ಹೀಗೆ 'ಏನೋ ಒಂದು' ಹೇಳಬೇಕೆನಿಸುವ ಮಾತುಗಳು,ಹಲವು ಸಣ್ಣ ಪುಟ್ಟ ಕಥೆಗಳು,ಕೆಲವು ಉದ್ದದ ಕಥೆಗಳು,ಅರಬ್ಬಿಯ ಭೋರ್ಗರೆತದೊಳಗಿರುವ ಮೌನಕ್ಕೆ ಕಿವಿಯಾದರೆ ನೀವು,ನನ್ನದೇ ಅನುಭವದ ಕಥೆಗಳನ್ನು ಕೂಡ ಹೇಳುವ ಫಲ್ಗುಣಿ ತೀರದ ಹುಡುಗ 'ಪಚ್ಚು' ನಾನು..
ನಿನಗೆ ಹಣೆಗೆ ಬಿಂದಿ ಹಚ್ಚಿಕೊಳ್ಳಲು ಆ ಆಫೀಸಿನಲ್ಲಿ ಅದೆಷ್ಟೋ ಗಾಜಿನ ಗೋಡೆಗಳಿದ್ದವು. ಆದರೂ ನೀನು ನನ್ನೆದುರು ಇದ್ದ ಗಾಜಿನ ಮುಂದೆಯೇ ಪ್ರತೀ ಸಲವೂ ಬಂದು ನಿಲ್ಲುತ್ತಿದ್ದೆ. ಏಕೆ? ಅದೂ ಕೂಡ ನಾನು ಆ ಒಂದು ಗಾಜಿನ ಮತ್ತೊಂದು ಬದಿಯಲ್ಲಿ ಬಂದು ಎಲ್ಲೆಲ್ಲೋ ನೋಡಿಕೊಂಡು ನನ್ನಷ್ಟಕ್ಕೆ ನಿಂತುಕೊಂಡ ಮರುಘಳಿಗೆಯಲ್ಲೇ! ಸಂಪೂರ್ಣ ಪಾರದರ್ಶಕ ಗಾಜದು. ಆ ಕೋಣೆಯ ನೀನು, ಈ ಕೋಣೆಯ ನಾನು, ನೀನು ಬಂದು ನಿಂತ ಆ ಕ್ಷಣಕ್ಕೆ ನಾವಿಬ್ಬರು ಅಲ್ಲೇ ಪರಸ್ಪರ ಎದುರುಬದುರು. ಸರಿಯಾಗಿ ಬಿಂಬವೇ ಮೂಡದ ಅಂತಹದ್ದೊಂದು ಗಾಜಲ್ಲಿ ಏನನ್ನು ನೋಡಿಕೊಂಡು ಹಣೆಯ ಬಿಂದಿಯನ್ನು ಅಷ್ಟೊಂದು ಸರಿಯಾಗಿ, ಸಲೀಸಾಗಿ ಹಣೆಯ ನಡುವಿಗೆ ಸಿಕ್ಕಿಸಿಕೊಳ್ಳುತ್ತಿದ್ದೆ ನೀನು. ನಿನ್ನ ಈ ವರ್ತನೆಯಿಂದ ವಿಲವಿಲ ಎಂದು ಒದ್ದಾಡಿ ಬಿಟ್ಟ ನನ್ನ ಕಣ್ಣ ಫಳಫಳ ಗಾಜನ್ನು ನೋಡಿಯೇ? ಬರೀ ಅಷ್ಟೇ ಆಗಿದ್ದರೆ ನಾನಂದು ಅಷ್ಟೊಂದು ಸೋಲುತ್ತಿರಲಿಲ್ಲ. ಬಿಂದಿ ಅಂಟಿಸುತ್ತಲೇ ಇದೊಂದು ಹಾಡಿನ ಸಾಲನ್ನು ಕೂಡ ಮೆಲ್ಲಗೆ ಗುನುಗಿ ಬಿಟ್ಟಿದ್ದೆ ನೀನು ... " ಗಗನದ ಸೂರ್ಯ ಮನೆ ಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ ಚಿಲಿಪಿಲಿ ಹಾಡು ಎಲೆ ಮೇಲೆ ನಿನ್ನ ಪ್ರೀತಿ ಹಾಡು ಎದೆ ಮೇಲೆ.... " ಅಮೃತವರ್ಷಿಣಿಯ ಹಾಡದು. ಆದರೆ ಏಕೆ? ಯಾರಿಗಾಗಿ! ನೀನದನ್ನು ನನ್ನೆದುರು ಗುನುಗಬಾರದಿತ್ತು ಪುನರ್ವಸು!! ಆಮೇಲೆಯೂ ನಾನು ಗಾಜಿನೆದುರು ಬಂದಾಗಲೆಲ್ಲ ನೀನು ಮತ್ತ...
