ಇಡ್ಲಿ ಮತ್ತು ನೀರುಚಟ್ನಿ

ಇಡ್ಲಿ ಮೇಲೆ ನೀರು ಚಟ್ನಿ ಹಾಕಿಕೊಂಡು ಹಾಗೇ ಮೆಲ್ಲುತ್ತಿದ್ದಾಗ ಹೋಟೆಲ್ ಭಟ್ರು ಕೇಳಿಯೇ ಬಿಟ್ಟರು  "ಪಚ್ಚು ಕಾಫಿ ಹೊಡೆಯುವುದಾ...". ಹೊಡೆಯಿರಿ ಭಟ್ರೆ  ಅಂದೆ.


ಕಾಫಿ ಹೊಡೆಯುವುದು ಎಂದರೆ ನಮ್ಮ ಹೋಟೆಲ್ ಭಟ್ರರ ಬಳಿ, ಕಾಫಿ ಗಾಗಿ ಎರಡು ಪಾತ್ರೆಗಳಿವೆ,ಅದರಲ್ಲಿ ಕಾಫಿ  ಹಾಕಿಕೊಂಡು ಅವರು  ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಒಂದು vertical motion ಅಲ್ಲಿ ಮೇಲಿಂದ ಕೆಳಗೆ ಕಾಫಿ ಹಾಗೇ  ಹೊಡೆಯುತ್ತಿದ್ದರೆ ಆ ಕಾಫಿ ಪಾತ್ರೆಯ ತುಂಬಾ ಅದೆಷ್ಟು ನೊರೆ.


ನಂತರ ಅದನ್ನು ಒಂದು ಸ್ಟಿಲ್ ಲೋಟಕ್ಕೆ ಬಗ್ಗಿಸಿಕೊಂಡು ಹಾಗೇ ತಂದು ಅದನ್ನು ಟೇಬಲ್ ಮೇಲೆ ಇಟ್ಟರೆ,ನೊರೆ ಸಹಿತ ಬಿಸಿ ಕಾಫಿಯನ್ನು ಹಾಗೇ ಸುರ್ರ್ ಪುರ್ರ್ ಅಂತ  ಹೀರುವುದರಲ್ಲಿ ಅದೇನೋ ಸುಖವಿದೆಯೋ ಭಗವಂತ.


ಇಡ್ಲಿಗೆ ನಿಮಗೆ ಸಾಂಬಾರ್ ಜೊತೆಗೆ ಅತಿಯಾಗಿ ಇಷ್ಟವಾಗಬಹುದು. ನನಗಂತು ಸಾಸಿವೆ ಹಾಗೂ ಬೇವುರೆ ಒಗ್ಗರಣೆ ಎಂಬ ಅಲಂಕಾರದ ನೀರು ನೀರು ಆದ ನಮ್ಮ ತೆಂಗಿನಕಾಯಿ ಚಟ್ನಿಯೇ, ಇಡ್ಲಿಯನ್ನು ಒದ್ದೆ ಮಾಡಿಕೊಂಡು ಹಾಗೇ ಇಡ್ಲಿ ಸುತ್ತ ಮುತ್ತ ಓಡಾಡಿಕೊಂಡಿದ್ದರೆ,ಅದೇ ಚಂದ. ನೀರು ಚಟ್ನಿ ಗೂ ಮೊದಲು ಬಿಸಿ ಬಿಸಿಯಾದ ತೊವ್ವೆ ಯನ್ನು ಇಡ್ಲಿ ಮೇಲೆ ಸುರಿದುಕೊಂಡು  ಮೂರು ನಾಲ್ಕು ಇಡ್ಲಿ ಯನ್ನು ಕೂಡ ಹಾಗೇ ತಿಂದು ಸಪಾಯಿ ಮಾಡಲಾಗಿತ್ತು ಅನ್ನತಕ್ಕಂತಹ ಮಾತನ್ನು ಕೂಡ ನಾನು ಮನಬಿಚ್ಚಿ ಹೇಳಲು ಇಚ್ಛಿಸುತ್ತೇನೆ  ಫ್ರೆಂಡ್ಸ್ 😋😋


ಚಟ್ನಿಯ ಓಟಕೆ...ಇಡ್ಲಿಯ ಗೋಡೆಯು.. 😋😋


ಸಂಜೆಯ ರಾಗಕೆ ಭಟ್ಟರ ಇಡ್ಲಿ, ನೀರು ಚಟ್ನಿ, ತೊವ್ವೆ, ಬಿಸಿ ಬಿಸಿ ನೊರೆ ಕಾಫಿಯೊಂದಿಗೆ ಹಾಗೇ ಹಿತವಾಗಿ ಕಳೆದುಹೋಗಿದೆ.. 😊


ಪಚ್ಚುಪಟಗಳು

ab

 

Comments

Popular posts from this blog

ಗಗನದ ಸೂರ್ಯ

ಅನಾರ್ಕಲಿಯ ಸೇಫ್ಟಿಪಿನ್ | ಜಯಂತ್ ಕಾಯ್ಕಿಣಿ

ಬಿಡುಗಡೆ!