ಇವರೆಲ್ಲ ಯಾಕೆ ಹೀಗೆ..?
ಬೇಕಿದ್ದರೆ ಗಮನಿಸಿ...
"ನಾನೊಂದು ವಿಷಯ ಹೇಳ್ಲಾ...." ಅಂತ ಹೇಳುವವರು, ಯಾವಾಗಲೂ ನಮಗೆ ಒಂದಕ್ಕಿಂತ ಜಾಸ್ತಿ ವಿಷಯವನ್ನೇ ಹೇಳ್ತಾರೆ..
" ನನ್ನ ಪ್ರಕಾರ ಇದು ನಿಜವಾಗಿಯೂ ..." ಅಂತ ಮಾತು ಶುರು ಮಾಡುವವರು ಅವರ ಪ್ರಕಾರ ಬಿಟ್ಟು ಬೇರೆ ಎಲ್ಲರ ಪ್ರಕಾರದ ಬಗ್ಗೆಯೇ ಹೇಳ್ತಾರೆ..
"ನೋಡಿ,ನೀವು ಒಂದು ಕೆಲಸ ಮಾಡಿ..." ಎಂದು ಹೇಳುವವರು ಕಾಮನ್ ಆಗಿ ಹತ್ತು ಕೆಲಸದ ಬಗ್ಗೆ ಹೇಳಿಯೇ ಹೇಳ್ತಾರೆ..
" ವಿಷಯ ಏನೆಂದರೆ..." ಅಂತ ಹೇಳೋರು,ಮುಖ್ಯ ವಿಷಯ ಬಿಟ್ಟು ಬೇರೆ ಎಲ್ಲಾ ವಿಷಯಗಳ ಬಗ್ಗೆ ಹೇಳ್ತಾರೆ..
" ಒಂದು ವೇಳೆ ನಾನಾಗಿದಿದ್ದರೆ ಉಂಟಲ್ಲಾ..." ಅಂತ ಶುರು ಮಾಡುವವರು ಯಾವುದೇ ಮೂವಿಯ ಆಕ್ಷ್ಯನ್ ಹೀರೋಗಿಂತಲೂ ಕಡಿಮೆ ರೇಂಜಿನ ಡೈಲಾಗ್ ಹೇಳೋದೇ ಇಲ್ಲ...
" ಹಿಂದೆ ನಮ್ಮ ಕಾಲದಲ್ಲಿ ಎಲ್ಲಾ ಉಂಟಲ್ಲಾ..." ಅಂತ ನಿನ್ನೆ ಮೊನ್ನೆ ಹುಟ್ಟಿದವರೆಲ್ಲಾ ಮಾತು ಮಾತಿಗೂ ಹೇಳುವಾಗ,ಒಂದು ಟೈಂ ಅಲ್ಲಿ ನಿಜವಾಗಿಯೂ ಇವರೆಲ್ಲಾ ಡೈನೊಸಾರ್ ಗಳ ಜೊತೆಗೆನೇ ವಾಸಿಸುತ್ತಿದ್ದವರೆನೋ ಅನ್ನೋ ಫೀಲ್ ಬರಿಸ್ತಾರೆ..
ಯಾಕೆ ಫ್ರೆಂಡ್ಸ್.. ಈ ಸಮಾಜ ಯಾಕೆ ಹೀಗಿದೆ?!
ಯಾಕೆ... ಯಾಕೆ... ಯಾಕೆ...
🙄🤔🏃🏻🏃🏻🏃🏻
ab

Comments
Post a Comment