ವಡೆಯೂ ಮೆದುವಾಗಬಲ್ಲದು

 

ಪ್ರೀತಿಗೆ ಸಾವಿಲ್ಲ

ದಿನಾ ಸಾಯುವವರನ್ನು 

ಕೊಲ್ಲಲು ಸಾಧ್ಯವಿಲ್ಲ 


* * * * * * * * * * * * * * * * * *


ವಡೆ ತಾನೇ ಗಟ್ಟಿಯೆಂದು ಹೇಳಿತು

ತೊವ್ವೆ,ಸಾಂಬಾರ್ ಗಳು

ಮೆತ್ತಗೆ ಮಾಡಿ ಬಿಟ್ಟವು


* * * * * * * * * * * * * * * * * *


ದುಂಬಿ ಹೀರಲಿಲ್ಲ

ಹುಡುಗಿ ಮುಡಿಯಲಿಲ್ಲ

ಚಂದವಿದ್ದರೂ

ಹೂವಿಗೆ ಸುಖವಿಲ್ಲ


* * * * * * * * * * * * * * * * * *


ವೇಲು ಒಗೆದು ಹಾಕಿದ್ದಳು, 

ತೊಳೆದೇ ಹಾಕಿದ್ದಳು

ಆದರೂ ಅವನ ಮೈಯ ಘಮ

ಹಗ್ಗದಲ್ಲಿ ನೇತಾಡುತ್ತಿತ್ತು 


* * * * * * * * * * * * * * * * * *




ab pacchu

moodbidri

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