ಆಂಟಿ ಮಗಳು ಮತ್ತು ಸೇಮೆದಡ್ಡೆ

 

ಕೈಯಲ್ಲೊಂದು ಚಿಕ್ಕ ಕಪ್ ಐಸ್‌ಕ್ರೀಂನ,ಕಪ್ ನಲ್ಲಿ ಏನನ್ನೋ  ಹಾಕಿಕೊಂಡು ರೂಮ್ ಗೆ ತಂದ್ದಿದ್ದಳು ಅದೇ ರೆಗ್ಯುಲರ್ ಆಗಿ ನನಗೆ  ಪಾಯಸ ಕೊಟ್ಟು ಕಳುಹಿಸುತ್ತಿದ್ದ ಪಕ್ಕದ ಮನೆ ಆಂಟಿಯ ಏಕೈಕ ಮಗಳು.

ರೂಮ್ ಅಲ್ಲಿ ಯಾರೂ ಇರದಿದ್ದುದರಿಂದ ನನ್ನ ಇಷ್ಟದ ಹಾಡೊಂದನ್ನು ಸೋನು ನಿಗಮ್ ರೇಂಜಿಗೆ ಭಯಂಕರವಾಗಿ,sorry.. ಭಯಾನಕವಾಗಿ ಹಾಡುತ್ತಾ ಒಬ್ಬನೇ ರೂಮಿನಲ್ಲಿ ಕುಳಿತುಕೊಂಡಿದ್ದೆ.

ಅದು ಬೇರೆ ಶಾರ್ಟ್ಸ್ ಹಾಕಿಕೊಂಡು ಬರೀ ಮೈಯಲ್ಲಿಯೇ ಇದ್ದೆ,ಅವಳು ಸೀದಾ ರೂಮಿಗೆ ಬಂದದ್ದು ಕೂಡ ಗೊತ್ತೇ ಆಗಿರಲಿಲ್ಲ.ರಪ್ಪ ಅಂತ ಹಾಡುವುದನ್ನು ನಿಲ್ಲಿಸಿ ಅಲ್ಲೇ ಇದ್ದ pretended to be normal ಎಂದು ಬರೆದಿದ್ದ ಟೀ ಶರ್ಟ್ ಒಂದನ್ನು ಹಾಗೇ ಎಳೆದುಕೊಂಡು ಮೈಮೇಲೆ ಹಾಕಿಕೊಂಡು ಬಿಟ್ಟೆ.

ಅವಳತ್ತ ನೋಡದೇ,ಗಮನಿಸಲಿಲ್ಲವೋ ಎಂಬಂತೆ.. ಸ್ವಲ್ಪ extra ಅಲಕ್ಷ್ಯ ಮಾಡುತ್ತಾ, ಅಲ್ಲೇ ಬಿದ್ದಿದ್ದ ಹಳೆಯ  ಪೇಪರ್ ಒಂದನ್ನು ಮುಖಕ್ಕೆ ಅಡ್ಡ ಹಿಡಿದುಕೊಂಡು ಓದಲು ಶುರು ಮಾಡಿದೆ,ಅದು ಕೂಡ ಉಲ್ಟಾ ಹಿಡಿದು.ಅದು ಗೊತ್ತಾದ ನಂತರ ಪುನಃ ಸರಿಯಾಗಿ ಹಿಡಿದುಕೊಂಡು ಸೀರಿಯಸ್ ಆಗಿ ಓದುವವನಂತೆ ನಟಿಸಲು ಶುರು ಮಾಡಿದೆ.

ಅವಳು ಡೋರ್ ಬಳಿಯೇ ನಿಂತಿದ್ದಳು.ಅವಳು ತಲೆಗೆ ಹಾಕಿದ್ದ ಶಾಂಪೂವಿನ ಪರಿಮಳ ಮೈ ಮನಸ್ಸು ಎರಡನ್ನೂ ಒಮ್ಮೆಗೆ ಸಡಿಲ ಮಾಡಿತ್ತು. ಹಿಡಿದುಕೊಂಡಿದ್ದ ಪೇಪರ್ ಅನ್ನು ತುಸುವೇ ಪಕ್ಕಕ್ಕೆ ಸರಿಸಿ ವಾರೆ ಕಣ್ಣಿನಲ್ಲಿ ಅವಳತ್ತಲೇ ನೋಡಿದೆ.

ಅವಳು ಕೂಡ ಕಪ್ಪು ಶಾರ್ಟ್ಸ್ ಮತ್ತು ಬಿಳಿಯ ಟೀಶರ್ಟ್ ಒಂದನ್ನು ಹಾಕಿದ್ದಳು.ಆಗಷ್ಟೇ ಸ್ನಾನ ಮಾಡಿ ಬಂದಂತೆ ಕಾಣುತ್ತಿದ್ದ ಅವಳು ತಲೆಗೂದಲಿಗೆ ಎಂದಿನಂತೆ ಅವಳಿಷ್ಟದ ಒಂದು ತಾಜಾ ಸಂಪಿಗೆಯನ್ನು ಸಿಕ್ಕಿಸಿಕೊಂಡಿದ್ದಳು.ಮೊದಲೇ ಬಂಗಾರ ಬಣ್ಣದ ಅವಳು ವೈಟ್ ಟೀಶರ್ಟ್ ನಲ್ಲಿ ಒಂಥರಾ ಬಿರಿದ ಮಲ್ಲಿಗೆಯಂತೆ ಮುದ್ದಾಗಿಯೇ ಕಾಣುತ್ತಿದ್ದಳು.

