ಜಗಳ ಎಂಬ ರೋಚಕ ಕದನ
#ಜಗಳ_ಎಂಬ_ರೋಚಕ_ಕದನ..
ಜಗಳಗಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ,ಆದರೆ ನೋಡಲು ಮಾತ್ರ...ಸ್ವತಃ ಮಾಡಲು ಅಲ್ಲ. 🙄🤔
ಜಗಳದ ಮೈನ್ ರೂಲ್ಸ್ ಏನೆಂದರೆ ಎರಡು ಜನ ಪರಸ್ಪರ ಸಿಕ್ಕಾಪಟ್ಟೆ ಹೊಡೆದು ಕೊಳ್ಳಬೇಕು. ನಾಲ್ಕು ಜನ ಅದನ್ನು ಕೈ ಕಟ್ಟಿಕೊಂಡು ನೋಡಬೇಕು.ನೋಡುವವರ ಸಂಖ್ಯೆ ಜಾಸ್ತಿ ಆದಷ್ಟು,ಅದಕ್ಕೆ ಒಂದು ವಿಶೇಷ ಕಳೆ ಬರುವುದು.ಹೊಡೆದಾಡಿಕೊಳ್ಳುವವರಿಗೆ ಹುಮ್ಮಸ್ಸು ಹೆಚ್ಚಾಗುವುದು
ಜಗಳಗಳು ಎಲ್ಲೆಲ್ಲಿಯೂ ಆಗುತ್ತದೆ.ಅದರಲ್ಲಿಯೂ ನಾನಾ ತರಹದ ಜಗಳಗಳು ದಿನ ನಿತ್ಯ ನಿರಂತರ ಆಗುತ್ತಲೇ ಇರುತ್ತದೆ. ಕೆಲವು ಜಗಳಗಳು ನೋಡುವವರಿಗೆ ಅಂತು ಸಿಕ್ಕಾಪಟ್ಟೆ ಮಜಾ ಕೊಡುತ್ತದೆ.
ನನಗೂ ಕೂಡ ಕೆಲವು ಜಗಳಗಳು ವಿಪರೀತ ಕಿಕ್ ಕೊಡುತ್ತದೆ.ಎಷ್ಟು ಟೈಂ ವೇಸ್ಟ್ ಆದರೂ ಪರವಾಗಿಲ್ಲ,ಡ್ಯೂಟಿ ಗೆ ಹೋಗಲು ಲೇಟ್ ಆದರೂ ಪರವಾಗಿಲ್ಲ,ನೆಂಟರು ಬಂದಾಗ ಮನೆಗೆ ಹಾಲು ತೆಗೆದುಕೊಂಡು ಹೋಗಲು ಲೇಟ್ ಆದರೂ ಪರವಾಗಿಲ್ಲ.. ನಾನು ಅದನ್ನು ಸಂಪೂರ್ಣ ಮುಗಿಯುವವರೆಗೂ ನೋಡುತ್ತಲೇ ಅಲ್ಲಿಯೇ ನಿಂತು ಬಿಡುತ್ತೇನೆ. ಯಾರಾದರೂ ಬಿಡಿಸಲು ಹೋದರೆ "ಸ್ವಲ್ಪ ನಿಲ್ಲಿ ಮರ್ರೆ, ಎಷ್ಟು ಚೆನ್ನಾಗಿ ಶ್ರದ್ಧೆಯಿಂದ ಲಡಾಯಿ ಮಾಡ್ತಾ ಇದ್ದಾರೆ, ನೀವು ಯಾಕೆ ಕಬಾಬ್ ಮೇ ಹಡ್ಡಿ ಆಗಿ ಅಡ್ಡಿ ಪಡಿಸುವ ಪ್ರಯತ್ನ ಮಾಡುತ್ತೀರಾ, ಏನು ಒಂದು ಜನರೀ ನೀವು.." ಎಂದು ಅವರನ್ನು ತಡೆದು ನಿಲ್ಲಿಸಿ, ನಡೆಯುತ್ತಿರುವ ಜಗಳ ನಿರಂತರವಾಗಿ ಸರಾಗವಾಗಿ ಮುಂದುವರಿಯಲು ನನ್ನ ಎಲ್ಲಾ ಸಹಕಾರವನ್ನು ನೀಡುತ್ತೇನೆ.ಯಾವಾಗಲೂ "The show must go on" ಎನ್ನುವುದು ನನ್ನ ಪಾಲಿಸಿ.
