ನಿನ್ನಯ ನಲುಮೆಯ ಲೋಕಕೆ ನನ್ನನೂ ಪರಿಚಯಿಸು



ಅಪ್ಪನ ಹೆಸರು ಮೋನಪ್ಪ. 


ಜಸ್ಟ್ ಮೋನಪ್ಪ ಅಲ್ಲ... 


ಮಿಲಿಟ್ರಿ ಮೋನಪ್ಪ . 


ನಿವೃತ್ತ ಯೋಧ ಅವರು. 


ಗನ್ ಕೂಡ ಇದೆ. 


ಗನ್ ಗೆ ಹಾಕ್ಲಿಕ್ಕೆ  ಬುಲೆಟ್ ಕೂಡ ಸಾಕಷ್ಟು ಇದೆ. . 


ನೀಲಮೇಘ.. ಇದೆಲ್ಲ ನಾನು ಯಾಕೆ ಹೇಳ್ತಾ ಇದ್ದಿನಿ ಅದರಲ್ಲೂ ನನ್ನ ಅಪ್ಪನ ಬಗ್ಗೆ ಹೇಳ್ತಾ ಇದ್ದೇನೆ ಅಂತ ಅಂದ್ಕೋತ ಇದ್ದೀಯಾ.. 


ಇದೆ.. ಮ್ಯಾಟರ್ ಇದೆ. 


ಆದರೆ ಈಗಲೇ ಹೇಳಲಾರೆ


 ಎಲ್ಲವನ್ನೂ ಕೊನೆಯಲ್ಲಿ ಹೇಳುವೆನು. 


ಸದ್ಯಕ್ಕೆ ನಿನ್ನ ಬಗ್ಗೆಯೇ ಮಾತಾಡಲು ನನಗೆ ತುಂಬಾ ವಿಷಯಗಳಿವೆ ನೀಲಮೇಘ. 


ಇಲ್ಲದಿದ್ದರೆ ಈ ಭಾಮಳಿಗೆ ಸಮಾಧಾನ ಎಲ್ಲಿ ಹೇಳು. 


ನಿನ್ನ ಬಳಿ ಒಂದು ಕೇಳ ಬೇಕಿತ್ತು.


ಅಲಾ ಮೊನ್ನೆ ನೀವೆಲ್ಲಾ... ಅಂದ್ರೆ ನೀನು,ನಿನ್ನ ಅಪ್ಪ ನೀಲಣ್ಣ.. ದೊಡ್ಡಪ್ಪ, ದೊಡ್ಡಮ್ಮ, ಮುರುಳಿ,ಇಂಪನ ಎಲ್ಲ ಎಲ್ಲಿಗೆ  ಹೋಗಿದ್ದು..? 


ಹೋಗುವ ರೇಂಜ್ ನೋಡಿದ್ರೆ.. ಹುಡುಗಿ ನೋಡ್ಲಿಕ್ಕೆ ಹೋಗುವ ಹಾಗೆಯೇ ಇತ್ತು.


ಆಹಾ.. ಏನು ಗತ್ತು..ಏನು ಗಾಂಭೀರ್ಯ.


ಭಯಂಕರ ಸ್ಟೈಲ್ ಆಗಿ ಕಾರಿನಲ್ಲಿ ಹೋಗ್ತಾ ಇದ್ದದ್ದನ್ನು ನಾನು ಪೇಟೆಯಲ್ಲಿ ನೋಡಿದೆ.


ಯಾರಿಗೆಯಾ ಹುಡುಗಿ ನೀಲಮೇಘ ..


ನಿನಗಾ...? 


ನಿನಗೆ ಇರ್ಲಿಕ್ಕಿಲ್ಲ ಅಂತ ನನಗೆ ಅನ್ನಿಸ್ತದೆ. 


ಒಂದು ವೇಳೆ ನಿನಗಾಗಿಯೇ ಹುಡುಗಿ ನೋಡ್ಲಿಕ್ಕೆ ಹೋಗಿದಿದ್ದರೆ..ಆ ದಿನ ನಾನು ದೇವರಲ್ಲಿ ಶ್ರದ್ಧೆಯಿಂದ ಮಾಡಿದ ಪ್ರಾರ್ಥನೆ ಏನು ಗೊತ್ತಾ... ದೇವರೇ ಆ ಹುಡುಗಿಯೇ ಈ  ನೀಲಮೇಘ ನನ್ನು ರಿಜೆಕ್ಟ್ ಮಾಡಿ ಬಿಡ್ಲಿ ಅಂತ. 


ನನಗೆ ನಂಬಿಕೆ ಇದೆ ದೇವರು ಇದಕ್ಕೆಲ್ಲ ಅಸ್ತು ಅಂತಾನೆ ಅಂತ. 


ಇದು ಒಂದೇ ಅಲ್ಲ.. ನೀನು ನನ್ನನ್ನು ಕಟ್ಟಿಕೊಳ್ಳುವವರೆಗೂ ನಿನ್ನನ್ನು ಯಾವುದೇ ಹುಡುಗಿ ಒಪ್ಪಿಕೊಳ್ಳದಿರಲಿ ಎಂದೇ ಭಗವಂತನಲ್ಲಿ ನನ್ನ ಅನುದಿನದ  ಪ್ರಾರ್ಥನೆ ನೀಲಮೇಘ... 