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ.......ಹಾಡು ತುಟಿಯಂಚಿನವರೆಗೂ ಬಂದರೂ ಮನಸ್ಸಲ್ಲೇ ಉಳಿದು ಹೋಯಿತು. ಯಾರೂ ಇರದಿದ್ದರೆ ಗ್ಯಾರಂಟಿ ನನ್ನ ಕಂಚಿನ ಕಂಠದಲ್ಲಿ ಅರ್ಭಟಿಸುತ್ತಿದ್ದೆ,sorry.. ಹಾಡುತ್ತಿದ್ದೆ. 

ತುಂಬಾ ದಿನಗಳ ನಂತರ ನನ್ನ ರೂಮ್ ಕಡೆಗೆ ಬಂದಿದ್ದಳು ಆಂಟಿಯ ಮಗಳು.ನನಗೆ ಕೊಟ್ಟು ಬಾ ಅಂತ ಆಂಟಿಯೇ ಏನೋ ಮಾಡಿಕೊಟ್ಟು ಕಳುಹಿಸಿರಬೇಕು.ಆದರೂ ನನಗೇನು ಅದರಲ್ಲಿ ಅಷ್ಟು ಆಸಕ್ತಿ ಇಲ್ಲದವನಂತೆ ಹಾಗೇ  ಉಡಾಫೆಯಾಗಿಯೇ ಕೇಳಿಬಿಟ್ಟೆ.. 

"ಏನದು ಕೈಯಲ್ಲಿ .. " 

"ಅದು.. ಅದು..ಮಮ್ಮಿ  ಕೊಟ್ಟು ಕಳುಹಿಸಿದ್ದು ನಿಮಗೆ.."

" ಎಂತ ಪಾಯಸ ವ.. ?"

"ಅಲ್ಲ ಇದು ಬೇರೆ..." 

" ಬೇರೆ ಅಂದ್ರೆ .. ಅದಕ್ಕೆ ಎಂತ ಹೆಸರಿಲ್ವಾ.." ಮತ್ತಷ್ಟು ಉಡಾಫೆ ಯೊಂದಿಗೆ ಕೇಳಿದೆ. 

" ಇದು ಗುಜ್ಜೆ ಕಜಿಪು(ಹಲಸಿನ ಪಲ್ಯ).." 

" ಆಹಾ.. ಗುಜ್ಜೆ ಕಜಿಪು, ನನಗೆ ಬಾರೀ ಇಷ್ಟ,ಅದಕ್ಕೆಂದೇ ಆಂಟಿ ಕೊಟ್ಟು ಕಳುಹಿಸಿದ್ದು,ಈಚೆ ಕೊಡು ಅದನ್ನು.."

ಅದನ್ನು ಅವಳಿಂದ ತೆಗೆದುಕೊಂಡು, ಸ್ವಲ್ಪ ರುಚಿ ನೋಡಿ ಹಾಗೇ ಟೇಬಲ್ ಮೇಲೆ ಇಟ್ಟೆ.ನಿಜವಾಗಿಯೂ ಚೆನ್ನಾಗಿತ್ತು ಗುಜ್ಜೆ ಕಜಿಪು. 

ಅವಳು ಇನ್ನೂ ಅಲ್ಲೇ ಇದ್ದಳು.

" ಎಂತ  ನಿನಗೆ ಸ ಬೇಕಿತ್ತಾ  ಗುಜ್ಜೆ ಕಜಿಪು.. " ಅಂದೆ. 

"ಮಮ್ಮಿ ಬಿಟ್ಟು ನಮ್ಮ ಮನೆಯಲ್ಲಾ ಯಾರೂ ಕೂಡ ಇದನ್ನು ಈ ರೇಂಜಿಗೆ ರಕ್ಕಸ ನ ಹಾಗೇ ತಿನ್ನುವುದಿಲ್ಲ.. ಮನೆ ನಾಯಿ ಕೂಡ ತಿನ್ನುವುದಿಲ್ಲ " ಅಂದಳು.

ಅಂದರೆ ನಾನು ರಕ್ಕಸ ಹಾಗೂ ನಾಯಿಗಿಂತ ಕಡೆ ಎನ್ನುವುದೇ ಅವಳ ಈ ಮಾತಿನ ತಾತ್ಪರ್ಯ ವ? ಗೊಂದಲಕ್ಕೆ ಬಿದ್ದೆ. ಆದರೂ ಅದನ್ನು ತೊರ್ಪಡಿಸದೇ..

