ಓಲೆ ಎಂಬ ಸಿಹಿಯಾದ ಬೆಲ್ಲ..

 




ಏನೇ ಹೇಳಿ ಬೆಲ್ಲ ಅಂದ ಕೂಡಲೇ ತುಳುನಾಡಿನವರಿಗೆ ಅನಾದಿಕಾಲದಿಂದಲೂ ಮೊದಲು ನೆನಪಾಗುತ್ತಿದ್ದುದು ಇದೇ ಬಲು ಸುಂದರ #ಓಲೆ_ಬೆಲ್ಲ😋❤️

ಕಬ್ಬು ಬೆಳೆ ನಮ್ಮ ಜಿಲ್ಲೆಯಲ್ಲಿ ಕಡಿಮೆಯೇ ಇರಬಹುದು.. ಆದರೆ  ಬೆಲ್ಲ ನಮ್ಮವರೂ ಮಾಡುತ್ತಿದ್ದರು,ಆದರೆ ಕಬ್ಬಿನಲ್ಲಿ ಅಲ್ಲ.. ಬದಲಾಗಿ ತಾರಿ(ತಾಳೆ) ಮರದಿಂದ .ನಮ್ಮವರು ತಯಾರಿಸುವ ಈ ಬೆಲ್ಲ ನೋಡಲು ಮಾತ್ರ ಸುಂದರವಲ್ಲ.. ಅಷ್ಟೇ ರುಚಿ.. ಹಾಗೂ ಅಷ್ಟೇ ಔಷದಿಯ ಗುಣಗಳನ್ನು ಹೊಂದಿದ್ದು  ಇದು ಬಲು ಅಪರೂಪದ ತುಳುನಾಡಿನ ಹೆಮ್ಮೆಯ ಬೆಲ್ಲವೆಂದೇ ಹೇಳಬಹುದು 😍

ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಮ್ ಹೊಂದಿರುವ ಇದು ಎಲುಬಿನ ಆರೋಗ್ಯಕ್ಕೂ ಒಳ್ಳೆಯದು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಬಾಣಂತಿಯರಿಗೆ  ಇದು ಬೇಕೇ ಬೇಕು. ಮನೆಯಲ್ಲಿ ಯಾರಾದರೂ ಬಾಣಂತಿಯರು ಇದ್ದರೆ ಆವಾಗ ಒಂದು ಕಟ್ಟು ಓಲೆ ಬೆಲ್ಲ ತಾಳೆ ಗರಿಯನ್ನು ಮೈ ತುಂಬಾ ಸೀರೆ ತರಹ ಸುತ್ತಿಕೊಂಡು ಹಾಗೇ ಮಾರ್ಕೆಟ್ ನಿಂದ ಮನೆಯೊಳಗೆ ನಡೆದು ಬರುತ್ತದೆ.

ನಿರಂತರವಾದ ಶೀತದಿಂದ ಬಳಲುವವರಿಗೂ ಕೂಡ ಇದು ಬಹಳ ಒಳ್ಳೆಯದಂತೆ.

ಹಿಂದಿನಷ್ಟು ಪ್ರಮಾಣದಲ್ಲಿ ಈಗ ಇದನ್ನು ಮಾಡುವುದಿಲ್ಲ, ಆದ ಕಾರಣದಿಂದಾಗಿ ಈಗ ಅಂತು ಇದು ತುಂಬಾನೇ costly, ಕೆಲವೊಮ್ಮೆ ಇಪ್ಪತ್ತರಿಂದ ಇಪ್ಪತ್ತೆರಡು ಓಲೆ ಬೆಲ್ಲ ಇರುವ ದೊಡ್ಡ ಕಟ್ಟಿಗೆ 600 ರಿಂದ 800 ರೂಪಾಯಿ ತನಕವೂ ಇದೆ ಮಾರ್ಕೆಟ್ ನಲ್ಲಿ. ಬೆಲೆ ಎಷ್ಟೇ ಇರಲಿ ಓಲೆ ಬೆಲ್ಲ ಪ್ರೀಯರು ಹಣ ಕೊಟ್ಟು ಇದನ್ನು ತೆಗೆದುಕೊಂಡು ಹೋಗದೆ ಇರಲಾರರು.

