ಬೊಂಡ ಜ್ಯೂಸ್ ಮಾಡುವುದು ಹೇಗೆ

 

" #ಬೊಂಡ_ಜ್ಯೂಸ್_ಮಾಡುವುದು_ಹೇಗೆ..? "


ಬನ್ನಿ ಗೆಳೆಯರೆ,ಸ್ನೇಹೀತರೇ,ಫ್ರೆಂಡ್ಸ್ ಗಳೇ ಮತ್ತು ನನ್ನ ನೆಚ್ಚಿನ ಎಲ್ಲಾ ಫಿರೆಂಡ್ಸ್ ಗಳೇ.. ಇವತ್ತು ನಾನು  "ನಮ್ಮ ಊರ್ ದ.. ನಮ್ಮ ನೀರ್ ದ.." ಖ್ಯಾತೀಯ ಒಂದು ಜ್ಯೂಸ್ ನ ಬಗ್ಗೆ ನಿಮಗೆ  ಸವಿವರವಾಗಿ ತಿಳಿಸಿ ಕೊಡಲಿದ್ದೇನೆ.ಇದು ಒಂದು ದೊಡ್ದ ಇದು.ಅದೇ ಅರೆಗಾಲದ(summer) ಒಂದು ದೊಡ್ಡ ಜ್ಯೂಸ್ ಇದು. 


ಆದರೆ actually ಇದು ಜ್ಯೂಸ್ ಸ ಅಲ್ಲ ಆಯ್ತಾ. ಶರ್ಬತ್ ಅಂತ ಹೇಳಿದರೆ ಅದೇ  ಕರೆಕ್ಟ್ ಹೆಸರು ಆಗ್ತದೆ ಇದಕ್ಕೆ.ವಿಷಯ ಎಂತ ಗೊತ್ತುಂಟಾ ಹೆಚ್ಚಿನವರು ಇದಕ್ಕೆ ಬೊಂಡ  ಜ್ಯೂಸ್.. ಬೊಂಡ ಜ್ಯೂಸ್ ಅಂತ ಹೇಳಿ ಹೇಳಿ ಇದಕ್ಕೆ ಅದೇ ಹೆಸರು  ಬಂದಿದ್ದು, ನಿಜವಾಗಿ ನೋಡಿದ್ರೆ ಇದು ಶರ್ಬತ್.ಇನ್ನು ಸ ಜಾಸ್ತಿ ನಿಜ ಹೇಳಬೇಕೆಂದರೆ ಇದು ಶರ್ಬತ್ ಸ ಅಲ್ಲ.. ಇದು ನಮ್ಮ ಸರ್ಬತ್ 😌🤷‍♂


ಇದು ಮಾಡುವುದು ಬಾರೀ ಸುಲಭ, ಎಂತ ಗೊತ್ತುಂಟಾ ಮೊದಲು ಇದು ಬೊಂಡ ಉಂಟಲ್ಲಾ, ಅದೇ ಸಿಹಿಯಾಳ/ಎಳನೀರು(ಟೆಂಡರ್ ಕೊಕೋನಟ್).. ಹೌದು, ಇದು ಮಾಡ್ಲಿಕ್ಕೆ ಅದು ಬೇಕು. ಅದನ್ನು ಮೊದಲು ನಾವು ಮನೆಗೆ ತರಬೇಕು.ಮನೆಯ ಮರದಲ್ಲಿ ಇದ್ದರೆ ಮರದಿಂದ ಒಂದು ಸಿಹಿಯಾಳ  ಕೀಳಬೇಕು. ಇರದಿದ್ದರೆ ಮಾತ್ರ ಅಂಗಡಿಯಿಂದಲೇ ಕೊಂಡು ತರಬೇಕು. ಪಕ್ಕದ ಮನೆಯಲ್ಲಿ ಇದ್ದರೆ ಅವರು ಇರದ ಸಮಯ ನೋಡಿ ಮೆಲ್ಲನೆ ಹೋಗಿ ನಾಲ್ಕೈದು ಆದರೂ ಸಿಹಿಯಾಳ ಕಿತ್ತುಬಿಡಿ. ಜಾಸ್ತಿಯೇ ಕೀಳಿ.. ನೆಕ್ಸ್ಟ್ ನಿಮ್ಮ ಮನೆಯಲ್ಲಿ ದಿನಾಲೂ ಬೊಂಡ ಜ್ಯೂಸೇ ಮಾಡಬಹುದು.