" ಮತ್ತೆ ಅದು.. ಆಂಟಿ ಯಾಕೆ ಬರಲಿಲ್ಲ....ನಿನ್ನೆ ಮೊನ್ನೆ ಎಲ್ಲಾ ಅವರೇ ಬಂದಿದ್ದು ಅಲ್ವಾ" ಅಂದೆ. 

"ಅವರು ಬೇರೆ ಕೆಲಸದಲ್ಲಿ busy ಇದ್ದಾರೆ.."

" busy ಇದ್ದರೆ.. ? ಅದಕ್ಕೆ ನೀನು ಒಬ್ಬಳೇ ಸೀದಾ ಹೀಗೆ  ಬರುವುದಾ .. ಅದು bachelor ಇರೋ ರೂಮಿಗೆ..ನಿಂಗೆನೇ  ಗೊತ್ತಲ್ಲಾ, ನಾನು ಯಾವ  ಹುಡುಗಿಯರನ್ನು ಕಣ್ಣು ಎತ್ತಿಯೂ ನೋಡಲ್ಲ.. " 

" ಮೊನ್ನೆ ಮಾವಿನ ಮರದ ಹತ್ರ ನನ್ನನ್ನೇ ನೀವು  ನೋಡಿದ ಹಾಗೆ ಆಯಿತು.. "

ಇವಳ ಸಾವ್.. ಭಯಂಕರ ಕಿಲಾಡಿ ಇದ್ದಾಳೆ  ..ಹೂಂ ಸ್ವಲ್ಪ ಜಾಗ್ರತೆ ಇರಬೇಕು.. ಇರ್ಲಿ ಇರ್ಲಿ.. ಮಾಡ್ತೇನೆ ಇವಳಿಗೆ ಅಂತ ಮನಸ್ಸಲ್ಲೇ ಅಂದುಕೊಂಡು.. 

"ಅದು.. ಅದು... ನಾನು ಆ ಮರದ  ಮಾವು ಹಣ್ಣಾಗಿದೆಯೇ ಇಲ್ಲವೋ ಅಂತ ಪರೀಕ್ಷಿಸುತ್ತಿದ್ದೆ .. "

" ಹಣ್ಣಾಗಿತ್ತೋ... "

" ಇಲ್ಲ, ಇನ್ನೂ ಸ್ವಲ್ಪ ಆಗ್ಬೇಕು.. ಹಣ್ಣು.. "

" ನನ್ನ ತಮ್ಮ ಹೇಳಿದ, ಅದು ಹಣ್ಣು ನೋಡುವ ಹಾಗೇ ಇರಲಿಲ್ಲ ಅಂತೆ.. ಹೆಣ್ಣು ನೋಡಿದ ಹಾಗೆ ಇತ್ತಂತೆ.. "

" ಇಲ್ಲ.. ಇಲ್ಲ.. ಮಾವಿನ ಹಣ್ಣನ್ನೇ ನೋಡಿದ್ದು..ನಂಗೆ ಮಾವಿನ ಹಣ್ಣು ಅಂದರೆ ಇಷ್ಟ.." ಮ.. ಅಂದರೆ ಮಲ್ಲಿಗೆ", "ಮಾ.. ಅಂದರೆ ಮಾವು" ಅಂತ ಪೇಸ್ಬುಕ್ ನಲ್ಲಿ ಎರಡು ಪೋಟೋ ಅಲ್ಪಬ್ ಗಳನ್ನೇ ಮಾಡಿಕೊಂಡಿದ್ದೆನೆ.. ಎರಡೂ ಅಷ್ಟು ಇಷ್ಟ "

" ಮತ್ತೆ ಸಂಪಿಗೆ.. "

" ಅದು ನಿನಗೆ ಇಷ್ಟ ಅಲ್ಲವೇ.. ಆದರೂ ಈಗೀಗ ನನಗೂ ಸಂಪಿಗೆ ಅತಿಯಾಗಿ ಇಷ್ಟವಾಗುತ್ತಿದೆ, " ಸ.. ಅಂದರೆ ಸಂಪಿಗೆ" ಅಂತ ಇನ್ನೊಂದು ಪೋಟೋ ಅಲ್ಬಬ್ ಮಾಡಬೇಕು ಸದ್ಯದಲ್ಲೇ" 

"ಹೂಂ.."

" ಹೌದು.. ಇತ್ತೀಚಿನ ದಿನಗಳಲ್ಲಿ ಈ ಸೈಡ್ ಬರದೇ ಇದ್ದ ನೀನು ..ಹೇಗೆ ಒಮ್ಮೆಲೇ ಇವತ್ತು ಪ್ರತ್ಯಕ್ಷ ಆದೆ.." 