ಅನಾರ್ಕಲಿಯ ಸೇಫ್ಟಿಪಿನ್ l ಜಯಂತ ಕಾಯ್ಕಿಣಿ " ಪ್ರಪಂಚದಲ್ಲಿ ಯಾವುದೇ ಜಾಗಕ್ಕಿಂತ, ಮಕ್ಕಳನ್ನು ಹೆತ್ತು ಅವರ ಬಾಲ್ಯವನ್ನು ಪೊರೆದ ಜಾಗಗಳು ಎಂಥ ಕಾರ್ಪಣ್ಯಗಳ ನಡುವೆಯೂ ಜೀವದ ಭಾಗವೇ ಆಗಿರುತ್ತದೆ. ಮಕ್ಕಳ ಕಂಪನ್ನು ಮರೆಸುವ ಶಕ್ತಿ ಯಾವ ಬಿರುಗಾಳಿಗೂ ಇಲ್ಲ..." ಇದೊಂದೇ ಅಲ್ಲ, ಇಂತಹ ಹಲವಾರು ಸಾಲುಗಳು ಇಲ್ಲಿರುವ ಎಲ್ಲಾ ಕಥೆಗಳ ಪ್ರತೀ ಪುಟ ಪುಟದಲ್ಲಿಯೂ ಗೊಂಚಲು ಗೊಂಚಲಾಗಿ ಕಣ್ಣಿಗೆ ಬೀಳುತ್ತವೆ. ಮಳೆಗೊಂದಿಷ್ಟು ಪದ ಬೆರೆಸಿ ಭಾವ ಸುರಿಸಿದ ಮಳೆಕವಿ ಜಯಂತ ಕಾಯ್ಕಿಣಿಯವರ ಗದ್ಯವೂ ಕೂಡ ಅವರ ಪದ್ಯಗಳಷ್ಟೇ ಚಂದ. ಕಥೆಯ ಪ್ರತೀ ಸಾಲನ್ನು(ಬಹುತೇಕ)ಎಷ್ಟೊಂದು ಕಾವ್ಯಾತ್ಮಕವಾಗಿ ಪೋಣಿಸಿ ಇಲ್ಲಿಯ ಕಥೆಗಳನ್ನು ಕಟ್ಟಿದ್ದಾರೆ ಎಂದರೆ ಹೆಚ್ಚಿನ ಸಾಲುಗಳನ್ನು ಎರಡೆರಡು ಬಾರಿ ಓದಿಯೇ ಇನ್ನಷ್ಟು ಚಪ್ಪರಿಸಬೇಕೆಂದು ಅನಿಸುತ್ತದೆ. ಇಲ್ಲಿ ಒಟ್ಟು 9 ಕಥೆಗಳಿವೆ. ಎಲ್ಲಾ ಕಥೆಗಳು ಹೀಗೇ ಇರಬೇಕು, ಹಾಗೇ ಅಂತ್ಯ ಕಾಣಬೇಕು ಎಂಬ ಧಾವಂತದಿಂದ ಲೇಖಕರು ಯಾವ ಕಥೆಯನ್ನೂ ಇಲ್ಲಿ ಬರೆದಿಲ್ಲ. ಛಾಯಚಿತ್ರಗಾರನೊಬ್ಬ ಬೀದಿಯಲ್ಲಿ ನಿಂತುಕೊಂಡು ತೆಗೆದ ಸ್ಟ್ರೀಟ್ ಪೋಟೋಗಳು ಹೇಳುವ ಕಥೆಗಳಂತೆ ಇದೆ ಈ ಸಂಕಲನದ ಎಲ್ಲಾ ಕಥೆಗಳು. ತಾಜಾ ಸೀಬೆ ಹಣ್ಣುಗಳನ್ನು ಕತ್ತರಿಸಿ ಅದಕ್ಕೆ ಉಪ್ಪು, ಮೆಣಸಿನ ಹುಡಿಯನ್ನು ಇಷ್ಟಿಷ್ಟೇ ಉದುರಿಸಿ ಕೊಡುವ ಹಣ್ಣು ಹಣ್ಣು ಮುದುಕಿಯ ಪೋಟೋದಂತೆ, ಜೋರಾಗಿ ಅಳುತ್ತಿರುವ ಮಗುವನ್ನು ಕಂಕುಳದಲ್ಲಿ ಇಟ್ಟುಕೊಂಡು ಕೆಂಡದಲ್ಲಿ ಸುಡ...
