ಏನೋ ಒಂದು ಮಾಡ್ಬೇಕು..
ಲೈಫ್ ಅಲ್ಲಿ ನಾವು ಏನಾದರೂ ಒಂದು ಮಾಡ್ಬೇಕು.ಆವಾಗ ನಾವು ಲೈಫ್ ಅಲ್ಲಿ ಏನಾದರೂ ಒಂದು ಆಗ್ಬಹುದು. ಏನಾದರೂ ಒಂದು ಆಗ್ಬೇಕಾದರೆ ನಮಗೆ ಲೈಫ್ ಅಲ್ಲಿ ಮುಖ್ಯವಾಗಿ ಏನಾದರೂ ಒಂದು ಅದು ಇರ್ಬೇಕು. ಅದನ್ನು ನಾವು ಏನಾದರೂ ಒಂದು ಮಾಡಿ ನಮ್ಮದಾಗಿಸಿಕೊಂಡರೆ ನಮಗೆ ಲೈಫ್ ಅಲ್ಲಿ ಏನಾದರೂ ಒಂದು ಸಿಕ್ಕೇ ಸಿಗುತ್ತದೆ. ನಾವು ಅದು ಬಿಟ್ಟು ಇದರ ಹಿಂದೆ ಹೋದರೆ ನಮಗೆ ಲೈಫ್ ಅಲ್ಲಿ ಏನಾದರೂ ಒಂದು ಸಿಗುವುದೇ ಇಲ್ಲ ಮತ್ತು ನಾವು ಏನಾದರೂ ಒಂದು ಆಗುವುದೇ ಇಲ್ಲ. ಅದು ಬೇಕೋ ಇದು ಬೇಕೋ ಎನ್ನುವ ದ್ವಂದ್ವದಲ್ಲಿ ಸಿಕ್ಕಿ ಬಿದ್ದಾಗ ಏನಾದರೂ ಒಂದು ಆಗ್ಲಿಕ್ಕೆ ಮುಖ್ಯವಾಗಿ ಏನು ಬೇಕು ಎಂಬುದನ್ನು ನೀವು ಏನಾದರೊಂದು ಮಾಡಿ ಕಂಡುಕೊಂಡಾಗ ಮಾತ್ರ ನೀವು ಕೂಡ ಎಲ್ಲರ ಹಾಗೆ ಲೈಫ್ ಅಲ್ಲಿ ಏನೋ ಒಂದು ಮಾಡಿಯೇ ಮಾಡ್ತೀರಾ ಹಾಗೂ ನೀವು ಕೂಡ ಏನೋ ಒಂದು ಆಗಿಯೇ ಆಗ್ತೀರಾ ಅಂತ ನಂಗೆ ಕೂಡ ಒಂದು ದೃಡವಾದ, ಅಚಲವಾದ,ಸ್ಟ್ರಾಂಗ್ ಅದ ಏನೋ ಒಂದು ನಂಬಿಕೆ ಅದರಿಂದ ಬರ್ತಾ ಇದೆ. ಹೌದು ಲೈಫ್ ಅಲ್ಲಿ ಮುಖ್ಯವಾಗಿ success ಆಗ್ಲಿಕ್ಕೆ ಅದು ಬೇಕು. ಇದು ಕೂಡ ಬೇಕು. ಅದು ಕೈ ಕೊಟ್ಟರೆ ಇದು ಬೇಕು. ಇದು ಕೈ ಕೊಟ್ಟರೆ ಅದು ಬೇಕು. ಆದರೆ ಏನಾದರೂ ಒಂದು ಮಾತ್ರ ಬೇಕೆ ಬೇಕು. ಇದುವೇ ಬಾಳಿನ ಸತ್ಯ.. Sorry ಅದುವೇ ಬಾಳಿನ ಸತ್ಯ.. Sorry Sorry.. ಇದುವೇ ಅದುವೇ ಬಾಳಿನ ಸತ್ಯ.. ಸತ್ಯ. ಏನಾದರೂ ಆಗಿ ಆದರೆ ಬಾಳಿನಲ್ಲಿ ಏನಾದರೂ ಒಂದು ಮಾತ್ರ ಅವಶ್ಯವಾಗಿ ಆಗಿ 😌🤷♂
🙄🤔🏃♂️🏃♂️
#ಏನೋ_ಒಂದು..
ab pacchu

Comments
Post a Comment