ಹುಳಿ ಹುಳಿ ದ್ರಾಕ್ಷಿ
ಪ್ರೂಟ್ಸ್ ತಗೊಳ್ಲಿಕ್ಕೆ ಅಂತ ಪ್ರೂಟ್ಸ್ ಅಂಗಡಿಗೆ ಹೋದದ್ದು..
"ಮತ್ತೆ ನಾವೆಲ್ಲ ಪ್ರೂಟ್ಸ್ ತಗೊಳ್ಲಿಕ್ಕೆ ಹೂವಿನ ಅಂಗಡಿಗೆ ಹೋಗ್ತೇವಾ..? " ಎಂದೆಲ್ಲಾ ಕೇಳ್ಬೇಡಿ.
ನಂಗೆ ಸ ಗೊತ್ತು ಯಾವ ಅಂಗಡಿಗೆ ಹೋಗ್ಬೇಕು ಎಂದು.ಆದ್ರೂ ಸ ಒಂದು ಮಾತಿಗೆ ಇರ್ಲಿ ಅಂತ ಹೀಗೆ ಹೇಳಿದ್ದು ಅಷ್ಟೇ ಆಯ್ತಾ.
ನಮ್ಮ ಗುರ್ತದವರದ್ದೇ ಅಂಗಡಿ.ಅದು ಪುರುಷೋತ್ತಮರ ಪ್ರೂಟ್ಸ್ ಅಂಗಡಿ.
ಅವರಿಗೂ ನನ್ನ ಪರಿಚಯ ಚೆನ್ನಾಗಿಯೇ ಇದೆ. ಅಪ್ಪನ ಭಯಂಕರ ಪ್ರೆಂಡ್ ಕೂಡ ಹೌದು ಅವರು.
ಊರಲ್ಲೆಲ್ಲಾ "ಪ್ರೂಟ್ಸ್ ಪುರ್ಸ..ಪ್ರೂಟ್ಸ್ ಪುರ್ಸ.. " ಎಂದು ಅವರು ಬಹಳನೇ ಫೇಮಸ್.
ಆದರೂ ನಮ್ಮ ಪುರ್ಸಣ್ಣ ಭಯಂಕರ ಕಂಜೂಸ್ ಜನ.ಹಾಳಾದ ಹಣ್ಣುಗಳನ್ನು ಕೂಡ ಒಳ್ಳೆಯ ಹಣ್ಣುಗಳೊಂದಿಗೆ ಮಿಕ್ಸ್ ಮಾಡಿ ಮಾರಿ ಸಕ್ಕತ್ ಕಾಸು ಮಾಡುವ ಅಸಾಮಿ ಈ ಪ್ರೂಟ್ಸ್ ಪುರ್ಸಣ್ಣ.
ಹೋದ ಕೂಡಲೇ "ಓಹ್.. ನೀಲಮೇಘ... ಎಂತ ಮಾರಾಯ ಮರಿಯಾಲದಲ್ಲಿ(ಮಳೆಗಾಲ) ನಿನ್ನ ಅಪ್ಪ ನೀಲಣ್ಣನದ್ದಾಗಲಿ,ನಿನ್ನದಾಗಲಿ ಈ ಕಡೆ ಸವಾರಿಯೇ ಇರ್ಲಿಲ್ಲ...ಬರೀ ಪೆಲಕಾಯಿ ತಿಂದು ತಿಂದೇ ಇಡೀ ಮರವನ್ನು ಸಪಾಯಿ ಮಾಡಿ ಮಳೆಗಾಲ ದೂಡಿದ್ದಾಂತ ಅಲಾ.. ನಮ್ಮಂತಹ ಪಾಪದ ಹಣ್ಣು ವ್ಯಾಪಾರಿಗಳ ನೆನಪು ನಿಮಗೆಲ್ಲಾ ಹೇಗೆ ಆಗ್ಬೇಕು ಅಲಾ.."
ಅವರದ್ದೊಂದು ರಾಗ ಇದ್ದದ್ದೇ... ಡೈಲಿ ಹೋದ್ರೆ ಸ ಹೀಗೇ ಹೇಳೋರು.
