ಕೇಡಿಗಳು ಮತ್ತು ಫೈಟಿಂಗ್ ಗಳು
ಈಗ ಸ ಓಲ್ಡ್ ಮೂವಿ ನೋಡಿದ್ರೆ ನಂಗೆ ಕಥೆ,ಅಭಿನಯಕ್ಕಿಂತ ಜಾಸ್ತಿ ಇಷ್ಟ ಆಗೋದೇ ಫೈಟಿಂಗ್, ಕಿಡ್ನಾಪ್ ಮತ್ತು ಆ ಕಾಲದ ಕೇಡಿಗಳು.
ಆಗ ಕಿಡ್ನಾಪ್ ಗಳಲ್ಲಿ ಅವರು ಜಾಸ್ತಿ use ಮಾಡುತ್ತಿದ್ದದ್ದು ಈ ನಮ್ಮ omni ಕಾರುಗಳನ್ನು. Omni ಕಾರ್ ಕೇಡಿ ಹತ್ರ ಇದೆ ಅಂದ್ರೆ confirm ಅದರಲ್ಲಿ ಒಂದು ಕಿಡ್ನಾಪ್ ಸೀನ್ ಇದೆ ಅಂತ ನೀವು ಮೊದಲೇ ಡಿಸೈಡ್ ಮಾಡಿಬಿಡಬಹುದು. ಅದು ಅವರಿಗೆ easy ಆಗ್ತದೆ ಡೋರ್ ರಪ್ಪ ಅಂತ slide ಮಾಡಿ ಒಳಗೆ ಜನರನ್ನು ಎಳೆದು ಹಾಕ್ಲಿಕ್ಕೆ.
ಅದರಲ್ಲೂ maximum ಆಗಿ ಕೇಡಿಗಳು ಶಾಲಾ ಮಕ್ಕಳನ್ನೇ ಕಿಡ್ನಾಪ್ ಮಾಡ್ತಾರೆ, ಹೆಚ್ಚಾಗಿ ಸಂಜೆ ಶಾಲೆಯಿಂದ ಬರುವಾಗಲೇ. ಮತ್ತೆ ಕಿಡ್ನಾಪ್ ಮಾಡೋ ಡ್ರೈವರ್ ಕೇಡಿ ತಲೆ ಯಾವತ್ತೂ ಬಾಲ್ಡಿ ಯಾಗಿಯೇ ಇರುತ್ತೆ. ಅದು ಕೇಡಿತನದ ಗುರುತು. ಕಿಡ್ನಾಪ್ ಮಾಡಿದ ಕೇಡಿಗಳು ಜಾಸ್ತಿಯಾಗಿ ಕಿಡ್ನಾಪ್ ಮಾಡಿಟ್ಟ ಜಾಗದಲ್ಲಿ ಆಡೋದು ಯಾವತ್ತೂ ಒಂದೇ ಆಟ.. ಅದು ಇಸ್ಪೀಟ್. ಅದು ರಮ್ಮಿಯೋ, ಅಂದರ್ ಬಾಹರೋ ಯಾವುದೆಂದು ಮಾತ್ರ ಗೊತ್ತಾಗಲ್ಲ ಅಷ್ಟೇ.🤔🤔
ಇನ್ನು ಫೈಟಿಂಗ್ ವಿಷಯಕ್ಕೆ ಬರುವ. ಫೈಟಿಂಗ್ ನಲ್ಲಿ ಮೊದಲು ಚೆನ್ನಾಗಿ ಹೊಡೆತ ಹೀರೋನೇ ತಿನ್ಬೇಕು.ಅದು ಫೈಟಿಂಗ್ ನ ಮೂಲ ನಿಯಮ.ಆ ನಿಯಮ ಕ್ಕೆ ಎಳ್ಳಷ್ಟು ದಕ್ಕೆ ಬರುವಂತಿಲ್ಲ. ಎಷ್ಟೆಂದರೆ ಕೆಲವೊಮ್ಮೆ ಅವನಿಗೆ ಐದು ಗುಂಡು ಬಿದ್ದು ಸತ್ತೇ ಹೋದ ಎಂದು ಕೇಡಿ ಕೇಕೆ ಹಾಕುವಾಗ.. ಬಿದ್ದಲ್ಲಿಂದ ಎದ್ದು ಬಂದು ಕೇಡಿಗೆ ಚೆನ್ನಾಗಿ ಚಚ್ಚೇ ಬಿಡ್ತಾನೆ ನಮ್ ಹೀರೋ. ಕೆಲವೊಮ್ಮೆ ಅರ್ಧ ಗಂಟೆ ಮಣ್ಣಿನೊಳಗೆ ಹೂತು ಹಾಕಿದ್ದರೂ ಹೀರೋ ಮಾತ್ರ ಸಾಯೋದೇ ಇಲ್ಲ.