ನನಗಂತು ಗೊತ್ತಿಲ್ಲ... ನನ್ನನ್ನು ಬಿಟ್ಟು ನಿನ್ನನ್ನು ಯಾವುದಾದರೂ ಹುಡುಗಿ ಒಪ್ಪುತ್ತಾಳೋ ಇಲ್ಲವೋ ಎಂದು.


ಕೆಲವೊಮ್ಮೆ ನಾನೇ ಯೋಚಿಸುವುದು ಉಂಟು ನಿನ್ನಂತಹ ಸ್ವಲ್ಪವೂ ಜವಾಬ್ದಾರಿ ಇಲ್ಲದ ಅಶಿಸ್ತಿನ ಹುಡುಗನನ್ನು ಅದು ಹೇಗೆ ತಾನೇ ಜೀವನದಲ್ಲಿ ಅಪಾರವಾದ ಕನಸು ಕಟ್ಟಿ ಕೊಂಡ ಹುಡುಗಿ ಒಪ್ಪಬಲ್ಲಳು ಎಂದು.


No way, ಚಾನ್ಸೇ ಇಲ್ಲ.. ಒಂದು ವೇಳೆ ಹುಡುಗಿ ಒಪ್ಪಿದರೂ ಹುಡುಗಿ ಮನೆಯವರಂತು ಒಪ್ಪುವುದು ನನಗಂತು ಡೌಟು. 


In case  ಯಾರಾದರೂ ಹುಡುಗಿ  ನಿನ್ನನ್ನು ಒಪ್ಪಿಕೊಂಡು ಬಿಟ್ಟರೆ, ಹಾಗೇ ನಿನ್ನನ್ನು ಬಿಡದಂತೆ ಅಪ್ಪಿಕೊಂಡು ಬಿಟ್ಟರೆ.. ನೀಲಮೇಘ ಅವಳಿಗೆ ಇದೆ ನೋಡು ಮುಂದೆ ಮಾರಿ ಹಬ್ಬ.


ನಿನಗೆ ಗೊತ್ತಿಲ್ಲ..


ಮೊದಲೆ ಈ ಭಾಮ  ಕರಾಟೆ ಚ್ಯಾಂಪಿಯನ್.


ಎಲ್ಲಾ ಕಲರ್ ಬೆಲ್ಟ್ ಕೂಡ ನಾನು ಗೆದ್ದಾಗಿದೆ.


ನಿನಗೂ ಮಣ್ಣು ಮುಕ್ಕಿಸಬಲ್ಲೆ.. 


ನಿನ್ನ ಹಿಂದೆ ಯಾರಾದರೂ ಬಿದ್ದವರಿಗೂ ಸರಿಯಾಗಿಯೇ  ಮಣ್ಣು ಮುಕ್ಕಿಸಬಲ್ಲೆ.. 


ಅಲಾ ನೀಲಮೇಘ.. ನಿನ್ನನ್ನು ಯಾರು ಇಷ್ಟ ಪಡ್ತಾರೋ.. ಬಿಡ್ತಾರೋ ಎನ್ನುವುದಕ್ಕಿಂತಲೂ ನನಗೆ ತುಂಬಾ Interesting ಅಂತ  ಅನ್ನಿಸೋ ವಿಷಯ ಏನು  ಗೊತ್ತಾ.. 


ಅದೇ.. ನಿನಗೆ ಯಾವ ರೀತಿಯ ಹುಡುಗಿ ಇಷ್ಟ ಆಗಬಹುದು ಎಂದು..? 


ನನಗೆ ಆಲೋಚಿಸಲೂ ಕೂಡ ಸಾಧ್ಯವಿಲ್ಲ.. 


ನಿನ್ನ ತಲೆಯಲ್ಲಿ ಯಾವ ರೀತಿಯ ಕಲ್ಪನೆ ಇರಬಹುದು.. ಯಾವ ಟೈಪ್ ಹುಡುಗಿ ನಿನಗೆ ಇಷ್ಟ ಆಗಬಹುದು ಎಂದು.... 


ಹೇಳು..


ನೀನು ಯಾಕೆ ಹೀಗೆ ಇಷ್ಟೊಂದು ಹುಚ್ಚ... 


ನಿನ್ನನ್ನು ನೋಡಿದಾಗ.. ಸ್ವಚ್ಛಂದವಾಗಿ ನಿನಗೆ ಅನಿಸಿದಂತೆ ಬದುಕುವುದನ್ನು ನೋಡಿದಾಗ.. ಈ ಪ್ರೀತಿ ಪ್ರೇಮಗಳ ಕಡೆಗೆ ನಿನಗೆ  ನಿಜವಾಗಿಯೂ ಆಕರ್ಷಣೆಯೇ ಇಲ್ಲವೆನೋ ಅಂತ  ಅನ್ನಿಸಿಬಿಡುವುದು ನನಗೆ.. 


ಆದರೆ ನೀಲಮೇಘ...


ನನಗೆ ಹುಚ್ಚು ಹಿಡಿಸಿ ಬಿಟ್ಟೆಯಲ್ಲಾ ನೀನು..!


ನಿನ್ನಷ್ಟಕ್ಕೆ ಮರ್ಲು(ಹುಚ್ಚಾಟ) ಕಟ್ಟುತ್ತಾ ಏನೋ ಒಂದು ಮಾಡುತ್ತಿದ್ದೆ ನೀನು..


