ಕಾಯಿ ಹೋಳಿಗೆ

 

ನೋವುಗಳು ಹೆಚ್ಚಾದಾಗ

ಮರೆವು ಎಂಬ ಕಾಯಿಲೆ

ಅತಿಯಾಗಬೇಕು


* * * * * * * * * * * * * * * * * *


ತುಂಡು ಚಂದಿರನನ್ನು ಮಣೆಯ ಮೇಲಿಟ್ಟು

ಕಾಯಿ ಬೆಲ್ಲದ ಹೂರಣ ಸೇರಿಸಿ 

ಹದವಾಗಿ ಲಟ್ಟಿಸಿ ಬಿಟ್ಟರೆ ಅವ

ಪೌರ್ಣಮಿಯ ಕಾಯಿ ಹೋಳಿಗೆ


* * * * * * * * * * * * * * * * * *


ಕುಚೇಲ ಕೊಂಡು ಹೋದ

ಕೃಷ್ಣಾ ಮನಸಾರೆ ತಿಂದುಬಿಟ್ಟ

ಸ್ನೇಹ ಗೆದ್ದು ನಕ್ಕಿತು 

ಯಾರು ಹೇಳಿದ್ದು ಅದು ಬರೀಯ ಅವಲಕ್ಕಿ ಎಂದು


* * * * * * * * * * * * * * * * * *


ನೀನಿಲ್ಲದಿದ್ದರೆ ಕ್ಷಣಕಾಲ ಬದುಕುವುದಿಲ್ಲ

ಎನ್ನುವುದು ಶುದ್ಧ ಸುಳ್ಳು 

ಯಾರೂ ಬದುಕುವುದಿಲ್ಲ

ಆಮ್ಲಜನಕ ಒಂದು ಇರದಿದ್ದರೆ


* * * * * * * * * * * * * * * * * *


ಕಣ್ಣಿಗೆ ಕಾಣುವ ದೇವರು ಇಬ್ಬರೇ

ಸೂರ್ಯ ಮತ್ತು ಅನ್ನಪೂರ್ಣೆ

ಒಬ್ಬರು ಆಕಾಶದಲ್ಲಿ ಹುಟ್ಟುತ್ತಾರೆ

ಮತ್ತೊಬ್ಬರು ಅಡುಗೆಮನೆಯಲ್ಲಿ ಬಡಿಸುತ್ತಾರೆ


* * * * * * * * * * * * * * * * * *



ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