾ, ಹಾಡಿನ ಸಾಲಿನಲ್ಲೇ ಇದೆಯಲ್ಲಾ.. " ಅಂದೆ.
ನೆತ್ತಿ ಮೇಲೆ ಒಂದು ಹಾಗೇ ಮೊಟಕಿದಳು..
" ಅದು ಹೌದು, ನಾಳೆ ಯಾಕೆ ಬರ್ತಿಯಾ..ನಾಳೆ ಏನು ಕೆಲಸ ಇದೆ.. " ಅಂದೆ.
" ಕುಡಿಯೋಕೆ.. ಇದೇ ಜಾಗ.. ಇದೇ ಟೈಮಿಂಗ್ಸ್...ಇದೇ ಟೇಬಲ್.. ನಿನ್ನನ್ನು ಬಾ ಎಂದು ಕರೆಯಲ್ಲ. ನಿನ್ನಿಷ್ಟ..
.. ನಿನ್ನಲ್ಲಿ ಏನೋ ಇದೆ. ನೀನು intresting person.
ಆಸಕ್ತಿ ಹುಟ್ಟಿಸ್ತೀಯಾ..ಬೆರಗುಗೊಳಿಸ್ತೀಯಾ.. ನಿನ್ನ ಕಥೆ ಕೇಳಬೇಕು ಅಂತ ಅನಿಸ್ತಾ ಉಂಟು, ಬರುವುದಾದರೆ ಬಾ, ಮನಸ್ಸು ಹಗುರ ಮಾಡ್ಕೊಳ್ಳೊಕ್ಕೆ ಇದ್ರೆ.. ನೋವು ಮರೆಯೋಕೆ ಇದ್ರೆ..ಲಾಜಿಕೇ ಇಲ್ಲದ ಹಾಗೇ ಸಿಲ್ಲಿ ಮ್ಯಾಟರ್ ಮಾತಾಡೋಕೆ ಇದ್ರೆ, 'ಸೀರೆಲಿ ಹುಡುಗಿಯ ನೋಡಲೇಬಾರದು ಹಾಡು' ಹಾಡೋಕೆ ಇದ್ರೆ.. ಹುಡುಗಿಯನ್ನೇ ಸಿರೇಲಿ ನೋಡೊಕೆ ಇದ್ರೆ.. ಬಾ "ಅಂದಳು.
ಬಾರ್ ಬಿಲ್ಲು ಅವಳೇ ಕೊಟ್ಟಳು.
ಇಬ್ಬರು ತೂರಾಡುತ್ತಾ ಹೊರಬಂದೆವು. ಅವಳು ಸ್ಕೂಟಿ ಬಿಡುವಾಗ ಅದೆಷ್ಟು ಸ್ಟೆಡಿ. ಅವಳು ಬ್ರೇಕ್ ಹೊಡೆದಾಗಲೆಲ್ಲ ನಾನು ಅವಳ ಸೊಂಟ ಹಿಡಿಯಲಿಲ್ಲ. ನಾನು ಒಳ್ಳೆಯ ಹುಡುಗ ಉಲ್ಲಾಸ್.
ಪಣಂಬೂರು ದಾಟಿ, ಚಿತ್ರಾಪುರ ದ ನಂತರ ಕೊನೆಗೂ ಕುಳಾಯಿ ಬಳಿ ಬಂತು ನಮ್ಮ ಸ್ಕೂಟಿ. ನಮ್ಮ PG ಸಮೀಪ ವೇ ಡ್ರಾಪ್ ಮಾಡಿ. ಅವಳ PG ಗೆ ಸುರತ್ಕಲ್ ಕಡೆಗೆ ಹೊರಟು ಹೋದಳು. ರಾತ್ರಿ 12 ಗಂಟೆಯ ಸಮಯ. PG ಒಳಗೆ ಹೋಗಿ ನನ್ನ ರೂಮ್ ಅಲ್ಲಿ ಬಿದ್ಕೊಂಡೆ. ಸೊಂಪಾದ ನಿದ್ದೆ. ಬೆಳಿಗ್ಗೆ ಆದದ್ದು ಕೂಡ ಗೊತ್ತೆ ಆಗಿರಲಿಲ್ಲ.
ಅವಳು ಒಂಥರಾ ಎಣ್ಣೆಯಂತೆಯೇ.ಅವಳು ಎಷ್ಟೇ ಕುಡಿದರೂ ಮನಸ್ಸಿನಿಂದ ಒಳ್ಳೆಯವಳು. ಯಾವಾಗಲೂ straight forward, ಕುಡಿದರೂ ಕುಡಿಯದೇ ಇದ್ದರೂ. ಬೇಕಿದ್ದರೆ ಗಂಡುಬೀರಿ ಅನ್ನಿ. ಆದರೆ ಅವಳ ಒಳಗೂ ಒಬ್ಬಳು ಹುಡುಗಿ ಇದ್ದಾಳೆ. ಯಾವತ್ತೂ ಜೀನ್ಸ್ ಟೀ ಶರ್ಟ್ ನಲ್ಲಿ ಸುತ್ತಾಡೋ ಅವಳಿಗೆ ನಾನಿವತ್ತು ಸೀರೆ ಉಟ್ಟುಕೊಳ್ಳುವಂತೆ ಪ್ರೇರೇಪಿಸಿದ್ದೆನೆ.
ಅವಳು ಕಲಿಸಿದ ಕುಡೀತಾ ಒಂಥರಾ ಚೆನ್ನಾಗಿದೆ. ಅವಳ ಹಾಗೇಯೇ.ಅವಳ ನಶೆಯ ಹಾಗೆ.
ಈಗ ರಾತ್ರಿ 10 ಗಂಟೆ ಆಗಿದೆ. ನನ್ನ PG ಯ ಮುಂದೆ ಅವಳ ಸ್ಕೂಟಿ ಗಾಗಿ ಕಾಯ್ತಾ ಇದ್ದೆನೆ. ನಾನು ಇವತ್ತು ತುಂಬಾ ಕುಡೀಬೇಕು, ಅವಳಿಗೆ ನನ್ನೆಲ್ಲಾ ಸ್ಟೋರಿ ಹೇಳಿಬಿಡಬೇಕು.ನನ್ನಲ್ಲೂ ನೋವುಗಳಿವೆ. ಯಾರಲ್ಲೂ ಹೇಳದ ಕಥೆಗಳಿವೆ. ನನಗೆ ಮಾತ್ರ ಗೊತ್ತಿರುವ ಸತ್ಯಗಳಿವೆ. ವೇದನೆಗಳಿವೆ.
ಮನಸ್ಸು ಹಗುರ ಮಾಡಿಕೊಳ್ಳಬೇಕು.ಸದ್ಯಕ್ಕೆ ನನ್ನ ಕತೆ ಹೇಳಲು ಇವಳಿಗಿಂತ ಬೆಸ್ಟ್ ಬೇರೆ ಯಾರೂ ಇಲ್ಲ ಅಂತ ಅನ್ನಿಸ್ತಾ ಇದೆ.
ಸೀರೇಲಿ ಅವಳು ಇನ್ನೆನು ಬರಬಹುದು...
ಕಾಯ್ತಾ ಇದ್ದೀನಿ..
.............................................
" ಹೃದಯದ ಮೂಲೆ ಮೂಲೆ,
ದಹಿಸಿದೆ ನಿನ್ನ ಜ್ವಾಲೆ..
ಇರಬಹುದೇ ಹೇಳು ಕರಗದೇ,
ಬರಬಹುದೇ ದಾರಿ ಮರೆಯದೇ..
ಬಿಸಿಯೇ ಇರದ ಉಸಿರು ನಾನು,ನೀನು ಇರದೇ..
ಗಮನಿಸು ಒಮ್ಮೆ ನೀನು.. ಬಯಸಿಹೆ ನಿನ್ನೆ ನಾನು,
ನಂಬದೇ ಏಕೆ ದೂರುವೇ ನನ್ನನ್ನು...... "
ದೀರ್ಘವಾದ ರಿಂಗ್ ಟೋನ್. ಮುಂಗಾರು ಮಳೆ-2 " ಗಮನಿಸು ಒಮ್ಮೆ ನೀನು... " ಹಾಡಲ್ಲಿ ನನಗಿಷ್ಟದ ಸಾಲುಗಳನ್ನು ಎಷ್ಟು ಬೇಕೋ ಅಷ್ಟೇ crop ಮಾಡಿಕೊಂಡು mobile ರಿಂಗ್ ಟೋನ್ ಮಾಡಿಕೊಂಡಿದ್ದೆ.
ಮೊಬೈಲ್ ನೋಡಿದೆ. Incoming call.. Pratheek ಅಂತ ಬರ್ತಾ ಇತ್ತು.
PG ಫ್ರೆಂಡ್ ನ ಕಾಲ್ . ಕಾಲ್ ರಿಸೀವ್ ಮಾಡಿದೆ. 'ವಾಪಸ್ ಬರುವಾಗ ಏನಾದರೂ ಫುಡ್ ತಗೊಂಡು ಬಾ..' ಅಂದ. ಆಯ್ತು ಹೇಳಿ ಫೋನ್ ಕಟ್ ಮಾಡಿದೆ.
ಮೊಬೈಲ್ ಅಲ್ಲಿ ಟೈಂ ನೋಡಿದೆ. ರಾತ್ರಿ 10.15. ಈಗ ನಾನು ಸೌಮ್ಯ ಳಿಗಾಗಿ ನನ್ನ PG ಎದುರು ಕಾಯುತ್ತಿದ್ದೆನೆ. ಕಾದು ಕಾಲು ಗಂಟೆ ಮೇಲೆ ಆಯಿತು. ಅವಳೀಗ ಬರುತ್ತಾಳೆ. ಹೌದು ಅವಳಿಂದು ಸೀರೆಯಲ್ಲಿ ಬರುತ್ತಾಳೆ. ಅವಳಿಗೆ ನಾನು ಹಾಡಬೇಕು. ಅದೇ "ಸೀರೇಲಿ ಹುಡುಗೀರ ನೋಡಲೇಬಾರದು.." ಆದರೆ ನನಗೆ ನನ್ನ ಸ್ಟೋರಿ ಅವಳ ಬಳಿ ಹೇಳಿ, ಮನಸ್ಸು ಹಗುರ ಮಾಡಿಕೊಳ್ಳಬೇಕು.
ಆಗ ಅವಳು ಬಂದಳು,ಸ್ಕೂಟಿಯಲ್ಲಿ..
ಸೀರೆಯಲ್ಲಿ ಅವಳು ತುಂಬಾನೇ ಲಕ್ಷಣವಾಗಿ ಕಾಣುತ್ತಿದ್ದಳು.
ಬಂದವಳೇ ಸ್ಕೂಟಿ ನಿಲ್ಲಿಸಿ
"ಉಲ್ಲಾಸ್ ಸೀರೆಯಲ್ಲಿ ನಾನು ಹೇಗೆ ಕಾಣ್ತೀನಿ.. " ಅಂದಳು.
" ಬಾರ್ ಅಲ್ಲಿ ಹೇಳ್ತೀನಿ.. ಹಾಡು ಹೇಳುತ್ತಾ.. " ಅಂದೆ.
" ಆಯ್ತು ಹೊರಡುವ, ಹಿಂದೆ ಗಟ್ಟಿ ಕೂತ್ಕೋ, ಬ್ಯಾಲೆನ್ಸಿಗೆ ಬೇಕಾದರೆ ನನ್ನನ್ನು ಹಿಡ್ಕೋ.. " ಅಂದಳು.
ಕುತ್ಕೊಂಡೆ, ಸ್ಕೂಟಿ ಕುಳಾಯಿ ಬಿಟ್ಟು ಮಂಗಳೂರಿನ ನಿನ್ನೆಯ ನಮ್ಮ ಪಬ್ ಕಡೆ ಹೊರಡಲು ಶುರು ಮಾಡಿತು.
ಅವಳು ನಿಧಾನವಾಗಿ ಸ್ಕೂಟಿ ಓಡಿಸುತ್ತಿದ್ದಳು.
ನಾನು ಮೌನವಾಗಿದ್ದೆ.
" ಯಾವುದಾದರೂ ಹುಡುಗಿ ಈ ತರಹ ನಡು ರಾತ್ರೀಲೀ ಸೀರೆ ಹಾಕ್ಕೊಂಡು, .. ಪಬ್ ಗೆ ಹೋಗ್ತಾರಾ..ಅಂತ ಕೇಳಲ್ವಾ ಉಲ್ಲಾಸ್ ? " ಅಂದಳು.
" ಹುಡುಗಿಯೇ ಆಗಿದ್ದರೆ ಕೇಳುತ್ತಿದ್ದೆ.... ಆದರೆ ನೀನು ಸೌಮ್ಯ ಅಲ್ವಾ" ಅಂದೆ.
"ಅಂದರೆ ನಾನು ಭಾವನೆಗಳಿಲ್ಲದ ಗಂಡುಬೀರಿ ಅಂತ ಅರ್ಥ ನಾ.. "ಕೇಳಿದಳು.
" ಕೆಲವೊಮ್ಮೆ ನೀನು ತುಂಬಾನೇ ಚೆನ್ನಾಗಿ answer ಮಾಡ್ತಿ.. " ಅಂದೆ.
ಅವಳು ಮೌನವಾದಳು.
ನಾನೂ ಸುಮ್ಮನೇ ಇದ್ದೆ.
ಸ್ಕೂಟಿ ಬೈಕಂಪಾಡಿ ಬ್ರಿಡ್ಜ್ ಮೇಲೆ ಹೋಗುತ್ತಿತ್ತು.
ಪುನಃ ಅವಳೇ ಶುರು ಮಾಡಿದಳು " destination ತುಂಬಾ ದೂರ ಇದೆ. ನೀನು ಕಮ್ಮಿ ಮಾತಾಡದಿದ್ರೆ ನಂಗೆ ಬೋರು ಆಗುತ್ತೆ.. ಬೇರೆ ಏನಾದರೂ ಹೇಳು" ಅಂದಳು.
"ರೋಹಿತ್ ಶರ್ಮ ಎಷ್ಟೇ ಒಳ್ಳೆಯ ಬ್ಯಾಟ್ಸ್‌ಮನ್ ಆದರೂ ಟೆಸ್ಟ್ ಟೀಮ್ ಅಲ್ಲಿ ಚಾನ್ಸ್ ಸಿಗ್ತಾ ಇಲ್ಲ.. " ಅಂದೆ.
" ಅದು ಬೇಡ, ಬೇರೆ... " ಅಂದಳು.
" ಇತ್ತೀಚೆಗೆ ಮದುವೆ ಮನೆಯಲ್ಲಿ ಊಟ ದ ಮೆನು ದೊಡ್ಡದಾಗಿದೆ, ಆದರೆ ಪೂರಿ ಹಪ್ಪಳ ಗಳ ಡಯಾಮೀಟರ್ ಚಿಕ್ಕದಾಗಿದೆ . " ಅಂದೆ.
" ಅದೂ ಬೇಡ ಬೇರೆ... " ಅಂದಳು.
" ಭಾರತ ದ ಮೇಲೆ ಯುದ್ಧ ಮಾಡಲು ಪಾಕಿಸ್ತಾನ ಎಲ್ಲಾ ರೀತಿಯಿಂದಲೂ ಸಜ್ಜಾಗಿ ನಿಂತಿದೆಯಂತೆ..."
"ಈ ಟೈಂ ಅಲ್ಲಿ ಕಾಮಿಡಿ ವಿಷಯ ಎಲ್ಲಾ ಬೇಕಾ.. ಏನಾದರೂ ಗಂಭಿರವಾದದ್ಧು ಇದ್ದರೆ ಹೇಳು " ಅಂದಳು.
" ಮೊನ್ನೆ ಉಡುಪಿಯಲ್ಲಿ ಕಪ್ಪೆ ಮದುವೆ ಮಾಡ್ಬಾರ್ದಿತ್ತು, ಅದಕ್ಕೆ ಇಷ್ಟು ಜೋರು ಮಳೆ.. " ಅಂದೆ.
" ಹಾಗಾದರೆ ಇನ್ಯಾರದ್ದೂ ಮದುವೆ ಆಗ್ಬೇಕಾಗಿತ್ತು... " ಕೇಳಿದಳು.
" ನನ್ನದು ಮತ್ತು ನಿವೇದಿತಾ ನದ್ದು..!! " ಅಂದೆ
ಬ್ರೇಕ್ ಹಾಕಿದಳು. ಪಣಂಬೂರು ದಾಟಿ ಈಗ MCF ಮುಂದೆ ನಿಂತಿತ್ತು ಸ್ಕೂಟಿ.
" ಉಲ್ಲಾಸ್...... "
" ಹೂಂ... " ಅಂದೆ.
" ಸ್ಟೋರಿ ಹೇಳುವ ಮೂಡ್ ಅಲ್ಲಿ ಇದ್ದೀಯಾ... " ಕೇಳಿದಳು.
"ಹೂಂ.. ಕೇಳುವ ಆಸಕ್ತಿ ಇದೆಯಾ...?"
"ನೀನು ನಿನ್ನಷ್ಟಕ್ಕೆ ಹೇಳ್ತಾ ಹೋಗು.. ನಾನು ನನ್ನಷ್ಟಕ್ಕೆ ಕೇಳ್ತಾ ಹೋಗ್ತೀನಿ.. " ಅಂದಳು.
ಈಗ ಸ್ಕೂಟಿ MCF ಬಿಟ್ಟು slowly ಮುಂದೆ ಹೋಗಲು ಶುರು ಮಾಡಿತು.
ನಾನು ನಿಧಾನವಾಗಿ ಸ್ಟೋರಿ ಹೇಳಲು ಶುರುಮಾಡಿದೆ.
" ನಾನು ಮತ್ತು ನಿವೇದಿತಾ ಕ್ಲಾಸ್ ಮೇಟ್ ಮಾತ್ರವಲ್ಲ ನಾವಿಬ್ಬರೂ ಬೆಸ್ಟ್ ಪ್ರೆಂಡ್ಸ್.
ನಿವೇದಿತಾ ಏನೇ ಮಾಡಿದರೂ ನನ್ನನ್ನು ಕೇಳಿಯೇ ಮಾಡ್ತಾಳೆ. ಅದೇ ರೀತಿ ಪ್ರೀತಿಯನ್ನು ಕೂಡ..!
ಅದೊಂದು ದಿನ ಕಾಲೇಜಿನಲ್ಲಿ ಒಂದು ಹುಡುಗನನ್ನು ತೋರಿಸಿ ನನಗೆ ಹೇಳಿದಳು. " ಉಲ್ಲಾಸ್, ಆತನ ಹೆಸರು ವಿಕಾಸ್ ,ನಮಗೆ ಸೀನಿಯರ್. ನನಗೆ ಆತ ಅಂದರೆ ಇಷ್ಟ, ಅವನ ಡ್ಯಾನ್ಸ್ ಇಷ್ಟ. ನನಗೆ ಅವನ ಮೇಲೆ ಕ್ರಷ್ ಆಗಿದೆ, ಹೆಲ್ಪ್ ಮಾಡ್ತೀಯಾ..." ಅಂದಳು.
ನಾನು ಯಾವತ್ತಿಗೂ ನಿವೇದಿತಾ ಏನೇ ಕೇಳಿದರೂ No ಎಂದು ಹೇಳಿದವನಲ್ಲ. ನಿವೇದಿತಾ ಖುಷಿ ಆಗಿ ಇರುತ್ತಾಳೆ ಎಂದರೆ ನಾನು ಏನೂ ಮಾಡಲು ರೆಡಿ ಇದ್ದೆ. ನಿವೇದಿತಾ ನಿಗೆ ಬೇಜಾರು ಆಗುವುದನ್ನು ನೋಡುವುದು ನನಗೆ ಇಷ್ಟವಿರಲಿಲ್ಲ.
ಕಾಲೇಜಿಗೆ ಹೋಗುವಾಗ ಪೆನ್ನು, ಪೆನ್ಸಿಲ್, eraser scale, calc ಎಲ್ಲಾ ಎರಡೆರಡು ಹಿಡ್ಕೊಂಡು ಹೋಗುತ್ತಿದ್ದೆ. ಒಂದು ನನಗಾಗಿ, ಇನ್ನೊಂದು ನಿವೇದಿತಾ ಗಾಗಿ. ಎಲ್ಲಾದರೂ ನಿವೇದಿತಾ ಯಾವುದಾದರೂ ಒಂದನ್ನು ಮನೆಯಲ್ಲೇ ಬಿಟ್ಟು ಬಂದರೇ ಅಂತ.
ಲಂಚ್ ಬಾಕ್ಸ್ ಕೂಡ ಹಾಗೆಯೇ, ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಿದರೆ ಇನ್ನೊಂದು extra box ಅಲ್ಲಿ ಹಾಕಿಕೊಂಡು ನಿವೇದಿತಾ ನಿಗೆ ಅಂತ ಎಂದು ತೆಗೆದುಕೊಂಡು ಹೋಗುತ್ತಿದ್ದೆ. ಅಮ್ಮ ಕೂಡ ಅಡುಗೆ ಮನೆಯಿಂದ ಕೂಗಿ ಹೇಳುತ್ತಿದ್ದಳು ನಿವೇದಿತಾ ನಿಗೆ ಏನಾದರೂ ತಗೊಂಡು ಹೋಗೋ ಅಂತ. ಅಮ್ಮನಿಗೂ ಗೊತ್ತು ನಾವು ಎಷ್ಟು ಒಳ್ಳೆಯ ಫ್ರೆಂಡ್ ಅಂತ.
ಈ ರೀತಿಯ ಫ್ರೆಂಡ್ ಶಿಪ್ ನಡುವೆ ಒಂದು ದಿನ ವಿಕಾಸ್ ಎಂಬುವವನ ಎಂಟ್ರಿ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ!
ನನಗೆ ನಿವೇದಿತಾ ಅಂದರೆ ತುಂಬಾನೇ ಇಷ್ಟ. ನಮ್ಮಿಬ್ಬರ ಗೆಳೆತನದ ನಡುವೆ ಯಾರೂ ಬರುವುದು ನನಗೆ ಇಷ್ಟವಿರಲಿಲ್ಲ, ಆದರೆ ವಿಕಾಸ್ ಅದಾಗಲೇ ಬಂದಾಗಿತ್ತು!!
ನಿವೇದಿತಾ ನನ್ನನ್ನು ಪದೇ ಪದೇ ಪೀಡಿಸಿದಳು. ಹೇಗಾದರೂ ಹೆಲ್ಪ್ ಮಾಡು ಅಂತ. ಒಂದು ದಿನ ನಾನೇ ವಿಕಾಸ್ ಗೆ ನಿವೇದಿತಾ ಳನ್ನು ಪರಿಚಯಿಸಿದೆ.
ಅವರ ಪರಿಚಯ ನಿಧಾನವಾಗಿ ಗಾಡವಾಯಿತು. ಕೊನೆಗೊಂದು ದಿನ ಅದು ಪ್ರೇಮಕ್ಕೆ ತಿರುಗಿತು!
ನಿವೇದಿತಾ ಳಂತಹ ಹುಡುಗಿಯನ್ನು ಯಾರಾದರೂ ಪ್ರೀತಿಸದೇ ಇರಲು ಸಾಧ್ಯವೇ. ಅವಳಂತಹ ಸುಂದರಿ ನಮ್ಮ ಕಾಲೇಜಿನಲ್ಲಿಯೇ ಇರಲಿಲ್ಲ.
ಹಿಂದೆ ನಾನು ನಿವೇದಿತಾ ಒಟ್ಟಿಗೆ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಕುಳಿತುಕೊಂಡು ಕಾಲೇಜು ಗೆ ಹೋಗಿ, ಒಟ್ಟಿಗೆ ಒಂದೇ ಬಸ್ಸಿನಲ್ಲಿ ವಾಪಸು ಬರುತ್ತಿದ್ದೆವು.
ಇಬ್ಬರ ಮನೆ ಇದ್ದದ್ದು ಕೂಡ ಒಂದೇ ಏರಿಯಾದಲ್ಲಿ. ರಜೆ ಇದ್ದಾಗ ನಾನು ಅವಳ ಮನೆಗೆ ಹೋಗುತ್ತಿದ್ದೆ ಇಲ್ಲವೇ ಅವಳೇ ನನ್ನ ಮನೆಗೆ ಬರುತ್ತಿದ್ದಳು. ಚಿಕ್ಕಂದಿನಿಂದಲೂ ನಾವು ಗೆಳೆಯರೇ.ಯಾವಾಗಲೂ ಒಟ್ಟಿಗೆ ಇರುತ್ತಿದ್ದೆವು.
