ಅವಳಿ ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಈ ತರಹದ ಅಮರ್ ಬಾಳೆಹಣ್ಣು(twins) ಸಿಕ್ಕರೆ ಯಾರೂ ಕೂಡ ತಿನ್ನಲ್ಲ.ಆದ್ರೆ ಎರಡು ಬಾಳೆಹಣ್ಣು ಸಿಗುತ್ತೆ ಅಲಾ ಅದಕ್ಕಾಗಿ ನಾನು ಬೇಕಂತಲೇ ಇದನ್ನೇ ತಿನ್ತೇನೆ. ಬೇಡ ಅನ್ನುವ ಮಾತೇ ಇಲ್ಲ. ನಮ್ಮ ಗುಂಪಿನಲ್ಲಿ ಅಮರ್ ಬಾಳೆಹಣ್ಣು ಯಾರಿಗಾದರೂ ಸಿಕ್ಕಿದ್ರೆ ಅದು ಪಚ್ಚು ಗೆ ಕೊಡ್ರೋ ಅಂತ ನಂಗೆನೇ ಕೊಡ್ತಾರೆ, ಯಾಕೆಂದರೆ ಅವರಿಗೆಲ್ಲಾ ಗೊತ್ತು ನಂಗೆ ಅದಂದ್ರೆ ಇಷ್ಟ ಅಂತ 🤷♂
ಅಂಗಡಿಗೆ ಹೋದರೆ ಸ ಅಲ್ಲಿ ಬಾಳೆ ಕೈಲ್ (ಗೊನೆ) ನಲ್ಲಿ ಎಲ್ಲಾದರೂ ಅಮರ್ ಬಾಳೆಹಣ್ಣು ಅವಿತು ಕುಳಿತುಕೊಂಡಿರುವುದನ್ನು ನೋಡಿದರೆ ನಾನು ಅದೇ ಕೊಡಿ ಅಂತ ಕೇಳ್ತೇನೆ. ಯಾಕೋ ಗೊತ್ತಿಲ್ಲ ಅಂಗಡಿಯವರು ಸ " ಅದೆಲ್ಲಾ ಯಾಕೇ.. ಅದನ್ನು ಯಾರೂ ಕೂಡ ತಗೊಂಡು ಹೋಗಲ್ಲ.. ನಾವು ಅದನ್ನು ಕೊನೆಗೆ ಅಂಗಡಿ ಹತ್ರ ಬರೋ ಪೆತ್ತ ಕ್ಕೆ(ದನಕ್ಕೆ) ತಿನ್ಲಿಕ್ಕೆ ಕೊಡುವುದು. ನಿಮಗೆ ಅದು ಬೇಡ, ನಿಮಗೆ ಒಳ್ಳೆಯದೇ ಹಣ್ಣು ಕೊಡುವ ಅಂತ.." ಹೇಳ್ತಾರೆ. 🙄🤔ಪರವಾಗಿಲ್ಲ ನನಗೆ ಒಳ್ಳೆಯ ಹಣ್ಣು ಕೊಡಿ ಅದರೊಟ್ಟಿಗೆ ಆ ಅಮರ್ ಹಣ್ಣು ಸ ಕೊಡಿ ಅಂತ ಹೇಳ್ತೇನೆ. ಅವರು ಕೊನೆಗೆ ನನ್ನ ಚೊರೆ ಗೆ ಮನ ಸೋತು ಬಾಳೆಹಣ್ಣು ಏನೋ ಕೊಡ್ತಾರೆ ಆದರೆ ಆ ಅಮರ್ ಹಣ್ಣಿಗೆ ಮಾತ್ರ ಹಣ ತಗೊಳ್ಳುವುದೇ ಇಲ್ಲ 🤷♂
ಮೊನ್ನೆ ಒಮ್ಮೆ ಅಂಗಡಿಗೆ ಹೋದಾಗ.." ಈಗ ಪೆತ್ತ ಕೂಡ ಬರ್ತಾ ಇಲ್ಲ..ಎಲ್ಲಾ ಕೈಲ್ ನಲ್ಲಿ ಇದ್ದ ಅಮರ್ ಬಾಳೆಹಣ್ಣು ತೆಗೆದು ತೆಗೆದು ಒಂದು ತೊಟ್ಟೆಯಷ್ಟು ಆಗಿದೆ.. ಪೆತ್ತ ಬರದಿದ್ದಾಗ ನನಗೆ ನೀವೇ ನೆನಪಾಗ್ತೀರಾ.. ಮರೆಯದೇ ತಗೊಂಡು ಹೋಗಿ ಆಯ್ತಾ..." ಅಂತ ಹೇಳಿದರು..
ಹಾಗಾದರೆ ನಾನು ಪೆತ್ತವ?!
🙄🙄🤔🤔🏃🏻🏃🏻
ab pacchu

Comments
Post a Comment