ಈಗ ಬೊಂಡವನ್ನು ಕತ್ತಿಯ ಸಹಾಯದಿಂದ ಬಾರೀ ಜಾಗ್ರತೆಯಿಂದ ಅದರ ತಲೆ ಸೈಡ್ ಅನ್ನು ಕೆತ್ತಬೇಕು. ಬಾರಿ ಜಾಗ್ರತೆ ಬೇಕು ಆಯ್ತಾ,ಗೊತ್ತಿಲ್ಲದೆ ಕೆತ್ತಲಿಕ್ಕೆ ಹೋದರೆ ಕೈಯ ಬೆರಳುಗಳನ್ನು ನೀವು ಕಳೆದು ಕೊಳ್ಳುವ ಚಾನ್ಸ್ ಉಂಟು.ಸುಮ್ಮನೆ ಬೊಂಡ ಜ್ಯೂಸ್ ಮಾಡ್ಲಿಕ್ಕೆ ಹೋಗಿ ಬೆರಳು ಕಳೆದು ಕೊಳ್ಳುವುದು ಯಾಕೆ ಅಲಾ..

ಆದ್ದರಿಂದ ಇದರ ಬಗ್ಗೆ ನೀವು ಹೆಚ್ಚಿನ ಮುತುವರ್ಜಿ ವಹಿಸಲೇಬೇಕು. 


ಇನ್ನು ಕೆತ್ತಿದ ಬೊಂಡವನ್ನು ಸೆಂಟರ್ ನಲ್ಲಿ ಒಟ್ಟೆ ಮಾಡಬೇಕು. ಹೌದು exact ಆಗಿ ಸೆಂಟರ್ ಅಲ್ಲಿ ಒಟ್ಟೆ ತೆಗೆಯಬೇಕು. ಅದಕ್ಕೆ ಇನ್ನು ನೀವು compass, protractor ಎಲ್ಲಾ ತರುವುದು ಬೇಡ. ಒಂದು ಸೆಂಟರ್ ಅಲ್ಲಿ ಬೊಂಡಕ್ಕೆ ಒಟ್ಟೆ ತೆಗಿಲಿಕ್ಕೆ ಆಗದಿದ್ದರೆ ಮತ್ತೆ ನೀವು ಎಂತಕ್ಕೆ ಇರುವುದು ಅಲ್ಲಾ.


ಈಗ ಹೇಗೋ ಸೆಂಟರ್ ಅಲ್ಲಿ ಒಟ್ಟೆ ಮಾಡಿದ ನಂತರ ಬೊಂಡದ  ನೀರು ಹಾಗೂ ಅದರ ಬಾವೆ(ಗಂಜಿ/Pulp) ಯನ್ನು ಪ್ರತ್ಯೇಕವಾಗಿ ತೆಗೆದು ಒಂದು ಸೈಡ್ ಅಲ್ಲಿ ಇಡಬೇಕು. ಹೌದು ಸೈಡ್ ನಲ್ಲಿಯೇ ಇಡಬೇಕು. ಸೆಂಟರ್ ಅಲ್ಲಿ ಯಾಕೆ ಇಡ್ಬಾರ್ದು ಅಂತ ಎಲ್ಲಾ ನಂಗೆ ಸ ಗೊತ್ತಿಲ್ಲ,ಟಿವಿಯಲ್ಲಿ ಹಾಗೇ ಹೇಳುದಲ್ಲಾ.. ಆದ್ದರಿಂದ ನೀವು ಸ  ಸೈಡ್ ನಲ್ಲಿಯೇ ಇಡಬೇಕು. ಪುನಃ ಲೆಫ್ಟ್ ಸೈಡಾ.. ರೈಟ್ ಸೈಡಾ ಅಂತ ಅಡ್ಡಾ ಪ್ರಶ್ನೆ ಹಾಕುವ ಹಾಗೆ ಇಲ್ಲ. ಎಲ್ಲಾದರೂ ಒಂದು ಸೈಡ್ ನಲ್ಲಿ ಇಡಿ ಮರ್ರೆ ಒಮ್ಮೆ ಬೇಗ ಬೊಂಡ ಜ್ಯೂಸ್ ಮಾಡುವ ಮೊದಲು. 