ಓಕೆ,ಈಗ ಕೆಲವು ಪೆಟ್ಟ್ ಲಡಾಯಿ ಗಳ ಬಗ್ಗೆ ಸ್ವಲ್ಪ ವಿಶೇಷ ಗಮನ ಹರಿಸುವ.
ಸಿಟಿ ಬಸ್ ಗಳ ಕಂಡಕ್ಟರ್ ಗಳು,ಎದುರಾಳಿ ಬಸ್ ನ ಡ್ರೈವರ್ ಗೆ "ಬಲ ಮಗ್ಗ,ಬಲ.. ತಿರ್ತ್ ಬಲ, ಇನಿ ನಿನನ್ ದೀಫುಜಿ.."(ಬಸ್ ನಿಂದ ಕೆಳಗೆ ಬಾ.. ನಿನ್ನನ್ನು ಇವತ್ತು ಒಂದು ಕೈ ನೋಡೆ ಬಿಡ್ತೇನೆ) ಎನ್ನುವ ಡೈಲಾಗ್ ನೊಂದಿಗೆ ರೋಡ್ ನಡುವಿನಲ್ಲಿಯೇ ನಡೆಯೋ ಪೆಟ್ ಲಡಾಯಿ ಯಲ್ಲಿ ಮಾತಿನ ಭಾಣಗಳು ಪುಂಖಾನುಪುಂಖವಾಗಿ ಈ ಸೈಡ್ ನಿಂದ ಆ ಸೈಡ್ ಗೆ, ಆ ಸೈಡ್ ನಿಂದ ಈ ಸೈಡ್ ಗೆ ಹೋಗುತ್ತಲೇ ಇರುತ್ತದೆ.ಒಬ್ಬ ಪಾರ್ಥ ಆದರೆ ಮತ್ತೊಬ್ಬ ಸೂರ್ಯ ಪುತ್ರ ಕರ್ಣ.ಆದರೆ ಮುಂದೆ ಇವರುಗಳು ಜಿಗರಿ ದೋಸ್ತಿ ತರಹ ಇರುವುದನ್ನು ಕೂಡ ನಾವು ಬಸ್ ಸ್ಟ್ಯಾಂಡ್ ಗಳಲ್ಲಿಯೇ ನೋಡಬಹುದು.
ಇನ್ನೊಂದು ಫೈಟ್ ಈ ಬೋರ್ ವೆಲ್ ಗಳ ಬಳಿ ಹೆಂಗಸರು ತಮ್ಮ ಕಲರ್ ಕಲರ್ ಪ್ಲಾಸ್ಟಿಕ್ ಕೊಡಪಾನದಲ್ಲಿ ಪರಸ್ಪರ ಹೊಡೆದುಕೊಳ್ಳುವುದು. ಅದು ಹೆಚ್ಚಾಗಿ ಸಮ್ಮರ್ ನಲ್ಲಿ ನೀರು ಖಾಲಿಯಾಗುತ್ತಾ ಬರುವಾಗ ನಡೆಯೋ ಫೈಟ್. WWE ಫೈಟಿಂಗ್ ನ ವಿಶೇಷ Summer Slam ತರಹ.ಆದರೆ ಅದನ್ನು ಸಿನಿಮಾ ದಲ್ಲಿ ಮಾತ್ರ ನೋಡಿದ್ದು. ಈಗ ಅಂತು ಬೋರ್ ವೇಲ್ ಗಳೇ ಇಲ್ಲ. ಆದಷ್ಟು ಬೇಗ ಜಾಸ್ತಿ ಬೋರ್ ವೇಲ್ ಗಳನ್ನು ತೆಗೆಸಿ ಮಹಿಳಾ ಮಣಿಗಳಿಗೆ ಪೆಟ್ ಲಡಾಯಿ ಮಾಡಲು ಅವಕಾಶ ಒಂದು ಮಾಡಿಕೊಡಲೇ ಬೇಕು. ಉತ್ಸಾಹಿ ಮಹಿಳೆಯರು ಇದರ ಬಗ್ಗೆ ದಂಗೆ ಎದ್ದು ಸರಕಾರಗಳ ಗಮನ ಸೆಳೆಯಬೇಕು.