ಆದರೆ ಈಗ,ಕಾಲೇಜು ಬಿಟ್ಟರೂ ನಿವೇದಿತಾ ಬೇಗ ಬರುವುದಿಲ್ಲ. ವಿಕಾಸ್ ಜತೆ ಮಾತಾಡುತ್ತಾ ಕಾಲೇಜು ಕ್ಯಾಂಪಸ್ ನಲ್ಲೇ ಇರುತ್ತಾಳೆ. ನಾನು ಬಸ್ ಸ್ಟ್ಯಾಂಡ್ ನಲ್ಲಿ ಅವಳಿಗಾಗಿ ಕಾಯ್ತಾ ಇರುತ್ತೆನೆ. ಅವಳೊಬ್ಬಳನ್ನೇ ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ. ಹಿಂದಿನಿಂದಲೂ ಅವಳಿರುವಾಗ ನಾನೊಬ್ಬನೇ ಬಸ್ಸಿನಲ್ಲಿ ಹೋಗಿ ಅಭ್ಯಾಸ ವಿಲ್ಲ. ಕೊನೆಗೂ ನಿವೇದಿತಾ ಬಸ್ ಸ್ಟ್ಯಾಂಡ್ ಗೆ ಬರ್ತಾಳೆ, ವಿಕಾಸ್ ಜೊತೆಗೆ!
ಈಗ ಅವರಿಬ್ಬರು ಬಸ್ ನಲ್ಲಿ ಒಂದೇ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ.
ನಾನು ಕೊನೆಯ ಸೀಟಿನಲ್ಲಿ ಅವರಿಬ್ಬರನ್ನು ನೋಡುತ್ತಾ ಕುಳಿತುಕೊಂಡಿರುತ್ತೆನೆ!
ಅವರು ರಜೆಯಲ್ಲಿ ಪಾರ್ಕ್ ಸುತ್ತಾಡುತ್ತಾರೆ,ಒಟ್ಟಿಗೆ ಮೂವಿಗೆ ಹೋಗುತ್ತಾರೆ. ಆದರೆ ನಿವೇದಿತಾ ಇದನ್ನು ಯಾವುದನ್ನೂ ನನಗೆ ಹೇಳುವುದಿಲ್ಲ. ಯಾಕಾದರೂ ಹೇಳುತ್ತಾಳೆ. ಶಿವ ಫೂಜೆ ಗೆ ಕರಡಿ ಏಕೇ?
ವಿಕಾಸ್ ಕಂಡರೆ ನನಗೆ ಇಷ್ಟವಿಲ್ಲ,ನಿವೇದಿತಾ ಳ ಎದುರಲ್ಲೇ ಅವ ನನಗೆ ತಮಾಷೆ ಮಾಡುತ್ತಾನೆ. ಅವನು ಒಳ್ಳೆಯ ಹುಡುಗ ಅಲ್ಲ. ನಿವೇದಿತಾ ಳಿಗೆ ತಕ್ಕನಾದ ಭಾಯ್ ಫ್ರೆಂಡ್ ಅವನು ಅಲ್ಲವೇ ಅಲ್ಲ. ಅವನಿಗೆ ಎಲ್ಲಾ ರೀತಿಯ ದುಶ್ಚಟಗಳಿವೆ. ಆದರೂ ನಿವೇದಿತಾ ಅವನಿಗೆ ಏನೂ ಹೇಳುವುದಿಲ್ಲ. ನನಗೆ ಮಾತ್ರ "ಉಲ್ಲಾಸ್ ನೀನು ಒಳ್ಳೆಯ ಹುಡುಗ.. ಯಾವುತ್ತೂ ಕುಡಿಯಲ್ಲ ಅಂತ ಈ ನಿನ್ನ ಬೆಸ್ಟ್ ಫ್ರೆಂಡ್ ಗೆ ಮಾತು ಕೊಡು" ಅಂತ ಮಾತು ತಗೊಂಡಿದ್ದಾಳೆ.
ಗೊತ್ತಿದ್ದೊ ಗೊತ್ತಿಲ್ಲದೆಯೋ ನನ್ನ ಮೇಲೂ ಒಂದು ತರನಾದ ಕೇರ್ ಅವಳಿಗೂ ಇತ್ತು.
ಅದ್ಯಾಕೋ ನಿವೇದಿತಾ ಇನ್ನು ಮುಂದೆ ನನ್ನಿಂದ ತುಂಬಾನೇ ದೂರ ಹೋಗುತ್ತಾಳೆ ಅಂತ ಅನಿಸ ತೊಡಗಿತು.ದೂರ ಹೋಗುತ್ತಾಳೆ ಎಂಬ ಭಯದಿಂದಲೇ, ನನಗೆ ಅವಳು ಯಾವತ್ತೂ ನನ್ನೊಂದಿಗೆಯೇ ಸದಾ ಇರಬೇಕು ಎಂಬ ಭಾವ ಜಾಸ್ತಿ ಆಗುವಂತೆ ಮಾಡಿತು. ಈ ರೀತಿ ನನಗೆ ಗೊತ್ತಿಲ್ಲದೇ ನನ್ನೆದೆಯಲ್ಲಿ ಪ್ರೀತಿಯ ಬೀಜವೊಂದು ಮೊಳಕೆಯೊಡೆದಿತ್ತು!!
ಪವಿತ್ರ ಸ್ನೇಹ ವೊಂದು ಸತ್ತು ಹೋಗಿದ್ದು ಹಾಗೆ!
ಅವರಿಬ್ಬರನ್ನು ಒಟ್ಟಿಗೆ ಕಂಡಾಗ ನನ್ನ ಪೊಸೆಸಿವ್ನೆಸ್ ಜಾಸ್ತಿ ಆಗುತ್ತಿತ್ತು. ಆದರೂ ಅವರಿಬ್ಬರನ್ನು ಬೇರೆ ಮಾಡಲು ನಾನು ಹೋಗಲಿಲ್ಲ. ಎಲ್ಲಾದರೂ ನಿವೇದಿತಾ ಳಿಗೆ ಗೊತ್ತಾಗಿ ನೊಂದುಕೊಳ್ಳುತ್ತಾಳೆ ಎಂದು.
ಆದರೆ ಅವರ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ. ವಿಕಾಸ್ ಗೆ ಇನ್ನೂ ಬೇರೆ ಹುಡುಗಿಯರೊಂದಿಗೂ ಕೂಡ ಅಫೇರ್ ಇತ್ತು. ಅದು ಗೊತ್ತಾಗಿ ನಿವೇದಿತಾ ಳೇ ಅವನನ್ನು ದೂರ ಮಾಡಿ ಬಿಟ್ಟಳು. ಆದರೆ ಪ್ರೀತಿಯಲ್ಲಿ ಮೋಸ ವಾಗಿದ್ದು ಕಂಡು ನಿವೇದಿತಾ ಡೀಪ್ depression ಗೆ ಜಾರಿ ಬಿಟ್ಟಳು! ಆಗ ಅನುದಿನವೂ ಅವಳೊಂದಿಗೆ ಇದ್ದು ಅವಳ ಮುಖದಲ್ಲಿ ನಗು ತರಿಸಿದ್ದು ನಾನೇ. ಆದರೆ ಅವಳಿಗೆ ಇನ್ನೂ ನನ್ನ ಪ್ರೀತಿಯನ್ನು ಹೇಳಿಬಿಡುವ ಧೈರ್ಯ ನನ್ನಲ್ಲಿ ಇರಲಿಲ್ಲ!
ಕಾಲೇಜು ಮುಗಿದಿತ್ತು. ಇಬ್ಬರಿಗೂ ಒಂದೇ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಬದುಕು ಹೇಗೋ ಕೂಲ್ ಆಗಿ ಸಾಗುತ್ತಿತ್ತು.ಆವಾಗಲೇ ಅವಳ ಮದುವೆ ಫಿಕ್ಸ್ ಆಗಿದ್ದು.
ಶಾಂತವಾಗಿದ್ದ ಮನಸ್ಸೆಂಬ ಶಾಂತ ಸಾಗರದಲ್ಲಿ ಭೀಕರ ಅಲೆಗಳು ಎದ್ದಿದ್ದೇ ಆವಾಗ.
ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ಚಡಪಡಿಸಿದೆ. ಒಂದು ದಿನ ಸೀದಾ ಹೋಗಿ ಅವಳಿಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದೆ.
ರಪ್ಪ ಅಂತ ಕೆನ್ನೆಗೊಂದು ಕೊಟ್ಟಳು. ನೀನು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದೆ. ಇನ್ನು ಮುಂದೆ ಅದೂ ಕೂಡ ಅಲ್ಲ. ಇನ್ನು ಮುಂದೆ ಮುಖ ತೋರಿಸಬೇಡ, ಮಾತಾಡಬೇಡ ಹೋಗು ಅಂದಳು!
ಅವತ್ತೇ ಮನಸ್ಸು ಹೃದಯ ಎರಡೂ ಒಡೆದು ಹೋಗಿತ್ತು. ನಾನು ಮಾಡಿದ ತಪ್ಪಾದರೂ ಏನು? ನನ್ನೊಂದಿಗೆ ಸದಾ ಇದ್ದ ಬಹು ಕಾಲದ ಗೆಳತಿಯನ್ನು ಪ್ರೀತಿಸಿದ್ದು ಮತ್ತು ಅದನ್ನು ನೇರವಾಗಿ ಇಷ್ಟು ವರ್ಷಗಳ ಬಳಿಕ ಅವಳಿಗೇ ಹೇಳಿದ್ದು ತಪ್ಪಾ...? ಇಲ್ಲ ಅವಳ ಮನಸ್ಸು ಅರ್ಥ ಮಾಡಿಕೊಳ್ಳದೇ ಇದ್ದುದ್ದು ನನ್ನ ತಪ್ಪಾ..?
ಯಾಕೆ ಸದಾ ಅವಳ ಬಳಿಯೇ ಇರುತ್ತಿದ್ದ ನನ್ನ ಮನಸ್ಸನ್ನು ಒಮ್ಮೆಯೂ ಕೂಡ ಓದುವ ಪ್ರಯತ್ನವನ್ನೇ ಮಾಡದ ಅವಳ ತಪ್ಪು ಹಾಗಾದರೆ ಏನೂ ಇಲ್ಲವೇ..?
ಪ್ರೀತಿ ಸಾಯಲಿ. ಇಷ್ಟು ವರ್ಷವಿದ್ದ ಆ ಗೆಳೆತನವೇ ಬೇಡ ವೆಂದು ಬಿಟ್ಟಳಲ್ಲಾ..ಹಾಗಾದರೆ ಅದು ಸರಿಯೇ?
ಎಲ್ಲೋ ಓದಿದ ನೆನಪು,
ಪ್ರೀತಿ - ಫ್ರೆಂಡ್ ಶಿಪ್ ಎರಡೂ ಒಟ್ಟೊಟ್ಟಿಗೆ ಎಂದಿಗೂ ಬಹುಕಾಲ ಬಾಳಲಾರವು. ಒಂದು ಬಂದರೇ ಇನ್ನೊಂದು ತನ್ನಂತಾನೇ ಸತ್ತು ಹೋಗಿಬಿಡುತ್ತದೆ. ಕೆಲವೊಮ್ಮೆ ಎರಡೂ ಸತ್ತೊಗಿ ಬಿಡುತ್ತದೆ!!.. ನನಗೆ ಆದಂತೆ!!.
ಅಮೇಲೆ ಅವಳು ನನ್ನೊಂದಿಗೆ ಎಂದೂ ಮಾತಾಡಲೇ ಇಲ್ಲ!
ಮದುವೆ ಆಗಿ ಹೋಗುವವರೆಗೂ ಕೂಡ! ಆಂಟಿ ಅಂಕಲ್ ಮನೆಗೇ ಬಂದು ಮದುವೆಗೂ ಕರೆದಿದ್ದರು."ಉಲ್ಲಾಸ್ ನಿನ್ನ ಬೆಸ್ಟ್ ಫ್ರೆಂಡ್ ಮದುವೆ, ನೀನೇ ಬಂದು ಎಲ್ಲಾ ವ್ಯವಸ್ಥೆಗಳನ್ನು ನೋಡ್ಕೋಬೇಕಪ್ಪ" ಅಂತ ಹೇಳಿದ್ದರು.
ಸ್ವತಃ ನಿವೇದಿತಾ ಕರೆಯದೇ ಇದ್ದರೂ ನಾನು ಮದುವೆಗೆ ಹೋಗಿದ್ದೆ.ಮದುವೆ ಮನೆಯ ಎಲ್ಲಾ arrangements ನೋಡಿಕೊಂಡೆ. ಎದುರೇ ಇದ್ದರೂ ನಿವೇದಿತಾ ಒಮ್ಮೆಯೂ ನನ್ನ ಕಡೆಗೆ ತಿರುಗಿ ನೋಡಲಿಲ್ಲ.
ಆದರೆ ಅವಳು ಮಾತ್ರ ಖುಷಿಯಲ್ಲಿ ಇದ್ದಳು. ಎಲ್ಲರೊಂದಿಗೆ ನಗುನಗುತ್ತಾ ಮಾತಾಡುತ್ತಿದ್ದಳು.
ದೂರದಲ್ಲಿಯೇ ನಿಂತು ಅವಳನ್ನು, ಅವಳ ಮದುವೆ ಯನ್ನು ನೋಡಿದೆ.
ಮಂಟಪದಲ್ಲಿ ಹಾಕಿದ್ದ ಹೋಮ ಕುಂಡ ಚೆನ್ನಾಗಿ ಉರಿಯುತ್ತಿತ್ತು. ಅದರಲ್ಲಿ ನನ್ನ ಅಷ್ಟು ವರ್ಷ ಗಳ ಪವಿತ್ರ ಸ್ನೇಹ ಸುಟ್ಟು ಬೂದಿ ಆಗುತ್ತಿದೆಯೇ ಇಲ್ಲಾ ಎಲೆಮರೆಯಂತಿದ್ದ ಸ್ವಲ್ಪ ದಿನಗಳ ಪ್ರೇಮ ಬೂದಿ ಯಾಗುತ್ತಿದೆಯೋ ಅಂತ ನನಗೇ ಗೊತ್ತಾಗಲಿಲ್ಲ !ಹೋಮದ ಅಗ್ನಿ ಯ ಕೆನ್ನಾಲಿಗೆಯಂತೆ ನನ್ನ ಹೃದಯವೂ ಕೂಡ ಜೋರಾಗಿ ಸುಡುತ್ತಿತ್ತು....!!
" ಹೃದಯದ ಮೂಲೆ ಮೂಲೆ,
ದಹಿಸಿದೆ ನಿನ್ನ ಜ್ವಾಲೆ..
ಇರಬಹುದೇ ಹೇಳು ಕರಗದೇ,
ಬರಬಹುದೇ ದಾರಿ ಮರೆಯದೇ..
ಬಿಸಿಯೇ ಇರದ ಉಸಿರು ನಾನು,ನೀನು ಇರದೇ..
ಗಮನಿಸು ಒಮ್ಮೆ ನೀನು.. ಬಯಸಿಹೆ ನಿನ್ನೆ ನಾನು,
ನಂಬದೇ ಏಕೆ ದೂರುವೇ ನನ್ನನ್ನು...... "
ನನ್ನ ಮೊಬೈಲ್ ರಿಂಗಣಿಸುತ್ತಿತ್ತು. ರಿಸೀವ್ ಮಾಡಲಿಲ್ಲ!
ಸೌಮ್ಯ ಸ್ಕೂಟಿ ನಿಲ್ಲಿಸಿದಳು.
ಮಿರರ್ ನಲ್ಲಿ ಮುಖ ನೋಡಿ"ನೋವಾಗ್ತಾ ಇದೆಯಾ ಉಲ್ಲಾಸ್.. ಕೇಳಿದಳು.
ನಾನು ಏನೂ ಹೇಳಲಿಲ್ಲ.
ಸ್ಕೂಟಿ ಯಿಂದ ಇಳಿದು ಬಂದು, ಹಾಗೇ ಜೋರಾಗಿ ಹಗ್ ಮಾಡಿದಳು.ಬೆನ್ನು ತಟ್ಟಿದಳು, ಗಲ್ಲ ಸವರಿದಳು" control my boy, it all happens..chill " ಅಂದಳು. ನನ್ನ ಕಣ್ಣು ಒಂದೆರಡು ಹನಿಗಳನ್ನು ಉದುರಿಸಿತ್ತು! 
ಸೌಮ್ಯ ಸ್ಕೂಟಿ start ಮಾಡಿದಳು.
ಸ್ಕೂಟಿ ಮುಂದೆ ಸಾಗುತ್ತಿತ್ತು. ನಾನು ಮೌನವಾಗಿದ್ದೆ. ಸೌಮ್ಯ ನನಗಿಂತಲೂ ದಿವ್ಯ ಮೌನಕ್ಕೆ ಜಾರಿದ್ದಳು.
ನಿನ್ನೆಯ ಪಬ್ ಮುಂದೆಯೇ ಗಾಡಿ ನಿಲ್ಲಿಸಿದಳು.
ಅದ್ಯಾಕೋ ಗೊತ್ತಿಲ್ಲ ಸೌಮ್ಯ ಳಲ್ಲಿ ನಿನ್ನೆಯ ಉತ್ಸಾಹ ಇರಲಿಲ್ಲ. ನಾನೇ order ಮಾಡಿದೆ ಎಂದಿನಂತೆ ವಿಸ್ಕಿ.
ಇಬ್ಬರಿಗೂ ಐಸ್ ಕ್ಯೂಬ್ ಗಳನ್ನು ಬೆರೆಸಿದೆ. ಅವಳು ಕುಡಿದಳು. ನಾನೂ ಕುಡಿದೆ.
ಅವಳು ಹಾಡು ಹಾಡು ಎಂದು ಕೇಳಿಕೊಳ್ಳಲಿಲ್ಲ. ನಾನು ಕೂಡ ಹಾಡಲಿಲ್ಲ!
PG ಪ್ರೆಂಡ್ ಗೆ ಫುಡ್ ಪಾರ್ಸೆಲ್ ಮಾಡಿಸಿದೆ.
ಅವಳೇ ಬಿಲ್ ಪೇ ಮಾಡಿದಳು.
ಸ್ಕೂಟಿ ಹಿಂದೆ ಕುಳಿತುಕೊಂಡೆ.
ನಮ್ಮ ಸ್ಕೂಟಿ ಸುರತ್ಕಲ್ ಕಡೆಗೆ ಹೊರಟಿತು.
ಮಾತಿಲ್ಲ ಪದವಿಲ್ಲ.. ಸ್ಕೂಟಿ ಅದರಷ್ಟೇ ಹೋಗುತ್ತಿತ್ತು.ಸಿಕ್ಕಾಪಟ್ಟೆ ಪ್ರಶ್ನೆ ಕೇಳುತ್ತಿದ್ದ ಸೌಮ್ಯ ನಿಜವಾಗಿಯೂ ಸೌಮ್ಯ ವಾಗಿದ್ದಳು, ಮೊದಲ ಬಾರಿಗೆ! ಬಹುಶಃ ನನ್ನ ಕಥೆ ಅವಳಿಗೂ ಕೂಡ ಬೇಜಾರು ತರಿಸಿದೆ ಎಂದು ಅನಿಸಿತು.
ಕುಳಾಯಿ ಬಂದಾಗ, ನನ್ನನ್ನು PG ಬಳಿ ಡ್ರಾಪ್ ಮಾಡಿ,ನೇರವಾಗಿ ಸುರತ್ಕಲ್ ಕಡೆಗೆ ಅವಳ PG ಗೆ ಹೋದಳು.
ಫ್ರೆಂಡ್ ಗೆ ಫುಡ್ ಪ್ಯಾಕೇಟ್ ಕೊಟ್ಟು. ಹಾಗೇ ಹೋಗಿ ಹಾಸಿಗೆ ಮೇಲೆ ಬಿದ್ದುಕೊಂಡೆ. ಮಲಗಿಕೊಂಡೇ ಮೇಲೆ ರೂಮ್ ನ ಸೀಲಿಂಗ್ ನೋಡಿದೆ.. ಅಲ್ಲಿ ಒಂದು vedio play ಆಗ್ತಾ ಇದೆ ಮತ್ತು ಅದರಲ್ಲಿ ನಾನೇ ಯಾವುದೋ ಒಂದು ವಿರಹದ ಹಾಡು ಸಮುದ್ರ ಕಿನಾರೆಯಲ್ಲಿ ಕುಳಿತುಕೊಂಡು, ಕರುಳು ಕಿತ್ತು ಬರುವಂತೆ ಹಾಡುತ್ತಿದ್ದೆನೆ ಎಂದು ಭಾಸವಾಯಿತು.!! ಮತ್ತು ಅದು ಹಾಡು ಅಶ್ವತ್ಥ್ ಅವರ "ಕಾಣದ ಕಡಲಿಗೆ ಹಂಬಲಿಸಿದೆ ಮನ...." ಆಗಿತ್ತು!
.................................................
ಮಲಗಿ ಒಂದು ಗಂಟೆ ಆದರೂ ನಿದ್ದೆ ಬರಲಿಲ್ಲ. ಯಾಕೋ ಗೊತ್ತಿಲ್ಲ ಸೌಮ್ಯ ನೆನಪಾದಳು. ಪಾಪ ಎಷ್ಟು ಆಸೆಯಿಂದ ಸೀರೆ ಉಟ್ಟುಕೊಂಡು ಬಂದಿದ್ದಳು.ನಾನು ಅವಳಿಗೊಂದು ಒಳ್ಳೆಯ compliment ಕೂಡ ಕೊಡಲಿಲ್ಲ. ಹಾಡು ಕೂಡ ಹಾಡಲಿಲ್ಲ. ನನ್ನ ಕಥೆ ಹೇಳಿ ಅವಳ ಮೂಡ್ ಕೂಡ ಹಾಳುಮಾಡಿದೆ.
ಅವಳಿಗೂ ಕೂಡ ನನ್ನ ಹಾಗೆಯೇ ಒಂದು ಕಥೆ ಇರಬಹುದಲ್ಲವೇ? ಇಲ್ಲದಿದ್ದರೆ ಅವಳ್ಯಾಕೆ ಈ ತರಹ ಹುಚ್ಚಿಯಂತೆ ಕುಡಿಯುತ್ತಾಳೆ?
ನನ್ನ ಈ ಕಥೆಯಲ್ಲಿ ಅವಳ ಕಥೆ ಕೇಳಿಸಿಕೊಳ್ಳಲು ಕೂಡ ನನಗೆ ನೆನಪೇ ಆಗಲಿಲ್ಲ!
ಅವಳಿಗೇ ಕಾಲ್ ಮಾಡಿದೆ.
"ಉಲ್ಲಾಸ್.. ಹಾಯ್... " ಅಂದಳು.
" ಸೌಮ್ಯ... "ಅಂದೆ.
" ಏನಾಯಿತು ಉಲ್ಲಾಸ್ ನಿದ್ದೆ ಬರ್ತಾ ಇಲ್ವಾ " ಕೇಳಿದಳು.
" ಹೌದು... " ಅಂದೆ.
" ಹಾಗಾದರೆ ನಮ್ಮ PG ಗೆ ಬಾ...ಮಾತಾಡುವ " ಅಂದಳು.
" Ladies PG ಒಳಗಡೆ, boys ಗೆ allow ಇದೆಯಾ... " ಕೇಳಿದೆ.
" Ladies PG ಒಳಗಡೆ ಬಾಯ್ಸ್ ಗೆ allow ಇಲ್ಲ ...ಆದರೆ ನೀನು ಮನಸ್ಸು ಮಾಡಿದರೆ ಬೇರೆ ಒಂದು ರೀತಿಯಲ್ಲಿ ಬರ್ಬಹುದು.ಅದ್ಕೆ ಸ್ವಲ್ಪ ಸಾಹಸ ಮಾಡ್ಬೇಕು, ರಿಸ್ಕ್ ತಗೋಬೇಕು.
PG ಟೆರೇಸ್ ಹೇಗೋ ಖಾಲಿ ಇದೆ.ಅಲ್ಲಿಗೆ ಯಾರೂ ಬರಲ್ಲ. ನೀನು ಹೇಗಾದರೂ ಯಾರಿಗೂ ಗೊತ್ತಾಗದಂತೆ ಟೆರೇಸ್ ಮೇಲೆ ಬಂದರೆ, ರಾತ್ರಿ ಪೂರ್ತಿ ನಾನು ನೀನು ಮಾತಾಡ್ಬಹುದು...ನಿನಗೆ ಕೆಳಗಿನಿಂದ ಮೇಲೆ ಬರಲು ಅನುಕೂಲ ಆಗುವಂತೆ, ಟೆರೇಸ್ ಮೇಲಿನಿಂದ ಸೀರೆ ಕಟ್ಟಿ ಕೆಳಗೆ ಬಿಟ್ಟಿರ್ತೆನೆ... " ಅಂದಳು.