ಈಗ ಒಂದು ಒಂದು ಪಾತ್ರೆಗೆ ಮೊದಲೇ  ಸೈಡ್ ಅಲ್ಲಿ ತೆಗೆದಿಟ್ಟ ಬೊಂಡ ದ ನೀರು ಮತ್ತು ಅದರ ಗಂಜಿಯನ್ನು ಹಾಕಬೇಕು.ಹೌದು ನಿಧಾನವಾಗಿ ಹಾಕಬೇಕು. ಪಾಸ್ಟ್ ಸ ಹಾಕ್ಬಹುದು ಆದ್ರೆ ಒಟ್ರಾಸಿ ಪಾಸ್ಟ್ ಹಾಕಿ ಸುಮ್ಮನೆ ಯಾಕೆ ಬೊಂಡ ದ ನೀರು ವೇಸ್ಟ್ ಮಾಡ್ತೀರಾ. ಒಂದು ಬೊಂಡಕ್ಕೆ 35 ರಿಂದ 40 ರೂಪಾಯಿ ಉಂಟು ಈಗ. ಈ ಕೊರೊನ ಟೈಂ ಅಲ್ಲಿ ಒಂದೊಂದು ಪೈಸೆ ಕೂಡ ಖರ್ಚು ಮಾಡಲು ಹಿಂದೆ ಮುಂದೆ ನೋಡುವ ಕಾಲ ಇದು. 


ಓಕೆ ಈಗ ಹೇಗೋ ಪಾತ್ರೆ ಗೆ ಬೊಂಡದ ನೀರು ಮತ್ತು ಬೊಂಡ ದ ಗಂಜಿ ಯನ್ನು ಹಾಕಿದ್ದೀರಿ ಎಂದು ತಿಳಿದುಕೊಳ್ಳೋಣ. ನಂತರ ಇದಕ್ಕೆ ಸಕ್ಕರೆಯನ್ನು ಸ ಹಾಕಬೇಕು. ಸಕ್ಕರೆ ಖಾಲಿ ಆಗಿದ್ದರೆ ಅಂಗಡಿ ಹೋಗಿ ಸಕ್ಕರೆ ತರಬೇಕು. ಇಲ್ಲದಿದ್ದರೆ ಪಕ್ಕದ ಮನೆಯಲ್ಲಿ ಕೇಳಿ ಆದರೂ ಸಕ್ಕರೆ ತರಬೇಕು. ನೆಕ್ಸ್ಟ್ ಅವರು ಕೇಳಿದಾಗ ನಾವು ಸ ಕೊಡಬೇಕು. ಟೋಟಲಿ ಸಕ್ಕರೆ ಇದಕ್ಕೆ ತುಂಬಾ ತುಂಬಾ important. 


ಓಕೆ ಈಗ ಸಕ್ಕರೆ ಯೂ ನಿಧಾನವಾಗಿ ಹಾಕಿ ಆಯ್ತು. ಸಕ್ಕರೆ ಕೆಳಗೆ ಬಿದ್ದರೆ ಇರುವೆ ಬರ್ತದೆ. ನಿಮಗೆ ಇರುವೆಗಳಿಗೆಯೇ ಸಕ್ಕರೆ ಹಾಕಬೇಕು ಅಂತ ಅಷ್ಟು ಮನಸ್ಸಿದ್ದರೆ ಮನೆಯ ಅಂಗಳದಲ್ಲಿ ಬೇರೆ ಟೈಮ್ ನಲ್ಲಿ ಹಾಕಿ ಬೊಂಡ ಜ್ಯೂಸ್ ಮಾಡುವಾಗ ಬೇಡ. ಹಾನ್.. ಬೆಳಿಗ್ಗೆ ಬೆಳಿಗ್ಗೆ ಇರುವೆಗಳಿಗೆ ಸಕ್ಕರೆ ಹಾಕುವುದು ಯಾವುದೋ ದೋಷಕ್ಕೆ ಒಳ್ಳೆಯದು ಅಂತ ಮೊನ್ನೆ ಟಿವಿಯಲ್ಲಿ ಒಬ್ಬರು ಜ್ಯೋತಿಷಿಗಳು ಸ ಹೇಳ್ತಾ ಇದ್ದರು. ಅದು ಆಮೇಲೆ ಹಾಕಿ ಈಗ ಜ್ಯೂಸ್ ಕಡೆಗೆ ಗಮನವಿರಲಿ ನಿಮ್ಮದು.


ಸಕ್ಕರೆ ಹಾಕಿದ ನಂತರ ನಿಧಾನವಾಗಿ ಸಕ್ಕರೆ ಕರಗುವವರೆಗೆ ಒಂದು ಸೌಟಿನಲ್ಲಿ ತಿರುಗಿಸುತ್ತಾ ಇರಬೇಕು. ಇದು.. ಇದು important. ಒಟ್ರಾಸಿ ತಿರುಗಿಸುವುದು ಅಲ್ಲಾ, ಪೂರ್ತಿ ಸಕ್ಕರೆ ಕರಗುವವರೆಗೆ ಹಾಗೇ ತಿರುಗಿಸುತ್ತಾ ಇರಬೇಕು ನೀವು.


