ಅಪ್ಪ ಮತ್ತು ಮಗ
ಅಪ್ಪ ಮನೆಯಂಗಳದಲ್ಲಿಯೇ ರಿಕ್ಷಾ ತೊಳೆಯುತ್ತಿದ್ದ.ಅಲ್ಲೇ ಇದ್ದ ಮಗ " ಅಪ್ಪಾ.. ಕಾಲೇಜಿನ ನನ್ನ ಎಲ್ಲಾ ಗೆಳೆಯರ ಬಳಿಯೂ ಬೈಕ್ ಇದೆ,ಕೆಲವರ ಬಳಿ ಕಾರು ಕೂಡ ಇದೆ.ಅಷ್ಟು ದೊಡ್ಡ ಕಾಲೇಜ್ ಗೆ ಏತಕ್ಕಾಗಿ ನನ್ನನ್ನು ಸೇರಿಸಿದೆ,ಚಿಕ್ಕಂದಿನಿಂದಲೂ ಬಸ್ ಅಲ್ಲಿ ಹೋಗಿ ಹೋಗಿ ನನಗಂತು ಸಾಕಾಗಿ ಬಿಟ್ಟಿದೆ.ನನಗೂ ಒಂದು ಬೈಕ್ ಕೊಡಿಸಪ್ಪಾ,ಇಲ್ಲದಿದ್ದರೆ ನಾಳೆಯಿಂದ ನಾನು ಕಾಲೇಜಿಗೆನೇ ಹೋಗಲ್ಲ ..!! " ಅಂದು ಬಿಟ್ಟ. ಮರುದಿನವೇ ಮನೆಯಂಗಳದಲ್ಲಿ ಹೊಸ ಬೈಕ್ ಇತ್ತು. ಖುಷಿ ಖುಷಿ ಯಲ್ಲಿ ಹೊಸ ಬೈಕ್ ಬಿಡುತ್ತಾ ಮಗ ಕಾಲೇಜಿಗೆ ಹೋದ. ಸಂಜೆ ಕಾಲೇಜು ಮುಗಿಸಿ ಅದೇ ಬೈಕಿನಲ್ಲಿ ವಾಪಸ್ ಮನೆಗೆ ಬರುತ್ತಿರುವಾಗ, ರೋಡಿನಲ್ಲಿ ಅಪ್ಪ ಕೊಳೆಯಾದ ಬಟ್ಟೆ ಹಾಕಿಕೊಂಡು ತಲೆಗೊಂದು ಬೈರಾಸು ಕಟ್ಟಿಕೊಂಡು, ಕೈಯಲ್ಲಿ ಬುತ್ತಿ ಚೀಲ ಹಿಡಿದುಕೊಂಡು,ತುಂಬಾ ಸುಸ್ತಾಗಿ ನಡೆದು ಕೊಂಡು ಬರುತ್ತಿದ್ದ ಕಟ್ಟಡ ಕಾರ್ಮಿಕರ ಜೊತೆಗೆ! ಅದನ್ನು ನೋಡಿ ಕಸಿವಿಸಿ ಗೊಂಡ ಮಗ ಸೀದಾ ಮನೆಗೆ ಬಂದ. ಮನೆಗೆ ಬಂದಾಗ, ಹಿಂದುಗಡೆ ದಪ್ಪ ಅಕ್ಷರಗಳಲ್ಲಿ ತನ್ನ ಹೆಸರು ಬರೆದಿದ್ದ ಅಪ್ಪನ ಹಳೆಯ ರಿಕ್ಷಾ ಮನೆಯ ಅಂಗಳದಲ್ಲಿ ಇರಲಿಲ್ಲ!
.....................................................................................
#ಇಷ್ಟೇ..
AB Pacchu
Moodubidire

Comments
Post a Comment