" ಸಾಹಸ ಅನ್ನುವುದು ನನ್ನ ಬ್ಲಡ್ ನಲ್ಲಿಯೇ ಇದೆ.ಇದೆಲ್ಲಾ ಯಾವ ಲೆಕ್ಕ, ಕಾಲೇಜ್ ಹಾಸ್ಟೆಲ್ ನಲ್ಲಿ ಇರುವಾಗಲೇ ಪಕ್ಕದ ಲೇಡಿಸ್ ಹಾಸ್ಟೆಲ್ ಗೆ ಹೋಗಿ ನಾವು ಮಾಡಿದ ಸಾಹಸ ಗಳು ಒಂದಾ, ಎರಡಾ.. ನೀನು ಸ್ಕೂಟಿ ತಗೊಂಡು ಈಗಲೇ ನನ್ನ PG ಬಳೀ ಬಾ.ರೆಡಿ ಆಗಿರ್ತಿನಿ... " ಅಂದೆ.
" ಈಗಲೇ ಬರ್ತಿನಿ, ಜಸ್ಟ್ 10 minutes... " ಅಂದಳು.
ಕ್ಷಣ ಮಾತ್ರದಲ್ಲಿ PG ಎದುರು ಇದ್ದಳು.Shorts ಹಾಕಿ ಅದರ ಮೇಲೊಂದು ನೈಟ್ ವೇರ್ ಟಾಪ್ ಹಾಕಿ ಬಂದಿದ್ದಳು.
" ಹೋಗೋಣವಾ... " ಕೇಳಿದಳು.
" ಹೂಂ... " ಅಂದೆ.
ಸ್ವಲ್ಪ ಹೊತ್ತಿನಲ್ಲಿಯೇ ಸುರತ್ಕಲ್ ನ ಅವಳ PG ಮುಂದೆ ನಮ್ಮ ಸ್ಕೂಟಿ ಇತ್ತು!!!??
.............................................
PG ಗಿಂತ ಸ್ವಲ್ಪ ಹಿಂದೆಯೇ ಸ್ಕೂಟಿ ನಿಲ್ಲಿಸಿದ ಸೌಮ್ಯ ಹೇಳಿದಳು "ಉಲ್ಲಾಸ್ ನಾನು ನಿನ್ನನ್ನು ಇಲ್ಲೇ ಬಿಟ್ಟು, PG ಒಳಗಡೆ ಹೋಗಿ, ಆಮೇಲೆ ಐದು ಹತ್ತು ನಿಮಿಷ ಬಿಟ್ಟು ಕೊಂಡು ಟೆರೇಸ್ ಮೇಲೆ ಬರ್ತೆನೆ. ನೀನು PG ಯ ಹಿಂದುಗಡೆಯ ಕಾಂಪೌಂಡ್ ಹಾರಿ ಅಲ್ಲೇ ನಾನು ಮೇಲಿಂದ ಕೆಳಗೆ ಬಿಟ್ಟಿರುವ ಸೀರೆ ಹಿಡಿದುಕೊಂಡು ಟೆರೇಸ್ ಮೇಲೆ ಬಾ.." ಅಂದಳು.
"ಆಯ್ತು ಓಕೆ.. Done.... " ಅಂದೆ.
" ಉಲ್ಲಾಸ್... "
" ಏನು... " ಕೇಳಿದೆ.
" ಜಾಗ್ರತೆ... " ಅಂದಳು.
" ನನ್ನ ಟೆನ್ಶನ್ ಬಿಡು. ನೀನು ಮೊದಲು ಒಳಗೆ ಹೋಗು... " ಅಂದೆ.
ಸ್ಕೂಟಿ start ಮಾಡಿದವಳೇ ಸೀದಾ PG ಯ ಒಳಗಡೆ ಹೋದಳು. ನಾನು ಯಾರಿಗೂ ಗೊತ್ತಾಗದಂತೆ PG ಯ ಹಿಂದಿನ ಕಾಂಪೌಂಡ್ ಬಳಿ ಸರಿದೆ.
ಸೀರೆ ಹಿಡಿದುಕೊಂಡು ಟೆರೇಸ್ ಮೇಲೆ ಹೋಗಲು ನನಗೇನು ಕಷ್ಟ ಅನಿಸಲಿಲ್ಲ. ಚಕ ಚಕ ಅಂತ ಹತ್ತಿ ಟೆರೇಸ್ ಮೇಲೆ ಲ್ಯಾಂಡ್ ಆಗಿದ್ದೆ.
PG ಟೆರೇಸ್ ಏನೋ ವಿಶಾಲವಾಗಿತ್ತು.ಒಂದೆರಡು ವಾಟರ್ ಟ್ಯಾಂಕ್ ಬಿಟ್ಟರೆ ಬೇರೇನೂ ಇರಲಿಲ್ಲ ಅಲ್ಲಿ. ಅಲ್ಲಿಯೇ ಒಂದು ಕಡೆ ನಿಂತುಕೊಂಡು ಮೇಲಿನಿಂದಲೇ ಸುರತ್ಕಲ್ ನ ರಾತ್ರಿಯ ದೃಶ್ಯಾವಳಿಗಳನ್ನು ನೋಡುತ್ತಾ ನಿಂತೆ.
ಆಗಲೇ ನನಗೆ ಹಿಂದಿನಿಂದ ಗೆಜ್ಜೆ ಯ ಸಪ್ಪಳ ಕೇಳಿದ್ದು. ಹಿಂದೆ ತಿರುಗಿ ನೋಡಿದೆ. ಸೀರೆಯಲ್ಲಿ ಸೌಮ್ಯ ಅಪ್ಸರೆ ಯಂತೆ ನಿಂತಿದ್ದಳು.
ನನ್ನನ್ನು ಕುಳಾಯಿಯ PG ಯಿಂದ, ಅವಳ PG ಗೆ ಪಿಕ್ ಅಪ್ ಮಾಡಲು ಬಂದಾಗ ಶಾರ್ಟ್ಸ್ ಹಾಕಿ ಅದರ ಮೇಲೊಂದು ನೈಟ್ ವೇರ್ ಹಾಕಿಕೊಂಡು ಬಂದಿದ್ದಳು. ಈಗ ಪುನಃ ಡ್ರೆಸ್ ಬದಲಾಯಿಸಿಕೊಂಡು ಬಂದಿದ್ದಾಳೆ ಸೀರೇಲಿ ಹುಡುಗಿ... ಬಹುಶಃ ನಾನು ಪಬ್ ನಲ್ಲಿ ಹಾಡಿದ್ದ " ಸೀರೇಲಿ ಹುಡುಗಿ ಯ ನೋಡಲೇಬಾರದು.." ಹಾಡನ್ನು ತುಂಬಾನೇ ಸಿರಿಯಸ್ ಆಗಿ ತೆಗೆದುಕೊಂಡು , ಹಾಡಿಗಾಗಿಯೋ ಅಥವಾ ಅವಳನ್ನು ಸೀರೆಯಲ್ಲಿ ನೋಡಬೇಕು ಎಂಬ ನನ್ನ ಉತ್ಕಟ ಬಯಕೆ ಗಾಗಿಯೋ ಏನೋ ಮತ್ತೆ ಸೀರೆ ತೊಟ್ಟುಕೊಂಡೇ ಬಂದಿದ್ದಾಳೆ ನಶೆಯ ಹುಡುಗಿ..
ನಿಧಾನವಾಗಿ ನನ್ನ ಬಳಿಯೇ ನಡೆದು ಬಂದಳು. ನಿಜವಾಗಿಯೂ ಸೀರೆಯಲ್ಲಿ ಅವಳು ದೇವಲೋಕದ ಸುಂದರಿಯೇ.
ಈ ಹುಡುಗಿಯರು ಸೀರೆಯಲ್ಲಿ ಕಂಡಷ್ಟು ಅಂದ ಮತ್ಯಾವ out fit ನಲ್ಲಿ ಕಾಣಲು ಸಾಧ್ಯವೇ ಇಲ್ಲವೇನೋ ಅಂದೆನಿಸಿತು.
Hot, sexy ಎಂಬೆಲ್ಲಾ adjectives ಬೇರೆಲ್ಲಾ ಉಡುಗೆ ತೊಟ್ಟಾಗ ಅನಿಸಿದರೂ, ನನಗಂತೂ ಹುಡುಗಿ Beauty ಅಂತ ಅನಿಸೋದು ಸೀರೆ ತೊಟ್ಟಾಗ ಮಾತ್ರ.
ಸೀರೆ ಯ ಜನಕನಿಗೊಂದು ದೊಡ್ಡ ಥ್ಯಾಂಕ್ಸ್ ಹೇಳುತ್ತಾ ಅವಳನ್ನೇ ಎವೆಯಿಕ್ಕದೇ ಕಣ್ಣು ಮಿಟುಕಿಸದೇ ಹಾಗೇ ನೋಡುತ್ತಾ ನಿಂತೆ.
ಅವಳ ಮಾದಕ ನೋಟ ನನಗೆ ಹುಚ್ಚು ಹಿಡಿಸಿತು. ತೀರ ಹತ್ತಿರ ಬಂದು ನಿಂತಳು. ನನ್ನ ಉಸಿರಿಗೆ ಅವಳ ಉಸಿರು ತಾಗುತ್ತಿತ್ತು. ಕಣ್ಣಲ್ಲಿ ಕಣ್ಣು ಬೆಸೆದಳು. ನಾನೂ ಸಂಪೂರ್ಣ ಸ್ಥಬ್ಧ. ಅಲ್ಲೇ ಬೆವರತೊಡಗಿದೆ. ಹುಬ್ಬೇರಿಸಿ ಏನು ಅಂತ ಕಣ್ಣಲ್ಲೇ ಕೇಳಿದಳು. ನಾನು ತುಟಿಕ್ ಪಿಟಿಕ್ ಅನ್ನಲಿಲ್ಲ. ನಿಧಾನವಾಗಿ ಅವಳ ತುಟಿಯನ್ನು ನನ್ನ ತುಟಿ ಬಳಿ ತಂದಳು. ನನ್ನ ನಾಲಗೆ ಯಿಂದಲೇ ನನ್ನ ಮೇಲು ತುಟಿಯನ್ನು ಹಾಗೂ ನನ್ನ ಕೆಳ ತುಟಿಯನ್ನು ಒಮ್ಮೆ ಹಾಗೇ ಒರೆಸಿಕೊಂಡು ನಾನು ಕೂಡ ಯಾವುದಕ್ಕೊ ರೆಡಿ ಆದೆ. ಅವಳು ಹಾಗೆ ಬಾಗಿ ಕಿವಿ ಬಳಿ ಬಂದು ಹೇಳಿದಳು.
"ಅಲ್ಲೇ ವಾಟರ್ ಟ್ಯಾಂಕ್ ಪಕ್ಕ ಒಂದು ದೊಡ್ಡ ಮ್ಯಾಟ್ ಇದೆ, ಅದನ್ನು ನೆಲಕ್ಕೆ ಹಾಸು,ಕುತ್ಕೊಂಡು ಮಾತಾಡೋಕೆ ಆಗುತ್ತೆ. ಈಗ ನಾನು ಜಸ್ಟ್ ಕೆಳಗೆ ಹೋಗಿ ಮೇಲೆ ಬರ್ತೆನೆ.. " ಎಂದು ಹೇಳಿ ಸರ ಸರ ಅಂತ ಟೆರೇಸ್ ನ staircase ನಿಂದ ಇಳಿದು ಕೆಳಗೆ ಅವಳ ರೂಮ್ ಕಡೆಗೆ ನಡೆದಳು.
ನಾನು ಏನೇನೋ ಆಗ್ಬಹುದು ಅಂತ ಕನಸು ಕಾಣುತ್ತಿದ್ದೆ. ಪುಣ್ಯ ದೇವರು ದೊಡ್ಡವನು ನನ್ನ ಶೀಲ ಕಾಪಾಡಿದ 
ಇನ್ನಾದರೂ ಈ ರೊಮ್ಯಾಂಟಿಕ್ ಮೂವಿ ಗಳನ್ನು ನೋಡುವುದು ನಾನು ಕಡಿಮೆ ಮಾಡ್ಬೇಕಪ್ಪಾ ಅಂತ ಅನ್ಕೊಂಡೆ.
ದೊಡ್ಡ ಮ್ಯಾಟ್, ಮೂರು ನಾಲ್ಕು ಮಂದಿ ಆರಾಮ್ ಸೇ ಅದರಲ್ಲಿಯೇ ನಿದ್ದೆ ಮಾಡುತ್ತಾ ಟೆರೇಸ್ ಮೇಲೆಯೇ ರಾತ್ರಿ ಪೂರ್ತಿ ಕಳೆಯಬಹುದು.
ಮ್ಯಾಟ್ ನೆಲದ ಮೇಲೆ ಹಾಸಿ. ಅದರ ಮೇಲೆಯೇ ಹಾಗೆಯೇ ಕುಳಿತುಕೊಂಡೆ. ಯಾರೋ ಬಂದಂತೆ ಶಬ್ದವಾದಾಗ ಹಿಂತಿರುಗಿ ನೋಡಿದೆ.
ಅಲ್ಲಿ ಸೌಮ್ಯ ವಿಸ್ಕಿ ಬಾಟಲ್,ವಾಟರ್ ಬಾಟಲ್, ವಿಸ್ಕಿ ಗ್ಲಾಸ್,potato wafers, ಐಸ್ ಕ್ಯೂಬ್ ನ ಬಾಕ್ಸ್ ನೊಂದಿಗೆ ಹಾಗೇ ನಿಂತುಕೊಂಡಿದ್ದಳು. Of course ಇನ್ನೂ ಸೀರೆ ಯಲ್ಲಿಯೇ ಇದ್ದಳು.
ಈ ಹುಡುಗಿ ವಿಸ್ಕಿ ಯನ್ನು ಯಾಕಪ್ಪ ಈ ರೀತಿ ನೀರಿನ ರೇಂಜಿಗೆ ಕುಡಿತಾಳೆ ಅಂತ ಅಂದುಕೊಂಡೆ. ಇವಳೊಟ್ಟಿಗೆ ಇದೇ ರೀತಿ ನಿರಂತರವಾಗಿ ಟಚ್ ಅಲ್ಲಿ ಇದ್ದರೆ ಇವಳು ಗ್ಯಾರಂಟಿ ನನ್ನನ್ನು ಸಮಾಜದ ದೊಡ್ಡ ಕುಡಿ ಯನ್ನಾಗಿ (ಕುಡುಕ) ಮಾಡುವುದರಲ್ಲಿ ಸಂಶಯವೇ ಇಲ್ಲ ಅಂತ ಅನಿಸಿತು.
ಸೀದಾ ಬಂದು ಮ್ಯಾಟ್ ಮೇಲೆ ಕುಳಿತುಕೊಂಡು ಎಲ್ಲವನ್ನೂ ನೀಟಾಗಿ ಜೋಡಿಸಲು ಶುರು ಮಾಡಿದಳು. ಆಹಾ, ಈ ಕೆಲಸದಲ್ಲಿ ಈ ಹುಡುಗಿ ಗೆ ಅದೆಂತಹ ಶ್ರದ್ಧೆ... ಮನಸಲ್ಲೇ ಶಹಬ್ಬಾಸ್... ಅಂದೆ.
"ಒಂದು ಪ್ರಶ್ನೆ ಕೇಳ್ಲಾ..... " ಎಂದು ಕೇಳಿದೆ.
ಗ್ಲಾಸ್ ಗೆ ವಿಸ್ಕಿ ಸುರಿಯುತ್ತಲೇ" ಕೇಳು... " ಅಂದಳು.
" ನೀನು ವಿಸ್ಕಿ ಯನ್ನು ಬಿಡ್ತಾ ಇಲ್ವಾ... ಅಥವಾ ವಿಸ್ಕಿ ನಿನ್ನನ್ನು ಬಿಡ್ತಾ ಇಲ್ವಾ...? "
" ಎರಡೂ.... " ಅಂದಳು.
" PG ಯಲ್ಲಿ ನೀನೊಬ್ಬಳೇ ಕುಡಿಯುವವಳಾ.. ಅಥವಾ ಎಲ್ಲಾ ಹುಡುಗಿಯರು ಕುಡಿಯುವವರೇಯಾ? "
" ನಾನು ಈ PG ಗೆ ಬರುವ ಮೊದಲು ಯಾರೊಬ್ಬರೂ ಕುಡೀತಾ ಇರ್ಲಿಲ್ಲ ಅಂತೆ.. ಈಗ ಎಲ್ಲರೂ ಡೈಲಿ ಕುಡಿತಾರೆ.. " ಅಂದಳು.
ಹೂಂ. ಇವಳ ಮಹಿಮೆ, ಕಾರ್ಣಿಕ ಅಪಾರವಾಗಿದೆ ಈ ಜಾಗದಲ್ಲಿ ಅಂತ ಅನ್ಕೊಂಡೆ.
ವಿಸ್ಕಿ ಗ್ಲಾಸ್ ಗೆ ಐಸ್ ಕ್ಯೂಬ್ ಗಳನ್ನು ನಾನೇ ಬೆರೆಸಿ ಇಟ್ಟೆ. ನಾನೀಗ Pro ಕುಡಿ ಆಗಿದ್ದೆ. ಇವಳೊಟ್ಟಿಗೆ ಸೇರಿ ಒಂದೇ ದಿನದಲ್ಲಿ ಕುಡಿಯುವುದರಲ್ಲಿ ನಾನು Next Level ಗೆ ರೀಚ್ ಆಗಿದ್ದೆ. ಚಿಯರ್ಸ್ ಎಂದು ನನ್ನ ಗ್ಲಾಸ್ ಅನ್ನು ಅವಳ ಗ್ಲಾಸ್ ಗೆ ತಾಗಿಸಿ ಮಧುಪಾನ ಶುರು ಮಾಡಿದೆ.
"ಅಲ್ಲಾ ಈ PG ಯಲ್ಲಿ ಇಷ್ಟೊಂದು ಜನ ಹುಡುಗಿಯರು ಕುಡಿತೀರಾ ಅಲ್ವಾ, ಯಾಕೆ ನೀವು ಅಖಿಲ ಭಾರತ ಕುಡುಕಿಯರ ಸಂಘ ಕಟ್ಕೊಬಾರ್ದು.. " ಅಂದೆ.
" ತಿನ್ನಕ್ಕೆ ಏನಾದರೂ ಬೇಕಿದ್ದರೆ.. ಪೋಟಾಟೋ Wafers ಇದೆ,... " ಅಂದಳು
ಪುಣ್ಯಕ್ಕೆ ಒದೆ ತಿನ್ತಿಯಾ ಅಂತ ಕೇಳ್ಲಿಲ್ಲಾ ಅಲ್ಲಾ ... ಬಚಾವ್, ಅನ್ಕೊಂಡೆ..
ಒಂದೆರಡು ಚಿಪ್ಸ್ ಗಳನ್ನು ಬಾಯಿಗೆ ತುರುಕಿಕೊಂಡೆ.
ಅವಳಿಗೂ ನಶೆ ಏರಿತ್ತು, ನನಗೂ ನಿಧಾನವಾಗಿ ಏರಲು ಶುರುವಾಯಿತು.
" sorry, ನನ್ನ ಕಥೆಯಲ್ಲಿ ನಿನ್ನ ಕಥೆ ಕೇಳಲು ಮರೆತೇ ಹೋಯಿತು..ಯಾಕಾಗಿ ಲೈಫ್ ಅಲ್ಲಿ ಇಷ್ಟೊಂದು ಸೀರಿಯಸ್ ಆಗಿ ಇದ್ದೀಯಾ.. ಯಾಕಾಗಿ ನೀನು ಇಷ್ಟೊಂದು ಕುಡೀತಿಯಾ.. ನಿನ್ನ ಅಂತಹ ಟ್ರಾಜಿಡಿ ಕಥೆ ಏನು? " ಅಂದೆ.
"ಒಂದು ಕಥೆ ಇದೆ.. " ಅಂದಳು.
" ಹೇಳು, ನನಗೆ ಕೇಳುವ ಆಸಕ್ತಿ ಇದೆ... " ಅಂದೆ.
ಅವಳ ವಿಸ್ಕಿ ಗ್ಲಾಸ್ ಅನ್ನು ಸೈಡಿಗೆ ಇಟ್ಟು ಬಿಟ್ಟಳು. ನನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸ್ ಅನ್ನು ಕೂಡ ಕಿತ್ತುಕೊಂಡು ಬದಿಗಿರಿಸಿದಳು.
ಹಾಗೇ ಮ್ಯಾಟ್ ಮೇಲೆ ಮಲಗಿ,ತಲೆಯ ಹಿಂದೆ ಕೈ ಇಟ್ಟು ಕೊಂಡು ಮೇಲಿನ ಆಕಾಶ ವನ್ನೇ ದಿಟ್ಟಿಸಿ ನೋಡ ತೊಡಗಿದಳು.
ನಾನು ಕೂಡ ಅಲ್ಲೆ ಮ್ಯಾಟ್ ಮೇಲೆ ಬಿದ್ದುಕೊಂಡು ತಲೆಯ ಹಿಂದೆ ಕೈ ಇಟ್ಟು ಕೊಂಡು ಮೇಲಿನ ಆಕಾಶ ನೋಡ ತೊಡಗಿದೆ.
ಆವತ್ತು ಹುಣ್ಣಿಮೆ, ಚಂದ್ರ ಪ್ರಕಾಶಮಾನವಾಗಿಯೇ ಇದ್ದ.
"ಮೇಲೆ ಏನು ನೋಡ್ತಾ ಇದ್ದಿಯಾ.. " ಮಲಗಿಕೊಂಡೇ ಕೇಳಿದೆ.
" ಮೇಲೆ ನಿನಗೆ ಏನು ಕಾಣಿಸ್ತಾ ಇದೆ..? " ಅವಳು ಮಲಗಿಕೊಂಡೇ ಉತ್ತರಿಸಿದಳು.
" ನನಗೆ ಆಕಾಶ ಕಾಣ್ತಾ ಇದೆ. ಚಂದ್ರ ಕಾಣ್ತಾ ಇದ್ದಾನೆ. ಹಾಗೆಯೇ ಅಸಂಖ್ಯಾತ ನಕ್ಷತ್ರ ಗಳು ಕಾಣ್ತ ಇದೆ. ಸ್ಕೂಲ್ ಅಲ್ಲಿ ಟೀಚರ್ ಹೇಳಿದ್ದು ನೆನಪಾಗ್ತ ಇದೆ. ದೂರದಲ್ಲಿ ಕಾಣುತ್ತಿರುವ ಚಿಕ್ಕ ಚಿಕ್ಕ ನಕ್ಷತ್ರ ಕೂಡ ಕೆಲವೊಮ್ಮೆ ನಮ್ಮ ಸೂರ್ಯ ನಿಗಿಂತಲೂ ಎಷ್ಟೋ ಪಟ್ಟು ದೊಡ್ಡದಿರುತ್ತದೆಯಂತೆ... " ಅಂದೆ.
" ಹೂಂ... " ಅಂದಳು.
" ಯಾಕೇ milky-way galaxy, black hole ಬಗ್ಗೆ ಏನೂ ಹೇಳ್ಲಿಲ್ಲಾ ಅಂತ ಬೇಜಾರಾ... " ಕೇಳಿದೆ.
ಅವಳು ಮೌನವಾಗಿ ಯೇ ಇದ್ದಳು.
" Sorry For ಅಧಿಕಪ್ರಸಂಗ.. " ಅಂದೆ.
" No problem. ಉಲ್ಲಾಸ್ ನೀನು ಮಾತಾಡಿದ್ರೆ ಪ್ರಾಬ್ಲಂ ಅಲ್ಲ.. ಮಾತಾಡದಿದ್ರೆ ಪ್ರಾಬ್ಲಂ.. " ಅಂದಳು.
" ಈಗ ನೀನು ಮಾತಾಡು.. ಏನು ನಿನ್ನ ಸ್ಟೋರಿ... " ಅಂದೆ.