ಕೆಲವೊಂದು ಮೂವಿ ಹೇಗೆ ಅಂದರೆ ಹೀರೋ ಖಡಕ್ ಪೋಲಿಸ್ ಆಗಿರ್ತಾನೆ. ಕಥೆಯಲ್ಲಿ ಒಂದು ಕೊಲೆ ಕೂಡ ಆಗುತ್ತೆ. ನಮ್ಮ ಹೀರೋ ಆ ಒಂದೇ ಒಂದು ಕೊಲೆಯನ್ನು ಮಾಡಿದ್ದು ಯಾರು ಎಂದು ಕಂಡುಹಿಡಿಯಲು ಶಪಥ ಮಾಡಿ ಹೊರಡುತ್ತಾನೆ.Yes ಹೀರೋ ಗೆ ಇಲ್ಲಿ ಶಫಥ ಅನ್ನುವುದು very very important. ಇಲ್ಲದಿದ್ದರೆ ಅವ ಹೀರೋನೇ ಅಲ್ಲ ಅನ್ನೋ ಫೀಲ್ ಬರುತ್ತೆ. ಈ ರೀತಿ ಒಂದು ಕೊಲೆಯ ಹಂತಕನನ್ನು ಕಂಡುಹಿಡಿಯಲು ಹೋದ ನಮ್ಮ ಹೀರೋ.. ಮೈನ್ ಕೇಡಿ ಯನ್ನು ಹಿಡಿಯುವ ಮೊದಲು, ಅವನ ಕೇಡಿ ಗ್ಯಾಂಗ್ ನ ಹೆಚ್ಚಿನ ಎಲ್ಲರನ್ನೂ ಶೂಟ್ ಮಾಡಿಯೇ ಕೊಲ್ತಾನೆ .ಪಾಪ ಕೇಡಿಗಳ ಜೀವಕ್ಕೆ ಬೆಲೆಯೇ ಇಲ್ಲ. Infact ಕೇಡಿಗಳ ಸಾವು important ಅಲ್ಲ ಇಲ್ಲಿ. ಸ್ಟೋರಿ ಯ ಆರಂಭದಲ್ಲಿ ಒಂದು ಸಾವು ಆಗಿರುತ್ತೆ ಅಲ್ಲಾ, yesss ಅದು ಮಾತ್ರ important . ನಂತರ ಫಿಲಂ ನಲ್ಲಿ ಪೈಟ್ ಆಗುವಾಗ ಕೇಡಿಗಳನ್ನು ಹಾತೆ ಹೊಸಕಿ ಹಾಕಿದಂತೆ ಎಷ್ಟು ಜನರನ್ನು ಬೇಕಾದರೂ ಸಾಯಿಸುತ್ತಲೇ ಇರಬಹುದು. ವಿಪರ್ಯಾಸಯ ಏನೆಂದರೆ ಕೆಲವೊಮ್ಮೆ ಮೈನ್ ಕೇಡಿಯನ್ನೇ ನಮ್ಮ ಹೀರೋ ಕೊಲ್ಲುವುದಿಲ್ಲ. ಏಕೆಂದರೆ ಅವ ಕಾನೂನು ಅನ್ನು ಕೈಗೆತ್ತಿಕೊಳ್ಳುವಂತಿಲ್ಲ 🙄🙄
