ಹೃದಯ ಶ್ರೀಮಂತಿಕೆ
ದೇವಸ್ಥಾನದ ಮೆಟ್ಟಿಲ ಮೇಲೆ ಕುಳಿತುಕೊಂಡು ವೃದ್ಧ ಬಿಕ್ಷುಕನೊಬ್ಬ ತನ್ನಷ್ಟಕ್ಕೆ ಭಿಕ್ಷೆ ಬೇಡುತ್ತಿದ್ದ.ಶ್ರೀಮಂತನೊಬ್ಬ ಮೊಬೈಲ್ ನಲ್ಲಿ ಮಾತಾಡುತ್ತಾ ಮೆಟ್ಟಿಲಲ್ಲಿ ನಡೆದುಕೊಂಡು ದೇವಸ್ಥಾನಕ್ಕೆ ಹೋಗುವಾಗ ಭಿಕ್ಷುಕನನ್ನು ಗಮನಿಸದೆ ತುಳಿದುಬಿಟ್ಟ ಮತ್ತು ಹಾಗೇ ತಡವರಿಸಿ ಅಲ್ಲೇ ಬಿದ್ದು ಬಿಟ್ಟ.ಶ್ರೀಮಂತ ಆ ಭಿಕ್ಷುಕನಿಗೆ ಬಾಯಿಗೆ ಬಂದಂತೆ ಬೈಯುತ್ತಲೇ ಮೇಲಿನ ದೇವಸ್ಥಾನಕ್ಕೆ ಹೋಗಿ ಬಿಟ್ಟ.ದೇವಸ್ಥಾನದಿಂದ ವಾಪಸ್ ಕೆಳಗೆ ಬರುವಾಗ ಪುನಃ ಮೊಬೈಲ್ ನಲ್ಲಿ ಬ್ಯುಸಿ ಆಗಿದ್ದ ಶ್ರೀಮಂತ,ಗಮನಿಸದೆ ಮತ್ತೊಮ್ಮೆ ಅದೇ ಭಿಕ್ಷುಕನನ್ನು ತುಳಿದು ಬಿಟ್ಟ.ಈ ಬಾರಿ ಯಾಕೋ ಭಿಕ್ಷುಕನೇ ಬೇಕೆಂದೇ ದಾರಿಗೆ ಅಡ್ಡಲಾಗಿ ಕೂತಂತೆ ಇತ್ತು! ಒಂದು ಕೈಯಲ್ಲಿ ಮೊಬೈಲ್ ಅನ್ನು ದೂರಕ್ಕೆ ಹಿಡಿದುಕೊಂಡೇ ಶ್ರೀಮಂತ ಅತಿಯಾದ ಸಿಟ್ಟಿನಲ್ಲಿ ಭಿಕ್ಷುಕನಿಗೆ ಬೈದು ಬಿಟ್ಟ," ಕಣ್ಣು ಕಾಣುವುದಿಲ್ಲವೇ,ಯಾಕಾದರೂ ನಮ್ಮಂತವರ ಕಾಲಡಿಗೆ ಬಿದ್ದು ಸಾಯ್ತಿರಾ,ದೇವಸ್ಥಾನ ಕ್ಕೆ ಬರುವವರಿಗೆ ಎಷ್ಟೊಂದು ಉಪದ್ರ ನೀವೆಲ್ಲಾ..". ಈ ಮೊದಲೇ ಬೈದು ಹೋಗಿದ್ದ ಆ ಶ್ರಿಮಂತನ ಧ್ವನಿಯನ್ನು ಭಿಕ್ಷುಕ ಸರಿಯಾಗಿ ಗುರುತಿಸಿದ ನಂತರ ಹೇಳಿದ " ಕ್ಷಮಿಸಿ ಸ್ವಾಮಿ..ಮೊದಲು ಇದನ್ನು ತಗೊಳ್ಳಿ..ಬಹುಶಃ ಉಂಗುರ ಅಂತ ಅನಿಸುತ್ತೆ..ನೀವು ಮೇಲೆ ದೇವಸ್ಥಾನಕ್ಕೆ ಹೋಗುವಾಗ ನನ್ನ ಬಳಿ ಇದು ಬಿತ್ತು,ಇದನ್ನು ನಿಮಗೆ ವಾಪಸು ತಲುಪಿಸಬೇಕೆಂದೇ ನಾನು ಬೇಕೆಂದು ಮೆಟ್ಟಿಲಲ್ಲಿ ಅಡ್ಡಲಾಗಿ ಕುಳಿತಿದ್ದೆ,ಕ್ಷಮಿಸಿ..ತಗೊಳ್ಳಿ ಇದನ್ನು .. ಹೌದು,ನೀವು ಹೇಳಿದ ಹಾಗೆ ನಾನು ಹುಟ್ಟು ಕುರುಡನೇ ಸ್ವಾಮಿ, ನನಗೆ ಕಣ್ಣುಗಳೆರಡು ಕಾಣುವುದಿಲ್ಲ..!! "
.....................................................................................
#ಇಷ್ಟೇ...
AB Pacchu
Moodubidire

Comments
Post a Comment