" ಉಲ್ಲಾಸ್ ಮೇಲೆ ಅಷ್ಟು ದೊಡ್ಡ ಆಕಾಶ ಕಾಣ್ತಾ ಇದೆಯಲ್ಲಾ..ಸದ್ಯದ ಮಟ್ಟಿಗೆ ಅದನ್ನು Science ನ ದೃಷ್ಟಿಯಿಂದ ನೋಡಬೇಡ. ಅದನ್ನೇ ಸಿನಿಮಾ ಥಿಯೇಟರ್ ನ big ಸ್ಕ್ರೀನ್ ಅಂತ ತಿಳ್ಕೋ..
ಕಥೆ ಹೇಳ್ತೆನೆ, ಮೇಲೆಯೇ ನೋಡ್ತಾ ಇರು , ನನ್ನ
ಕಥೆ ಆ ಸ್ಕ್ರೀನ್ ನಲ್ಲಿಯೇ play ಆಗ್ತಾ ಇದೆ ಅಂತ ಫೀಲ್ ಮಾಡ್ಕೋ. " ಅಂದಳು.
ನಾನು ಮೇಲೆಯೇ ನೋಡುತ್ತಿದ್ದೆ. ಸೌಮ್ಯ ಮಾತಾಡಲು ಶುರು ಮಾಡಿದಳು. ಒಂದೊಂದೇ ಪಾತ್ರಗಳು ಆಕಾಶ ದ ಸ್ಕ್ರೀನ್ ಮೇಲೆ ಬರಲು ಶುರು ಮಾಡಿದವು.
"....... ಉಲ್ಲಾಸ್ ನನ್ನ ಊರು ಮೂಡುಬಿದಿರೆ. ನಾನು ನನ್ನ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು, ಅಪ್ಪ ನಿವೃತ್ತ ಆರ್ಮಿ ಯೋಧ, ತುಂಬಾ ಶಿಸ್ತಿನ ಮನುಷ್ಯ ಹಾಗೂ ಸಾಹಸಿ.ನಾನು ಹೆಚ್ಚು ಕಡಿಮೆ ಅಪ್ಪ ನನ್ನೇ ಅನುಸರಿಸುತ್ತಿದ್ದೆ.
ಅಮ್ಮ ತುಂಬಾನೇ Orthodox, ಪೂಜೆ, ಪುನಸ್ಕಾರ,ಸಂಸ್ಕಾರ, ಸಂಪ್ರದಾಯ ಎಲ್ಲಾ ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಳು.
ಆದರೆ ನಾನು unorthodox ಹುಡುಗಿ ಆಗಿದ್ದೆ.
ಕರಾಟೆ, ಟ್ರೆಕ್ಕಿಂಗ್ ಹಾಗೆಯೇ NCC ಅಂದರೆ ಕೂಡ ಇಷ್ಟ,NCC ಯಲ್ಲಿ C certificate ಕೂಡ ಮಾಡಿದ್ದೆ. ಮಾತ್ರವಲ್ಲ ದೆಹಲಿಯಲ್ಲಿ ನಡೆಯುವ RD ಪೆರೇಡ್ ನಲ್ಲೂ ಕೂಡ ಭಾಗವಹಿಸಿದ್ಧೆ.
ಹುಡುಗರೊಂದಿಗೆ ಸೇರಿ, ಕ್ರಿಕೆಟ್ ಕಬಡ್ಡಿ ಎಲ್ಲಾ ಆಡ್ತಾ ಇದ್ದೆ.
ಹುಡುಗರು ಮಾಡುವ ಎಲ್ಲವನ್ನೂ ನಾನೂ ಕೂಡ ಮಾಡಬೇಕೆನ್ನುವ ಹುಚ್ಚು ನನಗೆ.
ಇಂಜಿನಿಯರಿಂಗ್ ಅಂತ ಬಂದಾಗ ಹೆಚ್ಚಿನ ಹುಡುಗಿಯರು C.S(Computer Science), I.S(Information Science) ನಂತಹ ಬ್ರಾಂಚ್ ಗಳನ್ನೇ ಜಾಸ್ತಿ ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನನ್ನನ್ನು ಮಾತ್ರ Royal Mech ಕೈಬೀಸಿ ಕೆರಯುತ್ತಿತ್ತು.
ಇಷ್ಟ ಪಟ್ಟೇ Mechanical Engineering ತಗೊಂಡೇ.
ಕ್ಲಾಸ್ ನಲ್ಲಿ ನಾನೊಬ್ಬಳೇ ಹುಡುಗಿ. ಹಾಗಂತ ಕ್ಲಾಸ್ ನ ಅಷ್ಟೂ ಹುಡುಗರು ನನ್ನನ್ನು ಯಾವತ್ತೂ ಸೆಪರೇಟ್ ಆಗಿ ನೋಡಿಯೇ ಇಲ್ಲ. ನಾನು ಎಲ್ಲರಿಗೂ ಅಚ್ಚುಮೆಚ್ಚಿನ ಫ್ರೆಂಡ್ ಆಗಿದ್ದೆ. ಬೇರೆ ಬ್ರಾಂಚ್ ನ ಹುಡುಗರು ನನ್ನ ತಂಟೆಗೂ ಬರುತ್ತಿರಲಿಲ್ಲ. ಹೇಗೆ ಬರುತ್ತಾರೆ. ಎಷ್ಟಾದರೂ ನಾನು Royal Mech ಹುಡುಗಿ ಅಲ್ಲವೇ..
ಅವನ ಪರಿಚಯ ಒಂದು ದಿನ accidentally ಆಯಿತು. ನಿಜವಾಗಿಯೂ accident ಮೂಲಕವೇ ಆಯಿತು!
ಆ ದಿನ ನನ್ನ ಬರ್ತಡೇ. ಅಪ್ಪ ಹೊಸ ಸ್ಕೂಟಿ ಕೊಡಿಸಿದ್ದರು. ಖುಷಿ ಯಿಂದ, ಉತ್ಸಾಹದಿಂದ ಕಾಲೇಜಿಗೆ ಬರ್ತಾ ಇದ್ದೆ. ಇನ್ನೆನು ಕಾಲೇಜ್ ನೊಳಗೆ ಹೋಗಬೇಕು ಆವಾಗ ಯಾವಾನೋ ಒಬ್ಬ ಫೆಕ್ರ ನಮ್ಮ ಕಾಲೇಜಿನಿಂದ ಹೊರಗೆ, ನನಗೆ ಎದುರಾಗಿ ಬೈಕ್ ಅಲ್ಲಿ ಸ್ಪೀಡ್ ಆಗಿ ಬಂದಿದ್ದ. ಸರಿಯಾಗಿ ಸೈಡ್ ಕೂಡದೇ ಇದ್ದ ಪರಿಣಾಮ ನಾನು ಹೋಗಿ ಸ್ಕೂಟಿ ಸಹಿತ ಪಕ್ಕದ ಚರಂಡಿಯಲ್ಲಿ ಬಿದ್ದಿದ್ದೆ. ಡ್ರೆಸ್ ಎಲ್ಲಾ ಕೊಳೆಯಾಗಿತ್ತು, ಸ್ಕೂಟಿ scratch ಆಗಿತ್ತು. ನನಗೂ ತರಚಿದ ಗಾಯಗಳಾಗಿತ್ತು.
ಬರ್ತಡೇ ದಿನವೇ ಹಾಗಾಗಿದ್ದು ನನಗೇ ತುಂಬಾನೇ ಸಿಟ್ಟು ಬಂತು.
ಸೈಡ್ ಕೊಡದೇ ಮುಂದೆ ಹೋದವನೇ ಗಾಡಿ ನಿಲ್ಲಿಸಿ ಅಲ್ಲೇ ನಿಂತಿದ್ದ ಹುಡುಗ. ಸೀದಾ ಹೋಗಿ ಅವನ ಕಪಾಳಕ್ಕೆ ಒಂದು ಸರಿಯಾಗಿ ಬಾರಿಸಿ 'Dont you have eyes..' ಎಂದು ಕೇಳಿದ್ದೆ.
ಅವ ಏನೂ ರಿಪ್ಲೈಕೊಡದೇ ಸುಮ್ಮನೆ ಇದ್ದ.
ಇದಾಗಿ ತುಂಬಾ ದಿನ ಆಗಿತ್ತು. ಫೇಸ್ಬುಕ್ ನಲ್ಲಿ ನಮ್ಮ ಕಾಲೇಜಿನ ಒಂದು confession ಪೇಜ್ ಇತ್ತು. ಅದರಲ್ಲಿ ಕಾಲೇಜಿನ ಎಲ್ಲಾ ಹುಡುಗರು ಹುಡುಗಿಯರು ತಮ್ಮ ಕ್ರಷ್, ಲವ್ ಬಗ್ಗೆ ಹೇಳುತ್ತಿದ್ದರು. ಟೀಸ್ ಮಾಡುತ್ತಿದ್ದರು, ಕಾಲೆಳೆಯುತ್ತಿದ್ದರು. ಕೆಲವರು ಲವ್ ಪ್ರಪೋಸ್ ಮಾಡುತ್ತಿದ್ದರು. ಇನ್ನು ಕೆಲವರು ಸಾಂಗ್ dedicate ಮಾಡುತ್ತಿದ್ದರು, date ಗೆ invite ಮಾಡುತ್ತಿದ್ದರು etc..etc..ಹೆಚ್ಚಾಗಿ ಯಾರೂ ಕೂಡ ತಮ್ಮ ಹೆಸರು ಅನ್ನು reveal ಮಾಡುತ್ತಿರಲಿಲ್ಲ. Admin ಕೂಡ ಯಾರೆಂದೂ ಬಹುಜನರಿಗೆ ಗೊತ್ತೇ ಇರುವುದಿಲ್ಲ. ಅವ ಮಾತ್ರ ಶ್ರದ್ಧೆಯಿಂದ ಬಂದಂತಹ ಎಲ್ಲಾ ಪೋಸ್ಟ್ ಗಳನ್ನು ಒಂದರ ಮೇಲೆ ಒಂದರಂತೆ confession page ನಲ್ಲಿ ಹಾಕುತ್ತಿದ್ದ.
ಒಂದು ರಾತ್ರಿ ಆ ಪೇಜ್ ನಲ್ಲಿ ಒಬ್ಬ ಹುಡುಗ ನ ಪೋಸ್ಟ್ ಕಡೆಗೆ ಕಣ್ಣು ಹಾಯಿಸಿದೆ. ಅವ ನನ್ನ ಹೆಸರನ್ನು mention ಮಾಡಿರಲಿಲ್ಲ.ಅವನ ಹೆಸರನ್ನೂ mention ಮಾಡಿರಲಿಲ್ಲ. ಆದರೆ ನನಗೆ ಸಂಭಂದಿಸಿದ ಘಟನೆ ಅಂದರೆ ನನ್ನ ಹೊಸ ಸ್ಕೂಟಿ accident ನ ಬಗ್ಗೆ date, ವಾರ, ಸಮಯ ಸಹಿತ ಸವಿವರವಾಗಿ ಬರೆದುಕೊಂಡಿದ್ದ. ಅದು ಓದುವಾಗಲೇ ಗೊತ್ತಾಗಿತ್ತು.ಅದು ನಾನೇ ಅಂತ. ಆದರೆ ಅವ ಅದೆಷ್ಟು ಚಂದ ಬರೆದಿದ್ದ ಅಂದರೆ ಅದನ್ನು ಪೂರ್ತಿ ಯಾಗಿ ಒದದೇ ಇರಲು ಮನಸ್ಸು ಬರಲಿಲ್ಲ. ಇನ್ನೂ ಕೆಳಗೆ ಕಣ್ಣು ಹಾಯಿಸಿದೆ.
ಅವ ಅದರಲ್ಲಿ ಮಾಡಿದ ತಪ್ಪಿಗಾಗಿ ಕ್ಷಮೆ ಕೋರಿದ್ದ. ಮಾತ್ರವಲ್ಲ ನಿನ್ನನ್ನು ಮುಖತಃ ಬೇಟಿ ಮಾಡಿ sorry ಕೇಳಬೇಕೆಂದು ಇದ್ದೆನೆ. ಆದರೆ ನೀನು ನನ್ನ ಕಪಾಳ ಕ್ಕೆ ಹೊಡೆದ ಕಾರಣದಿಂದಾಗಿಯೋ ಏನೋ ನಿನ್ನೆದುರಾಗಲಿ, ನಿಮ್ಮ mechanical department ಕಡೆಗಾಗಲಿ ಬರಲು ಧೈರ್ಯ ಬರ್ತಾ ಇಲ್ಲ. ಆದರೆ direct ಆಗಿ sorry ಕೇಳದೇ ನನಗೆ ಸಮಾಧಾನ ವಿಲ್ಲ. ಆದುದರಿಂದ ನಾಳೆ ಸಂಜೆ 5.30 ಕ್ಕೆ ಕಾಲೇಜಿನ auditorium ಬಳಿ ಒಬ್ಬನೇ ನಿಂತಿರ್ತಿನೀ, ನೀನು ಕೂಡ ಒಬ್ಬಳೇ ಬಂದರೆ ಹಾಗೇ sorry ಕೇಳಿಬಿಟ್ಟು ಹೋಗಿಬಿಡ್ತೆನೆ. ನಿನಗಾಗಿ ನಾಳೆ ಸಂಜೆ ಕಾಯ್ತ ಇರ್ತೆನೆ.. ಇತೀ C.S ಹುಡುಗ.
ಎಂದು ಬರೆದು ಕೊಂಡಿದ್ದ.
ಉಫ್.. ಏನು ಮಾಡಲಿ ಈಗ, ನನಗೆ ಹುಡುಗ ರ ಬಗ್ಗೆ ಜಾಸ್ತಿ ಆಸಕ್ತಿ ಇಲ್ಲ. ಮೊದಲೇ ಟಾಮ್ ಬಾಯ್ ನೇಚರ್ ನನ್ನದು. emotions, feelings ಗೆ ಎಲ್ಲಾ ನನ್ನ ಬಳಿ ಜಾಗವೇ ಇರಲಿಲ್ಲ. ಅದಕ್ಕೆ ಬೆಳೆಸಿದ ಅಪ್ಪ, ಬೆಳೆದ ಪರಿಸರ, ಹಾಗೂ ಸದ್ಯದ ವಾತಾವರಣವೂ ಕೂಡ ಕಾರಣ ಇರಬಹುದು.
ಆದರೆ ಅವ just sorry ಕೇಳುತ್ತಾನೆ ಎಂದರೆ. ಒಮ್ಮೆ ಹೋಗಿ ಮಾತಾಡಿಸಿ ಬಿಟ್ಟು ಬರುಲು ನನಗೇನು ಪ್ರಾಬ್ಲಂ.
ನಾನು computer science ಹುಡುಗನನ್ನು ಬೇಟಿ ಮಾಡಲು ನಿರ್ಧರಿಸಿದೆ.
ಮರುದಿನ ಸಂಜೆ ಆಗುವುದನ್ನೇ ಕಾದೆ. ನನಗೆ ಅವನ ಬಗ್ಗೆ ಏನೂ ಆಸಕ್ತಿ ಇರಲಿಲ್ಲ. ಆದರೆ ಅವ ಏನು ಹೇಳುತ್ತಾನೆ ಅದರ ಬಗ್ಗೆ ಆಸಕ್ತಿ ಇತ್ತು.ಕೊನೆಗೂ ಸಂಜೆ ಆಯಿತು. ಒಬ್ಬಳೇ auditorium ಕಡೆಗೆ ನಡೆಯಲು ಶುರು ಮಾಡಿದೆ.
ಅವ ಅಲ್ಲಿ ನಿಂತಿದ್ದ. Auditorium ನ ಎದುರಲ್ಲಿ!
ಹೌದು ಅವನೇ, ಅವತ್ತು ನಾನು ಸ್ಕೂಟಿ ಯಿಂದ ಚರಂಡಿ ಗೆ ಬೀಳಲು ಕಾರಣ ವಾಗಿದ್ದು ಅವನೇ.
"ಏನು..? "ಕೇಳಿದೆ.
" sowmya, i extremely sorry for what i had done to you" ಅಂದ.
"Its ok, but how do you know my name? " ಅಂದೆ.
ಅವ ಏನೂ ಮಾತಾಡಲಿಲ್ಲ.
" ಯಾಕೆ... ಏನಾಯಿತು? "ಕೇಳಿದೆ.
" ಫಸ್ಟ್ ಇಯರ್ mechanical ನಲ್ಲಿ, ಇಡೀ department ನಲ್ಲಿಯೇ ಇರುವುದು ಒಬ್ಬಳೇ ಹುಡುಗಿ. ಅದು ಸೌಮ್ಯ ಅಂತ ಇಡೀ ಕಾಲೇಜ್ ಗೇ ಗೊತ್ತು... " ಅಂದ.
ಅವ ಹೇಳಿದ್ದು ನಾನು ಸ್ವಲ್ಪ unique ಜನ ಅನ್ನುವ ಫೀಲ್ ಕೊಟ್ಟಿತ್ತು.
" ನಿನ್ನ ಹೆಸರೇನು.. "ಕೇಳಿದೆ
" ಶಿಶಿರ್.. First year computer science engineering.. " ಅಂದ.
" ನೋಡು ಶಿಶಿರ್.. ನಾನು ಕೂಡ ನಿನಗೆ ಹೊಡೆಯಬಾರದಿತ್ತು. ಕೋಪ ದ ಬರದಲ್ಲಿ ಹೊಡೆದೆ. ನಾನು ಕೂಡ ನಿನಗೆ sorry.. " ಅಂದೆ.
" its ok, its ok... No problem.. " ಅಂದ.
ಈ ರೀತಿಯಾಗಿ ನನಗೂ ಶಿಶಿರ್ ಗೂ ಪರಿಚಯ ಆಯಿತು. ಪರಿಚಯ ಸ್ನೇಹ ಆಯಿತು.
ಮೊಬೈಲ್ ನಂಬರ್ ಅದಲು ಬದಲಾಯಿತು. ಕಾಲೇಜ್ ಡೇ ದಿನ ಸ್ಟೇಜ್ ಎದುರಿನ ಕೌಂಟರ್ ಬಳಿ ಶಿಶಿರ್ ನನಗೆ ಮೈಕ್ ನಲ್ಲಿ ಯೇ ಎಲ್ಲರ ಎದುರು ಸಾಂಗ್ dedicate ಮಾಡಿಸಿದ, ರೋಸ್ dedicate ಮಾಡಿಸಿದ, ಚಾಕೊಲೇಟ್ ಕೂಡ dedicate ಮಾಡಿಸಿದ.. ಕೌಂಟರ್ ಬಳಿ ಹೋಗಿ ಎಲ್ಲವನ್ನೂ ಕೂಡ ಸ್ವೀಕರಿಸಿದೆ.
ನನ್ನಲಿಯ ಟಾಮ್ ಬಾಯ್ ಅದ್ಯಾಕೋ ಕರಗುತ್ತಾ ಬಂದಾ, ಅದಕ್ಕಿಂತ ಜಾಸ್ತಿ ಆಗಿ ಶಿಶಿರ್ ಕರಗಿಸಿದ!
ನಾವು ಪೈನಲ್ ಇಯರ್ ನಲ್ಲಿ ಇದ್ದೆವು. ಶಿಶಿರ್ ಗೆ ನನ್ನನ್ನು ಕಂಡರೆ ಒಂಥರಾ ಭಯ.ಹೆದರು ಪುಕ್ಕಲ ಅವ. ಒಂದು ಫೈನ್ ಡೇ ಶಿಶಿರ್ ಧೈರ್ಯ ಮಾಡಿ ನನಗೆ ಪ್ರಪೋಸ್ ಮಾಡಿದ.
ಅದಾಗಲೇ ನಾನು ಅವನಿಗೆ ಸಂಪೂರ್ಣ ಕರಗಿದ್ದೆ. ಮರು ಮಾತಾಡದೇ ಒಪ್ಪಿಕೊಂಡು ಬಿಟ್ಟೆ. ಈ ರೀತಿಯಾಗಿ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಪ್ರೀತಿ ಪ್ರೇಮ ದಲ್ಲಿ ಬೀಳಲೇ ಬಾರದು ಎಂದು ಅಂದುಕೊಂಡಿದ್ದ ನಾನು ನನಗೇ ಗೊತ್ತಿಲ್ಲದೇ ಪ್ರೀತಿಗೆ ಬಿದ್ದಿದ್ದೆ.
ಕೆಲವೊಮ್ಮೆ, ಕೆಲವರು ಪ್ರೀತಿಯಲ್ಲಿ ಬೀಳಬೇಕು ಬೀಳಬೇಕು ಎಂದು ಅಂದುಕೊಂಡಿರುತ್ತಾರೆ ಆದರೆ ಅವರು ಕೊನೆಗೂ ಪ್ರೀತಿಯಲ್ಲಿ ಬೀಳುವುದೇ ಇಲ್ಲ. ಇನ್ನು ಕೆಲವರು ಪ್ರೀತಿಯಲ್ಲಿ ಬೀಳಲೇಬಾರದು ಅಂತ ನಿರ್ಧರಿಸಿಬಿಟ್ಟಿರುತ್ತಾರೆ, ಅಂತವರೇ ಪ್ರೀತಿಯಲ್ಲಿ ಬೀಳುವುದು, ಕೊನೆಗೆ ನರಳಾಡುವುದು!!
ಅಂತು ಇಂತು engineering ಮುಗಿಯಿತು, convocation ಕೂಡ ಮುಗಿಯಿತು. ಇಬ್ಬರಿಗೂ ಮಂಗಳೂರಿನಲ್ಲಿಯೇ ಕೆಲಸ ಸಿಕ್ಕಿತು. ಆದರೆ ಬೇರೆ ಬೇರೆ ಕಂಪನಿ. ಮೂಡುಬಿದಿರೆ ಯಿಂದ ಡೈಲಿ ಹೋಗಿ ಬರುವುದು ಮಾಡಲು ಕಷ್ಟ ವಾಗಿತ್ತು. ನನಗೆ ಹೊಂದುವಂತ PG ಸಿಗಲಿಲ್ಲ. ಮಂಗಳೂರಿನಲ್ಲಿ ಯೇ ಅಂಕಲ್ ಮನೆ ಇತ್ತು. ಅವರೇ ಹೇಳಿದರು ನಾವಿರುವಾಗ PG ಎಲ್ಲಾ ಯಾಕೆ, ಇಲ್ಲಿಯೇ ಇದ್ದು ಬಿಡು ಎಂದು. ಹಾಗಾಗಿ ಅಲ್ಲೇ stay ಮಾಡಿದೆ.
ಶಿಶಿರ್ ನನ್ನನ್ನು ತುಂಬಾನೇ ಪ್ರೀತಿಸುತ್ತಿದ್ದ. ನಾನು ಕೂಡ ಅವನನ್ನು ತುಂಬಾನೇ ಪ್ರೀತಿಸುತ್ತಿದ್ದೆ. ಬಹುಶಃ ನಾನು ಅವನನ್ನು ಬಿಟ್ಟು ಬೇರೆ ಯಾವುದೇ ಹುಡುಗನನ್ನು ಅಷ್ಟೊಂದು ಪ್ರೀತಿಸಲು ಸಾಧ್ಯವಾಗುವುದಿಲ್ಲವೋ ಏನೋ. ಏಕೆಂದರೆ ಪ್ರೀತಿ ಎಂದರೆ ಏನೆಂದು ಕಲಿಸಿದವನೇ ಶಿಶಿರ್ ಅಲ್ಲವೇ.
ಒಂದು ದಿನ ಕೇಳಿದೆ. "ಶಿಶಿರ್ ನಿನಗೂ ಒಳ್ಳೆಯ ಕೆಲಸವಿದೆ. ನನಗೂ ಕೆಲಸವಿದೆ. ನಮ್ಮ ಮನೆಯಲ್ಲಿ ಅಮ್ಮ ಮದುವೆ ಆಗು ಮದುವೆ ಆಗು ಅಂತ ಒತ್ತಾಯ ಬೇರೆ ಮಾಡುತ್ತಿದ್ದಾರೆ. ಶಿಶಿರ್ ನಾವಿಬ್ಬರು ಯಾಕೆ ಮದುವೆ ಆಗಿ ಬಿಡಬಾರದು.." ಎಂದು ಕೇಳಿದೆ.
"ಹೂಂ... " ಅಂದ.
" ನೀನು ನಿಮ್ಮ ಮನೆಯಲ್ಲಿ ಕೇಳಿ ನೋಡು.. ನಾನು ನಮ್ಮ ಮನೆಯಲ್ಲಿ ಕೇಳಿನೋಡ್ತಿನಿ... " ಅಂದೆ.
" ಹೂಂ... " ಅಂದ!
