ಅಮ್ಮ ಹೊಯ್ದ ನಿರುದೋಸೆ
ಜಾತ್ರೆಯಲ್ಲಿ ಕಳೆದು ಹೋದ
ಮಗುವಾದರೂ ಸಿಕ್ಕಿಬಿಡುವುದು
ಆದರೆ ಕಣ್ ರೆಪ್ಪೆ ಮಿಟುಕಿಸಿ ನಕ್ಕ ಹುಡುಗಿ
ಜಾತ್ರೆ ಪೂರ ಹುಡುಕಾಡಿದರೂ ಸಿಗಲೇ ಇಲ್ಲ..
* * * * * * * * * * * * * * * * * * * *
ಶರ್ಟ್ ತುಂಬಾ ಜೋತು
ಬಿದ್ದ ಆ ನಿನ್ನ ಮೈಯ ಘಮ ಕ್ಕೆ
ಈಗ ನಾನು ಪರಿಮಳ ಎನ್ನಲೇ,
ಇಲ್ಲ ಬರೀ ನೆನಪು ಎನ್ನಲೇ..
* * * * * * * * * * * * * * * * * * * * *
ಮನೆಯೊಳಗೆ ಎಲ್ಲೇ ಇದ್ದರೂ ಅಮ್ಮ ಹೊಯ್ಯುವ
ನೀರುದೋಸೆಯ ಲೆಕ್ಕ ಪಕ್ಕ ಸಿಗುವುದು ಏಕೆಂದರೆ
ಪ್ರತೀ ದೋಸೆಯು ಕಾವಲಿ ತುಂಬೆಲ್ಲಾ ಚುಂಯ್
ಎಂದು ಸದ್ದು ಮಾಡಿಯೇ ಹಾಗೆ ಒಡಾಡಿಬಿಡುವವು..
* * * * * * * * * * * * * * * * * * * * * * *
ಹಪ್ಪಳವೇ ಭೋಜನವಲ್ಲ
ಹಪ್ಪಳ ಇಲ್ಲದಿದ್ದರೆ
ಅದೊಂದು ಭೋಜನವೂ ಅಲ್ಲ..
* * * * * * * * * * * * * * * * * * * * * * * *
ತಿಂಗಳಿನಲ್ಲಿ ಎರಡೂ ಬಾರಿಗೂ ಹೆಚ್ಚು
ಏಕಾದಶಿ ಉಪವಾಸ ಮಾಡಬಲ್ಲಳು ಅಮ್ಮ
ಏಕೆಂದರೆ ಕೆಲವೊಮ್ಮೆ ಅವಳಿಗೆ ಹಸಿವಿಲ್ಲ
ಇನ್ನು ಕೆಲವೊಮ್ಮೆ ಮನೆಯಿಲ್ಲ ಅನ್ನ ಉಳಿದಿಲ್ಲ....
* * * * * * * * * * * * * * * * * * * * * * *
ಹಿತವಾಗಿ ಹದವಾಗಿ
ab pacchu
moodubidire

Comments
Post a Comment