ಇನ್ನೊಂದು ಗಮ್ಮತ್ ಗೊತ್ತಾ, ನಮ್ಮ ಹೀರೋ ನ ಹತ್ರ ಒಂದು ಪಿಸ್ತೂಲ್ ಇರುತ್ತೆ. ಹೆಚ್ಚಾಗಿ ಎಲ್ಲಾ ಪಿಸ್ತೂಲ್ ಅಲ್ಲಿ ಐದರಿಂದ ಆರು ಬುಲೆಟ್ ಇದ್ರೆ, ನಮ್ಮ ಹೀರೋ ನ ಪಿಸ್ತೂಲ್ ನಲ್ಲಿ ಎಲ್ಲಾ ಕೇಡಿಗಳು ಸತ್ತು ಬೀಳೋವರೆಗೂ ಫೈರ್ ಮಾಡ್ತಾನೆ ಇರಬಹುದು. ಅದೊಂತರಹ ಅಕ್ಷಯ ಪಿಸ್ತೂಲ್ ಇದ್ದ ಹಾಗೆ 🙄🙄
ಇನ್ನು ಹಳ್ಳಿ ಪೈಟ್ ಗಳು ಹೆಚ್ಚಾಗಿ ನಡೆಯೋದು ಜಾತ್ರೆಯಲ್ಲಿಯೇ. ಅಲ್ಲಿ ಫೈಟಿಂಗ್ ಗೆ ಬೇಕಾಗುವ ಮೈನ್ ಸಾಮಾಗ್ರಿಗಳು ಯಾವುದು ಎಂದರೆ...ಆಚೆ ಈಚೆ ಹಿಡಿದು ಒಬ್ಬರನ್ನೊಬ್ಬರು ತಳ್ಳಲ್ಲಿಕ್ಕೆ ಅಂತ ತರಕಾರಿ ಮಾರುವ ಒಂದು ತಳ್ಳುಗಾಡಿ, ಮಂಡೆಗೆ ಹೊಡೆಯಲು ಒಂದು ಹತ್ತು ಟ್ಯೂಬ್ ಲೈಟ್, ಕತ್ತಿ ಬೀಸಿದಾಗ ಗುರಿ ಮಿಸ್ ಆಗಿ ಕಟ್ ಆಗಲು ಬೇಕೆಂದೇ ಇಟ್ಟಿರೋ ಇಪ್ಪತ್ತು ಬಚ್ಚಂಗಾಯಿ(ಕಲ್ಲಂಗಡಿ). ಕೇಡಿ ಅಥವಾ ಹೀರೋ ಬಿದ್ದ ಜಾಗದಲ್ಲೆಲ್ಲಾ ಮೊದಲೇ ಒಪನ್ ಮಾಡಿ ಇಟ್ಟಿರೋ ಮಂಡಕ್ಕಿ ಯ(ಕುರ್ಲು) ಗೋಣಿಗಳು.ಅವರು ಬಿದ್ದಾಗಲೆಲ್ಲ ಅದು ಹಾಗೇ ಗಾಳಿಯಲ್ಲಿ ಹಾರುತ್ತಾ ಇರುತ್ತೆ & ಇರ್ಬೇಕು ಕೂಡ, ಆಗಾಲೇ ಫೈಟಿಗೆ ಒಂದು ಕಳೆ ಬರೋದು.
ಮತ್ತೆ ಹೀರೋ ಎಷ್ಟೇ ಒಳ್ಳೆಯವ ಇರಲಿ, ಆತ ಕೇಡಿಗಳ ಕೈಯಿಂದ ಹೊಡೆತ ತಿನ್ನುವಾಗ ಊರಿನ ಒಬ್ಬರೂ ಅವನ ಹೆಲ್ಪ್ ಗೆ compulsory ಆಗಿ ಬರ್ಲಿಕ್ಕಿಲ. ಅವರು ಸೇರಿರೋದೇ ಹೀರೋ ಹೊಡೆತ ತಿನ್ನುವುದನ್ನು ನೋಡಲು.
