ಮಳೆಗಾಲದ ಶ್ರದ್ಧೆಯ ಕೆಲಸ



ಮಳೆಗಾಲದ ಅತೀ ಪ್ರೀಯ ಕೆಲಸವೊಂದನ್ನು ತುಂಬಾ  ತಲ್ಲೀನತೆಯಿಂದ,ಪ್ರೀತಿಯಿಂದಲೇ ಶುರು ಮಾಡಲಾಗಿದೆ...

ಹಲಸು ಕೊಯ್ಯುವುದು ಎಂದರೆ ಅದೊಂದು ರೀತಿಯ ದೀರ್ಘ ತಪಸ್ಸು, ಶ್ರದ್ಧೆಯಿಂದ ಮಾಡಿದ  ಧ್ಯಾನದಂತೆ. ಹಾಗಿದ್ದರೆ ಮಾತ್ರ ಹಲಸು ಕೊಯ್ಯುವುದು ನಿಮಗೆ ಒಲಿದು ಬಿಡಬಲ್ಲದು,ವರವಾಗಬಲ್ಲದು.

ನರಸಿಂಹ ದೇವರು ಹಿರಣ್ಯ ಕಶಿಪುವಿನ ಎದೆ ಸೀಳಿದಂತೆ ತುಳುವೆ ಹಲಸನ್ನು(ತುಂಬಾ ಮೃದು ಜಾತಿಯ ಹಲಸು) ಕೈಯಿಂದಲೇ ತುಂಬಾ ಸುಲಭವಾಗಿ ಬಗೆದು ಹಾಕಿ ಬಿಡಬಹುದು. ಆದರೆ ಬರ್ಕೆ(ಬಕ್ಕೆ) ಅಷ್ಟು ಸುಲಭ ಸಾಧ್ಯ ಅಲ್ಲ. ಅದು ವಿಪರೀತ ಕೌಶಲ್ಯ ಬೇಡುವ ಕೆಲಸ. ಎಲ್ಲಕ್ಕಿಂತ ಹೆಚ್ಚಾಗಿ ಅದು ಉದಾಸೀನದ ಕೆಲಸವೇ ಹೌದು.
ಕಷ್ಟ ಪಟ್ಟರೆ ಸುಖ ಸಿಗುವುದು ಎಂಬುದನ್ನು ತೋರಿಸಿ ಕೊಡಬಲ್ಲ ಹಣ್ಣು ಅಂದರೆ ಅದು ಹಲಸು. 

ಹೆಚ್ಚಾಗಿ ಹಲಸು ಯಾರಾದರೂ ತುಂಡರಿಸಿ, ಅದನ್ನು ಬಿಡಿಸಿ ಹಾಗೇ ಇಡಿ ಇಡಿ ಸೋಳೆಯನ್ನು ಎದುರು ತಂದಿಟ್ಟರೆ "ಆಹಾ.. ಹಲಸು ಅಂದರೆ ನನಗೆ ತುಂಬಾ ಇಷ್ಟ, Its My favourite.." ಎಂದು ಹೇಳಿಬಿಡುವುದು ತುಂಬಾ ಸುಲಭ. ಆದರೆ ಹಲಸು ತುಂಡರಿಸುವುದು, ಶ್ರದ್ಧೆಯಿಂದ ಬಿಡಿಸುವುದು ಅದು ನಿಮ್ಮ ನಿಮ್ಮ ಮನೆಯಲ್ಲಿ ತಾಯಿಗೋ, ಅಜ್ಜಿಗೋ, ಅಜ್ಜನಿಗೋ ಒಲಿದ  ವಿಧ್ಯೆ😊🙏🏻

ಸದ್ಯಕ್ಕೆ ತುಂಡರಿಸಿ ಆಗಿದೆ.ಮುಂದೆ ರುಚಿಯಾದ ಮುಳುಕ, ಇಲ್ಲವೇ ಕಡುಬು, ದೋಸೆ, ಹಲ್ವ.. ಏನೋ ಒಂದು ಆಗಿ  ನನ್ನ ಜಿಹ್ವಾ ಚಾಪಲ್ಯವನ್ನು ಅಂತು ತಣಿಸುವುದಂತು  ಗ್ಯಾರಂಟಿ 😋😋😋


ಪಚ್ಚುಪಟಗಳು
ab

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!