ಗಂಡ ಕುಡಿದು ಬಂದಾಗ ಒಂದು ದಿನ ತನ್ನೆಲ್ಲಾ ಸಂಯಮ saturation point ರೀಚ್ ಆದಾಗ, ಹೆಂಡತಿ ಗಂಡನಿಗೆ ಸಕ್ಕತ್ ಆಗಿ ಕೊಡ್ತಾಳೆ ಅಲ್ಲಾ ಮಂಜಾ,ಪಂಚು, ಡಿಚ್ಚಿ ಎಲ್ಲಾ.. ಅದು, ಅದು ಫೈಟ್ ಅಂದ್ರೆ. ಆದರೆ ಬೇಜಾರ್ ಎಂತ ಗೊತ್ತಾ ಅದು ಎಲ್ಲಾ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ನಡೆಯೋದು, ನಮ್ಮಂತಹ ನಿಮ್ಮಂತಹ ಪೆಟ್ಟ್ ಲಡಾಯಿ ಅಭಿಮಾನಿಗಳಿಗೆ ಅದನ್ನು ನೋಡುವ ಭಾಗ್ಯ ಇಲ್ಲ. ಜಾಸ್ತಿ ಅಂದರೆ ಪಕ್ಕದ ಮನೆಯವರಿಗೆ ಬೈಗುಳ ಗಳನ್ನು ಕಿವಿಗೆ ಹಾಕಿಕೊಳ್ಳಬಹುದು ಅಷ್ಟೇ.
ಈ ಟಿ.ವಿ ಗಳಲ್ಲಿ ಡಿಬೇಟ್ ಗೆ ಅಂತ ಬರ್ತಾರೆ ಅಲ್ಲಾ, ಅವರು ಒಂದು ಟೈಂ ನಲ್ಲಿ ಎಷ್ಟು ಆವೇಶಕ್ಕೆ ಇಳಿದಿರ್ತಾರೆ ಅಂದರೆ ಎದುರಿನವನ ಮುಖ ಮೂತಿ ಚಚ್ಚಿ ಬಿಡುತ್ತಾರೋ ಅಂತ ಅನ್ನಿಸಿ ಬಿಡುತ್ತದೆ.ನಂಗೆ ಯಾವಾಗಲೂ ಅಂತವರು ಡಿಬೇಟ್ ಗೆ ಬಂದಾಗ ಅವರು ಚರ್ಚೆ ಮಾಡುವುದಕ್ಕಿಂತಲೂ ನಿಜವಾದ ಫಿಸಿಕಲ್ ಪೆಟ್ಟ್ ಲಡಾಯಿ ಮಾಡಿ ಬಿಟ್ಟರೆನೇ ಜಾಸ್ತಿ ಇಷ್ಟ ಆಗ್ತದೆ.ಡಿಬೇಟ್ ಗೆ ಬರುವವರು ಒಮ್ಮೆ ತಮ್ಮ ತಮ್ಮ ಶರ್ಟ್ ಗಳನ್ನು ಪರಸ್ಪರ ಹರಿದುಕೊಂಡು ಹಾಗೇ ಕಿತ್ತಾಡುವುದನ್ನು ನೋಡಬೇಕೆಂದು ನನ್ನ ಬಹುದಿನಗಳ ಆಸೆ... ಹಾಗೇ ಹಾರಿ ಹಾರಿ ಪೆಟ್ ಲಡಾಯಿ ಮಾಡಿ ವೀಕ್ಷಕರ ಮನ ಗೆಲ್ಲಬೇಕು ಅವರು.ನಾನು ಅದಕ್ಕಾಗಿಯೇ ಟಿವಿ ಮುಂದೆ ಕುಳಿತುಬಿಡುತ್ತೇನೆ.ಆದರೆ ಅವರೆಲ್ಲಾ ಹಾಗೇ ಮಾಡದೇ ನಿರಾಸೆ ಮೂಡಿಸಿದ್ದೇ ಜಾಸ್ತಿ.