"ಅದೇ ಮೊನ್ನೆ ನೀವೇ ಹೇಳಿದ್ರಿ ಅಂತೆ ... ನಾನು ಮನೆಯಲ್ಲಿ ಒಂದು ಕಡ್ಡಿಯನ್ನು ಕೂಡ ಆಚೆಯಿಂದ ಈಚೆ ಎತ್ತಿ  ಇಡಲ್ಲ, ಏನೂ ಕೆಲಸ ಮಾಡಲ್ಲ.. ಸೋಮಾರಿ ಅಂತ.. "

" ಅದಕ್ಕೆ.."

" ಅದಕ್ಕೆ ನಾನೇ ಬಂದೆ...😏😏""

" ಓಹ್.. ಆ ಬೆಚ್ಚದಲ್ಲಿ ಬಂದದ್ದಾ.. "

" ಹೂಂ.... "

" ಮತ್ತೆ ಎಂತ, ನಾನು ಏನಾದರೂ ಸುಳ್ಳು ಹೇಳಿದೆನಾ.. ಪಾಪ ಆಂಟಿ ಒಬ್ಬರೇ ಅಂತ ಎಷ್ಟು ಕಷ್ಟ ಪಡುವುದು...ನಿಜ ಹೇಳು ನೀನೇನಾದರೂ  ಕೆಲಸ ಅಂತ  ಮಾಡ್ತೀಯಾ ಮನೆಯಲ್ಲಿ.. "

" ಮಾಡ್ತೇನೆ... "

" ಏನು ಮಾಡ್ತೀ... "

" ಮಮ್ಮಿ ನಿಮಗೆ ಆವಾಗವಾಗ ಪಾಯಸ ಮಾಡಿ ಕೊಟ್ಟು ಕಳಿಸ್ತಾರೆ ಅಲ್ಲಾ..ಅದಕ್ಕೆ ಬೇಕಾಗುವ ಏಲಕ್ಕಿ ಪುಡಿಯನ್ನು ಪ್ರತೀ ಸಲ ಸಕ್ಕರೆಯೊಂದಿಗೆ ಶ್ರದ್ಧೆಯಲ್ಲಿ ಕುಟ್ಟಿ ಕುಟ್ಟಿ ನುಣ್ಣಗೆ ಪುಡಿ ಮಾಡಿ ಅಮ್ಮನಿಗೆ ಕೊಡುವುದು ಯಾರು ಅಂತ ತಿಳ್ಕೊಂಡ್ರಿ.. .. "

" ಯಾರು..? "

" ಮತ್ತೆ ಯಾರು.. ನಾನೇ.. "

" .. ಅದು ಒಂದು ದೊಡ್ಡ ಕೆಲಸವಾ.. 😏"

" ಅದು ಕೂಡ ಒಂದು ಕೆಲಸವೇ.. "

" ಮತ್ತೆ.. ಈಗ Jolly ಅಲ್ಲಾ.. "

" ಯಾಕೆ..? "

" lock down.. No class.. ಫುಲ್ ರಜಾ.. "

" PG ಮುಗಿದೇ ಒಂದು ವರ್ಷ ಆಯಿತು,ಎಲ್ಲಿಯ ಕಾಲೇಜ್,ನನ್ನ ಬಗ್ಗೆ ಎಲ್ಲವೂ ಗೊತ್ತಿದ್ದು ಜಾಸ್ತಿ ನಾಟಕ ಮಾಡ್ಬೇಡಿ .. "

" ಅಲ್ಲಾ ಈ lock down ಒಂದು ಆಗಿ, ಯಾವುದರದ್ದು  ಸ ನೆನಪೇ ಇಲ್ಲ ನೋಡು.. "

" ಹೂಂ.." 

" ಹೌದು ಯಾವಾಗದಿಂದಲೋ ಕೇಳ್ಬೇಕು ಅಂತ ಇದ್ದೆ, ಮತ್ತೆ ನೀನು ವಾಟ್ಸಪ್ ನಲ್ಲಿ ಎಲ್ಲಾ ಇಲ್ವಾ.. "

"ಫೇಸ್ಬುಕ್ ನಲ್ಲಿಯೇ ಇದ್ದೇನೆ ಅಲ್ವಾ.. "

" ಅಲಾ.. ಫೇಸ್ಬುಕ್ ಅಂದ್ರೆ ತುಂಬಾ ದೂರದವರು ಮತ್ತು ಹೊರಗಿನವರ ತರಹ ಅಂತೆ.. ಆದ್ರೆ ವಾಟ್ಸಪ್ ಅಂದ್ರೆ ನಮಗೇ ತುಂಬಾ ಬೇಕಾದವರು ಮತ್ತು ತುಂಬಾ  ಹತ್ತಿರದವರ ತರಹ ಅಂತೆ.. ಹಾಗಂತ ಫಾರ್ವರ್ಡ್ ಮೆಸೇಜ್ ಕೂಡ ಒಂದು ಬಂದಿತ್ತು, ನಿಂಗೆ ಬರ್ಲಿಲ್ವಾ.. "

" ಹತ್ತಿರ ಅಂದರೆ.. "