ನಮ್ಮ ಮನೆಯಲ್ಲಿ ಅಮ್ಮ ಅಪ್ಪ ಇಬ್ಬರನ್ನು ಕೂತುಕೊಳಿಸಿ ವಿಷಯ ಹೇಳಿದೆ. ಅಮ್ಮ ಮೊದಲೇ orthodox, ಒಪ್ಪಲು ರೆಡಿಯೇ ಇರಲಿಲ್ಲ. ಆದರೆ ಅಪ್ಪ ಹಾಗಲ್ಲ. ಎಲ್ಲವನ್ನೂ ಸಾವಧಾನ ವಾಗಿ ಕೇಳಿಸಿಕೊಂಡು ಹೇಳಿದರು" ಸೌಮ್ಯ ನೀನು ನಮಗೆ ಒಬ್ಬಳೇ ಮಗಳು.ನಮ್ಮ ಪಾಲಿಗೆ ಗಂಡು ಮಗುವೂ ಕೂಡ ನೀನೇ ಹೆಣ್ಣು ಮಗು ಕೂಡ ನೀನೇ. ನಿನ್ನ ಖುಷಿ ಯೇ ನಮ್ಮ ಖುಷಿ. ನಿನಗೆ ಆ ಹುಡುಗನೊಂದಿಗೆ ಜೀವನ ನಡೆಸಬಲ್ಲೆ ಎಂಬ ವಿಶ್ವಾಸ ಇದ್ದರೆ ಖಂಡಿತವಾಗಿಯೂ ಅವನನ್ನೇ ಮದುವೆ ಆಗು. ನಮ್ಮದೇನು ಅಭ್ಯಂತರವಿಲ್ಲ. ಹಾಗೆ ಹುಡುಗನನ್ನು ಒಮ್ಮೆ ಮನೆಗೆ ಕರೆದುಕೊಂಡು ಬಂದು ನಮಗೂ ಪರಿಚಯ ಮಾಡಿಸಿ ಬಿಡು. ಆದರೆ ಇಬ್ಬರೂ ಹೇಳದೇ ಕೇಳದೇ ಎಲ್ಲಾದರೂ ಓಡಿ ಹೋಗಿ ಮದುವೆ ಆಗಿ ನಮ್ಮ ಮಾನ ಮರ್ಯಾದೆ ತೆಗೆಯುವ ಕೆಲಸ ಮಾತ್ರ ಮಾಡಬೇಡಮ್ಮ.. ನಾನು ಮೊದಲೇ ನಿವೃತ್ತ ಸೈನಿಕ. ಮಾನ ಮರ್ಯಾದೆ ಗೆ ಜಾಸ್ತಿ ಬೆಲೆ ಕೊಡೋನು.. " ಅಂದು ಬಿಟ್ಟರು ಅಪ್ಪ.
ಅಪ್ಪ ಹೇಳಿದ್ದು ತುಂಬಾನೇ ಖುಷಿಯಾಯಿತು. ಆದರೂ ಅವರು ಕೊನೆಯಲ್ಲಿ ಹೇಳಿದ ಮಾತುಗಳು ನನ್ನನ್ನು ಸ್ವಲ್ಪ ಚಿಂತಿಸುವಂತೆ ಮಾಡಿತು.
ಮರುದಿನವೇ ನಮ್ಮ ಮನೆಗೆಯೇ ಶಿಶಿರ್ ಅನ್ನು ಕರೆದು ಕೊಂಡು ಬಂದೇ. ಅಪ್ಪ ಅಮ್ಮನಿಗೆ ಪರಿಚಯಿಸಿದೆ. ತುಂಬಾನೇ ಸರಳ ಹಾಗೂ ಸಾದು ಪ್ರಾಣಿಯಂತಿದ್ದ ಅವನು ನಮ್ಮ ಅಮ್ಮ ನಿಗೂ ಕೂಡ ತುಂಬಾನೇ ಇಷ್ಟವಾದ. ಅವಳು ಕೂಡ ಓಕೆ ಹೇಳಿಬಿಟ್ಟಳು.
ಇಷ್ಟೆಲ್ಲಾ ಆದರೂ ಶಿಶಿರ್ ಮನೆಯಲ್ಲಿ ಏನು ಆಯಿತು ಎಂದು ಶಿಶಿರ್ ಒಮ್ಮೆಯೂ ಬಾಯಿ ಬಿಡಲೇ ಇಲ್ಲ.
ಒಂದು ದಿನ ಎದುರು ನಿಲ್ಲಿಸಿ ಕೇಳಿಯೇಬಿಟ್ಟೆ. "ಹೇಳು ಶಿಶಿರ್.. ನಮ್ಮ ಮದುವೆ ಬಗ್ಗೆ ನಿಮ್ಮ ಮನೆಯಲ್ಲಿ ಏನು ಹೇಳಿದರು..?"
ಅವನು ಬಾಯಿ ಬಿಡಲಿಲ್ಲ.
ಕೊರಳಪಟ್ಟಿ ಹಿಡಿದು ಮತ್ತೊಮ್ಮೆ ಕೇಳಿದೆ.. "ಹೇಳು...." ಎಂದು.
"ಈ ಮದುವೆ ಸಾಧ್ಯವಿಲ್ಲ ಅಂದರು.. " ಎಂದ ಮೆಲ್ಲಗೆ.
ಅವನ ಕಪಾಳ ಕ್ಕೆ ಎರಡು ಬಾರಿಸುವ ಅಂತ ಮನಸ್ಸಾಯಿತು." ನೀನೇನು ಅವರನ್ನು convince ಮಾಡಲಿಲ್ಲವಾ? ಸುಮ್ಮನೆ ಅವರು ಹೇಳಿದ್ದನ್ನು ಕೇಳಿಸಿಕೊಂಡು ನಿಂತಿದ್ದೆಯಾ.. " ಎಂದು ಕೋಪದಿಂದ ಕೇಳಿದೆ.
" ಇಲ್ಲಾ ಎಲ್ಲಾ ರೀತಿಯಲ್ಲೂ ಹೇಳಿದೆ. ಆದರೆ intercaste ಮದುವೆ ಗೆ ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ.ನಮ್ಮದು ತುಂಬಾನೇ orthodox family, ಬೇರೆ ಜಾತಿ ಗೂ ಹೆಣ್ಣು ಕೊಡಲ್ಲ. ಬೇರೆ ಜಾತಿಯಿಂದಲೂ ಹೆಣ್ಣು ತರಲ್ಲ. I'm helpless sowmya.. " ಅಂದ.
ನನಗೇ ದಿಕ್ಕೆ ತೋಚದಂತಾಯಿತು. ನಾನು ಶಿಶಿರ್ ಅನ್ನು ಪ್ರಾಣಕ್ಕಿಂತ ಜಾಸ್ತಿ ಆಗಿ ಪ್ರೀತಿಸಿದ್ದೆ. ಆದರೆ ಯಾವಾಗಲೂ ಅದನ್ನು ಅವನಿಗೆ ತೋರಿಸಿಕೊಂಡಿರಲಿಲ್ಲ ಅಷ್ಟೇ. ಅವನ ಪಾಲಿಗೆ ಜಸ್ಟ್ rough & tough ಆಗಿ serious ಹುಡುಗಿ ತರಾನೇ ಇದ್ದೆ. ಆದರೆ ಎಷ್ಟಾದರೂ ನಾನು ಕೂಡ ಹುಡುಗಿ ಯೇ ಅಲ್ಲವೇ.ನನಗೂ ಹುಡುಗಿ ಮನಸ್ಸು ಇದೆಯಲ್ಲಾ.ಹೃದಯ ಕೊಟ್ಟಾಗಿತ್ತು. ಈಗ ಹೃದಯ ಹಿಂಡಿದಂತೆ ಆಗುತ್ತಿದೆ!
ಶಿಶಿರ್ ಬಿಟ್ಟು ಬಾಳಲು ಸಾಧ್ಯವೇ ಇಲ್ಲ ಅಂತ ಅಂದುಕೊಂಡು ಬಿಟ್ಟಿದ್ದೆ ನಾನು.
"ಸೌಮ್ಯ ನಿನ್ನನ್ನು ಬಿಟ್ಟು ಬದುಕಲು ನನಗೂ ಸಾಧ್ಯವಿಲ್ಲ... " ಅಂದ.
ನನಗೇ ಅಳುವೇ ಬಂದಂತಾಯಿತು.
" ಹೇಳು ಶಿಶಿರ್.. ಏನು ಮಾಡುವುದು ಮುಂದೆ. "ಅಂದೆ.
" ಎಲ್ಲಾದರೂ ದೂರ ಓಡಿ ಹೋಗಿ ಮದುವೆ ಆಗೋಣ ವಾ... " ಅಂದ.
" ದಮ್ಮಯ್ಯ, ಬೇಕಾದರೆ ಒಟ್ಟಿಗೆ ಸತ್ತು ಬಿಡೋಣ ಎಂದು ಹೇಳು. ಆದರೆ ಓಡಿ ಹೋಗಿ ಮದುವೆ ಆಗಿ ಎಲ್ಲೋ ಒಂದು ಕಡೆ ಬದುಕಿ ನನ್ನ ತಂದೆ ತಾಯಿ ಮರ್ಯಾದೆ ತೆಗಿಲಿಕ್ಕೆ ನಾನು ರೆಡಿ ಇಲ್ಲ... " ಅಂದೆ.
ತುಂಬಾ ಹೊತ್ತು ಶಿಶಿರ್ ಮೌನವಾಗಿಯೇ ಇದ್ದ.
ಕೊನೆಗೆ ಹೇಳಿದ" ಹಾಗಾದರೆ ಒಟ್ಟಿಗೆ ಸತ್ತು ಬಿಡೋಣ..!! "
ಹೇಳಿ ಸುಮ್ಮನಾದ.
ಶಿಶಿರ್ ಅನ್ನು ಬಿಟ್ಟು ಬಾಳುವ ಶಕ್ತಿ ನನಗಾಗಲಿ, ನನ್ನನ್ನು ಬಿಟ್ಟು ಬಾಳುವ ಶಕ್ತಿ ಶಿಶಿರ್ ಗಾಗಲಿ ಇಲ್ಲ. ಹೌದು ನಮ್ಮ ಎಲ್ಲಾ ಪ್ರಾಬ್ಲಂ ಗೆ ಸಾವು ಒಂದೇ ಪರಿಹಾರ ವಾದರೆ ಸತ್ತು ಬಿಡುವುದೇ ಒಳ್ಳೆಯದು.ಸತ್ತ ಮೇಲೆ ಆದರೂ ನಾವು ಮೇಲೆ ಒಟ್ಟಿಗೆ ಇರಬಹುದು ಎಂದು ಹುಚ್ಚಿಯಂತೆ ಏನೇನೋ ಆಲೋಚಿಸಲು ತೊಡಗಿದೆ.
ಹೌದು ಕೆಲವೊಮ್ಮೆ ಅತಿಯಾದ ಪ್ರೀತಿ ಹುಚ್ಚರನ್ನಾಗಿ ಮಾಡಿಬಿಡುತ್ತದೆ!! ಡೀಪ್ ಆದ ಪ್ರೀತಿಯಲ್ಲಿ ಬಿದ್ದವರು. ಯಾವುದು ಸರಿ ಯಾವುದು ತಪ್ಪು ಅನ್ನುವ ಯೋಚನಾ ಶಕ್ತಿ ಯನ್ನೇ ಕಳೆದುಕೊಂಡು ಬಿಟ್ಟಿರುತ್ತಾರೆ. ನನ್ನನ್ನು ಕೂಡ ಮಾಡಿದ್ದು ಅದೇ..
" ಶಿಶಿರ್ ನೀನಿಲ್ಲದೇ ಈ ಬದುಕನ್ನು ಕಲ್ಪಿಸಿಕೊಳ್ಳಲು ನನಗೇ ಸಾಧ್ಯವಿಲ್ಲ. ನನ್ನೊಳಗಿನ ಹುಡುಗಿಯನ್ನು ಜಾಗೃತ ಗೊಳಿಸಿದವನು ನೀನೇ. ಸುಪ್ತವಾಗಿದ್ದ ನನ್ನ ಹೃದಯದ ವೀಣಿಯನ್ನು ಮೀಟಿ ಪ್ರೇಮ ಪಲ್ಲವಿ ಯನ್ನು ಹಾಡಿದ ಹುಡುಗನೂ ನೀನೆ. ನೀನಿಲ್ಲದೇ ಏನೂ ಇಲ್ಲ. ನೀನಿಲ್ಲದೇ ನಾನಿಲ್ಲ. ಆಯಿತು ಶಿಶಿರ್ ನೀನು ಹೇಳಿದಂತೆಯೇ ಆಗಲಿ. ಈ ಬದುಕನ್ನು ಮುಗಿಸಿಬಿಡುವ..!! " ಅಂದೆ.
ಅವನು ಮೌನವಾಗಿ ಯೇ ಇದ್ದ. ಈ ಹುಡುಗರ ಮೌನ ಕೆಲವೊಮ್ಮೆ ಭಯ ಹುಟ್ಟಿಸುತ್ತದೆ.
" ಶಿಶಿರ್ ಸಾಯುವುದೆಂದು ಡಿಸೈಡ್ ಮಾಡಿ ಆಗಿದೆ. ಆದರೆ ಹೇಗೆ ಸಾಯುವುದು.ನೀನೇ ಹೇಳು... " ಅಂದೆ.
ಅವನೂ ಇನ್ನೂ ಮೌನವಾಗಿಯೇ ಇದ್ದ.!
" ಶಿಶಿರ್ poison ಕುಡಿದು ಸಾಯುವನಾ... " ಕೇಳಿದೆ.
" ಬೇಡ ಆ ನೋವು ತಡೆದುಕೊಳ್ಳಲು ಸಾಧ್ಯವಿಲ್ಲ... " ಅಂದ.
" ಟ್ರೈನ್ ಅಡಿಗೆ ತಲೆ ಕೊಡುವನಾ... " ಕೇಳಿದೆ.
" ಟ್ರೈನ್ ಅಂದರೆ ಭಯ ಆಗುತ್ತೆ . ಟ್ರೈನ್ ಹತ್ತಿರ ಬಂದಾಗ ಮಲಗಿದ್ದಲ್ಲಿಂದ ಎದ್ದು ಓಡುವ ಅಂತ ಆಗ್ತದೆ.. " ಅಂದ.
" ಪೆಟ್ರೋಲ್ ಸುರಿದುಕೊಂಡು, ಬೆಂಕಿ ಕೊಟ್ಟುಕೊಂಡು... " ಅಂದೆ.
" ಬೇಡ.... " ಅಂದ.
" ಮತ್ತೆ..ಹೇಗೆ? " ಕೇಳಿದೆ.
" ನಿನಗೆ swimming ಬರುತ್ತಾ... " ಕೇಳಿದ.
ನಾನು ಎಲ್ಲವನ್ನೂ ಕಲಿತಿದ್ದೆ. ಆದರೆ swimming ಒಂದನ್ನು ಬಿಟ್ಟು.
" ಇಲ್ಲ... " ಅಂದೆ.
" ಓಕೆ ಹಾಗಾದರೆ ಬ್ರಿಡ್ಜ್ ಮೇಲಿನಿಂದ ನೀರಿಗೆ ಹಾರಿ ಸಾಯುವ... " ಅಂದ.
ಒಂದು ಕ್ಷಣ ಮೌನವಾದೆ.
ಅಮೇಲೆ ದೃಡ ನಿರ್ಧಾರ ಮಾಡಿ ಹೇಳಿದೆ" ಆಯ್ತು ಶಿಶಿರ್,ಎಲ್ಲಿ? ಯಾವ ಬ್ರಿಡ್ಜ್? ಎಷ್ಟು ಗಂಟೆಗೆ ಬರಬೇಕು ಎಂದು ಹೇಳು, ನಾನು ರೆಡಿ ಆಗಿ ಬರ್ತಿನಿ " ಅಂದೆ.
" ನಾಳೆ ಬೆಳಿಗ್ಗೆ 5 ಗಂಟೆಗೆ, ಕೂಳೂರು ಬ್ರಿಡ್ಜ್... " ಅಂದ.
ಅಮೇಲೆ ಅವನು ಹೋದ.
ನಾನು ನನ್ನ ಅಂಕಲ್ ಮನೆಗೆ ಬಂದೆ.
ರಾತ್ರಿ ಕಳೆದು ಬೆಳಗಾಯಿತು.
ಅವನು ಹೇಳಿದ ಟೈಂ ಗೆ ಸರಿಯಾಗಿ ನಾನು ಕೂಳೂರು ಬ್ರಿಡ್ಜ್ ಮೇಲೆ ಇದ್ದೆ. ಸುತ್ತಾ ಮುತ್ತಾ ಯಾರೂ ಇರಲಿಲ್ಲ.
ಸ್ವಲ್ಪ ಹೊತ್ತಲ್ಲೇ ಶಿಶಿರ್ ಬಂದ.
ಇಬ್ಬರೂ ಬ್ರಿಡ್ಜ್ ಮೇಲೆ ಹೋಗಿ ನಿಂತುಕೊಂಡೆವು. ಕೈ ಕೈ ಹಿಡಿದು ಕೊಂಡು, ಇನ್ನೆನೋ ಕೆಳಗೆ ನೀರಿಗೆ ಹಾರಬೇಕು ಅಂದುಕೊಳ್ಳುವಷ್ಟರಲ್ಲಿ. ನನಗೆ ಏನೋ ಹೊಳೆದಂತಾಯಿತು!!
"ಶಿಶಿರ್... " ಅಂದೆ ಕಣ್ಣು ಮುಚ್ಚಿಯೇ.
" ಏನು.. ? "ಎಂದು ಕೇಳಿದ.
" ನನಗೆ ಅನಿಸುತ್ತೆ, ಕೆಳಗೆ ನೀರಿನಲ್ಲಿ ಹೂಳು ತುಂಬಿ ಈ ನದಿ ಅಷ್ಟೇನೂ ಡೀಪ್ ಇಲ್ಲ ಅಂತ. ನಾವು ಹಾರಿದಾರೂ ಸಾಯುವುದು ಡೌಟು... " ಅಂದೆ.
" ಹಾಗಾದರೆ ಏನು ಮಾಡಬೇಕು ಅಂತ ಹೇಳ್ತಿಯಾ... " ಅಂದ.
" ಯಾಕೆ ನಾವು ಉಳ್ಳಾಲ ಬ್ರಿಡ್ಜ್ ಅಲ್ಲಿ ಟ್ರೈ ಮಾಡಬಾರದು... " ಅಂದೆ.
" ಹೌದು ನೀನು ಹೇಳಿದ್ದು ಕರೆಕ್ಟ್.. ಸಾಯುವ ಪ್ರಯತ್ನ ಮಾಡಿದ ಮೇಲೆ ಸಾಯಲೇಬೇಕು. ಆದರೆ ಈಗ ಇಲ್ಲಿಂದ ಉಳ್ಳಾಲ ಕ್ಕೆ ಹೋದರೆ ಲೇಟ್ ಆಗುತ್ತೆ. ಜನ ಇರ್ತಾರೆ. ನೈಟ್ ಟ್ರೈ ಮಾಡುವ..10 ಗಂಟೆಗೆ . " ಅಂದ
ಪುನಃ ನಾನು ಅಂಕಲ್ ಮನೆಗೆ ವಾಪಸ್ ಬಂದೆ. ಬೆಳ್ಳಿಗೆ ಹೋಗಿ ಮಧ್ಯಾಹ್ನ ಆಯಿತು. ಮಧ್ಯಾಹ್ನ ಕಳೆದು ಸಂಜೆ ಆಯಿತು. ನಿಧಾನವಾಗಿ ಕತ್ತಲು ಆವರಿಸತೊಡಗಿತು.
ಮನೆಯಿಂದ ಹೊರ ನಡೆದೆ.
10 ಗಂಟೆಗೆ ಸರಿಯಾಗಿ ಉಳ್ಳಾಲ ಬ್ರಿಡ್ಜ್ ಮೇಲೆ ಇದ್ದೆ.
ಶಿಶಿರ್ ಅದಾಗಲೇ ಬಂದಿದ್ದ.
ಇಬ್ಬರೂ ಮಾತಾಡಲಿಲ್ಲ. ಒಬ್ಬರನ್ನೊಬ್ಬರು ಕೊನೆಯ ಬಾರಿಗೆ ನೋಡಿಕೊಂಡೆವು.
ಇಬ್ಬರು ಕೈ ಕೈ ಹಿಡಿದು ಕೊಂಡು ಬ್ರಿಡ್ಜ್ ಮೇಲೆ ಹತ್ತಿದೆವು.
ಇನ್ನು ಕೆಲವೇ ಕ್ಷಣಗಳಲ್ಲಿ ನಮ್ಮ ಪ್ರಾಣ ಪಕ್ಷಿ ಹಾರಿ ಬಲು ದೂರ ಹೋಗಿರುತ್ತದೆ ಎಂದು ನಮಗೆ ಗೊತ್ತಿತ್ತು. ಇಬ್ಬರೂ ಕಣ್ಣು ಮುಚ್ಚಿಕೊಂಡು ಇಷ್ಟ ದೇವರನ್ನು ಕೊನೆಯ ಬಾರಿಗೆ ನೆನೆದೆವು.
ಇನ್ನೇನು ಇಬ್ಬರು ಹಾರಬೇಕು.ಆವಾಗ ಪುನಃ ನನ್ನ ಮನಸ್ಸಿಗೆ ಏನೋ ಒಂದು ಹೊಳೆಯಿತು.
"ಶಿಶಿರ್... " ಅಂದೆ ಕಣ್ಣು ಮುಚ್ಚಿಯೇ.
" ಏನು..?" ಅಂದ ಅವ ಕೂಡ ಕಣ್ಣು ಮುಚ್ಚಿಯೇ.
"ನನ್ನದೊಂದು ಕೊನೆಯ ಆಸೆ ಇದೆ.. " ಅಂದೆ.
" ಹೇಳು... "ಅಂದ.
" ಏನಿಲ್ಲ ಶಿಶಿರ್,ಮದುವೆ ಆದ ಮೇಲೆ ನಿನಗಿಂತ ಮೊದಲು ನಾನು ಸಾಯ್ಬೇಕು ಎಂದು ಆಸೆ ಪಟ್ಟಿದ್ದೆ. ಆದರೆ ಮದುವೆ ಆಗಿ ಆ ರೀತಿ ಸಾಯುವ ಭಾಗ್ಯ ನಮಗಿಲ್ಲ. ಕನಿಷ್ಠ ಪಕ್ಷ ಈ ರೀತಿಯಾಗಿ ಸಾಯುವಾಗ ಆದರೂ ನಿನಗಿಂತ ಮೊದಲು ನೀರಿಗೆ ಹಾರಿ ಒಂದೈದು ನಿಮಿಷ ನಿನಗಿಂತ ಮೊದಲೇ ನಾನು ಪ್ರಾಣ ಬಿಡಲೇ ಶಿಶಿರ್..ಪ್ಲೀಸ್ ಇಲ್ಲವೆಂದು ಮಾತ್ರ ಹೇಳಬೇಡ.. " ಅಂದೆ.
ಅವನು ಏನೂ ಮಾತಾಡಲಿಲ್ಲ..ಮೌನವಾಗಿದ್ದ.
" ಶಿಶಿರ್... " ಅಂದೆ
" ಆಯ್ತು ನಿನ್ನಿಷ್ಟ.. ಹಾಗೇ ಮಾಡು .. " ಅಂದ.
ಹಿಡಿದಿದ್ದ ಶಿಶಿರ್ ನ ಕೈ ಬಿಡಿಸಿಕೊಂಡೆ.
ಬ್ರಿಡ್ಜ್ ಮೇಲಿನಿಂದ ನೀರಿಗೆ ನಾನು ಧುಮುಕಿ ಬಿಟ್ಟೆ ...!!! "
ಕಥೆ ಹೇಳಿ ಮುಗಿಸಿದ ಸೌಮ್ಯ ಮಲಗಿಕೊಂಡೇ ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನಾನೀಗ ಆಕಾಶದ ವಿಶಾಲವಾದ ಸ್ಕ್ರೀನ್ ನಿಂದ ನನ್ನ ದೃಷ್ಟಿಯನ್ನು ತೆಗೆದು ಲೇಡಿಸ್ PG ಯ ಟೆರೇಸ್ ಮೇಲಿನ real ಸ್ಕ್ರೀನ್ ಗೆ ನನ್ನ ದೃಷ್ಟಿಯನ್ನು ಹೊರಳಿಸಿದೆ. ಪಕ್ಕದಲ್ಲಿ ಮಲಗಿದ್ದ ಸೌಮ್ಯಳ ಕಡೆಗೆ ನೋಡಿದೆ. ಸೌಮ್ಯ ಅಳುತ್ತಿದ್ದಳು.