ಇನ್ನು ಕಾಲೇಜಿಗೆ ಬರುವ. ಕಾಲೇಜಿಗೆ ಬಂದ ಮೇಲೆ ಹಾಸ್ಟೆಲ್ ನೊಳಗೆ ಬರಲೇ ಬೇಕು. ಹಾಸ್ಟೆಲ್ ನಲ್ಲಿ ಪೆಟ್ಟ್ ಲಡಾಯಿ ಅರಳೋದು ನಡು ರಾತ್ರಿಯಲ್ಲಿ. ಜ್ಯೂನಿಯರ್ ಹಾಗೂ ಸೀನಿಯರ್ ಗಳ ನಡುವೆ ಅಲ್ಲಿ ಕುರುಕ್ಷೇತ್ರ ನಡೆಯುತ್ತೆ. ಇಲ್ಲಿ ಸೀನಿಯರ್ ಕೌರವರು, ಅಂದರೆ ಅಧರ್ಮಿ ಗಳು. ಪಾಪದ ಪಾಂಡವರು ಅಂದರೆ ಜ್ಯೂನಿಯರ್ ಗಳು.ಮಹಾಭಾರತ ಧಾರವಾಹಿಯಲ್ಲಿ ಶಕುನಿ ಪಾತ್ರಧಾರಿ ಪ್ರಣೀತ್ ಭಟ್ ಹೇಳುವಂತೆ " जो धर्म के रास्ते पर चलते हैं, उनके साथ बहुत अधर्म किया जा सकता है, क्योंकि वो धर्म का रास्ता कभी नहीं छोड़ते और हम उनके साथ अधर्म पर अधर्म किये जायेंगे..". ಹೀಗೆ ಹಾಸ್ಟೆಲ್ ಸೀನಿಯರ್ ಗಳು intro, ragging ಹೆಸರಿನಲ್ಲಿ ಎಷ್ಟು ಬೇಕಾದರೂ ಅಧರ್ಮದ ಮೇಲೆ ಅಧರ್ಮ ಮಾಡಬಹುದು. ನಾನು ಜ್ಯೂನಿಯರ್ ಆಗಿದ್ದಾಗ ನನಗೆ ಭಯಂಕರವಾಗಿ introduction ಮಾಡಿಸುತ್ತಿದ್ದ ಸೀನಿಯರ್ ಗೆ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದೆ, ಯಾಕೆ ನಾನು ಹಾಗೇ ಹಾರಿ ಇವನ ದವಡೆಗೆ ಒಂದು strong ಪಂಚ್ ಕೊಟ್ಟು ಇವನ ನಾಲ್ಕು ಹಲ್ಲು ಮುರಿದು ಕೈಗೆ ಕೊಡಬಾರದು ಎಂದು. ಜಸ್ಟ್ ಅಂದು ಕೊಂಡದ್ದು ಮಾತ್ರ ಆಯ್ತಾ,ಏನು ಸ ಮಾಡ್ಲಿಲ್ಲ ಮಾತ್ರ. ಇದೆಲ್ಲಾ ಪೆಟ್ ಲಡಾಯಿ ಶುರುವಿನಲ್ಲಿ ಮಾತ್ರ, ಮುಂದೆ ಹೋದಂತೆ ಸೀನಿಯರ್ ಜ್ಯೂನಿಯರ್ ಭಯಂಕರ ಫ್ರೆಂಡ್ಸ್ ಆಗೋದು ಹಾಸ್ಟೆಲ್ ನಲ್ಲಿಯೇ.ಇಲ್ಲಿ ಜ್ಯೂನಿಯರ್ ಪಾಂಡವರು ತಾವು ಮುಂದೆ ಸೀನಿಯರ್ ಆದಾಗ ಕೌರವರಾಗಿ ಬದಲಾಗುತ್ತಾರೆ ಅನ್ನುವುದು ಬೇರೆ ವಿಷಯ ಬಿಡಿ. ಅದು ಜಗದ ನಿಯಮ,ಜ್ಯೂನಿಯರ್ ಇದ್ದಾಗ ನಾವು ಅನುಭವಿಸಿರಲಿಲ್ಲವ.. ಅಂತ ನಾವು ಸೀನಿಯರ್ ಆದಾಗ ಸಬೂಬು ಕೊಟ್ಟು ತರ್ಕ ಗಳಿಂದ ತಪ್ಪಿಸಿಕೊಳ್ಳು ಕಲೆ ನಮಗೆ ಗೊತ್ತಿರಬೇಕು ಅಷ್ಟೇ .ಈ ಪೆಟ್ ಲಡಾಯಿ ನೋಡುವ ಭಾಗ್ಯ ಕೂಡ ಕೇವಲ ಹಾಸ್ಟೆಲ್ ನ ವಿಧ್ಯಾರ್ಥಿಗಳಿಗೆ ಮಾತ್ರ ಸೀಮಿತ.