" ಹತ್ತಿರ ಅಂದರೆ ಈಗ ನಿಮ್ಮ ಮನೆ.. ನಮ್ಮ ಮನೆ ತುಂಬಾ ಹತ್ತಿರ ಅಲಾ.. ಆ ರೀತಿ  ಹತ್ತಿರ ಹತ್ತಿರದವರು ಎನ್ನುವ ಅರ್ಥ ಬರುತ್ತದೆಯೆನೋ  ಎಂದು ನನಗೆ ಅನಿಸುತ್ತದೆ.. "

" ತಮ್ಮ ಹೇಳಿದ್ದಾನೆ... ನೀವು ದೊಡ್ಡ ಕಿಲಾಡಿ ಅಂತೆ,ದುಷ್ಟ ಅಂತೆ, ನಿಮ್ಮತ್ರ ಜಾಸ್ತಿ  ಮಾತಾಡ್ಬಾರ್ದಂತೆ, ನಿಮ್ಮೊಟ್ಟಿಗೆ ಸೇರ್ಬಾರದಂತೆ.. "

ಅವ ಒಬ್ಬ ಯಾರು ಮರ್ರೆ ಸಾವ್.. 😡

" ಅದು.. ಅದು.. ನೀನು ವಯಸ್ಸಿನ ಹುಡುಗಿ ಅಲಾ.. ಹಾಗಾಗಿ ಅವನಿಗೆ ನಿನ್ನ ಮೇಲೆ ಸ್ವಲ ನಂಬಿಕೆ ಕಮ್ಮಿ, ಜಸ್ಟ್ ಡೌಟು ಅಷ್ಟೇ ....ಅದಕ್ಕಾಗಿ ಹೇಳಿರ್ತಾನೆ"

" ನನ್ನ ಮೇಲೆ ಅಲ್ಲಾ.. ನಿಮ್ಮ ಮೇಲೆಯೇ ಅವನಿಗೆ ಡೌಟು.. "

ಕಲ್ವಾ ಬಾರೀ ಜೋರು ಇದ್ದಾನೆ, ಅವನೊಮ್ಮೆ ಕೈಗೆ ಸಿಗ್ಬೇಕು ಮಾತ್ರ.. ಆವಾಗ ಮಾಡ್ತೇನೆ ಅವನಿಗೆ ಸರಿಯಾಗಿ .. 😡

" ಅಲಾ.. ನೀವು ಯಾವಾಗಲೂ ಈ ಪೋಡಿ, ಪಾಯಸ,ಸಜ್ಜಿಗೆ ಬಜಿಲ್,ಗುಜ್ಜೆ ಕಜಿಪು, ಕೊಟ್ಟು ಕಳುಹಿಸುವುದಕ್ಕಿಂತ ಈ.. ಫಿಜ್ಜಾ, ನೂಡಲ್ಸ್ ಎಲ್ಲಾ ಮಾಡಿ ನಂಗೆ ಕಳುಹಿಸ್ಬಹುದಲ್ಲಾ.. "

" ಅದನ್ನು ನೀವೇ ಹೊರಗಿನಿಂದ ಆರ್ಡರ್ ಮಾಡಿಕೊಂಡು ತಿನ್ಬಹುದು ಅಲ್ಲಾ.. "

" ಹಾಗೇ ಅಲ್ಲಾ.. ಆರ್ಡರ್ ಯಾರೂ ಕೂಡ ಮಾಡಬಹುದು.. ಆದರೆ home made ಫಿಜ್ಜಾ, ನೂಡಲ್ಸ್ ಮಾಡುವುದರ ಮಜಾನೇ ಬೇರೆ ಅಲ್ಲಾ.. "

" ಹೌದು.. ಮಾಡೋದು ಯಾರು.. "

" ನಾನಿರುವಾಗ  ನೀವು ಬೇರೆ ಕಡೆಗೆ ಯಾಕೇ ಹೋಗಬೇಕು.. ಬೇಕಾದ್ರೆ ನಾನೇ ಹೇಳಿ ಕೊಡ್ತೇನೆ ಎಲ್ಲಾ.. 🤷‍♂️"

" ಹೌದಾ..ಲಾಸ್ಟ್ ಟೈಂ ನೀವು ಹೇಳಿದ ಹಾಗೆ  ಧಮ್ ಬಿರಿಯಾನಿ ಮಾಡಲು ಹೋಗಿ, ಬಿರಿಯಾನಿ ಕುಕ್ಕರ್ ನಲ್ಲಿಯೇ ಸಂಪೂರ್ಣ ದಂಬು ಕಟ್ಟಿ,ತುಂಬ ಹೊತ್ತು ಬೇಯಿಸಿದರ ಪರಿಣಾಮ ತಳ ಹಿಡಿದು ಫುಲ್ ಕರಟಿ ಹೋಗಿದ್ದು ಮರೆತು ಹೋಗಿದೆಯಾ.. 😡"

" ಅದು.. ಅದು.. ನೀವು ನನ್ನ instructions ಸರಿಯಾಗಿ ಫಾಲೋ ಮಾಡ್ಲಿಲ್ಲ.."