ನನಗೆ ಅರ್ಥ ವಾಯಿತು. ನನಗೆ ಮಾತ್ರವಲ್ಲ ಅವಳ ಸ್ಟೋರಿ ಕೇಳಿದ ಯಾರಿಗೇ ಆದರೂ ಅರ್ಥವಾಗುತ್ತದೆ, ಮೊದಲು ನೀರಿಗೆ ಹಾರಿದ ಸೌಮ್ಯ ಹೇಗೋ ಬದುಕಿದ್ದಾಳೆ, ಯಾಕೆಂದರೆ ಕಣ್ಣ ಮುಂದೆಯೇ ಇದ್ದಾಳಲ್ಲ,
ಆದರೆ ನಂತರ ಹಾರಿದ ಶಿಶಿರ್ ಮಾತ್ರ ಈಗ ಬದುಕುಳಿದಿಲ್ಲ. ಸೌಮ್ಯ ಳನ್ನು ಈ ಜಗತ್ತಿನಲ್ಲಿ ಒಬ್ಬಂಟಿ ಮಾಡಿ ಹೋಗಿದ್ದಾನೆ ಶಿಶಿರ್. ಹೇಗೆ ತಾನೇ ತಡೆದುಕೊಳ್ಳುತ್ತೆ ಜೀವಾ.
ತಾನು ಜೀವಕ್ಕಿಂತ ಜಾಸ್ತಿ ಪ್ರೀತಿಸಿದವ ಸತ್ತು ಬಿಟ್ಟರೆ, ಅದರಲ್ಲೂ ಇಬ್ಬರೂ ಒಟ್ಟಿಗೆ ಸಾಯಲು ಪ್ರಯತ್ನಿಸಿದಾಗ ತಾನು ಸಾಯದೇ, ತಾನು ಪ್ರೀತಿಸಿದ ಜೀವ ಮಾತ್ರ ಸತ್ತು ಹೋಗಿ , ಕೊನೆಗೆ ತಾನು ಮಾತ್ರ ಉಳಿದು ಬಿಟ್ಟರೆ , ಅಂತವರ ವೇದನೆ ಹೇಳತೀರದು. ಅದು ಹೇಗಿರಬಹುದು ಎಂದು ಪದಗಳಲ್ಲಿ ಕಥೆಗಳಲ್ಲಿ ವಿವರಿಸುವುದು ಕಷ್ಟ. ಪಾಪ ಜೀವನದಲ್ಲಿ ತುಂಬಾನೇ ನೊಂದಿದ್ದಾಳೆ ಸೌಮ್ಯ. ಅದಕ್ಕಾಗಿ ಶಿಶಿರ್ ಅನ್ನು ಮರೆಯಲಾಗದೇ ಮನಸ್ಸಿನಲ್ಲಿ ಇಷ್ಟು ನೋವು ಇಟ್ಟುಕೊಂಡು ಕೊರಗುತ್ತಿದ್ದಾಳೆ ದಿನಾಲೂ ಕುಡಿಯುತ್ತಿದ್ದಾಳೆ. ನಾನು ನನ್ನ ಕಥೆಯನ್ನೇ ಏನೋ ಮಹಾನು ಕಥೆ ಅಂತ ತಿಳಿದುಕೊಂಡಿದ್ದೆ. ಆದರೆ ಇವಳ ಕಥೆಯ ಮುಂದೆ ನನ್ನ ಕಥೆ ಏನೂ ಅಲ್ಲ ಅಂತ ಅನಿಸಿತು ಒಮ್ಮೆ. ನಾನು ಜಾಸ್ತಿಯಾಗಿ ಅಳಲ್ಲ. ಆದರೆ ಅವತ್ತು ಕಣ್ಣಿನಿಂದ ಎರಡು ಹನಿ ನನಗೇ ಗೊತ್ತಾಗದೇ ಜಾರಿ ಬಿಟ್ಟಿತ್ತು !
ಮಲಗಿದ್ದಲ್ಲಿಂದ ಎದ್ದು ಕುಳಿತುಕೊಂಡೇ. ಕಣ್ಣು ಒರೆಸಿಕೊಂಡೆ.
ಸೌಮ್ಯ ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದಳು. ಅಷ್ಟು serious ಆಗಿ ಕಾಣುತ್ತಿದ್ದ ಹುಡುಗಿ ಈ ರೀತಿ ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳಬಲ್ಲಳು ಎಂಬ ಕಲ್ಪನೆಯೇ ನನಗೆ ಇರಲಿಲ್ಲ.ಅವಳ ಹಿಂದೆ ಈ ರೀತಿಯ ನೋವಿನ ಕಥೆ ಇರಬಹುದು ಎಂಬ ಐಡಿಯಾ ಕೂಡ ಇರಲಿಲ್ಲ. ಪಾಪ ಯಾರಿಗೂ ತನ್ನ ಕಥೆ ಹೇಳಿರಲಿಲ್ಲ. ಆದರೆ ಇವತ್ತು ಪೂರ್ತಿ ಕಥೆ ಹೇಳಿದ ಮೇಲೆ ತಡೆದುಕೊಳ್ಳಲು ಆಗದೇ ಅಳುತ್ತಿದ್ದಾಳೆ.ಸ್ವಲ್ಪ ಹೊತ್ತು ಅಳಲಿ. ಅತ್ತು ಅತ್ತು ಹಾಗಾದರೂ ಮನಸ್ಸು ಸಮಾಧಾನ ಮಾಡಿಕೊಳ್ಳಲಿ ಎಂದು ಅನಿಸಿತು.
ಯಾರೋ ಒಬ್ಬರು ಹೇಳಿದ್ದು ನೆನಪಾಯಿತು. ನಾವು ಯಾವತ್ತೂ ನಮ್ಮ ನೋವನ್ನು ಆಗಲಿ ವೇದನೆಯನ್ನು ಆಗಲಿ ಯಾರೊಂದಿಗಾದರು ನಮ್ಮ ತುಂಬಾ ಆತ್ಮೀಯರ ಜೊತೆ ನಿಯಮಿತವಾಗಿ ಹಂಚಿಕೊಳ್ಳಬೇಕಂತೆ. ಇಲ್ಲದಿದ್ದರೆ ಎಲ್ಲಾ ನೋವನ್ನು ಯಾರಿಗೂ ಹೇಳದೇ ನಮ್ಮಲ್ಲಿಯೇ ಇಟ್ಟುಕೊಂಡರೆ ಕೊನೆಗೊಂದು ದಿನ, ಈ ರೀತಿ ಸೌಮ್ಯ ತರಹ, ನಮ್ಮ ಮನಸ್ಸಿನ ಅಣೆಕಟ್ಟು ಒಡೆದು ಎಲ್ಲಾ ಭಾವನೆಗಳು ಕಣ್ಣೀರಾಗಿ, ಧಾರಕಾರವಾಗಿ ಹರಿಯಲು ಶುರುಮಾಡಿ ಬಿಡುತ್ತದೆ.
ಒಡೆದ ಅಣೆಕಟ್ಟಿನ ನೀರನ್ನು ಒಮ್ಮೆಗೆ ನಿಯಂತ್ರಿಸಲು ಸಾಧ್ಯವೇ, ನೀರು ಖಾಲಿ ಆಗುವವರೆಗೂ ಕಾಯಲೇಬೇಕು!
ಸೌಮ್ಯ ಳ ಅಳು ಇನ್ನೂ ನಿಂತಿರಲಿಲ್ಲ. ಹೆಚ್ಚು ಕಡಿಮೆ ಮೂರು ನಾಲ್ಕು ನಿಮಿಷ ಆಗಿತ್ತು.
"ಸೌಮ್ಯ... " ಅಂದೆ.
ಅವಳು ಅಳುತ್ತಲೇ ಇದ್ದಳು. ಮಲಗಿದ್ದ ಅವಳನ್ನು ಎಬ್ಬಿಸಿ ಕುಳಿತುಕೊಳ್ಳಿಸಿದೆ.
" ನಿನ್ನ ನೋವು ನನಗೆ ಅರ್ಥ ಆಗುತ್ತದೆ ಸೌಮ್ಯ, ಶಿಶಿರ್ ಇಲ್ಲ ಎಂಬ ಅಪ್ರೀಯ ಸತ್ಯವನ್ನು ಇವತ್ತಲ್ಲ ನಾಳೆಯಾದರೂ ನೀನು ಅರಗಿಸಿಕೊಳ್ಳಲೇ ಬೇಕು.ಅದುವೇ ಸತ್ಯ. ಸಾವಿಗಿಂತ ಕಠೋರ ವಾದ ಸತ್ಯ ಈ ಬಾಳಿನಲ್ಲಿ ಇನ್ನೊಂದಿಲ್ಲ. ಇಷ್ಟವಿಲ್ಲದೇ ಇದ್ದರೂ ಎಲ್ಲರೂ ಅದನ್ನು ಒಪ್ಪಿಕೊಳ್ಳಲೇ ಬೇಕು. ನೀನೇ ಹೀಗೆ ಮಾಡಿದರೆ ಹೇಗೆ, ನೀನು ವೀರ ಯೋಧನ ಪುತ್ರಿ.ನೀನು ಧೈರ್ಯ ವಂತೆ.
ಸಮಾಧಾನ ತಂದುಕೋ.. " ಅಂದೆ.
ನಾನು ಯಾರಿಗೂ ಈ ರೀತಿಯಾಗಿ ಸಮಾಧಾನ ಮಾಡಿದವನೇ ಅಲ್ಲ. ಸಮಾಧಾನ ಮಾಡಿ ಕೂಡ ಗೊತ್ತಿಲ್ಲ. ಆದರೆ ಯಾಕೋ ಇಂದು ನಾನು ಕೂಡ ತುಂಬಾನೇ emotional ಆಗಿದ್ದೆ.
ಸೌಮ್ಯ ಅಳುತ್ತಲೇ ಹೇಳಿದಳು " ಉಲ್ಲಾಸ್, ನಾನು ಶಿಶಿರ್ ಸತ್ತು ಹೋಗಿದ್ದಾನೆ ಎಂದು ಅಳುತ್ತಿಲ್ಲ..!! " ಅಂದಳು.
ಒಂದು ಕ್ಷಣ ನನಗೆ ಶಾಕ್ ಆಯಿತು! ಅಲ್ಲಾ ಶಿಶಿರ್ ಸತ್ತದಕ್ಕೆ ಇವಳು ಅಳುತ್ತಿಲ್ಲ ಎಂದಾದರೆ ಇನ್ನು ಯಾವುದಕ್ಕಾಗಿ ಇವಳು ಈ ರೀತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ! ಕಥೆಯಲ್ಲಿ ಏನಾದರೂ ಟ್ವಿಸ್ಟ್ ಇರಬಹುದೇ ಅನಿಸಿತು.
"ಮತ್ತೆ.. ಮತ್ತೆ.. ಯಾಕಾಗಿ ಅಳುತ್ತಿದ್ದಿಯಾ? " ತೊದಲುತ್ತಾ ಕೇಳಿದೆ.,
ಅಳುತ್ತಲೇ ಹೇಳಿದಳು "ಉಲ್ಲಾಸ್, ನಾನೇನೋ ಮೊದಲು ನೀರಿಗೆ ಹಾರಿದ್ದೆ. ಆದರೆ ನನ್ನ ನಂತರ ಆ ದರ್ಬೇಸಿ, ರಾಸ್ಕಲ್, ಲೋಫರ್ ಶಿಶಿರ್ ನೀರಿಗೆ ಹಾರಲೇ ಇಲ್ಲ!!
ನಾನು ಹಾರಿದ ಮೇಲೆ ಹೆದರು ಪುಕ್ಕಲ ಮನೆಗೆ ಓಡಿ ಹೋಗಿದ್ದ...ಅವನನ್ನು ತುಂಬಾನೇ ನಂಬಿದ್ದೆ. ಅವನು ನನ್ನ ನಂಬಿಕೆ ಗೆ ಮೋಸ ಮಾಡಿ ಬಿಟ್ಟಿದ್ದ ಉಲ್ಲಾಸ್.." ಎಂದು ಮತ್ತೂ ಜೋರಾಗಿ ಅಳಲು ಶುರು ಮಾಡಿದಳು.
ಅಲ್ಲೇ ಮ್ಯಾಟ್ ಮೇಲೆ ಕುಳಿತಿದ್ದವನು ಸರಕ್ಕನೆ ಎದ್ದು ನಿಂತು ಸ್ವಲ್ಪ ದೂರ ಹೋಗಿ ನಿಂತುಕೊಂಡೆ!
"ಏನಾಯಿತು ಉಲ್ಲಾಸ್.. " ಎಂದು ಕಣ್ಣೋರೆಸಿಕೊಂಡು ಕುಳಿತಲ್ಲಿಂದಲೇ ಕೇಳಿದಳು.
" ಅಲ್ಲಾ , ಲೈಫ್ ನಲ್ಲಿ ನೀನು ಇಷ್ಟೊಂದು ಸಿರಿಯಸ್ ಆಗಿ ಇರುವುದನ್ನು ನೋಡಿ ನಾನೇನೋ ನಿನ್ನದು ಭಯಂಕರ ಟ್ರಾಜಿಡಿ ಸ್ಟೋರಿ ಇರಬಹುದು ಅಂತ ಅನ್ಕೊಂಡ್ರೆ ನೀನು ಒಂದು ಒಳ್ಳೆಯ ಕಾಮೆಡಿ ಸ್ಟೋರಿ ಹೇಳಿದೆ, ಸಾಧು ಕೋಕಿಲ ಹಾಕಿ ಒಳ್ಳೆಯ ಕಾಮೆಡಿ ಮೂವಿ ಮಾಡಿದ್ರೆ hundred days ಗ್ಯಾರಂಟಿ.. " ಎಂದು ತಡೆಯಲಾರದೇ ಜೋರಾಗಿ ನಕ್ಕು ಬಿಟ್ಟೆ.
ಅಲ್ಲಿಯ ತನಕ ಕುಳಿತಿದ್ದ ಸೌಮ್ಯ ಸಿಟ್ಟು ಬಂದು ನನ್ನನ್ನು ಟೆರೇಸ್ ಫುಲ್ ಒಡಾಡಿಸಿ ಬಿಟ್ಟಳು.
ನಾನು ಅವಳಿಗೆ ಸಿಗದೇ ಇನ್ನೂ ಜೋರಾಗಿ ನಗುತ್ತಲೇ ಟೆರೇಸ್ ಫುಲ್ ಒಡಾಡಿದೆ. ನನಗೆ ನಗು ತಡೆದುಕೊಳ್ಳಲು ಆಗುತ್ತಿರಲಿಲ್ಲ. ಅವಳು ಬೆನ್ನು ಬಿಡದೇ ಒಡಾಡಿಸಿಕೊಂಡು ಬಂದಳು. ಕೊನೆಗೇ ಬೇಕಂತಲೇ ಸಿಕ್ಕಿಬಿದ್ದೆ. ನನ್ನೆದೆಯ ಮೇಲೆ ಬಂದು ಗುಬ್ಬಚಿಯಂತೆ ಅವಳು ಒರಗಿಕೊಂಡು ಬಿಟ್ಟಳು.!
ಒಂದು ಕೈಯಿಂದ ಅವಳ ಭುಜವನ್ನು ಬಳಸಿಕೊಂಡು. ಇನ್ನೊಂದು ಕೈಯಿಂದ ತಲೆ ತಗ್ಗಿಸಿ ನಿಂತಿದ್ದ ಅವಳ ಗಲ್ಲವನ್ನು ಮೇಲಕ್ಕೆತ್ತಿ " ನಾನು ಹೇಳಿದ್ದು ಸರಿ ಅಲ್ವಾ.. " ಅಂದೆ ನಗುತ್ತಲೇ.
ಯಾಕೋ ಗೊತ್ತಿಲ್ಲ ಅವಳಿಗೂ ನಗು ತಡೆದುಕೊಳ್ಳಲು ಆಗಲಿಲ್ಲವೋ ಏನೋ ಮುಗುಳು ನಗುತ್ತಲೇ ತಲೆತಗ್ಗಿಸಿಕೊಂಡು" ಹೂಂ.... " ಅಂದಳು.
" ಅಲ್ಲಾ, ನಿಂಗೆ ಬೇರೆ ಯಾರೂ ಸಿಗ್ಲಿಲ್ಲವಾ, ಹೋಗಿ ಹೋಗಿ ಲವ್ ಮಾಡ್ಲಿಕ್ಕೆ ನಿಂಗೆ ಇಂತಹ ಕಾಮೆಡಿ ಪೀಸೇ ಸಿಕ್ಕಿದ್ದಾ ... " ಅಂದೆ.
ಅವಳಿಗೆ ಏನು ನೆನಪಾಯಿತೋ ಗೊತ್ತಿಲ್ಲ " ಆವಾಗ ನೀನು ಸಿಕ್ಕಿರಲಿಲ್ಲ... "ಎಂದು ಹೇಳಿ ಹಾಗೇ ಜೋರಾಗಿ ಒಮ್ಮೆ ನಕ್ಕು ಬಿಟ್ಟಳು.
ನಾನು ಅವಳ ಹೇಳಿಕೆಯಿಂದ ಒಂದು ಕ್ಷಣ ತಬ್ಬಿಬ್ಬಾದೆ.!
ಅತ್ತು ಅತ್ತು ದಣಿದಿದ್ದ ಅವಳೀಗ ಜೋರಾಗಿ ನಕ್ಕಾಗ, ಅವಳ ಆಯಾಸವೆಲ್ಲಾ ಮಾಯವಾದಂತೆ ನನಗೆ ಭಾಸವಾಯಿತು.
ಸದಾ ಸಿರಿಯೆಸ್ ಆಗಿ ಇರುತ್ತಿದ್ದ ಅವಳು ಅತ್ತದ್ದೂ ನೋಡಿರಲಿಲ್ಲ, ಅವಳು ನಗುವುದನ್ನೂ ಕೂಡ ನೋಡಿರಲಿಲ್ಲ. ಎರಡನ್ನೂ ಇವತ್ತೇ ನೋಡಿದ್ದೆ. ಅವಳು ಮಗುವಿನಂತೆ ಅತ್ತಾಗ ತುಂಬಾನೇ ಬೇಜಾರು ಆಗಿತ್ತು. ನಕ್ಕಾಗ ಮಾತ್ರ ಸಿಕ್ಕಾಪಟ್ಟೆ ಖುಷಿ ಆಗಿತ್ತು.
ಒಂದು ಮಾತು ಹೇಳ್ಲಾ ಅವಳು ನಕ್ಕಾಗ ಮಾತ್ರ ಅತಿಲೋಕ ಸುಂದರಿಯೇ.
ಸೀರೆ ಉಟ್ಟುಕೊಂಡ ಅವಳಿಗೆ ಬೇರೆ ಆಭರಣವೇಕೆ.
ಸುಮ್ಮನೆ ಹಾಗೇ ಒಮ್ಮೆ ನಕ್ಕು ಬಿಟ್ಟರೆ ಸಾಕು, ಮುತ್ತು ವಜ್ರ ವೈಡೂರ್ಯ ಬೇರೆ ಬೇಕೇ..
"ಓಕೆ. ಈಗ ನೀನು ಶಿಶಿರ್ ಅನ್ನು, ನಾನು ನಿವೇದಿತಾ ಳನ್ನು permanent ಆಗಿ ಮರೆಯುವ ಒಂದು ಕೆಲಸವನ್ನು ಮಾಡುವ.. "ಅಂದೆ.
" ಅದು ಹೇಗೆ... " ಕೇಳಿದಳು.
" ಕೆಳಗೆ ನಿನ್ನ ರೂಮ್ ಅಲ್ಲಿ ಅಥವಾ PG ಯಲ್ಲಿ ಯಾರಾದ್ದಾದರೂ ಬರ್ತಡೇ ಗೆ ಅಂತ ತಂದ ಬೆಲೂನು ಗಳು ಇವೆಯಾ...? " ಕೇಳಿದೆ.
" ತುಂಬಾ ಬರ್ತಡೇ ಗಳು ಆಗ್ತಾ ಇರುತ್ತವೆ. May be ಇರಬಹುದು" ಅಂದಳು.
"ಹಾಗಾದರೆ ಎರಡು ಬೆಲೂನ್ ಹಾಗೂ ಒಂದು ಮಾರ್ಕರ್ ಪೆನ್ ತಗೊಂಡು ಬಾ.. ಬೆಲೂನ್ ರೆಡ್ ಕಲರ್ ಇದ್ದರೆ ಒಳ್ಳೆಯದು.. " ಅಂದೆ.
ಆಯಿತು ಎಂದು ಹೇಳಿದವಳೇ ಸೀದಾ ಕೆಳಗೆ ಹೋಗಿ ಎರಡು ರೆಡ್ ಕಲರ್ ಬೆಲೂನ್ ಹಾಗೂ ಮಾರ್ಕರ್ ಪೆನ್ನು ತಂದು ನನ್ನ ಕೈಗೆ ಇಟ್ಟಳು.
ಒಂದು ಬೆಲೂನ್ ಅವಳಿಗೆ ಕೊಟ್ಟು ಊದು ಅಂದೆ. ಅವಳು ಅದನ್ನು ಊದಿ ದೊಡ್ಡದು ಮಾಡಿ ಗಂಟು ಹಾಕಿದಳು.
ನಾನು ಇನ್ನೊಂದು ಬೆಲೂನ್ ಅನ್ನು ಊದಿ ಗಾಳಿತುಂಬಿಸಿ ಅದರ ತುದಿಗೆ ಗಂಟು ಹಾಕಿದೆ.
ಅವಳ ಕೈಗೆ ಮಾರ್ಕರ್ ಪೆನ್ ಕೊಟ್ಟೆ. "ಇದರ ಮೇಲೆ ದೊಡ್ಡದಾಗಿ ನೀನು ಪ್ರೀತಿಸಿದವನ ಹೆಸರು ಬರೀ.." ಅಂದೆ.
ಅವಳು ದೊಡ್ಡದಾಗಿ "ಶಿಶಿರ್" ಎಂದು ಬರೆದಳು.
ಅವಳಿಂದ ಮಾರ್ಕರ್ ಪೆನ್ ತಗೊಂಡು ನನ್ನ ಬೆಲೂನ್ ಮೇಲೆ "ನಿವೇದಿತಾ" ಎಂದು ಬರೆದೆ.
"ಸೌಮ್ಯ ಈಗ ನೀನು ನಿನ್ನ "ಶಿಶಿರ್" ಅನ್ನು, ನಾನು ನನ್ನ "ನಿವೇದಿತಾ" ಳನ್ನು ಗಾಳಿಯಲ್ಲಿ ಹಾಗೇ ಮೇಲಕ್ಕೆ ಬಿಡಬೇಕು..ಆ ಹೆಸರುಗಳಿರುವ ಎರಡೂ ಬೆಲೂನ್ ಗಳು ನಮ್ಮಿಂದ ದೂರ ದೂರ ಮೇಲಕ್ಕೆ ಹೋಗುವುದನ್ನು ಇಲ್ಲಿಂದಲ್ಲೇ ನೋಡಬೇಕು.ಕೇವಲ ಬೆಲೂನ್ ನಮ್ಮಿಂದ ದೂರಕ್ಕೆ ಹೋಗ್ತಾ ಇಲ್ಲ,ಶಿಶಿರ್ ಮತ್ತು ನಿವೇದಿತಾ ನಮ್ಮ ಬಾಳಿನಿಂದ ನಿಧಾನವಾಗಿ ನಿಧಾನವಾಗಿ ದೂರ ಹೋಗ್ತಾ ಇದ್ದಾರೆ ಎಂದು ತಿಳಿದುಕೊಳ್ಳಬೇಕು.
ಬೆಲೂನ್ ಸಂಪೂರ್ಣ ಮರೆಯಾದಾಗ ಶಿಶಿರ್ ನಿನ್ನ ಬಾಳಿನಲ್ಲಿ ನಿವೇದಿತಾ ನನ್ನ ಬಾಳಿನಲ್ಲಿ ಸಂಪೂರ್ಣವಾಗಿ ಎಂದೆಂದಿಗೂ ದೂರವಾಗಿದ್ದಾರೆ ಎಂದು ನಾವು ಫೀಲ್ ಮಾಡಿಕೊಳ್ಳಬೇಕು, ಅಷ್ಟೇ " ಅಂದೆ.