ನಾನು ಅಪ್ಪಿ ತಪ್ಪಿ ನಿನ್ನನ್ನು ನೋಡಿದೆ...


ಜೀವನದಲ್ಲಿ ಎಷ್ಟೇ ಮರ್ಲು ಕಟ್ಟಿದರೂ ನೀನೇನು ಹುಚ್ಚ ಆಗಲಿಲ್ಲ..


ಆದರೆ ನಾನು..


ಸುಲಭವಾಗಿ ನನಗೆ ನಿನ್ನ ಹುಚ್ಚು ಬಿಡುವಂತೆ ಕಾಣುತ್ತಿಲ್ಲ.


ಎಷ್ಟೊಂದು ಖಡಕ್ ಹುಡುಗಿ ನಾನು.


ಎಲ್ಲಾ ಹುಡುಗಿಯರು ಇಂಜಿನಿಯರಿಂಗ್ ಅಂತ ಬಂದರೆ Computer Science,Information Science, EC, EEE ಅಂತ Streams ಗಳಿಗೆ ಹೋದರೆ..


ನಾನು ಇಷ್ಟ ಪಟ್ಟೇ Mechanical Engineering ತೆಗೆಕೊಂಡಿದ್ದೆ.


ಎಷ್ಟಾದರೂ ನಾನು ಯೋಧನ ಮಗಳು.


ಅಮ್ಮ ನಿನ್ನಂತೆ ಅಮ್ಮ ನನಗೂ ಇರಲಿಲ್ಲ.


ಅಪ್ಪನೇ ಅಮ್ಮ ಆಗಿದ್ದರು.


ಕಾಲೇಜಿನಲ್ಲಿ Mechanical Engineering ಮಾಡುವಾಗ ಕ್ಲಾಸಿನಲ್ಲಿ  ನಲ್ವತ್ತು ಹುಡುಗರು ಇದ್ದಾರೆ ನಾನೊಬ್ಬಳೇ ಹುಡುಗಿ.


ಹೇಳಿ ಕೇಳಿ ಅದು ಹುಡುಗರ Branch.


ಹೆಸರೇ Royal Mech.


ನಾನು ಕೂಡ ಹುಡುಗರೊಂದಿಗೂ ಇದ್ದು ಇದ್ದು ಹುಡುಗನೇ ಆಗಿದ್ದೆ.


ಅವರೆಲ್ಲರೂ ಒಳ್ಳೆಯ Friend, Bro Buddy ಆಗಿದ್ದರು.


ನನ್ನನ್ನು ಹುಡುಗಿಯಂತೆ ಅವರಾರು ಕಂಡಿರಲೇ ಇಲ್ಲ.


ಹಾಕೋ ಡ್ರೆಸ್.. ಹೇರ್ ಸ್ಟೈಲ್ ಎಲ್ಲವೂ ಹೆಚ್ಚು ಕಡಿಮೆ  ಹುಡುಗರಂತೆಯೇ.. 


ಟಾಮ್ ಬಾಯ್ ಆಗಿದ್ದೆ ನಾನು.


ನನಗೂ ಅದೇ ಇಷ್ಟ ಆಗಿತ್ತು..


ಅಲ್ಲಿ ಎಲ್ಲಿಯೂ ಪ್ರೆಮವೆಂಬುವುದು ಅರಳಿರಲೇ ಇಲ್ಲ..


ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಪ್ರೀತಿ ಪ್ರೇಮ ಎಂಬುವುದರಲ್ಲಿ ನಂಬಿಕೆಯೇ ಇರಲಿಲ್ಲ..ಇಷ್ಟ ಅಂತು ಮೊದಲೇ ಇರಲಿಲ್ಲ. 


ಆದರೂ ಎಲ್ಲರಂತೆ  ನನ್ನೊಳಗೂ ಸಹ ಚಂದವಾಗಿ ಸೀರೆ ಉಟ್ಟು ನಾಚಿಕೆಯಿಂದ ನುಲಿಯುತ್ತಾ,ಕಲ್ಪನೆಗಳಿಂದ ಭಾವುಕಳಾಗಬಹುದಾದ ಒಬ್ಬಳು ಹುಡುಗಿ ಇದ್ದಾಳೆ... ಎಂದು ನನಗಂದು ಗೊತ್ತಿರಲಿಲ್ಲ  ನೀಲಮೇಘ.. 


ನೀನು ನನ್ನ ಕಣ್ಣಿಗೆ ಬೀಳೋವರೆಗೂ.. 


ನಾನು ಕೇವಲ ನಾನಾಗಿದ್ದೆ. 


ನಾನು ನನ್ನಷ್ಟಕ್ಕೆ ಇದ್ದೆ.


ನನ್ನ ಪರಿಧಿಯೊಳಗೆ ಯಾರನ್ನೂ ಬಿಟ್ಟು ಕೊಂಡವಳೇ ಅಲ್ಲ.


ನಾನೂ ಕೂಡ ಯಾರ ಬಾಳಲ್ಲೂ ಬಲಗಾಲಾಗಲಿ ಎಡಗಾಲನ್ನಾಗಲಿ ಇಟ್ಟು ಹಾಗೇ ಒಳಹೊಕ್ಕವಳೂ ಅಲ್ಲ...


ಎಲ್ಲದಕ್ಕೂ ಅನುಮತಿ ಬೇಕಲ್ಲವೇ..


