ಹಂಗೆ ಹಿಂಗೆ ಬಾಳು

 

ಈ ಬದುಕಿನಲ್ಲಿ ಕೆಲವೊಂದು ವಿಷಯಗಳು ಹಂಗೆ ಬರುತ್ತವೆ & ಹಿಂಗೆ ಹೋಗುತ್ತೆ ಅದೇ ರೀತಿ ಹಿಂಗೆ ಬರುತ್ತೆ & ಹಂಗೆ ಹೋಗುತ್ತೆ. ಆದರೆ ಈ ಹಿಂಗೆ ಹೋಗಿ ಹಂಗೆ ಬರೋ ವಿಷಯ ಅಥವಾ ಹಂಗೆ ಹೋಗಿ ಹಿಂಗೆ ಬರೋ ವಿಷಯಗಳೆರಡರ ನಡುವಿನಲ್ಲಿ ಮನುಷ್ಯ ಯಾವತ್ತೂ ಯಾವ ವಿಷಯಿಂದ ಅವನಿಗೆ ಯಾವ ವಿಷಯದ ಮೇಲೆ ಹಿಡಿತ  ಸಾಧಿಸಬಹುದೋ ಅವನು ಆ ವಿಷಯದ ಹಿಂದೆಯೇ ಯಾವಾಗಲೂ ಹಿಡಿತ ಸಾಧಿಸಲು ಹೋಗುತ್ತಾನೆ, ಆವಾಗ ಅವನಿಗೆ ಈ ವಿಷಯದ ಮೇಲೆ ಹಿಡಿತ ಅನ್ನುವುದು  ಇರೋದೇ ಇಲ್ಲ,ಸಿಗೋದೇ ಇಲ್ಲ, ಬರೋದೇ ಇಲ್ಲ.ಇದೇ.. ಇದೇ ಮನುಷ್ಯ ವಿಷಯಗಳ ಕುರಿತಾಗಿ ಮಾಡುವ ತಪ್ಪು.ಆ ವಿಷಯಕ್ಕಾಗಿ ಈ ವಿಷಯವನ್ನು ಮೂಲೆಗುಂಪು ಮಾಡುವುದು ಈ ವಿಷಯಕ್ಕೆ ಮಾಡುವ ಅನ್ಯಾಯ,ಅಪಮಾನ,ಅವಮಾನ & insulting its ಮಾನ,ಪ್ರಾಣ.ನಾವು ಯಾವತ್ತೂ ಲೈಫ್ ಅಲ್ಲಿ ಹಂಗೇ ಇರ್ತೀನಿ ಅಂತ ಇರ್ಬಾರ್ದು, ಹಿಂಗೂ ಇರ್ತಿನಿ ಅಂತ ಇರ್ಬೇಕು,ಇದ್ದು ಏನಾದರೂ ಒಂದು ಮಾಡಿ ತೋರಿಸ್ಬೇಕು. ಯಾವುದು ಬೇಕು ಯಾವುದು ಬೇಡ ಅನ್ನೋದು ಗೊತ್ತಿರ್ಬೇಕು. ಹಂಗೊ ಹಿಂಗೋ ಏನೋ ಒಂದು ಆ ವಿಷಯವನ್ನೂ ಮಾಡ್ತಾನೆ ಇರ್ಬೇಕು ಅದೇ ರೀತಿ ಈ ವಿಷಯವನ್ನೂ ಹಂಗೆ ಹಿಂಗೆ  ಮಾಡ್ತಾನೇ ಇರ್ಬೇಕು. ನಾವು ಹಿಂಗೆ ಇದ್ದೇ ಎಷ್ಟೊಂದು ವಿಷಯಗಳನ್ನು ಮಾಡ್ಬಹುದು ಅದೇ ರೀತಿ ನಾವು ಹಂಗೆನೇ  ಇದ್ದು ಕೂಡ ಏನೇನೋ ವಿಷಯಗಳನ್ನು ಕಲೀಬಹುದು, ಹಿಂಗೆನೇ ಎಷ್ಟೆಷ್ಟೋ  ವಿಷಯಗಳನ್ನು ಮಾಡ್ಬಹುದು. ಹಿಂಗು ಇದ್ದರೆ ಮಂಗನೂ ಅಡುಗೆ ಮಾಡ್ಬಹುದು.. ಆದರೆ ಹಂಗೆಯಲ್ಲಿ ಮನುಷ್ಯನೂ ಅಡುಗೆ ಮಾಡಕ್ಕಾಗಲ್ಲ, ಮಂಗನೂ ಚಿತ್ರಾನ್ನ ಪುಳಿಯೋಗರೆ ಎಲ್ಲಾ  ಮಾಡಕ್ಕೆ ಬರಲ್ಲ.ನೋಡಿ ಇದು.. ಇದು ವಿಷಯ, ಮುಖ್ಯವಾಗಿ ಈ ವಿಷಯಗಳೆಲ್ಲಾ  ಮನುಷ್ಯನಿಗೆ ಗೊತ್ತಿರ್ಬೇಕು ಬದುಕಿನಲ್ಲಿ ಅಂದರೆ ಯಾವ ವಿಷಯದಲ್ಲಿ ಏನೇನು ಮಾಡ್ಕೋಬಹುದು ಅನ್ನುವುದು ಗೊತ್ತಿರ್ಬೇಕು. ಇಷ್ಟೇ ಜೀವನ.. ಇದುವೇ ಬಾಳಿನ ಬದನೆಕಾಯಿ..ಹಾಳು ಮಾಡ್ಕೊಬಾರ್ದು ಅಷ್ಟೇ 😌🤷‍♂


ಅರ್ಥ ಆದರೆ ನಂಗೂ ವಸಿ ಹೇಳಿ...🏃🏻🏃🏻


🙄🤔🤔


ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