ಮತ್ತೆ ಹೀರೋ ಇಲ್ಲಿ rash ಆದಾಗ ಒಂದು ಸಾರಿ No ಎಂದು ಹೇಳುವುದಿಲ್ಲ, ಮೂರು ಸಾರಿ No..... No..... No.... ಎಂದು ಕಿರುಚಿ ಕಣ್ಣು ಕೆಂಪು ಮಾಡಿ ಹೇಳಿದ್ರೆ ಮಾತ್ರ ಅದಕ್ಕೆ ಒಂದು ಖದರು.ಅದೇ ರೀತಿ ಹೊಡೆಯುವಾಗ ಕೂಡ ಯಾ.... ಯಾ... ಯಾ.. ಎಂದು ಮೂರು ಸಲ ಹೇಳಿಯೇ ಕೈಬೀಸಿ ಹೋಡಿತಾನೆ ನಮ್ಮ ಹೀರೋ. ಕೆಲವೊಮ್ಮೆ ಇಲ್ಲಿ physics ಅನ್ನು ಕೊಲ್ತಾರೆ. ನಮ್ಮ ಹೀರೋ ಒಬ್ಬನಿಗೆ ಹೊಡೆದಾಗ ಅವ ತುಂಬಾ ಹೊತ್ತು ಗಾಳಿಯಲ್ಲಿಯೇ ಇರ್ತಾನೆ, ಅವ ಕೆಳಗೆ ಬೀಳುವುದಿಲ್ಲ. ಇದರ ಮಧ್ಯೆ ನಮ್ಮ ಹೀರೋ ಇನ್ನೆರಡು ಕೇಡಿಗಳಿಗೆ ಬಡಿದು ಮಕಾಡೆ ಮಲಗಿಸಿಬಿಡ್ತಾನೆ. ಆ ನಂತರವೇ ಮೇಲೆ ತೇಲುತ್ತಿರುವ ಕೇಡಿ ಕೆಳಗೆ ಬೀಳೋದು.
ಏನೇ ಹೇಳಿ old ಫಿಲಂ ಫೈಟಿಂಗ್ ಹಾಗೂ ಆ ಕೇಡಿಗಳನ್ನು ನೋಡೋಕೆ, ಎರಡು ಕಣ್ಣು ಸಾಲಲ್ಲ.ಈಗ ಅದನ್ನೆಲ್ಲ ನೋಡುವಾಗ ತಮಾಷೆಯಾಗಿ ಕಂಡರೂ,ಅವುಗಳೆಲ್ಲವೂ ಎಂದು ಮರೆಯಲಾಗದ ಸವಿ ಸವಿನೆನಪುಗಳಾಗಿಯೇ ಉಳಿದುಕೊಂಡಿದೆ.ಆಗಿನ ಕಾಲದ ಖಳನಟರು ಕೂಡ ನಾಯಕರಷ್ಟೇ ನಮ್ಮ ನೆನಪಿನಲ್ಲಿ ಉಳಿದು ಬಿಟ್ಟಿದ್ದಾರೆ.ಆ ಭಾಗ್ಯ ಈಗಿನ ಕಾಲದ ಸಿಕ್ಸ್ ಪ್ಯಾಕ್ ಖಳನಟರಿಗೆ ಇಲ್ಲವೇ ಇಲ್ಲ ಬಿಡಿ. ಹಾಗಾದರೆ ಒಮ್ಮೆ ಯೋಚಿಸಿ ಅಂದಿನ ಕಾಲದ ಖಳನಟರ ಅಭಿನಯದ Impact ಎಂತಹದ್ದು ಎಂದು.
ಅಂದ ಹಾಗೆ ಕೊನೆಯಲ್ಲ ಇನ್ನೊಂದು ವಿಷಯ ಎಂತ ಗೊತ್ತುಂಟಾ,ಈಗಲೂ ಮನೆಯ ಹತ್ರ ಯಾವುದೇ omni ಕಾರು ಬಂದರೂ ಕೂಡ ಅವರು ನನ್ನನ್ನೇ ಕಿಡ್ನಾಪ್ ಮಾಡ್ಲಿಕ್ಕೆ ಬಂದಿದ್ದಾರೆ ಎಂಬ ಫೀಲೇ ನನಗರಿವಿಲ್ಲದೇ ಬಂದು ಬಿಡುತ್ತದೆ..
🤔🙄🏃🏻🏃🏻
.....................................................................................
#ಏನೋ_ಒಂದು
ab pacchu
Moodubidire

Comments
Post a Comment