" ನೀವೇ ಖುದ್ದು ಮುಂದೆ ನಿಂತು, ಎಷ್ಟು ನಿಮಿಷ ಕುಕ್ ಆಗಬೇಕೆಂದು ಮೊಬೈಲ್ ನಲ್ಲಿ ಅಲಾರಂ ಎಲ್ಲಾ ಇಟ್ಟುಕೊಂಡು ನಿಮ್ಮ ಕೈಯಾರೆ ಮಾಡಿದ್ದು ತಾನೇ .. ನನ್ನ ತಮ್ಮ strict ಆಗಿ ಹೇಳಿದ್ದಾನೆ ಮಮ್ಮಿ ಗೆ.. ನಿಮ್ಮಿಂದ ಇನ್ನು ಯಾವುದೇ ಪಾಕ ಪ್ರಯೋಗ ಎಲ್ಲಾ ಮನೆಯಲ್ಲಿ ಮಾಡಿಸಬಾರದಂತೆ.. "

" ಅವ ಯಾಕೆ ಹಾಗೇ.. "

" ನೀವು ಯಾಕೆ ಹೀಗೆ.. "

" ಮತ್ತೆ  ಬೇರೆ ವಿಶೇಷ.. "

"ವಿಶೇಷ ಉಂಟು.. "

" ಎಂತ.. "

" ನಾಳೆ ಸಂಜೆ ಸೇಮೆದಡ್ಡೆ(ಒತ್ತು ಶ್ಯಾವಿಗೆ) ಒತ್ತಲ್ಲಿಕ್ಕೆ ಮನೆಗೆ ಬರಬೇಕಂತೆ..ಮಮ್ಮಿ ಹೇಳಿದ್ದಾಳೆ"

" ನಿನ್ನ ತಮ್ಮ ಯಾಕೆ ಇರೋದು.. ಅವನಲ್ಲೇ ಒತ್ಲಿಕ್ಕೆ ಹೇಳ್ಬಹುದಲ್ಲಾ..ಮೊದಲೇ ಅವನೊಬ್ಬ ವೇಸ್ಟ್ ಬಾಡಿ.. "

"ಅವ ಚಿಕ್ಕವ ಅಲ್ಲಾ..ಅದು ಬೇರೆ ನೀವು ಸೇಮೆದಡ್ಡೆ ಮಾಡುವುದರಲ್ಲಿ ಎತ್ತಿದ ಕೈ.. ಇಲ್ಲಿ ಯಾರದೇ ಮನೆಯಲ್ಲಿ ಸೇಮೆದಡ್ಡೆ ಮಾಡ್ಲಿಕ್ಕೆ ಇದ್ದರೆ ನಿಮ್ಮನ್ನೇ ಕರೆಯುವುದು ಅಂತ ಇಡೀ  ಏರಿಯಾ ಕ್ಕೆ ಗೊತ್ತು.ಸೇಮೆದಡ್ಡೆ ವಿಷಯದಲ್ಲಿ ನೀವು ಅಷ್ಟೊಂದು ಫೇಮಸ್.ನೀವು ಶಕ್ತಿಮಾನ್ ತರಹ ಫಾಸ್ಟ್  ಫಾಸ್ಟ್ ಆಗಿ ಸೇಮೆದಡ್ಡೆ ಒತ್ತುತ್ತೀರಿ.. "

"  ಡಿಂಗ ನ ತರಹ ಅಂತ ಕೂಡ  ಹೇಳಿಬಿಡು.."

" ಬರ್ತಿರೀ ಅಲ್ಲಾ.. ಮಮ್ಮಿ ಹೇಳ್ಲಿಕ್ಕೆ ಹೇಳಿದ್ದಾರೆ.. "

" ಅಲ್ಲಾ ಡಿಗ್ರಿ ಓದುವ ಅಷ್ಟು ದೊಡ್ಡ ಗೋಣ ನಿನ್ನ ತಮ್ಮ, ಇನ್ನೂ ಚಿಕ್ಕ ಮಗುವಾ...ಯಾವಾಗಲೂ ಮೊಬೈಲ್ ನಲ್ಲಿಯೇ ಬಿದ್ದುಕೊಂಡು ಪಬ್ಜಿ,counter strike ಎಲ್ಲಾ ಆಡ್ತಾ ಇರ್ತಾನೆ,ಆಂಟಿಗೆ ಸ್ವಲ್ಪ ಸೇಮೆದಡ್ಡೆ ಒತ್ತಿ ಕೊಡ್ಲಿಕ್ಕೆ ಆಗುದಿಲ್ಲವಾ ಅವನಿಗೆ .. "

" ಅವನಿಗೆ ಅಭ್ಯಾಸ ಇಲ್ಲ... "

" ಮತ್ತೆ ನಾನು ಎಂತ ಅದರಲ್ಲಿ PhD ಮಾಡಿದ್ದೇನಾ.. "