" ಮತ್ತೆ ಕೆಲಸ ಏನಾದರೂ ಸಿಕ್ಕಿತ್ತಾ ಅಥವಾ ಅದೇ ಮಾಮೂಲಿ ಉತ್ತರವಾ ನಿನ್ನದು, ಅದೇ.. ಕೆಲಸ ಸಿಕ್ಕಿಲ್ಲಾ, ಇನ್ನೂ ಹುಡುಕ್ತಾ ಇದ್ದೀನಿ ಅನ್ನೋದು... " ಅಂದರು ಪುರ್ಸಣ್ಣ ಉಡಾಫೆಯಾಗಿ.
ಈ ಊರಿನವರಿಗೆ ಉಂಟಲ್ಲಾ.. ನನ್ನ ಟೆನ್ಶನ್ ಅವರ ಟೆನ್ಶನ್ ಆಗಿ ಬಿಟ್ಟಿದೆ. ನಾನೇ ಕಾಲೇಜು ಮುಗಿದರೂ ಇನ್ನೂ ಕೆಲಸ ಸಿಕ್ಕಿಲ್ಲ ಅಂತ ಯಾವುದೇ ಟೆನ್ಶನ್ ಅಲ್ಲಿ ಇಲ್ಲ.. ಆದರೆ ಇವರಿಗೆ ಮಾತ್ರ ಸದಾ ನನ್ನ ಕೆಲಸದ್ದೇ ಟೆನ್ಶನ್ 😏
ಇರಲಿ ಇರಲಿ.. ಏನೂ ಮಾಡ್ಲಿಕ್ಕೆ ಆಗಲ್ಲಾ.. ನಾನು ಕೂಡ ಅವರಿಗೆ ಮಾಮೂಲಿನಂತೆ,ಎಲ್ಲರಿಗೆ ಹೇಳೋ ಹಾಗೆ" ಕೆಲಸ ಸಿಕ್ಕಿಲ್ಲಾ, ಇನ್ನೂ ಹುಡುಕ್ತಾ ಇದ್ದೀನಿ..." ಅಂದೆ.
ಅಂಗಡಿಯ ಮುಂದೆ ಚಂದವಾಗಿ ಕಣ್ಣಿಗೆ ಕಾಣುವಂತೆ ದ್ರಾಕ್ಷಿ ಹಣ್ಣನ್ನು ಒಪ್ಪವಾಗಿ ಪೇರಿಸಿ ಇಟ್ಟಿದ್ದರು ಪುರ್ಸಣ್ಣ.
Yesss.. ನಾನಿವತ್ತು ದ್ರಾಕ್ಷಿಯನ್ನೇ ತಗೋಬೇಕು ಎಂದು ಮನಸ್ಸಿನಲ್ಲಿಯೇ ದೃಡ ನಿರ್ಧಾರ, ದೃಢ ಸಂಕಲ್ಪ ಮಾಡಿದೆ.
ಪ್ರತೀ ಸಲ ಪ್ರೂಟ್ಸ್ ಅಂಗಡಿಗೆ ಹೋದಾಗ, ದ್ರಾಕ್ಷಿ ನೋಡಿದಾಗ ದ್ರಾಕ್ಷಿಯನ್ನೇ ತಗೋಬೇಕು ಅಂತ ಅನಿಸುತ್ತೆ.. ಆದರೆ ಯಾವತ್ತೂ ತಗೊಂಡು ಹೋದದ್ದಿಲ್ಲ...
ಆದರೆ ಅಲ್ಲಿ ಗ್ರೀನ್ ಕಲರ್ ದ್ರಾಕ್ಷಿ ಮತ್ತು ಬ್ಲ್ಯಾಕ್ ಕಲರ್ ದ್ರಾಕ್ಷಿ ಎರಡೂ ಇತ್ತು.
ಈಗ ಗ್ರೀನ್ ದ್ರಾಕ್ಷಿ ತಗೊಳ್ಳುವುದಾ.. ಅಥವಾ ಬ್ಲ್ಯಾಕ್ ದ್ರಾಕ್ಷಿ ತಗೊಳ್ಳುವುದಾ ಅಂತ ಸಿಕ್ಕಾಪಟ್ಟೆ confusion ಆಯ್ತು.
ಈ ಗೊಂದಲದ ನಡುವೆ,ಅದಾ ಇದಾ.. ಇದಾ ಅದಾ.. ಅಂತ ನಿರ್ಧರಿಸೋ ಟೈಂ ಅಲ್ಲಿ.. ಹಾಗೇ ಹತ್ತು ಹದಿನೈದು ದ್ರಾಕ್ಷಿ ಕೈಗೆ ತೆಗೆದು ಕೊಂಡು ಬಾಯಿಗೆ ಹಾಕ್ಕೊಂಡು ತಿಂದದ್ದು ನನಗೆ ಗೊತ್ತೇ ಆಗಿರಲಿಲ್ಲ ಪ್ರೆಂಡ್ಸ್.