ಈಗ ಸಿಹಿ ನೋಡಿ, ಕಮ್ಮಿ ಅಂತ ಅನ್ನಿಸಿದರೆ ಡಬ್ಬದಲ್ಲಿರುವ ಮತ್ತಷ್ಟು ಸಕ್ಕರೆ ತಂದು ಸುರಿಯಿರಿ. Already ಲೆಕ್ಕಕ್ಕಿಂತ ಕಂಡಾಪಟ್ಟೆ  ಜಾಸ್ತಿಯೇ ಸಿಹಿಉಂಟು ಅಂತ ಅನ್ನಿಸಿದರೆ, ನೀವು ಬೊಂಡ ಜ್ಯೂಸ್ ಕುಡಿಯುವವರಿಗೆ ಹೇಳ್ಬೇಕು "ಜ್ಯೂಸ್ ಮಾಡ್ಲಿಕ್ಕೆ ಸ ಕಮ್ಮಿ ಸಕ್ಕರೆ ಹಾಕಿದರೆ ಈ ಸಮಾಜ  ನನ್ನನ್ನು ಏನು ಅಂತ ತಿಳಿದುಕೊಳ್ಳಬಹುದು ಅಲ್ಲಾ..ಖಂಡಿತ, ಅವ ಒಬ್ಬ ಎಂತ ಕಂಜೂಸ್ ಮರ್ರೆ, ಬೊಂಡ ಜ್ಯೂಸ್ ಗೆ ಸ ಸಕ್ಕರೆ ಹಾಕ್ಲಿಕ್ಕೆ ಹಿಂದೆ ಮುಂದೆ ನೋಡ್ತಾನೆ ಅಂತಲೇ ಹೇಳುತ್ತೆ.ಜ್ಯೂಸ್ ಅಂದ ಮೇಲೆ ಸಿಹಿ ಇರಲೇ ಬೇಕು, ಏನು ಹೇಳ್ತೀರಾ.." ಅಂತ ಹೇಳಬೇಕು ನೀವು. 


ಸಿಹಿ ಎಲ್ಲಾ ಒಂದು ರೇಂಜಿಗೆ ಓಕೆ ಆದ ಮೇಲೆ ನಂತರ ಇದಕ್ಕೆ ಹುಳಿ ಹಿಂಡಬೇಕು, ಅದೆಯಾ ಲಿಂಬೆ ರಸವನ್ನು ಹಿಂಡಿ ಹಿಂಡಿ  ಹಾಕಬೇಕು, ಪ್ರಾಣ ಹೋಗುವವರೆಗೆ ಹಿಂಡಿ ಹಾಕಿ. ನಾವು ಯಾವತ್ತೂ ಬೇರೆಯವರ ಬಾಳಿನಲ್ಲಿ ಹುಳಿ ಹಿಂಡಬಾರದು. ಹಿಂಡುವುದಾದರೆ ಬೊಂಡ ಜ್ಯೂಸ್ ಗೆ ಹುಳಿ  ಹಿಂಡಬೇಕು. ಇದು ನಾವು ನೀವೆಲ್ಲಾ ಬೊಂಡ ಜ್ಯೂಸ್ ನಿಂದ ಕಲಿಯಬಹುದಾದ ಒಂದು ನೀತಿ ಪಾಠ.


ಈಗ ಫಸ್ಟ್  ಮನೆಯಲ್ಲಿ ಮೊದಲು ಲಿಂಬೆ ಉಂಟಾ ಅಂತ ನೋಡಿ, ಹಾನ್ ಫ್ರಿಡ್ಜ್ ನಲ್ಲಿ  ಸ ಒಮ್ಮೆ ಚೆಕ್ ಮಾಡಿ ನೋಡಿ. ಗೊತ್ತುಂಟು ಬಿಡಿ ಅದು ಬೊಂಡ ಜ್ಯೂಸ್ ಮಾಡುವ ದಿನ ಇರುವದಿಲ್ಲ ಅಂತ. ಇರದಿದ್ದರೆ ಪುನಃ ಅಂಗಡಿಗೆ ವೇಗವಾಗಿ ಓಡಬೇಕು ನೀವು. ಅಂಗಡಿಯಿಂದ ಲಿಂಬೆ ತೆಗೆದುಕೊಂಡ ನಂತರ ಅಷ್ಟೇ ವೇಗವಾಗಿ ಓಡುತ್ತಾ ಹಿಂದೆ ಬರಬೇಕು. ಈಗ ಮಳೆ ಜಾಸ್ತಿ ಇರುವುದರಿಂದ ಅಂಗಡಿಗೆ ಕೊಡೆ ತಗೊಂಡು ಹೋಗಿ.ಇಲ್ಲದಿದ್ದರೆ ರೈನುಕೋಟು ಸ ಆಗ್ತದೆ ಆಯ್ತಾ. 