ಇದನ್ನು ತಾರಿ(ತಾಳೆ)ಮರದ ಸೇಂದಿಯನ್ನು ಕಟ್ಟಿಗೆ ಒಲೆಯಲ್ಲಿ ನಿಧಾನವಾಗಿ ಹದವಾಗಿ ಪಾಕ ಬರುವಂತೆ ಕುದಿಸಿ ನಂತರ ತಾಳೆ ಮರದ ಎಲೆಯಿಂದಲೇ ಮಾಡಿದ ವೃತ್ತಾಕಾರದ ಬಳೆಗಳಿಗೆ  ಹೊಯ್ಯುತ್ತಾರೆ.ಅದು ನಿಧಾನಕ್ಕೆ ಗಟ್ಟಿಯಾದ  ನಂತರದ ಆಗುವುದೇ ರುಚಿಕರ ಓಲೆ ಬೆಲ್ಲ. ನಂತರ ಇದನ್ನು ಅಂದರೆ ಇಪ್ಪತ್ತರಿಂದ ಇಪ್ಪತ್ತೆರಡು ಓಲೆ ಬೆಲ್ಲ ಗಳನ್ನು ಸೇರಿಸಿ ಮತ್ತೊಮ್ಮೆ ದೊಡ್ಡ ಕಟ್ಟುಗಳನ್ನಾಗಿ ಮಾಡುತ್ತಾರೆ. ಆ ರೀತಿ ದೊಡ್ಡ ಕಟ್ಟುಗಳನ್ನು ಮಾಡಲು ಕೂಡ ತಾಳೆ ಎಲೆಗಳನ್ನೇ ಬಳಸುತ್ತಾರೆ. ನಂತರ ಇದನ್ನು ಒಲೆಯ ಮೇಲಿನ ಹೊಗೆಯ  ಶಾಖ ತಾಗುವಂತೆ ಶೇಖರಿಸಿಡುತ್ತಾರೆ. ಹೀಗೆ ಮಾಡಿದ ನಮ್ಮ ಓಲೆ ಬೆಲ್ಲ ಎಷ್ಟೋ ಸಮಯದ ವರೆಗೆ ಯಾವುದೇ preservatives ಇಲ್ಲದೇ ಹಾಗೇ ಕೆಡದಂತೆ ಉಳಿಯಬಲ್ಲದು.ಓಲೆ ಬೆಲ್ಲದಲ್ಲಿ ಎಂದೂ ಕಲಬೆರಕೆ ಎಂಬುವುದು ಇಲ್ಲ.

ಓಲೆ ಬೆಲ್ಲ ನಿಜವಾಗಿಯೂ ಬಹಳನೇ ರುಚಿ. ಹಾಗೇ ಕಚ್ಚಿಕೊಂಡು ತಿನ್ನಬಹುದು. ದನದ ಬಿಸಿ  ಹಾಲಿಗೆ ಹಾಕಿಕೊಂಡು ಕುಡಿಯುವುದು ಕೂಡ ಉತ್ತಮ. ಇದರಿಂದ ಮಾಡಿದ ಕಾಫಿಯೂ ಕೂಡ ಬಹಳನೇ ಸ್ವಾದಭರಿತವಾಗಿರುತ್ತದೆ.ಅದನ್ನು ಕುಡಿದವರಿಗೆನೇ ಗೊತ್ತು.

ಮಾರುಕಟ್ಟೆಯಲ್ಲಿ ಸದ್ಯಕ್ಕೆ ಒಂದು ಓಲೆ ಬೆಲ್ಲಕ್ಕೆ ಇಪ್ಪತ್ತು ರೂಪಾಯಿವರೆಗೆ ಇದೆ. ಚಿಕ್ಕಂದಿನಿಂದ ಹಿಡಿದು ಈಗ ಕೂಡ ಯಾವಾಗ ಮಾರ್ಕೆಟ್ ಗೆ ಹೋದರೂ ಕೂಡ ತಾಳೆಗರಿಗಳ ಒಳಗೆ ಬೆಚ್ಚಗೆ ಅವಿತು ಕುಳಿತಿರುವ ಈ ಓಲೆ ಬೆಲ್ಲ  ಕಂಡಾಗಲೆಲ್ಲ ನನ್ನ ಮನಸ್ಸು ಅದರೆಡೆಗೆ ಒಲಾಡದೇ ಇರುವುದೇ ಇಲ್ಲ..😋❤️


ab pacchu 

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!