" ಬಿಡುಗಡೆ " ಕೆಲವರು ಗೊಂಚಲು ಗೊಂಚಲು ಪುಗ್ಗೆಗಳನ್ನು ಮಾರುತ್ತಾರೆ. ಇನ್ನು ಕೆಲವರು ಡಬ್ಬದಲ್ಲಿ ಸಿಹಿತಿಂಡಿಗಳನ್ನು ಮಾರುತ್ತಾರೆ; ಮತ್ತೆ ಕೆಲವರದ್ದು ಬುಟ್ಟಿಯ ತುಂಬಾ ಹೂ ಹಣ್ಣು, ನೆಲಗಡಲೆಯ ವ್ಯಾಪಾರ. ಆದರೆ ನಾನು ಹಕ್ಕಿ ಮಾರುತ್ತೇನೆ. ಬಣ್ಣದ ಜೀವಂತ ಹಕ್ಕಿಗಳನ್ನು ನನ್ನ ಪಂಜರದಲ್ಲಿಟ್ಟುಕೊಂಡು, ಹೆಗಲಿಗೊಂದು ಹಳೆಯ ಜೋಳಿಗೆ ಏರಿಸಿಕೊಂಡು ನಾನು ರಸ್ತೆಯ ಬದಿಯಲ್ಲಿ ನನ್ನಿಷ್ಟದ ಹಾಡುಗಳನ್ನು ಮೆಲುವಾಗಿ ಗುನುಗುತ್ತಾ ಪ್ರತೀ ದಿನವೂ ಉದ್ದಕ್ಕೆ ನಡೆಯುತ್ತೇನೆ. ದೇವರಿಗೆ ದಿನಾಲೂ ದೀಪ ಹೊತ್ತಿಸದಿದ್ದರೂ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಹಳಷ್ಟು ಹೊತ್ತು ಕೆಂಪು ದೀಪವೊಂದೇ ಪ್ರಜ್ವಲವಾಗಿ ಸದಾ ಉರಿಯುತ್ತಿರಲಿ ಎನ್ನುವುದೇ ನನ್ನದೊಂದು ಅನುದಿನದ ಪ್ರಾರ್ಥನೆ. ಅಂದ ಹಾಗೆ ನನ್ನಲ್ಲಿ ಮಾರಲು ಮುದ್ದಾದ ಮೂರು ಹಕ್ಕಿಗಳಿವೆ. ಹೌದು, ಕೇವಲ ಮೂರು ಮಾತ್ರ. ಪ್ರತೀ ಬಾರಿಯೂ ಮಾರಲು ನನ್ನಲ್ಲಿರುವುದು ಈ ಮೂರು ಹಕ್ಕಿಗಳೇ! ರಸ್ತೆ ಪಕ್ಕ ನಡೆಯುವಾಗ ಯಾರಾದರೊಬ್ಬರ ಕಣ್ಣಿಗೆ ನಾನು ಅವಶ್ಯವಾಗಿ ಬೀಳುತ್ತೇನೆ. ನನಗಿಂತಲೂ ಹೆಚ್ಚು ನನ್ನ ಪಂಜರದ ಹಕ್ಕಿಗಳ ಕಲರವವೇ ಈ ಹೆತ್ತವರ ಸಣ್ಣಪುಟ್ಟ ಮಕ್ಕಳ ಗಮನವನ್ನು ಇನ್ನಿಲ್ಲದೆ ಸೆಳೆದು ಬಿಡುತ್ತದೆ. ಏಕೆಂದರೆ ನನ್ನ ಈ ಮೂರೂ...
Comments
Post a Comment