ನಾವು ಮತ್ತು ನಮ್ಮ ಪರಿಸರ

 

ಮನೆಯ ಸುತ್ತಲಿನ ಹೂ ಗಿಡಗಳಿಗೆ, ತರಕಾರಿ ಗಿಡಗಳಿಗೆ ಪೈಪಿನಲ್ಲಿ ನೀರು ಹಿಡಿಯುವುದು ಅತ್ಯಂತ ಸುಲಭದ ಕೆಲಸ, ಇದೇನು ಮಹಾ, ನೀರಿನಲ್ಲಿ ಆಟ ಆಡಿದ ಹಾಗೆ ಸ ಆಗ್ತದೆ, ಒಟ್ರಾಸಿ jolly, i love flowers n plants.... ಅಂತ ಮೊದಲ ದಿನಕ್ಕೆ ಅನ್ನಿಸಿಬಿಡಬಹುದು....

ಆದರೆ ದಿನಲೂ ಬೆಳಿಗ್ಗೆ  ಇಲ್ಲವೇ ಸಂಜೆ ಒಂದು ಹೊತ್ತು ಬಿಡದೇ ಹೂವು, ತರಕಾರಿ ಗಿಡಗಳಿಗೆ ನೀರು ಹಿಡಿಯಲು ಒಂದೊಳ್ಳೆಯ ಶ್ರದ್ಧೆ,ಗಿಡಗಳ ಮೇಲಿನ ಅಪಾರವಾದ ಪ್ರೀತಿ, ಸ್ವಂತ ಮಕ್ಕಳ ಮೇಲೆ ಇರುವಂತಹ ಕಾಳಜಿ ಅತ್ಯಗತ್ಯ ಅಂತ ಅನ್ನಿಸೋದು ದಿನಲೂ ಗಿಡಗಳಿಗೆ ಅಕ್ಕರೆಯಿಂದ ನೀರು ಉಣ್ಣಿಸುವ ತಂದೆಯೋ.. ತಾಯಿಯೋ.. ಅಜ್ಜನೋ.. ಅಜ್ಜಿಯನ್ನು ಕಂಡಾಗಲೇ 😊❤️🙏🏻

ಗಿಡ ಮರಗಳ ಜೊತೆ ನಿರಂತರ ಒಡನಾಟ, ನಿಮಗೆ ಏನೂ ತಂದುಕೊಡದೇ ಇರಬಹುದು ಆದರೆ ಒಂದೊಳ್ಳೆಯ ನೆಮ್ಮದಿ ಶಾಂತಿ ಸಮಾಧಾನ ವನ್ನು ಖಂಡಿತವಾಗಿಯೂ ತಂದುಕೊಡುತ್ತದೆ.  ಬೇಕಿದ್ದರೆ ನೋಡಿ ನಿಮ್ಮ ಮನೆಯ ಅಂಗಳದಲ್ಲಿ ದಿನನಿತ್ಯವೂ ಅರಳಿ ನೆಲ ಸೇರುವ ನಂದಿಬಟ್ಟಲು, ಪಾರಿಜಾತ,ದಾಸವಾಳ,ಸುಗಂಧಿ, ಗೊಂಡೆ ಹೂವು, ಮುತ್ತು ಮಲ್ಲಿಗೆ, ಅಬ್ಬಲಿಗೆ ಇತ್ಯಾದಿ .. ಕಣ್ಣಿಗೆ ಅದೇನೋ ಮುದ. ದಿನ ನಿತ್ಯವೂ ಮನೆ ಸುತ್ತ ಹೂವು ಅರಳುತ್ತಿದ್ದರೆ ಅದೇನೋ ಸಂತೃಪ್ತಿ. ಚಿಟ್ಟೆಗಳು ಬೆಟ್ಟ ಗುಡ್ಡಗಳಿಂದ ಓಡೋಡಿ ಮನೆಯ ಅಂಗಳಕ್ಕೆ ಬಂದು ಬಿಡುತ್ತವೆ.  ಮನೆಯ ಪುಟ್ಟ ಮಕ್ಕಳಿಗೆ ಚಿಟ್ಟೆಗಳಿಗಿಂತ ಆಸಕ್ತಿ ಹುಟ್ಟಿಸುವುದು ಇನ್ನೇನು ಇದೆ. ಹಾಗೇ ಅದನ್ನು ಹಿಡಿಯಲು, ಅದರೊಂದಿಗೆ ಆಟವಾಡಲು ಓಡಿಬಿಡುತ್ತಾರೆ.