" waaw ಇದೊಂತರ ಚೆನ್ನಾಗಿದೆ, Ok Done.. ನಾನು ready, one... two..three..ಎಂದು ಕೌಂಟ್ ಮಾಡ್ತೆನೆ, ಕೊನೆಗೆ ಇಬ್ಬರೂ ಒಟ್ಟಿಗೆ ಬೆಲೂನ್ ಗಳನ್ನು ಬಿಟ್ಟು ಬಿಡುವ " ಅಂದಳು.
" ಆಯ್ತು... " ಅಂದೆ.
" ready.. One.. Two.. Three.. Go.. " ಅಂದಳು.
ನಮ್ಮಿಬ್ಬರ ಕೈಯಲ್ಲಿದ್ದ ಬೆಲೂನ್ ಗಳು ನಿಧಾನವಾಗಿ ಗಾಳಿಯಲ್ಲಿ ಮೇಲಕ್ಕೆರಿದವು. ಮೇಲೆ ಹೋಗಿ ಹೋಗಿ ಕೊನೆಗೆ ಸುರತ್ಕಲ್ ನ ಆ ರಾತ್ರಿಯ ಕತ್ತಲಿನಲ್ಲಿ ಎರಡೂ ಬೆಲೂನ್ ಗಳು ನಮ್ಮಿಂದ ಕೊನೆಗೆ ಕಣ್ಮರೆಯಾಗಿ ಹೋದವು. ನನಗೂ ಕೂಡ ನಿಜವಾಗಿಯೂ ನಿವೇದಿತಾ ಅವತ್ತೇ permanent ಆಗಿ ನನ್ನಿಂದ ಹೊರ ನಡೆದಿದ್ದು ಅಂತ ಫೀಲ್ ಆಯಿತು. ಮನಸ್ಸಿಗೆ ಏನೋ ಒಂಥರಾ ಸಮಾಧಾನ ಸಿಕ್ಕಿತು.
ಸೌಮ್ಯ ಮೇಲೆ ಆಕಾಶವನ್ನೇ ನೋಡುತ್ತಾ ಇದ್ಧಳು. ಬಹುಶಃ ಮನಸ್ಸು ಹಗುರವಾಗಿ ಅವಳು ಕೂಡ ಅಲ್ಲೇ ಎಲ್ಲೋ ladies PG ಮೇಲೆ ಗಾಳಿಯಲ್ಲಿ ತೇಲುತ್ತಿದ್ದಾಳೆ ಅಂತ ಭಾಸವಾಯಿತು.
"ಸೌಮ್ಯ... " ಅಂದೆ.
" ಉಲ್ಲಾಸ್.. " ಅಂದಳು.
" how you feeling now.. " ಅಂದೆ.
" too good, it works.. Thankew ullas, thankew so much..." ಅಂದವಳೇ ಖುಷಿಯಿಂದ ಹಾರಿ ಹಾಗೇ ನನ್ನ ಕೆನ್ನೆಗೆ ಒಂದು ಮುತ್ತು ಕೊಟ್ಟು ಬಿಟ್ಟಳು.
ಹೇಗೆ ತಾನೇ ತಡೆದುಕೊಳ್ಳುತ್ತೆ ಜೀವಾ.. ಈ ಹುಡುಗಿಯರು ಕೆಲವೊಮ್ಮೆ ಏನು ಮಾಡುತ್ತಾರೆ ಎಂದೇ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಕಾಡಿ ಬೇಡಿದರೂ ಏನನ್ನೂ ಕೊಡುವುದಿಲ್ಲ. ಇನ್ನು ಕೆಲವೊಮ್ಮೆ ಹೇಳದೆ ಕೇಳದೆಯೇ ಎಲ್ಲವನ್ನೂ ಕೊಟ್ಟುಬಿಡುತ್ತಾರೆ.
ಮೊದಲೇ ಹೇಳಬಾರದೇ, ಸ್ವಲ್ಪ prepare ಆದರೂ ಆಗುತ್ತಿದ್ದೆನಲ್ಲವೇ. ಹಾರ್ಟ್ ಪೇಷಂಟ್ ನಾನಲ್ಲ..
ಆದರೆ ಹುಡುಗಿ ಈ
ಈ ರೀತಿ ಎಲ್ಲಾ ಮಾಡಿದರೆ ನಾನು ಹಾರ್ಟ್ ಪೇಷಂಟ್ ಆಗುವುದನ್ನು ತಪ್ಪಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ...
ಎಂದು ಮನಸ್ಸಿನಲ್ಲೇ ಅಂದುಕೊಂಡೆ.
"Celebrate ಮಾಡೋಣವೇ... " ಕೇಳಿದಳು.
" ಯಾವುದಕ್ಕಾಗಿ... " ಕೇಳಿದೆ.
" ಅವರಿಬ್ಬರನ್ನು ಪರ್ಮನೆಂಟ್ ಆಗಿ ದೂರ ಕಳುಹಿಸಿದ ಖುಷಿಗಾಗಿ... "ಅಂದಳು.
" ಆದರೆ ಹೇಗೆ? " ಕೇಳಿದೆ.
" ಇಲ್ಲೇ ಇದೆಯಲ್ಲಾ ಆಗಲೇ ತಂದಿದ್ದ ವಿಸ್ಕಿ, ಐಸು ಎಲ್ಲಾ.. ಯಾವಾಗಲೂ ನೋವು ಮರೆಯಲು ಕುಡಿಯುತ್ತಿದ್ದೆ. ಈಗ ನಿನ್ನ ಜೊತೆ ಸೇರಿ ಮೊದಲ ಬಾರಿ ಖುಷಿಗಾಗಿ ಕುಡೀತೇನೆ " ಅಂದಳು.
ಇಬ್ಬರು ಪುನಃ ಮ್ಯಾಟ್ ಮೇಲೆ ಕುಳಿತುಕೊಂಡು ಗ್ಲಾಸ್ ಗೆ ವಿಸ್ಕಿ, ವಿಸ್ಕಿ ಗೆ ice cube ಬೆರೆಸಲು ಶುರುಮಾಡಿದೆವು. ಚಿಯರ್ಸ್ ಹೇಳಿ ಮತ್ತೆ
ನಿಧಾನವಾಗಿ ಮದುಪಾನ ಶುರು ಮಾಡಿದೆವು.
" ಹೌದು ಅದು ಹೇಗೆ ನೀನು ಬದುಕಿ ಬಂದೆ.. " ಕುತೂಹಲ ತಡೆಯಲಾರದೇ ಕೇಳಿದೆ.
" ಅಲ್ಲೇ ಇದ್ದ ಯಾರೋ ಒಬ್ಬರು ಮೀನುಗಾರರು ನಾನು ಹಾರಿದ್ದು ನೋಡಿದ್ದರು. ಹಾಗೇ ಅವರೇ ನನ್ನನ್ನು ಆವತ್ತು ಬದುಕಿಸಿದ್ದು... " ಅಂದಳು.
" ನಂತರ ಶಿಶಿರ್ ಕಥೆ ಏನಾಯಿತು ಎಂದು ಗೊತ್ತಾಗಲಿಲ್ಲವೇ... " ಕೇಳಿದೆ.
" ಅದಾದ ಕೆಲವೇ ದಿನಗಳಲ್ಲಿ ಅವನು ಮನೆಯವರು ತೋರಿಸಿದ ಅವನ ಜಾತಿ ಯ ಹುಡುಗಿ ಯನ್ನು ಮದುವೆ ಆದ ಎಂದು ಸುದ್ದಿ ಸಿಕ್ಕಿತು...
ಹೂಂ, ಅದೆಲ್ಲಾ ವಿಷಯ ಈಗ ಯಾಕೇ. ಈ ಖುಷಿಯ ಟೈಂ ಅಲ್ಲಿ ಪುನಃ ಫ್ಲಾಶ್ ಬ್ಯಾಕ್ ಎಲ್ಲಾ ಬೇಕಾ... ನಾವು ನೆಮ್ಮದಿಯಾಗಿ ಕುಡಿಯೋಣ... " ಅಂದಳು.
" ಹೌದು ಹೌದು.. ಅದು ಸರಿ ಎಂದೆ..
ಕುಡಿತ ಮುಂದುವರಿಸಿದೆವು.
ನಿಧಾನವಾಗಿ ಅಮಲು ಏರಿತು.
"ಉಲ್ಲಾಸ್.. " ಅಂದಳು.
" ಸೌಮ್ಯ... " ಅಂದೆ.
" ನೀನು ನನ್ನನ್ನು ಸೀರೆಯಲ್ಲಿ ನೋಡಿ ಏನೂ ಹೇಳಲೇ ಇಲ್ಲ... " ಅಂದಳು.
" ನಿನಗೆ ಸೀರೆ ಉಡಿಸಿದ್ದು ಯಾರು? " ಕೇಳಿದೆ.
" ನಾನೇ... " ಅಂದಳು.
" ಅದು.. ಅದು.. ಸೊಂಟದ ಪಕ್ಕ ನೀನು ಸೀರೆ ಸಿಕ್ಕಿಸಿಕೊಂಡಿದ್ದು ಸರಿಯಾಗಿಲ್ಲ, ಅದು ಆ ತರಹ ಅಲ್ಲ.. ಮತ್ತೆ ಸೆರೆಗು ಹಾಕಿ ಕೊಂಡದ್ದು ಕೂಡ ಸರಿ ಆಗಿಲ್ಲ.. " ಎಂದು ಸುಮ್ಮನೆ ಒಂದು ಸುಳ್ಳು ಹೇಳಿದೆ.
" ನಿನಗೆ ಸೀರೆ ಉಡುವ ರೀತಿಯ ಬಗ್ಗೆ ಗೊತ್ತಾ.. " ಕೇಳಿದಳು.
"ಕೇವಲ ಸೀರೆ ಉಡುವ ಬಗ್ಗೆ ಮಾತ್ರವಲ್ಲ, ಸೀರೆ ಉಡಿಸಲು ಕೂಡ ಗೊತ್ತು.." ಅಂದೆ.
" ಹಾಗಾದರೆ ನೀನೇ ಸರಿಯಾಗಿ ನನಗೆ ಸೀರೆ ಉಡಿಸು... "ಅಂದಳು.
" ಆಯ್ತು ಎದ್ದು ನಿಲ್ಲು... " ಅಂದೆ.
ಹಾಗೇ ವಿಸ್ಕಿ ಗ್ಲಾಸ್ ಹಿಡಿದುಕೊಂಡೇ ಎದ್ದು ನಿಂತಳು ಮಧುಬಾಲೆ.
" ಎಲ್ಲಾ ತೆಗೆದು ಪುನಃ" ಮೊದಲಿನಿಂದಲೇ ಸೀರೆ ಉಡಿಸಲಾ.. ಅಥವಾ ಇದ್ದಲ್ಲಿಗೆಯೇ adjust ಮಾಡ್ಲ... " ಕೇಳಿದೆ.
" ಶುರುವಿನಿಂದಲೇ start ಮಾಡು... " ಅಂದಳು.
" ಆ ರೀತಿ ಸೀರೆ ಉಡಿಸುವಾಗ ಕಂಟ್ರೋಲ್ ತಪ್ಪಿ ನಿನ್ನನ್ನು ನಾನು ಪೂರ್ತಿ ಯಾಗಿ ನೋಡಿ ಬಿಟ್ಟರೆ..ಆಮೇಲೆ ನಾನೇದರೂ ನನಗೇ ಅರಿವಿಲ್ಲದೇ ತಪ್ಪು ಎಸಗಿದರೆ ನಿನಗೇನು ಪ್ರಾಬ್ಲಂ ಇಲ್ಲವೇ? " ಕೇಳಿದೆ.
" ಮೊದಲು ನೀನು ಸೀರೆ ಉಡಿಸು.. " ಅಂದಳು ನನ್ನ ಕಣ್ಣನ್ನೇ ನೋಡುತ್ತಾ.
" ಇಲ್ಲ ನಾನು ಆ ತರಹ ಮಾಡಲಾರೆ ನಾನು ತುಂಬಾನೇ ಸಂಸ್ಕಾರ ಉಳ್ಳ ಹುಡುಗ, ನನ್ನಿಂದ ಯಾವುದಾದರೂ ತಪ್ಪು ನಡೆಯದಂತೆ ತುಂಬಾನೇ ಜಾಗ್ರತೆ ವಹಿಸುತ್ತೆನೆ. ಮನೆಯಲ್ಲಿ ಟಿ.ವಿ ನೋಡುವಾಗ ಕೂಡ ಕಿಸ್ ದೃಶ್ಯ ಇಲ್ಲವೇ ಯಾವುದಾದರೂ ಅಸಹ್ಯ ದೃಶ್ಯ ಬಂದರೆ ಕೂಡ ರಪ್ಪ ಅಂತ ಕಣ್ಣಿಗೆ ಕೈ ಅಡ್ಡ ಹಿಡಿಯುತ್ತೆನೆ. ವಾಟ್ಸಾಪ್ ವಿಡಿಯೋ ಗಳನ್ನು ಇಯರ್ ಫೋನ್ ಹಾಕಿಕೊಂಡೇ ಕೇಳುತ್ತೆನೆ.
ಆದ್ದರಿಂದ ಅಂತಹ ಸಂಸ್ಕಾರ ಉಳ್ಳ ನಾನು ಸೀರೆ ಉಡಿಸುವಾಗ ನಿನ್ನನ್ನು ಅಪ್ಪಿ ತಪ್ಪಿ ನೋಡಬಾರದೆಂದು ಕಣ್ಣು ಮುಚ್ಚಿ ಕೊಂಡೇ ನಿನಗೆ ಸೀರೆ ಉಡಿಸುತ್ತೆನೆ... " ಅಂದೆ.
ನಿಧಾನವಾಗಿ ಕಣ್ಣು ಮುಚ್ಚಿದೆ. ಇದು ಕಷ್ಟ ದ ಕೆಲಸ.ಅವಳು ವಿಸ್ಕಿ ಗ್ಲಾಸ್ ಹಿಡಿದುಕೊಂಡೇ ನಿಂತಿದ್ದಳು. ನಾನು ಹಾಗೆಯೇ manage ಮಾಡುತ್ತಾ ಅವಳು ವಿಸ್ಕಿ ಗ್ಲಾಸ್ ಹಿಡಿದುಕೊಂಡಿರುವಾಗ ಕಣ್ಣು ಮುಚ್ಚಿಯೇ ಸೀರೆ ಉಡಿಸಬೇಕಾಗಿತ್ತು. ಆದರೆ ನಾನು ಇಂತಹ ಚ್ಯಾಲೆಂಜ್ ಗಳಲ್ಲಿ ಸುಲಭವಾಗಿ ಸೋಲುವವನಲ್ಲ.
ಹಾಗೆಯೇ ಅವಳ ಸೀರೆಯನ್ನು ಈಗ ನಿಧಾನವಾಗಿ ಸಂಪೂರ್ಣವಾಗಿ ತೆಗೆದೆ. ಈಗ ಅವಳ ಕೈಯಲ್ಲಿ ಇರುವ ವಿಸ್ಕಿ ಗ್ಲಾಸ್ ಗೂ ಭಂಗ ಬರದಂತೆ ಮೊದಲಿನಿಂದಲೇ ತುಂಬಾನೇ ನಾಜೂಕಿನಿಂದ ಅವಳಿಗೆ ಸೀರೆ ಉಡಿಸಲು ಶುರುಮಾಡಿದೆ,ಎರಡೂ ಕಣ್ಣು ಮುಚ್ಚಿಯೇ!
ನನಗೆ ಗೊತ್ತಿಲ್ಲದೆಯೇ ಈ situation ಗೆ ತಕ್ಕಂತಹ ಹಾಡೊಂದನ್ನು ಗುನುಗಲು ಆರಂಭಸಿದೆ.
" ಉಡಿಸುವೆ.. ಬೆಳಕಿನ ಸೀರೆಯಾ..
ಚೂರು ನೀ ಸಹಕರಿಸು..
ನಿನ್ನ ಕಣ್ಣಿಗೀಗ ನಾ ಹೇಗೇ ಕಂಡರೂನೂ, ಅದೇ ಚಂದ..
ಹಾಗೆಂದೇ ಭಾವಿಸು...
ಉಡಿಸುವೆ .. ಬೆಳಕಿನ ಸೀರೆಯಾ..
ಚೂರು ನೀ ಸಹಕರಿಸು.... "
ಹಾಗೋ ಹೀಗೋ ಸೀರೆ ಉಡಿಸಿ ಸಂಪೂರ್ಣವಾಗಿತ್ತು.
ನಾನು ನಿಧಾನವಾಗಿ ಕಣ್ಣು ತೆರೆದೆ. ನಿಜವಾಗಿಯೂ ನಾನು ಸುಂದರವಾಗಿಯೇ ಅವಳಿಗೆ ಸೀರೆ ಉಡಿಸಿದ್ದೆ.
" ಈಗ ನನ್ನ ಕಣ್ಣಿಗೆ ನಿನ್ನಷ್ಟು ಸುಂದರಿ ಈ ಪ್ರಪಂಚದಲ್ಲಿಯೇ ಬೇರೆ ಯಾರು ಇಲ್ಲ ಸೌಮ್ಯ... " ಅಂದೆ
" ಥ್ಯಾಂಕ್ಸ್.. For the compliment, & ಥ್ಯಾಂಕ್ಸ್ ಫಾರ್ ಶ್ರದ್ಧೆಯಿಂದ ಕಣ್ಣು ಮುಚ್ಚಿ ಸೀರೆ ಉಡಿಸಿದ್ದಕ್ಕಾಗಿ.... " ಅಂದಳು.
" My pleasure... " ಅಂದೆ ತುಂಬಾನೇ ಅಮಾಯಕನಂತೆ. "
ನಿಜವಾಗಿಯೂ ನಾನು ಅಮಾಯಕನೇ. ಆದರೆ ಸಮಾಜ ನಂಬಲ್ಲ ಅದು ಬೇರೆ ವಿಷಯ.
" ಅದು ನೀನು ಹಾಡಿದ 'ಉಡಿಸುವೆ.. ಬೆಳಕಿನ ಸೀರೆಯಾ..' ಆ ಹಾಡು ಕೂಡ ಚೆನ್ನಾಗಿತ್ತು. ಆದರೆ ನೀನು 'ಸೀರೇಲಿ ಹುಡುಗಿಯ ನೋಡಲೇಬಾರದು, ನಿಲ್ಲಲ್ಲ temperature' ಹಾಡು ಹಾಡಲೇ ಇಲ್ಲ ಉಲ್ಲಾಸ್... " ಅಂದಳು.
" ಅದು ಸೀರೆ ಉಡಿಸುವಾಗ ಹಾಡುವ ಹಾಡಲ್ಲ. ಸೀರೆ ಉಟ್ಟ ನಂತರ ನೋಡಿಕೊಂಡು ಹಾಡುವ ಹಾಡು... " ಅಂದೆ.
" ಈಗ ಸೀರೆ ಉಟ್ಟು ಆಯಿತ್ತಲ್ಲಾ.. ಈಗ ಹಾಡು.. " ಅಂದಳು.
" ಇನ್ನೊಂದು ರೌಂಡ್.. ವಿಸ್ಕಿ ಗೆ ಗತಿ ಕಾಣಿಸೋಣವೇ.. " ಅಂದೆ.
" ಓಕೆ... " ಅಂದಳು.
ನಾನು ಅವಳು ನಿಂತಿದ್ದವರು ಇಬ್ಬರೂ ಪುನಃ ಅಲ್ಲೇ ಮ್ಯಾಟ್ ಮೇಲೆ ಕುಳಿತುಕೊಂಡು ಕೊನೆಯ ರೌಂಡ್ ವಿಸ್ಕಿ ಕುಡಿಯಲು ರೆಡಿ ಆದೆವು.
ಅವಳು ಎಷ್ಟೇ ಕುಡಿದಿದ್ದರೂ ಕೂಡ ಈ ಗ್ಲಾಸ್ ಗೆ ವಿಸ್ಕಿ ಸುರಿಯುವುದು,ಐಸ್ ಕ್ಯೂಬ್ ಬೆರೆಸುವುದು.. ಇವುಗಳಲ್ಲಿ ಯಾವತ್ತೂ ಫುಲ್ ಸ್ಟೆಡಿ ಯೇ.
ಈಗಿನ ಕುಡಿತ ನಿಧಾನವಾಗಿ ತಲೆ ಗಿರ್ ಅನ್ನುವಂತೆ ಮಾಡಿಬಿಟ್ಟಿತ್ತು.
ಅಲ್ಲೇ ಪುನಃ ಮ್ಯಾಟ್ ಮೇಲೆ ಹಾಗೆಯೇ ಬಿದ್ದುಕೊಂಡೆ. ನನ್ನ ಎದೆಯ ಮೇಲೆ ತಲೆ ಇಟ್ಟುಕೊಂಡು ನನಗೆ perpendicular ಆಗಿ ಸೌಮ್ಯ ಕೂಡ ಅಲ್ಲಿಯೇ ಮ್ಯಾಟ್ ಮೇಲೆ ಬಿದ್ದುಕೊಂಡಳು. ಮೇಲೆ ನೋಡಿದರೆ ಪೂರ್ಣ ಚಂದ್ರ ಶುಭ್ರವಾಗಿ ಕಾಣುತ್ತಿದ್ದ.
"ಉಲ್ಲಾಸ್, ಅದು ಹೌದು ನಿನಗೆ ಸೀರೆ ಉಡಿಸುವುದು ಹೇಗೆ ಗೊತ್ತು.. " ಅಂದಳು.
" ಅದು.. ಅದು.. ನಾನು ನಿನ್ನೆ ನೈಟ್ PG ಗೆ ಹೋದ ಮೇಲೆ, youtube ನೋಡಿ ಸೀರೆ ಉಡುವುದು ಹೇಗೆ ಎಂದು ಕಲಿತುಕೊಂಡೆ... " ಎಂದು ಸತ್ಯವನ್ನೇ ಹೇಳಿದೆ.
"ಆದರೂ ಕಣ್ಣು ಮುಚ್ಚಿ ಕೊಂಡು, ನನ್ನ ಒಂದು ಕೈಯಲ್ಲಿ ವಿಸ್ಕಿ ಗ್ಲಾಸ್ ಇದ್ದರೂ.. ಅದು ಹೇಗೆ ಅಷ್ಟು ನಾಜೂಕಾಗಿ ಸೊಗಸಾಗಿ ಸೀರೆ ಉಡಿಸಿದೆ." ಕೇಳಿದಳು.
"ಅದೆಲ್ಲಾ ಟ್ಯಾಲೆಂಟ್ ನನಗೆ by birth ಬಂದಿದೆ. God gift ಅಂತಾರಲ್ಲ ಹಾಗೇ..ಆದರೆ ಅದನ್ನೆಲ್ಲಾ ಎಲ್ಲಿಯೂ ನಾನು ಹೇಳಿಕೊಳ್ಳಲ್ಲ..ನಾವೆಲ್ಲ ಸಮಾಜದ ನಡುವೆಯೇ ಇರುವ ಒಂಥರಾ ಎಲೆ ಮರೆಯ ಕಾಯಿಗಳು " ಅಂದೆ ತುಂಬಾನೇ ಮುಗ್ಧನಾಗಿ.
ನಿಜವಾಗಿಯೂ ನಾನು ತುಂಬಾ ಮುಗ್ಧನೇ, ಆದರೆ ಸುತ್ತಮುತ್ತಲಿನ ಜನ ಒಪ್ಪಲ್ಲ, ನಾನೇನು ಮಾಡ್ಲಿ.
"ತುಂಬಾ ಹೊತ್ತಾಗಿದೆ..ವಾಪಸ್ ನನ್ನ PG ಗೆ ಹೋಗಿ ಮಲಗ್ಲಿಕ್ಕೆ ಭಯ ಆಗುತ್ತೆ. ನೀನು ಬೇರೆ ಫುಲ್ ಟೈಟಾಗಿದ್ದೀಯಾ.. ಈ ರಾತ್ರಿ ಗೆ ಗಾಡಿ ತಗೊಂಡು ಹೋಗುವುದು ಕೂಡ ಡೇಂಜರ್. ಇವತ್ತು ರಾತ್ರಿ ನಾನು ಇಲ್ಲೇ ಮಲಗ್ಲಾ..?" ಅಂದೆ.
"ನಿನ್ನನ್ನು ಬೇಡ ಎಂದು ತಡೆದವರಾರು ಉಲ್ಲಾಸ್... " ಅಂದಳು.
