ಊಟಕ್ಕಿಂತಲೂ ಇದೇ ಇಷ್ಟ..
ಗಡದ್ದಾಗಿ ಊಟ ಮಾಡಿ ಮೇಲೆಳುವುದಕ್ಕಿಂತಲೂ, ನನಗೆ ಈ ರೀತಿ ತಿನ್ನುವುದೆಂದರೆನೇ ಬಾರೀ ಇಷ್ಟ.. ಬಾರೀ ಪ್ರೀತಿ 😋
ಈ ಉಪ್ಪಿಟ್ಟು ಮಾಡುವಾಗ ಅದರ ಅಡಿ ಸ್ವಲ್ಪವೇ ತಳಹಿಡಿಯುತ್ತೆ ಅಲ್ಲ, ಉಪ್ಪಿಟ್ಟು ಎಲ್ಲಾ ಖಾಲಿಯಾದಾಗ ಒಂದು ಸೌಟು ತೆಗೆದುಕೊಂಡು ಅದನ್ನು ಹಾಗೇ ಕೆರೆದು ತಿನ್ನುವ ಮಜಾನೇ ಬೇರೆ...
ಅಡಿಯಲ್ಲಿ ಸ್ವಲ್ಪವೇ ಸಾಂಬಾರು ಉಳಿದ ಪಾತ್ರೆಗೆ, ಹಾಗೇ ಅನ್ನ ಕಲಸಿಕೊಂಡು ಒಂದು ತುತ್ತು ತಿನ್ನುವುದು ನನಗೆ ತುಂಬಾನೇ ಇಷ್ಟ...
ಈ ಪುಂಡಿ ಮಾಡುವಾಗ(ರೈಸ್ ಬಾಲ್), ಕಡೆದಂತಹ ಅಕ್ಕಿಹಿಟ್ಟನ್ನು ನೀರು ಹಾಕಿ ಬಾಣಲೆಯಲ್ಲಿ ಮಗುಚುತ್ತಾ ಮಗುಚುತ್ತಾ ಅದನ್ನು ಗಟ್ಟಿಯಾದ ಹದಕ್ಕೆ ತರುತ್ತೇವೆ ಅಲ್ಲಾ,ಕೊನೆಯಲ್ಲಿ ಗಟ್ಟಿಯಾದ ಅಕ್ಕಿ ಹಿಟ್ಟನ್ನು ತೆಗೆದ ನಂತರ... ಬಾಣಲೆಯ ಅಡಿಯಲ್ಲಿ ಬಾಣಲೆಗೆ ಅಂಟಿಕೊಂಡೇ ಒಂದು ಲೇಯರ್ ಹಾಗೇ ಉಳಿದುಬಿಡುತ್ತೆ. ಆವಾಗ ಆ ಬಾಣಲೆಯನ್ನು ಮತ್ತಷ್ಟು ಬಿಸಿ ಮಾಡಿದಾಗ ಬಾಣಲೆಯಿಂದ ರೋಸ್ಟ್ ಆದ crisp ಆದ ಒಂದು ಕೋರಿರೊಟ್ಟಿ ಯಂತಹ ರೊಟ್ಟಿ ಏಳುತ್ತೆ ಅಲ್ಲಾ ಅದು ನನಗೆ ಇಷ್ಟ..
ನಮ್ಮ ಮಂಗಳೂರಿನಲ್ಲಿ ಪಾತ್ರೆಯ ಮೇಲೂ, ಕೆಳಗೂ ಬೆಂಕಿ ಹಾಕಿ ಮಾಡುವ ಗೆಂಡದಡ್ಡೆ(ಕೆಂಡದ ಅಡ್ಡೆ/ತಿಂಡಿ) ಉಂಟಲ್ಲಾ, ಅದು ಮಾಡಿದ ನಂತರ... ಪಾತ್ರೆಯ ಮೇಲ್ಭಾಗದ ಕೆಂಡದ ಬಿಸಿಗೆ ರೋಸ್ಟ್ ಆಗಿ ಅಲ್ಲೇ ಮೇಲ್ಬಾಗದಲ್ಲೇ ಉಳಿದು ಬಿಡುವ ಉಗ್ಗರಣೆ ಹಾಗೂ ಆ ತಿಂಡಿಯ ಮೇಲಿನ ಪಾರ್ಟ್ ನನಗಿಷ್ಟ.