ಹೀಗೆ ಪೆಟ್ ಲಡಾಯಿ ಗಳದ್ದು ಒಂದು ವಿಶಿಷ್ಟವಾದ ಲೋಕ. ಕೆಲವರಿಗೆ ಸುಮ್ಮನೆ ಸುಮ್ಮನೆ ಸಿಕ್ಕಿದವರ ಬಳಿ ಪೆಟ್ ಮಾಡ್ಲಿಕ್ಕೆ ಮಜಾ ಆದರೆ,ಇನ್ನು ಕೆಲವರಿಗೆ ಸುಮ್ಮನೆ ನೋಡ್ಲಿಕ್ಕೆ ಮಜಾ.
ಆದರೂ ಕೊನೆಯಲ್ಲಿ ನಾನು ಹೇಳುವುದು ಏನೆಂದರೆ ಫನ್ನಿ ಫೈಟ್ ಗಳನ್ನು ಮಾತ್ರ ನೋಡಿ,ಸಾಧ್ಯ ಆದರೆ ಬಿಡಿಸಿ.
ಏನೇ ಆದರೂ ಸಾಯುವ ಹಾಗೇ ಹೊಡೆದುಕೊಳ್ಳುತ್ತಿದರೆ ದಯವಿಟ್ಟು ಬಿಡಿಸಿ ಬಿಡಿ ಮರ್ರೆ ಸಾವ್.. ಮತ್ತೆ ಹೊಡೆದಾಡಿಕೊಳ್ಳುವವರು ನಿಜವಾಗಿಯೂ ಸತ್ತೇ ಹೋದರೆ, "ಸುಮ್ಮನೆ ಪೆಟ್ ಲಡಾಯಿ ನೋಡುವುದರಲ್ಲಿ ಮಜಾ ಇದೆ.. ಅದಕ್ಕಾಗಿ ಅವರು ಸಾಯುವವರೆಗೆ ನಾವು ನೋಡುತ್ತಾ ನಿಂತೆವು, ಇದನ್ನು ನಮಗೆ ಹೇಳಿಕೊಟ್ಟದ್ದು ಇವ " ಅಂತ ನಾನು ಹೇಳಿದ್ದನ್ನೇ ಸೀರಿಯಸ್ ಆಗಿ ತಗೊಂಡು ಮುಂದೆ ಅದನ್ನು ನೀವು ನನ್ನ ತಲೆಗೆ ಕಟ್ಟಿದರೆ, ಈ ಭವ್ಯ ಸಮಾಜ ನೆಕ್ಸ್ಟ್ ಪೆಟ್ ಲಡಾಯಿಗೆ ಕತ್ತಿ, ಪಿಕ್ಕಾಸು, ಹಾಕಿ ಸ್ಟಿಕ್ ಎಲ್ಲಾ ಹಿಡಿದುಕೊಂಡು ನನ್ನ ಬಳಿಗೆಯೇ ಒಡೋಡಿ ಬರ್ಬಹುದು ಮರ್ರೆ.. 🙆🏼♂️
🙄🤔🏃🏻🏃🏻
.....................................................................................
#ಏನೋ_ಒಂದು..
Ab Pacchu
Moodubidire

Comments
Post a Comment