ಒಗ್ಗರಣೆಯಿಲ್ಲದ ಮಜ್ಜಿಗೆ

 

ಕುಡಿಸುವವ ಅಲ್ಲ

ಮನೆಗೆ ಮುಟ್ಟಿಸುವವ ಗೆಳೆಯ 


* * * * * * * * * * * * * * * * * *


ನೋಡಲು ಸಪ್ಪೆ

ನಗುವಿಲ್ಲದ ಹುಡುಗಿ

ಒಗ್ಗರಣೆ ಯಿಲ್ಲದ ಮಜ್ಜಿಗೆ


* * * * * * * * * * * * * * * * * *


ರಾಮ ಭಟ್ಟರ ಮನೆಯಲ್ಲಿ

ಜಾಜಿ ಬಿರಿಯುವುದಿಲ್ಲ

ಪಾತ್ರೆಯೊಳಗೆ ನಿತ್ಯ 

ಮಲ್ಲಿಗೆ ಇಡ್ಲಿ ಅರಳುವುದು


* * * * * * * * * * * * * * * * * *


ಅರಶಿನ ಬಣ್ಣವೇ ಚಂದ

ಮಾವು ತುಂಡರಿಸುವವರೆಗೆ


* * * * * * * * * * * * * * * * * *


ಅವಳು ಹೇಳಲಿಲ್ಲ

ಇವನು ಕೇಳಲಿಲ್ಲ

ಅವಳಿಗೆ ಅವನಿಗೆ

ಈಗ ಇಬ್ಬರು ಮಕ್ಕಳು


* * * * * * * * * * * * * * * * * *



ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