ಇದಕ್ಕೆ ಏಲಕ್ಕಿ ಹಾಕಬಾರದು. ಬೇಕಿದ್ದರೆ ನಿಮ್ಮ ಮನೆಯಲ್ಲಿ ಏಲಕ್ಕಿ ಒಂದು ಗೋಣಿಯೇ ಇರಬಹುದು. ಪಾಯಸ ಮಾಡ್ಲಿಕ್ಕೆ,ಫುಲಾವ್, ಶೀರಾ ಎಲ್ಲಾ ಮಾಡ್ಲಿಕ್ಕೆ ಅಂತ ತಂದದ್ದು ಇರಬಹುದು. ಆದ್ರೆ ಬೇಡ ಅಂದ್ರೆ ಬೇಡ. ಹಾಕುವುದೇ ಬೇಡ. ಯಾಕೆ ಗೊತ್ತಾ ಅದರ ಪರಿಮಳ ಭಯಂಕರ ಜಾಸ್ತಿ ಮರ್ರೆ.ಮತ್ತೆ ನಿಮಗೆ ಹಾಕ್ಲೇ ಬೇಕು ಅಂತ ಇದ್ದರೆ ನಾನು ಏನು ಮಾಡ್ಲಿಕ್ಕೆ ಸ ಆಗುವುದಿಲ್ಲ. ಬೊಂಡ ಜ್ಯೂಸ್ ಹಾಳಾಗಿ ಹೋಗಲಿ.. ಅದನ್ನು ಸ ಹಾಕಿಬಿಡಿ.


ಇಷ್ಟೇ.ಆದರೆ ಇದನ್ನು ಹಾಗೇ ಕುಡೀಲಿಕ್ಕೆ ಏನೂ ಮಜಾ ಇಲ್ಲ.ಇದನ್ನು chilled ಮಾಡಿಯೇ ಕುಡಿಯ ಬೇಕು.ಆವಾಗಲೇ  ಚಂದ. ಸ್ವಲ್ಪ ಹುಳಿ, ಜೊತೆಗೆ ಸಿಹಿ, ಅದರೊಟ್ಟಿಗೆ ಬೊಂಡದ ನೀರಿನ ಸ್ವಾದ, ನಡು ನಡುವೆ ತಿನ್ನಲು ಸಿಗುವ  ಅದರ ಮೃದುವಾದ ಗಂಜಿ.. ನಿಜವಾಗಿಯೂ ಕುಡಿದವನೇ ಬಲ್ಲ ಅಮೃತ ಸಮಾನವಾದ ಬೊಂಡ ಜ್ಯೂಸ್ ನ ರುಚಿಯ.. 😋😋


ಈ ವಿಶೇಷವಾದ ಬೊಂಡ ಜ್ಯೂಸ್ ಅನ್ನು ನೀವೂ ಮಾಡಿ, ನಿಮ್ಮವರಿಗೂ ಚೆನ್ನಾಗಿ ಕುಡಿಸಿ.ಮತ್ತೆ ಬೊಂಡ ಜ್ಯೂಸ್ ಮಾಡುವಾಗ ಚಾಚೂ ತಪ್ಪದೇ ನನ್ನ ಪಾಯಿಂಟ್ ಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿ,ಆಗ ಮಾತ್ರ ಅದ್ಭುತ ಬೊಂಡ ಜ್ಯೂಸ್ ಒಂದು ನಿಮ್ಮ ಮನೆಯಲ್ಲೂ ತಯರಾಗುವುದು..🤷‍♂😌

ಆದ್ರೆ ಈಗ ಮಾಡ್ಬೇಡಿ next summer ಗೆ ಮಾಡಿ, ಆಗ ಮಾಡಿದರೆ ಒಳ್ಳೆಯದಾಗುವುದು..ಈಗ ಮಳೆ ಸುರೀತಾ ಉಂಟಲ್ಲಾ, ಬಿಸಿ ಬಸಿ ಫಿಲ್ಟರ್ ಕಾಫಿ ಒಳ್ಳೆಯದಾಗ್ತದೆ ಈ ಮಳೆಗೆ.. 


🙄🤔🏃‍♂️🏃‍♂️




ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