ಅದಕ್ಕಿಂತಲೂ ಹೆಚ್ಚಿಗೆ ಇಷ್ಟವಾಗಬೇಕು..


ನೀನು ಕಣ್ಣಿಗೆ ಬೀಳುವವರೆಗೂ ಎಲ್ಲವೂ ಸರಿಯೇ ಇತ್ತು... 


ಕನಸು ರಾತ್ರಿಯಲ್ಲಿಯೇ ಬಿಳುತ್ತಿತ್ತು.. 


ಲವ್ ಸ್ಟೋರಿ ಮೂವಿಗಳಿಗಿಂತ ಪೆಟ್ಟ್ ಲಡಾಯಿ ಇರೋ ಆಕ್ಷ್ಯನ್ ಮೂವಿಯೇ  ಖುಷಿ ಕೊಡುತ್ತಿತ್ತು. 


ಮಳೆಬಿಲ್ಲು ಅಂದರೆ ಜಸ್ಟ್ ಬೆಳಕಿನ ವಕ್ರೀಭವನ ಅಷ್ಟೇ... 


ಮಳೆ ಅಂದರೆ ಕೇವಲ ಸೀಸನ್ ಆಗಿತ್ತು. 


ಆದರೆ ಯಾವಾಗ ನೀನು ನಾನು ನನ್ನ ಸುತ್ತ ಕಟ್ಟಿಕೊಂಡಿದ್ದ ಬೇಲಿ ಮುರಿದು ನನ್ನ ಮನಸ್ಸೊಳಗೆ, ಕನಸೊಳಗೆ  ಹಾಗೇ ಕೋಣನಂತೆ  ಒಳ ನುಗ್ಗಿ ಬಂದೇ ನೋಡು.. 


ನನ್ನೆಲ್ಲಾ ದೃಷ್ಟಿಕೋನವೇ ಬದಲಾಯಿತು..!


ನೀನು ನನ್ನ ಅನುಮತಿಯನ್ನು ಕೇಳಲಿಲ್ಲ...


ನನ್ನ ಇಷ್ಟ ಕಷ್ಟಗಳ ಬಗ್ಗೆಯೂ ವಿಚಾರಿಸಲಿಲ್ಲ.


ನೀನು ಜಸ್ಟ್ ನನ್ನ ಅಂತರಾತ್ಮವೇ ಅಲುಗಾಡುವಂತ ದಾಳಿ ಮಾಡಿದ್ದೆ..!


ನೀನು ಬಂದ ಮೇಲೆ..


ಎಲ್ಲವೂ ಬದಲಾಯಿತು..


ಯಾವುದೂ ಮುಂಚಿನಂತಿಲ್ಲ.. 


ಈಗೀಗ ರಾತ್ರಿ ಮಾತ್ರವಲ್ಲ ಹಗಲುಗನಸು ಕೂಡ ಸುಖವಾಗಿದೆ.. 


ಲವ್ ಸ್ಟೋರಿ ಮೂವಿಯೇ ಜಾಸ್ತಿ ನೋಡುವತ್ತ ಮನಸ್ಸಾಗಿದೆ.. 


ಮಳೆಬಿಲ್ಲು ಅಂದರೆ ಬರೀ VIBGYOR ಬಣ್ಣಗಳ ಸೈನ್ಸ್ ಗಿಂತಲೂ ಒಲವಿನ ಧನುಸ್ಸು ಎಂಬ ಕಲ್ಪನೆಯೇ ಹಿತವಾಗಿದೆ.


ಮಳೆ ಅಂದರೆ ಸುಮ್ಮನೆ ಸುರಿಯುವುದು ಅಲ್ಲ,ಅದು ಪ್ರೇಮದ ಧಾರೆ ಅನ್ನುವುದನ್ನು ಪ್ರೇಮಕವಿತೆ ಓದದೆಯೂ ನನಗೆ ಗೊತ್ತಾಗಿದೆ.. 


ಇದರಲ್ಲಿ ನಿನ್ನದೇನು ತಪ್ಪಿಲ್ಲ ಬಿಡು... 


ಏಕೆಂದರೆ ನಿನಗೆ ನಾನು ಯಾರೆಂದೇ ಇನ್ನೂ ಗೊತ್ತಿಲ್ಲ... 


ಆದರೆ ನಿನ್ನ ಬಗ್ಗೆ ಎಲ್ಲವೂ ನನಗೆ ಗೊತ್ತು.. 


ನಿನ್ನ ಹುಚ್ಚಾಟ, ಮರ್ಲ್ ಕಥೆಗಳು ಎಲ್ಲವೂ ನನಗೆ ಗೊತ್ತು..


ನೀನು ನನ್ನ ಕಣ್ಣಿಗೆನೇ ಬೀಳಬಾರದಿತ್ತು ನೀಲಮೇಘ.. 


ನೋಡು ಈಗ ನನಗೆ ಎಷ್ಟು ಕಷ್ಟವಾಗಿದೆ..


ಆದರೂ ಇದು ಮತ್ತಷ್ಟು ಬೇಕೆನಿಸುವಷ್ಟು ಹಾಯಾಗಿದೆ.. 


ಹೌದು ಖಂಡಿತಾ.. ನೀನು ನನ್ನೊಳಗೆ ಬರಲಿಲ್ಲ..


ನಾನು ಸುಮ್ಮನೆ ಸುಮ್ಮನೆ ಸುಳ್ಳು ಹೇಳಬಾರದು.. 


