ಹೊಳೆಯುವ ಮುತ್ತು
ನಿಯತ್ತು ಎಂಬುವುದು
ಹಿಂದಿನಿಂದಲೂ ಇತ್ತು
ಒಂದು ದಿನ ನಾಯಿ ಹುಟ್ಟಿತು
ನಿಯತ್ತಿಗೂ ಅವತ್ತಿನಿಂದ ಬೆಲೆ ಹೆಚ್ಚಾಯಿತು
* * * * * * * * * * * * * * * * * *
ಅಮ್ಮ ಹಪ್ಪಳ ಕೊಟ್ಟೇ ಸಂತೈಸಬೇಕಾಗಿತ್ತು
ಪ್ರತಿದಿನವೂ ಊಟ ಮಾಡುವಾಗ
ಮಗು ಚಂದಮಾಮನಿಗಾಗಿಯೇ ಹಟ ಮಾಡುತ್ತಿತ್ತು
* * * * * * * * * * * * * * * * * *
ಹಲಸಿನ ಕಡುಬು, ಮುಳುಕ
ಮಾಡಿಟ್ಟರೂ,ಬರೀ
ಹಲಸಿನ ಹಣ್ಣೊಂದೇ ಸಾಕಂತೆ
ಕಚ್ಛಾ ಪ್ರೇಮಿ ಕರಡಿಗೆ
* * * * * * * * * * * * * * * * * *
ಹೊಳೆಯುವ ಮುತ್ತು ಬಿಸಾಡಿ
ಮನೆಗೆ ಬರುವುದು ಎಂದರೆ
ಪತ್ರೋಡೆಗಾಗಿ ತೋಟದಲ್ಲಿ
ಕೆಸುವಿನೆಲೆಯನ್ನು ಶ್ರದ್ಧೆಯಿಂದ ಆರಿಸುವುದು
* * * * * * * * * * * * * * * * * *
ದೇವರಿಗಿಂತ ಹೆಚ್ಚು ಆಪ್ತ
ಇನ್ನಾರೂ ಇರಲು ಸಾಧ್ಯವೇ ಇಲ್ಲ
ಅದಕ್ಕಾಗಿ ಏಕವಚನವನ್ನೇ
ಅತಿಯಾಗಿ ಬಳಸುತ್ತೇವೆ
* * * * * * * * * * * * * * * * * *
ಹಿತವಾಗಿ ಹದವಾಗಿ
ab pacchu
moodubidire

Comments
Post a Comment