ಆದರೆ ಪುರ್ಸಣ್ಣ ಬಾರೀ ಸೂಕ್ಷ್ಮವಾಗಿ ಅದನ್ನೆಲ್ಲಾ ಗಮನಿಸಿದ್ದರು!
ಹೇಗೋ ಟೇಸ್ಟ್ ಗೆ ಅಂತ ಹತ್ತಿಪ್ಪತ್ತು ದ್ರಾಕ್ಷಿ ತಿಂದಿದ್ದು ಆಯ್ತು ಅಲಾ.. ಇನ್ನು ಪುನಃ ಅದನ್ನೇ ಯಾಕೆ ಮನೆಗೆ ಕೂಡ ತಗೊಂಡು ಹೋಗಿ ತಿನ್ನುವುದು ಅಂತ,ಕೊನೆಗೆ ಅರ್ಧ ಕೆಜಿ ಚಿತ್ತುಪುಲಿಯನ್ನು(ಕಿತ್ತಾಳೆ) ಪ್ರೂಟ್ಸ್ ಅಂಗಡಿಯಿಂದ ತಗೊಂಡು ಮನೆಗೆ ಹೋದೆ ಪ್ರೆಂಡ್ಸ್🤷♂ 😌
ಏನೇ ಹೇಳಿ.. ಒಂದು ಮಾತು ಮಾತ್ರ ನಾನು ಇಲ್ಲಿ ಹೇಳ್ಲೇಬೇಕು ಫ್ರೆಂಡ್ಸ್.. ಆ ದ್ರಾಕ್ಷಿ ಭಯಂಕರ ಹುಳಿ ಇದ್ದದ್ದು ಮಾತ್ರ ಸತ್ಯ ಆಯ್ತಾ.. ಅದನ್ನು ನಾನು ತಗೊಳ್ಳದೇ ಇದ್ದದ್ದೇ ಬಾರಿ ಒಳ್ಳೆಯದ್ದೇ ಆಯಿತು.
ಅದನ್ನು ಪುರ್ಸಣ್ಣನಿಗೆ ಹಾಗೇ ಹೇಳಿ ಬಂದೆ ಕೂಡ.. "ಎಂತಾ ಪುರ್ಸಣ್ಣ... ದ್ರಾಕ್ಷಿ ಎಂದಿನಂತೆ ಭಯಂಕರ ಹುಳಿ... ಸ್ವಲ್ಪ ಸ ಸಿಹಿಯೇ ಇಲ್ಲ...ಎಂತ ಇದು.. ಇದನ್ನು ಯಾರಾದರೂ ಮನುಷ್ಯ ಆದವನು ತಿನ್ತಾನಾ.. " ಎಂದು.
ಅದಕ್ಕೆ ಪುರ್ಸಣ್ಣ ಮುಖ ಸಿಂಡರಿಸಿ " ಫ್ರೀಯಾಗಿ ತಿಂದರೆ ಚಿಕ್ಕು,ಸೇಬು,ಪೇರಳೆ ಕೂಡ ಹುಳಿಯಾಗಿಯೇ ಇರ್ತದೆ ನೀಲು..." ಅಂತ ಹೇಳಿಯೇ ಬಿಟ್ಟರು.
ಏನೇ ಹೇಳಿ ಈ ಪುರ್ಸಣ್ಣನ ಧಿಮಾಕು ಸ್ವಲ್ಪ ಜಾಸ್ತಿ ಆಗ್ಲಿಲ್ವಾ...
ಅವರು ದ್ರಾಕ್ಷಿ ಬದಲು ಅಂಗಡಿ ಮುಂದೆ ಹಲಸಿಹಣ್ಣು, ಫೈನ್ಯಾಪಲ್ ಎಲ್ಲಾ ಇಟ್ಟಿದ್ದರೆ ನಾನು ಅದರ ಟೇಸ್ಟ್ ನೋಡ್ಲಿಕ್ಕೆ ಹೋಗ್ತಿದ್ನಾ😏😏.
🙄🤔🏃🏻🏃🏻
.....................................................................................
#ನೀಲಮೇಘ 💙
ab pacchu
moodubidire

Comments
Post a Comment