ನನಗೆ ಗೊತ್ತಿಲ್ಲದೇ ನಾನೇ ನಿನ್ನನ್ನು ನನ್ನೊಳಗೆ ಬರ ಮಾಡಿಕೊಂಡು ಬಿಟ್ಟೆ..


ನೀನು ಹೃದಯದ ಕದವ ಬಡಿಯುವ ಮೊದಲೇ ನಿನ್ನ ಕಂಡ ಕ್ಷಣ ಆ ಬಾಗಿಲನ್ನೇ ನಿನಗಾಗಿ ನಾನು ಕಿತ್ತೆಸೆದಿದ್ದೆ. 


ಪೇಟೆಯಲ್ಲಿ, ಅಂಗಡಿಯಲ್ಲಿ ನಿನ್ನನ್ನು ಕಂಡಾಗ ಅದ್ಯಾಕೋ ನೀನು ನನ್ನನ್ನು ಅಯಸ್ಕಾಂತದಂತೆ ಸೆಳೆದು ಬಿಡುತ್ತಿಯಾ ನೀಲಮೇಘ..


ಗೊತ್ತು.. ನಾನು ಅಯಸ್ಕಾಂತದ North Pole ಆದರೆ.. ನೀನು ಎಷ್ಟೊಂದು South pole. ಬಹುಶಃ ಅದಕ್ಕೇ ಇರಬೇಕು ಈ  ಆಕರ್ಷಣೆ. Opposite Pole Attracts Each Other ಎಂದು physics ಹೇಳುತ್ತೆ. 


ಜೀವನದಲ್ಲಿ ಶಿಸ್ತೇ ಇಲ್ಲದ ನೀನು.. 


ಶಿಸ್ತಿನ ಸಿಪಾಯಿ ಮಿಲಿಟ್ರಿ ಮೋನಪ್ಪನವರ ಏಕೈಕ ಮಗಳು ನಾನು..


ಶಿಸ್ತು ಅಶಿಸ್ತು.. ಜವಾಬ್ದಾರಿ ಬೇಜವಾಬ್ದಾರಿ ಅದು ಹೇಗೆ ಪರಸ್ಪರ ಸಂಧಿಸಿಬಿಟ್ಟವು.. 


ಎಲ್ಲಾ ಹುಡುಗಿಯರಿಗಿಂತಲೂ ನನಗೆಯೇ ಏಕೆ ನಿನ್ನಲ್ಲಿ ಇಂತಹ  ಆಕರ್ಷಣೆ..?!


ನನಗದು ಗೊತ್ತಿಲ್ಲ.. 


ನಿನ್ನ ಅಪ್ಪ ಅಂತು ಪೇಟೆಯಲ್ಲಿ,ಅಂಗಡಿಯಲ್ಲಿ ಎಲ್ಲಿ ನೋಡಿದರೂ ನಿನಗೆ ಬೈಗುಳಗಳ ಮಂಗಳಾರತಿಯನ್ನೇ ಸದಾ  ಮಾಡುತ್ತಿರುತ್ತಾರೆ.. 


ಕೆಲವೊಮ್ಮೆ ಅದನ್ನು ಕಂಡಾಗ ನನಗೆಯೇ ಬೇಜಾರ್ ಆದರೂ ಒಳಗೊಳಗೆ ನಿನ್ನನ್ನು ಯಾರಾದರೂ ಗೋಳಾಡಿಸಿ ಬಿಟ್ಟರೆ  ನನಗೆ ಅದೆಷ್ಟು ಖುಷಿ ಗೊತ್ತಾ... ನೀನು ಮಂಗನಂತೆ ಮಾಡುವುದಕ್ಕೆ ನಿನಗೆ ಹಾಗೇ ಆಗಬೇಕು. 


ಆದ್ರೆ ನೀಲಮೇಘ ಇನ್ನು ನಿನ್ನನ್ನು ಗೋಳು ಹೊಯ್ಯಲು  ನೀಲಣ್ಣ ಅಂಕಲ್ ಮಾತ್ರವಲ್ಲ..ನಿಮ್ಮ ಮನೆಯ ಕಾಂಪೌಂಡ್ ಪಕ್ಕವೇ ನನ್ನಪ್ಪ ಮಿಲಿಟ್ರಿ ಮೋನಪ್ಪ ಕೂಡ ಇರ್ತಾರೆ.! 


ಅರ್ಥ ಆಗ್ಲಿಲ್ಲ ಅಲ್ಲ.. 


ಅದಕ್ಕೆ ನಾನು ಶುರುವಲ್ಲಿ ಅಪ್ಪನ ಬಗ್ಗೆ ಹೇಳಿದ್ದು. 


ತಡಿ.. ವಿಷಯ ಏನಂತ ನಾನೇ ಡೀಟೈಲ್ ಆಗಿ ಹೇಳ್ತೇನೆ. 


ನಿನ್ನದೇ  ಊರಿನಲ್ಲಿ ಇದ್ದರೂ ಸಹ ನಾವು ಅಪ್ಪ ಮಗಳು ಎಷ್ಟೋ ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ಇದ್ದದ್ದು ನಾವು.. 


ಅಪ್ಪ ಬೇರೆ ಮಿಲಿಟರಿ ರಿಟೈರ್ಡ್. 