" ಹಾಗಂತ ಸಮಾಜ ಹೇಳ್ತಾ ಉಂಟು.. "

" ಹಾನ್ ಇರಲಿ.. ಅಂದ ಹಾಗೆ ಎಷ್ಟು ಜನರಿಗೆ ಸೇಮೆದಡ್ಡೆ.. "

" ಸಂಬಂಧಿಕರು ಬರ್ತಾರೆ.. ಹಾಗಾಗಿ ಕನಿಷ್ಟ ಪಕ್ಷ ನಲವತ್ತು, ಐವತ್ತು ಆದರೂ ಬೇಕಾಗಬಹುದು .. "

" ಒಂದು ಕಂಡಿಷನ್.. "

" ಏನು..? "

"ಆಂಟಿ ಗೆ ಆಗಲ್ಲ ಎಂದು ನಾನು ಯಾವತ್ತೂ ಹೇಳಲಾರೆ,ಏನೇ ಮಾಡಿದರೂ ನನಗೆ ಅಂತ ಪ್ರೀತಿಯಿಂದ ಕಳುಹಿಸಿ ಕೊಡ್ತಾರೆ, ಆದರೆ ಅಷ್ಟೊಂದು ಶ್ಯಾವಿಗೆ ಒತ್ತಲು ಯಾರಾದ್ದಾದರು ಹೆಲ್ಪ್ ನನಗೆ ಬೇಕೆ ಬೇಕು.. ಅದರಲ್ಲೂ ನಿನ್ನ ವೇಸ್ಟ್ ಬಾಡಿ ತಮ್ಮ ಬಂದ್ರೆ ಮಾತ್ರ ಅಷ್ಟೊಂದು ಸೇಮೆದಡ್ಡೆ ಒತ್ತಿ ಕೊಡಬಲ್ಲೆ.. "

" ನಾನೇ ಬಂದ್ರೆ... "

" ನೀನೇ ಬಂದರೆ  ಬರೀ ನೂರು.. ಇನ್ನೂರು ಯಾಕೇ, ಸಾವಿರ ಸೇಮೆದಡ್ಡೆಯನ್ನೇ ಬೇಕಾದರೆ ಒತ್ತಿ ಕೊಡಬಲ್ಲೆ..😌 "

" ನನಗೂ ನಿಮ್ಮ ಹಾಗೆಯೇ ಸೇಮೆದಡ್ಡೆ ಒತ್ತುವುದನ್ನು ಕಲಿಸುವಿರಾ.. "

"ನಿನಗೆ ಬಸ್ ಬಿಡ್ಲಿಕ್ಕೆ ಬರ್ತದಾ.. "

" ಇಲ್ಲ, ಕಾರು ಬರುತ್ತೆ.. "

" ಮತ್ತೆಂತ.. ಹಾಗಾದರೆ ಸೇಮೆದಡ್ಡೆ ಮಾಡುವುದು ಬಾರೀ easy ಉಂಟು
.. "

" ಆದರೆ ಸೇಮೆದಡ್ಡೆ ಸ್ಟೇರಿಂಗ್ ಕಾರಿನ  ಪವರ್ ಸ್ಟೇರಿಂಗ್ ತರಹ ಅಲ್ಲ ಅಲಾ.. ತುಂಬಾನೇ ಪವರ್ ಬೇಕಲ್ಲಾ ತಿರುಗಿಸ್ಲಿಕ್ಕೆ.. "

" ಅದು ಮುಂದೆ ಸೇಮೆದಡ್ಡೆ ಮಾಡಿ ಮಾಡಿ ನಿನಗೆಯೇ ಅಭ್ಯಾಸ ಆಗ್ತದೆ..ವಿಷಯ ಅದಲ್ಲ, ನೀನು ನನಗೆ ಸೇಮೆದಡ್ಡೆ ಮಾಡಲಿಕ್ಕೆ help ಮಾಡಿದರೆ.. ನಿನ್ನ ತಮ್ಮ ಎಂದಿನಂತೆ ನಾನು ದೊಡ್ಡ ಕಿಲಾಡಿ,ದುಷ್ಟ.. ನನ್ನತ್ರ ಜಾಸ್ತಿ ಮಾತಾಡ್ಬೇಡ, ಸೇರ್ಬೇಡ ಅಂತ ಎಲ್ಲಾ ಪುನಃ ಹೇಳಲ್ವಾ.. . "

" ಅವನಿಗೆ ಸುಮ್ಮನೆ ಡೌಟು.. "

" ಯಾರ ಮೇಲೆ... "

" ನಮ್ಮಿಬ್ಬರ ಮೇಲೆ.. "

" ಏನಂತಾ.. "

" ನಮ್ಮಿಬ್ಬರ ಮಧ್ಯೆ ಏನೋ ಒಂದು ನಡೀತಾ ಇದೆ ಅಂತ.. "

" ಹೌದಾ.. ಹಾಗಾದರೆ ನಮ್ಮಿಬ್ಬರ ಮಧ್ಯೆ ಏನೋ ಒಂದು ನಿಜವಾಗಿಯೂ ನಡೀತಾ ಉಂಟಾ.."