ರೋಗಿ ಬಯಸಿದ್ದು ಹಾಲು ಅನ್ನ, ಡಾಕ್ಟರ್ ಹೇಳಿದ್ದು ಕೂಡ ಹಾಲು ಅನ್ನ .. ಹಾಗಾಯಿತು ನನ್ನ ಕಥೆ 
ಒಂದು ರೀತಿಯಲ್ಲಿ ಬಯಸದೇ ಬಂದ ಭಾಗ್ಯ.
"ಹೀಗೆ ನಿನ್ನ ಪಕ್ಕವೇ ರಾತ್ರಿ ಪೂರ್ತಿ ಮಲಗಿದ್ರೆ ನನಗೇನೂ ಪ್ರಾಬ್ಲಂ ಆಗಲ್ಲ ಅಲ್ಲಾ..." ಅಂದೆ.
"ನಾನು ಒಳ್ಳೆಯ ಹುಡುಗಿ ಸೌಮ್ಯ ,ನೀನೇನು ಟೆನ್ಶನ್ ಮಾಡ್ಕೋಬೇಡ..ನಾನೇನು ನಿನ್ನನ್ನು ರೇಪು ಗೀಪು ಮಾಡಲ್ಲ.. " ಅಂದಳು.
"exactly ನಂಗೆ ಅದೇ ಟೆನ್ಶನ್.. ನನಗೆ ನನ್ನ ಶೀಲ ದ ಮೇಲೆ ಯಾವಾಗಲೂ ಭಯಂಕರ ಕಾಳಜಿ , ಆದರೆ ನಾನು ನಿನ್ನನ್ನು ನಂಬಿ ಅಷ್ಟೇ ಇಲ್ಲಿ ನಿನ್ನ ಪಕ್ಕ ಮಲಗ್ತೇನೆ, ಹಾನ್ ..." ಅಂದೆ.
"ಉಲ್ಲಾಸ್.. Are you vergin? " ಕೇಳಿದಳು.
"ಹಾಗೆ ಅಂದರೆ ಏನು..? " ಏನೂ ಗೊತ್ತಿಲ್ಲದ ಅಮಾಯಕನಂತೆ ಕೇಳಿದೆ.
ಅಲ್ಲಿಯೇ ಮಲಗಿದ್ದಲ್ಲಿನಿಂದಲೇ ತಲೆಗೆ ಕೈಯಿಂದ ಒಂದು ಕೊಟ್ಟಳು.
" ನಾನೊಂದು ಪ್ರಶ್ನೆ ಕೇಳ್ಲಾ.. " ಅಂದೆ.
"Are you going to ask me the same question..?" ಅಂದಳು.
"ಇಲ್ಲ ಇಲ್ಲ ನಾನು ಅಂತಹ ಪೋಲಿ ಅಲ್ಲ... " ಅಂದೆ.
"ಹಾಗಾದರೆ ನಾನು ಪೋಲಿ ನಾ..." ಅಂದಳು.
"ಇಲ್ಲ ಇಲ್ಲ.. ಇಬ್ಬರೂ ಪೋಲಿಗಳಲ್ಲಾ ,ನಾನು ಕೇಳಬೇಕೆಂದು ಇದ್ದ ಪ್ರಶ್ನೆ ಯೇ ಬೇರೆ.. " ಅಂದೆ
"ಆಯ್ತು ಏನದು ಕೇಳು..." ಅಂದಳು ನಿದ್ದೆಯ ಮಂಪರಿನಲ್ಲಿ.
" ನನಗೆ ಚಿಕ್ಕಂದಿನಿಂದಲೂ ಇದೊಂದು ಭಯಂಕರ ಡೌಟು. ಈಗ ಹುಡುಗ ಪೋಲಿ ಆದರೆ ರಸಿಕ ಅಂತಾರೆ, ಹಾಗಾದರೆ ಹುಡುಗಿ ತುಸು ಪೋಲಿ ಆದರೆ ಏನಂತ ಕರಿತಾರೇ... ರಸಿಕಿ ಯಾ?... " ಅಂದೆ.
"ಅದೆಲ್ಲಾ ನನಗೆ ಗೊತ್ತಿಲ್ಲ.." ಅಂತ ಮೆಲುವಾಗಿ ಕೆನ್ನೆಗೆ ಹಾಗೇ ಒಂದು ಏಟು ಬಾರಿಸಿದಳು.
"ಸೌಮ್ಯ ನಿಜವಾಗಿಯೂ ನಿನಗೆ ಏನೂ ಗೊತ್ತಿಲ್ಲ. ಅದಕ್ಕೆ ನಾನು ಹೇಳುವುದು ನೀನು ಕೂಡ ನಮ್ಮ Ab pacchu ಗುರುಗಳ ಒಮ್ಮೆ ಶಿಷ್ಯೆ ಆಗು, ಅವರ ಫೇಸ್ಬುಕ್ ವಾಲ್ ಓದಿ ಓದಿ ಜ್ಞಾನ ದ ವೃದ್ಧಿ ಮಾಡಿಕೋ ಎಂದು.. " ಅಂದೆ.
" ಅದಕ್ಕೆ ನಾನು ಏನು ಈಗ ಅವರಿಗೆ ಫೇಸ್ಬುಕ್ ಅಲ್ಲಿ ಫ್ರೆಂಡ್ ರಿಕ್ವೆಷ್ಟ್ ಕಳುಹಿಸ್ಬೇಕಾ... " ಅಂದಳು.
"ಹಾನ್ ಹಾಗೆಯೇ ಮಾಡು. ನಾನು ಕೂಡ ಒಂದು ಮಾತು ಅವರಿಗೆ ಮೊದಲೇ ಹೇಳಿರುತ್ತೆನೆ. ನಾನು ಹೇಳಿದರೆ ಗುರುಗಳು ಯಾವ ಹುಡುಗಿಯರ ಫ್ರೆಂಡ್ ರಿಕ್ವೆಷ್ಟ್ ಅನ್ನು ಕೂಡ ರಿಜೆಕ್ಟ್ ಮಾಡಲ್ಲ..." ಅಂದೆ.
ನನಗೆ ನನ್ನ ಗುರುಗಳು ಅಂದರೆ ಭಯಂಕರ ಭಯ ಭಕ್ತಿ. ಗುರುಗಳನ್ನು ಎಲ್ಲಿಯೂ ಬಿಟ್ಟು ಕೊಡುವುದೇ ಇಲ್ಲ. ಅವರು ಕೂಡ ನನ್ನ ಮಾತನ್ನು ತೆಗೆದು ಹಾಕುವುದೇ ಇಲ್ಲ
ಒಂಥರಾ ಪಟ್ಟ ಶಿಷ್ಯ ನ ಹಾಗೆ.
ಜೈ ಪಚ್ಚು ಬಾಬ.. 🤟🏻
"ಉಲ್ಲಾಸ್..." ಅಂದಳು.
"ಸೌಮ್ಯ... " ಅಂದೆ.
" ಉಲ್ಲಾಸ್, ಮೇಲೆ ಇರುವ ಆ ಪೂರ್ಣ ಚಂದ್ರ ನನ್ನು ನೋಡುವಾಗ ನಿನಗೆ ಏನು ಅನಿಸುತ್ತದೆ... " ಕೇಳಿದಳು.
"ನನಗೆ ಒಂದಲ್ಲಾ ಒಂದು ದಿನ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳು ಆ ಚಂದಿರನಲ್ಲಿರುವ ವಿಕ್ರಂ ಲ್ಯಾಂಡರ್ ನೊಂದಿಗೆ ಸಂಪರ್ಕ ಸಾಧಿಸಿಯೇ ಸಾಧಿಸುತ್ತಾರೆ ಅಂತ ಅನಿಸುತ್ತದೆ..." ಅಂದೆ.
"ವಾವ್.. ಸೂಪರ್ ,ಉಲ್ಲಾಸ್ ನೀನು ಈಗ 'ಭೋಲೋ ಭಾರತ್ ಮಾತಾ ಕಿ..' ಎಂದು ಹೇಳಿದರೆ ನಾನು ಇಡೀ ಸುರತ್ಕಲ್ ಕೇಳುವಂತೆ, ಮುಗಿಲು ಮುಟ್ಟುವಂತೆ ಜೋರಾಗಿ 'ಜೈ... ' ಎಂದು ಹೇಳಬಲ್ಲೆ, ಒಮ್ಮೆ 'ಭೋಲೋ ಭಾರತ್ ಮಾತಾ ಕಿ..' ಎಂದು ಹೇಳಬಲ್ಲೆಯಾ.. " ಕೇಳಿದಳು.
"ಖಂಡಿತವಾಗಿಯೂ ಈಗ ಹೇಳಲಾರೆ.. ಕುಡಿದು ಬಾಯಿ ಮಲಿನವಾದಾಗ ದೇವರು ಮತ್ತು ದೇಶದ ಬಗ್ಗೆ ಸಂಬಂಧಿಸಿದ ಮಾತನ್ನು ನಾನು ಯಾವತ್ತೂ ಆಡುವುದಿಲ್ಲ. ಅವೆರಡರ ಬಗ್ಗೆಯೂ ನನ್ನಲ್ಲಿ ಪೂಜ್ಯನೀಯ ಭಾವನೆಗಳಿವೆ. ಕೊನೆಯ ಉಸಿರು ಇರುವ ವರೆಗೂ ಶ್ರದ್ಧೆಯಿಂದ ಎರಡನ್ನೂ ಪೂಜಿಸಬಲ್ಲೆ.. " ಅಂದೆ.
ಮಲಗಿದ್ದಲ್ಲಿಂದಲೇ ಚಪ್ಪಾಳೆ ಹಾಕಿ ಜೋರಾಗಿ ವಿಶಲ್ ಹೋಡೆದಳು Royal Mech ಹುಡುಗಿ.
"ಉಲ್ಲಾಸ್ ನೀನು ಪೋಲಿ, ರಸಿಕ, ಒಂಥರಾ ಕೆಟ್ಟವನು... ಆದರೆ ಕೆಲವೊಮ್ಮೆ ಭಯಂಕರ ಒಳ್ಳೆಯವನು... ನೀನು ಯಾವಾಗಲೂ ಪ್ರೇಕ್ಷಕರು ವಿಶಲ್ ಹೊಡೆಯೋ ಡೈಲಾಗ್ ಅನ್ನೇ ಹೇಳ್ತಿಯಾ.. " ಅಂದಳು.
"ಏನೋ ದೇವರು ಸ್ವಲ್ಪ ಒಳ್ಳೆಯ ಬುದ್ಧಿ ಕೊಟ್ಟಿದ್ದಾನೆ. ಹಾಗಾಗಿ ಎಡಬಿಡಂಗಿ ಆಗದೇ ರಾಷ್ಟ್ರ ಚಿಂತನೆ, ದೇಶ ಪ್ರೇಮಿ, ರಾಷ್ಟ್ರ ಭಕ್ತ ಆಗಿದ್ದೇನೆ... " ಎಂದೆ.
" ತುಂಬಾ ಉಳ್ಳೆಯ ವಿಷಯ. ಈ ವಿಷಯದಲ್ಲಿ ನಾನು ಕೂಡ ನಿನ್ನ ಹಾಗೆಯೇ.. " ಅಂದಳು.
ಪುನಃ ಅವಳೇ ಚಂದ್ರ ನನ್ನು ನೋಡುತ್ತಾ ಮಾತು ಮುಂದುವರಿಸಿದಳು.
" ಉಲ್ಲಾಸ್, ಮೇಲೆ ಕೇವಲ ನಮ್ಮಿಬ್ಬರನ್ನೇ ನೋಡುತ್ತಿರುವ ಆ ಚಂದ್ರ ನನ್ನು ನೋಡುವಾಗ ನಿನಗೆ ಭಾವನಾತ್ಮಕವಾಗಿ ಏನು ಫೀಲ್ ಆಗ್ತಾ ಇದೆ.. " ಕೇಳಿದಳು.
"ಏನು ಫೀಲ್ ಆಗುತ್ತೆ, ನನಗೆ ಭಾವನಾತ್ಮಕವಾಗಿ ಅಂದರೆ ಚಂದಮಾಮ ಅಂತ ಅಷ್ಟೇ ಫೀಲ್ ಆಗುತ್ತೆ..." ಅಂದೆ.
"ಚಂದ್ರ ನಿಂಗೆ ಮಾಮ ನಾ.. " ಕೇಳಿದಳು.
" ಹೂಂ, ಹೌದು... " ಅಂದೆ.
" ಅದು ಹೇಗೆ... " ಕೇಳಿದಳು.
" ನನ್ನ ಅಮ್ಮ ನ ತಮ್ಮ... " ಅಂದೆ.
" really?.. Explain ಮಾಡು ಒಮ್ಮೆ " ಅಂದಳು.
" ನನ್ನ ಅಮ್ಮನ ತಮ್ಮ ರವಿಚಂದ್ರ ಅಂತ. ಎಲ್ಲರೂ ಅವರನ್ನು ಚಂದ್ರ ಚಂದ್ರ ಅಂತ ಕರೀತಾರೆ. ಆದರೆ ನನಗೆ ಅವರನ್ನು ಚಿಕ್ಕಂದಿನಿಂದಲೂ ಚಂದ್ರ ಮಾಮ ಇಲ್ಲವೇ ಚಂದಮಾಮ ಎಂದೇ ಕರೆದು ಅಭ್ಯಾಸ. ಬೆಸ್ಟ್ ಜನ ಕೇಳಿದ್ದೆಲ್ಲವನ್ನೂ ಕೊಡಿಸ್ತಾರೆ. ಈ ಮೇಲಿನ ಚಂದಮಾಮ ನನ್ನು ನೋಡುವಾಗ ನನಗೆ ನನ್ನ ಚಂದಮಾಮ ನೇ ನೆನಪಾಗ್ತಾರೆ.. " ಅಂದೆ ಭಾವುಕನಾಗಿ.
ತಲೆಗೊಂದು ಕೊಟ್ಟಳು.
" ಉಲ್ಲಾಸ್, ನೀನು ಯಾವತ್ತೂ ಕೇಳಿದ ಪ್ರಶ್ನೆಗೆ ನೇರವಾದ ಉತ್ತರ ವನ್ನೇ ಕೊಡಲ್ಲ, ಏನಾದರೂ ಅಧಿಕಪ್ರಸಂಗ ವೇ ಹೇಳ್ತಿಯಾ.. ಕಾಮಿಡಿ ಮಾಡ್ತೀಯಾ.. ಒಮ್ಮೊಮ್ಮೆ ತುಂಬಾ ರಸಿಕ ನೀನು, ಪೋಲಿ ಕೂಡ ಹೌದು.. ಆದರೂ ಇಷ್ಟೊಂದು ಕಾಮಿಡಿ ಮಾತಾಡುವ ನಿನ್ನ ಬಾಳಿನಲ್ಲೂ ಕೂಡ ಒಂದು ಟ್ರಾಜಿಡಿ ಕಥೆ ಇರುತ್ತೆ ಅಂತ ನನಗೆ ನಿಜವಾಗಿಯೂ ಗೊತ್ತಿರಲಿಲ್ಲ.. " ಅಂದಳು.
" ನನಗೂ ಇಷ್ಟೊಂದು ಸೀರಿಯಸ್ ಆಗಿ ಇರುವ ಹುಡುಗಿ ಬಾಳಿನಲ್ಲಿ ಕೂಡ ಒಂದು ಕಾಮಿಡಿ ಕಥೆ ಇರುತ್ತೆ, ಅದೂ ಸೂಪರ್ ಡೂಪರ್ ಕಾಮಿಡಿ ಫಿಲಂ ಮಾಡಬಹುದಾದ ರೇಂಜಿಗೆ ಇರುತ್ತೆ ಅಂತ ನಿಜವಾಗಿಯೂ ಗೊತ್ತಿರಲಿಲ್ಲ.. " ಅಂದೆ ಜೋರಾಗಿ ನಗುತ್ತಾ.
ನನ್ನ ಪಕ್ಕೆ ಗೆ ಜೋರಾಗಿ ಕೈಯಿಂದ ತಿವಿಯುತ್ತಾ ಅವಳು ಕೂಡ ಜೋರಾಗಿಯೇ ನಕ್ಕು ಬಿಟ್ಟಳು.
"ಒಂದು ಹೇಳ್ಲಾ.." ಅಂದಳು.
"ಒಂದು ಬೇಡ ಎರಡು ಹೇಳು.. " ಅಂದೆ.
"ಒಂದೇ ಹೇಳ್ತೀನೀ... ಕೇಳ್ತಿಯಾ..." ಅಂದಳು.
"ಹೇಳು... " ಅಂದೆ.
"ಉಲ್ಲಾಸ್... ನೀನು ನಂಗೆ suite ಆಗಲ್ಲ " ಅಂದಳು.
" ನೀನು ಕೂಡ ನಂಗೇ suite ಆಗಲ್ಲ " ಅಂದೆ.
ಅವಳು ಕಣ್ಣು ಮುಚ್ಚಿ ಕೊಂಡೇ ಇನ್ನೊಮ್ಮೆ ಜೋರಾಗಿ ನಕ್ಕಳು. ನಾನೂ ಕೂಡ ಅವಳೊಂದಿಗಿಯೇ ಮನಸ್ಸಾರೆ ನಕ್ಕು ಬಿಟ್ಟೆ.
ಇಬ್ಬರು ಹಾಗೆಯೇ ಮಲಗಿದ್ದಲ್ಲಿಯೇ ಕಣ್ಣು ಮುಚ್ಚಿ ಕೊಂಡು ನಿಧಾನವಾಗಿ ನಿದ್ರೆಗೆ ಜಾರಲು ಶುರುಮಾಡಿದೆವು.
ನಾನು ಹಾಗೆಯೇ ಕಣ್ಣು ಮುಚ್ಚಿಕೊಂಡೇ ಹಾಡು ಗುನುಗಲು ಶುರು ಮಾಡಿದೆ..
".... ನಂಗೆ answer ಒಂದು ಬೇಕಿದೆ, ಸೀರೆ transparent ಯಾಕಿದೆ..
ಅದೆಷ್ಟು ಬೇಡ ಅಂದ್ರೂ ಕಣ್ಣು ಕದ್ ಕದ್ದು ನೋಡ್ತಾ ಇದ್ದೆ...
ಅದ್ಯಾಕೋ ಮನಸ್ಸು ಮೊನ್ನೆಯಿಂದ ಮುದ್ ಮುದ್ದು ಮಾತಾಡ್ತಿದೆ..
ಸೀರೇಲಿ ಹುಡುಗಿರ ನೋಡಲೇಬಾರದು ನಿಲ್ಲಲ್ಲ ಟೆಂಪರೇಚರು........... "
ಅವಳಿಗೆ ನಾನು ಹಾಡಿದ್ದು ಎಷ್ಟು ಕೇಳಿಸಿತೋ ಗೊತ್ತಿಲ್ಲ. ಆದರೂ ಕಣ್ಣು ಮುಚ್ಚಿಯೇ ಹೇಳಿದಳು.
" ನಿಂಗೆ ಸೀರೆ transparent ಯಾಕಿದೆ.. ಅಂತ answer ಬೇಕಿದೆ. ಆದರೆ ನಾನು ಸೀರೆ ಉಟ್ಟಿದ್ದಾಗ ಸರಿಯಾಗಿ ನೋಡಿಕೊಂಡು ನೀನು ಏನೂ ಹೇಳಲೂ ಇಲ್ಲ.. ಏನನ್ನೂ ನೋಡಲೂ ಇಲ್ಲ.. ಆಗ ಹಾಡಲೂ ಇಲ್ಲ.. ಈಗ ಮಾತ್ರ ಕಣ್ಣು ಮುಚ್ಚಿ ಕೊಂಡು ಹೀಗೆ ಮಲಗಿಕೊಂಡು ಹಾಡುತ್ತಿದ್ದೀಯಾ.. ಸೀರೆ transparent ಯಾಕಿದೇ.. ನಿಲ್ಲಲ್ಲ ಟೆಂಪರೇಚರು.. etc etc ಎಲ್ಲಾ.. " ಅಂದಳು ನಿದ್ರೆ ಯಲ್ಲಿ ಕನವರಿಸುತ್ತಾ..
" ನೋಡಿಲ್ಲ ಅಂತ ಯಾರು ಹೇಳಿದ್ದು.. ನಾನು ಸೀರೆ ಉಡಿಸುವಾಗ ನಿನಗೆ ಗೊತ್ತಾಗದ ಹಾಗೇ ಒಂದು ಕಣ್ಣು ಮುಚ್ಚಿಯೇ ಇರಲಿಲ್ಲ ಗೊತ್ತಾ. ಹಾಗೇ ನಾನು ,ಸರಿಯಾಗಿ, ನಿಧಾನವಾಗಿ,ಎಲ್ಲವನ್ನೂ ಡಿಟೈಲ್ ಆಗಿಯೇ ಕದ್ದು ಕದ್ದು ನೋಡಿದ್ದೆನೆ... " ಅಂದೆ.
"ಉಲ್ಲಾಸ್, ನೀನು ಪೋಲಿ ಮಾತ್ರ ಅಲ್ಲ, ಕಳ್ಳ ಕೂಡ ಹೌದು ..." ಎಂದು ಮಲಗಿದ್ದ ನನ್ನ ಮೇಲೆ ಮಕ್ಕಳ ಹಾಗೆ ಕಾಲು ಬಿಸಾಡಿಕೊಂಡು ಹಾಗೇ ಹಿತವಾಗಿ ತಬ್ಬಿಕೊಂಡು ಗಾಢ ನಿದ್ದೆಗೆ ಜಾರಿದಳು ನಶೆಯ ಹುಡುಗಿ, sorry... ಸೀರೇಲಿ ಹುಡುಗಿ.
ನಾನು ಮಲಗಿದ್ದಲ್ಲಿಂದಲೇ ಕಣ್ಣು ಬಿಟ್ಟು ಹಾಗೆಯೇ ಮೇಲೆ ಒಮ್ಮೆ ಚಂದಮಾಮ ನನ್ನು ನೋಡಿದೆ. ಸುರತ್ಕಲ್ ನ ಆ ಲೇಡಿಸ್ PG ಯ ಟೆರೇಸ್ ಮೇಲೆ ಚೆನ್ನಾಗಿ ಕಂಠ ಪೂರ್ತಿ ಕುಡಿದು ,ಆ ರಾತ್ರಿ ಪೂರ್ತಿ ಇಬ್ಬರು ಕೂಡ ಜೊತೆ ಜೊತೆಗೆಯೇ ಇದ್ದರೂ , ಏನೂ ಒಂದು ಸೀರಿಯಸ್ ತಪ್ಪು ಕೂಡ ಎಸಗದೇ ಜಗತ್ತಿನ ಪರಿವೆಯೇ ಇಲ್ಲದೇ ,ಹಾಗೆ ಸುಮ್ಮನೆ ಮಲಗಿಕೊಂಡಿದ್ದ ಸ್ವಚ್ಛ ಮನಸ್ಸಿನ ಮುಗ್ಧ ಹೃದಯದ ನಮ್ಮಿಬ್ಬರನ್ನು ಚಂದಮಾಮ ಕೂಡ ಮೇಲಿನಿಂದಲೇ top view ಅಲ್ಲಿ ಒಮ್ಮೆ ನೋಡಿ ನಸುನಗು ನಕ್ಕಂತೆ ಭಾಸವಾಯಿತು 
ಚಂದಮಾಮ ನಿಗೊಂದು ಮಲಗಿದ್ದಲ್ಲಿಂದಲೇ ಗುಡ್ ನೈಟ್ ಹೇಳಿ,Sorry..ಗುಡ್ ಮಾರ್ನಿಂಗ್ ಹೇಳಿ ನಾನು ಕೂಡ ಕಣ್ಣು ಮುಚ್ಚಿ ಗಾಢ ನಿದ್ದೆ ಗೆ ಜಾರಿದೆ 
" ಸೀರೇಲಿ_ಹುಡುಗಿ "
#ಶುಭಂ
(ಕೆಲವೊಮ್ಮೆ ಕಾಮೆಡಿ ಹುಡುಗನ ಬಾಳಿನಲ್ಲೂ ಸೀರಿಯಸ್ ಸ್ಟೋರಿ ಇರಬಹುದು...
ಇನ್ನು ಕೆಲವೊಮ್ಮೆ ಸೀರಿಯಸ್ ಹುಡುಗಿಯ ಬಾಳಿನಲ್ಲಿ ಕೂಡ ಒಂಥರಾ ಚೆನ್ನಾಗಿರುವ ಕಾಮೆಡಿ ಸ್ಟೋರಿ ಯೇ ಇರಬಹುದು.. )
.................................................
story by - AB Pacchu,
Moodbidri
(photo-internet)

Comments
Post a Comment