ಸರಕಾರದಿಂದ ಜಾಗ ಏನೋ ಸಿಕ್ಕಿತ್ತು. 


ಆದರೆ ತಗೊಳ್ಳಿಲ್ಲ ಅವರು.


ಯಾವುದೂ ಇಷ್ಟ ಆಗ್ತಿರ್ಲಿಲ್ಲ ಅವರಿಗೆ.


ನಮಗೆ ಮನೆ ಮಾತ್ರವಲ್ಲ..ಸಣ್ಣದೊಂದು ತೋಟ.. ಬೈಲು ಗದ್ದೆ.. ಕೆರೆ ಎಲ್ಲವೂ ಬೇಕಿತ್ತು. 


ಯಾವಾಗ ನೀನು ನನ್ನ ಕಣ್ಣಿಗೆ ಬಿದ್ದೆ ನೋಡು.. 


ಆಗಲೇ ಆ ಪುಲಿಕೇಶಿ ವಾಠರದಲ್ಲಿರುವ ನಿಮ್ಮ ಮನೆಯ ಪಕ್ಕದ ತೋಟದ ಮನೆಯ ಮೇಲೆ ನನ್ನ ಕಣ್ಣು ಬಿದ್ದದ್ದು..!


ಹೌದು ಗೊತ್ತು, ನಿಮ್ಮ ಮನೆಯ ಲೆಫ್ಟ್ ಸೈಡಿನ ಜಾಗ ದರ್ಶನ್ ಅಂಕಲ್ ನವರದ್ದು..ಅದಲ್ಲ..ನಿಮ್ಮ ರೈಟ್ ಒಂದು ದೊಡ್ಡ ಜಾಗ ಇತ್ತು ನೋಡು.. ಯೆಸ್ ಅದೇ ಜಾಗ.. 


ಆ ಮನೆ,ಮೂರು ಎಕರೆ ತೋಟ,ಕೆಳಗಿನ ಗದ್ದೆ ಎಲ್ಲವೂ ಸೇಲಿಗೆ ಇದೆ ಎಂದು ಗೊತ್ತಾದಾಗ ಅಪ್ಪನಿಗೆ ಬೆನ್ನು ಬಿದ್ದು ಇದೇ ಜಾಗ ತೆಗೆದುಕೊಳ್ಳುವ ಅಪ್ಪ ಎಂದು ಒತ್ತಾಯಿಸಿದೆ ನಾನು. 


ಅಪ್ಪ ನನ್ನ ಮಾತನ್ನು ಯಾವತ್ತೂ ಬೇಡ ಎನ್ನುವವರಲ್ಲ.


ತೋಟ ಏನೋ ಚೆನ್ನಾಗಿಯೇ ಇದೆ. ಆದರೆ ಮನೆ ಶಿಥಿಲವಾಗಿ ಇದ್ದುದರಿಂದ ಅಪ್ಪ ಸ್ವಲ್ಪ ಹಿಂದೆ ಮುಂದೆ ನೋಡಿದ್ದರು. 


ಆದರೆ ನನ್ನ ಒತ್ತಾಯಕ್ಕೆ ಮಣಿದು ಅಪ್ಪ ಆ ಅಷ್ಟೂ  ಜಾಗವನ್ನು ತಗೊಂಡಿದ್ದು ಮಾತ್ರವಲ್ಲ ಆ ಹಳೆ ಮನೆ ಇದ್ದ ಜಾಗದಲ್ಲಿ ಹೊಸ ಮನೆಯನ್ನು ಕಟ್ಟಿಸಲು ಸಹ ಶುರು ಮಾಡಿ ಆಗಿದೆ.. 


ಕಳೆದ ಆರೇಳು ತಿಂಗಳಿಂದ ನಿಮ್ಮ ಮನೆಯ ಬಲಬದಿಯಲ್ಲಿ ಒಂದು ಮನೆ ಕಟ್ಟುತ್ತಾ ಇದ್ದರಲ್ಲ.. ಹಾನ್ ಅದು ನಮ್ಮದೇ ಮನೆ. 


ಮನೆ ಕೆಲಸನೂ Almost ಮುಗಿದಿದೆ.. ಇನ್ನೇನು ಮುಂದಿನ ವಾರವೇ ಗೃಹಪ್ರವೇಶ. 


ಮನೆಗೂ ನನ್ನ ಹೆಸರೇ ಇಟ್ಟಿದ್ದಾರೆ  ಅಪ್ಪ..


ಭಾಮ ಕೃಪಾ .. ಎಂದು ಮನೆಗೆ ಹೆಸರಿಡುವ ಆಲೋಚನೆ ಅವರಿಗಿತ್ತು.


ಆದರೆ  ನಾನು "ಭಾಮ ನಿಲಯ" ಇರಲಿ ಎಂದು ಹೇಳಿದೆ.


ಯಕೆ ಗೊತ್ತಾ...


ನಿನ್ನ ಮನೆ ಹೆಸರು "ಶ್ಯಾಮ ನಿಲಯ" ಅಲ್ವಾ .. ಅದಕ್ಕೆ. 


ನೋಡು ಹೇಗೆ ಮ್ಯಾಚಿಂಗ್.. ಮ್ಯಾಚಿಂಗ್.. 


ನಿಮ್ಮ ಮನೆಗೂ ಇವತ್ತೋ ನಾಳೆಯೋ ನಮ್ಮ ಗೃಹಪ್ರವೇಶದ invitation ಬರ್ಬಹುದು.. 


