ನಾನು ನನ್ನ ಗುರುಗಳು..

 

ಕ್ಲಾಸಿನಲ್ಲಿ ನನ್ನ ಕೆಲವು ಟೀಚರ್/ಲೆಕ್ಚರರ್  ಗಳು ಹೇಳಿದ ಈ ಮಾತುಗಳು ನನಗೆ ಈಗಲೂ ಅವರ ಪಾಠಕ್ಕಿಂತಲೂ ಹೆಚ್ಚಿನ  ಸ್ಮರಣೆಯಲ್ಲಿದೆ...


1.ಸಿಕ್ಕಾಪಟ್ಟೆ rash ಆದಾಗ... 


 " ನೀವು ಕ್ಲಾಸಿನಲ್ಲಿ ಎಷ್ಟೇ ದೊಡ್ಡ ಮೀನು ಆಗಿರಬಹುದು ... 

ಆದರೆ ಈ ಕ್ಲಾಸ್ ನ ತಿಮಿಂಗಿಲ ಎಂದೆಂದಿಗೂ ನಾನೇ...😡😡 " 

(ನಾನೇ... ಎಂದು ಓದುವಾಗ  ಸ್ವಲ್ಪ ಎಕೋ ಎಫೆಕ್ಟ್ಸ್ ಇದ್ರೆನೇ  ಚಂದ..ನಾನೇ... ನಾನೇ...ನಾನೇ...ಆ ತರಹ ಮೂರು ಸರ್ತಿ ಫೀಲ್ ಮಾಡಿ ಓದ್ಬೇಕು,ಅರುಮುಗಂ ಎಫೆಕ್ಟ್ಸ್ ಬೇಕಾದರೂ ಹಾಕಿಕೊಳ್ಳಬಹುದು) 


 2. ಕ್ಲಾಸ್ ನಲ್ಲಿ ಚೆನ್ನಾಗಿ perform ಮಾಡದೇ ಇದ್ದರೂ ತುಂಬಾನೇ cool ಆಗಿ ಭವಿಷ್ಯದ ಯಾವುದೇ ಟೆನ್ಶನ್ ನಲ್ಲಿ ಇರದೆ ಆರಾಮದಲ್ಲಿ ಇರುವುದನ್ನು ಕಂಡಾಗ.. ಹೇಳುವ ವ್ಯಂಗ್ಯ ಮಿಶ್ರಿತ ಬುದ್ಧಿ ಮಾತು...


" ನಿಮ್ಮಲ್ಲಿ ಕೆಲವರು ಯಾವ ಲೋಕದಲ್ಲಿ ಇದ್ದೀರಿ ಎಂದರೆ ಕಾಲೇಜು ಮುಗಿದ ಕೂಡಲೇ ನಿಮಗೆಲ್ಲಾ ನೇರವಾಗಿ ಮೇಲಿನಿಂದ ಡಿಂಗ, ಶಕ್ತಿಮಾನ್,ಸೂಪರ್ ಮ್ಯಾನ್ ನವರೇ ಬಂದು  ಕೆಲಸ ತೆಗೆಸಿ ಕೊಡ್ತಾರೆ ಅನ್ನೋ confidence ನಲ್ಲಿ ಇದ್ದೀರಾ..😏😏 "


3.ತಪ್ಪು ಮಾಡಿದಾಗ ತಮ್ಮದೇ ಸ್ವಂತ modified ಗಾದೆಯ ಮೂಲಕ ನೀಡುವ ಪ್ರವಚನ ಮತ್ತು ತಿಳುವಳಿಕೆ .. 


" ಬಚ್ಚಂಗಾಯಿ(ಕಲ್ಲಂಗಡಿ) ಮೇಲೆ ಕತ್ತಿ ಬಿದ್ದರೂ...

ಕತ್ತಿ ಮೇಲೆ ಬಚ್ಚಂಗಾಯಿ ಬಿದ್ದರೂ......... ಗೊತ್ತಲ್ಲಾ,ಕಟ್ ಆಗುವುದು ಮಾತ್ರ ಬಚ್ಚಂಗಾಯಿಯೇ  "


4. ಕುಹಕ+ಹಾಸ್ಯ+ ನೀವು ಮಕ್ಕರ್(ತಮಾಷೆ)ಮಾಡಿದ್ರೆ ನಾನು ಕೂಡ ಎಂದಿಗೂ ಬದಲಾಗಲಾರೆ ನಿಮ್ಮನ್ನು ಬಿಡಲಾರೆ ಎನ್ನುವ ಮುದ ನೀಡುವ ಬಿಂಕವಿಲ್ಲದ attitude...


" ನೀವು ಮುಂದೆ ಒಂದು ದಿನ  ದೊಡ್ಡ ಜನ ಆಗ್ಬಹುದು... ದೊಡ್ಡ ಕಾರು ತಗೊಳ್ಬಹುದು... ಆದ್ರೆ ಆಗ ಸ ನನ್ನತ್ರ ಸ್ಕೂಟರೇ ಇರ್ತದೆ..ನೀವೇನಾದರೂ ಆಗ ಕೂಡ ಕಾರಿನಲ್ಲಿ ಹೋಗ್ತಾ ಇರುವಾಗ ನನ್ನನ್ನು ನೋಡಿ ಮಕ್ಕರ್ ಮಾಡಿದ್ರೆ... ನಾನು ನಿಮ್ಮನ್ನು ಚೇಸ್ ಮಾಡಿ ಅಲ್ಲೇ ಇರುವ ದೊಡ್ಡ ಕಲ್ಲು ಎತ್ತಿ ಹಾಕಿ ನಿಮ್ಮನ್ನು ಕಾರ್ ಗ್ಲಾಸ್ ಪುಡಿ ಪುಡಿ  ಮಾಡಿ ಹಾಕ್ತೇನೆ.. ಹಹ್ಹಾ.. ಹಹ್ಹಾ...😅😂  "


ಎಲ್ಲಿದ್ದರೂ.. ಎಲ್ಲರೂ ಸುಖವಾಗಿ ಇರಿ ಸಾರ್... 😍❤️🙏🏻


#ಏನೋ_ಒಂದು.. 

ab pacchu

moodubidire

Comments

Popular posts from this blog

ಗಗನದ ಸೂರ್ಯ

ಅನಾರ್ಕಲಿಯ ಸೇಫ್ಟಿಪಿನ್ | ಜಯಂತ್ ಕಾಯ್ಕಿಣಿ

ಬಿಡುಗಡೆ!