ಚಿಕನ್ ಸುಕ್ಕ ಮಾಡಿದರೆ ಅದರ ತಾರಾಯಿದ ಪೂ(ತೆಂಗಿನ ತುರಿ).. ಆಹಾ ಬಹಳನೇ ಇಷ್ಟ..
ಮರುವಾಯಿ(clams) ಸುಕ್ಕ ಮಾಡಿದರೆ ಅದರ ಚಿಪ್ಪಿನೊಳಗಿಂದ ಮಸಾಲೆ ಬೆರೆತ ಆ ತಾರಾಯಿದ ಪೂ ಅನ್ನು ಹಾಗೇ ಚೀಪುತ್ತಾ ತಿನ್ನುವುದು ನನಗಿಷ್..
ಪದಾರ್ಥ ಆಗುವ ಮೊದಲೇ ಟೇಸ್ಟ್ ನೋಡೆಂದು ತೆಂಗಿನ ಗೆರಟೆಯಲ್ಲಿ ಹಾಕಿಕೊಂಡು ತಿನ್ನುವ ಕೋರಿ ಪುಳಿ ಮುಂಚಿಯ ರುಚಿ... ಊಟದ ಟೈಂನಲ್ಲಿ ತಿನ್ನುವುದಕ್ಕಿಂತಲೂ ಅಧಿಕವಾಗಿಯೇ ಇರುತ್ತದೆ....
ಫಿಶ್ ತವಾ ಫ್ರೈ ಯ.. ತವಾ ದಲ್ಲಿ ಫ್ರೈ ಆಗಿರೋ ಆ ಡ್ರೈ ಮಸಾಲ...
ತಂಗಿ, ಅಣ್ಣ ನೊಂದಿಗೆ ಜಗಳ ಮಾಡಿ ತಿನ್ನೋ ಆ Boiled egg ನ ಆ ಹಳದಿ ರೌಂಡ್ ಪಾರ್ಟ್..
ಶ್ಯಾವಿಗೆ ಪಾಯಸದಲ್ಲಿ ಹೆಕ್ಕಿ ಹೆಕ್ಕಿ ತಿನ್ನುವ ಗೋಡಂಬಿ..
ಪುಳಿಯೋಗರೆಯ ಕಡಲೆ...
ಮೊಸರಾನ್ನದ ದಾಳಿಂಬೆ ಕಾಳು,ಹಸಿ ದ್ರಾಕ್ಷಿ..
ಐಸ್‌ಕ್ರೀಂ ನ ಮೇಲಿರೋ ಕೆಂಪು ಚೆರ್ರಿ..
ಬಿಳಿ ಅನ್ನದ ಮೇಲೆ ಹಾಕೋ ಒಂಚೂರೇ ಬಿಸಿ ತುಪ್ಪಾ...
ಊಟಕ್ಕಿಂತಲೂ ಜಾಸ್ತಿ ಇಷ್ಟ ಆಗೋ ತಂಪು ಮಜ್ಜಿಗೆ, ಖಾರ ಮೆಣಸು, ನೀರೂರಿಸೋ ಉಪ್ಪಿನಕಾಯಿ..
ಬಿಸಿ ಹಾಲಿನ ತುದಿಯಲ್ಲಿರೋ ಕೆನೆ..
ಕಡೆದ ಮೊಸರ ಮೇಲೆ ಈಜಾಡೋ ಬೆಣ್ಣೆ..
ಆಹಾ,ಸವಿದವನಿಗೆ ಗೊತ್ತು... ಅದೆಂತಹ ರುಚಿ, ಅದೆಷ್ಟು ರುಚಿ.. 😋😋
ಊಟಕ್ಕಿಂತಲೂ ಇದನ್ನೇ ಜಾಸ್ತಿ ಇಷ್ಟ ಪಡುವವರ ಸಾಲಿನಲ್ಲಿ ನಾನಂತೂ ಮೊದಲು ಇರ್ತಿನಪ್ಪ.. 😋😌🤟
.....................................................................................
#ಏನೋ_ಒಂದು..
AB Pacchu
Moodubidire

Comments
Post a Comment