ನಮಗೆ ಜಾಸ್ತಿ ಜನ ನೆಂಟರು ಬಂಧು ಬಳಗ ಅಂತ ಏನೂ ಇಲ್ಲ. 


ಆದ್ದರಿಂದ ಇಲ್ಲಿನ ಊರಿನವರನ್ನೇ ಜಾಸ್ತಿ ಆಗಿ invite ಮಾಡಿದ್ದಾರೆ ಅಪ್ಪ. 


ನೀಲಮೇಘ ನೀನು ಕೂಡ ನಮ್ಮ ಗೃಹ ಪ್ರವೇಶಕ್ಕೆ ಬರ್ತಿ ಅಲ್ವಾ...? 


ನೋಡು ಹಿಂದೆ ನಾನು ದೇವರಲ್ಲಿ... ನೀಲಮೇಘನಿಗೆ ಬೇಗ ಕೆಲಸ ಸಿಗದಿರಲಿ ದೇವರೇ.. ಎಂದೇ ಕೇಳ್ತಾ ಇದ್ದೆ.. ಕಾರಣ ಆ ನೆಪದಲ್ಲಿ ಆದರೂ ನೀನು ನಿರುದ್ಯೋಗಿ ಆಗಿ ಇದ್ರೂ ಸಹ.. ನನ್ನ ಕಣ್ಣ ಮುಂದೆಯೇ ಸ್ವಲ್ಪ ದಿನ ಇರಲಿ ಎಂಬ ಹುಚ್ಚು ಬಯಕೆ ಇತ್ತು ನನ್ನಲ್ಲಿ. 


ಆದರೆ ಇನ್ನು ಮುಂದೆ ಆ ರೀತಿ  ಎಲ್ಲಾ ಪ್ರಾರ್ಥಿಸಲಾರೆ ನೀಲಮೇಘ.. 


ಯಾಕೆ ಹೇಳು.. 


ನಿನ್ನ ಪಕ್ಕದ ಮನೆಯೇ ನನ್ನ ಮನೆ.


We are neighbors. 


ನೀನು ಎಲ್ಲೇ ಹೋಗು.. ನೀನು ನಿನ್ನ ಮನೆಗೆ ಅಂತ  ಬಂದಾಗ ಪಕ್ಕದ ಕಾಂಪೌಡಿನತ್ತ ಒಮ್ಮೆ ತಲೆ ಎತ್ತಿ ನೋಡಿದರೆ ಒಬ್ಬಳು ಭಾಮೆ ಎಂಬುವವಳ  ದರ್ಶನ ಇನ್ನು ಮುಂದೆ ನಿನಗೆ ಅವಶ್ಯವಾಗಿ ಆಗುತ್ತದೆ.....


ಆದರೆ ಅವಳು ಇಲ್ಲಿ ಬರೆದುಕೊಂಡಂತೆ ನಿನ್ನೆದುರು ಬಂದಾಗ ಖಂಡಿತವಾಗಿಯೂ ಮಾತಾಡಲಾರಳು.. ಮೌನಿ ಅವಳು. 


ನೀನೇ ಕರೆದು ಕರೆದು ಮಾತಾಡಿಸಬೇಕಾಗಬಹುದು..


ಮತ್ತು ನಿನಗೆ ಮಾತನಾಡುವುದನ್ನು ಅಂತು ಯಾರು ಕಲಿಸಬೇಕಾಗಿಯೇ ಇಲ್ಲ..


ನಾ ಎದುರಿಗೆ ಬಂದಾಗ ನನ್ನೊಂದಿಗೂ ಸಾಕಷ್ಟು ಮಾತಾಡು ನೀಲಮೇಘ. 


ಇನ್ನು ಮುಂದೆ ನಿನ್ನ ಮನೆ ಸುತ್ತ ಬುಲ್ಲೆಟ್ಟು ಬೈಕೊಂದು ಸದಾ ಗುಡು ಗುಡು ಅಂತ ಸದ್ದು ಮಾಡುತ್ತಾ ಹೋಗುತ್ತಿದ್ದರೆ ನೆನಪಿಟ್ಟುಕೋ  ಅದು ಎಂದೆಂದಿಗೂ ಈ ಬುಲೆಟ್ ಭಾಮಳದ್ದೇ ಬುಲ್ಲೆಟ್ಟು ಆಗಿರುತ್ತದೆ ನೀಲಮೇಘ. 


ನಿನಗೆ ಫಿಕ್ ಅಪ್, ಡ್ರಾಪ್ ಎಲ್ಲಾ ಬೇಕಾದಾಗ ನನ್ನನ್ನೇ ಕೇಳು.. ಆ ಮುರುಳಿ ಹತ್ರ ಬೈಕ್ ಕೆಳೋಕೆ,ಕಾರ್ ಕೇಳೋಕೆ ಎಲ್ಲಾ ಹೋಗ್ಬೇಡ.. ನನ್ನ ಬುಲೆಟ್ಟಿನ ಹಿಂದಿನ ಸೀಟು ಅದು ನೀನು ಕಣ್ಣಿಗೆ ಬಿದ್ದಾಗಿನಿಂದ ನಿನಗೆಂದೇ ಮೀಸಲು ಇಟ್ಟಾಗಿದೆ.. 


