ಅಮ್ಮ ಮತ್ತು ಅಕ್ಕಿ ಪಾಯಸ

 

ಮನೆಯಲ್ಲಿ ಏನೂ ಇರ್ಲಿಲ್ಲ,ಸ್ವಲ ಅಕ್ಕಿ ಇತ್ತು. ಅವಳಿಗೆ ಅಕ್ಕಿ  ಪಾಯಸ ಅಂದರೆ ತುಂಬಾ ಇಷ್ಟ,ಆ ರಾತ್ರಿ ಗಡಿಗೆ ತುಂಬಾ ಅವಳಿಷ್ಟದ ಅಕ್ಕಿ ಪಾಯಸವನ್ನೇ  ಮಾಡಿದಳು.ಎಲ್ಲರಿಗೂ ಬಡಿಸಿದಳು. ಬಹಳ ಚೆನ್ನಾಗಿದೆ ಸ್ವಲ್ಪ ಪಾಯಸ ಇದ್ದರೆ ಬಡಿಸುತ್ತೀಯಾ..ಗಂಡ ಕೇಳಿದ. ಅವನಿಗೆ ಪುನಃ ಎರಡು ಸೌಟು ಎಕ್ಸ್ಟ್ರಾ ಬಡಿಸಿದಳು, ಅಮ್ಮ ನಂಗೂ ಸ್ವಲ್ಪ ಹಾಕಮ್ಮ.. ಮಗ ಕೇಳಿದ, ಅವನಿಗೂ ಬೇಕಾಗುವಷ್ಟು ಬಡಿಸಿದಳು. ಅತ್ತೆ ಮಾವನಿಗೂ ಪಾಯಸ ಇಷ್ಟ ಆಗಿತ್ತು, ಅವರಿಗೂ ಹೆಚ್ಚಿಗೆನೇ ಬಡಿಸಿ ಬಿಟ್ಟಳು.ಕೊನೆಯಲ್ಲಿ ಗಡಿಗೆಯಲ್ಲಿ ಒಂದು ಸೌಟು ಪಾಯಸ ಉಳಿದಿತ್ತು.ಮನೆಯಂಗಳದ ಮೆಟ್ಟಿಲ ಬಳಿ ಕುಳಿತುಕೊಂಡು ಹಾಗೇ ತಿನ್ನಬೇಕು ಎಂದು ಗಡಿಗೆಗೆ ಸೌಟು  ಹಾಕಿದಳು,ಮನೆಯ ನಾಯಿ ಮರಿ ಟಾಮಿ ಕುಂಯ್ಯಿ ಕುಂಯ್ಯಿ ಎಂದು ಬಾಲ ಅಲ್ಲಾಡಿಸಿಕೊಂಡು ಅವಳ ಬಳಿ ಬಂತು. ಎಷ್ಟೋ ದಿನಗಳಿಂದ ಅದು ಸರಿಯಾಗಿ ಊಟವೇ ಮಾಡಿರಲಿಲ್ಲ. ಇದ್ದ ಒಂದು ತುತ್ತು ಪಾಯಸವನ್ನು ನಾಯಿಗೆನೇ ಹಾಕಿ ಬಿಟ್ಟಳು, ಒಂದು ಚೂರು ಬಿಡದೇ ಟಾಮಿ ಪಾಯಸವನ್ನು ನೆಕ್ಕಿ ನೆಕ್ಕಿ ತಿಂದು, ಖುಷಿ ಯಿಂದ ಅವಳನ್ನು ಮೂಸಿ ಮೂಸಿ ಬಾಲ ಅಲ್ಲಾಡಿಸಿ ಕೃತಜ್ಞತೆ ಸೂಚಿಸಿ ಹೊರಟು ಹೋಯಿತು. ಅದರ ಖುಷಿ ಕಂಡು ಅವಳ ಹೊಟ್ಟೆ ತುಂಬಿತು. ಒಂದು ಲೋಟ ತಣ್ಣೀರು ಕುಡಿದು ಹಾಗೇ ಕಣ್ತುಂಬಾ ನಿದ್ದೆ ಮಾಡಲು ಮಲಗಿ ಬಿಟ್ಟಲು..

.................................................................................

#ಇಷ್ಟೇ..

AB Pacchu
Moodubidire



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