ಅಮ್ಮನ ಸೀರೆ

 

"ಅಮ್ಮಾ, ಈ ಸೀರೆ ಬಳಸಿ ಹೊಳೆಯಲ್ಲಿ ಮೀನು ಹಿಡಿಯಲು ಆಗುತ್ತಿಲ್ಲ, ಹರಿದಿದೆ..ಬೇರೆ ಸೀರೆ ಕೊಡಮ್ಮಾ.. " ಎಂದು ಮಗು ಹೇಳಿತು. ಅಮ್ಮ ಮತ್ತೊಂದು ಸೀರೆ ತಂದಳು, ಅದು ಕೂಡ ಹರಿದಿತ್ತು, ಇನ್ನೊಂದು  ಮಗದೊಂದು ತೆಗೆದಳು, ಹೆಚ್ಚಿನ ಎಲ್ಲವೂ ಹರಿದಿತ್ತು. ಕೊನೆಗೆ ತನ್ನ ಮದುವೆಯ  ಸೀರೆ ತಂದುಕೊಟ್ಟಳು. ಮಗ ಖುಷಿಯಿಂದ ಸೀರೆ ಹಿಡಿದುಕೊಂಡು ಹೊಳೆ ಕಡೆ ಓಡಿದ. ಗಾಜಿನ ಬಾಟಲಿಯಲ್ಲಿ ಸಣ್ಣ ಸಣ್ಣ ಹೊನ್ನ ಬಣ್ಣದ ಮೀನುಗಳನ್ನು ಹಿಡಿದು ತಂದ, ಅವನ ಖುಷಿಗೆ ಪಾರವೇ ಇರಲಿಲ್ಲ. ಅವನ ಖುಷಿ ನೋಡಿ, ಅಮ್ಮನಿಗೆ ಆನಂದವಾಯಿತು.. ಅದೇ ಖುಷಿಯಲ್ಲಿ ಸೂಜಿ ಹಿಡಿದು ಹರಿದ ಸೀರೆ ಹೊಲಿಯಲು ಶುರು ಮಾಡಿದಳು,ಏಕೆಂದರೆ ಅವಳಿಗೆ ಮರು ದಿನ ಪೇಟೆಗೆ ಹೋಗಲು ಇತ್ತು.. ಮಗನ ಹುಟ್ಟು ಹಬ್ಬಕ್ಕೊಂದು  ಶರ್ಟು ಖರೀದಿಸಲು ಇತ್ತು... 


.....................................................................................


#ಇಷ್ಟೇ...


AB Pacchu

Moodubidire

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!