ಅಮ್ಮನ ಒತ್ತಾಯಕ್ಕೋ ಇಲ್ಲ ನಾವೇ ಆಸಕ್ತಿಯಿಂದ ಗುಡ್ಡೆಯಿಂದ ನಾಲ್ಕು ಕಂಬ ಕಡಿದು ತಂದು ಮಾಡಿದ, ಬಸಳೆ  ಚಪ್ಪರದ ತುಂಬಾ ನಿಧಾನವಾಗಿ ಹರಡಿಕೊಳ್ಳುವ ದಷ್ಟ ಪುಷ್ಟವಾದ ಎಳೆಯ ಬಸಳೆ ದಂಟುಗಳು..
ಕೈಯಾರೆ ಬಿತ್ತಿದ ಅಲಸಂಡೆ, ಬೆಂಡೆ ಬೀಜಗಳಿಂದ.. ಸಸಿ ಹುಟ್ಟಿ, ಗಿಡವಾಗಿ, ಹೂವಾಗಿ, ನಿಧಾನವಾಗಿ ಗಿಡದ ತುಂಬೆಲ್ಲಾ ಬೆಂಡೆ ಅಲಸಂಡೆ ಗಳು ಆಗುವ ಸೊಬಗು..
ನೆಟ್ಟ ಬದನೆ, ಗುಳ್ಳದ ಗಿಡದ ತುಂಬಾ.. ಗಿಡವೇ ಬಾಗಿ ಇನ್ನು ಮುರಿದು ಹೋಗಬಹುದು ಅಂತ ಅನ್ನಿಸುವಂತೆ  ಮಾಡುವಂತ ಸಮೃದ್ಧಿಯ ಕೃಷಿ..
ಮಣ್ಣು ಅಗೆದು ನೆಟ್ಟಂತಹ ಗೆಣಸಿನ ಬಳ್ಳಿಯಲ್ಲಿ ಈಗ  ಎಷ್ಟು ದೊಡ್ಡ ಗೆಣಸು ಆಗಿರಬಹುದು ಎಂಬ ಕೂತೂಹಲ... ಇದೆಲ್ಲ experience ಇದೆಯಲ್ಲ experience ಮಾಡಿದರಷ್ಟೇ ಸಿಗುವಂತಹದ್ದು..

ಸಾಧ್ಯ ಆದಷ್ಟು ಪ್ರಕೃತಿಯ ಜೊತೆ ಜೊತೆಗೆನೇ ಬದುಕಲು ಪ್ರಯತ್ನಿಸುವ, ಮನೆಯಲ್ಲಿ ಅಂಗಳದಲ್ಲಿ ಸದಾ ಹೂವುಗಳು ಅರಳಿ ಉದುರಲಿ, ಹಿತ್ತಲಿನ ಚಪ್ಪರದಲ್ಲಿ ಬಸಳೆ, ಮನೋಳಿ(ತೊಂಡೆ)ಗಳು ಸದಾ ಸಮೃದ್ಧವಾಗಿರಲಿ, ಪಪ್ಪಾಯಿ ಗಿಡದ ತುಂಬಾ ಪಪ್ಪಾಯಿ ತುಂಬಿರಲಿ, ಒಗ್ಗರಣಿಯ ಕರಿಬೇವು, ಪರಿಮಳದ ಅರಶಿನ ಎಲೆ, ನಿಂಬೆ ಗಿಡ, ಜೀರಿಗೆ ಮೆಣಸು, ವೀಳ್ಯದೆಲೆ, ಬಾಳೆಗಿಡ, ಕರಿಮೆಣಸು ಮನೆಯ ಸುತ್ತ ಮುತ್ತ ಇನ್ನಷ್ಟು ನಳನಳಿಸಲಿ.. ಅದಕ್ಕಾಗಿ ಆದರೂ ಸ್ವಲ್ಪ ಹೊತ್ತು ಗಿಡ ಮರಗಳ ಜೊತೆ ಸಮಯ ಕಳೆಯಲು...ಹೂವು, ತರಕಾರಿ ಗಿಡಗಳಿಗೆ ನೀರು ಹಿಡಿಯುವ ಕೆಲಸವನ್ನು ಆಸಕ್ತಿಯಿಂದ ಶ್ರದ್ಧೆಯಿಂದ ಮಾಡುವ ಮನಸ್ಸು ಮಾಡುವ.. ಏನಂತೀರಾ.. 😊🙏🏻

Ab Pacchu



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