"ಅದು ನೀವೇ ಹೇಳ್ಬೇಕು... "

" ನಿಂಗೆ ಏನು ಅನಿಸ್ತಾ ಉಂಟು.. "

" ನಂಗೆ ಕೆಲವೊಮ್ಮೆ ಮಾತ್ರ ನನ್ನ ತಮ್ಮ ಸರಿಯಾಗಿಯೇ ಹೇಳ್ತಾನೆ ಅಂತ ಅನಿಸ್ತದೆ.. "

" ಅಂದ್ರೆ.... 🙄🤔"

" ನಿಮಗೆ ಸೇಮೆದಡ್ಡೆ ಒತ್ತುವುದು,ಮಮ್ಮಿ ಕಳುಹಿಸಿದ್ದನ್ನು ತಿನ್ನುವುದು ಬಿಟ್ರೆ ಬೇರೆ ಏನೂ ಅರ್ಥ ಆಗಲ್ಲ ಬಿಡಿ ... "

" ನಿಜವಾಗಿಯೂ ಅರ್ಥ ಆಗ್ತಾ ಇಲ್ಲ.. "

" ನಾನು ಈಗ ಹೋಗ್ಬೇಕು... "

" ಆಯ್ತು ಆಯ್ತು.. ಈಗ ನೀನು ಹೋಗು, ಹಾನ್.. ಮತ್ತೆ  ನಾನು ನಾಳೆ ಬರ್ತೆನೆ ಆಯ್ತಾ, ಅದೇ ಸೇಮೆದಡ್ಡೆ ಒತ್ತಿ ಕೊಡಲು.. "

" ಕಾಯ್ತಾ ಇರ್ತಿನಿ..."

ಆಂಟಿ ಮಗಳು ಹೋದಳು. ಅಲಾ.. ಆಂಟಿ ಮಗಳು ಏನೋ ಒಂದು ಹೇಳಿದ್ಲು,ಆದರೆ ಏನು ಅಂತ ನಂಗೆ ಗೊತ್ತಾಗ್ತ ಇಲ್ಲ.. 

ಇರಲಿ ಇರಲಿ.. ಪಾಪ ಆಂಟಿಗೆ ಹೆಲ್ಪ್ ಮಾಡ್ಬೇಕು, ಸಂಬಂಧಿಕರು ಎಲ್ಲಾ ಬರ್ತಾ ಇದ್ದಾರೆ ಅಂತೆ.. ಆದಷ್ಟು ಜಾಸ್ತಿ ಸೇಮೆದಡ್ಡೆ ನಾಳೆ ಒತ್ತಿ ಕೊಡಲೇ ಬೇಕು.

ಸಮಯ ಸಿಕ್ಕರೆ ನಾಳೆ ಆಂಟಿ ಮಗಳು ಮತ್ತು ನಾನು ಇಬ್ಬರೇ ಅಡುಗೆ ಕೋಣೆಯಲ್ಲಿ ಸೇಮೆದಡ್ಡೆಯ ಮಣೆಯ ಸ್ಟೇರಿಂಗ್ ಅನ್ನು ಬಸ್ ಸ್ಟೇರಿಂಗ್ ತರಹ ಒಟ್ಟಿಗೆ ಹಿಡಿದು ಹಾಗೇ ತಿರುಗಿಸುತ್ತಾ ತಿರುಗಿಸುತ್ತಾ... ನಿಧಾನವಾಗಿ ಸೇಮೆದಡ್ಡೆ ಒತ್ತುತ್ತಾ ಒತ್ತುತ್ತಾ.. ಅವಳ ತಮ್ಮ ಹೇಳಿದ 'ಏನೋ ಒಂದು ನಡೀತಾ ಉಂಟು..' ಎನ್ನುವ ಒಗಟನ್ನು ಅವಳಿಂದಲೇ  ಬಿಡಿಸುತ್ತಾ ಬಿಡಿಸುತ್ತಾ...ಅದರೊಂದಿಗೆ  ಸೇಮೆದಡ್ಡೆಯನ್ನು ಸಹ ಮಣೆಯಿಂದ ಹಿತವಾಗಿ ನಯವಾಗಿ ಬಿಡಿಸುತ್ತಾ.. ತೆಗೆಯುತ್ತಾ.... 

ಏನೇ ಆಗಲಿ ಸೇಮೆದಡ್ಡೆಯ ಮಣೆಯೇ ಮುರಿದು ಹೋಗುವವರೆಗೆ ನಾಳೆ ಸ್ಟೇರಿಂಗ್ ತಿರುಗಿಸುತ್ತಾ ಸೇಮೆದಡ್ಡೆ ಒತ್ತಬೇಕು ಅಂತ ಅಂದುಕೊಂಡಿದ್ದೆನೆ 😌😌

.....................................................................................



AB Pacchu 
Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