ನಿನ್ನ ಮನೆಯ ವಠಾರಕ್ಕೆ ಹೇಗೋ ಬಂದಾಗಿದೆ.. 


ಆದರೆ.. 


ನಿನ್ನಯ ನಲುಮೆಯ ಲೋಕಕ್ಕೂ.. 

ನನ್ನನ್ನೊಮ್ಮೆ ಹಾಗೇ ಪರಿಚಯಿಸು 


ನನ್ನ ನೋಡಿ ನೀನು ತಲ್ಲೀನನಾಗಬೇಕು..

ನನಗದುವೇ  ಚಂದ... 


ಹೀಗೆ ಏನೇನೋ ಆಸೆ ಇಟ್ಟುಕೊಂಡು, ಕನಸು ಕಟ್ಟಿಕೊಂಡು ಬಿಡಾರ ಹೂಡಲು ಸದ್ಯದಲ್ಲಿಯೇ  ಬರಲಿದ್ದೇನೆ.. 


ಏನು ಆಗುತ್ತೋ ದೇವರಿಗೇ ಗೊತ್ತು..


ನಾನಂತು ನಿನಗೆ ಎಲ್ಲವನ್ನೂ ಹೇಳಲಾರೆ..


ಎಷ್ಟೇ ಗಟ್ಟಿ ಹುಡುಗಿ ಆದರೂ ಆ ಸಾಹಸ ಮಾಡುವ ಧೈರ್ಯ ನನ್ನಲ್ಲಿ ಇಲ್ಲ. 


ನನ್ನ ಅಪ್ಪ ನಿನ್ನ ಅಪ್ಪ already ತುಂಬಾನೇ ಕ್ಲೋಸ್ ಆಗಿದ್ದಾರೆ.


ನಮ್ಮ ಮನೆ ಕಟ್ಟುವಾಗಲೆಲ್ಲ ನೀಲಣ್ಣ ಅಂಕಲ್ ಬಂದು ಸದಾ ಮನೆಕೆಲಸ ಎಲ್ಲಾ  ನೋಡಿಕೊಂಡು ಹೋಗಿದ್ದಾರೆ.


ಅಪ್ಪನಿಗಂತು ಅವರು ಬಹಳ ಇಷ್ಟ ಆಗಿದ್ದಾರೆ.


ಆದ್ದರಿಂದ ನೆನಪಿಟ್ಟುಕೋ.. ನಿನ್ನ ಅಶಿಸ್ತಿನ ಬದುಕನ್ನು ಸರಿ ದಾರಿಗೆ ತರ್ಲಿಕ್ಕೆ ಇನ್ನು ಮುಂದೆ ನಿನ್ನ ಅಪ್ಪ ಮಾತ್ರವಲ್ಲ...ನನ್ನ ಅಪ್ಪ ಶಿಸ್ತಿನ ಸಿಪಾಯಿ ಮಿಲಿಟ್ರಿ ಮೋನಪ್ಪ ಕೂಡ ಅವಶ್ಯವಾಗಿ ನಿಮ್ಮ ಕಾಂಪೌಂಡ್ ಪಕ್ಕವೇ ಕೋವಿ ಹಿಡಿದು ನಿಂತಿರ್ತಾರೆ.. ನೆನಪಿರಲಿ. 


ಏಕೆಂದರೆ ಅವರಿಗೆ ಜೀವನದಲ್ಲಿ, ಸುತ್ತ ಮುತ್ತಲಿನ ಸಮಾಜದಲ್ಲಿ ವಠಾರದಲ್ಲಿ ಶಿಸ್ತು ತುಂಬಾ ಮುಖ್ಯ. ಹೇಳಿ ಕೇಳಿ ಮಿಲಿಟರಿ ಮ್ಯಾನ್. 


ಅವರಿಗೆ ನಾನೇ ಹೇಳಿ ಕೊಡ್ತೇನೆ ಲೂಸ್ ಆದ  ನಿನ್ನ ಬೋಲ್ಟ್ ನಟ್ಟು ಚೆನ್ನಾಗಿಯೇ ಟೈಟು ಮಾಡಲು.. 


ಆದರೆ ನೀಲಮೇಘ ನಿನ್ನಲ್ಲಿ ನನ್ನದೊಂದು ಸೀರಿಯಸ್ ಪ್ರಾರ್ಥನೆ ಇಷ್ಟೇ... 


ದಯವಿಟ್ಟು ನನ್ನ ಅಪ್ಪನ ಜೊತೆ ಸೇರಿಕೊಂಡು.. ನಿನ್ನ ಮರ್ಲಿನಿಂದ ನಿನ್ನ ಹಾಗೆಯೇ  ಅವರ  ಶಿಸ್ತನ್ನು ಸಹ ಹಾಳು ಮಾಡ್ಬೇಡ ಪ್ಲೀಸ್.. 


ಸದ್ಯಕ್ಕೆ ನನಗೆ ಅದೊಂದೇ ಭಯ ಅತಿಯಾಗಿದೆ...! 


ಗೃಹಪ್ರವೇಶದಲ್ಲಿ ಮೊದಲ ಬಾರಿಗೆ ಮುಖಾಮುಖಿ ಭೇಟಿ ಆಗುವ.. 


      


                                                           ತುಂಬಾ ನಿನ್ನವಳು


                                                                      - ಭಾಮ 


................................................................................... 


#ನೀಲಮೇಘ 


ab pacchu 

moodubidire

(photo - internet)

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